Search
  • Follow NativePlanet
Share
» »ಕೊಡೈಕೆನಾಲ್‍ನ ಕೊಡೈ ಸರೋವರದ ಬಗ್ಗೆ ನಿಮಗೆಷ್ಟು ಗೊತ್ತು?

ಕೊಡೈಕೆನಾಲ್‍ನ ಕೊಡೈ ಸರೋವರದ ಬಗ್ಗೆ ನಿಮಗೆಷ್ಟು ಗೊತ್ತು?

ಕೊಡೈಕೆನಾಲ್ ದಕ್ಷಿಣ ಭಾರತದ ಅತ್ಯಂತ ಆಕರ್ಷಕವಾದ ರಜಾ ತಾಣಗಳಲ್ಲಿ ಒಂದಾಗಿದೆ. ಪಶ್ಚಿಮ ಘಟ್ಟಗಳ ಮೇಲ್ಭಾಗದ ಪಳನಿ ಬೆಟ್ಟಗಳಲ್ಲಿ ಕೊಡೈಕೆನಾಲ್ ನೆಲೆಗೊಂಡಿದೆ. ಸುಂದರವಾದ ಪ್ರಾಕೃತಿಕ ಸೌಂದರ್ಯ, ಅದ್ಭುತವಾದ ನೋಟ, ಸರೋವರಗಳು ಹಾಗು ಜಲಪಾತಗಳನ್ನು ಇಲ

By Sowmyabhai

ಕೊಡೈಕೆನಾಲ್ ದಕ್ಷಿಣ ಭಾರತದ ಅತ್ಯಂತ ಆಕರ್ಷಕವಾದ ರಜಾ ತಾಣಗಳಲ್ಲಿ ಒಂದಾಗಿದೆ. ಪಶ್ಚಿಮ ಘಟ್ಟಗಳ ಮೇಲ್ಭಾಗದ ಪಳನಿ ಬೆಟ್ಟಗಳಲ್ಲಿ ಕೊಡೈಕೆನಾಲ್ ನೆಲೆಗೊಂಡಿದೆ. ಸುಂದರವಾದ ಪ್ರಾಕೃತಿಕ ಸೌಂದರ್ಯ, ಅದ್ಭುತವಾದ ನೋಟ, ಸರೋವರಗಳು ಹಾಗು ಜಲಪಾತಗಳನ್ನು ಇಲ್ಲಿ ಕಾಣಬಹುದು.

ಅಷ್ಟೇ ಅಲ್ಲ, ಕಾಡಿನಲ್ಲಿ ಕ್ಯಾಪಿಂಗ್ ಮಾಡಬಹುದು, ಟ್ರೆಕ್ಕಿಂಗ್, ವಸ್ತು ಸಂಗ್ರಹಾಲಗಳು, ಉದ್ಯಾನವನಗಳು, ಜಲಪಾತಗಳು ಮತ್ತು ಸರೋವರಗಳಲ್ಲಿ ಅಡ್ಡಾಡಬಹುದು. ಆಕರ್ಷಕವಾದ ಹಾಗು ನೈಸರ್ಗಿಕವಾದ ಸೌಂದರ್ಯ, ಪ್ರಶಾಂತವಾದ, ಹಿತವಾದ ವಾತಾವರಣದಿಂದ ಕೂಡಿರುವ ಈ ಪ್ರವಾಸಿ ಸ್ಥಳದಲ್ಲಿ ಸಾಹಸ ಪ್ರಿಯರಿಗೆ, ಪ್ರೇಮಿಗಳಿಗೆ ಅತ್ಯುತ್ತಮವಾದ ತಾಣ ಇದಾಗಿದೆ. ಕುಟುಂಬದವರೊಂದಿಗೆ ಪ್ರವಾಸ ಮಾಡಲು ಸೂಕ್ತವಾದ ಸ್ಥಳ ಎಂದೇ ಹೇಳಬಹುದು.

ಕೊಡೈಕೆನಾಲ್‍ನ ಕೊಡೈ ಸರೋವರದ ಬಗ್ಗೆ ನಿಮಗೆ ಗೊತ್ತ? ಹಾಗಾದರೆ ಬನ್ನಿ ನೇಟಿವ್ ಪ್ಲಾನೆಟ್‍ನ ಮೂಲಕ ಮಾಹಿತಿಯನ್ನು ಪಡೆಯೋಣ.

1.ಕೊಡೈ ಸರೋವರ

1.ಕೊಡೈ ಸರೋವರ

PC:Kreativeart

ಕೊಡೈಕೆನಾಲ್‍ನಲ್ಲಿರು ಈ ಕೊಡೈ ಸರೋವರವು ಅತ್ಯಂತ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಇದೊಂದು ಮಾನವ ನಿರ್ಮಿತ ಸರೋವರವಾಗಿದ್ದು, ಇದನ್ನು ಕೊಡೈ ಸರೋವರ ಎಂದು ಕರೆಯಲ್ಪಡುತ್ತದೆ. ಈ ಸರೋವರವು ಪಟ್ಟಣದ ಮಧ್ಯೆ ಇದ್ದು, ಮುಖ್ಯ ಆಕರ್ಷಣೆಯಾಗಿದೆ. ನಕ್ಷತ್ರದ ಆಕಾರದ ಕೆರೆ ಇದಾಗಿದ್ದು, ಸರೋವರವು ಸುತ್ತಲಿರುವ ಪ್ರದೇಶದ ಶ್ರೀಮಂತವಾದ ಹಸಿರಿನಿಂದ ಕೂಡಿದೆ. ಪಳನಿ ಎಂಬ ಬೆಟ್ಟಗಳ ಸುತ್ತಲೂ ಇರುವ ಈ ಸರೋವರ ಸಮುದ್ರ ಮಟ್ಟದಿಂದ ಸುಮಾರು 2285 ಮೀಟರ್ ಎತ್ತರದಲ್ಲಿದೆ. ಅಷ್ಟೇ ಅಲ್ಲ ಸರಾಸರಿ 3.0 ರಷ್ಟು ಆಳವನ್ನು ಹೊಂದಿದೆ.

2.ಕೊಡೈ ಸರೋವರದ ಕುರಿಂಜಿ ಹೂವು

2.ಕೊಡೈ ಸರೋವರದ ಕುರಿಂಜಿ ಹೂವು

PC:YOUTUBE

ಒಂದು ವಿಶೇಷವಾದ ಹೂಬಿಡುವ ಸಸ್ಯವನ್ನು ಕೊಡೈಕೆನಾಲ್‍ನಲ್ಲಿ ಕಾಣಬಹುದು. ಇದು ಕೊಡೈ ಸರೋವರದ ಸುತ್ತಲಿನ ಪ್ರದೇಶದಲ್ಲಿ ಕಂಡುಬರುತ್ತದೆ. ನಿಮಗೆ ಗೊತ್ತೇ? ಈ ಹೂವು 2004 ರಲ್ಲಿ ಹೂವು ಕೊನೆಗೊಂಡಿತ್ತು. ಇದು ಕೇವಲ 12 ವರ್ಷಕ್ಕೆ ಒಮ್ಮೆ ಮಾತ್ರ ಹೂವುಗಳನ್ನು ಬಿಡುತ್ತವೆ.

3.ಇತಿಹಾಸ

3.ಇತಿಹಾಸ

PC: Nikhil1508

ಈ ಸುಂದರವಾದ ಕೊಡೈ ಸರೋವರವು ಮಾನವ ನಿರ್ಮಿತವಾಗಿದ್ದು, ವೆರಾ ಲೇವಿಂಗ್ ಅವರು ಮಧುರೈ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದರು. ಇವರು 1863 ರಲ್ಲಿ ತಮ್ಮ ನಿವೃತ್ತಿಯ ನಂತರ ಕೊಡೈಕೆನಾಲ್‍ನಲ್ಲಿ ನೆಲೆಸಿದರು. ಅನೇಕ ಬಂಡೆಗಳನ್ನು ನಿರ್ಮಿಸುವ ಮೂಲಕ ಜಲಭಾಗದ ಭೂಮಿಯನ್ನು ಸರೋವರವನ್ನಾಗಿ ಪರಿವರ್ತಿಸಿದರು. ಈ ಸರೋವರದ ನಿರ್ಮಾಣಕ್ಕಾಗಿ ತನ್ನ ಸ್ವಂತ ಹಣವನ್ನು ವೆಚ್ಚ ಮಾಡಿ, ಅಲ್ಲಿ ಕೆಲವು ದೋಣಿಗಳನ್ನು ತರಿಸಿದ್ದರು. ಕೆಲವು ವಿದೇಶಿ ನಿವಾಸಿಗಳು ಆ ದೋಣಿಗಳನ್ನು ಈಜಲು ಬಳಸುತ್ತಿದ್ದರು ಎಂದು ಹೇಳಲಾಗಿದೆ.

4.ಯಾವ ಕಾಲಾವಧಿಯಲ್ಲಿ

4.ಯಾವ ಕಾಲಾವಧಿಯಲ್ಲಿ

PC:Challiyan

ಬೋಟ್ ಪ್ರದರ್ಶನ ಮತ್ತು ಹೂ ಪ್ರದರ್ಶನಗಳು ಬೇಸಿಗೆಯ ಋತುವಿನಲ್ಲಿ ನಿಯಮಿತ ಮತ್ತು ಜನಪ್ರಿಯವಾಗಿದೆ. ಈ ಸುಂದರವಾದ ಕ್ಷಣವನ್ನು ಕಾಣುವ ಸಲುವಾಗಿ ಅನೇಕ ಪ್ರವಾಸಿಗರು ದೇಶ-ವಿದೇಶದಿಂದ ಭೇಟಿ ನೀಡುತ್ತಿರುತ್ತಾರೆ. ಕೊಡೈ ಸರೋವರದ ಪ್ರವೇಶ ಸಮಯವೆಂದರೆ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ. ಯಾವುದೇ ಪ್ರವೇಶ ಶುಲ್ಕವಿಲ್ಲ.

5.ಕೊಡೈಕೆರೆಯಲ್ಲಿ ಮಾಡಬೇಕಾದ ವಿಷಯಗಳು

5.ಕೊಡೈಕೆರೆಯಲ್ಲಿ ಮಾಡಬೇಕಾದ ವಿಷಯಗಳು

PC:Challiyan

ಮಕ್ಕಳು ಸೇರಿದಂತೆ ದೊಡ್ಡ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಈ ಸರೋವರಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ನೌಕಾಯಾನ. ಕುದುರೆ ಸವಾರಿಯನ್ನು ಕೂಡ ಮಾಡಬಹುದು. ಇಷ್ಟೇ ಅಲ್ಲ ಮೀನುಗಾರಿಕೆ ಕೂಡ ಮಾಡಬಹುದು, ಆದರೆ ಅನುಮತಿ ಪಡೆದು ಮಾತ್ರ. ಈ ಎಲ್ಲಾ ಚಟುವಟಿಕೆಗೆ ಶುಲ್ಕಗಳು ಹೊಂದಿದ್ದು, ಅನೇಕ ಐಶಾರಾಮಿ ದೋಣಿಗಳು ಕೂಡ ಇಲ್ಲಿ ಲಭ್ಯವಿವೆ.

6.ಹೇಗೆ ತಲುಪಬೇಕು?

6.ಹೇಗೆ ತಲುಪಬೇಕು?

PC:YOUTUBE

ಇಂಥಹ ಸುಂದರವಾದ ಸರೋವರವನ್ನು ಇಷ್ಟಪಡುವವರು ಈ ಸುಂದರವಾದ ಸ್ಥಳಕ್ಕೆ ತಪ್ಪದೇ ಭೇಟಿ ನೀಡುತ್ತಾರೆ. ಕೊಡೈ ಸರೋವರವು ರೈಲ್ವೆ ನಿಲ್ದಾಣದಿಂದ ಸುಮಾರು 64 ಕಿ.ಮೀ ದೂರದಲ್ಲಿದೆ. ಕೊಡೈ ಬಸ್ ನಿಲ್ದಾಣದಿಂದ ಕೇವಲ 3 ಕಿ.ಮೀ ದೂರದಲ್ಲಿದೆ ಈ ಕೆರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X