Search
  • Follow NativePlanet
Share
» »ಪೂರ್ವ ಘಟ್ಟಗಳ ಮಾದಕ ಆಕರ್ಷಣೆಗಳು

ಪೂರ್ವ ಘಟ್ಟಗಳ ಮಾದಕ ಆಕರ್ಷಣೆಗಳು

By Vijay

ಪಶ್ಚಿಮ ಘಟ್ಟಗಳು ತನ್ನ ಸುಂದರ ಮೈಸಿರಿಯಿಂದಾಗಿ ವಿಖ್ಯಾತವಾದಷ್ಟು, ಹೆಸರುಗಳಿಸದಿದ್ದರೂ ಸಹ ಪೂರ್ವಘಟ್ಟಗಳ ಅಂದ ಚೆಂದಕ್ಕೇನು ಕೊರತೆಯಿಲ್ಲ. ಮಹೇಂದ್ರ ಪರ್ವತಗಳು ಎಂದೂ ಕರೆಯಲ್ಪಡುವ ಪೂರ್ವ ಘಟ್ಟಗಳು ಪ್ರಾರಂಭವಾಗುವುದು ಪಶ್ಚಿಮ ಬಂಗಾಳ ರಾಜ್ಯದಿಂದ. ಬಹುತೇಕವಾಗಿ ಬಂಗಾಳ ಕೊಲ್ಲಿಗೆ ಸಮಾನಾಂತರವಾಗಿ ಹರಡಿರುವ ಈ ಘಟ್ಟಗಳು ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕದ ಕೆಲ ಭಾಗಗಳ ಮೂಲಕ ಸಾಗುತ್ತ ಕೊನೆಯದಾಗಿ ತಮಿಳುನಾಡಿನಲ್ಲಿ ಅಂತ್ಯಗೊಳ್ಳುತ್ತದೆ.

ಪ್ರೇಮಿಗಳ ದಿನ ವಿಶೇಷ ಕೊಡುಗೆ : ಫ್ಲೈಟ್ ಬುಕ್ಕಿಂಗ್ ಮೇಲೆ 8000 ರೂಪಾಯಿಯವರೆಗೂ ಕಡಿತ

ಭೌಗೋಳಿಕವಾಗಿ ನಡೆಸಿದ ಅಧ್ಯಯನದ ಪ್ರಕಾರ, ಪೂರ್ವ ಘಟ್ಟಗಳು ಪಶ್ಚಿಮ ಘಟ್ಟಗಳಿಗಿಂತಲೂ ಹಳೆಯದಾಗಿವೆ. ಇದರ ಮೂಲವು ಹಲವು ಮಿಲಿಯನ್ ವರ್ಷಗಳ ಹಿಂದಿದ್ದ ಮಹಾ ಖಂಡಗಳಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಪೂರ್ವಘಟ್ಟಗಳು, ಪಶ್ಚಿಮ ಘಟ್ಟಗಳಂತೆ ನಿರಂತರವಾಗಿಲ್ಲ ಹಾಗೂ ಅಲ್ಲಲ್ಲಿ ಕೊಂಡಿಗಳು ಕಡಿದು ಹೋಗಿರುವುದನ್ನು ಗಮನಿಸಬಹುದು. ಆದರೂ ಸಹ ಪೂರ್ವ ಘಟ್ಟಗಳು ಕೆಲ ಪ್ರಮುಖ ಹಾಗೂ ಆಕರ್ಷಕ ಸ್ಥಳಗಳಿಗೆ, ಬೆಟ್ಟ ಗುಡ್ಡಗಳಿಗೆ, ಗಿರಿಧಾಮಗಳಿಗೆ ತವರಾಗಿದೆ.

ವಿಶೇಷ ಲೇಖನಗಳು : ಪಶ್ಚಿಮ ಘಟ್ಟದ ಮಾಯಾಲೋಕ ಕರ್ನಾಟಕದ ನಯನ ಮನೋಹರ ಬೆಟ್ಟಗಳು

ಪ್ರಸ್ತುತ ಲೇಖನವು ಪೂರ್ವ ಘಟ್ಟಗಳಲ್ಲಿ ಕಂಡು ಬರುವ ಆಯಾ ರಾಜ್ಯಗಳ ಕೆಲ ಆಕರ್ಷಕ ಹಾಗೂ ಪ್ರವಾಸಿ ಆದರ್ಶದ ಸ್ಥಳಗಳ ಕುರಿತು ತಿಳಿಸುತ್ತದೆ.

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಅರಕು ಕಣಿವೆ : ನಮ್ಮಲ್ಲಿ ಪಶ್ಚಿಮ ಘಟ್ಟ ಹೇಗೊ ಅದೆ ರೀತಿಯಲ್ಲಿ ಆಂಧ್ರದ ಪೂರ್ವ ಘಟ್ಟಗಳ ಆಕರ್ಷಕ ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಅರಕು ಕಣಿವೆ ವಿವಿಧ ಬುಡಕಟ್ಟು ಜನಾಂಗಗಳ ಆಶ್ರಯ ತಾಣವಾಗಿದೆ. ದಕ್ಷಿಣ ಭಾರತದ ಪ್ರೇಕ್ಷಣೀಯ ಸ್ಥಳಗಳ ಪೈಕಿ ಅತಿ ಕಡಿಮೆ ಪ್ರಮಾಣದಲ್ಲಿ ಕಲುಷಿತಗೊಂಡ ಹಾಗೂ ಅಲ್ಪ ವಾಣಿಜ್ಯೀಕರಣಗೊಂಡ ಪ್ರವಾಸಿ ಸ್ಥಳ ಎಂಬ ಹೆಗ್ಗಳಿಕೆಯನ್ನು ಗಳಿಸಿರುವ ಅರಕು ಕಣಿವೆ ತನ್ನಲ್ಲಿರುವ ಬೊರಾ ಎಂಬ ಗುಹೆಗಳಿಂದಾಗಿಯೂ ಸಹ ಹೆಸರುವಾಸಿಯಾಗಿದೆ.

ಚಿತ್ರಕೃಪೆ: roadconnoisseur

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಅರಕು ಕಣಿವೆ ಪ್ರದೇಶದಲ್ಲಿರುವ ಬೊರಾ ಗುಹೆಗಳು ನೈಸರ್ಗಿಕವಾಗಿ ರೂಪಗೊಂಡ ವಿಸ್ಮಯಕಾರಿ ಗುಹೆಯಾಗಿದೆ. ಇದು ಪ್ರಮುಖವಾಗಿ ಹೆಸರುವಾಸಿಯಾಗಿರುವುದು ಸ್ಟ್ಯಾಲಗ್ಮೈಟ್ ಮತ್ತು ಸ್ಟ್ಯಾಲಕ್ಟೈಟ್ ಎಂಬ ಶಿಲಾ ರಚನೆಗಳಿಗಾಗಿ.

ಚಿತ್ರಕೃಪೆ: Raj srikanth800

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಅತಿ ಆಳ ಹೊಂದಿರುವ ಹಾಗೂ ಬೃಹತ್ ಗುಹೆಗಳ ಪೈಕಿ ಒಂದಾಗಿರುವ ಬೊರ್‍ರಾ ಗುಹೆಗಳು ಕೌತುಕಮಯ ವಿನ್ಯಾಸ ಹಾಗೂ ಮನಮೋಹಕ ಬಣ್ಣ ಹೊಂದಿರುವ ಅನನ್ಯ ಶಿಲಾ ರಚನೆಗಾಗಿ ಪ್ರಖ್ಯಾತಿ ಪಡೆದಿವೆ.

ಚಿತ್ರಕೃಪೆ: Bhaskaranaidu

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಈ ಗುಹೆಗಳ ಹಿಂದೆ ಹಲವಾರು ದಂತ ಕಥೆಗಳು ತಳುಕು ಹಾಕಿಕೊಂಡಿವೆ. ಒಂದು ದಂತ ಕಥೆಯ ಪ್ರಕಾರ, ಒಂದೊಮ್ಮೆ ಈ ಪ್ರದೇಶದಲ್ಲಿ ಆಕಳೊಂದು ಮೇಯುತ್ತಿದ್ದಾಗ ಆಕಸ್ಮಿಕವಾಗಿ ಗುಹೆಯ ಮೇಲ್ಭಾಗದಲ್ಲಿದ್ದ ಒಂದು ಖಿಂಡಿಯ ಮೂಲಕ ಕೆಳಗೆ ಬಿದ್ದಿತು. ದನಗಾಹಿಯು ಆ ಆಕಳನ್ನು ಹುಡುಕುತ್ತ ಅಲೆಯುವಾಗ ಈ ಗುಹೆಗಳನ್ನು ನೋಡಿದನು ಹಾಗೂ ಅದರಲ್ಲಿ ಅವನಿಗೆ ಒಂದು ಶಿವ ಲಿಂಗದ ಆಕಾರದ ಕಲ್ಲು ದೊರೆಯಿತು. ಇದರಿಂದ ಆತ ಶಿವನೆ ತನ್ನ ಆಕಳನ್ನು ರಕ್ಷಿಸಿರುವನೆಂದು ಬಗೆದನು.

ಚಿತ್ರಕೃಪೆ: Snehareddy

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಈ ಸುದ್ದಿಯು ಕಾಡ್ಗಿಚ್ಚಿನಂತೆ ಹರಡಿ, ತಂಡೋಪತಂಡವಾಗಿ ಹಳ್ಳಿ ಜನರು ಅಲ್ಲಿಗೆ ಬಂದು ಭಕ್ತಿ ಭಾವಗಳನ್ನು ಮೆರೆದರು ಹಾಗೂ ಶಿವನಿಗೆ ಮುಡಿಪಾಗಿ ಒಂದು ಚಿಕ್ಕ ದೇವಾಲಯವನ್ನೂ ಸಹ ಗುಹೆಯ ಪಕ್ಕದಲ್ಲಿ ನಿರ್ಮಿಸಿದರು. ಇಂದಿಗೂ ಭೇಟಿ ನೀಡುವ ಪ್ರವಾಸಿಗರು ಆ ದೇಗುಲಕ್ಕೆ ಭೇಟಿ ನೀಡಬಹುದು.

ಚಿತ್ರಕೃಪೆ: Snehareddy

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಮತ್ತೊಂದು ಕಥೆಯ ಪ್ರಕಾರ, ಗುಹೆಯ ಆಳದಲ್ಲಿ ಶಿವಲಿಂಗವಿದ್ದು ಆಕಳನ್ನು ಹೋಲುವ ಒಂದು ಶಿಲಾ ರಚನೆಯಿಂದ ಆವೃತವಾಗಿದೆ. ವಿಜಿನಗರಂ ಹಾಗೂ ವಿಶಾಖಪಟ್ಟಣ ಜಿಲ್ಲೆಗಳಲ್ಲಿ ಹರಿಯುವ ಗೋಸ್ಥಾಣಿ ಎಂಬ ನದಿಯ ಮೂಲ ಗುಹೆಯಲ್ಲಿರುವ ಆ ಆಕಳಿನ ಕೆಚ್ಚಲಾಗಿದೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Joshi detroit

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಉತ್ತರ ತಮಿಳುನಾಡು ರಾಜ್ಯದ ವೆಲ್ಲೂರು ಜಿಲ್ಲೆಯಲ್ಲಿ ಕಂಡುಬರುತ್ತದೆ ಜವಡಿ ಬೆಟ್ಟಗಳು. ಪೂರ್ವ ಘಟ್ಟಗಳ ಪ್ರಮುಖ ಪರ್ವತ ಶ್ರೇಣಿಗಳಲ್ಲಿ ಒಂದಾಗಿರುವ ಜವಡಿ ಬೆಟ್ಟಗಳು ಆಕರ್ಷಕ ತಾಣವಾಗಿದ್ದು ಬೀಮಣ್ಣಮಡುವು ಎಂಬ ಜಲಪಾತ ತಾಣಕ್ಕೆ ನೆಲವಾಗಿದೆ.

ಚಿತ್ರಕೃಪೆ: Saravankm

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಜವಡಿ ಬೆಟ್ಟ ಪ್ರದೇಶದಲ್ಲಿರುವ ಕವಳೂರು ಎಂಬ ಗ್ರಾಮದಲ್ಲಿ ಭಾರತೀಯ ಖಭೌತ ವಿಜ್ಞಾನ ಸಂಸ್ಥಾನದಿಂದ ನಿರ್ವಹಿಸಲ್ಪಡುತ್ತಿರುವ ತಾರಾಲಯವನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Prateek Karandikar

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಕಂಬಲಕೊಂಡ ಎಂಬ ಪೂರ್ವಘಟ್ಟದಲ್ಲಿರುವ ಹಸಿರುಮಯ ದಟ್ಟಾರಣ್ಯ ಆಂಧ್ರ ಪ್ರದೇಶದ ವೈಜಾಗ್ ಅಥವಾ ವಿಶಾಖಪಟ್ಟಣದ ಹೊರವಲಯದ ಭಾಗದಲ್ಲಿ ಸ್ಥಿತವಿದೆ. ಕಂಬಲಕೊಂಡ ಒಂದು ಜೈವಿಕ ಪರಿಸರದ ಉದ್ಯಾನವಾಗಿದ್ದು ಸುಮಾರು 70.70 ಚಕಿಮೀ ವಿಸ್ತೀರ್ಣದಲ್ಲಿ ವಿಶಾಲವಾಗಿ ಆವರಿಸಿದೆ. ಇದೊಂದು ಒಣ ನಿತ್ಯಹರಿದ್ವರ್ಣದ ಕಾಡಾಗಿದ್ದು ಆಂಧ್ರಪ್ರದೇಶ ಅರಣ್ಯ ಇಲಾಖೆಯಿಂದ ನಿಯಂತ್ರಿಸಲ್ಪಡುತ್ತದೆ.

ಚಿತ್ರಕೃಪೆ: Adityamadhav83

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಈ ರಾಷ್ಟ್ರೀಯ ಉದ್ಯಾನವು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 5 ರ ಬಳಿಯಿದ್ದು ವಿಶಾಖಪಟ್ಟಣದಿಂದ ಕೇವಲ 20 ಕಿ.ಮೀ ದೂರದಲ್ಲಿ ವಿಜಯನಗರಂ - ಶ್ರೀಕಾಕುಲಂ ರಸ್ತೆಯ ಮೇಲೆ ನೆಲೆಸಿದೆ.

ಚಿತ್ರಕೃಪೆ: Adityamadhav83

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಈ ಉದ್ಯಾನದ ಸಮ್ಮುಖದಲ್ಲೆ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಇಂದಿರಾಗಾಂಧಿ ಪ್ರಾಣಿಶಾಸ್ತ್ರೀಯ ಉದ್ಯಾನವನ್ನು ಕಾಣಬಹುದು. ಈ ಉದ್ಯಾನವನ್ನು ವೈಜಾಗ್ ಝೂ ಎಂಬ ಹೆಸರಿನಿಂದಲೆ ಕರೆಯಲಾಗುತ್ತದೆ.

ಚಿತ್ರಕೃಪೆ: Adityamadhav83

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಕಂಬಲಕೊಂಡ ಅಭಯಾರಣ್ಯದಿಂದ ಕಂಡುಬರುವ ಪೂರ್ವಘಟ್ಟಗಳ ಅದ್ಭುತ ಪರ್ವತ ಶ್ರೇಣಿಗಳು.

ಚಿತ್ರಕೃಪೆ: Adityamadhav83

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಶಿವರೋಯಿ (ತಮಿಳಿನಲ್ಲಿ ಶೆರ್ವರಾಯನ್) ಗಿರಿ ಶ್ರೇಣಿಗಳಲ್ಲಿ ನೆಲೆಸಿರುವ ಯೇರ್ಕಾಡ್ ಗಿರಿಧಾಮವು ಸಮುದ್ರ ಮಟ್ಟದಿಂದ ಸುಮಾರು 1515 ಮೀ (4970 ಅಡಿಗಳು) ಗಳಷ್ಟು ಎತ್ತರದಲ್ಲಿದೆ. ಈ ಪ್ರವಾಸಿ ವಿಶೇಷತೆಯ ಗಿರಿಧಾಮದ ಅತಿ ಎತ್ತರದ ಸ್ಥಳವೆಂದರೆ ಶೆರ್ವರಾಯನ ದೇವಸ್ಥಾನ.

ಚಿತ್ರಕೃಪೆ: varun suresh

http://commons.wikimedia.org/wiki/File:Yercaud_scenery.jpg

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಸಹಸ್ರಾರು ಗಿಡ ಮರಗಳಿಂದ ತುಂಬಿ ಹೋದ ಸ್ಥಳ ಇದಾಗಿದ್ದು ಸುಂದರವಾದ ಕೆರೆಯಿಂದ ಕಂಗೊಳಿಸುವುದರಿಂದ ಇದಕ್ಕೆ ಯೇರ್ಕಾಡ್ ಎಂಬ ಹೆಸರು ಬಂದಿದೆ ಎನ್ನಲಾಗಿದೆ. "ದಕ್ಷಿಣದ ರತ್ನ" ಎಂದು ಜನಜನಿತವಾಗಿರುವ ಈ ಗಿರಿಧಾಮ ಪಟ್ಟಣವು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 28 ರ ಮೂಲಕ ಸೇಲಂನೊಂದಿಗೆ ಸಂಪರ್ಕ ಹೊಂದಿದೆ.

ಚಿತ್ರಕೃಪೆ: Jai Kumara Yesappa

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟಗಳ ಪ್ರಾಕೃತಿಕ ಸೌಂದರ್ಯದಿಂದ ಜಗಮಗಿಸುವ ಈ ಗಿರಿಧಾಮವು ಅದ್ಭುತ ದೃಶ್ಯಾವಳಿಗಳನ್ನು ಒಳಗೊಂಡಿದ್ದು ಎಂದಿಗೂ ಮರೆಯಲಾಗದಂತಹ ಅದ್ಭುತ ಆನಂದವನ್ನು ಕರುಣಿಸುತ್ತದೆ.

ಚಿತ್ರಕೃಪೆ: Aruna

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಗಿರಿಧಾಮದ ಕೇಂದ್ರ ಭಾಗದಲ್ಲಿ ಸುಂದರವಾದ ಕೆರೆಯಿದ್ದು ಸುತ್ತಲೂ ಕಾಡಿರುವುದರಿಂದ ಇದಕ್ಕೆ ಯೇರ್ಕಾಡ್ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಇನ್ನೊಂದು ನಂಬಿಕೆಯ ಪ್ರಕಾರ, ಏಳ್ ಎಂದರೆ ತಮಿಳಿನಲ್ಲಿ ಏಳು ಎಂದಾಗುತ್ತದೆ. ಏಳು ಕಾಡುಗಳಿಂದ ಇದಕ್ಕೆ ಯೇರ್ಕಾಡ್ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.

ಚಿತ್ರಕೃಪೆ: Mithun Kundu

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಯೇರ್ಕಾಡ್ ಭೇಟಿ ನೀಡಿದಾಗ ನೋಡಬಹುದಾದ ಮತ್ತೊಂದು ಜನಪ್ರಿಯ ಆಕರ್ಷಣೆಯೆಂದರೆ ಕಿಳಿಯೂರ್ ನೀರಿನ ಜಲಪಾತ. 90 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತ ಎಂಥವರನ್ನು ಮೈಮರೆಯುವಂತೆ ಮಾಡುತ್ತದೆ. ಪೂರ್ವ ಘಟ್ಟಗಳ ಹಿನ್ನಿಲೆಯಲ್ಲಿ ಈ ಜಲಪಾತವು ಹಾಲಿನ ನೊರೆಯಂತಹ ಜಲಧಾರೆಯಿಂದ ಮಳೆಯಂತೆ ಬಿಳುತ್ತಿರುವುದನ್ನು ಕಂಡಾಗ ಮನವು ಸಂತೋಷದಿಂದ ಪ್ರಸನ್ನಗೊಳ್ಳುವುದು ಖಂಡಿತ.

ಚಿತ್ರಕೃಪೆ: Antkriz

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಆಂಧ್ರದ ಪೂರ್ವ ಘಟ್ಟಗಳಲ್ಲಿರುವ ಪಾಪಿ ಬೆಟ್ಟಗಳು ಗಾಢವಾದ ಅರಣ್ಯ ಸಂಪತ್ತುಗಳ ಮಧ್ಯದಲ್ಲಿ ನೆಲೆಸಿದ್ದು ಗೋದಾವರಿ ನದಿಯು ತನ್ಮೂಲಕ ಪ್ರವಾಸಿಗರಿಗೆ ಅಪರೂಪವಾಗಿ ಲಭಿಸುವ ಸುಂದರ ದೃಶ್ಯಾವಳಿಗಳನ್ನು ಒದಗಿಸುತ್ತಾಳೆ. ನಗರ ಗೌಜು ಗದ್ದಲಗಳಿಂದ ಶಾಂತವಾದ ಪರಿಸರ, ಹಕ್ಕಿ ಪಕ್ಷಿಗಳ ಚಿಲಿಪಿಲಿ, ಕಾಡಿನ ವಿಶಿಷ್ಟ ಸದ್ದು, ಹಸಿರುಮಯ ಗಿಡ ಮರಗಳು, ಎದೆ ಸೆಟೆಸಿ ನಿಂತಿರುವ ಬೆಟ್ಟ ಗುಡ್ಡಗಳು...ಒಂದೊಂದು ದೃಶ್ಯಗಳು ಒಂದೊಂದು ರೀತಿಯ ಸುಂದರಮಯ ಅನುಭೂತಿಗಳಿಗೆ ಕಾರಣವಾಗುತ್ತವೆ.

ಚಿತ್ರಕೃಪೆ: Adityamadhav83

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳಲ್ಲಿ ನೆಲೆಸಿರುವ ಪಾಪಿ ಬೆಟ್ಟಗಳ ಮನಮೋಹಕ ನೋಟ.

ಚಿತ್ರಕೃಪೆ: Dineshthatti

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪಾಪಿ ಬೆಟ್ಟಗಳ ಮಧ್ಯೆ ಹರಿದಿರುವ ಗೋದಾವರಿ ನದಿಯಲ್ಲಿ ಒಂದು ಪ್ರವಾಸಿ ಹಡುಗು. ಈ ರೀತಿಯ ಹಡುಗು ಪ್ರಯಾಣ ಸೌಲಭ್ಯವು ಆಂಧ್ರದ ರಾಜಮಂಡ್ರಿಯಿಂದ ತೆಲಂಗಾಣ ರಾಜ್ಯದ ಭದ್ರಾಚಲಂವರೆಗೆ ಇದೆ. ಇದರ ಕುರಿತು ಹೆಚ್ಚಿನ ಮಾಹಿತಿ.

ಚಿತ್ರಕೃಪೆ: ಫ್ಲಿಕ್ಕರ್

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಮತ್ತೊಂದು ಅವಿಭಾಜ್ಯ ಅಂಗವಾದ ನಲ್ಲಮಲ್ಲ ಪರ್ವತ ಶ್ರೇಣಿಗಳು ಆಂಧ್ರದ ಕರ್ನೂಲು, ಪ್ರಕಾಶಂ, ಗುಂಟೂರು, ಕಡಪ, ಚಿತ್ತೂರು ಹಾಗೂ ತೆಲಂಗಾಣದ ಮೆಹಬೂಬ್ ನಗರ ಮತ್ತು ನಲಗೊಂಡದಲ್ಲಿ ವಿಸ್ತಾರವಾಗಿ ಹರಡಿದೆ. ಪೂರ್ವ ಘಟ್ಟಗಳ ನಲ್ಲಮಲ್ಲ ಪರ್ವತ ಪ್ರದೇಶಗಳು ಅಹೋಬಿಲಂ, ಶ್ರೀಶೈಲಂ ಆಣೆಕಟ್ಟು ಹಾಗೂ ಉಗ್ರಸ್ತಂಭಂ ನಂತಹ ಪ್ರವಾಸಿ ಆಕರ್ಷಣೆಗಳಿಗೆ ಆಶ್ರಯವಾಗಿದೆ.

ಚಿತ್ರಕೃಪೆ: Abdaal

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಸುಂದರ ಪೂರ್ವ ಘಟ್ಟಗಳ ಮಧ್ಯದಲ್ಲಿ ಹರಿದಿರುವ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಶ್ರೀಶೈಲಂ ಆಣೆಕಟ್ಟು ದೇಶದಲ್ಲೆ ಮೂರನೇಯ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಅನ್ನು ಉತ್ಪಾದಿಸುವ ಆಣೆಕಟ್ಟು ಎಂಬ ಖ್ಯಾತಿಗೆ ಒಳಗಾಗಿದೆ. ಇಲ್ಲಿ ಉತ್ಪಾದನೆಗೊಳ್ಳುವ ವಿದ್ಯುತ್ತಿನ ಒಟ್ಟು ಸಾಮರ್ಥ್ಯ 1670 ಮೆಗಾ ವಾಟ್ (MW).

ಚಿತ್ರಕೃಪೆ: Chintohere

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

476 ಅಡಿಗಳಷ್ಟು ಎತ್ತರ, 1680 ಅಡಿಗಳಷ್ಟು ಉದ್ದವನ್ನು ಹೊಂದಿರುವ ಈ ವಿಶಾಲಕಾಯದ ಆಣೆಕಟ್ಟು ನಲ್ಲಮಲ ಪರ್ವತ ಶ್ರೇಣಿಗಳಲ್ಲಿ ನಿರ್ಮಿತವಾಗಿದ್ದು ಒಂದು ಬದಿಯಲ್ಲಿ ತೆಲಂಗಾಣ ರಾಜ್ಯದ ಗಡಿ ಇನ್ನೊಂದು ಬದಿಯಲ್ಲಿ ಆಂಧ್ರಪ್ರದೇಶ ರಾಜ್ಯದ ಗಡಿಗಳಿಗೆ ಹೊಂದಿಕೊಂಡಂತೆ ನೆಲೆಸಿದೆ.

ಚಿತ್ರಕೃಪೆ: Kashyap joshi

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಈ ವಿಶಾಲವಾದ ಆಣೆಕಟ್ಟು ತನ್ನಲ್ಲೆ ತಾನು ಒಂದು ವಿಶಿಷ್ಟ ರಚನೆಯಾಗಿದ್ದು, ನಲ್ಲಮಲ ಪರ್ವತ ಶ್ರೇಣಿಗಳ ಎರಡು ಬೆಟ್ಟಗಳ ಸಂದಿನಲ್ಲಿ ಆಕರ್ಷಕವಾಗಿ ಹರಿಯುವ ಕೃಷ್ಣಾ ನದಿಗೆ ಅಡ್ಡಲಾಗಿ ಅದ್ಭುತವಾಗಿ ನಿರ್ಮಾಣಗೊಂಡಿದೆ. ನಿಜ ಹೇಳಬೇಕೆಂದರೆ, ಆಣೆಕಟ್ಟು ತಂತ್ರಜ್ಞಾನದ ಒಂದು ಭಾಗವಾಗಿದ್ದು ಸದುದ್ದೇಶದಿಂದ ನಿರ್ಮಾಣಗೊಂಡಿದೆ. ಜನರು ಈ ಆಕರ್ಷಕ ತಾಣಕ್ಕೆ ಆಣೆಕಟ್ಟು ನೋಡಬೇಕೆಂಬ ಬಯಕೆಗಿಂತಲೂ ಅಧಿಕವಾಗಿ ಇದರ ಸುತ್ತಮುತ್ತಲಿನ ಸೌಂದರ್ಯ ಹಾಗೂ ನೀಲಿ ಬಣ್ಣ ಹೊತ್ತು ಕಂಗೊಳಿಸುವ ಕೃಷ್ಣಾ ನದಿಯ ವಿಹಂಗಮ ನೋಟ ಸವಿಯಲು ಬರುತ್ತಾರೆ.

ಚಿತ್ರಕೃಪೆ: Srikar Kashyap

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವಘಟ್ಟಗಳಲ್ಲಿ ಕಂಡು ಬರುವ ಮತ್ತೊಂದು ಪ್ರಮುಖ ಧಾರ್ಮಿಕ ತಾಣವೆಂದರೆ ಅಹೋಬಿಲಂ. ಅಹೋಬಿಲಂ ಕ್ಷೇತ್ರವು ಸೀಮಾಂಧ್ರದ ಕರ್ನೂಲ್ ಜಿಲ್ಲೆಯ ಅಲ್ಲಾಗಡ್ಡಾ ಮಂಡಲ (ತಾಲೂಕು) ದಲ್ಲಿ ನೆಲೆಸಿದೆ. ಈ ಕ್ಷೇತ್ರಕ್ಕೆ ತೆರಳಲು ಕರ್ನೂಲ್, ನಾಂದ್ಯಾಲ್ ಹಾಗೂ ಹೈದರಾಬಾದ ನಗರಗಳಿಂದ ಸುಲಭವಾಗಿ ಬಸ್ಸುಗಳು ದೊರೆಯುತ್ತವೆ. ಈ ಕ್ಷೇತ್ರದಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ ಹಾಗೂ ಹತ್ತಿರದ ರೈಲು ನಿಲ್ದಾಣವು ನಾಂದ್ಯಾಲ್ ನಲ್ಲಿದೆ. ಇದು ಬೆಂಗಳೂರು - ವೈಜಾಗ್ ರೈಲು ಮಾರ್ಗದಲ್ಲಿ ಲಭಿಸುತ್ತದೆ.

ಚಿತ್ರಕೃಪೆ: Ashwin Kumar

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

"ಅಹೋ" ಅನ್ನುವುದು ಒಂದು ಉದ್ಗಾರವಾಚಕ ಪದವಾಗಿದ್ದು ಬಿಲಂ (ಬಲಂ) ಅಂದರೆ ಶಕ್ತಿ ಎಂದಾಗುತ್ತದೆ. ಆದ್ದರಿಂದ ಅಹೋಬಿಲಂ ಎಂಬ ಹೆಸರು ಅಗಾಧ ಶಕ್ತಿಯು ನೆಲೆಸಿರುವ ಪ್ರದೇಶವಾಗಿದೆ. ಪೌರಾಣಿಕ ಹಿನ್ನಿಲೆಯ ಪ್ರಕಾರ, ಭಗವಂತ ವಿಷ್ಣು ಅಸುರನಾದ ಹಿರಣ್ಯಕಶಿಪುವಿನನ್ನು ಸಂಹರಿಸಲು ಅರ್ಧ ಮನುಷ್ಯ ಅರ್ಧ ಸಿಂಹದ ರೂಪ ಪಡೆದು ನರಸಿಂಹನಾಗಿ ಅವತರಿಸಿದ್ದು ಈ ಸ್ಥಳದಲ್ಲಿಯೆ.

ಚಿತ್ರಕೃಪೆ: RameshSharma1

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಅರ್ಧ ಸಿಂಹ, ಅರ್ಧ ಮನುಷ್ಯನಾಕಾರನಾಗಿ ವಿಷ್ಣುವು ಖಂಬ ಸೀಳಿ ಹೊರಬಂದಾಗ, ಎಲ್ಲ ದೇವತೆಗಳು "ಅಹೋ ಬಲಂ" ಅಥವಾ "ಅಹೋ ಬಿಲಂ" ಎಂದು ಕೂಗಿಕೊಂಡರು. ಅದರಂತೆ ಆ ಖಂಬವನ್ನು ಇಂದಿಗೂ ಸಹ ಇಲ್ಲಿ ಕಾಣಬಹುದಾಗಿದ್ದು ಅದನ್ನು "ಉಗ್ರಸ್ಥಂಬ" ಅಥವಾ ತೆಲುಗಿನಲ್ಲಿ "ಉಕ್ಕು ಸ್ಥಂಬ" ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಪೂರ್ವ ಘಟ್ಟಗಳ ನಲ್ಲಮಲ್ಲ ಬೆಟ್ಟದಲ್ಲಿರುವ ಉಗ್ರ ಸ್ಥಂಭ.

ಚಿತ್ರಕೃಪೆ: RameshSharma1

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಇಲ್ಲಿನ ಕೆಲವು ದೇವಾಲಯಗಳು ಗುಹೆಗಳೊಳಗಿದ್ದರೆ ಇನ್ನಿತರೆ ದೇವಾಲಯಗಳನ್ನು ಟ್ರೆಕ್ ಮಾಡಿ ತಲುಪಬಹುದಾಗಿದೆ. ಟ್ರೆಕ್ ಸಮಯದಲ್ಲಿ ಪ್ರದೇಶದ ಸುಂದರ ಪರಿಸರವನ್ನು ಕಣ್ತುಂಬ ಸವಿಯುತ್ತ ಸಾಗಬಹುದು. ಆದರೆ ಗಮನವಿರಲಿ ಕೆಲವು ಟ್ರೆಕ್ ಗಳು ಕಠಿಣವಾಗಿವೆ. ಅಹೋಬಿಲಂನಲ್ಲಿ ಉಗ್ರ ಸ್ಥಂಭಕ್ಕೆ ಹೋಗುವ ಚಾರಣ ಮಾರ್ಗ.

ಚಿತ್ರಕೃಪೆ: Gopal Venkatesan

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಆಂಧ್ರದ ಚಿತ್ತೂರು ಜಿಲ್ಲೆಯ ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನದಲ್ಲಿರುವ ತಲಕೋಣ ತನ್ನಲ್ಲಿರುವ ಶ್ರೀಮಂತ ಜೈವಿಕ ಸಂಪತ್ತು ಹಾಗೂ ಆಂಧ್ರದ ಅತಿ ಎತ್ತರದ ಜಲಪಾತಕ್ಕೆ ಹೆಸರುವಾಸಿಯಾಗಿದೆ. ಪೂರ್ವ ಘಟ್ಟಗಳಲ್ಲಿ ಜೈವಿಕ ವೈವಿಧ್ಯತೆಯನ್ನು ಪ್ರತಿನಿಧಿಸುವ ಸುಂದರ ಸ್ಥಳವಾಗಿದೆ ತಲಕೋಣ.

ಚಿತ್ರಕೃಪೆ: VinothChandar

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ತಲಕೋಣ ಅರಣ್ಯ ಪ್ರದೇಶದಲ್ಲಿ ಕಂಡುಬರುವ ವಿಶಿಷ್ಟವಾದ ಅಣಬೆ.

ಚಿತ್ರಕೃಪೆ: J.M.Garg

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ತಲಕೋಣವು ತನ್ನಲ್ಲಿರುವ ಸುಂದರ ಜಲಪಾತದ ಬಳಿಯಿರುವ ಸಿದ್ಧೇಶ್ವರ ದೇವಸ್ಥಾನಕ್ಕೂ ಸಹ ಹೆಸರುವಾಸಿಯಾಗಿದೆ. ತಲಕೋಣದಲ್ಲಿರುವ ಸುಂದರ ತಾಜಾ ನೀರಿನ ತೊರೆ.

ಚಿತ್ರಕೃಪೆ: Ahura21

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಮಗದೊಂದು ಸುಂದರ ಆಕರ್ಷಕ ಸ್ಥಳ ಕೊಲ್ಲಿ ಬೆಟ್ಟಗಳು. ಕೊಲ್ಲಿ ಬೆಟ್ಟಗಳು ತಮಿಳುನಾಡಿನ ಕೇಂದ್ರ ಭಾಗದಲ್ಲಿರುವ ನಾಮಕ್ಕಲ್ ಜಿಲ್ಲೆಯಲ್ಲಿ ಕಂಡು ಬರುತ್ತದೆ. ಕೊಲ್ಲಿ ಬೆಟ್ಟದ ತಪ್ಪಲಿಗೆ ತಲುಪಲು ಬರೋಬ್ಬರಿ 70 ಮೊನಚಾದ ತಿರುವುಗಳನ್ನು ಸಾಗಿ ತಲುಪಬಹುದಾಗಿದೆ. ಇದು ತನ್ನ ಅದ್ಭುತ ಪ್ರಕೃತಿ ಸೌಂದರ್ಯ ಹಾಗೂ ಜಲಪಾತಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Docku

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಕೊಲ್ಲಿ ಬೆಟದಲ್ಲಿರುವ ಸುಂದರ ಹಾಗೂ ಆಕರ್ಷಕ ಆಕಾಶಗಂಗೈ ಜಲಪಾತ. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ಜಲಪಾತ ಅಂದವನ್ನು ಸವಿಯಲು ಬರುತ್ತಿರುತ್ತಾರೆ.

ಚಿತ್ರಕೃಪೆ: Docku

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಕೊಲ್ಲಿ ಬೆಟ್ಟಗಳ ಪ್ರದೇಶದಲ್ಲಿರುವ ಧಾರ್ಮಿಕ ಆಕರ್ಷಣೆ ಎಂದರೆ ಅರಪಾಳೀಶ್ವರರ್ ದೇವಸ್ಥಾನ. ಶಿವನಿಗೆ ಮುಡಿಪಾದ ಈ ದೇವಸ್ಥಾನವು ರಾಸಿಪುರಂನಲ್ಲಿರುವ ಶಿವನ ದೇವಾಲಯಕ್ಕೆ ರಹಸ್ಯ ದಾರಿ ಹೊಂದಿದೆ ಎಂದು ನಂಬಲಾಗಿದೆ.

ಚಿತ್ರಕೃಪೆ: Karthickbala

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಆಕರ್ಷಣೆಗಳು:

ಪೂರ್ವ ಘಟ್ಟಗಳ ಮತ್ತೊಂದು ಸುಂದರ ಕಡಿಮೆ ಎತ್ತರದ ಪರ್ವತ ಶ್ರೇಣಿಯಾದ ಎರಮಲ ಬೆಟ್ಟಗಳು ಸುಂದರ ಪ್ರವಾಸಿ ಆಕರ್ಷಣೆಯಾದ ಬೇಲಂ ಗುಹೆಗಳಿಗೆ ನೆಲೆಯಾಗಿದೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕೊಲಿಮಿಗುಂದ್ಲಾ ತಾಲೂಕಿನ ಬೇಲಮ್ ಹಳ್ಳಿಯಲ್ಲಿ ಕಂಡುಬರುವ ಬೇಲಮ್ ಗುಹೆಗಳು ಭಾರತ ಉಪಖಂಡದಲ್ಲೆ ಎರಡನೆಯ ಅತಿ ದೊಡ್ಡದಾದ ಗುಹೆಯಾಗಿದ್ದು, ಅತಿ ಉದ್ದನೆಯ ಗುಹೆ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ. ಬೇಲಂ ಗುಹೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X