Search
  • Follow NativePlanet
Share
» »ಭಾರತೀಯ ರಾಜ್ಯಗಳು ಮತ್ತು ಅವು ಯಾವುದಕ್ಕೆ ಪ್ರಸಿದ್ಧವಾಗಿವೆ

ಭಾರತೀಯ ರಾಜ್ಯಗಳು ಮತ್ತು ಅವು ಯಾವುದಕ್ಕೆ ಪ್ರಸಿದ್ಧವಾಗಿವೆ

ಭಾರತವು ಸೌಂದರ್ಯತೆ ಮತ್ತು ವೈವಿಧ್ಯತೆಗಳನ್ನು ಹೊಂದಿರುವ ದೇಶ ಎನ್ನುವುದರಲ್ಲಿ ಅಚ್ಚರಿಯಿಲ್ಲ. ದೇಶದ ಪ್ರತೀಯೊಂದೂ ರಾಜ್ಯಗಳಲ್ಲಿಯೂ ತನ್ನದೇ ಆದ ಅಸಂಖ್ಯಾತ ಗುಪ್ತ ಸೌಂದರ್ಯ ಮತ್ತು ನೈಸರ್ಗಿಕ ಸಂಪತ್ತುಗಳನ್ನು ಒಳಗೊಂಡಿದ್ದು ಭೇಟಿ ನೀಡಲು ಹಲವಾರು ಸ್ಥಳಗಳನ್ನು ಹೊಂದಿದೆ. 29 ರಾಜ್ಯಗಳನ್ನು ಹೊಂದಿರುವ ಭಾರತವು ಇಂದು ಪ್ರಪಂಚದಲ್ಲಿ ಹೆಚ್ಚು ಪರಿಶೋಧಿಸಲ್ಪಡುವ ಸ್ಥಳಗಳಲ್ಲಿ ಒಂದಾಗಿದೆ. ಒಬ್ಬ ಪ್ರಯಾಣಿಕನು ಒಂದು ಸ್ಥಳವನ್ನು ಅನ್ವೇಷಿಸಲು ಹೋದರೆ, ಅಲ್ಲಿ ಖಂಡಿತವಾಗಿಯೂ ಊಹಿಸಿದಕ್ಕಿಂತ ಹೆಚ್ಚಿನದನ್ನು ಪಡೆಯುತ್ತಾನೆ ಎಂಬುದನ್ನು ನಿರಾಕರಿಸಲಾಗುವುದಿಲ್ಲ.

ಆವಿಷ್ಕಾರ ಮತ್ತು ವಿಸ್ಮಯದ ಹಾದಿಯು ಭಾರತದ ಮೂಲಕ ಹಾದುಹೋಗುತ್ತಾ , ವೈವಿಧ್ಯಮಯ ಭೂದೃಶ್ಯದಿಂದ ಹಿಡಿದು ಎತ್ತರದ ಹಿಮಾಲಯ, ಪ್ರಶಾಂತ ಕಡಲತೀರಗಳು, ಶಾಂತಿಯುತ ಕಾಡುಗಳು ಅಥವಾ ಐತಿಹಾಸಿಕ ಸ್ಥಳಗಳಿಂದ ಆಧುನಿಕ ನಗರಗಳವರೆಗೆ, ಭಾರತದ ಎಲ್ಲಾ ರಾಜ್ಯಗಳು ಆದರ್ಶತೆಗಳನ್ನು ಹೊಂದಿರುವ ಎಲ್ಲವನ್ನೂ ಹೊಂದಿವೆ.

ಎಲ್ಲಾ ಭಾರತೀಯ ರಾಜ್ಯಗಳು ಯಾವುದಕ್ಕೆ ಪ್ರಸಿದ್ಧವಾಗಿವೆ ಎಂದು ಎಂದಾದರೂ ಯೋಚಿಸಿದ್ದೀರಾ? ಹೌದು ಎಂದಾದರೆ, ಈ ಲೇಖನದಲ್ಲಿ ಇದರ ಬಗ್ಗೆ ಮಾಹಿತಿ ನೀಡಲಾಗಿದ್ದು , ಭಾರತೀಯ ರಾಜ್ಯಗಳ ವಿಶೇಷತೆಗಳನ್ನು ತಿಳಿದುಕೊಳ್ಳಿ.

arunachal

1) ಅರುಣಾಚಲ ಪ್ರದೇಶ

ಸಸ್ಯಶಾಸ್ತ್ರಜ್ಞರ ಸ್ವರ್ಗ ಎಂದೂ ಕರೆಯಲ್ಪಡುವ ಅರುಣಾಚಲ ಪ್ರದೇಶವು ಅತ್ಯಂತ ಕಡಿಮೆ ಅನ್ವೇಷಿಸಲ್ಪಟ್ಟ ಭಾರತೀಯ ರಾಜ್ಯಗಳಲ್ಲಿ ಒಂದಾಗಿದೆ. ಈ ಸುಂದರ ರಾಜ್ಯವು ಸುಂದರ ಜಲಪಾತಗಳು, ಕಾಡುಗಳು ಮತ್ತು ಸೊಂಪಾದ ಕಣಿವೆಗಳಿಂಡ ತಂಪಾದ ಪರ್ವತಗಳವರೆಗೆ ರಮಣೀಯ ಪ್ರದೇಶಗಳನ್ನು ಹೊಂದಿದ್ದು ರಮಣೀಯ ಮನೋಹರ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾದ ಅರುಣಾಚಲ ಪ್ರದೇಶವು ಭಾರತದ ಅತಿದೊಡ್ಡ ಮಠವಾದ ತವಾಂಗ್ ಮಠಕ್ಕೆ ನೆಲೆಯಾಗಿದೆ.

andrapradesh

2)ಆಂಧ್ರಪ್ರದೇಶ

ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವೇ ಹೆಗ್ಗುರುತಾಗಿರುವ ಆಂಧ್ರಪ್ರದೇಶವು ನದಿಗಳಾದ ಕ್ರೃಷ್ಣ ಮತ್ತು ಗೋಸ್ಥಾನಿ, ಹಾರ್ಸ್ಲೇ ಹಾಗೂ ಪಪೀ ಪರ್ವತಗಳು, ಕುಚುಪುಡಿ ನೃತ್ಯ ಶೈಲಿ ಮತ್ತು ಮೈಕಾ ಉತ್ಪಾದನೆ ಇತ್ಯಾದಿಗಳಿಗೆ ಹೆಸರುವಾಸಿಯಾಗಿದೆ . ಇವಿಷ್ಟೇ ಅಲ್ಲದೆ ಭಾರತದ ಅತಿದೊಡ್ಡ ಅಕ್ಕಿ ರಫ್ತು ಮಾಡುವ ರಾಜ್ಯವಾದಿದೆ ಇದರಿಂದಾಗಿಯೇ ಇ ರಾಜ್ಯಕ್ಕೆ ರೈಸ್ ಬೌಲ್ ಆಫ್ ಇಂಡಿಯಾ(ಭಾರತದ ಅಕ್ಕಿಯ ಬಟ್ಟಲು) ಎಂದು ಕರೆಯಲಾಗಿದೆ.

bihar

3) ಬಿಹಾರ್

ಭಾರತದ ಅತ್ಯಂತ ಹಳೆಯ ನಗರಗಳಲ್ಲೊಂದಾದ ಬಿಹಾರವು ತನ್ನ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಒಮ್ಮೆ ಸಾರಾಯಿ ಈ ರಾಜ್ಯವು ಕೇಂದ್ರವಾಗಿತ್ತು ಅಲ್ಲದೆ ಇದು ಬೌದ್ಧ ತೀರ್ಥಯಾತ್ರೆಗಳಿಗೆ ಮತ್ತು ಬೌದ್ಧ ಧರ್ಮದ ಜನನಕ್ಕೂ ಹೆಸರುವಾಸಿಯಾಗಿದೆ.

4) ಜಾರ್ಕಂಡ್

ಹಿಂದೆ ಬಿಹಾರದ ಒಂದು ಭಾಗವಾಗಿದ್ದ ಈ ಸ್ಥಳವು ಭಾರತದ ಅತ್ಯಂತ ದೊಡ್ಡ ಭಾರತದಲ್ಲಿ ಪ್ರಮುಖ ಉಕ್ಕು ಮತ್ತು ಕಲ್ಲಿದ್ದಲು ಉತ್ಪಾದಕ ಕೆಂದ್ರವಾಗಿದೆ. ಈ ರಾಜ್ಯವು ಸುಂದರವಾದ ಭೂದೃಶ್ಯಗಳು ಮತ್ತು ಕಾಡುಗಳಿಗೆ ಹೆಸರುವಾಸಿಯಾಗಿದೆ ಅಲ್ಲದೆ ಜಾರ್ಕಂಡ್ ಅತ್ಯಂತ ಹಳೆಯ ಜೀವನಶೈಲಿಯನ್ನು ಹೊಂದಿರುವ ಬುಡಕಟ್ಟು ಜನಾಂಗದವರಿಗೆ ನೆಲೆಯಾಗಿದೆ.

odisha

5) ಒಡಿಶಾ

ಈ ಧಾರ್ಮಿಕತೆಗೆ ಹೆಸರಾದ ರಾಜ್ಯವು ಇಲ್ಲಿಯ ಹಳೇಯ ದೇವಾಲಯಗಳಾದ ಲಿಂಗರಾಜ್ ಮಂದಿರ್, ಮತ್ತು ಕೊನಾರ್ಕ್ ದೇವಾಲಯಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿ ಹೆಚ್ಚಿನ ದೇವಾಲಯಗಳು ಶಿವ ದೇವರಿಗೆ ಅರ್ಪಿತವಾದವುಗಳಾಗಿವೆ. ಮನಮೋಹಕ ಸರೋವರಗಳು ಮತ್ತು ದಟ್ಟವಾದ ಕಾಡುಗಳೂ ಕೂಡಾ ಇಲ್ಲಿಯ ಸೌಂದರ್ಯತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

6) ಚತ್ತಿಸ್ಗಢ

ಈ ರಾಜ್ಯವು ನಕ್ಸಲೈಟ್ ಗಳನ್ನು ಹೊಂದಿರುವ ಕುಖ್ಯಾಗೆ ಒಳಗಾಗಿದ್ದರೂ ಸಹ ಅತ್ಯಂತ ಕುತೂಹಲಕರ ಸಂಗತಿಗಳನ್ನು ತನ್ನಲ್ಲಿ ಹೊಂದಿದೆ. ಪ್ರಾಚೀನ ಕೋಟೆಗಳಿಂದ ಕೈಲಾಸ ಗುಹೆಗಳವರೆಗೆ, ಈ ರಾಜ್ಯವು ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವಗಳನ್ನು ವಿವರಿಸುವ ಎಲ್ಲಾ ವಿಷಯಗಳನ್ನು ಒಳಗೊಂಡಿದೆ ಅಲ್ಲದೆ ಈ ರಾಜ್ಯವು ದೇಶದ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಮೂಲ ಕೇಂದ್ರವಾಗಿದೆ.

nagaland

ನಾಗಾಲ್ಯಾಂಡ್

ಸಮೃದ್ದ ಜೀವವೈವಿಧ್ಯಗಳನ್ನು ಮತ್ತು 16 ಸ್ಥಳೀಯ ನಾಗಾ ಬುಡಕಟ್ಟುಗಳಿಗೆ ನೆಲೆಯಾಗಿರುವ, ಈ ಭವ್ಯವಾದ ರಾಜ್ಯವು ತನ್ನ ವಿಸ್ಮಯಕಾರಿ ದೃಶ್ಯ ಸೌಂದರ್ಯ ಮತ್ತು ಅದ್ಭುತ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.

uttar pradesh

8) ಉತ್ತರಪ್ರದೇಶ

ಈ ಭವ್ಯವಾದ ರಾಜ್ಯವು ತನ್ನದೇ ಆದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮೌಲ್ಯಗಳನ್ನು ಹೊಂದಿದೆ. ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಗೆ ಈ

ರಾಜ್ಯವು ನೆಲೆಯಾಗಿದೆ ಮಾತ್ರವಲ್ಲದೆ ಉತ್ತರಪ್ರದೇಶವು ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ಥಳಗಳಾದಂತಹ ವಾರಣಾಸಿ, ಆಗ್ರಾ, ಲಕ್ನೋ, ಫ಼ತೇಪುರ್ ಸಿಕ್ರಿ, ಮುಂತಾದವುಗಳನ್ನು ಹೊಂದಿದೆ.ಈ ರಾಜ್ಯವು ಗೋಧಿ, ಕಬ್ಬು ಮತ್ತು ಅಕ್ಕಿ ಬೆಳೆಗಳು ಮತ್ತು ಚರ್ಮದ ಸರಕುಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ.

madhya pradesh

9) ಮಧ್ಯಪ್ರದೇಶ

ದೇಶದ ಹೃದಯಭಾಗದಲ್ಲಿರುವ ರಾಜ್ಯವೆನಿಸಿಕೊಂಡ ಮಧ್ಯಪ್ರದೇಶವು ವಜ್ರ ಮತ್ತು ತಾಮ್ರದ ನಿಕ್ಷೇಪಗಳಿಂದ ಸಮೃದ್ದವಾಗಿದೆ. ಹೆಸರಾಂತ ಖಜುರಾಹೋ ದೇವಾಲಯಗಳು, ಇನ್ನಿತರ ಐತಿಹಾಸಿಕ ಸ್ಥಳಗಳು ಮತ್ತು ಸ್ಮಾರಕಗಳನ್ನು ಈ ಸುಂದರ ರಾಜ್ಯವು ಹೊಂದಿದೆ.

west bengal


10) ಪಶ್ಚಿಮ ಬಂಗಾಳ

ಭಾರತದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ಈ ರಾಜ್ಯವು ಹಳೇಯ ಕಾಲದ ಇತಿಹಾಸವನ್ನು ಹೊಂದಿದೆ. ಸುಂದರ್‌ಬನ್ ಕಾಡುಗಳು, ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ರಮಣೀಯ ಭೂದೃಶ್ಯಗಳಿಗೆ ಹೆಸರುವಾಸಿಯಾದ ಈ ರಾಜ್ಯವು ಶ್ರೀಮಂತ ಇತಿಹಾಸಕ್ಕೆ ನೆಲೆಯಾಗಿದೆ ಮತ್ತು ಭಾರತೀಯ ಚಿತ್ರರಂಗದ ಪ್ರವರ್ತಕರಲ್ಲಿ ಒಂದೆನಿಸಿಕೊಂಡಿದೆ.

sikkim

11) ಸಿಕ್ಕಿಂ

ಮನಮೋಹಕ ಸೌಂದರ್ಯತೆಗಳನ್ನೊಳಗೊಂಡ ಗಗನಚುಂಬಿ ಪರ್ವತಗಳು, ಪ್ರಶಾಂತವಾದ ಸರೋವರಗಳು, ಸೊಂಪಾದ ಬಯಲುಗಳು ಇವೆಲ್ಲ ಸೌಂದರ್ಯತೆಗಳನ್ನು ತನ್ನ ಸುತ್ತಮುತ್ತಲಲ್ಲಿ ಹೊಂದಿರುವ ಈ ರಾಜ್ಯವು ಭಾರತದಲ್ಲಿಯ ನೈಸರ್ಗಿಕ ಅದ್ಭುತಗಳಲ್ಲಿ ಒಂದೆನಿಸಿದೆ. ಕೆಲವೊಮ್ಮೆ ಈ ರಾಜ್ಯವನ್ನು ಅಕ್ಕಿಯ ಕಣಿವೆ ಎಂದು ಕರೆಯಲಾಗುತ್ತದೆ, ಸಿಕ್ಕಿಂ ಹಲವಾರು ಬೌದ್ಧ ಮಠಗಳಿಗೆ ಪ್ರಸಿದ್ಧವಾಗಿದೆ

12) ಅಸ್ಸಾಂ

ಚಹಾ ತೋಟಗಳು, ತೈಲ ಬೆಳೆಯುವ ಬಯಲುಗಳು ಮತ್ತು ರೇಷ್ಮೆಗೆ ಹೆಸರುವಾಸಿಯಾದ ಅಸ್ಸಾಂ ವೈವಿಧ್ಯಮಯ ವನ್ಯಜೀವಿಗಳು ಮತ್ತು ಹೇರಳವಾದ ನೈಸರ್ಗಿಕ ಸಂಪನ್ಮೂಲಗಳಿಗೆ ನೆಲೆಯಾಗಿದೆ. ಈ ಅದ್ಭುತ ರಾಜ್ಯದಲ್ಲಿ ಅನೇಕ ಪುರಾತನ ದೇವಾಲಯಗಳೂ ಇವೆ.

meghalaya

13) ಮೇಘಾಲಯ

ಜೀವಂತವಾಗಿರುವ ರೂಟ್ ಬ್ರಿಡ್ಜ್ ಗಳಿಗೆ ಹೆಸರುವಾಸಿಯಾಗಿದೆ ಮತ್ತು ಪ್ರತೀ ವರ್ಷ ಮೇಘಾಲಯದಲ್ಲಿ ಅತಿಹೆಚ್ಚು ಪ್ರಮಾಣದ ಮಳೆ ದಾಖಲಾಗುತ್ತದೆ. ಮೇಘಾಲಯದ ಖಾಸಿ ಬೆಟ್ಟವು ಮಸಾಲೆಗಳು ಮತ್ತು ಔಷಧೀಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ. ಇಂದು, ಈ ಸುಂದರವಾದ ರಾಜ್ಯವು ಹೆಸರುವಾಸಿಯಾಗಿದೆ. ಏಷ್ಯಾದ ಸ್ವಚ್ಛ ಗ್ರಾಮವಾದ ಪ್ರಸಿದ್ದ ಮಾವ್ಲಿನ್ನಾಂಗ್‌ ಗೆ ನೆಲೆಯಾಗಿದೆ.

14) ಮಿಜೋರಾಂ

ಭಾರತದ ಕನಿಷ್ಟ ಅನ್ವೇಷಿತ ರಾಜ್ಯಗಳಲ್ಲಿ ಮಿಜೋರಾಂ ಕೂಡಾ ಒಂದಾಗಿದೆ .ಮಿಜೋರಾಂ ಪ್ರಾಚೀನಕಾಲದ ಬುಡಕಟ್ಟು ಮತ್ತು ವಿಭಿನ್ನವಾದ ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆ ಮಾತ್ರವಲ್ಲದೆ ಗರಿಷ್ಟ ಪ್ರಮಾಣದಲ್ಲಿ ಅಕ್ಷರಸ್ಥತೆ ಇರುವ ಈ ಸುಂದರರಾಜ್ಯವು ಮನಮೋಹಕ ಕಣಿವೆಗಳು ಮತ್ತು ಸ್ವಚ್ಚವಾದ ನದಿಗಳನ್ನು ಹೊಂದಿರುವುದಕ್ಕೆ ಪ್ರಸಿದ್ದವಾಗಿದೆ.

15) ತ್ರಿಪುರ

ಏಳು ಸಹೋದರಿ ರಾಜ್ಯಗಳಲ್ಲಿ ಒಂದಾಗಿರುವ ತ್ರಿಪುರವು ಭಾರತದ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ರಾಜ್ಯವಾಗಿದೆ . ಸಾಂಸ್ಕೃತಿಕ ವೈವಿಧ್ಯತೆಗಳಿಂದ ಜನಪದ ಕಲೆಗಳು, ಕಿತ್ತಳೆ ತೋಟಗಳು ಮತ್ತು ಸೆಣಬಿನ ಬೆಳೆಗಳು,ಮುಂತಾದವುಗಳನ್ನು ಹೊಂದಿರುವ ಈ ರಾಜ್ಯವು ಇಲ್ಲಿಗೆ ಭೇಟಿ ನೀಡುವ ಎಲ್ಲರಿಗೂ ಬೇಕಾದನ್ನು ಕೊಡುತ್ತದೆ. ಈ ರಾಜ್ಯವು ಅತ್ಯುತ್ತಮ ಗುಣಮಟ್ಟದ ಬಿದಿರಿನ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ.

16) ಮಣಿಪುರ

ಜಗತ್ಪ್ರಸಿದ್ದ ಮಣೀಪುರಿ ನೃತ್ಯಕ್ಕೆ ಹೆಸರುವಾಸಿಯಾಗಿರುವ ಈ ರಾಜ್ಯವು ಶ್ರೀಮ್ಂತ ಸಂಸ್ಕೃತಿ ಮತ್ತು ನೈಸರ್ಗಿಕ ಸಸ್ಯ ಸಂಪನ್ಮೂಲಗಳನ್ನು ತನ್ನಲ್ಲಿ ಹೊಂದಿದೆ. ಕೆಲವು ಋತುಗಳಲ್ಲಿ ಮಾತ್ರ ಅರಳುವ ಹೂವುಗಳಿಗೆ ಹೆಸರುವಾಸಿಯಾಗಿರುವ ಜುಕೌ ಕಣಿವೆ ಕೂಡ ಇಲ್ಲಿಯೇ ಇದೆ.

17) ಉತ್ತಾರಖಂಡ್

ಹಲವಾರು ಹಿಂದು ದೇವಾಲಯಗಳು ಮತ್ತು ಯಾತ್ರಾಸ್ಥಳ ಗಳು ಮತ್ತು ಹಿಂದೆ ಉತ್ತರಪ್ರದೇಶದ ಒಂದು ಭಾಗವಾಗಿದ್ದ ಉತ್ತರಾಖಂಡ್ , ಭವ್ಯವಾದ ಗಿರಿಧಾಮಗಳನ್ನು ಹೊಂದಿದ್ದು ಇವುಗಳು ಟ್ರೆಕ್ಕಿಂಗ್ ಮತ್ತು ಕ್ಯಾಂಪಿಂಗ್ ಮಾಡಲು ಹೆಸರುವಾಸಿಯಾಗಿದೆ.

18) ಜಮ್ಮು ಮತ್ತು ಕಾಶ್ಮೀರ

ನಿಸ್ಸಂದೇಹವಾಗಿಯೂ ಭೂಮಿಯ ಮೇಲಿರುವ ಸ್ವರ್ಗವೆಂದೇ ಹೆಸರುವಾಸಿಯಾಗಿರುವ ಭಾರತದ ಈ ಭವ್ಯವಾದ ರಾಜ್ಯವು ಇಲ್ಲಿಯ ದೈವಿಕ ಸೌಂದರ್ಯತೆಯ ಬೆಟ್ಟಗಳು, ಪರ್ವತ ಶ್ರೇಣಿಗಳು, ಕಣಿವೆಗಳು, ಸೊಂಪಾದ ಹಚ್ಚಹಸಿರಿನ ಸಸ್ಯಗಳು, ನಿರ್ಮಲವಾದ ಸರೋವರಗಳು ಮುಂತಾದುವುಗಳನ್ನು ಹೊಂದುವುದಕ್ಕೆ ಹೆಸರುವಾಸಿಯಾಗಿದೆ. ಅಲ್ಲದೆ ಹಲವಾರು ಹಿಂದುಗಳ ಯಾತ್ರಾಸ್ಥಳಗಳಾದ ಅಮರನಾಥ, ಮತ್ತು ವೈಷ್ಣೋದೇವಿ, ಮುಂತಾದವುಗಳ ನೆಲೆಯಾಗಿದೆ. ಜಮ್ಮು ಕಾಶ್ಮೀರಕ್ಕೆ ಭೇಟಿ ಕೊಡುವ ಪ್ರಯಾಣಿಕರು ಮತ್ತು ಪ್ರವಾಸಿಗರಿಗೆ ಈ ತಾಣವು ಸ್ವರ್ಗಸದೃಶವಾಗಿದೆ.

19) ಹಿಮಾಚಲ ಪ್ರದೇಶ

ಬೇಸಿಗೆ ಕಾಲದಲ್ಲಿ ಭೇಟಿ ನೀಡಾಲು ಸೂಕ್ತವಾದ ಸ್ಥಳವೆಂದೇ ಪ್ರಸಿದ್ದಿಯನ್ನು ಪಡೆದ ಈ ರಾಜ್ಯವು ತನ್ನಲ್ಲಿ ಪ್ರಸಿದ್ದ ಗಿರಿಧಾಮಗಳಾದ ಮನಾಲಿ, ಶಿಮ್ಲಾ, ಕುಲು ಮುಂತಾದವುಗಳಿಗೆ ನೆಲೆಯಾಗಿದೆ. ಈ ರಾಜ್ಯವು ಬಹಳ ಕಾಲದಿಂದಲೂ ಹನಿಮೂನ್ ಗೆ ಯೋಗ್ಯವಾದ ಸ್ಥಳವೆಂದು ಹೆಸರುವಾಸಿಯಾಗಿದೆ. ಈ ರಾಜ್ಯವು ಇಲ್ಲಿ ಬೆಳೆಯಲಾಗುವ ಸೇಬಿನ ಹಣ್ಣಿಗೆ ಹೆಸರುವಾಸಿಯಾಗಿದೆ ಮಾತ್ರವಲ್ಲದೆ ಈ ಸುಂದರ ರಾಜ್ಯವು ಬೈಕರ್ಸ್ ಗಳು, ಸ್ಕೇಟಿಂಗ್ ಪ್ರಿಯರು, ಮತ್ತು ರಾಕ್ ಕ್ಲೈಂಬಿಂಗ್ ಮಾಡಲು ಬಯಸುವ ಸಾಹಸಪ್ರಿಯರಿಗೂ ಇಷ್ಟವಾದ ಸ್ಥಳವಾಗಿದೆ.

20) ಹರಿಯಾಣ

ಈ ರಾಜ್ಯದ ರೋಮಾಂಚಕ ಸಂಸ್ಕೃತಿಯ ಕಾರಣದಿಂದಾಗಿ ಇದನ್ನು ದೇವರ ಮನೆ ಎಂದು ಕರೆಯಲ್ಪಡುತ್ತದೆ ಅಲ್ಲದೆ ಈ ರಾಜ್ಯವು ಹಸುಗಳು , ಹಾಲು ಮತ್ತು ಕೃಷಿಗೆ ಹೆಸರುವಾಸಿಯಾಗಿದೆ. ಹರಿಯಾಣವು ತನ್ನ ಆಟೋಮೊಬೈಲ್ ಉದ್ಯಮಗಳಿಗೆ ಹೆಸರುವಾಸಿಯಾಗಿದೆ.

21) ಪಂಜಾಬ್

ಐದು ನದಿಗಳ ನಾಡೆನಿಸಿದ ಭಾರತದ ಈ ಆಕರ್ಷಕ ರಾಜ್ಯವು ಬೆಚ್ಚಗಿನ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಗೋಲ್ಡನ್ ಟೆಂಪಲ್ ಮತ್ತು ಹಲವಾರು ಧಾರ್ಮಿಕ ಸ್ಥಳಗಳಿಗೆ ತವರು, ಪಂಜಾಬ್ ಅಕ್ಕಿ, ಗೋಧಿ, ಕಾರ್ನ್, ಬಾರ್ಲಿ ಇತ್ಯಾದಿಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಕೆಲವೊಮ್ಮೆ ಇದನ್ನು ಲಸ್ಸಿ ಮತ್ತು ಆಲೂ ಪರಾಠಾಗಳ ರಾಜ್ಯ ಎಂದೂ ಕರೆಯಲಾಗುತ್ತದೆ

22 ರಾಜಸ್ಥಾನ

ಥಾರ್ ಮರುಭೂಮಿ ಮತ್ತು ಅಸಂಖ್ಯಾತ ರಾಜಮನೆತನಗಳು ಮತ್ತು ಕೋಟೆಗಳನ್ನು ಹೊಂದಿರುವ ರಾಜ್ಯ ರಾಜಸ್ಥಾನವು ತನ್ನ ರಾಜ ಸಂಸ್ಕೃತಿ ಮತ್ತು ಐತಿಹಾಸಿಕ ಸ್ಮಾರಕಗಳಾದ ಹವಾ ಮಹಲ್ ಮತ್ತು ಹಲವಾರು ಬವೋರಿಗಳಿಗೆ ಹೆಸರುವಾಸಿಯಾಗಿದೆ.

23) ಗುಜರಾತ್

ಈ ಶ್ರೀಮಂತ ರಾಜ್ಯವು ಅದರ ಆಹಾರಗಳಾದ ಢೋಕ್ಲಾ ಮತ್ತು ಫಾಫ್ಡಾ ಮತ್ತು ನೃತ್ಯ - ಗರ್ಬಾ ಮತ್ತು ದಾಂಡಿಯಾಗಳಿಗೆ ಹೆಸರುವಾಸಿಯಾಗಿದೆ. ಇದು ತನ್ನ ವ್ಯಾವಹಾರಿಕ ಜ್ಞಾನಕ್ಕೆ ಜನಪ್ರಿಯವಾಗಿದ್ದು ಆ ಮೂಲಕ ವಿಶ್ವದರ್ಜೆಯ ನಾಯಕರು ಮತ್ತು ಉದ್ಯಮಿಗಳನ್ನು ದೇಶಕ್ಕೆ ನೀಡುವುದರಲ್ಲಿ ಪ್ರಸಿದ್ದವಾಗಿದೆ.

24) ಗೋವಾ

ನಿಸ್ಸಂದೇಹವಾಗಿ, ಭಾರತದ ಪಾರ್ಟಿಗಳ(ಕೂಟ) ರಾಜಧಾನಿ ಎಂದು ಕರೆಯಲ್ಪಡುವ ಗೋವಾ ಪಬ್‌ಗಳು, ಬೀಚ್‌ಗಳು, ಮಧ್ಯರಾತ್ರಿಯ ಪಾರ್ಟಿಗಳು ಮತ್ತು ಸುಂದರವಾದ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ.

25) ಮಹಾರಾಷ್ಟ್ರ

ಪ್ರಸಿದ್ದ ಬಾಲಿವುಡ್ ಹಿಂದಿ ಚಿತ್ರರಂಗದಿಂದ ಗಲ್ಲಿಮನೆಗಳ (ಚಾಲ್ ಗಳು)ವರೆಗೆ, ಮಂತ್ರಮುಗ್ದಗೊಳಿಸುವ ಬೀಚ್ ಗಳಿಂದ ಪ್ರಾಚೀನ ಗುಹೆಗಳು ಮತ್ತು ಪ್ರಸಿದ್ದ ಗಣೇಶ ಹಬ್ಬದಿಂದ ಶ್ರೀಮಂತ ಕಲೆ ಮತ್ತು ಸಂಸ್ಕೃತಿಗಳವರೆಗೆ ಅಚ್ಚರಿ ಪಡುವ ಎಲ್ಲವನ್ನೂ ಇಲ್ಲಿಗೆ ಭೇಟಿನೀಡುವವರಿಗೆ ಈ ರಾಜ್ಯವು ನೀಡುತ್ತದೆ. ಇದನ್ನು ಶಿವಾಜಿ ಮತ್ತು ದಾದಾ ಸಾಹೇಬ್ ಫಾಲ್ಕೆಯಂತಹ ಜಗತ್ಪ್ರಸಿದ್ದ ವ್ಯಕ್ತಿಗಳ ನಾಡು ಎಂದೂ ಕರೆಯಲಾಗುತ್ತದೆ.

26) ಕರ್ನಾಟಕ

ಮೈಸೂರು ಅರಮನೆಗಳು ಮತ್ತು ಬೆಂಗಳೂರಿನಂತಹ ಭಾರತದ ಪ್ರಮುಖ ತಂತ್ರಜ್ಞಾನ ಕೇಂದ್ರವನ್ನು ಹೊಂದಿರುವ ಕರ್ನಾಟಕ, ಸಾವಿರಾರು ವರ್ಷಗಳ ಹಿಂದಿನ ಮರೆಯಲಾಗದ ಇತಿಹಾಸ ಮತ್ತು ಶಾಂತಿಯುತ ಪ್ರಕೃತಿಯಿಂದ ಸುತ್ತುವರೆದಿರುವ ಸುಂದರವಾದ ಗಿರಿಧಾಮಗಳಿಗೆ ಹೆಸರುವಾಸಿಯಾಗಿದೆ.

27) ಕೇರಳ

ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳವು ತನ್ನ ನೈಸರ್ಗಿಕ ಹಿನ್ನೀರಿನ ಸ್ಥಳಗಳು, ಹಲವಾರು ನಿರ್ಮಲವಾದ ಬೀಚ್‌ಗಳು, ದೋಣಿ ರೇಸಿಂಗ್, ತೆಂಗಿನ ಮರಗಳು ಮತ್ತು ಸುಂದರವಾದ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ.

28) ತಮಿಳುನಾಡು

ತಮಿಳುನಾಡು ತನ್ನಲ್ಲಿಯ ನೈಸರ್ಗಿಕ ಸಂಪನ್ಮೂಲಗಳು, ಹಿಂದೂ ದೇವಾಲಯಗಳು, ಗಿರಿಧಾಮಗಳು ಮತ್ತು ಹಲವಾರು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿಗೆ ಹೆಸರುವಾಸಿಯಾಗಿದೆ, ಇದು ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಯ ನೆಲೆಯಾಗಿದೆ. ತಮಿಳುನಾಡು ಟಾಲಿವುಡ್‌ಗೆ ಜನಪ್ರಿಯವಾದ್ದು, ಇದು ಭಾರತದ ಎರಡನೇ ಅತಿದೊಡ್ಡ ಚಲನಚಿತ್ರ ನಿರ್ಮಾಣ ಉದ್ಯಮವಾಗಿದೆ.

29) ತೆಲಂಗಾಣ

ಇತ್ತೀಚೆಗೆ ರೂಪುಗೊಂಡ ಮತ್ತು ಹಿಂದೆ ಆಂಧ್ರಪ್ರದೇಶದ ಭಾಗವಾಗಿದ್ದ ತೆಲಂಗಾಣವು ಪ್ರಸಿದ್ದ ಚಾರ್ ಮಿನಾರ್, ಬಿರಿಯಾನಿ ಸ್ಥಳಗಳು, ಪುರಾತನ ದೇವಾಲಯಗಳು ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X