Search
  • Follow NativePlanet
Share
» »ಮರಳಿನಿಂದಲೇ ಮರುಳುಮಾಡುವ ರಾಜಸ್ಥಾನದ ಖಿಮ್ಸರ್ ತಾಣ!

ಮರಳಿನಿಂದಲೇ ಮರುಳುಮಾಡುವ ರಾಜಸ್ಥಾನದ ಖಿಮ್ಸರ್ ತಾಣ!

ಥಾರ್ ಮರಭೂಮಿಯ ತುತ್ತ ತುದಿಯಲ್ಲಿರುವ ಒಂದು ಪುಟ್ಟ ಹಳ್ಳಿ ಖಿಮ್ಸರ್. ಇದು ಪ್ರಸಿದ್ಧ ನಗರಗಳಾದ ಬಿಕನೇರ್ ಮತ್ತು ಜೋದಪುರದ ಮಧ್ಯಭಾಗದಲ್ಲಿದೆ.

By Divya

ಥಾರ್ ಮರಭೂಮಿಯ ತುತ್ತ ತುದಿಯಲ್ಲಿರುವ ಒಂದು ಪುಟ್ಟ ಹಳ್ಳಿ ಖಿಮ್ಸರ್. ಇದು ಪ್ರಸಿದ್ಧ ನಗರಗಳಾದ ಬಿಕನೇರ್ ಮತ್ತು ಜೋದಪುರದ ಮಧ್ಯಭಾಗದಲ್ಲಿದೆ. ಈ ತಾಣದ ಒಂದು ಪ್ರಮುಖ ಆಕರ್ಷಣೆಯೆಂದರೆ 16ನೇ ಶತಮಾನಕ್ಕೆ ಸಂಬಂಧಿಸಿದ ನಗೌರ್ ಕೋಟೆ. ಪುರಾತನ ಇತಿಹಾಸ ಹೊಂದಿರುವ ಈ ಕೋಟೆ ಪ್ರವಾಸಿಗರಿಗೆ ಹೊಸತನದ ಅನುಭವ ನೀಡುತ್ತದೆ.

ಬರೀ ಮರಳು ರಾಶಿಯಿಂದಲೇ ಆವೃತ್ತವಾಗಿರುವ ಈ ಥಾರ್ ಮರಭೂಮಿ ಸುಮಾರು 20,8110 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಮರಳಿನಿಂದಲೇ ಆಕರ್ಷಿಸುವ ಈ ತಾಣಕ್ಕೆ ಪ್ರವಾಸಿಗರ ಹರಿವು ಹೆಚ್ಚು. ವರ್ಷ ಪೂರ್ತಿ ಯಾತ್ರಿಕರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇಲ್ಲಿರುವ ವಿಶೇಷ ಸಾಹಸ ಕ್ರೀಡೆಗಳು ಹಾಗೂ ವನ್ಯ ಜೀವಿಗಳ ಸಫಾರಿಯೇ ಈ ತಾಣದ ವಿಶೇಷ ಆಕರ್ಷಣೆ.

ಹಳ್ಳಿಯಲ್ಲಿ ಇರುವ ವಿಭಿನ್ನ ವಾತಾವರಣ ಹಾಗೂ ಮಣ್ಣಿನಲ್ಲೇ ನಿರ್ಮಿಸಲಾದ ಅದ್ಭುತ ಗುಡಿಸಲುಗಳು ಹೊಸ ವಿಚಾರಗಳನ್ನು ಪ್ರವಾಸಿಗರಿಗೆ ಬೋಧಿಸುತ್ತವೆ. ಪ್ರಶಾಂತವಾದ ಪರಿಸರ ಮನಸ್ಸಿಗೆ ಉಲ್ಲಾಸಕರ ಅನುಭವ ನೀಡುತ್ತದೆ. ಈ ಅಪರೂಪದ ತಾಣ ಸದಾ ಕಾಲ ಅತಿಯಾದ ಬಿಸಿಲು, ಒಣಹವೆ ಹಾಗೂ ಉರಿಯ ವಾತಾವರಣದಿಂದ ಕೂಡಿರುತ್ತದೆ. ಯಾತ್ರಿಕರಿಗೆ ಈ ಬಿಸಿಯು ವಿಶೇಷ ಅನುಭವ ನೀಡಬಲ್ಲದು. ಇಲ್ಲಿಗೆ ಬರಲು ಸೂಕ್ತ ಸಮಯವೆಂದರೆ ಅಕ್ಟೋಬರ್‍ನಿಂದ ಏಪ್ರಿಲ್.

ನಗೌರ್ ಕೋಟೆ

ನಗೌರ್ ಕೋಟೆ

ಇಲ್ಲಿಯ ಪ್ರಮುಖ ಆಕರ್ಷಣೆಯಾದ ನಗೌರ್ ಕೋಟೆ 10ನೇ ಶತಮಾನದಲ್ಲಿ ನಿರ್ಮಿಸಲಾಯಿತು ಎನ್ನಲಾಗುತ್ತದೆ. ನಾಗವಂಶಿಗಳಿಂದ ನಿರ್ಮಿಸಲಾದ ಈ ಕೋಟೆಯಲ್ಲಿ ಸುಂದರವಾದ ಉದ್ಯಾನವನ, ಅರಮನೆ ಹಾಗೂ ದೇವಸ್ಥಾನ ಇರುವುದನ್ನು ನೋಡಬಹುದು.

PC : Rituraj.bharti

ನಗೌರ್ ಕೋಟೆ

ನಗೌರ್ ಕೋಟೆ

ಇದರ ಅಪರೂಪದ ವಾಸ್ತುಶಿಲ್ಪ ಹಾಗೂ ಕೆತ್ತನೆಯು ಹೆಚ್ಚು ಆಕರ್ಷಕವಾಗಿವೆ. ಈ ಕೋಟೆ ಯುನೆಸ್ಕೂ ಮೆಚ್ಚುಗೆಯನ್ನು ಪಡೆದುಕೊಂಡಿರುವುದು ವಿಶೇಷ.

PC: G41rn8

ಖಿಮ್ಸರ್ ಕೋಟೆ

ಖಿಮ್ಸರ್ ಕೋಟೆ

ಈ ತಾಣದ ಇನ್ನೊಂದು ಪ್ರಮುಖ ಆಕರ್ಷಣೆ ಖಿಮ್ಸರ್ ಕೋಟೆ. ಶತ್ರುಗಳಿಂದ ರಕ್ಷಣೆ ಪಡೆಯುವ ಉದ್ದೇಶಕ್ಕೆ ಈ ಕೋಟೆಯನ್ನು ನಿರ್ಮಿಸಲಾಯಿತು. 16ನೇ ಶತಮಾನದ ಇತಿಹಾಸವನ್ನು ಹೊಂದಿದ್ದು, ಗತಕಾಲದಲ್ಲಿ ಅನೇಕ ಯುದ್ಧಗಳು ಇಲ್ಲಿ ನಡೆದಿತ್ತು ಎನ್ನುವ ವಿಚಾರವನ್ನು ತೆರೆದಿಡುತ್ತದೆ.

PC : Khimsarfort

ಖಿಮ್ಸರ್ ಕೋಟೆ

ಖಿಮ್ಸರ್ ಕೋಟೆ

ಕೋಟೆಯ ಗೋಡೆಯ ಮೇಲೆ ಯುದ್ಧದ ಕುರುಹುಗಳಿರುವುದನ್ನು ಕಾಣಬಹುದು. ಇದರ ಆಕರ್ಷಕ ಕೆತ್ತನೆ ಹಾಗೂ ವಾಸ್ತುಶಿಲ್ಪವು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತವೆ.

PC : Ankur 2436

ಖಿಮ್ಸರ್ ಕೋಟೆ

ಖಿಮ್ಸರ್ ಕೋಟೆ

1940ರಲ್ಲಿ ಮಹಿಳೆಯರಿಗೆಂದು ಜನಾನಾ ಎಂಬ ಭಾಗವನ್ನು ಕೋಟೆಗೆ ಸೇರಿಸಿದ್ದರಿಂದ ಇದೊಂದು ನಿವಾಸಯೋಗ್ಯ ಅರಮನೆಯಾಗಿ ಬದಲಾಯಿತು. ಈಗ ಕೋಟೆಯ ಒಂದು ಭಾಗ ಪಾರಂಪರಿಕ ಹೋಟೆಲ್ ಆಗಿ ಪರಿವರ್ತನೆಗೊಂಡಿದೆ. ಉಳಿದ ಭಾಗದಲ್ಲಿ ಖಿಮ್ಸರ್ ರಾಜವಂಶದ ಕುಟುಂಬದವರು ವಾಸಿಸುತ್ತಿದ್ದಾರೆ. ಇವರು ಈ ವಂಶದ 20ನೇ ಪೀಳಿಗೆಯವರು ಎನ್ನಲಾಗುತ್ತದೆ.

PC : Ankur2436

ಹಳ್ಳಿಯ ಆಕರ್ಷಣೆ

ಹಳ್ಳಿಯ ಆಕರ್ಷಣೆ

ಈ ಹಳ್ಳಿಯಲ್ಲಿ ಇರುವ ಬಂಗಾರದ ಹೊಳಪಿನ ಮರಳಿನ ದಿಬ್ಬದ ಮೇಲೆ ಒಂಟೆ ಸವಾರಿ ಹಾಗೂ ಸಾಹಸ ಪ್ರಿಯರು ಜೀಪ್ ಸವಾರಿಗಳನ್ನು ಮಾಡಬಹುದು. ಇದು ಒಂದು ಹೊಸತನದ ಅನುಭವ ನೀಡುವುದು. ಮರಳುಗಾಡಿನ ಸಫಾರಿ ಮತ್ತು ಒಂಟೆ ಸವಾರಿಗಳಿಂದ ಭವ್ಯವಾದ ಥಾರ್ ಮರಭೂಮಿಯ ವಿಶೇಷತೆಯನ್ನು ಆಸ್ವಾದಿಸಬಹುದು. ಈ ಮರಭೂಮಿಯಲ್ಲಿ ಸುಂದರವಾದ ನೀಲಿ ಸರೋವರ ಇರುವುದನ್ನು ನೋಡಬಹುದು.

PC : William J Sisti

ಹಳ್ಳಿಯ ಆಕರ್ಷಣೆ

ಹಳ್ಳಿಯ ಆಕರ್ಷಣೆ

ಅಲ್ಲದೆ ಅಪರೂಪದ ತಾಳೇ ಮರಗಳು ಇಲ್ಲಿವೆ. ಹಿಂದೂ ದೇಗುಲ ಹಾಗೂ ಜೈನ್ ದೇವಾಲಯಗಳು ನೆಲೆನಿಂತಿರುವುದು ಒಂದು ವಿಶೇಷ. ಇಲ್ಲಿಯ ಹೊಸ ಬಗೆಯ ವಾತಾವರಣ ಹಾಗೂ ಸಂಸ್ಕೃತಿಗಳು ಮರೆಯಲಾಗದ ಅದ್ಭುತ ಅನುಭವವನ್ನು ನೀಡುತ್ತವೆ.

PC : William J Sisti

ಪಾರಂಪರಿಕ ಹೋಟೆಲ್

ಪಾರಂಪರಿಕ ಹೋಟೆಲ್

ಪ್ರಕೃತಿ ಪ್ರಿಯರಿಗೆ ಇದೊಂದು ಸ್ವರ್ಗ ತಾಣ. ಇಲ್ಲಿ ಕಡಿಮೆ ಎಂದರೂ ಸುಮಾರು 47 ವಿವಿಧ ಬಗೆಯ ಪಕ್ಷಿ ಸಂಕುಲಗಳಿರುವುದನ್ನು ವೀಕ್ಷಿಸಬಹುದು. ಈ ಹೋಟೆಲ್‍ನಲ್ಲಿ ಪ್ರವಾಸಿಗರನ್ನು ಬಹಳ ಆದರ-ಆತಿಥ್ಯದಿಂದ ಉಪಚರಿಸುತ್ತಾರೆ.

PC : Uzi Yachin

ಪಾರಂಪರಿಕ ಹೋಟೆಲ್

ಪಾರಂಪರಿಕ ಹೋಟೆಲ್

ರಾಜ ವಂಶದ ರೀತಿಯಲ್ಲಿ ಯಾತ್ರಿಕರಿಗೆ ಉಪಚರಿಸುವುದರಿಂದ ಆರಾಮದಾಯಕ ಅನುಭವ ಪಡೆಯಬಹುದು. ಇಲ್ಲಿಯ ಇನ್ನೊಂದು ಕುತೂಹಲ ಹಾಗೂ ತಿಳಿದುಕೊಳ್ಳಲೇ ಬೇಕಾದ ಸಂಗತಿ ಎಂದರೆ ಹೋಟೆಲ್‍ನಲ್ಲಿ ಉಪಚರಿಸುವ ಸಿಬ್ಬಂದಿಗಳು ರಾಜ ಮನೆತನದವರು ಎನ್ನುವುದು.

PC : Uzi Yachin

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X