Search
  • Follow NativePlanet
Share
» »ಕರ್ನಾಟಕದ ಈ ಸ್ಥಳದಲ್ಲಿದೆ ವಿಶಿಷ್ಟವಾದ ಗರುಡದೇವಾಲಯ!

ಕರ್ನಾಟಕದ ಈ ಸ್ಥಳದಲ್ಲಿದೆ ವಿಶಿಷ್ಟವಾದ ಗರುಡದೇವಾಲಯ!

ಗರುಡ ದೇವಾಲಯದ ಆಸಕ್ತಿದಾಯಕ ಕಥೆಗಳು

ಪುರಾಣದಲ್ಲಿ ಮಾನವರೂಪಿ ಎಂದು ಪರಿಗಣಿಸಲಾದ ಗರುಡ ಪಕ್ಷಿಗೆ ಹಿಂದು ಧರ್ಮದಲ್ಲಿ ಪವಿತ್ರವಾದ ಸ್ಥಾನವಿದೆ. ತ್ರಿಮೂರ್ತಿಗಳಲ್ಲಿ (ಬ್ರಹ್ಮ, ವಿಷ್ಣು, ಮತ್ತು ಮಹೇಶ್ವರ) ಒಬ್ಬ ದೇವರಾದ ವಿಷ್ಣುವಿನ ಸವಾರಿ ಅಥವಾ ವಾಹನವೆಂದು ಗರುಡನಿಗೆ ಗೌರವ ನೀಡಲಾಗುತ್ತದೆ.

ಭಾರತದಲ್ಲಿ ಈ ಗರುಡ ದೇವರಿಗೆ ಅರ್ಪಿತವಾದ ದೇವಾಲಯಗಳಿರುವುದು ಅತೀ ವಿರಳವೆಂದೇ ಹೇಳಬಹುದು.

garudaswamytemple

ಗರುಡನ ಕಂಚಿನ ವಿಗ್ರಹ

ಕುತೂಹಲವೆಂಬತೆ, ಕರ್ನಾಟಕದಲ್ಲಿ ಗರುಡನಿಗೆ ಸಮರ್ಪಿತವಾದ ಒಂದು ವಿಶಿಷ್ಟವಾದ ದೇವಾಲಯವಿದೆ. ಅದುವೇ ಕೋಲಾರದ ಕೋಲದೇವಿ ಗ್ರಾಮದ ಗರುಡ ಸ್ವಾಮಿ ದೇವಸ್ಥಾನ.

ಈ ದೇವಾಲಯಕ್ಕೆ ಸಂಭಂದಿಸಿದ ಹಲವಾರು ದಂತಕಥೆಗಳು

ದ್ವಾಪರ ಯುಗದ ಸಮಯದಲ್ಲಿ, ಅರ್ಜುನನು ಬೇಟೆಗಾಗಿ ಕಾಡಿಗೆ ಹೋಗುತ್ತಿದ್ದ ಸಮಯದಲ್ಲಿ, ಉತ್ಸುಕನಾದ ಅರ್ಜುನನು ತನ್ನ ಬಾಣಗಳ ಮೂಲಕ ಕಾಡಿನಲ್ಲಿ ಬೆಂಕಿಯನ್ನು ಹತ್ತಿಸಿದ್ದರ ಪರಿಣಾಮವಾಗಿ ಹಲವಾರು ಹಾವುಗಳು ಸಾಯುತ್ತವೆ. ಅರ್ಜುನನು ಈ ಸತ್ತ ಹಾವುಗಳಿಂದ ಶಾಪವನ್ನು ಪಡೆಯುತ್ತಾನೆ (ಅವನು ಸರ್ಪ ದೋಷವನ್ನು ಪಡೆಯುತ್ತಾನೆ). ಈ ಶಾಪದಿಂದ ಮುಕ್ತಿ ಪಡೆಯಲು, ವಿದ್ವಾಂಸರು ಗರುಡ ದೇವರನ್ನು ಪ್ರಾರ್ಥಿಸಲು ಅರ್ಜುನನಿಗೆ ಸಲಹೆ ನೀಡುತ್ತಾರೆ. ಹಾಗಾಗಿ ಅರ್ಜುನನೇ ಕೊಲದೇವಿ ಗರುಡ ದೇವಾಲಯದಲ್ಲಿ ಗರುಡ ದೇವರನ್ನು ಪ್ರತಿಷ್ಠಾಪಿಸಿದ ಎಂಬುದು ಸ್ಥಳೀಯರಲ್ಲಿ ನಂಬಿಕೆಯಿದೆ.

abronzeidolofgaruda

ರಾವಣನು ಜಟಾಯುವನ್ನು ಕೊಲ್ಲುವ ಸಮಯ!

ದೇವಾಲಯಕ್ಕೆ ಸಂಬಂಧಿಸಿದ ಇನ್ನೊಂದು ಜನಪ್ರಿಯ ದಂತ ಕಥೆಯು ರಾಮಾಯಣದ ಕಾಲಕ್ಕೆ ಸಂಬಂಧಿಸಿದ್ದಾಗಿದ್ದು, ಇದರ ಪ್ರಕಾರ ರಾವಣನು ಸೀತೆಯನ್ನು ಅಪಹರಿಸಿಕೊಂಡು ಪುಷ್ಪಕವಿಮಾನದಲ್ಲಿ ಕರೆದೊಯ್ಯುವ ಸಮಯದಲ್ಲಿ ಜಟಾಯು (ಗರುಡ) ಸೀತೆಯನ್ನು ರಕ್ಷಿಸುವ ಸಲುವಾಗಿ ಬಂದನೆನ್ನಲಾಗುತ್ತದೆ. ಆದರೆ ದುರಾದೃಷ್ಟವಶಾತ್ ಜಟಾಯು ರಾವಣನಿಂದ ಕೊಲ್ಲಲ್ಪಟ್ಟು ಕೆಳಗೆ ಬೀಳುತ್ತಾನೆ ಈ ಕೆಳಗೆ ಬಿದ್ದ ಸ್ಥಳವೇ ಈ 'ಕೋಲದೇವ್' ಎಂದು ಹೇಳಲಾಗುತ್ತದೆ ಕನ್ನಡದಲ್ಲಿ 'ಕೊಲ್ಲು' ಎಂದರೆ ಸಾಯಿಸುವುದು ಎಂದು ಅರ್ಥೈಸುತ್ತದೆ. ಅದೇ ಹೆಸರು ಈ ಸ್ಥಳಕ್ಕೆ ಬಂದಿದೆ ಎನ್ನಲಾಗುತ್ತದೆ. ವಿಷ್ಣು ದೇವರು ಜಟಾಯುವಿನ ಈ ಪ್ರಯತ್ನದಿಂದ ಸಂತುಷ್ಟರಾಗಿ ಆಶೀರ್ವದಿಸಿದುದರಿಂದ ಗರುಡ ದೇವರ ಸ್ಥಾನವನ್ನು ಪಡೆದುಕೊಂಡನೆನ್ನಲಾಗುತ್ತದೆ.

ಇಲ್ಲಿ ನಾವು ಆಂಜನೇಯ ಸ್ವಾಮಿ ದೇವಾಲಯವನ್ನೂ (ಹನುಮಾನ್) ನೋಡಬಹುದಾಗಿದೆ. ಈ ದೇವಾಲಯದ ವಿಶೇಷತೆಯೇನೆಂದರೆ ಇಲ್ಲಿ ಗರುಡನು ಒಂದು ಭುಜದಲ್ಲಿ ವಿಷ್ಣು ದೇವರನ್ನೂ ಇನ್ನೊಂದು ಭುಜದಲ್ಲಿ ಲಕ್ಷ್ಮೀದೇವಿಯನ್ನೂ ಹಿಡಿದುಕೊಂಡಿರುವುದು. ಆದ್ದರಿಂದ ಭಕ್ತರು ಗರುಡ ಸ್ವಾಮಿಯ ಜೊತೆಗೆ ವಿಷ್ಣುದೇವರ ಆಶೀರ್ವಾದವನ್ನು ಸಹ ಪಡೆಯಬೇಕೆಂದು ಇಚ್ಚಿಸುವುದಾದರೆ ಇಲ್ಲಿಗೆ ಭೇಟಿ ಕೊಡಬಹುದು.

ಗರುಡ ಸ್ವಾಮಿ ದೇವಾಲಯವು ಭಾರತದ ವಿಶಿಷ್ಟ ದೇವಾಲಯಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗಲಾರದು! ಕರ್ನಾಟಕದ ಈ ಆಕರ್ಷಕ ದೇವಾಲಯಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಬೇಡಿ.

ಕೋಲಾರದಲ್ಲಿರುವ ಕೋಲಾದೇವಿಗೆ ತಲುಪುವುದು ಹೇಗೆ?

ಬೆಂಗಳೂರಿನಿಂದ ಕೋಲಾರಕ್ಕೆ ಸುಮಾರು 75 ಕಿ.ಮೀ. ಕೊಲದೇವಿ ಮುಳಬಾಗಿಲು ಸುಮಾರು 15 ಕಿಮೀ ದೂರದಲ್ಲಿದೆ.

ರಸ್ತೆಯ ಮೂಲಕ: ಬೆಂಗಳೂರಿನಿಂದ ಗರುಡ ಸ್ವಾಮಿ ದೇವಸ್ಥಾನವನ್ನು ತಲುಪಲು, ನೀವು ರಾ.ಹೆ 4 ಮೂಲಕ ಪ್ರಯಾಣಿಸಿ ಕೋಲಾರವನ್ನು ದಾಟಬೇಕು. ನಂತರ ಎಡ ತಿರುವು ಪಡೆದು ಮುಡಿಯನೂರು ಕ್ರಾಸ್ ತಲುಪಿ ನಂತರ ಕೊಲದೇವಿ ಕಡೆಗೆ ಹೋಗಬೇಕು.

ರೈಲಿನ ಮೂಲಕ: ಬೆಂಗಳೂರಿನಿಂದ ಕೋಲಾರಕ್ಕೆ ಹಲವು ರೈಲುಗಳಿವೆ.

ಇವುಗಳಿಗೂ ಭೇಟಿ ಕೊಡಬಹುದು

ಅಂತರ ಗಂಗೆ, ಕೋಲಾರಮ್ಮ ದೇವಸ್ಥಾನ, ಕೋಟಿಲಿಂಗೇಶ್ವರ ದೇವಸ್ಥಾನ, ಮಾರ್ಕಂಡೇಯ ಬೆಟ್ಟ, ಅಂತರ ಗಂಗೆ ಗುಹೆಗಳು, ಸೋಮೇಶ್ವರ ದೇವಸ್ಥಾನಗಳು ಕೋಲಾರದ ಕೆಲವು ಪ್ರಮುಖ ಪ್ರವಾಸಿ ಸ್ಥಳಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X