Search
  • Follow NativePlanet
Share
» »ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

By Sowmyabhai

ತಾಜ್ ಮಹಲ್ ಪ್ರಪಂಚದಲ್ಲಿನ 7 ಅದ್ಭುತಗಳಲ್ಲಿ ಇದು ಕೂಡ ಒಂದು. ಮುಂತಾಜ್‍ಗಾಗಿ ಷಹಜಹಾನ್ ನಿರ್ಮಾಣ ಮಾಡಿರುವ ಪ್ರೇಮ ಮಂದಿರ ಇದಾಗಿದೆ. ಇದು ದೊಡ್ಡ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಆನೇಕ ಮಂದಿ ಪ್ರವಾಸಿಗರು ವಿದೇಶಗಳಿಂದ ಕೂಡ ತಾಜ್ ಮಹಲ್‍ನ ಸೌಂದರ್ಯವನ್ನು ಕಾಣಲು ಭೇಟಿ ನೀಡುತ್ತಿರುತ್ತಾರೆ. ಆದರೆ ವಿದೇಶಗಳಿಂದ ಭೇಟಿ ನೀಡಿರುವ ಪ್ರವಾಸಿಗರು ಹಾಗು ದೇಶಿಯ ಪ್ರವಾಸಿಗರು ಕೇವಲ ಬಾಹ್ಯವಾಗಿ ಕಾಣುವ ತಾಜ್ ಮಹಲ್ ಅನ್ನು ಮಾತ್ರ ಕಾಣುತ್ತಾರೆ.

ಈ ಮಹತ್ತರ ನಿರ್ಮಾಣವನ್ನು 1631 ರಲ್ಲಿ ಪ್ರಾರಂಭವಾಗಿ 1653 ರವರೆಗೆ ನಿರ್ಮಾಣ ಮಾಡಲಾಯಿತು. ಈ ಅದ್ಭುತವಾದ ಕಟ್ಟಡವು ಯಮುನ ನದಿ ತೀರದಲ್ಲಿದೆ. ಬಿಳಿ ಬಣ್ಣದ ಅಮೃತಶಿಲೆಯಿಂದ ನಿರ್ಮಾಣ ಮಾಡಲಾಗಿದೆ. ಇದು ಪ್ರಪಂಚದಲ್ಲಿನ 7 ಅದ್ಭುತಗಳಲ್ಲಿ ಇದು ಕೂಡ ಒಂದಾಗಿದೆ. ಆದರೆ ತಾಜ್ ಮಹಲ್‍ನ ಬಗ್ಗೆ ಕೆಲವು ವಾಸ್ತವಗಳನ್ನು ಲೇಖನದಲ್ಲಿ ತಿಳಿದುಕೊಳ್ಳೋಣ.

1. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

1. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

ಇದೊಂದೇ ಸಿಜನ್ ಎಂಬ ಯಾವುದೂ ಇಲ್ಲದೇ ವರ್ಷಾದಾದ್ಯಂತ ದೇಶದ ಮೂಲೆ ಮೂಲೆಗಳಿಂದ ಮತ್ತು ವಿದೇಶದಿಂದ ಅನೇಕ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ತಾಜ್ ಮಹಲ್ ಮೊಗಲ್ ಚಕ್ರವರ್ತಿ ತನ್ನ ಪತ್ನಿ ಮುಂತಾಜ್‍ಳ ಪ್ರೇಮದ ನೆನಪಿಗಾಗಿ ನಿರ್ಮಾಣ ಮಾಡಿದನು. ತಾಜ್ ಮಹಲ್ ವಿವಿಧ ಸಮಯದಲ್ಲಿ ಬಗೆ-ಬಗೆಯ ಬಣ್ಣಗಳು ಬದಲಾಗುತ್ತಾ ಇರುತ್ತದೆ ಎಂಬ ವಿಷಯ ನಿಮಗೆ ಗೊತ್ತ? ಬೆಳಗ್ಗೆಯ ಸಮಯದಲ್ಲಿ, ತಾಜ್‍ಮಹಲ್ ಪಿಂಕ್ ಕಲರ್‍ನಲ್ಲಿ, ನಂತರ ಬಿಳಿ ಬಣ್ಣದಲ್ಲಿ, ರಾತ್ರಿಯ ಸಮಯದಲ್ಲಿ ಬಂಗಾರದ ಬಣ್ಣದಲ್ಲಿ ಇರುತ್ತದೆ, ಈ ಬಣ್ಣಗಳು ಮಹಿಳೆಯ ವಿವಿಧ ಮನೋಭಾವನೆಗಳು ಎಂದು ಹೇಳಲಾಗುತ್ತದೆ.

2. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

2. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

ತಾಜ್ ಮಹಲ್ ಅನ್ನು ಮೊಗಲ್ ಚಕ್ರವರ್ತಿ ನಿರ್ಮಾಣ ಮಾಡಿದನು. ಅಪರೂಪವಾದ ಈ ಕಟ್ಟಡವನ್ನು ಸುಮಾರು 22 ವರ್ಷಗಳ ಕಾಲ ನಿರ್ಮಾಣ ಮಾಡಿದ್ದಾರೆ ಎಂದು ಇತಿಹಾಸ ಹೇಳುತ್ತದೆ. ಸುಮಾರು 22.000 ಮಂದಿ ಕಾರ್ಮಿಕರು ಈ ತಾಜ್ ಮಹಲ್ ನಿರ್ಮಾಣದಲ್ಲಿ ಕೈ ಹಾಕಿದ್ದಾರೆ.

3. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

3. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

ಅಮೃತ ಶಿಲೆಯಲ್ಲಿ ನಿರ್ಮಾಣ ಮಾಡಲಾದ ಈ ತಾಜ್ ಮಹಲ್‍ನನ್ನು ತಪ್ಪಾದೇ ಭೇಟಿ ನೀಡಲೇಬೇಕಾದ ಸ್ಥಳವೇ ಆಗಿದೆ. ತಾಜ್ ಮಹಲ್‍ನಲ್ಲಿನ ಸ್ತಂಭಗಳು, ಆ ಕಟ್ಡಡಗಳು ಯಾವುದೇ ರೀತಿಯಿಂದಲೂ ಪ್ರಕೃತಿ ವಿಪತ್ತಿನಿಂದಾಗಿ ಧ್ವಂಸವಾಗದೇ ಇರಬೇಕು ಎಂದು ಕಟ್ಟಡವನ್ನು ಕಟ್ಟಿದ್ದಾರೆ. ಇಲ್ಲಿನ ಸ್ತಂಭಗಳು ಅತ್ಯಂತ ಆಕರ್ಷಕ ಎಂದೇ ಹೇಳಬಹುದು.

4. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

4. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

ತಾಜ್ ಮಹಲ್ ನಿರ್ಮಾಣಕ್ಕೆ ಏಶಿಯಾ ಖಂಡದಲ್ಲಿನ ವಿವಿಧ ಪ್ರದೇಶಗಳಿಂದ ಅನೇಕ ಬೆಲೆಬಾಳುವ ಕಲ್ಲುಗಳನ್ನು ತರಿಸಿದರು. ರಾಜಸ್ಥಾನದಿಂದ ಮಾರ್ಬಲ್, ಪಂಜಾಬ್‍ನಿಂದ ಜಾಸ್ಪರ್, ಟಿಬೆಟ್‍ನಿಂದ ನೀಲಿ ಕ್ಲಲು, ಅಫಘಾನಿಸ್ತಾನದಿಂದ ಲಪಿಜ್, ಶ್ರೀಲಂಕದಿಂದ ಎಮೆರಾಲ್ಡ್, ಚೈನಾದಿಂದ ಕ್ರಿಸ್ಟಲ್ಸ್ ತರಿಸಿದರಂತೆ.

5. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

5. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

ತಾಜ್ ಮಹಾಲ್ ನಿರ್ಮಾಣದಲ್ಲಿ ನಾಲ್ಕು ವಾಸ್ತುಶಿಲ್ಪಗಳನ್ನು ಅನುಸರಿಸಿದ್ದಾರೆ. ಪರ್ಶಿಯನ್, ಇಂಡಿಯಾನ್ ಮತ್ತು ಇಸ್ಲಾಮಿಕ್ ಶೈಲಿ ಎಲ್ಲಾ ಸೇರಿ ತಾಜ್ ಮಹಲ್ ನಿರ್ಮಾಣ ಮಾಡಲಾಯಿತು.

6. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

6. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

ಈ ಅದ್ಭುತ ನಿರ್ಮಾಣದಲ್ಲಿ ಪಾಲ್ಗೊಂಡ ಕೆಲಸಗಾರರ ಕೈಗಳನ್ನು ಕತ್ತರಿಸಿ ಹಾಕಬೇಕು ಎಂದೂ. ಹಾಗೆಯೇ ಅವರು ಯಾವುದೇ ಇತರ ಪ್ರದೇಶಗಳಲ್ಲಿ ಇಂತಹ ಅದ್ಭುತವಾದ ಕಟ್ಟಡವನ್ನು ನಿರ್ಮಾಣ ಮಾಡಬಾರದು ಎಂದು ಆಜ್ಞೆಯನ್ನು ಜಾರಿಗೊಳಿಸುತ್ತಾರೆ. ಇದರ ಫಲಿತವಾಗಿ ತಾಜ್ ಮಹಲ್ ನಿರ್ಮಾಣ ಮಾಡಿದ ಸಲುವಾಗಿ ತಮ್ಮ ಕೈಗಳನ್ನು ಕಳೆದುಕೊಂಡರು ಎಂದು ಇತಿಹಾಸಕಾರರು ಹೇಳುತ್ತಾರೆ.

7. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

7. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

ಕಥೆಗಳ ಪ್ರಕಾರ ಯಮುನಾ ನದಿ ತೀರದಲ್ಲಿ ತಾಜ್ ಮಹಲ್‍ನಂತೆಯೇ ಹೋಲಿಕೆಯಾಗುವ ಮತ್ತೊಂದು ತಾಜ್ ಮಹಲ್ ಅನ್ನು ಕಪ್ಪು ಬಣ್ಣದಲ್ಲಿ ನಿರ್ಮಾಣ ಮಾಡು ಎಂದು ಕೇಳಿಕೊಳ್ಳುತ್ತಾರೆ. ಆದರೆ ತನ್ನ ಕುಮಾರನಾದ ಔರಂಗಜೇಬ್ ಆತನನ್ನು ಸೇರೆವಾಸದಲ್ಲಿ ಇಟ್ಟ ಕಾರಣವಾಗಿ ಷಾ ಜಹಾನ್ ಆ ಕೆಲಸ ಮಾಡದೇ ಹೋಗುತ್ತಾನೆ.

8. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

8. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

ಆಗ್ರಾದಲ್ಲಿರುವ ತಾಜ್ ಮಹಲ್ ಸ್ಮಾರಕ ನಿರ್ಮಾಣದ ಒಳಭಾಗದಲ್ಲಿರುವ ಷಾಹಜಹಾನ್ ಮತ್ತು ಮುಂತಾಜ್‍ರ ಇಬ್ಬರ ಸಮಾಧಿಗಳನ್ನು ಬಿಟ್ಟು ಉಳಿದ ಎಲ್ಲಾ ನಿರ್ಮಾಣವು ಸಮ ರೂಪದಲ್ಲಿ ಒಂದೇ ವಿಧವಾಗಿ ನಿರ್ಮಾಣ ಮಾಡಲ್ಪಟ್ಟಿದೆ.

9. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

9. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

ಚಕ್ರವರ್ತಿ ಮತ್ತು ಆತನ ಪತ್ನಿ ಮುಂತಾಜ್‍ಳ ಸಮಾಧಿಗಳು ಪ್ರಜೆಗಳಿಗೆ ಹೊರಗೆ ಕಾಣುವುದಿಲ್ಲ. ಸಂದರ್ಶಕರು ನೋಡುವ ಪ್ರಕಾರ ಒಳಭಾಗದಲ್ಲಿ ಅವು ಇರುತ್ತವೆ. ಈ ಸಮಾಧಿಗಳು ಸುಮಾರು 7 ಅಡಿ ಒಳಗೆ ಇರುತ್ತದೆ. ಒಂದು ಮೆಟಲ್ ಡೋರ್‍ನಿಂದ ಲಾಕ್ ಮಾಡಲಾಗಿರುತ್ತದೆ.

10. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

10. ತಾಜ್ ಮಹಲ್‍ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!

ನಿರ್ಮಾಣದ ಮುಖ್ಯ ಪ್ರವೇಶ ದ್ವಾರದ ಮೇಲೆ ಕುರಾನ್‍ನಲ್ಲಿನ ಶ್ಲೋಕಗಳು ಇರುತ್ತದೆ. ಮುಂತಾಜ್ ಸಮಾಧಿ ಬಲಭಾಗದಲ್ಲಿ ಅಲ್ಲಾಗೆ ಸಂಬಂಧಿಸಿದಂತೆ 99 ಹೆಸರುಗಳನ್ನು ಕೆತ್ತನೆ ಮಾಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X