Search
  • Follow NativePlanet
Share
» »ಪಶ್ಚಿಮ ಘಟ್ಟಗಳ ಮಾಯಾ ಲೋಕದಲ್ಲಿ ವಿಹಾರ

ಪಶ್ಚಿಮ ಘಟ್ಟಗಳ ಮಾಯಾ ಲೋಕದಲ್ಲಿ ವಿಹಾರ

By Vijay

ಪಶ್ಚಿಮ ಘಟ್ಟಗಳು ಭಾರತ ಜಂಬೂದ್ವೀಪದ (ಪೆನಿನ್ಸುಲಾ ಅಂದರೆ ಮೂರು ಭಾಗಗಳಲ್ಲಿ ನೀರಿನಿಂದ ಆವೃತವಾದ) ಪಶ್ಚಿಮ ಭಾಗದಲ್ಲಿರುವ ಹಸಿರು ವನರಾಶಿಗಳಿಂದ ಕಂಗೊಳಿಸುವ ಒಂದು ಅದ್ಭುತ ಪರ್ವತಗಳ ಶ್ರೇಣಿ. ಮಹಾರಾಷ್ಟ್ರದಿಂದ ಹಿಡಿದು, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ರಾಜ್ಯಗಳವರೆಗೆ ಈ ಸುಂದರ ಘಟ್ಟಗಳು ಹರಡಿವೆ.

ವಿಶೇಷ ಲೇಖನ : ನೋಡಲೇಬೇಕಾದ ಪ್ರಾಕೃತಿಕ ವಿಸ್ಮಯಗಳು

ವರ್ಷಪೂರ್ತಿ ಹಿತಕರವಾದ ವಾತಾವರಣವನ್ನು ಹೊಂದಿರುವ ಈ ಘಟ್ಟಗಳಿಗೆ ಅನೇಕ ವಿದೇಶಿ ಹಾಗೂ ಸ್ವದೇಶಿ ಪ್ರವಾಸಿಗರು ಭೇಟಿ ನೀಡುತ್ತಲೆ ಇರುತ್ತಾರೆ. ಅದರಲ್ಲೂ ವಿಶೇಷವಾಗಿ ಸಸ್ಯ ಶಾಸ್ತ್ರ, ಜೀವಶಾಸ್ತ್ರದ ವಿಜ್ಞಾನಿಗಳು, ಸಂಶೋಧಕರು ಹಾಗೂ ವಿದ್ಯಾರ್ಥಿಗಳಿಗೆ ಪಶ್ಚಿಮ ಘಟ್ಟಗಳು ಅಧ್ಯಯನಕ್ಕೆಂದು ವಿಫುಲವಾದ ಅವಕಾಶಗಳನ್ನು ಒದಗಿಸುತ್ತವೆ.

ಸಹ್ಯಾದ್ರಿ ಬೆಟ್ಟಗಳು ಎಂದೂ ಕರೆಯಲ್ಪಡುವ ಈ ಪರ್ವತಗಳ ಶ್ರೇಣಿಯು ದಖ್ಖನ್ ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ ಕರಾವಳಿ ಪ್ರದೇಶದಿಂದ ಬೇರ್ಪಡಿಸುತ್ತದೆ. ಮಹಾರಾಷ್ಟ್ರ-ಗುಜರಾತ್‌ಗಳ ಗಡಿಪ್ರದೇಶದಲ್ಲಿ ತಾಪ್ತಿ ನದಿಯ ದಕ್ಷಿಣದಲ್ಲಿ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ ಕನ್ಯಾಕುಮಾರಿಯವರೆಗೆ ವಿಶಾಲವಾಗಿ ಚಾಚಿದೆ. ಇದರ ಒಟ್ಟಾರೆ ಉದ್ದ ಸುಮಾರು 1600 ಕಿ.ಮೀ ಗಳಷ್ಟೆಂದು ಲೆಕ್ಕಹಾಕಲಾಗಿದೆ. ಒಟ್ಟು ಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಭಾಗವು ಕರ್ನಾಟಕದಲ್ಲಿರುವುದು ಹೆಮ್ಮೆಯ ವಿಷಯ.

ವಿಶೇಷ ಲೇಖನ : ಲಕ್ಷ ವರ್ಷ ಇತಿಹಾಸವಿರುವ ಅದ್ಭುತ ಭೀಮ್ ಬೆಟ್ಕಾ

ಪಶ್ಚಿಮ ಘಟ್ಟಗಳಲ್ಲಿ ಆವರಿಸಿರುವ ಆಯಾ ರಾಜ್ಯಗಳ ಹಲವಾರು ಸ್ಥಳಗಳು ಪರಿಸರವಾದಿಗಳಿಗೆ, ವನ್ಯಜೀವಿ ಛಾಯಾಗ್ರಾಹಕರಿಗೆ, ನಿಸರ್ಗ ಪ್ರೇಮಿಗಳಿಗೆ ಬಹು ನೆಚ್ಚಿನ ತಾಣವಾಗಿ ಪರಿಣಮಿಸಿದೆ. ಕಾರಣ, ಇಲ್ಲಿ ಕಂಡುಬರುವ ಅಪಾರ ಪ್ರಕೃತಿ ಸೌಂದರ್ಯ, ಹಸಿರಿನ ವನರಾಶಿ, ಹಿತಕರವಾದ ಪರಿಸರ, ತಾಜಾ ವಾತಾವರಣ, ನದಿ, ಕೆರೆ ತೊರೆಗಳು, ಜಲಪಾತಗಳು, ವೈವಿಧ್ಯಮಯ ಜೀವ ಸಂಕುಲ, ವಿವಿಧ ಕೀಟ ಪ್ರಭೇದಗಳು. ಇದು ಎಂಥವರನ್ನಾದರೂ ಸರಿ ಬೆರುಗುಗೊಳಿಸದೆ ಇರಲಾರದು. ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ಪಶ್ಚಿಮ ಘಟ್ಟಗಳ ಮಾಯಾ ಲೋಕದಲ್ಲಿ ಒಂದು ಸುತ್ತು ಹೊಡೆಯೋಣ. ಏನಂತಿರಿ?

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳು ಒಟ್ಟಾರೆಯಾಗಿ 60,000 ಚ.ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಆವರಿಸಿದ್ದು ಅತಿ ಸಂಕೀರ್ಣ ನದಿ ವ್ಯವಸ್ಥೆಗೆ ಮೂಲವಾಗಿವೆ. ಪಶ್ಚಿಮ ಘಟ್ಟಗಳಲ್ಲಿ ಹರಿಯುವ ನದಿಗಳು ಭಾರತದ ಒಟ್ಟು ಜಲಾನಯನ ಪ್ರದೇಶದ 40% ಭಾಗವನ್ನು ಆವರಿಸಿವೆ. ಬೆಂಗಳೂರಿನಿಂದ ಗೋವಾಗೆ ಹೋಗುವ ಮಾರ್ಗ, ಪಶ್ಚಿಮ ಘಟ್ಟಗಳ ಸ್ವರ್ಗ.

ಚಿತ್ರಕೃಪೆ: Prateek Rungta

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳಲ್ಲಿ ಮಧ್ಯಮ, ಎತ್ತರ ಹಾಗೂ ಸಮತಟ್ಟಾದ ಭೂಪ್ರದೆಶಗಳಿದ್ದು ಒಟ್ಟು ಸರಾಸರಿ ಎತ್ತರ ಸುಮಾರು 1200 ಮೀಟರ್ ಗಳಷ್ಟು. ಈ ಪ್ರದೇಶವು ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯದ ನೆಲೆಗಳಲ್ಲಿ ಒಂದಾಗಿದ್ದು 5000 ಕ್ಕೂ ಹೆಚ್ಚಿನ ತಳಿಯ ಗಿಡಮರಗಳು, 139 ಬಗೆಯ ಸಸ್ತನಿಗಳು, 508 ಪ್ರಭೇದದ ಪಕ್ಷಿಗಳು ಮತ್ತು 179 ಪ್ರಕಾರದ ದ್ವಿಚರಿಗಳಿಗೆ ನೆಲೆಯಾಗಿವೆ. ಪಶ್ಚಿಮ ಘಟ್ಟದ ವಯನಾಡ್ ಬೆಟ್ಟಗಳಲ್ಲಿನ ದಾರಿ.

ಚಿತ್ರಕೃಪೆ: Dhruvaraj S

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ 325 ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ. ಸುಮಾರು 150 ಮಿಲಿಯನ್ ವರ್ಷಗಳ ಹಿಂದೆ ಗೊಂಡ್ವಾನಾ ಮಹಾಭೂಖಂಡವು ಛಿದ್ರಗೊಂಡಾಗ ಪಶ್ಚಿಮ ಘಟ್ಟಗಳ ರಚನೆ ಆಯಿತೆಂದು ನಂಬಲಾಗಿದೆ. ಈ ಘಟ್ಟಗಳಲ್ಲಿ ಕಾಣುವ ಅತ್ಯಂತ ಸಾಮಾನ್ಯ ಶಿಲೆಯೆಂದರೆ ಬಸಾಲ್ಟ್ ಕಲ್ಲು. ಇದರ ಪದರವು ಭೂಮಿಯೊಳಗೆ ಮೂರು ಕಿ.ಮೀ.ವರಗೆ ಚಾಚಿದೆ. ಉಳಿದಂತೆ ಗ್ರಾನೈಟ್, ಖೊಂಡಾಲೈಟ್, ಲೆಪ್ಟಿನೈಟ್, ಚಾರ್ನೋಕೈಟ್ ಮುಂತಾದ ಶಿಲಾಪ್ರಕಾರಗಳನ್ನೂ ಸಹ ಇಲ್ಲಿ ಕಾಣಬಹುದಾಗಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿರುವ ಶರಾವತಿ ಕಣಿವೆ.

ಚಿತ್ರಕೃಪೆ: Abhishek

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಉತ್ತರದಲ್ಲಿ ಸಾತ್ಪುರ ಶ್ರೇಣಿಯಿಂದ ಆರಂಭವಾಗಿ ದಕ್ಷಿಣಕ್ಕೆ ಹಬ್ಬಿರುವ ಪಶ್ಚಿಮ ಘಟ್ಟಗಳ ಮುಖ್ಯ ಶ್ರೇಣಿಗಳು ಸಹ್ಯಾದ್ರಿ, ಬಿಳಿಗಿರಂಗನ ಬೆಟ್ಟಸಾಲು, ಸರ್ವರಾಯನ್ ಶ್ರೇಣಿ, ಮತ್ತು ನೀಲಗಿರಿ ಬೆಟ್ಟ ಸರಣಿ. ಬಿಳಿಗಿರಂಗನ ಬೆಟ್ಟಸಾಲು ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳ ಸಂಧಿಸ್ಥಾನದಲ್ಲಿದೆ. ಪಶ್ಚಿಮ ಘಟ್ಟದಲ್ಲಿರುವ ಕೇರಳದ ಮುನ್ನಾರ್ ಬಳಿಯಿರುವ ಕುಂಡಲ ಜಲಾಶಯ.

ಚಿತ್ರಕೃಪೆ: Prateek Rungta

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳು ಸಾವಿರಾರು ತಳಿಯ ಪ್ರಾಣಿ ಪಕ್ಷಿಗಳಿಗೆ ನೆಲೆಯಾಗಿದ್ದು ಜಾಗತಿಕವಾಗಿ ವಿನಾಶದಂಚಿನಲ್ಲಿರುವ 325 ತಳಿಗಳ ಪ್ರಾಣಿಗಳನ್ನು ಒಳಗೊಂಡಿದೆ. ಒಟ್ಟು 139 ತಳಿಯ ಸಸ್ತನಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ. ಇವುಗಳ ಪೈಕಿ ಅಳಿವಿನ ಅಂಚಿನಲ್ಲಿರುವ ಮಲಬಾರ್ ದೊಡ್ಡ ಚುಕ್ಕೆಯ ಪುನುಗು ಬೆಕ್ಕು ಮತ್ತು ಸಿಂಗಳೀಕಗಳು ಸೇರಿವೆ.

ಚಿತ್ರಕೃಪೆ: Navaneeth KN

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಸಿಂಗಳೀಕಗಳು (ಸಿಂಹ ಬಾಲದ ಕೋತಿಗಳು) ಇಂದು ಪಶ್ಚಿಮ ಘಟ್ಟಗಳಲ್ಲಿರುವ ಮೌನಕಣಿವೆ (ಸೈಲೆಂಟ್ ವ್ಯಾಲಿ) ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನಗಳಲ್ಲಿ ಮಾತ್ರ ಕಂಡುಬರುತ್ತವೆ. ಅಲ್ಲದೆ ಪಶ್ಚಿಮ ಘಟ್ಟದಲ್ಲಿರುವ ನೀಲಗಿರಿ ಜೀವಗೋಲವು (ಬಯೋ ಸ್ಫೀಯರ್) ಏಷ್ಯಾದಲ್ಲಿಯೇ ಆನೆಗಳ ಬಹುದೊಡ್ಡ ನೆಲೆಯಾಗಿದ್ದು ಪ್ರಾಜೆಕ್ಟ್ ಎಲಿಫೆಂಟ್ ಮತ್ತು ಪ್ರಾಜೆಕ್ಟ್ ಟೈಗರ್ ಯೋಜನೆಗಳ ಕೇಂದ್ರವಾಗಿದೆ.

ಚಿತ್ರಕೃಪೆ: Sankara Subramanian

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಉತ್ತರ ಭಾರತದಲ್ಲಿರುವ, ಸಮೃದ್ಧ ಸಂಖ್ಯೆಯ ಹುಲಿಗಳ ಆವಾಸ ಸ್ಥಾನವಾಗಿರುವ ಸುಂದರಬನವನ್ನು ಹೊರತುಪಡಿಸಿದರೆ ಅತ್ಯಂತ ಹೆಚ್ಚಿನ ಸಂಖ್ಯೆಯ ಹುಲಿಗಳು ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತವೆ. ಅಲ್ಲದೆ ಈ ಘಟ್ಟಗಳಲ್ಲಿ ನೆಲೆಸಿರುವ ಬಂಡಿಪುರ ಮತ್ತು ನಾಗರಹೊಳೆ ಉದ್ಯಾನಗಳಲ್ಲಿ ಕಾಡೆಮ್ಮೆಗಳ ಬೃಹತ್ ಹಿಂಡುಗಳನ್ನು ಕಾಣಬಹುದು.

ಚಿತ್ರಕೃಪೆ: Dineshkannambadi

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮತ್ತೊಂದು ಸುಂದರ ಹಾಗೂ ಪ್ರವಾಸಿ ಆಕರ್ಷಣೆಯ ಸ್ಥಳವಾದ ಕೊಡಗಿನ ಕಾಡುಗಳಲ್ಲಿ ನೀಲಗಿರಿ ಲಂಗೂರ್ ಜಾತಿಯ ಮಂಗಗಳು ಗಣನೀಯ ಸಂಖ್ಯೆಯಲ್ಲಿ ಕಂಡುಬಂದರೆ, ಭದ್ರಾ ಅಭಯಾರಣ್ಯವು ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಮುಂಟ್‌ಜಾಕ್‌ಗಳಿಗೆ ನೆಲೆಯನ್ನು ಒದಗಿಸಿದೆ. ಉಳಿದಂತೆ ಸಂಬಾರ್ ಜಿಂಕೆ, ಕರಡಿ, ಚಿರತೆ, ಕಾಡುಹಂದಿ ಮುಂತಾದ ಪ್ರಾಣಿಗಳು ಕೇರಳ ಮತ್ತು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯ.

ಚಿತ್ರಕೃಪೆ: Dineshkannambadi

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಕರ್ನಾಟಕದ ದಾಂಡೇಲಿ ಮತ್ತು ಅಣಶಿ ರಾಷ್ಟ್ರೀಯ ಉದ್ಯಾನಗಳಲ್ಲಿ ಕಪ್ಪು ಚಿರತೆಗಳು ಮತ್ತು ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್ ಜಾತಿಯ ಪಕ್ಷಿಗಳು ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Dr Jyoti Prasad Pattnaik

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳಲ್ಲಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿರುವ ಭೀಮಗಢದ ವನ್ಯಜೀವಿ ಧಾಮವು ತೀವ್ರ ಅಪಾಯದಲ್ಲಿರುವ ರಾಟನ್ಸ್ ಫ್ರೀಟೈಲ್ಡ್ ಬ್ಯಾಟ್ ಎಂಬ ಬಾವಲಿಗಳಿಗೆ ಆಶ್ರಯ ತಾಣವಾಗಿದೆ.

ಚಿತ್ರಕೃಪೆ: Kalyanvarma

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಖಾನಾಪುರದ ಬಳಿಯಿರುವ ತಳೇವಾಡಿ ಗುಹೆಗಳಲ್ಲಿ ದೊಡ್ಡ ದೇಹದ ಲೆಸ್ಸರ್ ಫಾಲ್ಸ್ ವ್ಯಾಂಪೈರ್ ಬಾವಲಿಗಳು ನೆಲೆಸಿವೆ. ಯುರೋಪೆಲ್ಟಿಡೇ ಕುಟುಂಬದ ಉರಗಗಳು ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾಗಿರುವುದು ವಿಶೇಷ. ಒಂದು ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Piekfrosch

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳಲ್ಲಿ ವಯನಾಡ್, ಮುನ್ನಾರ್, ಕೊಡಗು, ದಾಂಡೇಲಿ, ಆನಮುಡಿ ಬೆಟ್ಟಗಳು, ನೀಲಗಿರಿ ಬೆಟ್ಟಗಳು ಹೀಗೆ ಸಾಕಷ್ಟು ಸಂಖ್ಯೆಯಲ್ಲಿ ಮಹಾರಾಷ್ಟ್ರ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಸುಂದರ ಪ್ರವಾಸಿ ಆಕರ್ಷಣೆಗಳು ನೆಲೆಸಿವೆ. ಒಟ್ಟಾರೆಯಾಗಿ ಪಶ್ಚಿಮ ಘಟ್ಟಗಳಲ್ಲಿ 39 ಸಂಪನ್ಮೂಲಗಳನ್ನು ಪಾರಂಪರಿಕ ತಾಣಗಳೆಂದು ಗುರುತಿಸಲಾಗಿದ್ದು ಅವುಗಳಲ್ಲಿ 20 ಕೇರಳದಲ್ಲಿ, 10 ಕರ್ನಾಟಕದಲ್ಲಿ, 5 ತಮಿಳುನಾಡಿನಲ್ಲಿ ಹಾಗೂ 4 ಮಹಾರಾಷ್ಟ್ರ ರಾಜ್ಯದಲ್ಲಿವೆ. ತಮಿಳುನಾಡಿನ ಅಂಬಸಮುದ್ರಂ ಬಳಿಯಿರುವ ಕಲ್ಲಿಡೈಕುರಿಚಿ ಗ್ರಾಮದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳ ವಿಹಂಗಮ ನೋಟ.

ಚಿತ್ರಕೃಪೆ: Sankara Subramanian

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಬೆಳಗಾವಿ - ಗೋವಾ ಗಡಿಯ ಬಳಿ ಕಂಡುಬರುವ ಮನಮೋಹಕ ದೂಧ್ ಸಾಗರ ಜಲಪಾತ. ಪಶ್ಚಿಮ ಘಟ್ಟಗಳ ಹಿನ್ನಿಲೆಯಲ್ಲಿ ಈ ಜಲಪಾತವು ಮತ್ತಷ್ಟು ಸುಂದರವಾಗಿ ಗೋಚರಿಸುತ್ತ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ.

ಚಿತ್ರಕೃಪೆ: Premnath Thirumalaisamy

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಹಿನ್ನಿಲೆಯಲ್ಲಿ ಸುಂದರವಾಗಿ ಕಂಗೊಳಿಸುವ ಕೇರಳ ರಾಜ್ಯದಲ್ಲಿರುವ ಮುನ್ನಾರ್ ಚಹಾ ತೋಟಗಳು.

ಚಿತ್ರಕೃಪೆ: Jakub Michankow

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟಗಳಲ್ಲಿ ಕಂಡುಬರುವ ಬೆಡೊಮ್ಮೀಸ್ ಕೀಲ್ ಎಂಬ ಸರ್ಪವು ಸಾಮಾನ್ಯ ಕಪ್ಪೆಯೊಂದನ್ನು ಭಕ್ಷಿಸುತ್ತಿರುವುದು.

ಚಿತ್ರಕೃಪೆ: Nireekshit

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಕೇರಳ ರಾಜ್ಯದ ವಯನಾಡ್ ಪ್ರಾಂತ್ಯದ ಪಶ್ಚಿಮ ಘಟ್ಟಗಳಲ್ಲಿ ಹಿಡಿದ ಆಹಾರವನ್ನು ನುಂಗುತ್ತಿರುವ ಮಲಬಾರ್ ಪಿಟ್ ವೈಪರ್ ಎಂಬ ಹಾವು.

ಚಿತ್ರಕೃಪೆ: L. Shyamal

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ತಮಿಳುನಾಡಿನ ಕಲಕ್ಕಾಡ ಮುಂಡಾಂತುರೈ ಹುಲಿ ಮೀಸಲು ಪ್ರದೇಶದ ಪಶ್ಚಿಮ ಘಟ್ಟಗಳಲ್ಲಿ ವಿಹರಿಸುತ್ತಿರುವ ಡಿಸ್ಪರ್ ಎಂಬ ಬಳ್ಳಿ ಹಾವು.

ಚಿತ್ರಕೃಪೆ: Seshadri.K.S

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಟ್ರಿಮೆರೆಸರಸ್ ಮ್ಯಾಕ್ರೊಲೆಪಿಸ್ ಎಂಬ ವೈಜ್ಞಾನಿಕ ಹೆಸರುಳ್ಳ ವಿಷಕಾರಿ ಹೆಬ್ಬಾವು. ಕೇರಳ ಹಾಗೂ ತಮಿಳುನಾಡಿನ ಪಶ್ಚಿಮ ಘಾಟಗಳಲ್ಲಿ ಈ ಹಾವು ಕಂಡುಬರುತ್ತದೆ.

ಚಿತ್ರಕೃಪೆ: Seshadri.K.S

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಕೇರಳದ ಪಶ್ಚಿಮ ಘಟ್ಟಗಳ ಪ್ರದೇಶವಾದ ವಯನಾಡ್ ಪ್ರಾಂತ್ಯದ ಅರಣ್ಯವೊಂದರಲ್ಲಿ ಪುಟ್ಟ ಹಕ್ಕಿಯನ್ನು ಹಿಡಿದು ನುಂಗುತ್ತಿರುವ ಪಿಟ್ ವೈಪರ್ ಎಂಬ ಹೆಬ್ಬಾವು.

ಚಿತ್ರಕೃಪೆ: L. Shyamal

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಕೇರಳದ ಪಶ್ಚಿಮ ಘಟ್ಟಗಳ ಪ್ರದೇಶವಾದ ವಯನಾಡ್ ಪ್ರಾಂತ್ಯದ ಅರಣ್ಯಗಳಲ್ಲಿ ಕಂಡುಬರುವ ಉರಗ.

ಚಿತ್ರಕೃಪೆ: L. Shyamal

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಭಾರತೀಯ ಹೆಬ್ಬಾವೊಂದು ಜಿಂಕೆಯನ್ನು ನುಂಗುತ್ತಿರುವುದು. ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಮುದುಮಲೈ ಅರಣ್ಯದಲ್ಲಿ ಕಂಡು ಬಂದಂತಹ ಅದ್ಭುತ ದೃಶ್ಯ.

ಚಿತ್ರಕೃಪೆ: Rakesh Kumar Dogra

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟದಲ್ಲಿರುವ ವಾಲ್ಪಾರೈ ಬಳಿಯ ಮೋನಿಕಾ ಉದ್ಯಾನದಲ್ಲಿ ಕಂಡು ಬರುವ ಭಾರತೀಯ ಬೂದು ಬಣ್ಣದ ಹಾರ್ನ್ ಬಿಲ್ ಎಂಬ ಪಕ್ಷಿ.

ಚಿತ್ರಕೃಪೆ: Sankara Subramanian

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ತಮಿಳುನಾಡಿನ ನೀಲಗಿರಿ ಪ್ರಾಂತ್ಯದಲ್ಲಿ ಕಂಡುಬರುವ ನೀಲಗಿರಿ ತಾಹ್ರ್ ಎಂಬ ಸಸ್ತನಿ.

ಚಿತ್ರಕೃಪೆ: N. A. Naseer

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಕೇರಳದ ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಲಬಾರ್ ಪಿಟ್ ವೈಪರ್ ಎಂಬ ಹೆಬ್ಬಾವು.

ಚಿತ್ರಕೃಪೆ: Thejasvi M

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಕೊಡಗಿನ ಸುಂದರ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಹನಿ ವ್ಯಾಲಿ ಎಂಬಲ್ಲಿ ಕಂಡುಬಂದ ಒಂದು ಜಾತಿಯ ಕಪ್ಪೆ.

ಚಿತ್ರಕೃಪೆ: Seshadri.K.S

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಅನುರಾ ಸಂಕುಲಕ್ಕೆ ಒಳಪಡುವ ಒಂದು ಬಗೆಯ ಕಪ್ಪೆ. ಪಶ್ಚಿಮ ಘಟ್ಟದಲ್ಲಿ ಇಂತಹ ಸಂಕುಲದ ಕಪ್ಪೆಗಳು ನೋಡಲು ಕಾಣಸಿಗುತ್ತವೆ.

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಉಭಯವಾಸಿಯಾದ ನೇರಳೆ ಬಣ್ಣದ ಕಪ್ಪೆಯನ್ನು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ 2003 ರಲ್ಲಿ ಮೊದಲ ಬಾರಿಗೆ ಶೋಧಿಸಲಾಯಿತು.

ಚಿತ್ರಕೃಪೆ: Karthickbala

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಇತ್ತ ಹುಲಿಯೂ ಅನಿಸದೆ ಅತ್ತ ಬೆಕ್ಕನ್ನು ಹೋಲದೆ ಭವ್ಯವಾಗಿ ಕಾಣುವ ಸಂಪೂರ್ಣ ಕಪ್ಪು ಬಣ್ಣದ ಕಪ್ಪು ಚಿರತೆಯು ಭಾರತದಲ್ಲಿ ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುತ್ತದೆ. ಅದರಲ್ಲೂ ಕರ್ನಾಟಕದ ಭದ್ರಾ ಹುಲಿ ಮೀಸಲು ಪ್ರದೇಶದಲ್ಲಿ ಇವುಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Cburnett

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಗ್ರೇಟ್ ಪೈಡ್ ಹಾರ್ನ್ ಬಿಲ್ ಎಂತಲೂ ಕರೆಯಲ್ಪಡುವ ಭಾರತದ ದೊಡ್ಡ ಹಕ್ಕಿಗಳ ಪೈಕಿ ಒಂದಾಗಿರುವ ಈ ಪಕ್ಷಿಯು ನೋಡಲು ವಿಶೀಷ್ಟವಾಗಿದ್ದು ಪಶ್ಚಿಮ ಘಟ್ಟಗಳ ದಟ್ಟವಾದ ಅರಣ್ಯಗಳಲ್ಲಿ ಹಾಗು ಈಶಾನ್ಯ ಭಾರತದ ಅರುಣಾಚಲ ಪ್ರದೇಶ ಹಾಗು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಕಂಡುಬರುತ್ತದೆ.

ಚಿತ್ರಕೃಪೆ: Kalyanvarma

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಕೆಂಪು ಪಟ್ಟಿಯ ಬಾರ್ಬ್: ಪಶ್ಚಿಮ ಘಟ್ಟವು ಹಲವು ನೈಸರ್ಗಿಕ ಹಳ್ಳ ಕೊಳ್ಳ, ಹಾಗು ತೊರೆಗಳಿಗೆ ಮನೆಯಾಗಿದೆ. ಇಂತಹ ತಾಜಾ ನೀರಿನ ತೊರೆಗಳಲ್ಲಿ ವೈವಿಧ್ಯಮಯ ಬಾರ್ಬ್ ಅಲಂಕಾರಿಕ ಮೀನುಗಳು ಕಂಡುಬರುತ್ತವೆ. ಚಿತ್ರದಲ್ಲಿರುವುದು ಕೆಂಪು ಪಟ್ಟಿಯ ಬಾರ್ಬ್ ಮೀನು.

ಚಿತ್ರಕೃಪೆ: Michał Zalewski

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಯುರೋಪೆಲ್ಟಿಡೆ: ಹಾವುಗಳ ಕುಟುಂಬಕ್ಕೆ ಸಂಬಂಧಪಟ್ಟ ಈ ಸರಿಸೃಪವು ಬಹುಶಃ ಪಶ್ಚಿಮ ಘಟ್ಟದಲ್ಲಿ ಮಾತ್ರವೆ ಕಾಣ ಸಿಗಲು ಸಾಧ್ಯ. ಆದರೆ ಇದು ವಿಷಕಾರಿಯಲ್ಲ.

ಚಿತ್ರಕೃಪೆ: Saleem Hameed

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟದ ತೊರೆಗಳಲ್ಲಿ ಕಂಡುಬರುವ ವಿಶೀಷ್ಟ ಪಫರ್ ಮೀನುಗಳೂ ಸಹ ಕಂಡುಬರುತ್ತವೆ. ಒಂದು ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: TANAKA Juuyoh

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ಕಂಡು ಬರುವ ಮನಮೋಹಕ ಬಣ್ಣದ ಒಂದು ಶಂಖು ಹುಳು.

ಚಿತ್ರಕೃಪೆ: L. Shyamal

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಕಂಡು ಬರುವ ವಿಶೀಷ್ಟ ಬಗೆಯ ಶಿಲೀಂಧ್ರ ಅಥವಾ ನಾಯಿಕೊಡೆ.

ಚಿತ್ರಕೃಪೆ: Sankara Subramanian

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಪಶ್ಚಿಮ ಘಟ್ಟಗಳ ಮಾಯಾ ಲೋಕ:

ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲೆ ಕಂಡುಬರುವ ಪಟ್ಟಿಯುಳ್ಳ ಹಲ್ಲಿ ಜಾತಿಯ ಸರಿಸೃಪ. ಇದು ಕೀಟಗಳನ್ನು ತಿನ್ನುತ್ತ ಬದುಕುತ್ತದೆ.

ಚಿತ್ರಕೃಪೆ: Thejasvi M

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X