Search
  • Follow NativePlanet
Share
» »ವಿವಿಧ ಸರಿಸೃಪಗಳ ನಿವಾಸವಿರುವ ಸ್ಥಳಗಳ ಪ್ರವಾಸ

ವಿವಿಧ ಸರಿಸೃಪಗಳ ನಿವಾಸವಿರುವ ಸ್ಥಳಗಳ ಪ್ರವಾಸ

By Vijay

ಹರ್ಪೆಟಾಲಾಜಿ ಹಾಗೂ ಆಫಿಯಾಲಾಗಿ ಕುರಿತು ಕೇಳಿದ್ದೀರಾ? ಹರ್ಪೆಟಾಲಾಜಿ ಪ್ರಾಣಿ ಶಾಸ್ತ್ರದ ಒಂದು ವಿಭಾಗವಾಗಿದ್ದು ಇಲ್ಲಿ ಸರಿಸೃಪಗಳು ಹಾಗೂ ಉಭಯವಾಸಿಗಲ ಕುರಿತು ಅಧ್ಯಯನ ಮಾಡಲಾಗುತ್ತದೆ. ಅದೇ ರೀತಿಯಾಗಿ ಆಫಿಯಾಲಾಜಿಯು ಹರ್ಪೆಟಾಲಾಜಿಯ ಒಂದು ವಿಭಾಗವಾಗಿದ್ದು ಇಲ್ಲಿ ನಿರ್ದಿಷ್ಟವಾಗಿ ಅಂದರೆ ಸರ್ಪ ಅಥವಾ ಹಾವುಗಳ ಕುರಿತು ಮಾತ್ರವೆ ಅಭ್ಯಸಿಸಲಾಗುತ್ತದೆ.

ನಿಮಗಿಷ್ಟವಾಗಬಹುದಾದ : ಕಬಿನಿ ಜಲಾಶಯದ ವಿಸ್ಮಯಕರ ಜೀವಸಂಕುಲ

ಮನುಷ್ಯನ ಆಸಕ್ತಿಯು ವಿಧ ವಿಧವಾಗಿರುತ್ತದೆ. ಕೆಲವರಿಗೆ ವಿಜ್ಞಾನ ವಿಷಯ ಇಷ್ಟವಾದರೆ ಇನ್ನೂ ಕೆಲವರಿಗೆ ವಿಜ್ಞಾನದಲ್ಲಿನ ಕೆಲ ನಿರ್ದಿಷ್ಟ ವಿಷಯಗಳು ಅಧ್ಯಯನ ಮಾಡಲು ಇಷ್ಟವಾಗುತ್ತವೆ. ಅದೇ ರೀತಿಯಾಗಿ ಪ್ರವಾಸಿಗರಿಗೆ ಅದರಲ್ಲೂ ವಿಶೇಷವಾಗಿ ಪ್ರಾಣಿಶಾಸ್ತ್ರ ಪ್ರಿಯ ಪ್ರವಾಸಿಗರಿಗೆ ವಿವಿಧ ಸ್ಥಳಗಳಲ್ಲಿ ಕಂಡುಬರುವ ವೈವಿಧ್ಯಮಯ ಪ್ರಾಣಿಗಳಾಗಲಿ, ಹಕ್ಕಿಗಳಾಗಲಿ ಅಥವಾ ಕೀಟ, ಸರಿಸೃಪಗಳಾಗಲಿ ಅಲ್ಲಿಗೆ ತೆರಳಿ ನೋಡುವುದೆಂದರೆ ಖುಶಿ ಕೊಡುವ ಚಟುವಟಿಕೆಯಾಗಿರುತ್ತದೆ.

ಅಂತಹ ಪ್ರಾಣಿ, ಪಕ್ಷಿ, ನಿಸರ್ಗಪ್ರಿಯ ಪ್ರವಾಸಿಗರನ್ನು ಗಮನದಲ್ಲಿರಿಸಿಕೊಂಡು ಪ್ರಸ್ತುತ ಲೇಖನದಲ್ಲಿ ಕೆಲವು ಆಯ್ದ ಸ್ಥಳಗಳ ಅರಣ್ಯ ಪ್ರದೇಶಗಳಲ್ಲಿ, ರಾಷ್ಟ್ರೀಯ ಉದ್ಯಾನಗಳಲ್ಲಿ ಕಂಡುಬರುವ ವಿವಿಧ ಸರಿಸೃಪಗಳ ಕುರಿತು ತಿಳಿಸಲಾಗಿದೆ. ನಿಮಗೂ ಇಲ್ಲಿ ತೋರಿಸಲಾದ ಸರಿಸೃಪಗಳ ಕುರಿತು ಹೆಚ್ಚು ತಿಳಿಯುವ ಬಯಕೆ ಅಥವಾ ನೋಡುವ ಹಂಬಲವಿದ್ದರೆ ಈ ಸ್ಥಳಗಳಿಗೆ ತೆರಳಿ ಅವುಗಳನ್ನು ಕುರಿತು ತಿಳಿಯಿರಿ.

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಕೇರಳದಲ್ಲಿರುವ ವಯನಾಡ್ ಪಶ್ಚಿಮಘಟ್ಟಗಳ ದಟ್ಟವಾದ ಹಸಿರಿನಿಂದ ಕೂಡಿದ ಕಾಡುಗಳ ಮಧ್ಯೆ ನೆಲೆಸಿರುವ ಅದ್ಭುತ ಪ್ರವಾಸಿ ಕೇಂದ್ರವಾಗಿದೆ. ನಿಸರ್ಗಪ್ರಿಯರಿಗೆ ಅಕ್ಷರಶಃ ಆನಂದವನ್ನು ಕರುಣಿಸುವ ಇಲ್ಲಿನ ವನ್ಯ ಪ್ರದೇಶಗಳಲ್ಲಿ ಆಶ್ರಯ ಪಡೆದಿರುವ ಜೀವ ಸಂಕುಲವೂ ಅಪಾರ. ವಯನಾಡ್ ಕಾಡಿನಲ್ಲಿ ಕಂಡುಬರುವ ಹಸಿರು ಬಣ್ಣದ ತೆಳುವಾದ ಹಾಗೂ ಚಿಕ್ಕದಾದ "ವೈನ್ ಸ್ನೇಕ್".

ಚಿತ್ರಕೃಪೆ: Uajith

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಕೇರಳದ ಮಲಬಾರ್ ಪ್ರಾಂತ್ಯದಲ್ಲಿ ಸಾಮಾನ್ಯವಾಗಿ ಕಂಡುಬರುವ "ಮಲಬಾರ್ ಪಿಟ್ ವೈಪರ್" ಎಂಬ ಹೆಸರಿನ ವಿಷಕಾರಿ ಹಾವು.

ಚಿತ್ರಕೃಪೆ: Shyamal

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಮಲಬಾರ್ ಪಿಟ್ ವೈಪರ್ ""ಹಮ್ಮಿಂಗ್ ಬರ್ಡ್" ಎಂಬ ಪುಟ್ಟ ಹಕ್ಕಿಯೊಂದನ್ನು ಬೇಟೆಯಾಡಿ ಹಿಡಿದು ತಿನ್ನುತ್ತಿರುವುದು. ಇವು ಸಣ್ಣ ಪುಟ್ಟ ಕಪ್ಪೆಗಳಿಂದ ಹಿಡಿದು ಪಕ್ಷಿಯವರೆಗೂ ಜೀವಿಗಳನ್ನು ಆಹಾರವಾಗಿತಿನ್ನುತ್ತವೆ.

ಚಿತ್ರಕೃಪೆ: L. Shyamal

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಇದು ಪಶ್ಚಿಮಘಟ್ಟ್ಟಗಳಿಗೆ ಮಾತ್ರವೆ ಸೀಮಿತವಾದ ಹಾವು. ಹಸಿರು ಬಣ್ಣದ ದೊಡ್ಡ ಪೊರೆಯ ಈ ಹಾವು ವಿಷಕಾರಿಯಾಗಿದ್ದು ಗಿಡಗಳಲ್ಲಿ ಕಂಡುಬರುತ್ತವೆ. ಕೇರಳ ಹಾಗೂ ತ್ಮಿಳುನಾಡಿನ ಗಡಿಯಲ್ಲಿರುವ ಪಾಲಕ್ಕಾಡ್ ಗ್ಯಾಪ್ ಪ್ರದೇಶದಲ್ಲಿ ಇವು ಕಂಡುಬರುತ್ತವೆ. ನೀವು ಚಾರಣ ಪ್ರಿಯರಾಗಿದ್ದರೆ ಈ ಪ್ರದೇಶದಲ್ಲಿ ಚಾರಣ ಮಾಡುವಾಗ ನಿಮಗಿದು ಕಾಣ ಸಿಗಲೂಬಹುದು. ಆದರೆ ಜೋಕೆ...ಹೆಚ್ಚು ಮುಂದೆ ಹೊಗದಿರಿ.

ಚಿತ್ರಕೃಪೆ: Seshadri.K.S

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಚಿಕ್ಕಮಗಳೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾನದಲಿ ಕಾನಸಿಗುವ ಕಂದು ಬಣ್ಣದ, ಸಣ್ಣ ದೇಹದ ಆದರೆ ದೊಡ್ಡ ಕಣ್ಣುಗಳುಳ್ಳ ಹಾವು.

ಚಿತ್ರಕೃಪೆ: Amithbangre

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಕರ್ನಾಟಕ, ಕೇರಳ ರಾಜ್ಯಗಳ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಬೆಡೊಮ್ಮೆಸ್ ಕೀಲ್ ಬ್ಯಾಕ್ ಎಂಬ ಒಂದು ಜಾತಿಯ ಹಾವು. ಕಪ್ಪೆಯನ್ನು ನುಂಗುತ್ತಿರುವುದು.

ಚಿತ್ರಕೃಪೆ: Nireekshit

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಪಶ್ಚಿಮ ಘಟ್ಟಗಳಲ್ಲೆ ಆದರೆ ತಮಿಳುನಾಡಿನ ತಿರುನೆಲ್ವೇಲಿ, ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಹರಡಿರುವ ಕಾಲಕ್ಕಾಡ್ ಮುಂಡಂತುರೈ ಟೈಗರ್ ರಿಸರ್ವ್ ಅಭಯಾರಣ್ಯದಲ್ಲಿ ಕಂಡುಬರುವ "ಗುಂಥರ್'ಸ್ ವೈನ್ ಸ್ನೇಕ್".

ಚಿತ್ರಕೃಪೆ: Seshadri.K.S

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಕೇರಳದ ಕೊಲ್ಲಂ ಜಿಲ್ಲೆಯ ಶೆಂದುರುಣಿ ವನ್ಯಜೀವಿಧಾಮದಲ್ಲಿರುವ ವಿಶಿಷ್ಟಮಯ ಎಲಿಯಟ್ ಎಂಬ ಹೆಸರಿನ ಕಾಡು ಹಲ್ಲಿ.

ಚಿತ್ರಕೃಪೆ: Dhaval Momaya

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಕರ್ನಾಟಕ, ಕೇರಳ ಹಾಗು ತಮಿಳುನಾಡಿನ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ದಪ್ಪ ಚರ್ಮದ ಓತಿಕ್ಯಾತ.

ಚಿತ್ರಕೃಪೆ: Jkadavoor

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಇದು ಹಲ್ಲಿಯಲ್ಲವಾದರೂ ಹಲ್ಲಿ ಜಾತಿಗೆಯೆ ಸೇರಿದ ಆಂಗ್ಲದಲ್ಲಿ "ಸ್ಕಿಂಕ್" ಎಂದು ಕರೆಯಲ್ಪಡುವ ಜೀವಿ. ಇವು ವಿಶಿಷ್ಟವಾಗಿದ್ದು ಕಾಳಿ ನದಿ ದಂಡೆಯ ಅಂದರೆ ದಾಂಡೇಲಿ ಅರಣ್ಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: L. Shyamal

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿರುವ ಇಗುವಾನಾ ಎಂಬ ದೊಡ್ಡ ಓತಿಕ್ಯಾತ. ತಲೆಯಿಂದ ಬಾಲದವರೆಗೆ ಇವು ಸುಮಾರು ಐದರಿಂದ ಆರು ಅಡಿಗಳವರೆಗೂ ಉದ್ದವಾಗಿ ಬೆಳೆಯುತ್ತವೆ.

ಚಿತ್ರಕೃಪೆ: S N Barid

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಭಾರತ ಉಪಖಂಡದಲ್ಲಿ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ಅತ್ಯಂತ ವಿಷಕಾರಿಯಾದ ನಾಗರ ಹಾವು. ಬೆಂಗಳೂರಿನ ಮಾರತಹಳ್ಳಿಯಲ್ಲಿ ಕಂಡುಬಂದಿದ್ದ ಒಂದು ಮರಿ ನಾಗರ ಹಾವು.

ಚಿತ್ರಕೃಪೆ: Gopal Venkatesan

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಮಾತ್ರವೆ ಕಂಡುಬರುವ ಒಂದು ಬಗೆಯ ಹಲ್ಲಿ ಜಾತಿಗೆ ಸೇರಿದ ಜೀವಿ.

ಚಿತ್ರಕೃಪೆ: Chesano

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಕೇರಳದ ಇಡುಕ್ಕಿ ಜಿಲ್ಲೆಯ ತೋಡುಪುಳಾ ಪಟ್ಟಣದ ಬಳಿಯಿರುವ ತೊಮ್ಮನಕುತು ಎಂಬ ಸುಂದರ ಹಸಿರಿನ ಪ್ರದೇಶದಲ್ಲಿ ಕಂಡುಬರುವ ಉಬ್ಬು ಮೂಗಿನ ಪಿಟ್ ವೈಪರ್ ಎಂಬ ಹೆಸರಿನ ಹಾವು. ಇಲ್ಲಿ ಸುಂದರವಾದ ಜಲಪಾತವೂ ಇದ್ದು ಅದನ್ನು ತೊಮ್ಮನಕುತು ಜಲಪಾತ ಎಂದೆ ಕರೆಯಲಾಗುತ್ತದೆ.

ಚಿತ್ರಕೃಪೆ: Amjithps

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಆಗುಂಬೆಯು ಅಪರೂಪದ ಮಳೆಗಾಡಿನ ಪ್ರದೇಶವಾಗಿದೆ. ವಿಶೇಷವೆಂದರೆ ಭಾರತದಲ್ಲಿ ಏಕೈಕ ಮಳೆ ಸಂಶೋಧನಾ ಕೇಂದ್ರವೂ ಸಹ ಇಲ್ಲಿಯೆ ಸ್ಥಿತವಿದೆ. ಇನ್ನೊಂದು ವಿಸ್ಮಯವೆಂದರೆ ಆಗುಂಬೆ ಹಾವುಗಳಲ್ಲೆ ಪ್ರಬಲ ವಿಷಕಾರಿ ಹಾಗೂ ಶಕ್ತಿಶಾಲಿಯಾದ ಕಿಂಗ್ ಕೋಬ್ರಾ ಅಥವಾ ಕಾಳಿಂಗ ಸರ್ಪದ ಆವಾಸ ಸ್ಥಾನವಾಗಿದೆ. ಈ ಹಾವು ಸುಮಾರು 15 ರಿಂದ 20 ಅಡಿಗಳವರೆಗೂ ಉದ್ದವಾಗಿ ಬೆಳೆಯಬಲ್ಲುದು ಅಲ್ಲದೆ ಇದರ ಮುಖ್ಯ ಆಹಾರ ಇತರೆ ಹಾವುಗಳು.

ಚಿತ್ರಕೃಪೆ: Michael Allen Smith

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಆಂಗ್ಲದಲ್ಲಿ ಇದನ್ನು "ವೊಲ್ಫ್ ಸ್ನೇಕ್" ಎಂದು ಕರೆಯುತ್ತಾರೆ. ತೋಳ, ನಾಯಿ, ನರಿಗಳ ಹಾಗೆ ಇದರ ಮುಂಭಾಗದ ಹಲ್ಲುಗಳು ರೂಪಿತಗೊಂಡಿರುವುದರಿಂದ ಇದನ್ನು ಆ ರೀತಿಯಾಗಿ ಕರೆಯುತ್ತಾರೆ. ಈ ಹಾವುಗಳು ಸಾಮಾನ್ಯವಾಗಿ ಅಂಡಮಾನ್ ಪ್ರದೇಶಗಳಲ್ಲಿ ಹಾಗೂ ಕೇರಳದ ಶೋಲಯಾರ್ ಅರಣ್ಯ ಪ್ರದೇಶಗಳಲ್ಲಿ ಕಮ್ದುಬರುತ್ತವೆ.

ಚಿತ್ರಕೃಪೆ: D momaya

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಕ್ಯಾಟ್ ಸ್ನೇಕ್, ಸಾಮಾನ್ಯವಾಗಿ ಭಾರತದಾದ್ಯಂತ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಕಂಡುಬರುವ ಒಂದು ಹಾವು. ದೇಹ ತೆಳ್ಳಗಾಗಿದ್ದು ತಲೆ ಹಾಗೂ ಕಣ್ಣುಗಳು ದೊಡ್ಡದಾಗಿರುತ್ತವೆ. ಕಣ್ಣುಗಳು ಬೆಕ್ಕಿನ ಕಣ್ಣುಗಳ ರಚನೆಗೆ ಹೆಚ್ಚಿನ ಸಾಮ್ಯತೆ ಹೊಂದಿರುವುದರಿಂದ ಇದನ್ನು ಕ್ಯಾಟ್ ಸ್ನೇಕ್ ಎಂದು ಕರೆಯಲಾಗುತ್ತದೆ. ಇವು ನಿಶಾಚರಿಗಳು, ವಿಷಕಾರಿಯಾದರೂ ಮನುಷ್ಯನ ಜೀವ ತೆಗೆಯುವಂತಹ ತೀವ್ರಕಾರಿಯಲ್ಲದ ವಿಷ.

ಚಿತ್ರಕೃಪೆ: Jayendra Chiplunkar

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಇದು ಭಾರತೀಯ ಕಪ್ಪು ಆಮೆ. ದಕ್ಷಿಣ ಭಾರತದ ತಾಜಾ ನೀರಿನ ಕೆರೆಗಳು, ಕೊಳಗಳಲ್ಲಿ ಸಾಮಾನ್ಯವಾಗಿ ಇವು ಕಂಡುಬರುತ್ತವೆ.

ಚಿತ್ರಕೃಪೆ: Swardeepak

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ವೈವಿಧ್ಯಮಯ ಜೀವಿಗಳು ಹಾಗೂ ಸ್ಥಳಗಳು:

ಭಾರತೀಯ ಮೊಸಳೆ. ಮಗ್ಗರ್ ಎಂತಲೂ ಕರೆಯಲಾಗುವ ಈ ಮೊಸಳೆಗಳು ದಕ್ಷಿಣ ಭಾರತದ ಕಬಿನಿ ನದಿ, ರಂಗನತಿಟ್ಟು ಹಾಗೂ ಇನ್ನು ಅನೇಕ ಪಶ್ಚಿಮ ಘಟ್ಟಗಳ ಇತರೆ ನೀರಿನ ಪ್ರದೇಶಗಳಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Hericks

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X