Search
  • Follow NativePlanet
Share
» »ವಿಮಾನದಲ್ಲಿ ಮೊದಲ ಬಾರಿಗೆ ಪ್ರಯಾಣ ಮಾಡುತ್ತಿದ್ದಲ್ಲಿ ತಿಳಿದಿರಲಿ ಈ ವಿಷಯಗಳು....

ವಿಮಾನದಲ್ಲಿ ಮೊದಲ ಬಾರಿಗೆ ಪ್ರಯಾಣ ಮಾಡುತ್ತಿದ್ದಲ್ಲಿ ತಿಳಿದಿರಲಿ ಈ ವಿಷಯಗಳು....

ಪ್ರಯಾಣ ಮಾಡುವುದು ಸಾಮಾನ್ಯವಾಗಿ ಎಲ್ಲರಿಗೂ ಅಚ್ಚು ಮೆಚ್ಚು. ಅದರಲ್ಲಿಯೂ ಜೀವನದಲ್ಲಿ ಒಮ್ಮೆಯಾದರು ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬ ಆಸೆ ಹಲವರಿಗೆ ಒಂದು ಕನಸಾಗಿದೆ. ವಿಮಾನಯಾನದಲ್ಲಿ ಹಲವಾರು ಅನುಕೂಲಗಳನ್ನು ನಾವು ಪಡೆಯಬಹುದು. ಅತ್ಯಂತ ವೇಗವ

ಪ್ರಯಾಣ ಮಾಡುವುದು ಸಾಮಾನ್ಯವಾಗಿ ಎಲ್ಲರಿಗೂ ಅಚ್ಚು ಮೆಚ್ಚು. ಅದರಲ್ಲಿಯೂ ಜೀವನದಲ್ಲಿ ಒಮ್ಮೆಯಾದರು ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬ ಆಸೆ ಹಲವರಿಗೆ ಒಂದು ಕನಸಾಗಿದೆ. ವಿಮಾನಯಾನದಲ್ಲಿ ಹಲವಾರು ಅನುಕೂಲಗಳನ್ನು ನಾವು ಪಡೆಯಬಹುದು. ಅತ್ಯಂತ ವೇಗವಾಗಿ ನಮ್ಮ ಸ್ಥಳವನ್ನು ಸುಲಭವಾಗಿ ತಲುಪಬಹುದು. ವಿಮಾನದ ಪ್ರಯಾಣ ಸ್ವಲ್ಪ ದುಬಾರಿಯಾದರೂ ಕೂಡ ಆಕಾಶದಲ್ಲಿ ಪಕ್ಷಿಯಂತೆ ಹಾರಾಡಲು ಬಯಸುತ್ತೇವೆ.

ಕರ್ನಾಟಕದಲ್ಲಿನ ಈ ಸುಂದರ ಜಲಪಾತಗಳಿಗೆ ಭೇಟಿ ನೀಡಿದ್ದೀರಾ?ಕರ್ನಾಟಕದಲ್ಲಿನ ಈ ಸುಂದರ ಜಲಪಾತಗಳಿಗೆ ಭೇಟಿ ನೀಡಿದ್ದೀರಾ?

ಆಗಾಗ್ಗೆ ವಿಮಾನಯಾನಗಳು ಕೆಲವು ರಿಯಾಯಿತಿಗಳನ್ನು ನೀಡುತ್ತದೆ. ವಿಮಾನದಲ್ಲಿ ಅತ್ಯಂತ ಉತ್ತಮವಾದ ಸೌಲಭ್ಯ ಹಾಗು ಸೇವೆಗಳಿದ್ದು, ಅದು ಕಂಪನಿಯಿಂದ ಕಂಪನಿಗೆ ಬದಲಾಗುತ್ತಿರುತ್ತದೆ. ನೀವು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರೆ ನೀವು ತಿಳಿದುಕೊಳ್ಳಲೇಬೇಕಾದ ಹಲವಾರು ವಿಷಯಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಪ್ರಸ್ತುತ ಲೇಖನದಲ್ಲಿ ನಿಮ್ಮ ವಿಮಾನದ ಮೊದಲ ಪ್ರಯಾಣದ ಅನುಭವ ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಸಂಕ್ಷೀಪ್ತವಾಗಿ ತಿಳಿಯೋಣ.

ಆಹಾರ

ಆಹಾರ

ಈ ವಿಮಾನಯಾನಗಳಲ್ಲಿ ನಿಮಗೆ ಅಹಾರ ಬೇಕು ಎಂದು ಎನ್ನಿಸಿದರೆ ನೀವು ಊಟಕ್ಕೆ ಕೂಡ ವಿನಂತಿ ಮಾಡಬಹುದು. ಕೆಲವು ವಿಮಾನ ನಿಲ್ದಾಣಗಳಲ್ಲಿ ನಿಮ್ಮನ್ನು ಅಡುಗೆಮನೆಗೆ ಕರೆದೊಯ್ಯಲಿದೆ ಎಂಬ ವಿಷಯ ನಿಮಗೆ ಗೊತ್ತೆ?


Sandip Bhattacharya

ಕ್ರೀಡೆ

ಕ್ರೀಡೆ

ಇಲ್ಲಿ ಕ್ರೀಡೆಗಳಂತಹ ಚಟುವಟಿಕೆ ಕೂಡ ಆನಂದಿಸಬಹುದಾಗಿದೆ. ಇದು ಮುಖ್ಯವಾಗಿ ಮಕ್ಕಳು ತಮ್ಮ ಒಂಟಿತನವನ್ನು ಕಳೆದು ಆನಂದವಾಗಿರಲು ವಿಮಾನಯಾನದಲ್ಲಿ ಕ್ರೀಡೆಗಳಂತಹ ಮನರಂಜನೆ ಕೂಡ ಒದಗಿಸುತ್ತದೆ. ಇಲ್ಲಿ ಮುಖ್ಯವಾಗಿ ಮಕ್ಕಳ ಆರೈಕೆ ಪ್ರಾಮುಖ್ಯತೆ ನೀಡಲಾಗುತ್ತದೆ.

Richard Moross

ಮಾಹಿತಿ

ಮಾಹಿತಿ

ವಿಮಾನಯಾನದಲ್ಲಿ ನೀವು ಹಲವಾರು ಮಾಹಿತಿಗಳನ್ನು ಪಡೆಯಬಹುದಾಗಿದೆ. ಮುಖ್ಯವಾಗಿ ವಿಮಾನ ಹೇಗೆ ಕೆಲಸ ಮಾಡುತ್ತದೆ. ಎಲ್ಲಿಂದ ಬರುತ್ತದೆ? ಎಲ್ಲಿಗೆ ಹೋಗುತ್ತದೆ? ಇಂತಹ ಹಲವಾರು ಕುತೂಹಲಕಾರಿಯಾದ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡುತ್ತದೆ. ಇದು ಕೇವಲ ನಿಮಗೆ ಮಾಹಿತಿ ಅಲ್ಲ ಬದಲಾಗಿ ಕಲಿಕೆಯೇ ಆಗಿದೆ.

Bradley Gordon

ತುರ್ತು ಪರಿಸ್ಥಿತಿ

ತುರ್ತು ಪರಿಸ್ಥಿತಿ

ವಿಮಾನಯಾನದಲ್ಲಿ ಏನಾದರು ಅಪಾಯ ಸಂಭವಿಸಿದರೆ ತಕ್ಷಣದ ಚಿಕಿತ್ಸೆಗಾಗಿ, ಔಷಧಿಗಳು ಮತ್ತು ತುರ್ತು ಸರಬರಾಜುಗಳು ವಿಮಾನದಲ್ಲಿ ಲಭ್ಯವಿರುತ್ತದೆ.

ನಿಯಮ

ನಿಯಮ

ವಿಮಾನಯಾನದಲ್ಲಿ ನಿರ್ದಿಷ್ಟವಾಗಿರುವ ಸ್ಥಳದಲ್ಲಿ ಮಾತ್ರ ಕುಳಿತುಕೊಳ್ಳಬೇಕು. ಇದು ವಿಮಾನದಲ್ಲಿನ ಒಂದು ನಿಯಮ. ಕೆಲವೊಮ್ಮೆ ಮಾತ್ರ ನಮ್ಮ ಸ್ಥಾನವನ್ನು ಬದಲಾಯಿಸಲು (ಸೀಟ್) ಒಪ್ಪಿಗೆ ಸೂಚಿಸುತ್ತದೆ.

chinaoffseason

ಆಹಾರ ಸೌಲಭ್ಯ

ಆಹಾರ ಸೌಲಭ್ಯ

ವಿಮಾನದಲ್ಲಿ ನೀಡುವ ಆಹಾರ ನಿಮಗೆ ಸಾಕಾಗಲಿಲ್ಲವಾದರೆ ಮತ್ತೊಮ್ಮೆ ನಿಮಗೆ ಆಹಾರದ ಸೌಲಭ್ಯವನ್ನು ಒದಗಿಸಲಾಗುತ್ತದೆ.

nite dan

ಹುಟ್ಟುಹಬ್ಬ

ಹುಟ್ಟುಹಬ್ಬ

ನಿಮ್ಮ ಸುಂದರವಾದ ದಿನಗಳಾದ ಹುಟ್ಟುಹಬ್ಬ ಹಾಗು ವಿವಾಹ ವಾರ್ಷಿಕೋತ್ಸವಗಳಂತಹ ವಿಶೇಷವನ್ನು ಕೂಡ ಇಲ್ಲಿ ಕೇಕ್ ಅನ್ನು ಕಟ್ ಮಾಡುವ ಮೂಲಕ ಸಂಭ್ರಮ ಆಚರಿಸಲಾಗುತ್ತದೆ. ಇದು ನೀವು ಎಂದು ಮರೆಯಲಾಗದ ಅನುಭೂತಿಯನ್ನು ಪಡೆಯಬಹುದು. ಕೆಲವು ವಿಮಾನಯಾನ ಕಂಪನಿಗಳು ನಿಮ್ಮ ಜನ್ಮದಿನವನ್ನು ಈ ಮೊದಲೇ ಆಯ್ಕೆ ಮಾಡುತ್ತವೆ.

Rexness

ಅಲ್ಕೋಹಾಲ್

ಅಲ್ಕೋಹಾಲ್

ವಿಮಾನಯಾನದಲ್ಲಿ ಆಲ್ಕೋಹಾಲ್‍ಯುಕ್ತವಾದ ಪಾನೀಯಗಳನ್ನು ಪ್ರಾಯಾಣಿಕರು ಬಯಸಿದ್ದಲ್ಲಿ ಪೂರೈಸಲಾಗುತ್ತದೆ.

ಸೌಂದರ್ಯ ಸಾಧನಗಳು

ಸೌಂದರ್ಯ ಸಾಧನಗಳು

ನಿಮಗೆ ಗೊತ್ತ ವಿಮಾನಯಾನದಲ್ಲಿ ಸೌಂದರ್ಯ ಸಾಧನಗಳು ಮತ್ತು ಸೌಂದರ್ಯ ಸಾಧನೋಪಾಯಗಳು ಲಭ್ಯವಿರುತ್ತದೆ.

ಗೇಮ್ಸ್

ಗೇಮ್ಸ್

ನೀವು ಇಲ್ಲಿ ಗೇಮ್ಸ್ ಆಡಲು ಬಯಸಿದ್ದರೆ ಯಾವುದೇ ಸಂಕೋಚವಿಲ್ಲದೇ ಆಟವಾಡಬಹುದು. ಅದರಲ್ಲಿಯೂ ಮುಖ್ಯವಾಗಿ ಕಾಡ್ರ್ಸ್. ಇದೊಂದು ಮನರಂಜನೆ ಆಗಿದ್ದು ಇದಕ್ಕೆ ವಿಮಾನದಲ್ಲಿನ ಯಾವುದೇ ಒಂದು ಸದಸ್ಯನು ಕೂಡ ವಿರೋದ ಮಾಡುವಂತಿಲ್ಲ.


shaileegorkhali

ಚಾಕೊಲೇಟ್

ಚಾಕೊಲೇಟ್

ವಿಮಾನಯಾನದಲ್ಲಿ ಕೆಲವು ಸ್ವಾಧಿಷ್ಟವಾದ ಚಾಕೊಲೇಟ್‍ಗಳನ್ನು ನೀಡುತ್ತಾರೆ. ನಿಮಗೆ ಮತ್ತಷ್ಟು ಬೇಕು ಎಂದು ಅನ್ನಿಸಿದರೆ ಯಾವುದೇ ಸಂಕೋಚವಿಲ್ಲದೇ ಪಡೆಯಬಹುದು.

ನೀರು

ನೀರು

ನೀರಿನ ಬಾಟಲಿಗಳು ಸಾಮಾನ್ಯವಾಗಿ ಎಲ್ಲಾ ವಿಮಾನಗಳಲ್ಲಿಯೂ ಲಭ್ಯವಿದ್ದು, ನೀವು ಯಾವಾಗ ಬೇಕಾದರೂ ಖರೀದಿಸಬಹುದು ಮತ್ತು ಕುಡಿಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X