Search
  • Follow NativePlanet
Share
» »ಕೇರಳದ ಪರಿಸರ ಪ್ರವಾಸಿ ಗಿರಿಧಾಮ ತೆನ್ಮಲ!

ಕೇರಳದ ಪರಿಸರ ಪ್ರವಾಸಿ ಗಿರಿಧಾಮ ತೆನ್ಮಲ!

ಪರಿಸರ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ತೆನ್ಮಲ ಗಿರಿಧಾಮವು ಕೇರಳದ ಕೊಲ್ಲಂ ಜಿಲ್ಲೆಯಲ್ಲಿದೆ ಹಾಗೂ ಪುನಲೂರು ಪಟ್ಟಣದಿಂದ 22 ಕಿ.ಮೀ ದೂರದಲ್ಲಿದೆ

By Mahesh Pallaki

ಇತ್ತೀಚಿನ ದಿನಗಳಲ್ಲಿ ಪರಿಸರ ಪ್ರವಾಸವು(ಇಕೋ-ಟೂರಿಸಂ) ಎಲ್ಲರ ಗಮನಸೆಳೆಯುತ್ತಿದೆ. ಇಂತಹ ಪ್ರವಾಸಗಳು ಪ್ರಸಿದ್ಧಿಯನ್ನು ಪಡೆಯಲು ಕಾರಣವೂ ಇದೆ. ಪರಿಸರ ಪ್ರವಾಸ ಅಥವಾ ಇಕೋ-ಟೂರಿಸಂ ಎಂದರೆ, ಸೂಕ್ಷ್ಮ ಪ್ರದೇಶಗಳು,ನಗರಪ್ರದೇಶದಿಂದ ಹಾಗೂ ಆಧುನಿಕತೆಯಿಂದ ದೂರವಿರುವ ನೈಸರ್ಗಿಕ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುವ ಪ್ರವಾಸಗಳು.

ನೈಸರ್ಗಿಕ ಜಾಗಗಳಿಗೆ ಭೇಟಿ ನೀಡುವುದಲ್ಲದೆ ಅಲ್ಲಿನ ನೈಸರ್ಗಿಕ ಆಸ್ಥಿಗಳಿಗೆ ಯಾವುದೇ ಹಾನಿಮಾಡದೇ ಅದರ ಮೂಲಸೌಂದರ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಶಿಕ್ಷಣ ನೀಡುವುದು ಸಹ ಇಕೋ-ಟೂರಿಸಂನ ಮುಖ್ಯ ಉದ್ದೇಶಗಳಲ್ಲೊಂದು.ಸಸ್ಯ ಹಾಗೂ ಜೀವಸಂಪತ್ತಿನಿಂದ ಸಮೃದ್ಧವಾದ, ಸಾಂಸ್ಕೃತಿಕ ಪಾರಂಪರತೆಯಿಂದ ಕೂಡಿದ ಜಾಗಗಳೇ ಇಕೋ-ಟೂರಿಸಂನ ಮುಖ್ಯ ಆಕರ್ಷಣೆಗಳು.

ಇಂತಹ ಪ್ರವಾಸಗಳಿಂದ ಅಂತಹ ಜಾಗಗಳಲ್ಲಿ ವಾಸಿಸುವ ಜನರ ಜೀವನಶೈಲಿ,ಅವರುಗಳ ಪಾರಂಪರಿಕ ಆಚರಣೆಗಳಿಗೂ ಪ್ರೋತ್ಸಾಹ ಸಿಕ್ಕಿ, ಅವರುಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವುದರಿಂದ ಅವರುಗಳ ಆರ್ಥಿಕ ಸ್ಥಿತಿಗತಿಗಳು ಬಲಗೊಳ್ಳುತ್ತದೆ. ಎಲ್ಲಕ್ಕೂ ಮಿಗಿಲಾಗಿ ಪ್ರಕೃತಿಯನ್ನು ಮಾತೃಸ್ಥಾನದಲ್ಲಿಟ್ಟು ಪೂಜಿಸಲಾಗುತ್ತದೆ.ಅಂತಹ ಮಾತೃ ಸ್ವರೂಪಿ ಪ್ರಕೃತಿಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆಯಲ್ಲವೆ?

ಕೇರಳ. "ಗಾಡ್ಸ್ ಓನ್ ಕಂಟ್ರಿ" ಎಂದೇ ಸುಪ್ರಸಿದ್ಧವಾದ ಒಂದು ರಾಜ್ಯ. ಹಸಿರಿನಿಂದ ಕೂಡಿದ ಪ್ರಾಕೃತಿಕ ಸೌಂದರ್ಯ ಕೇರಳವನ್ನು ದೇವರ ರಾಜ್ಯವನ್ನಾಗಿಸಿದೆ. ಕೇರಳದ "ತೆನ್ಮಲ" ಅರಣ್ಯಪ್ರದೇಶ ಪರಿಸರ ಪ್ರವಾಸ(ಇಕೊ-ಟೂರಿಸಂ)ಕ್ಕೆ ಹೇಳಿಮಾಡಿಸಿದಂತಹ ತಾಣವಾಗಿದೆ.

ಪರಿಸರ ಪ್ರವಾಸವನ್ನು ಪ್ರೋತ್ಸಾಹಿಸುವ ಸಲುವಾಗಿಯೇ "ತೆನ್ಮಲ" ಅರಣ್ಯಪ್ರದೇಶವನ್ನು ಅಭಿವೃದ್ದಿಪಡಿಸಲಾಗಿದೆ. ತೆನ್ಮಲ ಗಿರಿಧಾಮವು ಕೇರಳದ ಕೊಲ್ಲಂ ಜಿಲ್ಲೆಯಲ್ಲಿದೆ ಹಾಗು ಪುನಲೂರು ಪಟ್ಟಣದಿಂದ 22 ಕಿ.ಮೀ ಹಾಗೂ ಕೇರಳದ ರಾಜಧಾನಿ ತಿರುವನಂತಪುರದಿಂದ 70 ಕಿ.ಮೀ. ದೂರದಲ್ಲಿದೆ. ತೆನ್ಮಲ ಅರಣ್ಯ ಪ್ರದೇಶವು ಅಷ್ಟೇನು ಪ್ರಚಲಿತಕ್ಕೆ ಬಾರದ, ಅತ್ಯಂತ ಮನಮೋಹಕ ಗಿರಿಧಾಮವಾಗಿದೆ. ಕಡಿಮೆ ಖರ್ಚಿನಲ್ಲಿ ಸಿಟಿಯಿಂದ ಹೊರಗೆ ವಾರಾಂತ್ಯಕ್ಕೆ ಹೋಗಿಬರಬಹುದಾದ ಸುಂದರ ತಾಣ ಈ ತೆನ್ಮಲ.

ಮಹತ್ವ

ಮಹತ್ವ

ಕೇರಳದ ಮಾತೃ ಭಾಷೆ ಮಲಯಾಳಂ. ಮಲಯಾಳಂನಲ್ಲಿ "ತೆನ್" ಎಂಬುದರ ಅರ್ಥ 'ಜೇನು'. ಮಲ ಎಂದರೆ ಬೆಟ್ಟ. ಈ ಪ್ರದೇಶದಲ್ಲಿ ಸಿಗುವ ಜೇನು ಅತ್ಯಂತ ರುಚಿಕರ ಹಾಗೂ ವಿಶಿಷ್ಟತೆಯಿಂದ ಕೂಡಿದ್ದು. ಇದಕ್ಕೆ ಇಲ್ಲಿ ಅಭಿವೃದ್ಧಿಪಡಿಸಲಾಗಿರುವ ಪರಿಸರ ವ್ಯವಸ್ಥೆಯೇ ಕಾರಣ.

ಚಿತ್ರಕೃಪೆ: Arunvrparavur

ಮೊದಲ ಪರಿಸರ ಪ್ರವಾಸಿ ತಾಣ

ಮೊದಲ ಪರಿಸರ ಪ್ರವಾಸಿ ತಾಣ

ಪ್ರದೇಶವು ಭಾರತದಲ್ಲಿ ಅಳವಡಿಸಲಾದ ಮೊದಲ ಪರಿಸರ ಪ್ರವಾಸಿ ತಾಣ. ಇದನ್ನು 'ತೆನ್ಮಲ ಇಕೋ ಟೂರಿಸಂ ಪ್ರೊಮೋಷನಲ್ ಸೊಸೈಟಿ' ಎಂಬ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಅಂಗಸಂಸ್ಥೆಯು ನಿರ್ವಹಿಸುತ್ತದೆ.

ಚಿತ್ರಕೃಪೆ: REPhotography06

ನೋಡಬಹುದು

ನೋಡಬಹುದು

ತೆನ್ಮಲ ಪ್ರವಾಸಿ ತಾಣವನ್ನು ಮೂರು ಮುಖ್ಯ ವಲಯಗಳಾಗಿ ವಿಂಗಡಿಸಲಾಗಿದೆ. ಇದನ್ನು ಸಾಂಸ್ಕೃತಿಕ ವಲಯ, ವಿರಾಮ ವಲಯ, ಸಾಹಸೀವಲಯಗಳಾಗಿ ವಿಂಗಡಿಸಲಾಗಿದೆ. ಇದಲ್ಲದೆ ತೆನ್ಮಲ ಅಣೆಕಟ್ಟು ಮತ್ತು ಜಲಾಶಯ, ಪಳರುವಿ ಫಾಲ್ಸ್, ಷೆಂಡುರುಣಿ ವನ್ಯಜೀವಿ ಅಭಯಾರಣ್ಯ, ಮತ್ತು ತೆನ್ಮಲ ಸೇತುವೆ, ಇಲ್ಲಿ ನೋಡಬಹುದಾದಂತಹ ಜಾಗಗಳು.

ಚಿತ್ರಕೃಪೆ: Varkey Parakkal

ಕಲ್ಲಡ

ಕಲ್ಲಡ

ಕಲ್ಲಡ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ತೆನ್ಮಲ ಅಣೆಕಟ್ಟು ನೀರಾವರಿ ಪ್ರಯೋಜನಗಳಿಗಾಗಿ ಉಪಯೋಗಿಸಲಾಗುತ್ತದೆ. ಇದು ತೆನ್ಮಲದ ಅತ್ಯಂತ ಆಕರ್ಷಣೀಯ ಪ್ರವಾಸಿ ತಾಣವಾಗಿದೆ.

ಚಿತ್ರಕೃಪೆ: Kumar Mullackal

ಜಲಪಾತ

ಜಲಪಾತ

ತೆನ್ಮಲದಿಂದ 14ಕಿ.ಮೀ ದೂರದಲ್ಲಿರುವ ಅತ್ಯಂತ ಸುಂದರ ತಾಣವೇ ಪಳರುವಿ ಫಾಲ್ಸ್. ಪಳರುವಿ ಎಂದರೆ ಮಲಯಾಳಂನಲ್ಲಿ ಹಾಲಿನ ಹೊಳೆ ಎಂದರ್ಥ.

ಚಿತ್ರಕೃಪೆ: Akhil S Unnithan

ಆಕರ್ಷಕ

ಆಕರ್ಷಕ

ಇದು 1904ರಲ್ಲಿ ಬ್ರಿಟೀಷ್ ಆಡಳಿತದಲ್ಲಿ ನಿರ್ಮಿತವಾದ ರೈಲ್ವೇ ಸೇತುವೆ. ಈಗ ಈ ರೈಲ್ವೇ ಸೇತುವೆಯು ಕೊಳ್ಳಂ ಹಾಗೂ ಪುನಲೂರು ನಗರಗಳನ್ನು ಸಂಪರ್ಕಿಸುತ್ತದೆ. ಕಮಾನಿನ ಆಕೃತಿಯಲ್ಲಿ ನಿರ್ಮಾಣವಾಗಿರುವ ಈ ಸೇತುವೆಯು ತೆನ್ಮಲದ ಅತ್ಯಂತ ಆಕರ್ಷಣೀಯ ಸ್ಥಳಗಳಲ್ಲಿ ಪ್ರಮುಖವಾದದು.

ಚಿತ್ರಕೃಪೆ: Rakesh S

ಯಾವುವು ಏನೇನು?

ಯಾವುವು ಏನೇನು?

ಸಾಂಸ್ಕೃತಿಕ ವಲಯ- ಕೇರಳದ ಸಾಂಸ್ಕೃತಿಕ ಮಟ್ಟದ ವಿಚಾರಗಳನ್ನು ತಿಳಿಸುತ್ತದೆ.
ವಿರಾಮ ವಲಯ- ವಿರಾಮದ ಸಮಯವನ್ನು ಕಳೆಯಲು ಈ ವಿರಾಮ ವಲಯಗಳನ್ನು ರಚಿಸಲಾಗಿದೆ. ಇದೇ ವಿರಾಮ ವಲಯದಲ್ಲಿ ನಮಗೆ ತೂಗು ಸೇತುವೆಯು ಕಾಣಸಿಗುತ್ತದೆ.
ಸಾಹಸೀ ವಲಯ- ಈ ವಲಯದಲ್ಲಿ ಹೆಚ್ಚಾಗಿ ಟ್ರೆಕ್ಕಿಂಗ್, ಮೌಂಟೇನ್ ಬೈಕಿಂಗ್ ನಂತಹ ಚಟುವಟಿಕೆಗಳು ನಡೆಯುತ್ತವೆ.

ಚಿತ್ರಕೃಪೆ: Fotokannan

ಹೇಗೆ ?

ಹೇಗೆ ?

ತಿರುವನಂತಪುರಂ ಹಾಗೂ ಕೊಲ್ಲಂನಿಂದ ತೆನ್ಮಲಕ್ಕೆ ಹಲವಾರು ಸರ್ಕಾರಿ ಬಸ್ಸುಗಳ ಸೌಲಭ್ಯವಿದೆ ಹಾಗೂ ತೆನ್ಮಲದಲ್ಲಿಯೇ ರೈಲು ನಿಲ್ದಾಣವಿದೆ. ತಿರುವನಂತಪುರ ವಿಮಾನ ನಿಲ್ದಾಣದಿಂದ ತೆನ್ಮಲದ ಸಮೀಪವಿರುವ ವಿಮಾನ ನಿಲ್ದಾಣಕ್ಕೆ ವೈಮಾನಿಕ ಸಾರಿಗೆಯ ವ್ಯವಸ್ಥೆಯಿದೆ.

ಚಿತ್ರಕೃಪೆ: Arunvrparavur

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X