Search
  • Follow NativePlanet
Share
» »ಹೀಗೆ ಮಾಡಿದ್ರೆ ಕೆಲವೇ ನಿಮಿಷದಲ್ಲಿ ತತ್ಕಾಲ್ ಟಿಕೇಟ್ ಕನ್ಫಮ್ ಆಗೋಗುತ್ತೆ

ಹೀಗೆ ಮಾಡಿದ್ರೆ ಕೆಲವೇ ನಿಮಿಷದಲ್ಲಿ ತತ್ಕಾಲ್ ಟಿಕೇಟ್ ಕನ್ಫಮ್ ಆಗೋಗುತ್ತೆ

ಎಲ್ಲಿಗಾದರೂ ಪ್ರಯಾಣಿಸುವಾಗ ಹೆಚ್ಚು ಕಂಫರ್ಟ್ ಆಗಿರುವ ಪ್ರಯಾಣವನ್ನು ಆಯ್ಕೆ ಮಾಡುತ್ತೇವೆ. ಹೆಚ್ಚಿನವರಿಗೆ ರೈಲಿನಲ್ಲಿ ಪ್ರಯಾಣಿಸುವುದೆಂದರೆ ಬಹಳ ಆರಾಮದಾಯಕವಾಗಿರುತ್ತದೆ. ಆದ್ರೆ ಆಗಿನಿಂದಾಗಲೇ ಟಿಕೇಟ್ ಸಿಗಬೇಕಲ್ಲ. ಒಂದು ತಿಂಗಳು ಮುಂಚಿತವಾಗಿ ಬುಕ್ ಮಾಡಿದ್ದರೆ ಟಿಕೇಟ್ ಕನ್ಫರ್ಮ್ ಆಗುತ್ತದೆ.

ತತ್ಕಾಲ್ ಟಿಕೇಟ್

ತತ್ಕಾಲ್ ಟಿಕೇಟ್

ಇಲ್ಲವಾದಲ್ಲಿ ತತ್ಕಾಲ್ ಮೂಲಕ ಟಿಕೇಟ್ ಬುಕ್ ಮಾಡಬೇಕಾಗುತ್ತದೆ. ಆದರೆ ತತ್ಕಾಲ್ ಟಿಕೇಟ್ ಕೂಡಾ ಕನ್ಫರ್ಮ್ ಆಗೋದು ಸ್ವಲ್ಪ ಕಷ್ಟಾನೆ. ಆದ್ರೆ ಕೆಲವು ವಿಧಾನಗಳ ಮೂಲಕ ನಿಮಗೆ ಕೆಲವೇ ನಿಮಿಷಗಳಲ್ಲಿ ನಿಮ್ಮ ತತ್ಕಾಲ್ ಟಿಕೇಟ್ ಕನ್ಫರ್ಮ್ ಆಗುತ್ತದೆ. ಅದಕ್ಕಾಗಿ ನೀವು ಮೊದಲೇ ತಯಾರಾಗಿರಬೇಕು.

ಈ ಬಾರಿ ಮೈಸೂರು ದಸರಾಕ್ಕೆ ಹೋಗುವವರು ಇದನ್ನ ನೆನಪಿಟ್ಟುಕೊಳ್ಳಲೇ ಬೇಕುಈ ಬಾರಿ ಮೈಸೂರು ದಸರಾಕ್ಕೆ ಹೋಗುವವರು ಇದನ್ನ ನೆನಪಿಟ್ಟುಕೊಳ್ಳಲೇ ಬೇಕು

ಇಂಟರ್ನೇಟ್ ಸ್ಪೀಡ್

ಇಂಟರ್ನೇಟ್ ಸ್ಪೀಡ್

ಯಾವುದೇ ಟಿಕೇಟ್ ಆನ್‌ಲೈನ್ ಬುಕ್ ಮಾಡುವಾಗ ಮೊದಲು ಇಂಟರ್ನೇಟ್ ಸರಿಯಾಗಿದೆಯಾ, ಸ್ಪೀಡ್ ಇದೆಯಾ ಎನ್ನುವುದನ್ನು ನೋಡಬೇಕು. ಇಂಟರ್ನೆಟ್ ಸರಿಯಾಗಿದ್ದರೆ ಮಾತ್ರ ಆನ್‌ಲೈನ್ ಟಿಕೇಟ್ ವೇಗವಾಗಿ ಬುಕ್ ಮಾಡಬಹುದು.

ಪ್ರಾಯಾಣಿಕರ ಲಿಸ್ಟ್

ಪ್ರಾಯಾಣಿಕರ ಲಿಸ್ಟ್

ನೀವು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಮೊದಲೇ ಪ್ಯಾಸೆಂಜರ್‌ ಲಿಸ್ಟ್‌ನ್ನು ತಯಾರು ಮಾಡಿಟ್ಟುಕೊಳ್ಳಿ. ಪ್ಯಾಸೆಂಜರ್ ಲಿಸ್ಟ್ ನಿಮ್ಮ ಐಆರ್‌ಸಿಟಿಸಿ ಅಕೌಂಟ್‌ನಲ್ಲಿ ಸೇವ್ ಆಗಿರುತ್ತದೆ. ಹಾಗಾಗಿ ಯಾವಾಗಲೂ ನೀವು ಟಿಕೇಟ್ ಬುಕ್ ಮಾಡುವಾಗ ಪ್ಯಾಸೆಂಜರ್ ಡಿಟೇಲ್ಸ್‌ ಬಂದು ಬಿಡುತ್ತದೆ. ಹಾಗಾಗಿ ನಿಮಗೆ ಮತ್ತೆ ಫುಲ್ ಡಿಟೇಲ್ಸ್‌ ತುಂಬಬೇಕೆಂದಿಲ್ಲ.

ಇಲ್ಲಿಗೆ ಹೋದರೆ ಖಂಡಿತಾ ನಿಮ್ಮ ಗುರುಬಲ ಬದಲಾಗುತ್ತಂತೆ !ಇಲ್ಲಿಗೆ ಹೋದರೆ ಖಂಡಿತಾ ನಿಮ್ಮ ಗುರುಬಲ ಬದಲಾಗುತ್ತಂತೆ !

ಬ್ಯಾಂಕ್ ಅಕೌಂಟ್‌ ಡೀಟೆಲ್ಸ್

ಬ್ಯಾಂಕ್ ಅಕೌಂಟ್‌ ಡೀಟೆಲ್ಸ್

ಇನ್ನು ನೀವು ಪೇಮೆಂಟ್ ಆಪ್ಷನ್‌ನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್‌ನ ಡಿಟೇಲ್ಸ್‌ ತುಂಬಿ ಪ್ರಿಫರ್ಡ್ ಮಾಡಿಟ್ಟುಕೊಳ್ಳಿ. ಇದರಿಂದ ಪೇಮೆಂಟ್ ಆಪ್ಷನ್‌ನಲ್ಲಿ ಪೇ ಕ್ಲಿಕ್ ಮಾಡಿದ್ರೆ ಸಾಕು ಪೇಮೆಂಟ್ ಆಗಿಬಿಡುತ್ತದೆ. ಇದರಿಂದ ನಿಮ್ಮ ತತ್ಕಾಲ್ ಬುಕ್ಕಿಂಗ್ ಬಹಳ ವೇಗವಾಗಿ ಆಗುತ್ತದೆ.

ದಸರಾ ರಜೆಯಲ್ಲಿ ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಇಲ್ಲಿದೆ ಬೆಸ್ಟ್‌ ಪ್ಲ್ಯಾನ್ದಸರಾ ರಜೆಯಲ್ಲಿ ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಇಲ್ಲಿದೆ ಬೆಸ್ಟ್‌ ಪ್ಲ್ಯಾನ್

ಲೇಡಿಸ್ ಕೋಟಾ

ಲೇಡಿಸ್ ಕೋಟಾ

ಒಂದು ವೇಳೆ ನೀವು ೪೫ ವರ್ಷಕ್ಕಿಂತಲೂ ಹೆಚ್ಚಿನ ವಯಸ್ಸಿನ ಮಹಿಳೆಯ ಟಿಕೇಟ್ ಬುಕ್ ಮಾಡುತ್ತಿದ್ದಲ್ಲಿ ಲೇಡಿಸ್ ಕೋಟಾ ಆಪ್ಷನ್‌ನ್ನು ಬಳಸಿ. ರೈಲ್ವೆ ಇಲಾಖೆಯು ೪೫ ವರ್ಷಕ್ಕಿಂತ ಅಧಿಕ ವಯಸ್ಸಿನ ಮಹಿಳೆಯರಿಗೆ ಲೇಡಿಸ್ ಕೋಟ ಎನ್ನುವ ವಿಶೇಷ ಸೌಲಭ್ಯ ನೀಡುತ್ತದೆ.

ಫಾರ್ಮ್‌ ತುಂಬಿ

ಫಾರ್ಮ್‌ ತುಂಬಿ

ತತ್ಕಾಲ್ ವಿಂಡೋ ಓಪನ್ ಆಗುವ ಮೊದಲೇ ಫಾರ್ಮ್‌ನಲ್ಲಿ ಎಲ್ಲಾ ಮಾಹಿತಿಯನ್ನು ತುಂಬಿಸಿ. ಪ್ರಯಾಣದ ದಿನಾಂಕ, ಸ್ಥಳ, ಟ್ರೈನ್‌ನ ಹೆಸರು ಎಲ್ಲವನ್ನೂ ತುಂಬಿಸಿ. ತತ್ಕಾಲ್‌ನ ಟೈಮ್ ಶುರುವಾಗುವ ಮೊದಲೇ ಆ ಬಟನ್‌ನ್ನು ಕ್ಲಿಕ್ ಮಾಡುತ್ತಾ ಇರಿ. ಇದರಿಂದ ತತ್ಕಾಲ್ ಟೈಮ್ ಶುರುವಾಗುವಾಗ ನಿಮ್ಮ ಟಿಕೇಟ್ ಬುಕ್ ಆಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X