Search
  • Follow NativePlanet
Share
» »ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ್ದ ಸೆಲ್ಯುಲರ್ ಜೈಲು ಈಗ ಏನಾಗಿದೆ ಗೊತ್ತಾ?

ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ್ದ ಸೆಲ್ಯುಲರ್ ಜೈಲು ಈಗ ಏನಾಗಿದೆ ಗೊತ್ತಾ?

ಜೈಲು ಸಂಕೀರ್ಣವು ಈಗ ಭಾರತ ಸರ್ಕಾರದ ಒಡೆತನದಲ್ಲಿದೆ. ಇದೀಗ ಬ್ರಿಟಿಷ್ ಯುಗದಲ್ಲಿ ಖೈದಿಗಳ ಜೀವನವನ್ನು ಪ್ರದರ್ಶಿಸುವ ರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಲ್ಪಟ್ಟಿ ದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ

ಕಾಲಾ ಪಾನಿ ಎಂದೂ ಕರೆಯಲ್ಪಡುವ ಸೆಲ್ಯುಲರ್ ಜೈಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿಯಾದ ಪೋರ್ಟ್ ಬ್ಲೇರ್‌ನಲ್ಲಿರುವ ಹಳೆಯ ವಸಾಹತುಶಾಹಿ ಜೈಲು. ಭಾರತದಲ್ಲಿ ತಮ್ಮ ವಸಾಹತಿನ ಆಳ್ವಿಕೆಯಲ್ಲಿ ಬ್ರಿಟಿಷರಿಂದ ನಿರ್ಮಿಸಲ್ಪಟ್ಟ ಸೆಲ್ಯುಲರ್ ಜೈಲು ಅನ್ನು ವಿಶೇಷವಾಗಿ ಬ್ರಿಟಿಷ್ ಕೈಯಲ್ಲಿ ಅನೇಕ ದುಷ್ಕೃತ್ಯಗಳಿಗೆ ಒಳಗಾದ ರಾಜಕೀಯ ಖೈದಿಗಳನ್ನು ಗಡೀಪಾರು ಮಾಡಲು ಬಳಸಲಾಯಿತು.

ಸ್ವಾತಂತ್ರ್ಯಹೋರಾಟಗಾರರನ್ನು ಬಂಧಿಸಲಾಗಿತ್ತು

ಸ್ವಾತಂತ್ರ್ಯಹೋರಾಟಗಾರರನ್ನು ಬಂಧಿಸಲಾಗಿತ್ತು

PC:Jomesh
ಜೈಲು ನಿರ್ಮಾಣವು 1896 ರಲ್ಲಿ ಪ್ರಾರಂಭಗಿ 1906 ರಲ್ಲಿ ಪೂರ್ಣಗೊಂಡಿತು. ನಂತರ ಇದನ್ನು ಬಟುಕೇಶ್ವರ್ ದತ್, ಯೋಗೇಂದ್ರ ಶುಕ್ಲಾ ಮತ್ತು ವಿನಾಯಕ್ ದಾಮೋದರ್ ಸಾವರ್ಕರ್ ಮುಂತಾದ ಹಲವು ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರನ್ನು ಬಂದಿಯಾಗಿಸಲು ಬಳಸಲಾಯಿತು. ಇತಿಹಾಸದ ಸೆಳವು, ಸೆಲ್ಯುಲರ್ ಜೈಲಿನಲ್ಲಿನ ಹೋರಾಟವು ಸ್ಪಷ್ಟವಾಗಿ ಕಾಣುತ್ತದೆ.

ರಾಷ್ಟ್ರೀಯ ಸ್ಮಾರಕವಾಗಿದೆ

ರಾಷ್ಟ್ರೀಯ ಸ್ಮಾರಕವಾಗಿದೆ

PC: wikipedia
ಜೈಲು ಸಂಕೀರ್ಣವು ಈಗ ಭಾರತ ಸರ್ಕಾರದ ಒಡೆತನದಲ್ಲಿದೆ. ಇದೀಗ ಬ್ರಿಟಿಷ್ ಯುಗದಲ್ಲಿ ಖೈದಿಗಳ ಜೀವನವನ್ನು ಪ್ರದರ್ಶಿಸುವ ರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಲ್ಪಟ್ಟಿ ದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟ, ನೀಡಿದ ಬಲಿದಾನದ ನೆನಪಾಗಿ ಉಳಿದಿದೆ. ಸೆರೆಮನೆಯು ಏಳು ಭಾಗಗಳಾಗಿ ವಿಭಜನೆಯಾಗಿದ್ದು, ಮುಖ್ಯ ಗೋಪುರದಿಂದ ಪ್ರತಿಯೊಂದು ಭಾಗವು ಕೊಠಡಿಗಳು ಅಥವಾ ಡಾರ್ಮಿಟರಿಗಳನ್ನು ಹೊರತುಪಡಿಸಿ 693 ಜೈಲು ಕೊಠಡಿಗಳನ್ನು ಹೊಂದಿದೆ.

ಬೆಳಕು ಮತ್ತು ಧ್ವನಿ ಪ್ರದರ್ಶನ

ಬೆಳಕು ಮತ್ತು ಧ್ವನಿ ಪ್ರದರ್ಶನ

PC: Aliven Sarkar
ಕೆಚ್ಚೆದೆಯ ಹುತಾತ್ಮರ ನೆನಪಿಗಾಗಿ ಸೆಲ್ಯುಲರ್ ಜೈಲು ಅಧಿಕಾರಿಗಳು ಪ್ರತಿ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರದಂದು ಬೆಳಕು ಮತ್ತು ಧ್ವನಿ ಪ್ರದರ್ಶನವನ್ನು ಆಯೋಜಿಸುತ್ತಾರೆ. ಹಿಂದಿ ಪ್ರದರ್ಶನ ಸಮಯವು 6:00 PM ಮತ್ತು 7:15 PM, ಆದರೆ 7:15 PM ನಲ್ಲಿ ಕೇವಲ ಒಂದು ಇಂಗ್ಲಿಷ್ ಪ್ರದರ್ಶನವಿದೆ. ಈ ಪ್ರದರ್ಶನ ನೋಡಲು ಪ್ರತಿಯೊಬ್ಬರಿಗೆ 50ರೂ. ಟಿಕೆಟ್ ವಿಧಿಸಲಾಗಿದೆ. ಇದು ಬ್ರಿಟಿಷರ ಕಾಲದಲ್ಲಿ ಜೈಲಿನಲ್ಲಿದ್ದ ಕೈದಿಗಳ ಜೀವನದ ಜೊತೆಗೆ ಸ್ವಾತಂತ್ರ್ಯ ಚಳುವಳಿಯ ಇತಿಹಾಸವನ್ನು ವಿವರಿಸುತ್ತದೆ.

ಜೈಲಿನೊಳಗೆ ಮ್ಯೂಸಿಯಂ

ಜೈಲಿನೊಳಗೆ ಮ್ಯೂಸಿಯಂ

PC:Aliven Sarkar
ಈ ಜೈಲಿನೊಳಗೆ ಫೋಟೋ ತೆಗೆಯಲು ನಿಮ್ಮ ಕ್ಯಾಮೆರಾವನ್ನು ಕೊಂಡೊಯ್ಯುವುದಾದರೆ ೨೦೦ ರೂ. ಶುಲ್ಕ ನೀಡಬೇಕು. ನೀವು ಜೈಲಿನೊಳಗೆ ಪ್ರವೇಶಿಸಿದಾಗ, ಪ್ರವೇಶ ಬ್ಲಾಕ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳನ್ನು ಹೊಂದಿರುವ ಪ್ರದರ್ಶನ ಗ್ಯಾಲರಿಗೆ ತೆರೆದುಕೊಳ್ಳುತ್ತದೆ. ಮೊದಲ ಸ್ವಾತಂತ್ರ್ಯ ಯುದ್ಧ ಮತ್ತು ಹಳೆಯ ಫೋಟೋಗ್ರಾಫ್ ಗ್ಯಾಲರಿ ಸಹ ಮ್ಯೂಸಿಯಂ ಆವರಣದಲ್ಲಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಆರ್ಟ್ ಗ್ಯಾಲರಿ, ನೇತಾಜಿ ಗ್ಯಾಲರಿ ಮತ್ತು ಸ್ವಾತಂತ್ರ್ಯ ಚಳವಳಿಯ ಗ್ರಂಥಾಲಯವಿದೆ.

ಸ್ವಾತಂತ್ರ್ಯದ ನಂತರ

ಸ್ವಾತಂತ್ರ್ಯದ ನಂತರ

PC: Aliven Sarkar
ಭಾರತವು ಸ್ವಾತಂತ್ರ್ಯ ಸಾಧಿಸಿದ ನಂತರ ಜೈಲಿನಲ್ಲಿದ್ದ ಇನ್ನೆರಡು ಭಾಗಗಳನ್ನು ಕೆಡವಲಾಯಿತು. ಆದಾಗ್ಯೂ, ಇದು ಇತಿಹಾಸದ ಸ್ಪಷ್ಟವಾದ ಪುರಾವೆಗಳನ್ನು ಅಳಿಸಿಹಾಕುವ ಒಂದು ಮಾರ್ಗವಾಗಿದ್ದು, ಇದು ಅನೇಕ ಮಾಜಿ ಕೈದಿಗಳು ಮತ್ತು ರಾಜಕೀಯ ನಾಯಕರ ಪ್ರತಿಭಟನೆಗೆ ಕಾರಣವಾಯಿತು. ಉಳಿದ ಮೂರು ವಿಭಾಗಗಳು ಮತ್ತು ಕೇಂದ್ರ ಗೋಪುರವನ್ನು 1979 ರ ಫೆಬ್ರುವರಿ 11 ರಂದು ಭಾರತದ ಪ್ರಧಾನಮಂತ್ರಿಯಾಗಿದ್ದ ಮೋರಾರ್ಜಿ ದೇಸಾಯಿಯವರಿಂದ ರಾಷ್ಟ್ರೀಯ ಸ್ಮಾರಕವಾಗಿ ಮಾರ್ಪಡಿಸಲಾಯಿತು.
ಗೋವಿಂದ ಬಲ್ಲಭ್ ಪಂತ್ ಆಸ್ಪತ್ರೆಯನ್ನು 1963 ರಲ್ಲಿ ಸೆಲ್ಯುಲರ್ ಜೈಲ್ ಆವರಣದಲ್ಲಿ ಸ್ಥಾಪಿಸಲಾಯಿತು. ಈಗ ಇದು ಸುಮಾರು 500-ಹಾಸಿಗೆಯ ಆಸ್ಪತ್ರೆಯಾಗಿದ್ದು, ಸುಮಾರು 40 ವೈದ್ಯರು ಸ್ಥಳೀಯ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Aliven Sarkar
ಸೆಲ್ಯುಲರ್ ಜೈಲು ಪೋರ್ಟ್ ಬ್ಲೇರ್ ನಗರದೊಳಗೆ ಇದೆ. ಅಂಡಮಾನ್ ಸಾರ್ವಜನಿಕ ಸಾರಿಗೆ ಅಭಿವೃದ್ಧಿಪಡಿಸದ ಕಾರಣ ನಿಮ್ಮ ಸ್ವಂತ ಖಾಸಗಿ ಕ್ಯಾಬ್ ಅನ್ನು ನೇಮಿಸಿಕೊಳ್ಳುವುದರ ಮೂಲಕ ಜೈಲು ಸಂಕೀರ್ಣವನ್ನು ತಲುಪಲು ಉತ್ತಮ ಮಾರ್ಗವಾಗಿದೆ. ಬೇರೆ, ನಿಮ್ಮ ಗಮ್ಯಸ್ಥಾನವನ್ನು ತಲುಪಲು ನೀವು ಆಟೋ-ರಿಕ್ಷಾವನ್ನು ಸಹ ತೆಗೆದುಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X