Search
  • Follow NativePlanet
Share
» »ಭಾರತದಲ್ಲಿ ಶ್ರಾವಣ ಮಾಸದಲ್ಲಿ ಭೇಟಿ ನೀಡಲೇಬೇಕಾದ ದೇವಾಲಯಗಳು

ಭಾರತದಲ್ಲಿ ಶ್ರಾವಣ ಮಾಸದಲ್ಲಿ ಭೇಟಿ ನೀಡಲೇಬೇಕಾದ ದೇವಾಲಯಗಳು

ಶ್ರಾವಣಮಾಸದಲ್ಲಿ ಈ ದೇವಾಲಯಗಳಿಗೆ ಭೇಟಿ ಕೊಟ್ಟರೆ ಪುಣ್ಯ ಪ್ರಾಪ್ತಿ!

ಶ್ರಾವಣ ಮಾಸವು ಹಿಂದು ಭಕ್ತರಿಗೆ ಅತ್ಯಂತ ಪವಿತ್ರ ತಿಂಗಳಾಗಿದ್ದು, ಈ ಸಮಯದಲ್ಲಿ ಹೆಚ್ಚಾಗಿ ದೇವಾಲಯಗಳಿಗೆ ಭೇಟಿ ಕೊಟ್ಟು ತಮ್ಮ ಆರೋಗ್ಯ ಮತ್ತು ಏಳಿಗೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಶ್ರಾವಣ ಮಾಸವೆಂದರೆ ಮಳೆಗಾಲದ ಪ್ರಾರಂಭ ಎಂದು ಗುರುತಿಸಲ್ಪಡುತ್ತದೆ ಇದು ಶಿವನ ಸಂಕೇತವೆಂದು ಪರಿಗಣಿಸಲಾಗಿದೆ, ಈ ಅವಧಿಯಲ್ಲಿ ತನ್ನಲ್ಲಿ ಶ್ರದ್ಧೆಯುಳ್ಳವರೆಲ್ಲರ ಮೇಲೆ ಅವನು ತನ್ನ ಆಶೀರ್ವಾದವನ್ನು ಸುರಿಸುತ್ತಾನೆ ಎಂದು ನಂಬಲಾಗುತ್ತದೆ. ಆದುದರಿಂದ ಹಿಂದುಗಳಿಗೆ ಈ ತಿಂಗಳು ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ.

ಭಾರತದಾದ್ಯಂತದ ದೇವಾಲಯಗಳಿಗೆ ಶ್ರಾವಣ ಮಾಸದಲ್ಲಿ ಭೇಟಿ ನೀಡ ಬಯಸುವಿರಾದಲ್ಲಿ ನೀವು ಖಂಡಿತವಾಗಿಯೂ ಭೇಟಿ ನೀಡಲೇ ಬೇಕು ಎನ್ನುವಂತಹ ಕೆಲವು ದೇವಾಲಯಗಳನ್ನು ಗುರುತು ಮಾಡಿಕೊಳ್ಳಿ.

ಶ್ರಾವಣಮಾಸದಲ್ಲಿ ಭೇಟಿ ಕೊಡಲೇ ಬೇಕು ಎನ್ನುವಂತಹ ಕೆಲವು ದೇವಾಲಯಗಳ ಪಟ್ಟಿ ಈ ಕೆಳಗಿನಂತಿವೆ.

ಬಾಬಾ ಬೈದ್ಯನಾಥ ದೇವಾಲಯ ಜಾರ್ಖಂಡ್

ಬಾಬಾ ಬೈದ್ಯನಾಥ ದೇವಾಲಯ ಜಾರ್ಖಂಡ್

ಶಿವ ದೇವರ 12 ಜ್ಯೋತಿರ್ಲಿಂಗಗಳಲ್ಲಿ ಒಂದೆನಿಸಿರುವ ಶಿವದೇವರಿಗೆ ಅರ್ಪಿತವಾಗಿರುವ ಬಾಬಾ ಬೈದ್ಯನಾಥ ದೇವಾಲಯವು ಜಾರ್ಖಂಡ್ ನಲ್ಲಿ ನೆಲೆಸಿದೆ. ಈ ದೇವಾಲಯವು ಬೈದ್ಯನಾಥ ಜಗನ್ನಾಥ ದೇವಾಲಯ ಅಥವಾ ಬೈದ್ಯನಾಥ ಶಿವ ದೇವಾಲಯವೆಂದೂ ಕರೆಯಲ್ಪಡುತ್ತದೆ.

ಪ್ರತೀ ವರ್ಷ ಹಿಂದು ತಾರೀಕು ಪಟ್ಟಿಯಂತೆ ಜುಲೈ ಅಥವಾ ಆಗೋಸ್ಟ್ ತಿಂಗಳಲ್ಲಿ ಬರುವ ಶ್ರಾವಣಮಾಸದಲ್ಲಿ ಈ ದೇವಾಲಯದಲ್ಲಿ ಶ್ರಾವಣ ಮೇಳವನ್ನು ಆಯೋಜಿಸಲಾಗುತ್ತದೆ. ಈ ಮೇಳದಲ್ಲಿ ಭಾರತಾದ್ಯಂತದ ಲಕ್ಷಗಟ್ಟಲೆಯಲ್ಲಿ ಭಕ್ತರು ಈ ಪವಿತ್ರ ದೇವಾಲಯಕ್ಕೆ ಬಂದು ತಮ್ಮ ಭೇಟಿಯನ್ನು ನೀಡುತ್ತಾರೆ. ಶಿವ ದೇವರ ಮೂರ್ತಿಯ ಒಂದು ನೋಟಕ್ಕಾಗಿ ಪ್ರತೀ ವರ್ಷ ಶ್ರಾವಣ ಮಾಸದಲ್ಲಿ ಈ ದೇವಾಲಯಕ್ಕೆ ಸಾವಿರಾರು ಜನರು ಬರುತ್ತಾರೆ. ಹಾಗೂ ಯಾರೆಲ್ಲ ಈ ದೇವಾಲಯಕ್ಕೆ ಭೇಟಿ ಕೊಟ್ಟು ದೇವರಲ್ಲಿ ಪ್ರಾರ್ಥಿಸುತ್ತಾರೆ ಅವರು ತಮ್ಮ ಪಾಪ ಕಳೆದುಕೊಳ್ಳುತ್ತಾರೆ ಮತ್ತು ಮರಣ ನಂತರ ನರಕಕ್ಕೆ ಹೋಗುವುದಿಲ್ಲ ಎಂದು ನಂಬಲಾಗುತ್ತದೆ.

ಸ್ಥಳ: ಶಿವಗಂಗಾ ಮುಹಲ್ಲಾ, ದಿಯೋಘರ್, ಜಾರ್ಖಂಡ್ 814112.

 ತ್ರಿಯಂಬಕೇಶ್ವರ ದೇವಾಲಯ, ಮಹಾರಾಷ್ಟ್

ತ್ರಿಯಂಬಕೇಶ್ವರ ದೇವಾಲಯ, ಮಹಾರಾಷ್ಟ್

ಬ್ರಹ್ಮಗಿರಿ ನೀಲಗಿರಿ ಮತ್ತು ಕಾಲಗಿರಿ ಬೆಟ್ಟಗಳ ನಡುವೆ ನೆಲೆಸಿರುವ ಅದ್ಬುತವಾದ ತ್ರಿಯಂಬಕೇಶ್ವರ ದೇವಾಲಯವು ನಾಸಿಕ್ ಪಟ್ಟಣದಿಂದ ಸುಮಾರು 28ಕಿ.ಮೀ ದೂರದಲ್ಲಿದ್ದು, ಈ ದೇವಾಲಯವು ಶಿವ ದೇವರ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಈ ದೇವಾಲಯವು ಒಂದು ವಿಭಿನ್ನ ನೋಟವನ್ನು ಒದಗಿಸಿಕೊಡುತ್ತದೆ. ಈ ದೇವಾಲಯದ ವೈಶಿಷ್ಟ್ಯವೆಂದರೆ ಈ ದೇವಾಲಯವು ಬ್ರಹ್ಮ (ಸೃಷ್ಟಿಕರ್ತ), ವಿಷ್ಣು (ಸಂರಕ್ಷಿಸುವವರು), ಮತ್ತು ಮಹೇಶ ದೇವರು (ವಿನಾಶಕ) ಇವುಗಳನ್ನು ಪ್ರತಿನಿಧಿಸುವ ಮೂರು ಲಿಂಗಗಳನ್ನು ಪ್ರದರ್ಶಿಸುತ್ತದೆ. ಪವಿತ್ರ ಗೋದಾವರಿ ನದಿಯ ಉಗಮ ಸ್ಥಳ ತ್ರಯಂಬಕ ಬಳಿಯೇ ಆಗಿರುತ್ತದೆ. ಅಲ್ಲದೆ ಸಂಪೂರ್ಣ ಶ್ರಾವಣ ಮಾಸದ ಪುಣ್ಯ ಪಡೆಯಲು ತ್ರಯಂಬಕೇಶ್ವರ ಶಿವ ದೇವಾಲಯವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಶಿವನ ಆಶೀರ್ವಾದ ಪಡೆಯಲು ಬರುವ ಅಪಾರ ಸಂಖ್ಯೆಯ ಭಕ್ತರನ್ನು ಬರಮಾಡಿಕೊಳ್ಳುತ್ತದೆ.

ಸ್ಥಳ: ತ್ರಯಂಬಕೇಶ್ವರ ಜ್ಯೋತಿರ್ಲಿಂಗ್ ಮಂದಿರ, ತ್ರಯಂಬಕ್, ಮಹಾರಾಷ್ಟ್ರ 422212.

ಕಾಶಿ ವಿಶ್ವನಾಥ ದೇವಾಲಯ, ಉತ್ತರ ಪ್ರದೇಶ

ಕಾಶಿ ವಿಶ್ವನಾಥ ದೇವಾಲಯ, ಉತ್ತರ ಪ್ರದೇಶ

ಗಂಗಾ ನದಿಯ ಪಶ್ಚಿಮ ತೀರದಲ್ಲಿ ನೆಲೆಸಿರುವ ಕಾಶೀ ವಿಶ್ವನಾಥ ದೇವಾಲಯವು ಸಹ ಶಿವ ದೇವರ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇಲ್ಲಿ ಶಿವ ದೇವರು ವಿಶ್ವನಾಥ ಎಂಬ ಹೆಸರಿನಿಂದ ಪೂಜಿಸಲ್ಪಡುತ್ತಾರೆ ವಿಶ್ವನಾಥ ಎಂದರೆ ಇಡೀ ಜಗತ್ತು ಎಂದೂ ಕಾಶಿಯು ವಾರಣಾಸಿಯ ಪವಿತ್ರ ನಗರವಾಗಿದ್ದು ಒಟ್ಟಾಗಿ ಈ ದೇವಾಲಯವು ಕಾಶಿ ವಿಶ್ವನಾಥ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಶ್ರಾವಣ ಮಾಸದಲ್ಲಿ ಈ ನಗರವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭಕ್ತರಿಂದ ಭೇಟಿ ಕೊಡಲ್ಪಡುತ್ತದೆ.

ಸ್ಥಳ: ಶ್ರೀ ಕಾಶಿ ವಿಶ್ವನಾಥ್, ಸಿಕೆ 37/40,41,42 ಬಾನ್ಸ್ಫಟಕ್, ವಾರಣಾಸಿ-221 001.

ಸೋಮನಾಥ ದೇವಾಲಯ ಗುಜರಾತ್

ಸೋಮನಾಥ ದೇವಾಲಯ ಗುಜರಾತ್

ಪಟಾನ್ ಎಂದೂ ಕರೆಯಲ್ಪಡುವ ಸೋಮನಾಥ ದೇವಾಲಯವು ಹಿಂದುಗಳ ಪವಿತ್ರ ಯಾತ್ರಾಸ್ಥಳವಾಗಿದೆ. ಈ ದೇವಾಲಯದಲ್ಲಿ ವಾರ್ಷಿಕವಾಗಿ ನಡೆಸುವ ಶಿವರಾತ್ರಿ ಹಬ್ಬವು ಪ್ರಸಿದ್ದವಾಗಿದೆ. ಶಿವದೇವರಿಗೆ ಅರ್ಪಿತವಾಗಿರುವ ಈ ದೇವಾಲಯವು ಶಿವ ದೇವರ 12 ಜ್ಯೋತಿರ್ಲಿಂಗಗಳಲ್ಲಿ(ಪವಿತ್ರ ಲಿಂಗಗಳು) ಒಂದಾಗಿದೆ. ಜಗತ್ತಿನಾದ್ಯಂತದ ಹಿಂದೂ ಭಕ್ತರ ಪ್ರಮುಖ ಯಾತ್ರಾ ಸ್ಥಳವೆನಿಸಿದೆ. ಭಾರತವನ್ನು ಆಳುವ ಪ್ರಯತ್ನದಲ್ಲಿ ಮುಸ್ಲಿಂ ಆಕ್ರಮಣಕಾರರು ಅನೇಕ ಬಾರಿ ಅದನ್ನು ನಾಶಮಾಡಲು ಪ್ರಯತ್ನಿಸಿದ್ದರಿಂದ ದೇವಾಲಯವನ್ನು ಅನೇಕ ಬಾರಿ ಪುನರ್ನಿರ್ಮಿಸಲಾಯಿತು.

ಸ್ಥಳ: ಸೋಮನಾಥ ಮಂದಿರ ರಸ್ತೆ, ಸೋಮನಾಥ್, ಗುಜರಾತ್ 362268.

ಲಿಂಗರಾಜ ದೇವಾಲಯ

ಲಿಂಗರಾಜ ದೇವಾಲಯ

ಒಡಿಶಾದ ಭುಭನೇಶ್ವರದಲ್ಲಿರುವ ಲಿಂಗರಾಜ ದೇವಾಲಯವು ಶಿವ ದೇವರ ಅತ್ಯಂತ ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ. ದೇವಾಲಯವು ತನ್ನೊಳಗೆ ಅನೇಕ ಶಾಸನಗಳು ಮತ್ತು ಶಿಲ್ಪಗಳನ್ನು ಹೊಂದಿದೆ, ಇದು ಅದರ ಇತಿಹಾಸದ ಬಗ್ಗೆ ನಮಗೆ ಕಲ್ಪನೆಯನ್ನು ನೀಡುತ್ತದೆ. ಈ ದೇವಾಲಯವು ಕಳಿಂಗ ವಾಸ್ತುಶೈಲಿಯನ್ನು ಚಿತ್ರಿಸುತ್ತದೆ ಮತ್ತು ಭಾರತೀಯ ವಾಸ್ತುಶಿಲ್ಪದ ಮೇರುಕೃತಿ ಎಂದು ಪರಿಗಣಿಸಲಾಗಿದೆ. ಮಹಾಶಿವರಾತ್ರಿಯೊಂದಿಗೆ, ರುಕುಣ ರಥ ಯಾತ್ರೆಯು ಶ್ರಾವಣ ಮಾಸದೊಂದಿಗೆ ಸಾವಿರಾರು ಭಕ್ತರು ಆಚರಿಸುವ ಅತ್ಯಂತ ಪ್ರಸಿದ್ಧವಾದ ಎರಡು ಹಬ್ಬಗಳಾಗಿವೆ.

ಸ್ಥಳ: ಲಿಂಗರಾಜ್ ದೇವಸ್ಥಾನ, ಲಿಂಗರಾಜ್ ದೇವಸ್ಥಾನ ರಸ್ತೆ, ಲಿಂಗರಾಜ್ ನಗರ, ಓಲ್ಡ್ ಟೌನ್, ಭುವನೇಶ್ವರ, ಒಡಿಶಾ 751002.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X