Search
  • Follow NativePlanet
Share
» »ಕೊಡೈಕೆನಾಲ್‍ನಲ್ಲಿ ನೀವು ನೋಡಲೇಬೇಕಾದ ತಾಣಗಳು ಇವು..

ಕೊಡೈಕೆನಾಲ್‍ನಲ್ಲಿ ನೀವು ನೋಡಲೇಬೇಕಾದ ತಾಣಗಳು ಇವು..

ಅರಣ್ಯಕ್ಕೆ ಹೆಸರುವಾಸಿಯಾಗಿರುವ ತಾಣವೆಂದರೆ ಅದು ತಮಿಳುನಾಡಿನ ಕೊಡೈಕೆನಾಲ್. ಈ ಸುಂದರವಾದ ಪ್ರಕೃತಿಯು ಅತ್ಯಂತ ಮನಮೋಹಕವಾಗಿದ್ದು, ಎಲ್ಲರಿಗೂ ಇಷ್ಟವಾಗುವಂತಹ ತಾಣ ಕೊಡೈಕೆನಾಲ್. ಸ್ನೇಹಿತರು, ಕುಟುಂಬಿಕರು, ದಂಪತಿಗಳು ಹೀಗೆ ಹಲವಾರು ಮಂದಿಯನ್ನು

ಅರಣ್ಯಕ್ಕೆ ಹೆಸರುವಾಸಿಯಾಗಿರುವ ತಾಣವೆಂದರೆ ಅದು ತಮಿಳುನಾಡಿನ ಕೊಡೈಕೆನಾಲ್. ಈ ಸುಂದರವಾದ ಪ್ರಕೃತಿಯು ಅತ್ಯಂತ ಮನಮೋಹಕವಾಗಿದ್ದು, ಎಲ್ಲರಿಗೂ ಇಷ್ಟವಾಗುವಂತಹ ತಾಣ ಕೊಡೈಕೆನಾಲ್. ಸ್ನೇಹಿತರು, ಕುಟುಂಬಿಕರು, ದಂಪತಿಗಳು ಹೀಗೆ ಹಲವಾರು ಮಂದಿಯನ್ನು ತನ್ನತ್ತ ಸೆಳೆಯುವ ಅಪೂರ್ವವಾದ ಶಕ್ತಿಯನ್ನು ಹೊಂದಿದೆ ಈ ತಾಣ.

ಕೊಡೈಕೆನಾಲ್ ತಮಿಳುನಾಡು ರಾಜ್ಯದಲ್ಲಿನ ಪ್ರಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕೊಡೈಕೆನಾಲ್ ಪಶ್ಚಿಮ ಘಟ್ಟಗಳ ಬೆಟ್ಟಗಳಲ್ಲಿ ನೆಲೆಗೊಂಡಿದೆ. ಈ ಸುಂದರವಾದ ಸ್ಥಳವು ಸಮುದ್ರ ಮಟ್ಟದಿಂದ ಸುಮಾರು 2,133 ಮೀಟರ್ ಎತ್ತರವಿದೆ.

ವಿಷೇಶವೆನೆಂದರೆ ಕೊಡೈಕೆನಾಲ್‍ನಲ್ಲಿ ಕುರುಂಜಿ ಎಂಬ ಹೂವು ಹರಳುತ್ತದೆ. ಈ ಹೂವು ಸುಮಾರು 12 ವರ್ಷಕ್ಕೆ ಒಮ್ಮೆ ಹರಳುತ್ತದೆ ಎಂತೆ. ಈ ಅದ್ಭುತ ಪ್ರದೇಶವು ಹುಲ್ಲುಗಾವಲಿನಿಂದ ಅವೃತ್ತಗೊಂಡಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ದಟ್ಟವಾದ ಅರಣ್ಯ ಪ್ರದೇಶ, ಮುಗಿಲೆತ್ತರದ ನೀಲಗಿರಿ ಮರಗಳು, ಸೈಪ್ರೆಸ್ ಹಾಗೂ ಅಕೇಶಿಯ ಮರಗಳನ್ನು ಇಲ್ಲಿ ಕಾಣಬಹುದಾಗಿದೆ.

ಇಂತಹ ಸೊಬಗನ್ನು ಹೊಂದಿರುವ ಸ್ಥಳಕ್ಕೆ ಒಮ್ಮೆ ಅವಶ್ಯಕವಾಗಿ ಪ್ರವಾಸಕ್ಕೆ ಹೋಗಲೇಬೇಕು ಅಲ್ಲವೇ? ಹಾಗಾದರೆ ಕೊಡೈಕೆನಾಲ್‍ನ 5 ಸುಂದರವಾದ ಪ್ರದೇಶಗಳ ಬಗ್ಗೆ ಮಾಹಿತಿಯನ್ನು ಲೇಖನದ ಮೂಲಕ ಪಡೆಯಿರಿ.

ಬೆರಿಜಮ್ ಸರೋವರ

ಬೆರಿಜಮ್ ಸರೋವರ

ಬೆರಿಜಮ್ ಸರೋವರವು ಸುಂದರವಾದ ಸುತ್ತಲೂ ಹಚ್ಚ ಹಸಿರಿನಿಂದ ಅವೃತ್ತವಾಗಿದ್ದು, ಸಸ್ಯ ಮತ್ತು ಪ್ರಾಣಿಗಳನ್ನು ಹೊಂದಿರುವ ವಿಶಾಲವಾದ ನೆಲೆಯಾಗಿದೆ. ಈ ಸರೋವವು ಸಮೀಪದ ಹಳ್ಳಿಗಳಿಗೆ ಕುಡಿಯುವ ನೀರಿನ ಮೂಲವಾಗಿದೆ.

ಇಲ್ಲಿ ಪ್ರಮುಖವಾಗಿ ಬೆಂಕಿ ಗೋಪುರ, ಸರೋವರದ ನೋಟ ಮತ್ತು ಔಷಧ ಅರಣ್ಯಗಳನ್ನು ಇಲ್ಲಿ ಪ್ರಮುಖವಾದ ಪ್ರವಾಸಿ ಆರ್ಕಷಣೆಯಾಗಿದೆ. ಸರೋವರದ ಸುತ್ತಲೂ ಕಾಡು ಪ್ರಾಣಿಗಳು, ಜಿಂಕೆಗಳು, ಹಾವುಗಳು ಮತ್ತು ಕಾಡೆಮ್ಮೆಗಳು ಕಾಣಬಹುದಾಗಿದೆ.

ಈ ಬೆರಿಜಮ್ ಸರೋವರದ ಪ್ರವೇಶ ದ್ವಾರವು ಬೆಳಗ್ಗೆ 9:30 ರಿಂದ ಸಂಜೆ 3 ಗಂಟೆಯವರೆಗೆ ಪ್ರವಾಸಿಗಳಿಗೆ ಪ್ರವೇಶದ ಅನುಮತಿಯನ್ನು ನೀಡಲಾಗುತ್ತದೆ.


PC:C/N N/G

ಕೋಕರ್ಸ್ ವಾಕ್

ಕೋಕರ್ಸ್ ವಾಕ್

ಕೊಡೈಕೆನಾಲ್‍ನಲ್ಲಿ ನೀವು ಭೇಟಿ ನೀಡಲೇಬೇಕಾಗಿರುವ ಸ್ಥಳವೆಂದರೆ ಅದು ಕೋಕರ್ಸ್ ವಾಕ್. ಈ ವಾಕ್ ಒಂದು ಗುಡ್ಡದ ಇಳಿಜಾರುವಿನ ರಸ್ತೆ ಮಾರ್ಗವಿದ್ದು ಸುಮಾರು 1 ಕಿ,ಮೀ ದೂರವಿದೆ. ಇಲ್ಲಿನ ವಿಶೇಷವೆನೆಂದರೆ ನೀವು ಭಾರತದಲ್ಲಿಯೇ ಭೇಟಿ ನೀಡುವ ಅತ್ಯಂತ ಪ್ರಶಾಂತ ಸ್ಥಳಗಳಲ್ಲಿ ಈ ಕೋಕರ್ಸ್ ವಾಕ್ ಒಂದಾಗಿದೆ.

1 ಕಿ,ಮೀ ದೂರದ ವಾಕ್ ಬೆಟ್ಟ ಅತ್ಯಂತ ಆರ್ಕಷಕವಾದ ದೃಶ್ಯಗಳನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಇಲ್ಲಿಗೆ ಹರಸಿ ಬರುವ ಪ್ರವಾಸಿಗರಲ್ಲಿ ದಂಪತಿಗಳು ತಮ್ಮ ಏಕಾಂತವನ್ನು ಕಳೆಯಲು ಹಾಗೂ ಸ್ನೇಹಿತರೊಂದಿಗೆ ಏನಜಾಯ್ ಮಾಡುಲು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.


PC:Aravindan Ganesan

ಕುರಿಂಜಯಂದವರ ದೇವಾಲಯ

ಕುರಿಂಜಯಂದವರ ದೇವಾಲಯ

ಕುರಿಂಜಯಂದವರ ದೇವಾಲಯವು ಒಂದು ಹಿಂದೂ ದೇವಾಲಯವಾಗಿದ್ದು, ಮುರುಗನ್ ಅಥವಾ ಕಾರ್ತಿಕೇಯ ದೇವರಿಗೆ ಸಮರ್ಪಿತವಾದ ದೇವಾಲಯವಾಗಿದೆ. ವಿಶೇಷವೆನೆಂದರೆ 12 ವರ್ಷಕ್ಕೆ ಒಮ್ಮೆ ಅರಳುವ ಕುರುಂಜಿಯ ಹೂವಿನ ನೆಲೆ ಎಂದು ಪ್ರಖ್ಯಾತಿಯನ್ನು ಪಡೆದಿದೆ ಈ ಕುರಿಂಜಯಂದವರ ದೇವಾಲಯ.

1936ರಲ್ಲಿ ಈ ಕುರಿಂಜಯಂದವರ ದೇವಾಲಯವನ್ನು ಯುರೋಪಿಯನ್ ಮಹಿಳೆ ಸ್ಥಾಪಿಸಿದ್ದಾಗಿದೆ. ಈ ದೇವಾಲಯವನ್ನು ಹಿಂದೂ ಧರ್ಮವನ್ನು ಅಳವಡಿಸಿ ನಂತರ ಆಕೆಯನ್ನು "ಲೇಡಿ ರಾಮಾನಾಥನ್" ಎಂಬ ಹೆಸರಿನಿಂದ ಕರೆಯಲ್ಪಟ್ಟಿತ್ತು. ಈ ದೇವಾಲಯವನ್ನು ಸುತ್ತಮುತ್ತಲಿನ ಹೂವಿನ ಪ್ರಸಿದ್ಧ ತಾಣವೆಂದೇ ಪ್ರಖ್ಯಾತ ಪಡೆದಿದೆ.

ಈ ದೇವಾಲಯಕ್ಕೆ ದೇಶ, ವಿದೇಶಗಳಿಂದ ಮುರುಗನ್‍ನ ದರ್ಶನ ಕೋರಿ ಭೇಟಿ ನೀಡುತ್ತಾರೆ.


PC: Raja Ravi Varma

ಗ್ರೀನ್ ವ್ಯಾಲಿ ವ್ಯೂ

ಗ್ರೀನ್ ವ್ಯಾಲಿ ವ್ಯೂ

ಕೊಡೈಕೆನಾಲ್‍ನ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಗ್ರೀನ್ ವ್ಯಾಲಿ ವ್ಯೂ ಕೂಡ ಒಂದು. ಆಶ್ಚರ್ಯಕರವಾದ ಸಂಗತಿ ಏನೆಂದರೆ ಮೊದಲು ಈ ಸ್ಥಳವನ್ನು ಸುಸೈಡ್ ಸ್ಪಟ್ ಎಂದು ಕರೆಯಲಾಗುತ್ತಿತ್ತು. ನಂತರ ಗ್ರೀನ್ ವ್ಯಾಲಿ ವ್ಯೂ ಎಂದು ಹೆಸರನ್ನು ಬದಲಾಯಿಸಲಾಯಿತು.

ಈ ಸ್ಥಳವು ಪರ್ವತಗಳ ಸುಂದರವಾದ ತಾಣಕ್ಕೆ ಹೆಸರುವಾಸಿಯಾಗಿದೆ. ಸುಮಾರು 5000 ಅಡಿ ಆಳವಾಗಿದೆ ಈ ಗ್ರೀನ್ ವ್ಯಾಲಿ ವ್ಯೂ. ಭಾರತದ ಬೆಟ್ಟದ ಕೇಂದ್ರಗಳೆಂದು ಕರೆಯಲ್ಪಡುವ ಕೊಡೈಕೆನಾಲ್ ಪ್ರಸಿದ್ಧವಾದ ಮಧುಚಂದ್ರದ ತಾಣದಲ್ಲಿ ಒಂದು.


PC:SONYA

ಕೊಡೈ ಸರೋವರ

ಕೊಡೈ ಸರೋವರ

ಕೊಡೈಕೆನಾಲ್‍ನಲ್ಲಿ ಕೊಡೈ ಸರೋವರ ಅತ್ಯಂತ ಪ್ರಸಿದ್ಧವಾದುದು. ಈ ಸರೋವರವು ಶಾಂತ ಮತ್ತು ಪ್ರಶಾಂತವಾದ ವಾತಾವರಣದ ಮಧ್ಯಯಲ್ಲಿನ ಒಂದು ನಕ್ಷತ್ರದ ಆಕಾರದ ಒಂದು ಅದ್ಭುತ ಸರೋವರ. ಈ ಸರೋವರವು ವಿವಿಧ ಪಕ್ಷಿಗಳನ್ನು ಹೊಂದಿದೆ.

ನಿಮ್ಮ ಸಂಗಾತಿಯೊಂದಿಗೆ ಹಾಗೂ ಸ್ನೇಹಿತರೊಂದಿಗೆ ಕುದುರೆ, ಬೈಸಿಕಲ್‍ಗಳಿಂದ ಮೋಜು ಮಸ್ತಿ ಮಾಡಬಹುದು. ಕೊಡೈ ಸರೋವರದಲ್ಲಿ ಪೆಡಲ್ ದೋಣಿಗಳು ಹಾಗೂ ರೋ ಬೋಟ್‍ಗಳನ್ನು ಆನಂದಿಸಬಹುದಾಗಿದೆ.


PC:Ananth BS

ತಲುಪುವ ಬಗೆ?

ತಲುಪುವ ಬಗೆ?

ಕೊಡೈಕೆನಾಲ್‍ಗೆ ಸಮೀಪ ವಿಮಾನ ನಿಲ್ದಾಣವೆಂದರೆ ಅದು ತಮಿಳುನಾಡಿನ ಮಧುರೈ. ಇಲ್ಲಿಂದ ಸುಮಾರು 120 ಕಿ,ಮೀ ದೂರದಲ್ಲಿದೆ.
ಕೊಡೈಕೆನಾಲ್‍ಗೆ ಸಮೀಪವಾದ ರೈಲ್ವೆ ನಿಲ್ದಾಣವೆಂದರೆ ಕೊಡೈ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಂದ ಸುಲಭವಾಗಿ ಈ ಸುಂದರವಾದ ಪ್ರದೇಶಗಳಿಗೆ ಒಮ್ಮೆ ಭೇಟಿ ನೀಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X