Search
  • Follow NativePlanet
Share
» »ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಹಾವುಗಳೆಂದರೆ ಸಾಮಾನ್ಯವಾಗಿ ಎಲ್ಲಿರಿಗೂ ಭಯ ಅವರಿಸುವುದು ಸಾಮಾನ್ಯ. ಯಾವುದೇ ಒಂದು ಪ್ರಾಣಿ, ಪಕ್ಷಿಗಳು ನೋಡುವಾಗ ರೊಮಾಂಚನಗೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಹಾವುಗಳನ್ನು ನೋಡಿದಾಗ ಆಗುವ ಭಯವೇ ವಿಭಿನ್ನ. ಹಾವುಗಳಲ್ಲಿ ಅನೇಕ ಜಾತಿಗಳಿದ್ದು, ವ

ಹಾವುಗಳೆಂದರೆ ಸಾಮಾನ್ಯವಾಗಿ ಎಲ್ಲಿರಿಗೂ ಭಯ ಅವರಿಸುವುದು ಸಾಮಾನ್ಯ. ಯಾವುದೇ ಒಂದು ಪ್ರಾಣಿ, ಪಕ್ಷಿಗಳು ನೋಡುವಾಗ ರೊಮಾಂಚನಗೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಹಾವುಗಳನ್ನು ನೋಡಿದಾಗ ಆಗುವ ಭಯವೇ ವಿಭಿನ್ನ. ಹಾವುಗಳಲ್ಲಿ ಅನೇಕ ಜಾತಿಗಳಿದ್ದು, ವಿವಿಧ ಬಣ್ಣಗಳನ್ನು ಹೊಂದಿರುತ್ತದೆ. ನಮ್ಮ ಹಿಂದೂ ಧರ್ಮದಲ್ಲಿ ಹಾವುಗಳಿಗೆ ತನ್ನದೇ ಆದ ಮಹತ್ವವನ್ನು ನೀಡಿ ಪೂಜೆ ಮಾಡುತ್ತಾರೆ. ರಾಹು-ಕೇತು ಎಂಬ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪುಣ್ಯ ಕ್ಷೇತ್ರಗಳಿಗೆ ಭಕ್ತರು ಭೇಟಿ ನೀಡುತ್ತಾರೆ.

ನಿಸರ್ಗ ಪ್ರಿಯರಿಗೆ ಪ್ರಾಣಿ, ಪಕ್ಷಿ, ಸರೀಸೃಪಗಳನ್ನು ಕಾಣುವುದೆಂದರೆ ಏನೋ ಒಂದು ರೀತಿಯ ಆನಂದ. ಮುಖ್ಯವಾಗಿ ಸರಿಸೃಪಗಳನ್ನು ನೋಡುವ ಬಯಕೆ ಇದ್ದರೆ ಲೇಖನದಲ್ಲಿ ತಿಳಿಸಲಾಗುವ ಸ್ಥಳಗಳಿಗೆಲ್ಲಾ ಒಮ್ಮೆ ಭೇಟಿ ನೀಡಬಹುದು.

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಕೇರಳದಲ್ಲಿ ಅನೇಕ ಪ್ರವಾಸಿ ತಾಣಗಳು ಇದ್ದು, ಅವುಗಳಲ್ಲಿ ವಯನಾಡು ಕೂಡ ಒಂದು. ಇದು ಪಶ್ಚಿಮ ಘಟ್ಟಗಳ ದಟ್ಟವಾದ ಹಸಿರಿನಿಂದ ಕೂಡಿದ ಕಾಡುಗಳ ಮಧ್ಯೆ ನೆಲೆಸಿರುವ ಅದ್ಭುತವಾದ ಪ್ರವಾಸಿ ಕೇಂದ್ರವಾಗಿದೆ. ನಿಸರ್ಗಪ್ರಿಯರಿಗೆ ಅಕ್ಷರಶಃ ಆನಂದವನ್ನು ಕರುಣಿಸುವ ಇಲ್ಲಿನ ನೈಸರ್ಗಿಕ ಸೊಬಗು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸದೇ ಬಿಡದು. ಈ ಸುಂದರವಾದ ಕಾಡಿನಲ್ಲಿ ಕಂಡುಬರುವ ಬಣ್ಣದ ತೆಳುವಾದ ಹಾಗು ಚಿಕ್ಕದಾದ " ವೈನ್ ಸ್ನೇಕ್ "ಇದಾಗಿದೆ.

PC:Uajith

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಇದು ಕೂಡ ಕೇರಳದಲ್ಲಿ ಮಲಬಾರ್ ಎಂಬ ಪ್ರಾಂತ್ಯದಲ್ಲಿ ಸಾಮಾನ್ಯವಾಗಿ ಕಂಡುಬರುವ "ಮಲಬಾರ್ ಪಿಟ್ ವೈಪರ್" ಎಂಬ ಹೆಸರಿನ ವಿಷಕಾರಿ ಹಾವು ಇದಾಗಿದೆ.

PC:Shyamal

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಮಲಬಾರ್ ಪ್ರದೇಶದ ಪಿಟ್ ವೈಪರ್ "ಹಮ್ಮಿಂಗ್ ಬರ್ಡ್" ಎಂಬ ಪುಟ್ಟ ಹಕ್ಕಿಯೊಂದನ್ನು ಬೇಟೆಯಾಡಿ ತಿನ್ನುತ್ತಿರುವ ಹಾವಿನ ದೃಶ್ಯ. ನಿಮಗೆ ಗೊತ್ತ? ಈ ಹಾವು ಸಣ್ಣ ಪುಟ್ಟ ಕಪ್ಪೆಗಳಿಂದ ಹಿಡಿದು ದೊಡ್ಡ ಪಕ್ಷಿಯವರೆವಿಗೂ ಎಲ್ಲಾ ಜೀವಿಗಳನ್ನು ಹಿಡಿದು ತಿನ್ನುವ ಬಲಶಾಲಿ ಹಾವು ಇದಾಗಿದೆ.

PC:L. Shyamal

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಚಿತ್ರದಲ್ಲಿರುವ ಹಾವು ಪಶ್ಚಿಮಘಟ್ಟಗಳಲ್ಲಿ ಮಾತ್ರವೇ ಕಾಣಿಸುವ ಹಾವಾಗಿದೆ. ಇದು ಹಸಿರು ಬಣ್ಣವನ್ನು ಹೊಂದಿದ್ದು, ದೊಡ್ಡ ಪೊರೆಯ ವಿಷಪೂರಿತವಾಗಿದೆ. ಇದು ಸಾಮಾನ್ಯವಾಗಿ ಗಿಡಗಳಲ್ಲಿ ಕಂಡುಬರುತ್ತದೆ. ಇದು ಹೆಚ್ಚಾಗಿ ಕೇರಳ ಹಾಗು ತಿಳುನಾಡಿನ ಗಡಿಯಲ್ಲಿರುವ ಪಾಲಕ್ಕಾಡ್ ಗ್ಯಾಪ್ ಎಂಬ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಟ್ರೆಕ್ಕಿಂಗ್ ಪ್ರೇಮಿಗಳು ನೀವಾಗಿದ್ದರೆ ಈ ಸ್ಥಳಗಳಿಗೆ ತೆರಳಿದಾಗ ಸ್ವಲ್ಪ ಜಾಗ್ರತೆಯಾಗಿರಿ.

PC: Seshadri.K.S

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಈ ದೃಶ್ಯದಲ್ಲಿ ಕಾಣುತ್ತಿರುವ ಹಾವು ನಮ್ಮ ಕರ್ನಾಟಕ ರಾಜ್ಯದ ಚಿಕ್ಕಮಗಳೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಸಿಗುವ ಕಂದು ಬಣ್ಣದ, ಸಣ್ಣ ದೇಹದ, ದೊಡ್ಡ ಕಣ್ಣುಗಳುಳ್ಳ ಹಾವಾಗಿದೆ.

PC:Amithbangre

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಈ ದೃಶ್ಯದಲ್ಲಿನ ಭಯಾನಕ ಹಾವು ಕರ್ನಾಟಕ, ಕೇರಳ ರಾಜ್ಯಗಳ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಬೆಡೊಮ್ಮೆಸ್ ಕೀಲ್ ಬ್ಯಾಕ್ ಎಂಬ ಒಂದು ಜಾತಿಯ ಹಾವು. ಇದು ಕಪ್ಪೆಯನ್ನು ನುಂಗುತ್ತಿರುವ ದೃಶ್ಯವಾಗಿದೆ.

PC:Nireekshit

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಪಶ್ಚಿಮ ಘಟ್ಟಗಳಲ್ಲಿ ಆದರೆ ತಮಿಳುನಾಡಿನ ತಿರುನೆಲ್ವೇಲಿ, ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಹರಡಿರುವ ಕಾಲಕ್ಕಾಡ್ ಮುಂಡಂತುರೈ ಟೈಗರ್ ರಿಸರ್ವ್ ಅಭಯಾರಣ್ಯದಲ್ಲಿ ಕಂಡುಬರುವ "ಗುಂಥರ್ ಸವೈನ್" ಎಂಬ ಹಾವು ಇದಾಗಿದೆ.

PC:Seshadri.K.S

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಕೇರಳದ ಕೊಲ್ಲಂ ಜಿಲ್ಲೆಯ ಶೆಂದುರುಣಿ ವನ್ಯಜೀವಿಧಾಮದಲ್ಲಿರುವ ವಿಶಿಷ್ಟವಾದ ಎಲಿಯಟ್ ಎಂಬ ಹೆಸರಿನ ಕಾಡು ಹಲ್ಲಿ.

PC:Dhaval Momaya

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಕರ್ನಾಟಕ, ಕೇರಳ ಹಾಗು ತಮಿಳುನಾಡು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ದಪ್ಪ ಚರ್ಮದ ಓತಿಕ್ಯಾತ.

PC:Jkadavoor

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...

ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿರುವ ಇಗುವಾನಾ ಎಂಬ ದೊಡ್ಡ ಓತಿಕ್ಯಾತ. ತಲೆಯಿಂದ ಬಾಲದವರೆಗೆ ಇವು ಸುಮಾರು 5 ರಿಂದ 6 ಅಡಿಯವರೆಗೂ ಉದ್ದವಾಗಿ ಬೆಳೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X