» »ಕಳಸೇಶ್ವರ ನೆಲೆಸಿರುವ ಕಳಸಕ್ಕೊಂದು ಭೇಟಿ!

ಕಳಸೇಶ್ವರ ನೆಲೆಸಿರುವ ಕಳಸಕ್ಕೊಂದು ಭೇಟಿ!

Written By:

ಕರ್ನಾಟಕದಲ್ಲಿ ಪ್ರವಾಸ ಮಾಡುತ್ತ ಅನ್ವೇಷಿಸ ಹೊರಟರೆ ಅದೆಷ್ಟೊ ನೂರಾರು ಅದ್ಭುತ ವಿಷಯಗಳು ತಿಳಿದುಬರುತ್ತವೆ. ಕುತೂಹಲ ಕೆರಳಿಸುವ ಅದೆಷ್ಟೊ ಕಥೆಗಳು ಕೇಳಿಬರುತ್ತವೆ. ಪ್ರತಿಯೊಂದು ಅಂಶಗಳು ಒಂದೊಂದು ಸ್ಥಳಗಳ ಜೊತೆ ತಳುಕು ಹಾಕಿಕೊಂಡಿರುವುದನ್ನು ನೋಡಿದಾಗ, ನಾವು ಇಲ್ಲಿವರೆಗೂ ತಿಳಿದಿದ್ದು ಅತ್ಯಲ್ಪವೆಂತಲೂ, ತಿಳಿಬೇಕಾದುದು ಇನ್ನೂ ಸಾಗರದಷ್ಟಿದೆ ಎಂತಲೂ ಅರಿವಾಗಬಹುದು.

ಅಂತಹ ಒಂದು ಕುತೂಹಲಕರ ಸ್ಥಳದ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ. ಈ ಕ್ಷೇತ್ರವಿರುವುದು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ. ಹೌದು, ಬಹುತೇಕರು ಕೇಳಿರುವ, ಭೇಟಿ ನೀಡಿರಲೂಬಹುದಾದ ಶ್ರೀಕ್ಷೇತ್ರ ಕಳಸ. ಕಳಸದಲ್ಲಿ ಸಾಮಾನ್ಯವಾಗಿ ಪೂಜಿಸಲಾಗುವ ದೇವರೆಂದರೆ ಕಳಸೇಶ್ವರ, ಶಿವನ ಒಂದು ಅವತಾರ ಅಂತ ಬಹುತೇಕರಿಗೆ ತಿಳಿದಿದೆ.

ಶೃಂಗೇರಿ ಹಾಗೂ ಸುತ್ತಮುತ್ತಲು

ಆದರೆ ಕಳಸೇಶ್ವರ ಎಂದರೆ ಶಿವನು ಮಾತ್ರವೆ? ಖಂಡಿತ ಇಲ್ಲ, ಈ ಕ್ಷೇತ್ರವು ಅಗಸ್ತ್ಯ ಋಷಿಗಳಿಗೆ ಸಂಬಂಧಿಸಿದ, ಅವರಿಗೆ ಮುಡಿಪಾದ ಕ್ಷೇತ್ರವಾಗಿದೆ. ಆದಾಗ್ಯೂ ಅಗಸ್ತ್ಯರು ಇಲ್ಲಿ ಶಿವರೂಪಿ ಕಳಸೇಶ್ವರನಾಗಿ ನೆಲೆಸಿದುದಾದರೂ ಹೇಗೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುತ್ತಿದ್ದರೆ ಈ ಲೇಖನವನ್ನೊಮ್ಮೆ ಓದಿ ಹಾಗೂ ಶ್ರೀಕ್ಷೇತ್ರಕ್ಕೊಂದು ಸುಂದರ ಭೇಟಿ ನೀಡಿ.

ಸ್ಕಂದಪುರಾಣ

ಸ್ಕಂದಪುರಾಣ

ಕಳಸದ ಕ್ಷೇತ್ರ ಹಾಗೂ ಅದರ ಮಹತ್ವದ ಕುರಿತು ಸ್ಕಂದಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಸ್ಕಂದಪುರಾಣದ ತುಂಗಭದ್ರ ಖಂಡದಲ್ಲಿ ಕಳಸ ಕ್ಷೇತ್ರದ ಕುರಿತು ಕುತೂಹಲಕರವಾದ ಅಂಶಗಳಿವೆ.

ಚಿತ್ರಕೃಪೆ: kalasheshwaraswamytemple.kar.nic.in

ತುಂಗಭದ್ರ ಖಂಡ

ತುಂಗಭದ್ರ ಖಂಡ

ತುಂಗಭದ್ರ ಖಂಡದಲ್ಲಿ ಹೇಳಿರುವಂತೆ, ಬಹು ಹಿಂದೆ ದೇವೇಂದ್ರನು ತನ್ನ ಸಕಲ ದೇವತೆಗಳೊಡನೆ ಸೇರಿಕೊಂಡು ಬಹು ವೈಭವಯುತವಾಗಿ ಸಾಮ್ರಾಜ್ಯ ನಡೆಸುತ್ತಿದ್ದನು. ಅವನ ಕೀರ್ತಿ ಪತಾಕೆಗಳು ಎಲ್ಲೆಡೆ ಹರಿದಾಡಿದ್ದವು. ಹಾಗಾಗಿ ದೇವೇಂದ್ರನು ಸಂತಸದಲ್ಲಿದ್ದನು. ಅಂಬಾ ತೀರ್ಥ.

ಚಿತ್ರಕೃಪೆ: kalasheshwaraswamytemple.kar.nic.in

ವರುಣ ಹಾಗೂ ಮಿತ್ರ

ವರುಣ ಹಾಗೂ ಮಿತ್ರ

ಈ ಸಂದರ್ಭದಲ್ಲಿ ಭುಲೋಕದಲ್ಲಿ ಇಬ್ಬರು ಸಂತರಾದ ವರುಣ ಹಾಗೂ ಮಿತ್ರರು ಅಪಾರವಾದ ಸಿದ್ಧಿ ಹಾಗೂ ದೇವಕೃಪೆಗೆ ಪಾತ್ರರಾಗಬೇಕೆಂಬ ಉದ್ದೇಶದಿಂದ ಕಠಿಣವಾದ ತಪಸ್ಸನ್ನಾಚರಿಸಲು ನಿರ್ಧರಿಸಿ ಅದರಂತೆ ತಪಸ್ಸಿಗೆ ಕುಳಿತರು.

ಚಿತ್ರಕೃಪೆ: kalasheshwaraswamytemple.kar.nic.in

ಪ್ರಬಲರಾದರು

ಪ್ರಬಲರಾದರು

ದಿನಗಳೆದಂತೆ ಅವರಿಗೆ ಅಪಾರವಾದ ಶಕ್ತಿ ಸಿಗಲಾರಂಭಿಸಿತು. ಧಾರ್ಮಿಕವಾಗಿ ಸಾಕಷ್ಟು ಪ್ರಬಲರಾಗತೊಡಗಿದರು. ಈ ವಿಷಯವು ಈಗ ಇಂದ್ರನ ಕಿವಿಗೆ ತಲುಪಿತು. ಅದರಿಂದ ಚಿಂತಾಕ್ರಾಮ್ತನಾದ ಇಂದ್ರನು ಅವರಿಬ್ಬರ ತಪಸ್ಸಿಗೆ ಭಂಗ ಉಂಟು ಮಾಡಲು ಉಪಾಯ ಮಾಡತೊಡಗಿದ. ಕಲ್ ಬಾವಿ.

ಚಿತ್ರಕೃಪೆ: kalasheshwaraswamytemple.kar.nic.in

ಭಂಗ ತಂದಳು

ಭಂಗ ತಂದಳು

ಉಪಾಯದ ಫಲವಾಗಿ, ಇಂದ್ರನು ತನ್ನ ಆಸ್ಥಾನದ ಅತಿ ಸುಂದರ ಕನ್ಯೆಯಾದ ಉರ್ವಶಿಯನ್ನು ಕರೆದು ಅವರ ತಪಸ್ಸು ಭಂಗ ಮಾಡಲು ಸೂಚಿಸಿದ. ದೇವೇಂದ್ರನ ಆದೇಶದಂತೆ ಉರ್ವಶಿಯು ಭುಲೋಕಕ್ಕೆ ಬಂದು ಅವರಿಬ್ಬರು ತಪ ಮಾಡುತ್ತಿದ್ದ ಸ್ಥಳಕ್ಕೆ ಬಂದು ತನ್ನ ಮೈಮಾಟದ ಮೂಲಕ ಹಾಡಲಾರಂಭಿಸಿದಳು, ನೃತ್ಯಿಸತೊಡಗಿದಳು. ಕೋಟಿ ತೀರ್ಥ.

ಚಿತ್ರಕೃಪೆ: kalasheshwaraswamytemple.kar.nic.in

ಕುಂಭದಲ್ಲಿ!

ಕುಂಭದಲ್ಲಿ!

ಕೆಲ ಸಮಯ ಹಾಗೆ ಕಳೆಯಿತಾದರೂ ಕೊನೆಗೆ ಉರ್ವಶಿ ಅಪೂರ್ವ ಸೌಂದರ್ಯ ಹಾಗೂ ಶರೀರಕ್ಕೆ ಮರಳಾದ ಇಬ್ಬರು ವಿಚಲಿತರಾಗಿ ಅವಳೊಡಗೂಡಿ ಮೋಹಪಾಶದಲ್ಲಿ ಸಿಲುಕಿಬಿದ್ದರು. ಈ ಸಂದರ್ಭದಲ್ಲಿ ಮಿತ್ರನ ವೀರ್ಯ ಸ್ಖಲನವಾಗಿ ಅದನ್ನು ದೇವತೆಗಳು ಒಂದು ಕುಂಭ (ಮಡಕೆ) ದಲ್ಲಿ ಶೇಖರಿಸಿದರು. ನಾಗ ತೀರ್ಥ.

ಚಿತ್ರಕೃಪೆ: kalasheshwaraswamytemple.kar.nic.in

ಅಗಸ್ತ್ಯರು

ಅಗಸ್ತ್ಯರು

ಕುಂಭದಲ್ಲಿದ್ದ ಆ ವೀರ್ಯದಿಂದಲೆ ನಂತರ ಅಗಸ್ತ್ಯ ಋಷಿಗಳ ಜನನವಾಯಿತು. ಆದ್ದರಿಂದಲೆ ಅಗಸ್ತ್ಯ ಮುನಿಗ ಕುಂಭಯೋನಿ, ಕುಂಭಸುತ ಎಂಬ ಇತರೆ ಹೆಸರುಗಳಿರುವುದನ್ನು ಗಮನಿಸಬಹುದು. ಹೀಗೆ ಅವತರಿಸಿದ ಅಗಸ್ತ್ಯರು ಮುಂದೆ ಕ್ರಮವಾಗಿ ವೈದಿಕ ವಿದ್ಯೆಗಳನ್ನು ಪಡೆದು ಸಕಲ ಶಾಸ್ತ್ರ, ಪುರಾಣಾದಿಗಳನ್ನು ಅಭ್ಯಸಿಸಿ, ತಪಸ್ಸನ್ನಾಚರಿಸುತ ಶಿವನ ಕೃಪೆಗೆ ಪಾತ್ರರಾದರು.

ಚಿತ್ರಕೃಪೆ: kalasheshwaraswamytemple.kar.nic.in

ಇಚ್ಛೆ ವ್ಯಕ್ತಪಡಿಸಿದರು

ಇಚ್ಛೆ ವ್ಯಕ್ತಪಡಿಸಿದರು

ಶಿವನು ಪ್ರಸನ್ನನಾಗಿ ಅಗಸ್ತ್ಯರಿಗೆ ವರ ಕೇಳಲು ಹೇಳಿದಾಗ, ಅಗಸ್ತ್ಯರು ತಾವು ಜನಿಸಿದ್ದ ಕುಂಭದಲ್ಲಿ ಶಿವನು ಸದಾ ನೆಲೆಸಿರಬೇಕೆಂಬ ಇಚ್ಛೆ ವ್ಯಕ್ತಪಡಿಸಿದರು. ಅವರ ಇಚ್ಛೆಯಂತೆ ಶಿವನು ಕಳಸದಲ್ಲಿ ಕಳಸೇಶ್ವರನಾಗಿ ನೆಲೆಸಿದನೆಂಬ ಪ್ರತೀತಿಯಿದೆ.

ಚಿತ್ರಕೃಪೆ: kalasheshwaraswamytemple.kar.nic.in

ಅದರ ಪ್ರಕಾರ

ಅದರ ಪ್ರಕಾರ

ಕಳಸಕ್ಕೆ ಸಂಬಂಧಿಸಿದ ಇನ್ನೊಂದು ಕಥೆಯ ಪ್ರಕಾರ, ಲೋಕದಲ್ಲಿ ಶಿವನು ಪಾರ್ವತಿಯೊಡನೆ ವಿವಾಹವಾಗುವ ಸಮಯ ಬಂದಿತು. ಈ ಗಿರಿಜಾ ಕಲ್ಯಾಣ ಮಹೋತ್ಸವದಲ್ಲಿ ಭಾಗಿಯಾಗಲು ಸರ್ವ ಲೋಕವೆ ಕಾದು ಕುಳಿತಿತ್ತು. ಎಲ್ಲ ಸುರರು, ಕಿಂಕರರು, ಗಣಗಳು, ಯಕ್ಷರು, ಸಾಧು-ಸಂತರು, ದೇವತೆಗಳು ಹಿಮಾಲಯದಲ್ಲಿ ನೆರೆದಿದ್ದರು.

ಚಿತ್ರಕೃಪೆ: kalasheshwaraswamytemple.kar.nic.in

ಅಸಮತೋಲನ

ಅಸಮತೋಲನ

ಹೀಗೆ ಸರ್ವರೂ ಒಂದೆಡೆ ಸಮ್ಮಿಲಿತರಾದ ಕಾರಣ, ಭುಲೋಕದ ಕಕ್ಷೆಯಲ್ಲಿ ಅಸಮತೋಲನ ಉಂಟಾಯಿತು. ಇದರಿಂದ ಲೋಕಕ್ಕೆ ಕೆಡುಕಾಗುವ ಸಂದರ್ಭ ಒದಗಿ ಬಂತು. ಇದನ್ನು ಗಮನಿಸಿದ ಶಿವನು ಅಗಸ್ತ್ಯ ಋಷಿಗಳಿಗೆ ದಕ್ಷಿಣದಲ್ಲಿರುವ ಎತ್ತರದ ಸ್ಥಳವೊಂದಕ್ಕೆ ತೆರಳಿ ತಮ್ಮ ಭಾರ ಹಾಕಿ ಲೋಕವನ್ನು ಸಮತೋಲನಗೊಳಿಸಬೇಕೆಂದು ಕೇಳಿದನು.

ಚಿತ್ರಕೃಪೆ: kalasheshwaraswamytemple.kar.nic.in

ವಿಶೇಷ ದೃಷ್ಟಿ

ವಿಶೇಷ ದೃಷ್ಟಿ

ಆದರೆ ಅಗಸ್ತ್ಯರಿಗೆ ಶಿವನ ಮದುವೆ ನೋಡುವ ಹೆಬ್ಬಯಕೆಯಿತ್ತು. ಅದನ್ನು ಮನಗಂಡ ಶಿವನು ಮುನಿಗಳಿಗೆ ಎಲ್ಲೆ ಇದ್ದರೂ ಗಿರಿಜಾ ಕಲ್ಯಾಣವನ್ನು ವೀಕ್ಷಿಸಬಹುದಾದ ಜ್ಞಾನ ದೃಷ್ಟಿಯನ್ನು ಅನುಗ್ರಹಿಸಿದ. ಇದರಿಂದ ಸಂತಸಗೊಂಡ ಮುನಿಗಳು ಪ್ರಸ್ತುತ ಕಳಶದಂತಿದ್ದ ಈ ಕ್ಷೇತ್ರಕ್ಕೆ ಬಂದು ನೆಲೆಸಿ ಅದು ತಗ್ಗಿ ಭುಲೋಕದಲ್ಲಿ ಸಮತೋಲನತೆ ತಂದರು.

ಚಿತ್ರಕೃಪೆ: kalasheshwaraswamytemple.kar.nic.in

ಕಳಸ

ಕಳಸ

ಹಾಗಾಗಿ ಕೆಲವರ ಪ್ರಕಾರ ಇದು ಕಳಶ ಎಂತಲೂ ಕ್ರಮೇಣವಾಗಿ ಕಳಸ ಎಂಬ ಹೆಸರನ್ನು ಪಡೆಯಿತು ಎನ್ನುತ್ತಾರೆ. ಇನ್ನೂ ಇಲ್ಲಿ ಅಗಸ್ತ್ಯರೆ ಶಿವನ ಒಂದು ರೂಪವಾದ ಕಳಸೇಶ್ವರನಾಗಿ ನೆಲೆಸಿದ್ದಾನೆಂದು ಹೇಳಲಾಗುತ್ತದೆ.

ಚಿತ್ರಕೃಪೆ: kalasheshwaraswamytemple.kar.nic.in

ಎಲ್ಲಿದೆ ಇದು?

ಎಲ್ಲಿದೆ ಇದು?

ಈ ರೀತಿಯಾಗಿ ಕಳಸವು ತನ್ನದೆ ಆದ ವಿಶೇಷತೆಯನ್ನು ಹೊಂದಿದ್ದು ಭಕ್ತಾದಿಗಳನ್ನು ಎಲ್ಲೆಡೆಯಿಂದ ಆಕರ್ಷಿಸುತ್ತದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿರುವ ಶ್ರೀಕ್ಷೇತ್ರವೆ ಇಂದು ಪ್ರಸಿದ್ಧ ಧಾರ್ಮಿಅಕ ತಾಣವಾದ ಕಳಸ. ಶೃಂಗೇರಿ ಹಾಗೂ ಹೊರನಾಡುಗಳಿಗೆ ಬಹು ಹತ್ತಿರದಲ್ಲಿ ನೆಲೆಸಿದೆ ಕಳಸ.

ಚಿತ್ರಕೃಪೆ: kalasheshwaraswamytemple.kar.nic.in

ವರ್ಷಕ್ಕೊಮ್ಮೆ

ವರ್ಷಕ್ಕೊಮ್ಮೆ

ಇಂದಿಗೂ ಕಳಸದಲ್ಲಿ ಗಿರಿಜಾ ಕಲ್ಯಾಣಾರ್ಥವಾಗಿ ವರ್ಷಕ್ಕೊಂದು ಬಾರಿ ಅದ್ದೂರಿಯಾದ ಉತ್ಸವವು ನಡೆಯುತ್ತದೆ. ಈ ಕಲ್ಯಾಣೋತ್ಸವವನ್ನು ವೀಕ್ಷಿಸಲೆಂದು ಕರ್ನಾಟಕದ ಹಲವಾರು ಮೂಲೆಗಳಿಂದ ಭಕ್ತಸಾಗರವೆ ಕಳಸಕ್ಕೆ ಹರಿದುಬರುತ್ತದೆ.

ಚಿತ್ರಕೃಪೆ: Wind4wings

Please Wait while comments are loading...