Search
  • Follow NativePlanet
Share
» »ಚುಕು ಬುಕು ನೀಲ್ಗಿರಿ ಮೌಂಟೆನ್ ರೈಲು

ಚುಕು ಬುಕು ನೀಲ್ಗಿರಿ ಮೌಂಟೆನ್ ರೈಲು

By Vijay

ಒಮ್ಮೊಮ್ಮೆ ಪ್ರವಾಸಕ್ಕೆ ಹೋದಾಗ ಕೆಲ ಅದ್ಭುತ ಸ್ಥಳಗಳು ಹೆಚ್ಚುಕಡಿಮೆ ಅಣತಿ ದೂರದಲ್ಲೆ ನೆಲೆಸಿದ್ದರೆ ಆಗುವ ಆನಂದ ಅಷ್ಟಿಷ್ಟಲ್ಲ. ಸಾಮಾನ್ಯವಾಗಿ ಎಲ್ಲರೂ ಮೊದಲೆ ಸ್ಥಳಗಳ ಕುರಿತು ತಿಳಿದುಕೊಂಡು ಹೊರಡುತ್ತಾರಾದರೂ ಕೆಲವರು ಅನೀರಿಕ್ಷಿತ ಸ್ಥಳಗಳಿಗೆ ದಿಢೀರನೆ ಭೇಟಿ ನೀಡಲು ಬಯಸುತ್ತಾರೆ.

ಮೆಟ್ಟುಪಾಳ್ಯಂ, ಕೂಣ್ಣೂರು ಹಾಗೂ ಊಟಿ, ಈ ಮೂರು ಅಮೋಘ ತಾಣಗಳು ಒಂದೆ ದಿಸೆಯಲ್ಲಿ ಸಾಗುವಾಗ ಸಿಗುತ್ತವೆ. ಅಲ್ಲದೆ ಈ ಮೂರು ತಾಣಗಳ ನಡುವಿನ ಅಂತರ 100 ಕಿ.ಮೀ ಕೂಡ ದಾಟುವುದಿಲ್ಲ. ಅದರಲ್ಲೂ ವಿಶೇಷವಾಗಿ ಮೌಂಟೆನ್ ರೈಲಿನ ಮೂಲಕ ಈ ಸ್ಥಳಗಳಿಗೆ ಭೇಟಿ ನೀಡಿದಾಗ ಪ್ರದೇಶದ ಅದ್ಭುತ ಸೌಂದರ್ಯವು ಪ್ರವಾಸಿಗರ ಅಕ್ಷಿಪಟಲಗಳಲ್ಲಿ ಪಕ್ಷಿಗಳಂತೆ ಹಾರುತ್ತ ಹಾರುತ್ತ ಇಳಿಯುತ್ತದೆ.

ಈ ಮೂರು ಪ್ರದೇಶಗಳು ತಮಿಳುನಾಡು ರಾಜ್ಯದಲ್ಲಿರುವ ಪ್ರಖ್ಯಾತ ಗಿರಿಧಾಮ ಪ್ರದೇಶಗಳಾದರೂ ಸಹ ವರ್ಷಪೂರ್ತಿ ಭೇಟಿ ನೀಡಲು ಯೋಗ್ಯವಾಗಿವೆ. ಚಳಿಗಾಲದ ಸಮಯದಲ್ಲಂತೂ ಚಳಿಯಿಂದ ಕೊರೆಯುವ ಈ ತಾಣಗಳು ಸಾಕಷ್ಟು ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿದೆ. ಅಂತೆಯೆ ಯಾವುದೇ ಕಾಲವಿರಲಿ ಇಲ್ಲಿ ಜನರ, ಪ್ರವಾಸಿಗರ ಚಟುವಟಿಕೆ ಇದ್ದೆ ಇರುತ್ತದೆ.

ಪ್ರಸ್ತುತ ಲೇಖನವು ಮೆಟ್ಟುಪಾಳ್ಯಂ ನಿಂದ ಕೂಣ್ಣೂರು ಹಾಗೂ ಕೊನೆಯದಾಗಿ ಊಟಿಯವರೆಗೆ ರೈಲು ಪಯಣ ಮಾಡಿಸುತ್ತದೆ. ಹೊರಡಬೇಕಾದ ರೈಲಿನ ಸಂಖ್ಯೆ 56136. ಬೆಳಿಗ್ಗೆ 7 ಘಂಟೆಗೆ ಮೆಟ್ಟುಪಾಳ್ಯಂನಿಂದ ಹೊರಟು ಈ ರೈಲು ಮಧ್ಯಾಹ್ನ 12 ಘಂಟೆಯ ಸಮಯಕ್ಕೆ ಊಟಿ ತಲುಪುತ್ತದೆ. ವಾರದ ಎಲ್ಲ ದಿನಗಳಲ್ಲೂ ಈ ರೈಲಿನ ಸೇವೆಯನ್ನು ಪ್ರವಾಸಿಗರು ಪಡೆಯಬಹುದಾಗಿದೆ.

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಕೋಯಮತ್ತೂರು ಜಿಲ್ಲೆಯ ತಾಲೂಕು ಪಟ್ಟಣವಾಗಿರುವ ಮೆಟ್ಟುಪಾಳ್ಯಂ ಸುಂದರ ನೀಲ್ಗಿರಿ ಬೆಟ್ಟಗಳ ಬುಡದಲ್ಲಿ ನೆಲೆಸಿದೆ. ನಿಜ ಹೇಳಬೇಕೆಂದರೆ ಊಟಿಗೆ ತೆರಳುವ ಸುಪ್ರಸಿದ್ಧ ನೀಲ್ಗಿರಿ ಮೌಂಟೆನ್ ರೈಲಿನ ಪ್ರಾರಂಭಿಕ ಸ್ಥಳವಾಗಿದೆ ಮೆಟ್ಟುಪಾಳ್ಯಂ.

ಚಿತ್ರಕೃಪೆ: Naveen K S

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಪುಟಾಣಿ ರೈಲು ಮೆಟ್ಟುಪಾಳ್ಯಂ ಮೂಲಕ ಸಾಗುವಾಗ....

ಚಿತ್ರಕೃಪೆ: David Brossard

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಪುಟಾಣಿ ರೈಲು ಮೆಟ್ಟುಪಾಳ್ಯಂ ಮೂಲಕ ಸಾಗುವಾಗ....

ಚಿತ್ರಕೃಪೆ: David Brossard

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಪುಟಾಣಿ ರೈಲು ಮೆಟ್ಟುಪಾಳ್ಯಂ ಮೂಲಕ ಸಾಗುವಾಗ....

ಚಿತ್ರಕೃಪೆ: David Brossard

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಪುಟಾಣಿ ರೈಲು ಮೆಟ್ಟುಪಾಳ್ಯಂ ಮೂಲಕ ಸಾಗುವಾಗ....

ಚಿತ್ರಕೃಪೆ: David Brossard

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಪುಟಾಣಿ ರೈಲು ಮೆಟ್ಟುಪಾಳ್ಯಂ ಮೂಲಕ ಸಾಗುವಾಗ....

ಚಿತ್ರಕೃಪೆ: Jon Connell

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಪುಟಾಣಿ ರೈಲು ಮೆಟ್ಟುಪಾಳ್ಯಂ ಮೂಲಕ ಸಾಗುವಾಗ....

ಚಿತ್ರಕೃಪೆ: Jon Connell

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಪುಟಾಣಿ ರೈಲು ಮೆಟ್ಟುಪಾಳ್ಯಂ ಮೂಲಕ ಸಾಗುವಾಗ....

ಚಿತ್ರಕೃಪೆ: Jon Connell

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಪುಟಾಣಿ ರೈಲು ಮೆಟ್ಟುಪಾಳ್ಯಂ ಮೂಲಕ ಸಾಗುವಾಗ....

ಚಿತ್ರಕೃಪೆ: Kent Spillner

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಮೆಟ್ಟುಪಾಳ್ಯಂ ನಂತರ ಕೂ ಕೂ ಎಂದು ಕೂಗುತ್ತ ಈ ಊಗಿ ಬಂಡೆಯ ರೈಲು ಹಿಲ್ ಗ್ರೋವ್ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡುತ್ತದೆ. ಮುಂಜಾನೆಯ ಸಮಯ, ಸೂರ್ಯನ ಎಳೆ ಕಿರಣಗಳು, ತಂಪು ತಂಪಾದ ವಾತಾವರಣ ಇವುಗಳ ಮೇಲೆ ಅದ್ವಿತೀಯ ಪ್ರಕೃತಿ ಸೌಂದರ್ಯ.

ಚಿತ್ರಕೃಪೆ: David Brossard

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಹಿಲ್ ಗ್ರೋವ್ ನಿಂದ ಹೊರಡುವ ಈ ರೈಲು ನಂತರದಲ್ಲಿ ಪ್ರವಾಸಿ ಆಕರ್ಷಣೆಯಿರುವ ಕೂಣ್ಣೂರು ಪಟ್ಟಣವನ್ನು ತಲುಪುತ್ತದೆ. ಮಧು ಚಂದ್ರದ ತಾಣವಾಗಿಯೂ ಸಹ ಪ್ರಖ್ಯಾತಿ ಗಳಿಸಿರುವ ಕೂಣ್ಣೂರು ಒಂದು ಅದ್ಭುತ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Omsarkar

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಕೂಣ್ಣೂರಿನಲ್ಲಿರುವ ಮನಸೂರೆಗೊಳ್ಳುವ ಅದ್ಭುತವಾದ ಸಿಮ್ಸ್ ಪಾರ್ಕ್.

ಚಿತ್ರಕೃಪೆ: Thangaraj Kumaravel

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಕೂಣ್ಣೂರಿನಲ್ಲಿರುವ ಡಾಲ್ಫಿನ'ಸ್ ನೋಸ್ ಎಂಬ ವೀಕ್ಷಣಾ ಕೆಂದ್ರದಿಂದ ಕಂಡು ಬರುವ ರೋಮಾಂಚನ ದೃಶ್ಯ.

ಚಿತ್ರಕೃಪೆ: Jon Connell

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಕೂಣ್ಣೂರಿನ ನಂತರ ಚುಕು ಬುಕು ಎಂದು ಮುಂದೆ ಸಾಗುವ ರೈಲು ವೆಲ್ಲಿಂಗ್ಟನ್ ರೈಲು ನಿಲ್ದಾಣಕ್ಕೆ ಬಂದಿಳಿಯುತ್ತದೆ. ವೆಲ್ಲಿಂಗ್ಟನ್ ಒಂದು ಚಿಕ್ಕ ಹಾಗೂ ಸುಂದರವಾದ ಪಟ್ಟಣವಾಗಿದ್ದು ಭಾರತೀಯ ಸಶಸ್ತ್ರ ಸೈನ್ಯ ಸಿಬ್ಬಂದಿಯ ಅನುಕೂಲಕ್ಕಾಗಿ ತೆರೆಯಲಾದ ಕಾಲೇಜಿಗೆ ಬಹು ಖ್ಯಾತಿ ಗಳಿಸಿದೆ.

ಚಿತ್ರಕೃಪೆ: Shrikar Galgali

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ವೆಲ್ಲಿಂಗ್ಟನ್ ನಂತರ ಮುಂದೆ ಸಾಗಿದಾಗ ದೊರೆಯುವ ನಿಲ್ದಾಣವೆ ಅರವಂಕಾಡು.

ಚಿತ್ರಕೃಪೆ: Sayowais

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಅರವಂಕಾಡು ರೈಲು ನಿಲ್ದಾಣದ ಮತ್ತೊಂದು ನೋಟ.

ಚಿತ್ರಕೃಪೆ: आशीष भटनागर

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಅರವಂಕಾಡುವಿನ ನಂತರ ಹೀಗೆ ತನ್ನ ಪಯಣವನ್ನು ಮುಂದುವರೆಸುವ ಈ ನೀಲ್ಗಿರಿ ರೈಲು ತನ್ನ ಮುಂದಿನ ನಿಲ್ದಾಣವಾದ ಕೆಟ್ಟಿಗೆ ಸಾಗುತ್ತದೆ.

ಚಿತ್ರಕೃಪೆ: AHEMSLTD

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಕೆಟ್ಟಿ ರೈಲು ನಿಲ್ದಾಣದ ಒಂದು ನೋಟ.

ಚಿತ್ರಕೃಪೆ: Rsrikanth05

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಕೆಟ್ಟಿಯಿಂದ ಸಾಗುವ ರೈಲು ಮುಂದೆ ಉದಕಮಂಡಲದ ಹಿಂದಿನ ನಿಲ್ದಾಣವಾದ ಲವ್ ಡೇಲ್ ಗೆ ಬಂದಿಳಿಯುತ್ತದೆ. ನೀಲ್ಗಿರಿ ಬೆಟ್ಟಗಳಲ್ಲಿ ನೆಲೆಸಿರುವ ಲವ್ ಡೇಲ್ ಒಂದು ಸುಂದರಮಯ ಚಿಕ್ಕ ಪಟ್ಟಣವಾಗಿದೆ. ಪ್ರಾವಾಸೋದ್ಯಮದ ದೃಷ್ಟಿಯಿಂದ ಸಾಕಷ್ಟು ಮಹತ್ವವನ್ನು ಪಡೆದಿದೆ.


ಚಿತ್ರಕೃಪೆ: Pratheepps

ತ್ರಿವಳಿ ಪ್ರವಾಸಿ ತಾಣಗಳು:

ತ್ರಿವಳಿ ಪ್ರವಾಸಿ ತಾಣಗಳು:

ಮೆಟ್ಟುಪಾಳ್ಯಂ ನಿಂದ ಪ್ರಾರಂಭವಾದ ಈ ರೈಲಿನ ಪಯಣ ಕೊನೆಯದಾಗಿ ಲವ್ ಡೇಲ್ ನಂತರದಲ್ಲಿ "ಅಬ್ಬಾ ಅಂತೂ ಮುಟ್ಟಿದೆ" ಎನ್ನುವ ರೀತಿಯಲ್ಲಿ ದಕ್ಷಿಣ ಭಾರತದ ಸುಪ್ರಸಿದ್ಧ ಪ್ರವಾಸಿ ತಾಣವಾದ ಊಟಿ ಪಟ್ಟಣವನ್ನು ತಲುಪುತ್ತದೆ. ಊಟಿ ಕುರಿತು ಇಲ್ಲಿ ತಿಳಿಯಿರಿ.

ಚಿತ್ರಕೃಪೆ: Bluemangoa2z

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X