Search
  • Follow NativePlanet
Share
» »ಶಿವನೇರಿ ಕೋಟೆ ಸುತ್ತೋಣ ಬನ್ನಿ...

ಶಿವನೇರಿ ಕೋಟೆ ಸುತ್ತೋಣ ಬನ್ನಿ...

ಶಿವನೇರಿ ಕೋಟೆಯು ಪುಣೆಯ ಉತ್ತರ ಭಾಗದಲ್ಲಿ ಬರುವ ಜುನ್ನರ್ ತಾಲೂಕಿನಲ್ಲಿದೆ. ಇದು ಛತ್ರಪತಿ ಶಿವಾಜಿಯ ಜನ್ಮ ಸ್ಥಳ. ಮರಾಠಾ ಸಾಮ್ರಾಜ್ಯದಲ್ಲಿ ಬರುವ ಈ ಕೋಟೆಯನ್ನು ಶಿವಾಜಿಯ ತಂದೆ ಶಹಜಿ ರಜೆ ನಿರ್ಮಿಸಿದ್ದರು.

By Divya

ಶಿವನೇರಿ ಕೋಟೆಯು ಪುಣೆಯ ಉತ್ತರ ಭಾಗದಲ್ಲಿ ಬರುವ ಜುನ್ನರ್ ತಾಲೂಕಿನಲ್ಲಿದೆ. ಇದು ಛತ್ರಪತಿ ಶಿವಾಜಿಯ ಜನ್ಮ ಸ್ಥಳ. ಮರಾಠಾ ಸಾಮ್ರಾಜ್ಯದಲ್ಲಿ ಬರುವ ಈ ಕೋಟೆಯನ್ನು ಶಿವಾಜಿಯ ತಂದೆ ಶಹಜಿ ರಜೆ ನಿರ್ಮಿಸಿದ್ದರು. ಅಂದು ಶಹಜಿ ತನ್ನ ಹೆಂಡತಿ ಮತ್ತು ಮಗನ ಸುರಕ್ಷೆಗಾಗಿ ಈ ಕೋಟೆಯ ನಿರ್ಮಿಸಿದ್ದ. ಇಂದು ಇದೊಂದು ಚಾರಣ ಸ್ಥಳವಾಗಿ ಹೊರಹೊಮ್ಮಿದೆ.

ಶಿವನೇರಿ ಕೋಟೆ ಸುತ್ತೋಣ ಬನ್ನಿ...

PC : wikipedia

ಇಲ್ಲಿಗೆ ಬರಲು ಎರಡು ರಸ್ತೆ ಮಾರ್ಗಗಳಿವೆ. ಒಂದು ರಸ್ತೆಮಾರ್ಗ ಕೋಟೆಯ ತುದಿಯವರೆಗೂ ಕರೆದೊಯ್ಯುತ್ತದೆ. ಇನ್ನೊಂದು ಮಾರ್ಗದಲ್ಲಿ ಚಾರಣ ಮಾಡುವುದರ ಮೂಲಕ ತಲುಪಬಹುದು. ಈ ಕೋಟೆಗೆ 400 ಮೆಟ್ಟಿಲು ಹಾಗೂ ಏಳು ಭವ್ಯವಾದ ಗೇಟ್‍ಗಳಿವೆ. ಈ ಮಾರ್ಗದ ಮಧ್ಯೆ ಕಲ್ಲಿನಲ್ಲಿ ಕತ್ತರಿಸಲಾದ ಗುಹೆಗಳು ಸಿಗುತ್ತವೆ. ಇದರಲ್ಲಿ ಕೆಲವೊಂದನ್ನು ಪ್ರವೇಶಿಸಲು ಅಸಾಧ್ಯ. ಇಲ್ಲಿರುವ ಕಲ್ಲಿನ ಮೆಟ್ಟಿಲುಗಳು ಹಾಳಾಗಿರುವುದರಿಂದ ಅಲ್ಲಿಗೆ ತಲುಪಲು ಕಡಿಮೆ ಎಂದರೂ ಒಂದು ತಾಸು ಬೇಕಾಗುತ್ತದೆ. ಈ ಕೋಟೆಯು ಬಾಣದ ಆಕೃತಿಯಲ್ಲಿರುವುದು ವಿಶೇಷ.

ಶಿವನೇರಿ ಕೋಟೆ ಸುತ್ತೋಣ ಬನ್ನಿ...

PC : Flickr

ಆಕರ್ಷಣೆ
ಇಲ್ಲಿ ಅಂಬರ್‍ಖಾನ ಮತ್ತು ಧನ್ಯಕೋಟಿ ಎನ್ನುವ ಎರಡು ಆಹಾರ ಕಣಜ ಇರುವುದನ್ನು ಕಾಣಬಹುದು. ಆ ಕಾಲದಲ್ಲಿ ವರ್ಷಕ್ಕೆ ಬೇಕಾಗುವಷ್ಟು ಆಹಾರ ಧಾನ್ಯಗಳನ್ನು ಇದರಲ್ಲೇ ಸಂಗ್ರಹಿಸಿಡುತ್ತಿದ್ದರು. ನೆಲ ಮಾಳಿಗೆಯಲ್ಲಿ ಗಂಗಾ-ಜಮುನ ಎನ್ನುವ ಎರಡು ನೀರಿನ ಟ್ಯಾಂಕ್ ಇರುವುದನ್ನು ನೋಡಬಹುದು. ಇದು ಸರಿಸುಮಾರು 2000 ವರ್ಷಗಳಷ್ಟು ಹಳೆಯದ್ದು ಎಂದು ಹೇಳಲಾಗುತ್ತದೆ. ಇಲ್ಲಿ ಅಪರಾಧಿಗಳನ್ನು ಶಿಕ್ಷಿಸಿ, ಬಂಧಿಸುವ ಸ್ಥಳಗಳಿರುವುದನ್ನು ಕಾಣಬಹುದು.

ಸುಂದರವಾದ ಏಳು ಬಾಗಿಲು ಹಾಗೂ ಶಿವಾಯಿ ದೇವಿ ಎನ್ನುವ ದೇವಾಲಯವೂ ಇಲ್ಲಿದೆ. ಶಿವಾಜಿಗೆ ಹೆಸರಿಟ್ಟಿರುವುದು ಈ ದೇವರ ನಾಮವನ್ನೇ. ಇದನ್ನು ಸರ್ಕಾರ ಈಗ ಶಿವ ಮಂದಿರ ಎಂದು ಕರೆದಿದೆ. ಇದರಲ್ಲಿ ಶಿವಾಜಿ ಹಾಗೂ ಅವರ ತಾಯಿ ಜೀಜಾ ಮಾತೆಯ ಮೂರ್ತಿಯನ್ನು ಇಡಲಾಗಿದೆ.

ಶಿವನೇರಿ ಕೋಟೆ ಸುತ್ತೋಣ ಬನ್ನಿ...

PC : Flickr

ಬರಬಹುದಾದ ಸಮಯ
ಆಗಸ್ಟ್ ನಿಂದ ಫೆಬ್ರವರಿ ಸಮಯದಲ್ಲಿ ಹೆಚ್ಚು ಹಸಿರುಮಯ ಪರಿಸರ ಹೊಂದಿರುತ್ತದೆ. ಇಂಥ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಚಾರಣ ಮಾಡುತ್ತಾ, ಇಲ್ಲಿಯ ಸೌಂದರ್ಯ ಸವಿಯಬಹುದು. ಬೆಂಗಳೂರಿನಿಂದ 939 ಕಿ.ಮೀ. ದೂರದಲ್ಲಿರುವ ಈ ತಾಣ ಪುಣೆಯಿಂದ 95 ಕಿ.ಮೀ. ದೂರದಲ್ಲಿದೆ.

ಶಿವನೇರಿ ಕೋಟೆ ಸುತ್ತೋಣ ಬನ್ನಿ...

PC : Flickr

ಊಟ-ವಸತಿ
ಈ ಕೋಟೆಯ ಬಳಿ ಊಟ-ವಸತಿಯ ವ್ಯವಸ್ಥೆಗೆ ಅನುಕೂಲವಿಲ್ಲ. ಹಾಗಾಗಿ ಪುಣೆಯ ಸಿಟಿಯಲ್ಲಿಯೇ ಹೊಂದುವುದು ಉತ್ತಮ. ಇಲ್ಲಿ ನಮ್ಮ ಅನುಕೂಲಕ್ಕೆ ತಕ್ಕಂತಹ ವಸತಿ ಸೌಲಭ್ಯವನ್ನು ಪಡೆಯಬಹುದು.

Read more about: pune
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X