Search
  • Follow NativePlanet
Share
» »ದೆಹಲಿಯಿಂದ ಪ್ರಶಾಂತ ಪಟ್ಟಣ ಗುಪ್ತಕಾಶಿಗೆ

ದೆಹಲಿಯಿಂದ ಪ್ರಶಾಂತ ಪಟ್ಟಣ ಗುಪ್ತಕಾಶಿಗೆ

By Manjula Balaraj Tantry

ಸುಂದರವಾದ ಗುಪ್ತಕಾಶಿ ಪಟ್ಟಣವು ಪ್ರಸಿದ್ಧ ಯಾತ್ರಾ ಸ್ಥಳವಾದ ಕೇದಾರನಾಥದ ದಾರಿಯಲ್ಲಿ ನೆಲೆಸಿದೆ ಮತ್ತುಇದು ಸಮುದ್ರ ಮಟ್ಟದಿಂದ 1319 ಮೀಟರ್ ಎತ್ತರದಲ್ಲಿದೆ. ಗುಪ್ತಕಾಶಿಯು ಗೌರಿಕುಂಡ್ ಮತ್ತು ರುದ್ರಪ್ರಯಾಗದ ಮಧ್ಯಮಾರ್ಗದಲ್ಲಿ ಇದೆ ಮತ್ತು ಇದು ಹಲವಾರು ದೇವಾಲಯಗಳಿಗೆ ನೆಲೆಯಾಗಿದೆ.ಈ ಪ್ರದೇಶದ ದೇವಾಲಯಗಳ ಮಧ್ಯದಲ್ಲಿ ಎತ್ತರದ ಚೌಕಂಬ ಶಿಖರದ ಸುಂದರವಾದ ದೃಶ್ಯವನ್ನು ಕಾಣಬಹುದು.

ಈ ಪ್ರದೇಶದಲ್ಲಿ ಪ್ರಾಚೀನ ಕಾಲದ ವೈವಿಧ್ಯತೆಗಳಿದ್ದು, ಇಲ್ಲಿ ದೇಶದ ಅತ್ಯಂತ ಪೂಜಾ ಯಾತ್ರಸ್ಥಳಗಳ ತವರೂರಾಗಿದೆ. ಇದಲ್ಲದೆ, ಈ ಸ್ಥಳವು ಹಿಮಕಾಲದ ಅದ್ಭುತಗಳಿಗೆ ನೆಲೆಯಾಗಿದೆ, ವಿಚಿತ್ರವಾದ ಒಣ ಪರ್ವತಗಳ ಉದ್ದಕ್ಕೂ ಅಂಕು ಡೊಂಕಾದ ಭೂಪ್ರದೇಶವು ನಿಮಗೆ ಹೆಚ್ಚು ಸಾಹಸಕ್ಕೆ ನಿಮ್ಮನ್ನು ಪ್ರೇರೇಪಿಸುವಂತೆ ಮಾಡುತ್ತದೆ.

ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ

ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ

PC: Vvnataraj

ಗುಪ್ತಕಾಶಿಯು ವರ್ಷದ ಯಾವುದೇ ಸಮಯದಲ್ಲಿ ಭೇಟಿ ಮಾಡಬಹುದಾದ ಸ್ಥಳವಾಗಿದೆ. ಮಾರ್ಚ್ ನಿಂದ ಜೂನ್ ಮತ್ತು ಸೆಪ್ಟಂಬರ್ ನಿಂದ ನವೆಂಬರೆಗೂ ಈ ಪ್ರದೇಶವನ್ನು ಭೇಟಿ ಮಾಡಲು ಅತ್ಯುತ್ತಮವಾದ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಹವಾಮಾನ ಪರಿಸ್ಥಿತಿಗಳು ಈ ಸಮಯದಲ್ಲಿ ಆಹ್ಲಾದಕರವಾಗಿದೆ.

ತಲುಪುವುದು ಹೇಗೆ

ತಲುಪುವುದು ಹೇಗೆ

PC: Gaurav Agrawal

ವಿಮಾನದಿಂದ: ಇಲ್ಲಿಂದ 198 ಕಿ.ಮೀ ದೂರದಲ್ಲಿರುವ ಡೆಹ್ರಾಡೂನ್ ನಲ್ಲಿರುವ ಜಾಲಿ ಗ್ರ್ಯಾಂಟ್ ವಿಮಾನ ನಿಲ್ದಾಣವು ಹತ್ತಿರದ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣ ದೆಹಲಿ, ಕೊಲ್ಕತಾ ಇತ್ಯಾದಿಗಳಿಂದ ನಿಯಮಿತವಾಗಿ ದೇಶಾದ್ಯಂತ ಪ್ರಮುಖ ವಿಮಾನ ನಿಲ್ದಾಣಗಳಿಂದ ವಿಮಾನಗಳ ಸಂಪರ್ಕ ಹೊಂದಿದೆ.

ರೈಲು ಮೂಲಕ: ಪಟ್ಟಣದಿಂದ 186 ಕಿ.ಮೀ ದೂರದಲ್ಲಿರುವ ರಿಷಿಕೇಶ ನಿಲ್ದಾಣವು ಹತ್ತಿರದ ಪ್ರಮುಖ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣವು ದೇಶದಾದ್ಯಂತ ಮತ್ತು ಉತ್ತರಾಖಂಡ ರಾಜ್ಯದಾದ್ಯಂತ ಹೆಚ್ಚಿನ ಪ್ರಮುಖ ರೈಲ್ವೆ ನಿಲ್ದಾಣಗಳಿಗೆ ಸಂಪರ್ಕ ಹೊಂದಿದೆ.

ರಸ್ತೆಯ ಮೂಲಕ: ಈ ಸ್ಥಳವನ್ನು ತಲುಪಲು ಉತ್ತಮ ಮಾರ್ಗವೆಂದರೆ ರಸ್ತೆಯ ಮೂಲಕ ಗುಪ್ತಕಾಶಿ ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ. ಉತ್ತರಾಖಂಡ್ ರಾಜ್ಯದ ಪ್ರಮುಖ ಪಟ್ಟಣಗಳು ​​ಮತ್ತು ನಗರಗಳಿಂದ ಕಾರ್ಯನಿರ್ವಹಿಸುವ ಸಾಕಷ್ಟು ಬಸ್ಸುಗಳು ಇವೆ ಮತ್ತು ದೆಹಲಿಯಿಂದ ಕೂಡಾ ಬಸ್ಸಿನ ವ್ಯವಸ್ಥೆ ಇವೆ.

ಚಾಲನೆ ಮಾಡಲು ಇರುವ ದೂರ

ಚಾಲನೆ ಮಾಡಲು ಇರುವ ದೂರ

ದೆಹಲಿಯಿಂದ ಗುಪ್ತಕಾಶಿ ಒಟ್ಟು 434 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ತಲುಪಲು ಸುಮಾರು 11 ರಿಂದ 12 ಗಂಟೆಗಳ ಕಾಲ ಬೇಕಾಗುತ್ತದೆ. ದೆಹಲಿಯಿಂದ ಪ್ರಾರಂಭವಾಗುವ ಮೂರು ಮಾರ್ಗಗಳಿವೆ. ಇವುಗಳು ಕೆಳಕಂಡಂತಿವೆ

ಮಾರ್ಗ 1: ದೆಹಲಿ - ಮೀರತ್ - ರೂರ್ಕಿ - ರಿಷಿಕೇಶ - ಶ್ರೀನಗರ - ಗುಪ್ತಕಾಶಿ ರಾ.ಹೆ 334 ಮತ್ತು ರಾ.ಹೆ 7

ಮಾರ್ಗ 2: ದೆಹಲಿ - ಸೋನಿಪತ್ - ರೂರ್ಕಿ - ರಿಷಿಕೇಶ - ಶ್ರೀನಗರ - ಗುಪ್ತಕಾಶಿ ರಾ. ಹೆ 7ರ ಮೂಲಕ

ಮಾರ್ಗ 3: ದೆಹಲಿ - ಸೋನಿಪತ್ - ಪಾಣಿಪತ್ - ಹರಿದ್ವಾರ - ರಿಷಿಕೇಶ - ಶ್ರೀನಗರ - ಗುಪ್ತಕಾಶಿ ರಾ.ಹೆ 44 ಮತ್ತು ರಾ.ಹೆ 7ರ ಮೂಲಕ

ನೀವು ಮಾರ್ಗ 1 ನ್ನು ಆಯ್ಕೆ ಮಾಡಿಕೊಂಡಲ್ಲಿ 434 ಕಿ.ಮೀ ದೂರವನ್ನು ಕ್ರಮಿಸಲು ಸುಮಾರು 11 ತಾಸು ಬೇಕಾಗುವುದು. ಇದು ದೆಹಲಿಯಿಂದ ಗುಪ್ತಕಾಶಿಗೆ ರಾ. ಹೆ334 ಮತ್ತು ರಾ.ಹೆ 7 ಈ ದಾರಿಯು ಮೀರತ್, ರಿಷಿಕೇಶ, ಹರಿದ್ವಾರ ಮುಂತಾದ ಪ್ರಸಿದ್ಧ ನಗರಗಳ ಮೂಲಕ ನಿಮ್ಮನ್ನು ಕರೆದೊಯ್ಯುತ್ತದೆ

ನೀವು ಮಾರ್ಗ 2 ನ್ನು ಆಯ್ಕೆ ಮಾಡಿಕೊಂಡಲ್ಲಿ ದೆಹಲಿಯಿಂದ ಗುಪ್ತಕಾಶಿಯ 425ಕಿ.ಮೀ ದೂರವನ್ನು ತಲುಪಲು ಸುಮಾರು 12.5 ತಾಸು ಬೇಕಾಗುವುದು. ರಾ.ಹೆ 7ರ ಮೂಲಕ ನಿಮ್ಮ ಮಾರ್ಗವನ್ನು ಮೂರನೇ ಮಾರ್ಗವಾಗಿ ಆರಿಸಿದರೆ, ಅದು ರಾ.ಹೆ 44 ಮತ್ತು ರಾ.ಹೆ ಮೂಲಕ 471 ಕಿ.ಮೀ ದೂರವನ್ನು ಕ್ರಮಿಸಲು 12.5 ಗಂಟೆ ತೆಗೆದುಕೊಳ್ಳುತ್ತದೆ.

ಮೀರತ್ ನಲ್ಲಿ ಸಣ್ಣ ನಿಲುಗಡೆ್

ಮೀರತ್ ನಲ್ಲಿ ಸಣ್ಣ ನಿಲುಗಡೆ್

PC: Major Robert Christopher Tytler

ಮೀರತ್ ಒಂದು ಪ್ರಾಚೀನ ನಗರವಾಗಿದ್ದು ಇದು ಸಿಂಧೂ ಕಣಿವೆ ನಾಗರೀಕತೆಗಿಂತ ಪುರಾತನದ್ದು ಮತ್ತು ಎನ್ ಸಿ ಆರ್ ನ ಎರಡನೇ ಅತಿದೊಡ್ಡ ನಗರವಾಗಿದೆ. ಈ ನಗರವನ್ನು "ಭಾರತದ ಕ್ರೀಡಾ ನಗರ" ವೆಂದು ಕೂಡಾ ಕರೆಯುತ್ತಾರೆ. ಇಲ್ಲಿ ಕ್ರೀಡೆಗೆ ಸಂಭಂದಿಸಿದ ಕ್ರೀಡಾ ಸಲಕರಣೆಗಳನ್ನು ಉತ್ಪಾದಿಸುವ ನಗರವೆಂದು ಪ್ರಸಿದ್ದಿ ಪಡೆದಿದೆ.

ಈ ನಗರದಲ್ಲಿ ಬ್ರಿಟಿಷರ ವಿರುದ್ಧ 1857ರಲ್ಲಿ ದಂಗೆಯು ಪ್ರಾರಂಭವಾಯಿತು, ನಂತರ ಇದರ ಪರಿಣಾಮವಾಗಿ ದೇಶದ ವಿವಿಧ ಭಾಗಗಳಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅನೇಕ ಇತರ ಚಳುವಳಿಗಳು ಪ್ರಾರಂಭವಾದವು.

ರಿಷಿಕೇಶ

ರಿಷಿಕೇಶ

PC: Vishal chand rajwar

ರಿಷಿಕೇಶವು ಪವಿತ್ರ ಗಂಗಾನದಿ ಮತ್ತು ಚಂದ್ರಭಾಗದ ಸಂಗಮದಲ್ಲಿದೆ. ರಿಷಿಕೇಶವು ಭವ್ಯವಾದ ಹಿಮಾಲಯ ಪರ್ವತದ ತಪ್ಪಲಿನಲ್ಲಿದೆ ಅಲ್ಲದೆ ಇದು ಅನೇಕ ಪ್ರಾಚೀನ ದೇವಾಲಯಗಳಿಗೆ,ಆಶ್ರಮಗಳಿಗೆ ಮತ್ತು ಸಾಹಸಮಯ ತಾಣಗಳಿಗೆ ನೆಲೆಯಾಗಿದೆ.

ಹಲವಾರು ವರ್ಷಗಳಿಂದ, ಈ ಸ್ಥಳವು ಅದರ ಆಧ್ಯಾತ್ಮಿಕತೆ ಮತ್ತು ಸಾಹಸ ಕ್ರೀಡೆಗಳಿಗೆ ಮಾತ್ರವಲ್ಲದೆ ಪ್ರಸಿದ್ಧ ಸಂಗೀತ ವಾದ್ಯ ಬ್ಯಾಂಡ್ ಬೀಟಲ್ಸ್ ಗಳ ಸಹಯೋಗದೊಂದಿಗೆ ಬಹಳ ಜನಪ್ರಿಯವಾಗಿದೆ.

ರಿಷಿಕೇಶವನ್ನು ಭಾರತದ ಸಾಹಸಿ ಕ್ರೀಡೆಗಳ ಪ್ರಮುಖ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇಲ್ಲಿ ವೈಟ್ ವಾಟರ್ ರಾಫ್ಟಿಂಗ್, ಬಂಗೀ ಜಂಪಿಂಗ್, ಮೌಂಟೇನ್ ಬೈಕಿಂಗ್ ಮುಂತಾದವುವುಗಳು ಸಾಹಸಿಗಳ ಸಾಹಸದ ಬಾಯಾರಿಕೆಯನ್ನು ತಗ್ಗಿಸಲು ಕೆಲವು ಅತ್ಯುತ್ತಮ ಆಯ್ಕೆಗಳನ್ನು ನೀಡುತ್ತದೆ.

ಲಕ್ಷ್ಮಣ ಝುಲಾ, ನೀಲಕಂಠ ಮಹಾದೇವ್ ದೇವಾಲಯ, ಗೀತಾ ಭವನ, ತ್ರಿವೇಣಿ ಘಾಟ್, ಶಿವಾನಂದ ಆಶ್ರಮ ಇಲ್ಲಿಗೆ ಭೇಟಿ ನೀಡುವ ಪ್ರಮುಖ ಸ್ಥಳಗಳಾಗಿವೆ.

ಶ್ರೀನಗರ

ಶ್ರೀನಗರ

PC: SimonaRi

ಅಲಕಾನಂದ ದಡದಲ್ಲಿರುವ ಶ್ರೀನಗರ ಸುಂದರವಾದ ನಗರವಾಗಿದ್ದು, ಇಲ್ಲಿ ನೈಸರ್ಗಿಕ ಸೌಂದರ್ಯ ಮತ್ತು ಹಲವಾರು ದೇವಾಲಯಗಳಿಗೆ ಪ್ರಸಿದ್ದವಾಗಿದೆ. ಇಲ್ಲಿ ಮುಖ್ಯವಾಗಿ, ಕಮಲೇಶ್ವರ ಮಹಾದೇವ್ ದೇವಾಲಯವು ಅತ್ಯಂತ ಪ್ರಮುಖವಾದದ್ದು. ಇದು ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟಿದೆ ಎಂದು ನಂಬಲಾಗಿದೆ.

ಗಮ್ಯಸ್ಥಾನ: ಗುಪ್ತಕಾಶಿ

ಗಮ್ಯಸ್ಥಾನ: ಗುಪ್ತಕಾಶಿ

PC: Alok Prasad

ಗುಪ್ತಕಾಶಿ ಯೆಂದರೆ ಗೌಪ್ಯವಾದ ಕಾಶಿ ಯೆಂದು ಅರ್ಥೈಸುತ್ತದೆ. ಈ ಜಾಗಕ್ಕೆ ಸಂಬಂಧಿಸಿದಂತೆ ಅನೇಕ ಪುರಾಣಕಥೆಗಳಿವೆ. ಅದರಲ್ಲಿ ಮುಖ್ಯವಾದುದೆಂದರೆ ಮಹಾಭಾರತದ ಕಥೆಯಲ್ಲೂ ಈ ಜಾಗದ ಉಲ್ಲೇಖವಿದೆ. ಮಹಾಭಾರತದ ಪ್ರಕಾರ ಪಾಂಡವರು ಶಿವನನ್ನು ಹುಡುಕುತ್ತಿದ್ದ ಸಮಯದಲ್ಲಿ ಶಿವನು ತನ್ನನ್ನು ಗುಪ್ತಕಾಶಿಯಲ್ಲಿ ತನ್ನನ್ನು ಅಡಗಿಸಿಕೊಂಡಿದ್ದನು ನಂತರ ಇಲ್ಲಿಂದ ಕೇದಾರನಾಥಕ್ಕೆ ಸ್ಥಳಾಂತರಿಸಿಕೊಂಡನು ಎಂದು ಹೇಳಲಾಗುತ್ತದೆ.

ಈ ಪ್ರದೇಶವನ್ನು ಪವಿತ್ರವೆಂದು ಪರಿಗಣಿಸಲಾಗಿದ್ದು 6 ಕಾಶಿಗಳಲ್ಲಿ ಒಂದಾಗಿದೆ. ಉತ್ತರಾಖಂಡದಲ್ಲಿ ಉತ್ತರಕಾಶಿ ನೆಲೆಗೊಂಡಿದೆ, ಇನ್ನಿತರ ಕಾಶಿ ದೇಶದ ವಿವಿಧ ಭಾಗದಲ್ಲಿ ನೆಲೆಗೊಂಡಿದೆ .

ಈ ದೇವಾಲಯಗಳಲ್ಲಿ ಯಾವುದಾದರೊಂದಕ್ಕೆ ಭೇಟಿ ಕೊಡುವುದರಿಂದ ಸಂತೋಷ ಮತ್ತು ಸಮೃದ್ದಿ ಪಡೆಯುತ್ತಾರೆ ಎಂದು ಎಲ್ಲರ ಸಾಮಾನ್ಯ ನಂಬಿಕೆಯಾಗಿದೆ. ಈ ಜಾಗವು ಗಂಗಾ ಮತ್ತು ಯಮುನಾ ನದಿಗಳ ಸಂಗಮದಲ್ಲಿರುವುದರಿಂದ ಇದನ್ನು ಪವಿತ್ರ ಜಾಗವೆಂದು ಪರಿಗಣಿಸಲಾಗುತ್ತದೆ.

ವಿಶ್ವನಾಥ ದೇವಾಲಯ

ವಿಶ್ವನಾಥ ದೇವಾಲಯ

ಈ ನಗರದಲ್ಲಿ ಮುಖ್ಯವಾದ ದೇವಾಲಯವೆಂದರೆ ಅದು ವಿಶ್ವನಾಥ ದೇವಾಲಯ. ಈ ದೇವಾಲಯವು ಶಿವ ದೇವರಿಗೆ ಅರ್ಪಿತವಾಗಿದೆ.ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯವನ್ನು ಪವಿತ್ರವಾದ ದೇವಾಲಯವೆಂದು ಪರಿಗಣಿಸಲಾಗುತ್ತದೆ. ಇದು ಹೆಚ್ಚಿನ ಪ್ರಮಾಣದ ಭಕ್ತಾದಿಗಳನ್ನು ಆಕರ್ಷಿಸುತ್ತದೆ.

ಇಲ್ಲಿ ಶಿವ ದೇವರು ಪಾರ್ವತಿ ದೇವಿಯನ್ನು ವರಿಸಲು ತನ್ನ ಇಚ್ಚೆಯನ್ನು ಪ್ರಕಟ ಪಡಿಸಿದ್ದರು ಎಂದು ಹೇಳಲಾಗುತ್ತದೆ. ನಂತರ ಅವರು ತ್ರಿಜುಗಿನಾಥದಲ್ಲಿ ಒಬ್ಬರನ್ನೊಬ್ಬರು ಮದುವೆಯಾದರು ಎಂದು ಹೇಳಲಾಗುತ್ತದೆ.

ರುದ್ರ ಪ್ರಯಾಗದ ದೇವಾಲಯ

ರುದ್ರ ಪ್ರಯಾಗದ ದೇವಾಲಯ

ಮುಖ್ಯ ದೇವಾಲಯದ ಎಡ ಭಾಗದಲ್ಲಿ ಒಂದು ದೇವಾಲಯವಿದೆ ಈ ದೇವಾಲಯದಲ್ಲಿ ಅರ್ಧನಾರೇಶ್ವರನನ್ನು ಪೂಜಿಸಲಾಗುತ್ತದೆ. ಇದು ಶಿವನನ್ನು ಅರ್ಧ ಮನುಷ್ಯ, ಅರ್ಧ ಮಹಿಳೆ ರೂಪದಲ್ಲಿ ಚಿತ್ರಿಸುತ್ತದೆ.

ವಿಶ್ವನಾಥ ದೇವಸ್ಥಾನದ ಹತ್ತಿರದಲ್ಲಿರುವುದೇ ಮಣಿಕಾರ್ಣಿಕ್ ಕುಂಡ. ಇದು ಗಂಗಾ ಮತ್ತು ಯಮುನಾ ನದಿಗಳು ಸಂಗಮವಾಗುವ ಸ್ಥಳವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X