Search
  • Follow NativePlanet
Share
» »ಇಲ್ಲಿ ಒಂದು ರಾತ್ರಿ ಕಳೆಯೋ ಧೈರ್ಯ ನಿಮಗಿದ್ಯಾ?

ಇಲ್ಲಿ ಒಂದು ರಾತ್ರಿ ಕಳೆಯೋ ಧೈರ್ಯ ನಿಮಗಿದ್ಯಾ?

ಭೂತ, ಪ್ರೇತಗಳು ನಿಜವಾಗಿಯೂ ಇದೆಯೋ, ಇಲ್ಲವೋ ಅನ್ನೋದನ್ನು ಹೇಳಲು ಸಾಧ್ಯವಿಲ್ಲ. ಸ್ವಲ್ಪ ಮಂದಿ ಇದನ್ನು ನಂಬಿದರೆ ಇನ್ನೂ ಕೆಲವರು ನಂಬೋದಿಲ್ಲ. ಆದರೆ ಭೂತ, ಪ್ರೇತಾತ್ಮಗಳಿಗೆ ಸಂಬಂಧಿಸಿದ ಕಥೆಗಳು ಮಾತ್ರ ಇಡೀ ದೇಶಾದ್ಯಂತ ಕೇಳಲು ಸಿಗುತ್ತದೆ. ಒಂದೊಂದು ಸ್ಥಳದಲ್ಲಿ ಒಂದೊಂದು ರೀತಿಯ ಕಥೆಗಳಿವೆ. ಇಂದು ನಾವು ಅಂತಹದ್ದೇ ಕೆಲವು ಪ್ರೇತಭಾದಿತ ಸ್ಥಳಗಳ ಬಗ್ಗೆ ತಿಳಿಸಲಿದ್ದೇವೆ.

ಬ್ರಿಜ್ ಭವನ್, ಕೋಟಾ ರಾಜಸ್ತಾನ್

ಬ್ರಿಜ್ ಭವನ್, ಕೋಟಾ ರಾಜಸ್ತಾನ್

PC: youtube

ರಾಜಸ್ತಾನ್‌ನಲ್ಲಿರುವ ಸುಂದರ ಹೋಟೆಲ್ ಇದಾಗಿದೆ. ೧೭೮ ವರ್ಷ ಪುರಾತನ ಈ ಹೋಟೆಲ್‌ನಲ್ಲಿ ರಾಜಸ್ತಾನದ ರಾಜಮನೆತನದವರು ವಾಸಿಸುತ್ತಿದ್ದರು. ೧೯೮೦ರಲ್ಲಿ ಇದನ್ನು ಹೋಟೆಲ್ ಆಗಿ ಪರಿವರ್ತಿಸಲಾಯಿತು. ಇಲ್ಲಿ ಮೇಜರ್ ಬರ್ಟನ್‌ನ ಭೂತ ಅಡ್ಡಾಡುತ್ತಿದೆ ಎನ್ನುತ್ತಾರೆ.

ಅಂಬೂರಿಯ ಈ ಪ್ರಕೃತಿ ಸೌಂದರ್ಯವನ್ನು ನೋಡಲೇ ಬೇಕುಅಂಬೂರಿಯ ಈ ಪ್ರಕೃತಿ ಸೌಂದರ್ಯವನ್ನು ನೋಡಲೇ ಬೇಕು

ಬ್ರಿಜ್ ಭವನ್

ಬ್ರಿಜ್ ಭವನ್

ಇಲ್ಲಿ ಮೇಜರ್ ತನ್ನ ಪರಿವಾರದ ಜೊತೆಗೆ 13 ವರ್ಷ ನೆಲೆಸಿದ್ದರಂತೆ. ಮೇಜರ್‌ನ್ನು ಭಾರತೀಯ ಸಿಪಾಯಿ ಹತ್ಯೆಗೆದರು. ಅಂದಿನಿಂದ ಅಲ್ಲಿ ಮೇಜರ್‌ನ ಪ್ರೇತಾತ್ಮ ಅಡ್ಡಾಡುತ್ತಿದೆ ಎನ್ನಲಾಗುತ್ತದೆ.

ತಾಜ್‌ಮಹಲ್ ಮುಂಬೈ

ತಾಜ್‌ಮಹಲ್ ಮುಂಬೈ

ಮುಂಬೈನ ತಾಜ್‌ ಹೋಟೆಲ್‌ನಲ್ಲೂ ಪ್ರೇತಾತ್ಮಗಳು ಅಡ್ಡಾಡುತ್ತವೆ ಎನ್ನೋದನ್ನು ಕೇಳಿದ್ರೆ ನಿಮಗೆ ಶಾಕ್ ಆಗೋದು ಖಂಡಿತ. ಈ ಹೋಟೆಲ್‌ನ್ನು ಫ್ರೆಂಚ್‌ನ ಆರ್ಕಿಟೆಕ್ಕಟ್‌ ಡಬ್ಲ್ಯು ಎ ಚೇಂಬರ್ಸ್ ಡಿಸೈನ್ ಮಾಡಿದ್ದು, ಅವರು ಇಂಗ್ಲೆಂಡ್‌ ಪ್ರವಾಸದಿಂದ ಹಿಂದಿರುಗುಗಿದಾಗ ಅವರಿಗೆ ಈ ಕಟ್ಟಡವನ್ನು ನೋಡಿ ಶಾಕ್ ಆಗಿತ್ತಂತೆ.

ಭೂತ, ಪ್ರೇತಗಳನ್ನು ಹೊರದಬ್ಬುವ ಪ್ರಭಾವಕಾರಿ ಸ್ಥಳಗಳಿವುಭೂತ, ಪ್ರೇತಗಳನ್ನು ಹೊರದಬ್ಬುವ ಪ್ರಭಾವಕಾರಿ ಸ್ಥಳಗಳಿವು

ತಾಜ್ ಮುಂಬೈ

ತಾಜ್ ಮುಂಬೈ

ಯಾಕೆಂದ್ರೆ ಅವರು ಡಿಸೈನ್ ಮಾಡಿದ ರೀತಿಯಲ್ಲಿ ಈ ಕಟ್ಟಡ ನಿರ್ಮಾಣವಾಗಿರಲಿಲ್ಲ. ಇದರಿಂದ ಜಿಗುಪ್ಸೆಗೊಂಡು ಚೆಂಬರ್ಸ್ ಹೋಟೆಲ್‌ನ ಐದನೇ ಮಹಡಿಯಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡರು. ಅಂದಿನಿಂದ ಚೆಂಬರ್ಸ್ ಆತ್ಮ ಅಲ್ಲಿ ಓಡಾಡುತ್ತಿದೆ ಎನ್ನಲಾಗುತ್ತದೆ.

ಹೋಟೆಲ್ ಸವಾಯಿ

ಹೋಟೆಲ್ ಸವಾಯಿ

PC: youtube

ಮಸೂರಿಯ ಹೋಟೆಲ್ ಸವಾಯಿಯ ಕೋಣೆಯೊಂದರಲ್ಲಿ ೧೯೧೦ರಲ್ಲಿ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಳು. ಆಕೆಯನ್ನು ವಿಷಕೊಟ್ಟು ಕೊಲೆ ಮಾಡಲಾಗಿದೆ ಎನ್ನಲಾಗುತ್ತದೆ. ಆಕೆ ಸತ್ತಂದಿನಿಂದ ಆ ಹೋಟೆಲ್‌ನಲ್ಲಿ ಆಕೆಯ ಪ್ರೇತಾತ್ಮ ತಿರುಗಾಡುತ್ತಿದೆ ಎನ್ನಲಾಗುತ್ತದೆ.

ಬೆಂಗಳೂರಿನ ಈ ಕಾರ್ಯ ಸಿದ್ಧಿ ಹನುಮನಿಗೆ ಸಂಕಲ್ಪದ ತೆಂಗಿನಕಾಯಿ ಕಟ್ಟೋದು ಯಾಕೆ?<br /> ಬೆಂಗಳೂರಿನ ಈ ಕಾರ್ಯ ಸಿದ್ಧಿ ಹನುಮನಿಗೆ ಸಂಕಲ್ಪದ ತೆಂಗಿನಕಾಯಿ ಕಟ್ಟೋದು ಯಾಕೆ?

ಹೋಟೆಲ್ ಸವಾಯಿ

ಹೋಟೆಲ್ ಸವಾಯಿ

ಆ ನಂತರ ಕೆಲವು ವರ್ಷದ ನಂತರ ಆ ಮಹಿಳೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಕೂಡಾ ಅದೇ ಸ್ಥಿತಿಯಲ್ಲಿ ಆ ಹೊಟೇಲ್‌ನಲ್ಲಿ ಸಾವನ್ನಪ್ಪಿದ್ದರು. ಆ ಹೋಟೆಲ್‌ನಲ್ಲಿ ತಂಗುವವರಿಗೆ ರಾತ್ರಿ ಹೊತ್ತಲ್ಲಿ ಚಿತ್ರ ವಿಚಿತ್ರ ಸದ್ದು, ಘಟನೆಗಳ ಅನುಭವವಾಗಿದೆ.

ಫರ್ನ್ ಹಿಲ್, ಊಟಿ

ಫರ್ನ್ ಹಿಲ್, ಊಟಿ

ಈ ಹೋಟೆಲ್ ತನ್ನ ಸುಂದರ ವಾಸ್ತುಶಿಲ್ಪವನ್ನು ಹೊರತುಪಡಿಸಿ ಭಯಾನಕ ತಾಣಕ್ಕೂ ಹೆಸರುವಾಸಿಯಾಗಿದೆ. ಇಲ್ಲಿ ಪ್ರೇತಾತ್ಮಗಳ ಕಾಟವಿದೆ ಎಂದು ತಿಳಿದಿದ್ದು ರಾಜ್ ಶೂಟಿಂಗ್ ಸಂದರ್ಭದಲ್ಲಿ. ಇಲ್ಲಿ ಮಧ್ಯರಾತ್ರಿಯಲ್ಲಿ ಫರ್ನಿಚರ್ ಎಳೆಯುವ ಸದ್ದಾಗುತ್ತದೆ. ಹಾಗಾಗಿ ಸ್ವಲ್ಪ ಸಮಯದ ವರೆಗೆ ಈ ಹೋಟೆಲ್‌ನ್ನು ಮುಚ್ಚಲಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X