Search
  • Follow NativePlanet
Share
» »ವನವಾಸದಲ್ಲಿ ರಾಮನು ಯಾವೆಲ್ಲ ಸ್ಥಳಗಳಿಗೆ ಭೇಟಿ ನೀಡಿದ್ದ?

ವನವಾಸದಲ್ಲಿ ರಾಮನು ಯಾವೆಲ್ಲ ಸ್ಥಳಗಳಿಗೆ ಭೇಟಿ ನೀಡಿದ್ದ?

By Vijay

ರಾಮಾಯಣ, ಭಾರತದ ಸಂಸ್ಕೃತಿ-ಸಂಪ್ರದಾಯ ಹಾಗೂ ಆಧ್ಯಾತಿಕ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ ಪ್ರಮುಖ ಮಹಾಕಾವ್ಯಗಳಲ್ಲಿ ಒಂದಾಗಿದೆ. ಭಾರತೀಯರಿಗೆ ರಾಮಾಯಣದ ಕಥೆಯು ಕೇವಲ ಸ್ವಾರಸ್ಯಕರ ಕಥೆಯಾಗಿ ಉಳಿದಿಲ್ಲ. ಬದಲು ಅದರಲ್ಲಿರುವ ಒಂದೊಂದು ಉದ್ದೇಶಗಳು ಜೀವನದಲ್ಲಳವಡಿಸಿಕೊಳ್ಳಬಹುದಾದ ಉತ್ತಮ ಮಾರ್ಗಗಳಾಗಿವೆ.

ಮಹರ್ಷಿ ವಾಲ್ಮಿಕಿಯಿಂದ ರಚಿಸಲ್ಪಟ್ಟ ರಾಮಾಯಣದಲ್ಲಿ ಪ್ರಭು ಶ್ರೀರಾಮಚಂದ್ರ ಮುಖ್ಯ ಕಥಾ ನಾಯಕ ಹಾಗೂ ಅವನ ಜೀವನವೆ ರಾಮಾಯಣ. ಮನುಷ್ಯನಾಗಿ ಹುಟ್ಟಿದ ಮೇಲೆ ಯಾವ ರೀತಿ ಧರ್ಮದಿಂದ, ನೈತಿಕ ಮಾರ್ಗದಿಂದ, ಮರ್ಯಾದಾ ಪುರುಷೋತ್ತಮನಾಗಿ ಬದುಕಿ ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂಬುದರ ತಿರುಳನ್ನೆ ರಾಮಾಯಣ ಸಾರುತ್ತದೆ ಎಂಬುದು ಪಂಡಿತರ, ವಿದ್ವಾಂಸರ ಅಭಿಪ್ರಾಯವಾಗಿದೆ.

ಅಷ್ಟಕ್ಕೂ ರಾಮಾಯಣದಲ್ಲಿ ಬಹುತೇಕರಿಗೆ ಕುತೂಹಲ ಕೆರಳಿಸುವುದು ಶ್ರೀರಾಮನ ವನವಾಸ ಹಾಗು ಅರಣ್ಯಕಾಂಡದ ಸಂದರ್ಭ. ತನ್ನ ಎಲ್ಲ ವೈಭವೋಪೇತ ಸೌಕರ್ಯಗಳನ್ನು ಕ್ಷಣದಲ್ಲೆ ತೊರೆದು ಪತ್ನಿ ಹಾಗೂ ಸಹೋದರನ ಸಮೇತನಾಗಿ ರಾಮನು ವನವಾಸಿಯಾಗಿ ಅಲೆಮಾರಿ ಜೀವನ ನಡೆಸುವುದು ರಾಮಾಯಣದ ಒಂದು ಪ್ರಮುಖ ಭಾಗ.

ಈ ಸಂದರ್ಭದಲ್ಲಿ ರಾಮನು ಉತ್ತರದಿಂದ ಹಿಡಿದು ದಕ್ಷಿಣದವರೆಗೆ ಸಾಕಷ್ಟು ಸ್ಥಳಗಳಿಗೆ ಭೇಟಿ ನೀಡುತ್ತಾನೆ, ಹಲವೆಡೆ ತನ್ನ ದೈವಿ ಪವಾಡಗಳನ್ನು ಮಾಡುತ್ತಾನೆ, ಶಿವನನ್ನು ಕುರಿತು ಶಿವಲಿಂಗ ಸ್ಥಾಪಿಸಿ ಪೂಜಿಸುತ್ತಾನೆ ಎಂಬುದರ ಕುರಿತು ರಾಮಾಯಣದಲ್ಲಿ ಸಾಕಷ್ಟು ದಾಖಲೆಗಳು ಕಂಡುಬರುತ್ತವೆ. ಹೀಗೆ ರಾಮನು ಯಾವೆಲ್ಲ ಸ್ಥಳಗಳಿಗೆ ಭೇಟಿ ನೀಡಿರಬಹುದೆಂಬುದರ ಕುರಿತು ಜನರಲ್ಲಿ ಸಾಕಷ್ಟು ಕುತೂಹಲವಿದೆ.

ಆ ನಿಟ್ಟಿನಲ್ಲಿ ಪ್ರಸ್ತುತ ಲೇಖನವು ನಿಮ್ಮ ಕುತೂಹಲವನ್ನು ಕಿಂಚಿತ್ತಾದರೂ ತಣಿಸಲು ಸಹಾಯಕವಾಗಲಿದೆ. ವನವಾಸದ ಸಂದರ್ಭದಲ್ಲಿ ರಾಮನು ನೂರಾರು ಸ್ಥಳಗಳಿಗೆ ಭೇಟಿ ನೀಡಿದ್ದಾನಾದರೂ ಪ್ರವಾಸಿ ದೃಷ್ಟಿಯಿಂದ ಪ್ರಸ್ತುತ ಲೇಖನದಲ್ಲಿ ಕೆಲವು ಪ್ರಮುಖವಾದ ಸ್ಥಳಗಳ ಕುರಿತು ಮಾತ್ರವೆ ತಿಳಿಸಲಾಗಿದೆ. ಇಷ್ಟವಾದಲ್ಲಿ ನೀವು ಒಮ್ಮೆ ಇಲ್ಲಿಗೆ ಭೇಟಿ ನೀಡಲು ಪ್ರಯತ್ನಿಸಿ.

ಅಯೋಧ್ಯೆ

ಅಯೋಧ್ಯೆ

ಅಯೋಧ್ಯಾ : ಇದು ರಾಮನು ಹುಟ್ಟಿದ ಸ್ಥಳ. ಇದನ್ನು ರಾಮಜನ್ಮ ಭೂಮಿ ಎಂತಲೂ ಸಹ ಕರೆಯುತ್ತಾರೆ. ಸಂದರ್ಭ ಒದಗಿ ಬಂದಾಗ ತಂದೆಯ ಮಾತನ್ನು ಉಳಿಸುವ ದೃಷ್ಟಿಯಿಂದ ರಾಮನು ಅರಮನೆ ತೊರೆದು ಕಾಡಿಗೆ ಹೋಗುವ ಅನಿವಾರ್ಯತೆ ಉಂಟಾಗಿ, ಪತ್ನಿ ಸೀತೆ ಹಾಗೂ ಸಹೋದರ ಲಕ್ಷ್ಮಣನ ಜೊತೆ ತನ್ನ ವನವಾಸ ಆರಂಭಿಸುವುದು ಅಯೋಧ್ಯಾ ನಗರದಿಂದಲೆ.

ಚಿತ್ರಕೃಪೆ: MuteX023

ಎಲ್ಲಿದೆ?

ಎಲ್ಲಿದೆ?

ಹಿಂದೆ ಸಾಕೇತ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಅಯೋಧ್ಯೆ ಪ್ರಸ್ತುತ ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಜಿಲ್ಲೆಯಲ್ಲಿರುವ ಪಟ್ಟಣವಾಗಿದೆ. ಪುಣ್ಯದಾಯಕ ಸರಯು ನದಿಯ ತಟದಲ್ಲಿ ನೆಲೆಸಿರುವ ಅಯೋಧ್ಯೆಯು ಫೈಜಾಬಾದ್ ನಗರ ಕೇಂದ್ರದಿಂದ ಸುಮಾರು ಎಂಟು ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲ್ಲು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Vishwaroop2006

ಜನಕರಾಜನ ಮಗಳು

ಜನಕರಾಜನ ಮಗಳು

ಜನಕಪುರ : ರಾಮನ ಪತ್ನಿ ಸೀತೆಯ ತವರು ಜನಕಪುರ. ಅಲ್ಲದೆ ಇದೆ ಸ್ಥಳದಲ್ಲಿ ರಾಮನು ಸೀತೆಯನ್ನು ವರಿಸಿದ್ದು. ಜನಕ ಮಹಾರಾಜನಿಗೆ ಉಳುಮೆಯ ಸಂದರ್ಭದಲ್ಲಿ ಸೀತೆಯು ಮಡಕೆಯೊಂದರಲ್ಲಿ ಸಿಕ್ಕಳೆಂಬ ಪ್ರತೀತಿಯಿದೆ. ವನವಾಸದ ಸಂದರ್ಭದಲ್ಲಿ ರಮನು ಈ ಸ್ಥಳಕ್ಕೆ ಭೇಟಿ ನೀಡಿದ್ದನೆಂಬ ನಂಬಿಕೆಯಿದೆ.

ಚಿತ್ರಕೃಪೆ: wikimedia

ಇಂದು ಸೀತಾಮರಿ

ಇಂದು ಸೀತಾಮರಿ

ಹಿಂದೊಮ್ಮೆ ಭಾರತದ ಬಿಹಾರ್ ರಾಜ್ಯದ ಮುಜಫರಪುರ್ ಭಾಗದಲ್ಲಿದ್ದ ಈ ಸ್ಥಳವು ಇಂದು ಸೀತಾಮರಿ/ಸೀತಾಮಡಿ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ ಹಾಗೂ ನೇಪಾಳದ ಕಠ್ಮಂಡುವಿನಿಂದ 123 ಕಿ.ಮೀ ದೂರದ ಧನುಸುವಾ ಜಿಲ್ಲೆಯಲ್ಲಿದೆ. ಭಾರತದ ಗಡಿಯಿಂದ ಕೇವಲ 20 ಕಿ.ಮೀ ಗಳಷ್ಟು ದೂರದಲ್ಲಿದೆ. ರಾಮ-ಸೀತಾ ಕಲ್ಯಾಣ ದಿನದಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಜಾನಕಿ ಮಂದಿರ.

ಚಿತ್ರಕೃಪೆ: Abhishek Dutta

ಪ್ರಯಾಗ್

ಪ್ರಯಾಗ್

ಪ್ರಯಾಗ್ : ನಂತರ ರಾಮನು ತನ್ನ ಮಡದಿ ಸೀತೆ ಹಾಗೂ ಸಹೋದರನೊಂದಿಗೆ ಜೊತೆಗೂಡಿ ಗಂಗಾ ನದಿಯನ್ನು ದಾಟಿ ತನ್ನ ಸಾಮ್ರಾಜ್ಯದಿಂದ ಬಲು ದೂರ ಬಂದು ಪ್ರಯಾಗ್ ನಲ್ಲಿದ್ದ ಭರದ್ವಾಜ ಋಷಿಗಳ ಆಶ್ರಮಕ್ಕೆ ಆಗಮಿಸಿ ವಿಶ್ರಾಂತಿ ಪಡೆಯುತ್ತಾನೆ.

ಚಿತ್ರಕೃಪೆ: wikimedia

ಅಲಹಾಬಾದ್

ಅಲಹಾಬಾದ್

ಅಂದು ಪ್ರಯಾಗ್ ಎಂದು ಹೆಚ್ಚಾಗಿ ಕರೆಯಲ್ಪಡುತ್ತಿದ್ದ ಆ ಸ್ಥಳವು ಇಂದು ಎಲ್ಲರಿಗೂ ಅಲಹಾಬಾದ್ ಹೆಸರಿನಿಂದ ಚಿರಪರಿಚಿತವಾಗಿದೆ. ಗಂಗಾ ನದಿ ತಟದ ಮೇಲೆ ನೆಲೆಸಿರುವ ಅಲಹಾಬಾದ್ ಉತ್ತರ ಪ್ರದೇಶದ ಪ್ರಮುಖ ನಗರಗಳಲ್ಲೊಂದಾಗಿದೆ. ಕುಂಭ ಮೇಳಕ್ಕೂ ಸಹ ಸಾಕಷ್ಟು ಪ್ರಖ್ಯಾತಿಗಳಿಸಿರುವ ಪಟ್ಟಣವಾಗಿದೆ ಅಲಹಾಬಾದ್.

ಚಿತ್ರಕೃಪೆ: Abhijeet Vardhan

ಚಿತ್ರಕೂಟ

ಚಿತ್ರಕೂಟ

ಚಿತ್ರಕೂಟ : ಭರತನು ತನ್ನ ಮಲ ಸಹೋದರನಾದ ರಾಮನ ಭೇಟಿಗೆ ತವಕಿಸಿ ಓಡೋಡುತ್ತ ಬರುವ ಸ್ಥಳವಿದು. ರಾಮ-ಭರತರ ಭೇಟಿಗೆ ಸಾಕ್ಷಿಯಾಗಿ ಮಿಂಚುತ್ತದೆ ಚಿತ್ರಕೂಟ. ಪ್ರಯಾಗ್ ನಂತರ ರಾಮನು ಚಿತ್ರಕೂಟಕ್ಕೆ ಆಗಮಿಸುತ್ತಾನೆ. ಈ ಸುದ್ದಿ ತಿಳಿದ ಭರಾತನು ಅಲ್ಲಿಗೆ ರಾಮನನ್ನು ಭೇಟಿ ಮಾಡಲು ಬರುತ್ತಾನೆ.

ಚಿತ್ರಕೃಪೆ: wikimedia

ಸತ್ನಾ ಜಿಲ್ಲೆಯಲ್ಲಿದೆ

ಸತ್ನಾ ಜಿಲ್ಲೆಯಲ್ಲಿದೆ

ಪ್ರಸ್ತುತ ಚಿತ್ರಕೂಟವು ಮಧ್ಯ ಪ್ರದೇಶ ರಾಜ್ಯದ ಸತ್ನಾ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಮಂದಾಕಿನಿ ನದಿ ತಟದಲ್ಲಿರುವ ಈ ಪಟ್ಟಣವು ಧಾರ್ಮಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ ಸಾಕಷ್ಟು ಮಹತ್ವಗಳಿಸಿದೆ. ರಾಮನವಮಿ ಸಂದರ್ಭದಲ್ಲಿ ಇಲ್ಲಿನ ರಾಮ ಘಾಟ್ ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆಯುತ್ತಾರೆ.

ಚಿತ್ರಕೃಪೆ: LRBurdak

ದಂಡಕಾರಣ್ಯ

ದಂಡಕಾರಣ್ಯ

ದಂಡಕಾರಣ್ಯ : ನಂತರ ರಾಮನು ಆಗಮಿಸುವ ಸ್ಥಳವೆ ದಂಡಕಾರಣ್ಯ. ಇಲ್ಲಿ ಸಾಕಷ್ಟು ರಾಕ್ಷಸರನ್ನು ಸಂಹರಿಸುತ್ತಾನೆ ರಾಮ. ಅಲ್ಲದೆ ರಾವಣನ ಸಹೋದರಿಯಾದ ಶೂರ್ಪನಖಾ ಈ ಪ್ರದೇಶದಲ್ಲೆ ಲಕ್ಷ್ಮಣನನ್ನು ಮೋಹಿಸಿ ಅವನನ್ನು ಪಡೆಯಲು ಪ್ರಯತ್ನಿಸಿ ತನ್ನ ಮೂಗನ್ನು ಕಳೆದುಕೊಳ್ಳುವ ಸ್ಥಿತಿ ಒದಗಿ ಬರುತ್ತದೆ. ಇಲ್ಲಿ ಶ್ರೀರಾಮನು ಸಾಕಷ್ಟು ಸಮಯದವರೆಗೆ ಕಾಲ ಕಳೆದನೆಂಬ ನಂಬಿಕೆಯಿದೆ.

ಚಿತ್ರಕೃಪೆ: wikimedia

ಹಲವು ರಾಜ್ಯಗಳ ಭಾಗಗಳು

ಹಲವು ರಾಜ್ಯಗಳ ಭಾಗಗಳು

ಪ್ರಸ್ತುತ ದಂಡಕಾರಣ್ಯವು ಕೇವಲ ಒಂದು ಪ್ರದೇಶವಾಗಿರದೆ ಮಹಾರಾಷ್ಟ್ರ, ಒಡಿಶಾ, ಛತ್ತೀಸಗಡ್ ಹಾಗೂ ತೆಲಂಗಾಣ ರಾಜ್ಯದ ಹಲವು ಭಾಗಗಳನ್ನು ಒಳಗೊಂಡಿದೆ. ಈ ರಾಜ್ಯಗಳಲ್ಲಿರುವ ಪ್ರಾಕೃತಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ದಂಡಕಾರಣ್ಯದ ನೈಜ ನಿಸರಗದ ಸವಿ ಪಡೆಯಬಹುದು. ಅಲ್ಲದೆ ನಾಶಿಕ್ ಗೂ ಸಹ ಭೇಟಿ ನಿಡಬಹುದು. ಶೂರ್ಪನಖಳ ಪ್ರಸಂಗ ಇಲ್ಲಿಯೆ ಜರುಗಿರುವ ಕಾರಣ ಇದಕ್ಕೆ ನಾಶಿಕ್ ಎಂಬ ಹೆಸರು ಬಂದಿದೆ. ನಾಶಿಕ್ ನಲ್ಲಿರುವ ರಾಮ, ಸೀತಾ ಹಾಗೂ ಲಕ್ಷ್ಮಣ ದೇವಾಲಯ.

ಚಿತ್ರಕೃಪೆ: Ekabhishek

ಕಾಲಾರಾಮ್ ದೇವಾಲಯದ ಸುತ್ತಮುತ್ತಲು

ಕಾಲಾರಾಮ್ ದೇವಾಲಯದ ಸುತ್ತಮುತ್ತಲು

ಪಂಚವಟಿ : ರಾಮನು ಸುಂದರವಾದ ಗುಡಿಸಲೊಂದನ್ನು ನಿರ್ಮಿಸಿ ಇಲ್ಲಿ ವಾಸಿಸಿದ್ದನು. ಪ್ರಸ್ತುತ ನಾಶಿಕ್ ಪಟ್ಟಣದ ಕಾಲಾರಾಮ್ ದೇವಾಲಯದ ಸುತ್ತಮುತ್ತಲಿನ ಪ್ರದೇಶವೆ ಹಿಂದೆ ಪಂಚವಟಿಯಾಗಿತ್ತೆಂಬ ನಂಬಿಕೆಯಿದೆ.

ಚಿತ್ರಕೃಪೆ: wikipedia

ಶಾಹಿ ಸ್ನಾನದ ಕೊಳ

ಶಾಹಿ ಸ್ನಾನದ ಕೊಳ

ರಾಮಕುಂಡ : ಇಲ್ಲಿ ರಾಮ, ಲಕ್ಷ್ಮಣ, ಸೀತೆಯರು ಪ್ರತಿ ದಿನ ಸ್ನಾನ ಮಾಡಲು ಉಪಯೋಗಿಸುತ್ತಿದ್ದ ಕೊಳವೆನ್ನಲಾಗಿದೆ. ಹೀಗಾಗಿ ನಾಶಿಕ್ ನಲ್ಲಿರುವ ಈ ಕೊಳಕ್ಕೆ ಸಾಕಷ್ಟು ಮಹತ್ವವಿದ್ದು ಕುಂಭ ಮೆಳದ ಸಂದರ್ಭದಲ್ಲಿ ಕೋಟಿ ಕೋಟಿ ಸಂಖ್ಯೆಯಲ್ಲಿ ಭಕ್ತಾದಿಗಳು ಇದಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Arian Zwegers

ಭದ್ರಾಚಲಂ

ಭದ್ರಾಚಲಂ

ಭದ್ರಾಚಲಂ : ನಂತರ ಪಂಚವಟಿಯಿಂದ ನಿರ್ಗಮಿಸಿದ ರಾಮನು ಲಕ್ಷ್ಮಣ ಹಾಗೂ ಸೀತೆಯರೊಡನೆ ಸಂಚರಿಸುತ್ತ ಗೋದಾವರಿ ನದಿಯನ್ನು ದಾಟಿ ಭದ್ರಾಚಲಂನಿಂದ 35 ಕಿ.ಮೀ ದೂರದಲ್ಲಿರುವ ಪರ್ಣಶಾಲೆಯಲ್ಲಿ ಬಂದು ನೆಲೆಸಿದನೆಂಬ ಪ್ರತೀತಿಯಿದೆ. ಇದಕ್ಕೂ ಮೊದಲು ತೆಲಂಗಾಣ ರಾಜ್ಯದಲ್ಲಿರುವ ಭದ್ರಾಚಲಂನಲ್ಲಿ ಕಂಚರ್ಲಾ ಗೋಪಣ್ಣ ಎಂಬ ಭಕ್ತನೊಬ್ಬನಿಗೆ ಸಹಾಯ ಮಾಡಿ ಆತನು ರಾಮನ ಪರಮ ಭಕ್ತನಾದ ಭದ್ರಾಚಲ ರಾಮದಾಸನಾಗುತ್ತಾನೆ. ಭದ್ರಾಚಲಂನಲ್ಲಿ ರಾಮನಿಗೆ ಮುಡಿಪಾದ ಅದ್ಭುತ ದೇವಾಲಯವನ್ನು ಕಾಣಬಹುದು.

ಚಿತ್ರಕೃಪೆ: Trived m96

ಪರ್ಣಶಾಲೆ

ಪರ್ಣಶಾಲೆ

ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯ ದೊಮ್ಮುಗುಡೆಂ ತಾಲೂಕಿನ ಪರ್ಣಶಾಲೆಯಲ್ಲಿ ರಾಮನು ವನವಾಸದ ಸಂದರ್ಭದಲ್ಲಿ ಬಂದು ನೆಲೆಸಿದ್ದನೆಂಬ ಪ್ರತೀತಿಯಿದೆ. ನಂಬಿಕೆಗಳ ಪ್ರಕಾರ, ರಾಮನು 14 ವರ್ಷಗಳ ಕಾಲ ಇಲ್ಲಿ ತಂಗಿದ್ದನಂತೆ.

ಚಿತ್ರಕೃಪೆ: Adityamadhav83

ರಾಧಾ ಗುಡ್ಡ

ರಾಧಾ ಗುಡ್ಡ

ಇಲ್ಲಿ ರಾಧಾಗುಡ್ಡ ಎಂಬ ಸ್ಥಳವೊಂದಿದ್ದು ಪ್ರತಿ ದಿನ ಸೀತೆಯು ಅಲ್ಲಿರುವ ಕೊಳದ ನೀರಿನಿಂದಲೆ ಬಟ್ಟೆಗಳನ್ನು ಒಗೆದು ಆರಲು ಹಾಕುತ್ತಿದ್ದಳಂತೆ. ಅದರ ಗುರುತು ಇಂದಿಗೂ ಕಾಣಬಹುದಾಗಿದೆಯಂತೆ!

ಚಿತ್ರಕೃಪೆ: vimal_kalyan

ಈ ಸ್ಥಳದಲ್ಲೆ!

ಈ ಸ್ಥಳದಲ್ಲೆ!

ಇನ್ನೊಂದು ಸ್ವಾರಸ್ಯವೆಂದರೆ ಈ ಸ್ಥಳದಿಂದಲೆ ರಾಕ್ಷಸ ರಾಜ ರಾವಣನು ಸೀತೆಯನ್ನು ಅಪಹರಿಸಿದ್ದನೆನ್ನಲಾಗುತ್ತದೆ.

ಚಿತ್ರಕೃಪೆ: Pranayraj1985

ಲೇಪಾಕ್ಷಿ

ಲೇಪಾಕ್ಷಿ

ಲೇಪಾಕ್ಷಿ : ಸೀತೆಯನ್ನು ಪುಷ್ಪಕ ವಿಮಾನದಲ್ಲಿ ರಾವಣನು ಅಪಹರಿಸಿಕೊಂಡು ಹೋಗುವಾಗ ಜಟಾಯು ಪಕ್ಷಿಯು ಆಕೆಯನ್ನು ರಕ್ಷಿಸಲು ಶತಾಯ ಗತಾಯ ಪ್ರಯತ್ನಿಸಿ ರಾವಣನಿಂದ ತನ್ನ ರೆಕ್ಕೆಗಳನ್ನು ಕಳೆದುಕೊಂಡು ಪ್ರಾಣ ಬಿಡುವ ಸ್ಥಿತಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಸೀತೆಯನ್ನು ಹುಡುಕಿಕೊಂಡು ಇಲ್ಲಿಗೆ ಬರುವ ರಾಮನು ಜಟಾಯುಯನ್ನು ಕುರಿತು ಏ ಪಕ್ಷಿ ಎಂದು ಆರೈಕೆ ಮಾಡಿ ಅದಕ್ಕೆ ಮೋಕ್ಷ ಕರುಣಿಸುತ್ತಾನೆ. ಅಂತೆಯೆ ಇದಕ್ಕೆ ಲೇಪಾಕ್ಷಿ ಎಂಬ ಹೆಸರು ಬಂದಿದೆ. ಬೆಂಗಳೂರಿನಿಂದ ಕೇವಲ 120 ಕಿ.ಮೀ ದೂರವಿರುವ ಲೇಪಾಕ್ಷಿಯು ಆಂಧ್ರದ ಅನಂತಪುರ ಜಿಲ್ಲೆಯಲ್ಲಿರುವ ಗ್ರಾಮ.

ಚಿತ್ರಕೃಪೆ: Ranju.barman

ಕಿಷ್ಕಿಂಧೆ

ಕಿಷ್ಕಿಂಧೆ

ಕಿಷ್ಕಿಂಧೆ : ಹೀಗೆ ಸೀತೆಯ ಸುಳಿವುಗಳನ್ನು ಪಡೆಯುತ್ತ ರಾಮ ಲಕ್ಷ್ಮಣರು ಆಗಮಿಸುವ ಮುಂದಿನ ಪ್ರಮುಖ ಸ್ಥಳವೆ ಕಿಷ್ಕಿಂಧೆ. ಈ ಒಂದು ಸ್ಥಳದಲ್ಲಿಯೆ ರಾಮನಿಗೆ ಅವನ ಪರಮ ಭಕ್ತನಾದ ಆಂಜನೇಯನ ಭೇಟಿಯಾಗುತ್ತದೆ. ಹಾಗಾಗಿ ವನವಾಸದ ಸಂದರ್ಭದಲ್ಲಿ ಕಿಷ್ಕಿಂಧೆಗೆ ರಾಮ ಲಕ್ಷ್ಮಣರ ಆಗಮನ ಪ್ರಮುಖವಾಗಿ ಕಂಡುಬರುತ್ತದೆ.

ಚಿತ್ರಕೃಪೆ: wikipedia

ಇಂದಿನ ಹಂಪಿ

ಇಂದಿನ ಹಂಪಿ

ವಿಜಯನಗರ ಸಾಮ್ರಾಜ್ಯದ ವೈಭವಯುತ ರಾಜಧಾನಿಯಾಗಿ ಮೆರೆದಿದ್ದ ಇಂದಿನ ಹಂಪಿಯಲ್ಲಿ ಹರಿದಿರುವ ತುಂಗಭದ್ರಾ ನದಿಯ ಸುತ್ತಮುತ್ತಲಿನ ಪ್ರದೇಶಗಳೆ, ಹಿಂದೆ ಕಿಷ್ಕಿಂಧೆಯಾಗಿತ್ತು ಎಂದು ತಜ್ಞ ಇತಿಹಾಸಕಾರರ ಪ್ರಕಾರ ಹೇಳಲಾಗಿದೆ. ಪಂಪ ಸರೋವರ.

ಚಿತ್ರಕೃಪೆ: Moogsi

ಋಷ್ಯಮುಖ ಪರ್ವತ

ಋಷ್ಯಮುಖ ಪರ್ವತ

ಇಲ್ಲಿರುವ ಋಷ್ಯಮುಖ ಪರ್ವತದಲ್ಲಿ ರಾಮ ಹಾಗೂ ಲಕ್ಷ್ಮಣರು ಪ್ರಥಮ ಬಾರಿಗೆ ಆಂಜನೇಯನನ್ನು ಸಂಧಿಸುತ್ತಾರೆ.

ಚಿತ್ರಕೃಪೆ: wikimedia

ದೇವರಾಯನದುರ್ಗ

ದೇವರಾಯನದುರ್ಗ

ನಾಮದ ಚಿಲುಮೆ : ಹೀಗೆ ಕಿಷ್ಕಿಂಧೆಯಿಂದ ದಕ್ಷಿಣಾಭಿಮುಖವಾಗಿ ತೆರಳುವ ರಾಮ ಮುಂದೆ ಹಲವಾರು ಸ್ಥಳಗಳ ಮೂಲಕ ಹಾದು ಹೋಗುತ್ತಾನಾದರೂ ಕೌತುಕವಾಗಿ ಗಮನಸೆಳೆವೆ ಒಂದು ಸ್ಥಳವೆಂದರೆ ತುಮಕೂರು ಜಿಲ್ಲೆಯಲ್ಲಿರುವ ದೇವರಾನದುರ್ಗ ಎಂಬಲ್ಲಿರುವ ನಾಮದ ಚಿಲುಮೆ. ಶ್ರೀ ರಾಮನು ಲಂಕೆಗೆ ಹೋಗುವಾಗ ಈ ಸ್ಥಳದಲ್ಲಿ ನೆಲೆನಿಂತನಂತೆ. ರಾಮನು ತನ್ನ ಹಣೆಗೆ 'ನಾಮ' ಇಡಲು ನೀರಿಗಾಗಿ ಹುಡುಕಾಡಿದನಂತೆ. ನೀರು ಎಲ್ಲಿ ಸಿಗದಿದ್ದಾಗ ತನ್ನ ಬಿಲ್ಲನ್ನು ತೆಗೆದು ಈ ಸ್ಥಳದಲ್ಲಿ ಬಾಣ ಬಿಟ್ಟಾಗ, ಇಲ್ಲಿನ ನೀರಿನ ಚಿಲುಮೆ ಹುಟ್ಟಿತಂತೆ. ಆದ್ದರಿಂದ ಇದನ್ನು ನಾಮದ ಚಿಲುಮೆ ಅಂದರೆ ರಾಮ ಚಿಲುಮೆ ಎಂದು ಕರೆಯುತ್ತಾರೆ.

ಚಿತ್ರಕೃಪೆ: Siddarth P Raj

ರಾಮೇಶ್ವರಂ

ರಾಮೇಶ್ವರಂ

ರಾಮೇಶ್ವರಂ : ಲಂಕೆಗೆ ರಾವಣನೊಂದಿಗೆ ಯುದ್ಧ ಮಾಡಲು ರಾಮ ಸೇತುವೆಯ ಮೂಲಕ ತೆರಳುವ ಮುನ್ನ ಕೊನೆಯದಾಗಿ ಭೇಟಿ ನೀಡಿದ ಭಾರತದ ಸ್ಥಳವೆ ರಾಮೇಶ್ವರಂ. ಇಲ್ಲಿ ರಾಮನು ರಾಮನಾಅಥಪುರದಲ್ಲಿ ಶಿವನಿಗೆ ಮುಡಿಪಾದ ರಾಮೇಶ್ವರನನ್ನು ಕುರಿತು ಪೂಜಿಸುತ್ತಾನೆ ಹಾಗೂ ಶಿವನಿಂದ ಆಶೀರ್ವಾದ ಪಡೆಯುತ್ತಾನೆ. ನಂಬಿಕೆಯ ಪ್ರಕಾರ, ಸ್ವತಃ ರಾಮನೆ ಈಶ್ವರನನ್ನು ಇಲ್ಲಿ ಪೂಜಿಸಿರುವುದರಿಂದ ಈ ಸ್ಥಳಕ್ಕೆ ರಾಮೇಶ್ವರಂ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: BOMBMAN

ಇಲ್ಲಿಂದ ರಾಮ ನೇರ ಲಂಕೆಗೆ...

ಇಲ್ಲಿಂದ ರಾಮ ನೇರ ಲಂಕೆಗೆ...

ಪ್ರಸ್ತುತ ತಮಿಳುನಾಡು ರಾಜ್ಯದಲ್ಲಿರುವ ರಾಮೇಶ್ವರಂ ಭಾರತದ ಪ್ರಮುಖ ತೀರ್ಥಕ್ಷೇತ್ರಗಳ ಪೈಕಿ ಒಂದಾಗಿದ್ದು ಸಾಕಷ್ಟು ಧಾರ್ಮಿಕ ಮಹತ್ವವನ್ನು ಪಡೆದಿರುವ ದೇವಾಲಯ ಪಟ್ಟಣವಾಗಿದೆ.

ಚಿತ್ರಕೃಪೆ: wishvam

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X