Search
  • Follow NativePlanet
Share
» » ಕೋಟಿ ಶಿಲ್ಪಗಳನ್ನು ಒಂದೇ ರಾತ್ರಿಯಲ್ಲಿ ನಿರ್ಮಿಸಲಾದ ದೇವಾಲಯದ ರಹಸ್ಯ!

ಕೋಟಿ ಶಿಲ್ಪಗಳನ್ನು ಒಂದೇ ರಾತ್ರಿಯಲ್ಲಿ ನಿರ್ಮಿಸಲಾದ ದೇವಾಲಯದ ರಹಸ್ಯ!

ನಮ್ಮ ಭಾರತ ದೇಶದ ಶಿಲ್ಪಕಲಾ ಸೌಂದರ್ಯಕ್ಕೆ ಅತಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಈ ಶಿಲ್ಪಗಳು ಕೆಲವು ಬಾರಿ ನಿಗೂಢವಾಗಿ ಪರಿಣಮಿಸುತ್ತದೆ. ನಮ್ಮ ಕರ್ನಾಟಕದಲ್ಲಿ ಕೋಟಿ ಲಿಂಗಗಳು ಇದ್ದ ಹಾಗೆ ಕೋಟಿ ಶಿಲ್ಪ ಸಂಪತ್ತನ್ನು ಹೊಂದಿರುವ ದೇವಾಲಯವು ಇ

ಭಾರತ ದೇಶದಲ್ಲಿ ಹಲವಾರು ದೇವಾಲಯಗಳಿವೆ. ಅತ್ಯಂತ ಪ್ರಾಚೀನವಾದ ದೇವಾಲಯಗಳೆಲ್ಲಾ ದೇವಾನು ದೇವತೆಗಳು ನಿರ್ಮಿಸಿರಬಹುದೆಂದು ಭಾವಿಸಲಾಗುತ್ತದೆ. ಇದಕ್ಕೆ ಕಾರಣ ಆ ದೇವಾಲಯದ ಮಹಿಮೆ ಹಾಗೂ ಯಾವುದೇ ಆಧಾರಗಳು ಇಲ್ಲದೇ ಇರುವುದರಿಂದ. ದೇವಾಲಯಗಳಲ್ಲಿನ ಶಿಲ್ಪಗಳೆಂದರೆ ಮನಸ್ಸಿಗೆ ಮುದ ನೀಡುವಂತಹದು. ಈ ಸುಂದರವಾದ ಶಿಲ್ಪಗಳನ್ನು ಹೇಗೆ ಕೆತ್ತಿದರೂ ಏನೊ? ಎಂದು ಆಶ್ಚರ್ಯ ಪಡುತ್ತಾ ಇರುತ್ತೇವೆ.

ನಮ್ಮ ಭಾರತ ದೇಶದ ಶಿಲ್ಪಕಲಾ ಸೌಂದರ್ಯಕ್ಕೆ ಅತಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಈ ಶಿಲ್ಪಗಳು ಕೆಲವು ಬಾರಿ ನಿಗೂಢವಾಗಿ ಪರಿಣಮಿಸುತ್ತದೆ. ನಮ್ಮ ಕರ್ನಾಟಕದಲ್ಲಿ ಕೋಟಿ ಲಿಂಗಗಳು ಇದ್ದ ಹಾಗೆ ಕೋಟಿ ಶಿಲ್ಪ ಸಂಪತ್ತನ್ನು ಹೊಂದಿರುವ ದೇವಾಲಯವು ಇದೆ. ಆಶ್ಚರ್ಯ ಪಡಬೇಡಿ ಆ ದೇವಾಲಯವಿರುವುದು ನಮ್ಮ ಪುಣ್ಯ ಭೂಮಿ ಭಾರತ ದೇಶದ ತ್ರಿಪುರ ಜಿಲ್ಲೆಯಲ್ಲಿ.

ಪ್ರಸ್ತುತ ಲೇಖನದಲ್ಲಿ ಕೋಟಿಗೆ ಶಿಲ್ಪಗಳ ರಹಸ್ಯವನ್ನು ಹೊಂದಿರುವ ದೇವಾಲಯದ ಬಗ್ಗೆ ತಿಳಿಯೋಣ.

ಕೋಟಿ ಶಿಲ್ಪ

ಕೋಟಿ ಶಿಲ್ಪ

ಈ ಸುಂದರವಾದ ರಹಸ್ಯ ದೇವಾಲಯದಲ್ಲಿ ಕೋಟಿಗೆ (ಒಂದು ಕಡಿಮೆ ಇರುವ ಶಿಲ್ಪ) ಯಾರು ಕೆತ್ತಿದರು? ಯಾಕೆ ಕೆತ್ತಿದ್ದರು ಎಂಬ ಹಲವಾರು ಪ್ರಶ್ನೆಗೆ ಉತ್ತರ ರಹಸ್ಯವಾಗಿಯೇ ಉಳಿದಿದೆ.

PC:YOUTUBE

ಚಾರಿತ್ರಿಕ ಆಧಾರ

ಚಾರಿತ್ರಿಕ ಆಧಾರ

ಈ ದೇವಾಲಯದಲ್ಲಿನ ಶಿಲ್ಪದ ಬಗ್ಗೆ ಚಾರಿತ್ರಿಕ ಆಧಾರವೇ ಆಗಲಿ, ಶಾಸನಗಳೇ ಆಗಲೀ ದೊರೆತ್ತಿಲ್ಲ. ಆದರೆ ಅಲ್ಲಿನ ಸ್ಥಳೀಯರು ಮಾತ್ರ 2 ಸೊಗಸಾದ ಕಥೆಗಳನ್ನು ಈ ದೇವಾಲಯದ ಕೋಟಿ ಶಿಲ್ಪಗಳ ಬಗ್ಗೆ ತಿಳಿಸುತ್ತಾರೆ.

PC:YOUTUBE

ಪರಮಶಿವನು

ಪರಮಶಿವನು

ಪರಮಶಿವನು ದೇವಗಣಗಳ ಜೊತೆ ಸೇರಿ ಕಾಶಿಗೆ ಭೇಟಿ ನೀಡಬೇಕು ಎಂದು ನಿರ್ಧರಿಸುತ್ತಾನೆ. ದೇವಗಣಗಳ ಜೊತೆ ಕಾಶಿಗೆ ಹೋಗುವ ಸಮಯದಲ್ಲಿ ಮಾರ್ಗ ಮದ್ಯೆಯಲ್ಲಿ.....


PC:YOUTUBE

ಕೈಲಾಸ

ಕೈಲಾಸ

ಕೈಲಾಸ ಎಂಬ ಪ್ರದೇಶದಲ್ಲಿ ರಾತ್ರಿ ಇಲ್ಲಿಯೇ ಇದ್ದು ಮರುದಿನ ಮುಂಜಾನೆ ಕಾಶಿಗೆ ತೆರಳಬೇಕು ಎಂದು ನಿರ್ಧರಿಸುತ್ತಾನೆ.


PC:YOUTUBE

ದೇವಗಣ

ದೇವಗಣ

ಶಿವನು ನಿರ್ಧರಿಸಿದಂತೆ ಮರುದಿನ ಮುಂಜಾನೆ ಏಳುತ್ತಾನೆ. ಆದರೆ ಪರಮ ಶಿವನ ಜೊತೆಗೂಡಿ ಬಂದ ದೇವಗಣಗಳು ಯಾರು ಕೂಡ ಏಳುವುದಿಲ್ಲ ಇದರಿಂದ ಶಿವನಿಗೆ ಅತ್ಯಂತ ಕೋಪಗೊಳ್ಳುತ್ತಾನೆ.

PC:YOUTUBE

ಶಿಲ್ಪ

ಶಿಲ್ಪ

ದೇವಗಣ ಮಾಡಿದ ಈ ತಪ್ಪಿನಿಂದ ಮಹಾ ಶಿವನಿಗೆ ಕೋಪಾಗ್ನಿ ಹೆಚ್ಚಾಗಿ ಅವರನ್ನು ಶಿಲ್ಪಗಳಾಗಿ ಎಂದು ಶಾಪವನ್ನು ನೀಡಿದನಂತೆ ಹಾಗಾಗಿಯೇ ಇಲ್ಲಿ ಕೋಟಿ ಶಿಲ್ಪಗಳಿವೆ ಎಂದು ಅಲ್ಲಿನ ಸ್ಥಳೀಯರು ತಿಳಿಸುತ್ತಾರೆ.

PC:YOUTUBE

ಎಲ್ಲಿದೆ?

ಎಲ್ಲಿದೆ?

ಈ ರಹಸ್ಯಮಯವಾದ ದೇವಾಲಯವು ತ್ರಿಪುರ ರಾಜ್ಯದ ಅರ್ಗತದ ಸುಮಾರು 150 ಕಿ,ಮೀ ದೂರದಲ್ಲಿ ಊನಾಕೋಟಿ ಇದೆ. ಇಲ್ಲಿನ ಶಿಲ್ಪಗಳು ಆಶ್ಚರ್ಯವನ್ನು ಹಾಗೂ ಅದ್ಭುತವನ್ನು ಉಂಟು ಮಾಡುತ್ತದೆ.


PC:YOUTUBE

8 ನೇ ಶತಮಾನದಲ್ಲಿ

8 ನೇ ಶತಮಾನದಲ್ಲಿ

ಈ ಸುಂದರವಾದ ಶಿಲ್ಪಗಳ ದೇವಾಲಯವನ್ನು 8 ನೇ ಶತಮಾನದಲ್ಲಿ ನಿರ್ಮಿಸಿರಬಹುದೆಂದು ಊಹಿಸಲಾಗಿದೆ. ಇದಕ್ಕೂ ಕೂಡ ಒಂದು ಸ್ವಾರಸ್ಯಕರವಾದ ಕಥೆಯನ್ನು ಹೊಂದಿದೆ.


PC:YOUTUBE

ಕಲ್ಲುಕುಮಾರು

ಕಲ್ಲುಕುಮಾರು

ಪೂರ್ವದಲ್ಲಿ ಕಲ್ಲು ಕುಮಾರ ಎಂಬ ಶಿಲ್ಪಿ ಇದ್ದು, ಆತನಿಗೆ ಕೈಲಾಸಕ್ಕೆ ತೆರಳಿ ಆ ಪರಮಶಿವನನ್ನು ದರ್ಶನ ಮಾಡಿ ಸ್ವಾಮಿಯ ಸನ್ನಿಧಾನದಲ್ಲಿ ಇರಬೇಕು ಎಂಬುದು ಅವನ ಅಭಿಲಾಷೆಯಾಗಿರುತ್ತದೆ. ಹಾಗಾಗಿ ಹಲವಾರು ದೀಕ್ಷೆಗಳನ್ನು ಮಾಡಿ ಪರಮಶಿವನ್ನು ಆರಾಧಿಸುತ್ತಿದ್ದನು.

PC:YOUTUBE

ಕೈಲಾಸ ಪ್ರವೇಶ

ಕೈಲಾಸ ಪ್ರವೇಶ

ಕೈಲಾಸ ಪ್ರವೇಶ ಅದು ಸಾಧಾರಣಾ ಮಾನವನಿಗೆ ಸಾಧ್ಯವಾಗುವಂತಹುದಲ್ಲ. ಒಮ್ಮೆ ಪಾರ್ವತಿ ದೇವಿ ಕಲ್ಲು ಕುಮಾರನ ದೀಕ್ಷೆಯನ್ನು ಮೆಚ್ಚಿದಳು.


PC:YOUTUBE

ಕನಸು

ಕನಸು

ಆತನ ಕನಸಿನಲ್ಲಿ ಪಾರ್ವತಿ ದೇವಿಯು ಆತನ ಭ್ರಮೆಯನ್ನು ತೊಲಗಿಸಲು ಒಂದು ದಿನದ ರಾತ್ರಿಯಲ್ಲಿ ಕೋಟಿ ಶಿಲ್ಪಗಳನ್ನು ಕೆತ್ತಬೇಕು ಎಂದು ಆಜ್ಞೆ ನೀಡಿದಳು.

PC:YOUTUBE

ನಿಬಂಧನೆ

ನಿಬಂಧನೆ

ಕೋಟಿ ಶಿಲ್ಪಗಳನ್ನು ಕೆತ್ತಿದ್ದರೆ ಕಲ್ಲು ಕುಮಾರನಿಗೆ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತವೆ ಇಲ್ಲವಾದರೆ ಕೈಲಾಸಕ್ಕೆ ಪ್ರವೇಶ ಅಸಾಧ್ಯವೆಂದು ನಿಬಂಧನೆಯನ್ನು ಪಾರ್ವತಿ ದೇವಿಯು ವಿಧಿಸುತ್ತಾಳೆ.


PC:YOUTUBE

ಕೆತ್ತನೆ

ಕೆತ್ತನೆ

ಪಾರ್ವತಿ ದೇವಿಯ ಆಜ್ಞೆಯ ಮೇರೆಗೆ ತನ್ನ ಕೈಲಾಸದಲ್ಲಿನ ಪರಮಶಿವನ ಸಾನಿಧ್ಯದಲ್ಲಿ ಸೇವೆಯನ್ನು ಮಾಡಬಹುದು ಎಂದು ಒಂದು ದಿನ ರಾತ್ರಿ ಕೋಟಿ ಶಿಲ್ಪಗಳನ್ನು ಕೆತ್ತಲು ಪ್ರಾರಂಭಿಸುತ್ತಾನೆ.

PC:YOUTUBE

ಕೋಟಿ ಶಿಲ್ಪ

ಕೋಟಿ ಶಿಲ್ಪ

ಮುಂಜಾನೆಯಾಗುವುದರೊಳಗೆ ತನ್ನ ಕೋಟಿ ಶಿಲ್ಪಗಳ ಗುರಿಯನ್ನು ಸಾಧಿಸಿದನು. ಆತನು ಕೋಟಿ ಶಿಲ್ಪಗಳನ್ನು ನಿರ್ಮಿಸಿದ ನಂತರ ಗರ್ವ ಅವನಲ್ಲಿ ಪ್ರಾರಂಭವಾಗುತ್ತದೆ.


PC:YOUTUBE

ದೇವತಾ ಮೂರ್ತಿ

ದೇವತಾ ಮೂರ್ತಿ

ದೇವತಾ ಮೂರ್ತಿಯ ಬದಲಿಗೆ ತನ್ನ (ಕಲ್ಲು ಕುಮಾರ) ಪ್ರತಿಮೆಯನ್ನು ಕೆತ್ತಲು ಪ್ರಾರಂಭಿಸಿದನು. ಈ ವಿಧವಾಗಿ ದೇವತಾ ಮೂರ್ತಿಗಳ ಬದಲಾಗಿ ತನ್ನದೇ ಚಿತ್ರವನ್ನು ಹೋಲುವ ಶಿಲ್ಪಗಳನ್ನು ಕೆತ್ತಿದನು.

PC:YOUTUBE

ಭಗ್ನವಾದ ಗುರಿ

ಭಗ್ನವಾದ ಗುರಿ

ದೇವತಾ ಮೂರ್ತಿಗಳ ಶಿಲ್ಪಗಳನ್ನು ಕೆತ್ತುವುದನ್ನು ಬಿಟ್ಟು ಯಾವಾಗಾ ತನ್ನ ಮೂರ್ತಿಗಳನ್ನು ಕೆತ್ತನೆ ಮಾಡಲು ಪ್ರಾರಂಭಿಸಿದನೂ ಆಗಲೇ ಆತನ ಗುರಿ ಭಗ್ನವಾಯಿತು.


PC:YOUTUBE

ಆನರ್ಹ

ಆನರ್ಹ

ಕೋಟಿ ಶಿಲ್ಪಗಳಲ್ಲಿ ಒಂದು ಶಿಲ್ಪ ಮಾತ್ರ ಕಲ್ಲು ಕುಮಾರನ ಶಿಲ್ಪವಾದ್ದರಿಂದ ಆತನು ಕೈಲಾಸದ ಪ್ರವೇಶಕ್ಕೆ ಅನರ್ಹನೆಂದು ಸಾಭಿತಾಗುತ್ತದೆ.


PC:YOUTUBE

ಪ್ರವಾಸಿ

ಪ್ರವಾಸಿ

ಅದೇನೇ ಇರಲಿ ಇಲ್ಲಿನ ಕೋಟಿ ಶಿಲ್ಪಗಳ ಸೌಂದರ್ಯ ಅತ್ಯಂತ ಅದ್ಭುತವಾಗಿದ್ದು, ಹಲವಾರು ದೇಶ, ವಿದೇಶಗಳಿಂದ ಪ್ರವಾಸಿಗಳು ಭೇಟಿ ನೀಡುತ್ತಾರೆ. ಕೋಟಿ ಶಿಲ್ಪ ದೇವಾಲಯವು ತ್ರಿಪುರಾದ ಅತ್ಯಂತ ಸುಂದರವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.


PC:YOUTUBE

ತಲುಪುವ ಬಗೆ?

ತಲುಪುವ ಬಗೆ?

ಈ ಸುಂದರ ಶಿಲ್ಪಗಳು ತ್ರೀಪುರದ ಅರ್ಗತಾಲದಲ್ಲಿರುವದರಿಂದ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಅರ್ಗತಾಲ ವಿಮಾನ ನಿಲ್ದಾಣ. ಇಲ್ಲಿಂದ ಕೋಟಿ ಶಿಲ್ಪಗಳ ದೇವಾಲಯಕ್ಕೆ ಸುಮಾರು 150 ಕಿ,ಮೀ ದೂರದಲ್ಲಿದೆ.

PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X