Search
  • Follow NativePlanet
Share
» »ಅದ್ಭುತ ಜೇನುತುಪ್ಪದ ನೆಲ ತೆನ್ಮಲ

ಅದ್ಭುತ ಜೇನುತುಪ್ಪದ ನೆಲ ತೆನ್ಮಲ

By Vijay

ನಿಜ ಹೇಳಬೇಕೆಂದರೆ ಕೇರಳ ಮತ್ತು ಪ್ರವಾಸೊದ್ಯಮ ಈ ಎರಡು ಪದಗಳು ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿವೆ. ಪ್ರಶಾಂತಮಯ ಹಸಿರಿನ ವಾತಾವರಣ, ಎಲ್ಲೆಲ್ಲೂ ತೆಂಗಿನ ಮರಗಳು ಮತ್ತು ಆಕರ್ಷಕ ಕಡಲ ತೀರಗಳು, ಪ್ರಸನ್ನತೆಯ ಭಾವ ಮೂಡಿಸುವ ಹಿನ್ನೀರು ಮತ್ತು ಅದರ ಮೇಲೆ ತೇಲುತ್ತಿರುವ ದೋಣಿ ಮನೆಗಳು, ಬಹುಸಂಖ್ಯೆಯಲ್ಲಿರುವ ದೇವಸ್ಥಾನಗಳು, ಆಯುರ್ವೇದದ ಲಭ್ಯತೆ, ಮಂದ ಸರೋವರಗಳು ಮತ್ತು ಕೃತಕ ಕೊಳಗಳು, ಕಾಲುವೆಗಳು, ದ್ವೀಪಗಳು.....ಹೀಗೆ ನಿಲ್ಲಲಾರದ ಪಟ್ಟಿಯನ್ನು ಈ ಪ್ರದೇಶಕ್ಕೆ ಬರೆಯಬಹುದಾಗಿದೆ.

ವಿಶೇಷ ಲೇಖನ : ಮುನ್ನಾರ್ ಭೇಟಿ ಹಿಂದಿರುವ ರಹಸ್ಯ

ಅದ್ಭುತ ಜೇನುತುಪ್ಪದ ನೆಲ ತೆನ್ಮಲ

ತೆನ್ಮಲ ಬಳಿಯಿರುವ ತೆನ್ಮಲ - ಆರ್ಯಂಕಾವುಲು ಮಾರ್ಗ

ಚಿತ್ರಕೃಪೆ: Rakesh S

ಇಲ್ಲಿರುವ ಪ್ರತಿಯೊಂದು ನಗರ, ಪಟ್ಟಣ ಮತ್ತು ದೂರದ ಹಳ್ಳಿಗಳು 'ಗಾಡ್ಸ್ ಒವ್ನ್ ಕಂಟ್ರಿ' ಅಥವಾ 'ದೇವರ ಸ್ವಂತ ದೇಶ' ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ತಮ್ಮದೆ ಆದ ರೋಚಕ ಕಥೆಗಳು ಮತ್ತು ಸದ್ದಿಲ್ಲದ ಆಹ್ವಾನಗಳಿಂದ ಸದಭಿರುಚಿಯ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ. ಆಧುನಿಕತೆಯ ಕರಿ ನೆರಳಿನಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ಕಲುಷಿತವಾಗದೆ ಹಾಗೆ ಉಳಿದಿರುವ, ಹಸಿರು ಸಮ್ಪತ್ತಿನಿಂದ ಕಂಗೊಳಿಸುವ ಗಿರಿಧಾಮಗಳಿಗೆ ತವರಾಗಿದೆ ಕೇರಳ. ಅಂತಹ ಗಿರಿಧಾಮಗಳ ಪೈಕಿ ಒಂದಾಗಿದೆ ತೆನ್ಮಲ ಅಥವಾ ತೆನ್‍ಮಲ ಗಿರಿಧಾಮ.

ವಿಶೇಷ ಲೇಖನ : ಮೋಡಿ ಮಾಡುವ ಇಡುಕ್ಕಿ

ಅದ್ಭುತ ಜೇನುತುಪ್ಪದ ನೆಲ ತೆನ್ಮಲ

ಕಲ್ಲಾಡಾ ನದಿಗೆ ಕಟ್ಟಲಾಗಿರುವ ಆಣೆಕಟ್ಟು

ಚಿತ್ರಕೃಪೆ:Kumar Mullackal

ತೇನ್‍ಮಲ ಎಂಬುದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಅತ್ಯಂತ ಪ್ರಸಿದ್ಧ ಜೈವಿಕ ಪ್ರವಾಸಿ ತಾಣವಾಗಿದೆ. ತೇನ್‍ಮಲ್ ಎಂದರೆ ಕನ್ನಡದಲ್ಲಿ "ಜೇನಿನ ಬೆಟ್ಟ" ಎಂದರ್ಥವಾಗುತ್ತದೆ. ಅಂದರೆ ಈ ಸ್ಥಳವು ಇಲ್ಲಿ ಬಿಡುವ ಜೇಜುಗೂಡು ಹಾಗೂ ಅದರ ತುಪ್ಪಕ್ಕೆ ಖ್ಯಾತಿ ಪಡೆದಿದೆ. ನಂಬಿಕೆಗಳ ಪ್ರಕಾರ ಇಲ್ಲಿ ದೊರೆಯುವ ಜೇನು ತುಪ್ಪದಲ್ಲಿ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಕೇರಳ ರಾಜಧಾನಿಯಾದ ತಿರುವನಂತಪುರಂನಿಂದ 70 ಕಿ.ಮೀ ದೂರದಲ್ಲಿರುವ ತೇನ್‍ಮಲ ಗಿರಿಧಾಮವು ಭಾರತದ ಮೊಟ್ಟ ಮೊದಲ ಜೈವಿಕ ಪ್ರವಾಸೋದ್ಯಮ ಯೋಜನೆ ಎಂಬ ಅಭಿದಾನಕ್ಕೂ ಸಹ ಪಾತ್ರವಾಗಿದೆ.

ವಿಶೇಷ ಲೇಖನ : ಕೇರಳದ ಕೊಟ್ಟಿಯೂರು ವೈಶಾಖ ಉತ್ಸವ

ಅದ್ಭುತ ಜೇನುತುಪ್ಪದ ನೆಲ ತೆನ್ಮಲ

ತೆನ್ಮಲದಲ್ಲಿರುವ ಪಲರುವಿ ಜಲಪಾತ

ಚಿತ್ರಕೃಪೆ: Akhil S Unnithan

ಜೈವಿಕ ಪ್ರವಾಸೋದ್ಯಮದ ಭಾಗವಾಗಿರುವುದರಿಂದಾಗಿ ಈ ಸ್ಥಳವನ್ನು 5 ಮುಖ್ಯ ವಲಯಗಳನ್ನಾಗಿ ವಿಂಗಡಿಸಲಾಗಿದೆ: ಸಾಂಸ್ಕೃತಿಕ ವಲಯ, ಸಾಹಸ ವಲಯ, ವಿರಾಮ ಕಾಲ ಕಳೆಯುವ ವಲಯ, ಜಿಂಕೆ ಪುನರ್ವಸತಿ ವಲಯ ಮತ್ತು ದೋಣಿ ವಿಹಾರ ವಲಯ ಎಂಬ ಐದು ವಲಯಗಳು ಇಲ್ಲಿವೆ. ಹಲವಾರು ಎಕರೆಗಳ ನಿತ್ಯ ಹರಿದ್ವರ್ಣ ಕಾಡುಗಳನ್ನು ಹೊಂದಿರುವ ತೇನ್‍ಮಲವು ಭಾರತದ ಒಳಗಿನ ಮತ್ತು ಹೊರಗಿನ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ. ಜೈವಿಕ ಪ್ರವಾಸಿ ತಾಣವು ಹಲವಾರು ವಿಶಿಷ್ಟ ಸಸ್ಯ ಮತ್ತು ಪ್ರಾಣಿ ಪ್ರಭೇಧಗಳಿಗೆ ಆಶ್ರಯವನ್ನೊದಗಿಸಿದೆ. ಇಲ್ಲಿನ ಗುಡ್ಡಗಾಡು ಪ್ರಾಂತ್ಯವು ದೋಣಿ ವಿಹಾರ, ಹಗ್ಗದ ಸೇತುವೆ, ಚಾರಣ, ಪರ್ವತಾರೋಹಣ, ಬೈಕ್ ಸವಾರಿ ಮತ್ತು ಸಂಗೀತ ಕಾರಂಜಿಯಂತಹ ಹಲವಾರು ಸಾಹಸ ಚಟುವಟಿಕೆಗಳಿಗೆ ಮತ್ತು ಮನೋರಂಜನಾ ಚಟುವಟಿಕೆಗಳಿಗೆ ಅವಕಾಶವನ್ನೊದಗಿಸುತ್ತದೆ.

ವಿಶೇಷ ಲೇಖನ : ಮನದಲಿ ನಿರಂತರವಾಗಿ ನೆಲೆಯೂರುವ ತಿರುವನಂತಪುರಂ

ಅದ್ಭುತ ಜೇನುತುಪ್ಪದ ನೆಲ ತೆನ್ಮಲ

ತೆನ್ಮಲದ ಮಂತ್ರಮುಗ್ಧಗೊಳಿಸುವ ಪರಿಸರ

ಚಿತ್ರಕೃಪೆ: Manu Manohar

ತೇನ್‍ಮಲ ಪ್ರಾಂತ್ಯದಲ್ಲಿ ಹರಿಯುವ ಕಲ್ಲಡ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜಲಾಶಯವು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಪಲರುವಿ ಜಲಪಾತವು ತೇನ್‍ಮಲವನ್ನು ವಿಹಾರಕ್ಕೆ ಮತ್ತು ಮಧುಚಂದ್ರಗಳಿಗಾಗಿ ಅತ್ಯಂತ ಯೋಗ್ಯ ಸ್ಥಳವನ್ನಾಗಿ ಮಾಡಿದೆ. ಹಲವಾರು ಜಿಂಕೆಗಳ ಪ್ರಭೇಧವನ್ನು ಹೊಂದಿರುವ ಜಿಂಕೆ ಉದ್ಯಾನವನ ಇಲ್ಲಿ ನೋಡ ಬೇಕಾಗಿರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಉದ್ಯಾನವನದಲ್ಲಿ ನಿರ್ಮಿಸಲಾಗಿರುವ ಮರದ ಕುಟೀರಗಳು ಈ ಉದ್ಯಾನವನಕ್ಕೆ ಮಾಂತ್ರಿಕ ಸ್ಪರ್ಶವನ್ನು ಒದಗಿಸಿ, ಇದನ್ನು ಒಂದು ಅತ್ಯುತ್ತಮವಾದ ವಿಹಾರ ತಾಣವನ್ನಾಗಿ ರೂಪಿಸಿವೆ.

ವಿಶೇಷ ಲೇಖನ : ಸರ್ವಂ ಜಲಮಯಂ ಇದು ಕುಮರಕಮ್

ಅದ್ಭುತ ಜೇನುತುಪ್ಪದ ನೆಲ ತೆನ್ಮಲ

ತೆನ್ಮಲದಲ್ಲಿರುವ ಒಂದು ಸುಂದರ ತೂಗು ಸೇತುವೆ

ಚಿತ್ರಕೃಪೆ: Mohanraj Kolathapilly

ನಕ್ಷತ್ರವನಂ (ಮರಗಳ ನರ್ಸರಿ) , ಅರ್ಯನ್‍ಕಾವು ಶಾಸ್ತ ದೇವಾಲಯ, ಕುಲತುಪುಳ ಶಾಸ್ತ ದೇವಾಲಯ ಮತ್ತು ಒಂದು ತೂಗು ಸೇತುವೆ ಎಲ್ಲವು ಸೇರಿ ತೇನ್‍ಮಲವನ್ನು ಪ್ರವಾಸಿಗರ ನೆಚ್ಚಿನ ತಾಣವನ್ನಾಗಿಸಿವೆ. ತೇನ್‍ಮಲಗೆ ರಸ್ತೆ ಸಂಪರ್ಕ ಉತ್ತಮ ರೀತಿಯಲ್ಲಿದೆ. ಇದಕ್ಕೆ ತಿರುವನಂತಪುರಂ ಮತ್ತು ಪುನಲೂರ‍್ ಗಳಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಇಲ್ಲಿನ ಮಿತವಾದ ಉಷ್ಣಾಂಶ ಮತ್ತು ಹಿತವಾದ ಹವಾಗುಣವು ಪ್ರವಾಸಿಗರನ್ನು ಎಲ್ಲಾ ಋತುಗಳಲ್ಲಿಯು ತೇನ್‍ಮಲಗೆ ಬರುವಂತೆ ಪ್ರೇರೇಪಿಸುತ್ತವೆ.

ವಿಶೇಷ ಲೇಖನ : ಚುಂಬಕಕ್ಕೆ ಕೋವಲಂ ತೀರ

ತೇನ್‍ಮಲಗೆ ತಿರುವನಂತಪುರಂ ಮತ್ತು ಕೊಲ್ಲಂ ಮಾರ್ಗವಾಗಿ ರಸ್ತೆ ಮೂಲಕ ತಲುಪಬಹುದು. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ತೇನ್‍ಮಲಗೆ ತಿರುವನಂತಪುರಂನಿಂದ ಹೋಗಿ ಬರುತ್ತಿರುತ್ತವೆ. ಬಸ್ಸುಗಳು ಕಿರುಪ್ರವಾಸಗಳನ್ನು ಕೈಗೊಳ್ಳಲು ಸುರಕ್ಷಿತ ಮತ್ತು ಮಿತವ್ಯಯಿ ಸಹ. ಟ್ಯಾಕ್ಸಿಗಳು ಮತ್ತು ಖಾಸಗಿ ವಾಹನಗಳು ತೇನ್‍ಮಲಗೆ ಹೋಗಲು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X