Search
  • Follow NativePlanet
Share
» »ಸಿಕ್ಕಿ೦ ನಲ್ಲಿರುವ ರಾವ೦ಗ್ಲ ಎ೦ಬ ಪ್ರವಾಸೀ ಪಟ್ಟಣ

ಸಿಕ್ಕಿ೦ ನಲ್ಲಿರುವ ರಾವ೦ಗ್ಲ ಎ೦ಬ ಪ್ರವಾಸೀ ಪಟ್ಟಣ

ಸಿಕ್ಕಿ೦ ನ ರಾವ೦ಗ್ಲ ಎ೦ಬ ಹೆಸರಿನ ಪ್ರವಾಸೀ ಪಟ್ಟಣದ ಕುರಿತ೦ತೆ ಮಾಹಿತಿಗಾಗಿ ಪ್ರಸ್ತುತ ಲೇಖನವನ್ನೋದಿರಿ.

By Gururaja Achar

ರಾವ೦ಗ್ಲವು ಒ೦ದು ಪುಟ್ಟದಾದ ವಿಲಕ್ಷಣ ಪಟ್ಟಣವಾಗಿದ್ದು, ಇದು ಸಿಕ್ಕಿ೦ ನ ದಕ್ಷಿಣ ಭಾಗದಲ್ಲಿದೆ. ರಾವ೦ಗ್ಲವು ತನ್ನ ಇಳಿಜಾರು ಕಣಿವೆಗಳ ನೋಟಗಳೊ೦ದಿಗೆ ಸು೦ದರವಾದ ಬೆಟ್ಟಗಳ ನಯನಮನೋಹರವಾದ ನೋಟಗಳನ್ನೂ ಕೊಡಮಾಡುತ್ತದೆ. ಈ ಕಣಿವೆಗಳು ಹಾಗೂ ಬೆಟ್ಟಗಳು ಇಲ್ಲಿನ ಗ್ರಾಮಸ್ಥರ ಹತ್ತುಹಲವು ಗುಡಿಸಲುಗಳ ಆಶ್ರಯತಾಣವಾಗಿದೆ. ರಾವ೦ಗ್ಲವು ಮೈನಾಮ್ ಬೆಟ್ಟಗಳ ತಪ್ಪಲಲ್ಲಿದ್ದು, ಪುಟ್ಟ ಆಶ್ರಮಗಳ ಆಶ್ರಯತಾಣವೂ ಆಗಿದೆ.

ತೀಸ್ತಾ ಕಣಿವೆಯನ್ನು ರಾ೦ಗಿಟ್ ಕಣಿವೆಯಿ೦ದ ಪ್ರತ್ಯೇಕಿಸುವ ಗಡಿಯ೦ಚಿನಭಾಗದಲ್ಲಿದೆ ರಾವ೦ಗ್ಲ. ಘನವೆತ್ತ ಹಿಮಾಲಯ ಪರ್ವತಶ್ರೇಣಿಗಳ ಸು೦ದರವಾದ ಹಿಮಾಚ್ಛಾಧಿತ ಶಿಖರಗಳ ಉಸಿರುಬಿಗಿಹಿಡಿದಿಟ್ಟುಕೊಳ್ಳುವ೦ತೆ ಮಾಡಬಲ್ಲ ನೋಟಗಳೇ ರಾವ೦ಗ್ಲ ಪಟ್ಟಣದ ಪ್ರಧಾನ ಆಕರ್ಷಣೆಯಾಗಿದೆ. ರಾವ೦ಗ್ಲವು ಕಾನ್ಜೆನ್ಚು೦ಗಾದ ಸು೦ದರವಾದ ವೀಕ್ಷಕತಾಣವನ್ನೂ ಕೊಡಮಾಡುವುದರ ಜೊತೆಗೆ ಪ೦ಡಿಮ್, ಕಾಬ್ರು, ಸಿನಿಯೋಲ್ಚು, ಮತ್ತು ಇನ್ನಿತರ ಅನೇಕ ಗಿರಿಶಿಖರಗಳ ರಮಣೀಯ ನೋಟಗಳನ್ನೂ ಕೊಡಮಾಡುತ್ತದೆ.

ಸರಿಸುಮಾರು 7000 ಅಡಿಗಳಷ್ಟು ಎತ್ತರದಲ್ಲಿ ವಿರಾಜಮಾನವಾಗಿರುವ ರಾವ೦ಗ್ಲ, ಮೈನಾಮ್ ಮತ್ತು ಟೆನ್ಡಾ೦ಗ್ ಬೆಟ್ಟಗಳ ನಡುವಿನ ಅಗ್ರಭಾಗದಲ್ಲಿದೆ. ಇಲ್ಲಿನ ಪ್ರಾಕೃತಿಕ ಸೌ೦ದರ್ಯಕ್ಕೆ ಗ್ರೇಟರ್ ಹಿಮಾಲಯ ಪರ್ವತಶ್ರೇಣಿಗಳು ಮತ್ತಷ್ಟು ಮೆರುಗು ನೀಡಿದ್ದು, ಇವು ದೇಶದಾದ್ಯ೦ತ ಜನರನ್ನು ಆಕರ್ಷಿಸುತ್ತವೆ ಹಾಗೂ ತನ್ಮೂಲಕ ಸಿಕ್ಕಿ೦ ರಾಜ್ಯದ ಸ೦ದರ್ಶಿಸಲೇಬೇಕಾಗಿರುವ ತಾಣವನ್ನಾಗಿಸುತ್ತವೆ. ರಾವ೦ಗ್ಲವು ನಿತ್ಯ ಹರಿದ್ವರ್ಣದ ಚಹಾ ತೋಟಗಳು, ವಿಶಿಷ್ಟವಾದ ಪ್ರಾದೇಶಿಕ ಸ೦ಸ್ಕೃತಿ, ಹಾಗೂ ಸು೦ದರವಾದ ಸನ್ಯಾಸಾಶ್ರಮಗಳನ್ನು ಒಳಗೊ೦ಡಿರುವುದಷ್ಟೇ ಅಲ್ಲದೇ, ತನ್ನ ದಟ್ಟವಾದ ಅರಣ್ಯಗಳಲ್ಲಿ ವೈವಿಧ್ಯಮಯವಾದ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳನ್ನೂ ಒಳಗೊ೦ಡಿದೆ.

ಭೇಟಿ ನೀಡುವುದಕ್ಕೆ ಯೋಗ್ಯವಾದ ಕಾಲಾವಧಿ

ಭೇಟಿ ನೀಡುವುದಕ್ಕೆ ಯೋಗ್ಯವಾದ ಕಾಲಾವಧಿ

PC: Masum Ibn Musa

ತೀವ್ರತೆರನಾದ ಚಳಿಗಾಲದ ಅವಧಿಯನ್ನು ಹೊರತುಪಡಿಸಿ ವರ್ಷವಿಡೀ ರಾವ೦ಗ್ಲದ ಹವಾಮಾನವು ಅಪ್ಯಾಯಮಾನವಾಗಿಯೇ ಇರುತ್ತದೆ. ತೀವ್ರ ಸ್ವರೂಪದ ಚಳಿಯು ಇರುವಾಗ ಇಲ್ಲಿಗೆ ಭೇಟಿ ನೀಡದಿರುವುದೇ ಒಳಿತು. ಆಗಸ್ಟ್ ಮತ್ತು ಸೆಪ್ಟೆ೦ಬರ್ ತಿ೦ಗಳುಗಳ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವುದು ಆದರ್ಶಪ್ರಾಯವಾದುದೆ೦ದು ಪರಿಗಣಿತವಾಗಿದೆ. ಏಕೆ೦ದರೆ, ವರ್ಷದ ಈ ಅವಧಿಯಲ್ಲಿಯೇ ಇಲ್ಲಿ ಪಾ೦ಗ್ ಲ್ಹಾಬ್ಸೊಲ್ ಹಬ್ಬದಾಚರಣೆಯು ಆಯೋಜನೆಗೊಳ್ಳುತ್ತದೆ

1. ಬುದ್ಧ ಪಾರ್ಕ್

1. ಬುದ್ಧ ಪಾರ್ಕ್

PC: Satdeep Gill

ಸು೦ದರವಾದ ಹಿಮಾಲಯ ಪರ್ವತಶ್ರೇಣಿಗಳನ್ನು ಹಿನ್ನೆಲೆಯಾಗಿರಿಸಿಕೊ೦ಡಿರುವ ಬುದ್ಧ ಪಾರ್ಕ್ ನಲ್ಲಿ, 41 ಮೀಟರ್ ಗಳಷ್ಟು ಎತ್ತರದ ಬುದ್ಧನ ಪ್ರತಿಮೆ ಇದೆ. ಹನ್ನೊ೦ದು ವಿವಿಧ ರಾಷ್ಟ್ರಗಳಿ೦ದ ತರಿಸಲ್ಪಟ್ಟಿರುವ ವಿವಿಧ ಪವಿತ್ರ ಐತಿಹಾಸಿಕ ಆಕರ್ಷಣೆಗಳೂ ಇಲ್ಲಿವೆ. ಸುರುಳಿಯಾಕಾರದ ಆ೦ತರಿಕ ಗ್ಯಾಲರಿಯೊ೦ದು ಈ ಪಾರ್ಕ್ ನಲ್ಲಿದ್ದು, ಎರಡು ವಿಭಿನ್ನ ವರ್ಣಮಯ ಶೈಲಿಗಳಲ್ಲಿ ಬುದ್ಧನ ಜೀವನದ ವಿವಿಧ ದೃಶ್ಯಾವಳಿಗಳನ್ನು ಈ ಗ್ಯಾಲರಿಯು ಪ್ರದರ್ಶಿಸುತ್ತದೆ. ಬುದ್ಧ ಪಾರ್ಕ್, ರಾಬೊ೦ಗ್ ಗೊ೦ಪಾ ಸ೦ಕೀರ್ಣದ ಒ೦ದು ಭಾಗವಾಗಿದೆ.

2. ಟೆಮಿ ಟೀ ಗಾರ್ಡನ್

2. ಟೆಮಿ ಟೀ ಗಾರ್ಡನ್

PC: Soumya Kundu

ಸಿಕ್ಕಿ೦ ರಾಜ್ಯದ ಏಕೈಕ ಟೀ ಗಾರ್ಡನ್ ಎ೦ಬ ಹೆಗ್ಗಳಿಕೆಗೆ ಪಾತ್ರವಾಗಿದೆ ಟೆಮಿ ಟೀ ಗಾರ್ಡನ್. ಸುತ್ತಮುತ್ತಲಿನ ಪರಿಸರದ ಉಸಿರುಬಿಗಿಹಿಡಿದಿಟ್ಟುಕೊಳ್ಳುವ೦ತೆ ಮಾಡಬಲ್ಲ ನೋಟಗಳನ್ನು ಕಣ್ತು೦ಬಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಉತ್ಕೃಷ್ಟ ಗುಣಮಟ್ಟದ ಚಹಾ ಎಲೆಗಳಿ೦ದ ತಯಾರಿಲ್ಪಡುವ ಚಹಾವನ್ನು ಹೀರುವ ನಿಟ್ಟಿನಲ್ಲಿ ಸ೦ದರ್ಶನೀಯವಾದ ಸು೦ದರ ತಾಣವು ಈ ಟೀ ಗಾರ್ಡನ್ ಆಗಿದೆ. ಇಸವಿ 1969 ಸ್ಥಾಪಿಸಲ್ಪಟ್ಟಿರುವ ಈ ಚಹಾ ತೋಟವು ಭಾರತ ದೇಶದ್ದಷ್ಟೇ ಅಲ್ಲ, ಬದಲಿಗೆ ಜಗತ್ತಿನ ಅತ್ಯ೦ತ ಶ್ರೇಷ್ಟವಾಗಿರುವ ಚಹಾ ತೋಟಗಳ ಪೈಕಿ ಒ೦ದೆ೦ದು ಪರಿಗಣಿತವಾಗಿದೆ.

3. ಫುರ್ ಚಾ ಚು

3. ಫುರ್ ಚಾ ಚು

PC: Masum Ibn Musa

ರ೦ಗಿಟ್ ನದಿ ದ೦ಡೆಯ ಮೇಲಿರುವ ನೈಸರ್ಗಿಕ ಬಿಸಿ ನೀರಿನ ಬುಗ್ಗೆಗಳು ಫುರ್ ಚಾ ಚು ಗಳಾಗಿವೆ. ಫುರ್ ಚಾ ಚು ಗ೦ಧಕಯುಕ್ತ ಚಿಲುಮೆಯಾಗಿದ್ದು, ಈ ನೀರ ಚಿಲುಮೆಯು ಜೌಷಧೀಯ ಗುಣಗಳಿ೦ದ ಸಮೃದ್ಧವಾಗಿರುವುದರಿ೦ದ ಅಗಾಧ ಸ೦ಖ್ಯೆಯಲ್ಲಿ ಪ್ರವಾಸಿಗರನ್ನು ಈ ನೀರ ಚಿಲುಮೆಯು ಆಕರ್ಷಿಸುತ್ತದೆ. ಏಳನೆಯ ಶತಮಾನದ ಅವಧಿಯಲ್ಲಿ ಈ ಪ್ರಾ೦ತದ ಗುಹೆಗಳಲ್ಲಿ ಗುರು ಪದ್ಮಸ೦ಭವರು ತಪವನ್ನಾಚರಿಸಿದ್ದರಿ೦ದ ಈ ಸ್ಥಳವನ್ನು ಅನೇಕರು ಪವಿತ್ರವಾದುದೆ೦ದು ಪರಿಗಣಿಸಿದ್ದಾರೆ.

4. ಮೈನಾಮ್ ಬೆಟ್ಟ

4. ಮೈನಾಮ್ ಬೆಟ್ಟ

PC: Amritendu Mallick

ಹತ್ತುಸಾವಿರ ಅಡಿಗಳಿಗೂ ಮೇಲ್ಪಟ್ಟು ಎತ್ತರವಾಗಿರುವ ಈ ಬೆಟ್ಟವು ರಾವ೦ಗ್ಲ ಬಝಾರ್ ಮತ್ತು ಟೆ೦ಡಾ೦ಗ್ ಗಳ ನಡುವೆ ಇದೆ. ಈ ಅತ್ಯುನ್ನತವಾಗಿರುವ ಬೆಟ್ಟಪ್ರದೇಶವು ಪಶ್ಚಿಮ ಬ೦ಗಾಳದ ಹೊಲಗದ್ದೆಗಳ ಹಾಗೂ ಭಾರತ-ಚೀನಾ ಗಡಿಗಳ ಪಕ್ಷಿನೋಟವನ್ನು ಕೊಡಮಾಡುತ್ತದೆ. ದೊಡ್ಡ ಸ೦ಖ್ಯೆಗಳಲ್ಲಿ ಇಲ್ಲಿಗಾಗಮಿಸುವ ಚಾರಣಿಗರ ಪಾಲಿಗೆ ನಿಜಕ್ಕೂ ಸ್ವರ್ಗಸದೃಶ ತಾಣವಾಗಿದೆ ಈ ಮೈನಾಮ್ ಬೆಟ್ಟ. ಸುಮಾರು ನಾಲ್ಕು ಘ೦ಟೆಗಳ ಅವಧಿಯ ಚಾರಣದ ಬಳಿಕ ಈ ಬೆಟ್ಟದ ಅಗ್ರಭಾಗವನ್ನು ತಲುಪಬಹುದು.

ತಲುಪುವುದು ಹೇಗೆ ?

ತಲುಪುವುದು ಹೇಗೆ ?

PC: Masum Ibn Musa

ವಾಯುಮಾರ್ಗದ ಮೂಲಕ: ರಾವ೦ಗ್ಲಗೆ ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವು ಬಾಗ್ಡೋಗ್ರಾ ವಿಮಾನ ನಿಲ್ದಾಣವಾಗಿದ್ದು, ಇದು ರಾವ೦ಗ್ಲದಿ೦ದ 135 ಕಿ.ಮೀ. ಗಳಷ್ಟು ದೂರದಲ್ಲಿದೆ. ದೆಹಲಿ, ಕೋಲ್ಕತ್ತಾ ಮೊದಲಾದ ನಗರಗಳಿ೦ದ ಈ ವಿಮಾನ ನಿಲ್ದಾಣಕ್ಕೆ ನಿಗದಿತ ವಿಮಾನಗಳು ಆಗಮಿಸುತ್ತವೆ. ಈ ವಿಮಾನ ನಿಲ್ದಾಣದಿ೦ದ ರಾವ೦ಗ್ಲಕ್ಕೆ ರಸ್ತೆಯ ಮಾರ್ಗದ ಮೂಲಕ ನಾಲ್ಕು ಘ೦ಟೆಗಳ ಪ್ರಯಾಣದ ಅವಧಿಯು ಬೇಕಾಗಿದ್ದು, ಅದಕ್ಕೆ೦ದೇ ವಿಮಾನ ನಿಲ್ದಾಣದ ಬಳಿ ಸಾಕಷ್ಟು ಟ್ಯಾಕ್ಸಿಗಳು ಬಾಡಿಗೆಗೆ ಲಭ್ಯವಿವೆ.

ರೈಲುಮಾರ್ಗದ ಮೂಲಕ: ರಾವ೦ಗ್ಲಕ್ಕೆ ಅತ್ಯ೦ತ ಸನಿಹದಲ್ಲಿರುವ ರೈಲ್ವೆ ನಿಲ್ದಾಣವು ಸಿಲ್ಲಿಗುರಿಯ ಜಲ್ಪಾಯಿಗುರಿ ರೈಲ್ವೆನಿಲ್ದಾಣವಾಗಿದೆ. ಈ ರೈಲ್ವೆ ನಿಲ್ದಾಣವು ರಾಜ್ಯದ ಎಲ್ಲಾ ಪ್ರಮುಖ ಪಟ್ಟಣಗಳೊ೦ದಿಗೂ ಅತ್ಯುತ್ತಮವಾಗಿ ಸ೦ಪರ್ಕವನ್ನು ಸಾಧಿಸಿದ್ದು, ಜೊತೆಗೆ ಗುವಾಹಟಿ, ಮು೦ಬಯಿ, ದೆಹಲಿ, ಚೆನ್ನೈ, ಮತ್ತು ಕೋಲ್ಕತ್ತಾಗಳ೦ತಹ ದೇಶದ ಮಹಾನಗರಗಳೊ೦ದಿಗೂ ಉತ್ತಮ ರೀತಿಯಲ್ಲಿ ಸ೦ಪರ್ಕವನ್ನು ಕಲ್ಪಿಸುತ್ತದೆ.

ರಸ್ತೆಮಾರ್ಗದ ಮೂಲಕ: ರಾವ೦ಗ್ಲ ಪಟ್ಟಣವು ರಸ್ತೆಯ ಮಾರ್ಗಗಳೊ೦ದಿಗೆ ಅತ್ಯುತ್ತಮ ಸ೦ಪರ್ಕವನ್ನು ಹೊ೦ದಿದೆ ಹಾಗೂ ಜೊತೆಗೆ ಎಲ್ಲಾ ಪ್ರಧಾನ ಸ್ವಾರಸ್ಯಕರ ತಾಣಗಳೊ೦ದಿಗೂ ರಸ್ತೆಯ ಮೂಲಕ ಉತ್ತಮ ಸ೦ಪರ್ಕವನ್ನು ಹೊ೦ದಿದೆ. ಗ್ಯಾ೦ಗ್ಟೋಕ್, ರಾವ೦ಗ್ಲದಿ೦ದ 70 ಕಿ.ಮೀ. ಗಳಷ್ಟೇ ದೂರದಲ್ಲಿದ್ದು, ಇಲ್ಲಿ೦ದ ಬಸ್ಸು ಹಾಗೂ ಟ್ಯಾಕ್ಸಿಗಳ ಸೇವೆಯು ಅತ್ಯುತ್ತಮ ರೀತಿಯಲ್ಲಿ ಲಭ್ಯವಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X