Search
  • Follow NativePlanet
Share
» »ನೋಡಿದ ಕ್ಷಣದಲ್ಲೆ ಆಕರ್ಷಿಸುವ ಜಲಾಶಯಗಳಿವು!

ನೋಡಿದ ಕ್ಷಣದಲ್ಲೆ ಆಕರ್ಷಿಸುವ ಜಲಾಶಯಗಳಿವು!

ದೇವರ ಸ್ವಂತನಾಡು ಎಂದೆ ಕರೆಯಲ್ಪಡುವ ಕೇರಳ ರಾಜ್ಯದಲ್ಲಿ ನೋಡಲು ಆಕರ್ಷಕವಾಗಿರುವ ಪ್ರವಾಸಿ ಆಕರ್ಷಣೆಯ ಹಲವಾರು ಜಲಾಶಯಗಳಿರುವುದನ್ನು ಕಾಣಬಹುದು

By Vijay

ಸಾಮಾನ್ಯವಾಗಿ ಹಿನ್ನೀರಿನ ಸಂಗ್ರಹ ಹೊಂದಿರುವ ಜಲಾಶಯಗಳು ಪ್ರವಾಸಿ ಆಕರ್ಷಣೆಗಳೂ ಸಹ ಹೌದು. ವರ್ಷದ ಎಲ್ಲಾ ಸಮಯದಲ್ಲೂ ಈ ಜಲಾಶಯಗಳು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ. ಅದರಲ್ಲೂ ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ಈ ತಾಣಗಳಿಗೆ ತುಸು ಬೇಡಿಕೆ ಹೆಚ್ಚೆ.

ಏಕೆಂದರೆ ಒಂದೆಡೆ ನೀರಿನ ಸಂಗ್ರಹವಾಗಿರುವುದರಿಂದ ಅಕ್ಕ ಪಕ್ಕದ ಸ್ಥಳಗಳಲ್ಲಿ ಸಾಮಾನ್ಯವಾಗಿ ತಂಪು ಹಾಸು ಹೊಕ್ಕಾಗಿರುತ್ತದೆ. ಅಲ್ಲದೆ ಬಹುತೇಕ ಜನಪ್ರೀಯ ಜಲಾಶಯಗಳು ಉದ್ಯಾನವನ್ನೂ ಸಹ ಹೊಂದಿರುವುದರಿಂದ ಕುಟುಂಬ ಸಮೇತರಾಗಿ ಭೇಟಿ ನೀಡಲು ಜಲಾಶಯ ತಾಣಗಳು ಪ್ರಶಸ್ತವಾಗಿರುತ್ತವೆ.

ಅಲ್ಲದೆ, ಭಾರತದಲ್ಲಿ ಕಂಡುಬರುವ ಕೆಲವು ಜಲಾಶಯ ತಾಣಗಳಲ್ಲಿ ದೋಣಿ ವಿಹಾರಗಳ ಸೌಲಭ್ಯಗಳೂ ಸಹ ಇರುವುದರಿಂದ ಹೆಚ್ಚಿನ ಆಕರ್ಷಣೆಯ ಕೇಂದ್ರಗಳಾಗಿ ಜಲಾಶಯಗಳು ಗಮನ ಸೆಳೆಯುತ್ತವೆ. ಪ್ರಸ್ತುತ ಲೇಖನದಲ್ಲಿ ದಕ್ಷಿಣ ಭಾರತದಲ್ಲಿ ಕಂಡುಬರುವ ಕೆಲವು ಆಯ್ದ ಅತ್ಯಾಕರ್ಷಕ ಜಲಾಶಯಗಳು ಯಾವುವು ಹಾಗೂ ಅವು ಎಲ್ಲಿವೆ ಎಂಬುದರ ಕುರಿತು ತಿಳಿಸಲಾಗಿದೆ.

ಈ ಲೇಖನದಲ್ಲಿ ದಕ್ಷಿಣದ ಎಲ್ಲ ಪ್ರಮುಖ ರಾಜ್ಯಗಳಲ್ಲಿ ಕಂಡುಬರುವ ಪ್ರತಿಷ್ಠಿತ ಹಾಗೂ ಜನಪ್ರೀಯವಾದಂತಹ ಜಲಾಶಯಗಳ ಕುರಿತು ತಿಳಿಸಲಾಗಿದೆ. ನಿಮಗೆ ಸಮಯಾವಕಾಶ ದೊರೆತಾಗ ಖಂಡಿತವಾಗಿಯೂ ಈ ಜಲಾಶಯಗಳಿಗೊಮ್ಮೆ ಭೇಟಿ ಕೊಟ್ಟು ಬನ್ನಿ.

ಆಂಧ್ರಪ್ರದೇಶ

ಆಂಧ್ರಪ್ರದೇಶ

ಆಂಧ್ರಪ್ರದೇಶ ರಾಜ್ಯದ ವಿಜಯವಾಡಾದಲ್ಲಿರುವ ಪ್ರಕಾಶಂ ಬ್ಯಾರೆಜ್. ಕೃಷ್ಣಾ ನದಿಗೆ ಅಡ್ಡಲಾಗಿ ಈ ಬ್ಯಾರೆಜನ್ನು ನಿರ್ಮಿಸಲಾಗಿದೆ.

ಚಿತ್ರಕೃಪೆ: Balajirakonda

ಹೈದರಾಬಾದ್

ಹೈದರಾಬಾದ್

ತೆಲಂಗಾಣ ರಾಜ್ಯದ ರಾಜಧಾನಿ ನಗರವಾದ ಹೈದರಾಬಾದ್ ನಗರದ ಬಳಿ ಸ್ಥಿತವಿರುವ ಹುಸೈನ್ ಸಾಗರ ಜಲಾಶಯದ ಸುಂದರ ನೋಟ. ಇದು ಹೈದರಾಬಾದ್ ನಗರ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Poreddy Sagar

ವಿಶಾಖಾಪಟ್ಟಣಂ

ವಿಶಾಖಾಪಟ್ಟಣಂ

ಆಂಧ್ರದ ಬಂದರು ನಗರಿ ವೈಜಾಗ್ ಅಥವಾ ವಿಶಾಖಾಪಟ್ಟಣದಲ್ಲಿರುವ ಮುಡಸರ್ಲೋವಾ ಜಲಾಶಯದ ಸುಂದರ ನೋಟ.

ಚಿತ್ರಕೃಪೆ: Adityamadhav83

ಆಂಧ್ರಪ್ರದೇಶ

ಆಂಧ್ರಪ್ರದೇಶ

ಆಂಧ್ರದ ಧಾರ್ಮಿಕ ಪ್ರವಾಸಿ ಆಕರ್ಷಣೆಯೂ ಆಗಿರುವ ಶ್ರೀಶೈಲಂನ ಕೃಷ್ಣಾ ನದಿಯ ಜಲಾಶಯವು ಒಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Amit Chattopadhyay

ಚಿಕ್ಕಮಗಳೂರು

ಚಿಕ್ಕಮಗಳೂರು

ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ವ್ಯಾಪಿಸಿರುವ ಭದ್ರಾ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಭದ್ರಾ ಜಲಾಶಯವು ನಿಸರ್ಗಪ್ರಿಯ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

ಚಿತ್ರಕೃಪೆ: balu

ಬೆಳಗಾವಿ

ಬೆಳಗಾವಿ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಳಿಯಿರುವ ನವಿಲುತೀರ್ಥ ಜಲಾಶಯವು ಸಾಕಷ್ಟು ನಯನಮನೋಹರವಾದ ತಾಣವಾಗಿದೆ. ಇದನ್ನು ರೇಣುಕಾಸಾಗರ ಜಲಾಶಯ ಎಂತಲೂ ಸಹ ಕರೆಯುತ್ತಾರೆ.

ಚಿತ್ರಕೃಪೆ: Manjunath Doddamani Gajendragad

ಮಂಡ್ಯ ಜಿಲ್ಲೆ

ಮಂಡ್ಯ ಜಿಲ್ಲೆ

ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣ ರಾಜ ಸಾಗರ ಜಲಾಶಯವು ಮೈಸೂರು ನಗರಕ್ಕೆ ಬಲು ಹತ್ತಿರದಲ್ಲಿದೆ. ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಈ ಜಲಾಶಯಕ್ಕೆ ಭೇಟಿ ನೀಡದೆ ಇರಲಾರರು.

ಚಿತ್ರಕೃಪೆ: Ashwin Kumar

ಅತ್ಯಾಕರ್ಷಕ

ಅತ್ಯಾಕರ್ಷಕ

ಕೃಷ್ಣ ರಾಜ ಸಾಗರವು ಮುಖ್ಯವಾಗಿ ಬೃಂದಾವನ ಉದ್ಯಾನಕ್ಕೆ ಹೆಚ್ಚು ಪ್ರಖ್ಯಾತಿಗಳಿಸಿದೆ. ಜಲಾಶಯದ ಮುಂಭಾಗದಲ್ಲಿರುವ ಈ ವಿಶಾಲ ಉದ್ಯಾನವು ಕಾರಂಜಿಗಳನ್ನು ಒಳಗೊಂಡಿದ್ದು ರಾತ್ರಿಯ ಸಮಯದಲ್ಲಿ ಅತ್ಯಾಕರ್ಷಕವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Ashwin Kumar

ಹೊಸಪೇಟೆ

ಹೊಸಪೇಟೆ

ಬಳ್ಳಾರಿ ಜಿಲ್ಲೆಯ ಹೊಸಪೇಟೆ (ಹೊಸ್ಪೇಟ್) ಪಟ್ಟಣದ ಬಳಿಯಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾದ ಆಣೆಕಟ್ಟು ಹಾಗೂ ಜಲಾಶಯ ತಾಣಗಳು ಕರ್ನಾಟಕದ ಮಟ್ಟಿಗೆ ಸಾಕಷ್ಟು ವಿಶಾಲವಾದ ಜಲಾಶಯ ತಾಣವಾಗಿದೆ.

ಚಿತ್ರಕೃಪೆ: Sanyam Bahga

ಇಡುಕ್ಕಿ

ಇಡುಕ್ಕಿ

ಪೆರಿಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಮುಳ್ಳಪೆರಿಯಾರ್ ಆಣೆಕಟ್ಟಿನ ಹಿಂಭಾಗದಲ್ಲಿ ಸಂಗ್ರಹಿತವಾದ ತೆಕ್ಕಡಿ ಹಿನ್ನೀರು ಜಲಾಶಯವು ನೋಡಲು ಬಲು ನಯನ ಮನೋಹರವಾಗಿದೆ. ದೋಣಿ ವಿಹಾರದ ಸೌಲಭ್ಯ ಇಲ್ಲಿದ್ದು ಜನಪ್ರೀಯ ಪ್ರವಾಸಿ ಆಕರ್ಷಣೆಯಾಗಿ ಗಮನಸೆಳೆಯುತ್ತದೆ.

ಚಿತ್ರಕೃಪೆ: Girlxplorer

ಪೂಪಾರ

ಪೂಪಾರ

ಇಡುಕ್ಕಿ ಜಿಲ್ಲೆಯ ಪೂಪಾರ ಹಳ್ಳಿಯಿಂದ ನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿರುವ ಆನಯಿರಂಕಲ್ ಜಲಾಶಯ ತನ್ನ ಸುತ್ತುವರೆದಿರುವ ಅದ್ಭುತ ಪ್ರಾಕೃತಿಕ ಸೊಬಗಿನಿಂದ ಕಣ್ಮನ ಸೆಳೆಯುತ್ತದೆ. ದೋಣಿ ವಿಹಾರದ ಸೌಲಭ್ಯ ಇಲ್ಲಿದ್ದು ಮುನ್ನಾರ್ ನಿಂದ ಕೇವಲ 22 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Rameshng

ವಯನಾಡ್

ವಯನಾಡ್

ಕೇರಳದ ವಯನಾಡ್ ಜಿಲ್ಲೆಯ ಕಲ್ಪೆಟ್ಟಾದ ಬಳಿ ಕಬಿನಿಯ ಉಪನದಿಯಾದ ಕರಮನತೋಡು ನದಿಯಿಂದಾದ ಜಲಾಶಯ ಇದಾಗಿದ್ದು ಸಾಕಷ್ಟು ನಯನಮನೋಹರವಾಗಿದೆ.

ಚಿತ್ರಕೃಪೆ: Vaibhavcho

ಎನ್ನಕಲ್

ಎನ್ನಕಲ್

ಪೆರಿಯಾರ್ ನದಿಯ ಉಪನದಿಯಾದ ಇಡಮಲಯಾರ್ ನದಿಯ ಜಲಾಶಯ ಇದಾಗಿದ್ದು ಇಡಮಲಯಾರ್ ಆಣೆಕಟ್ಟೆಯಿಂದ ನಿರ್ಮಿತವಾದ ಜಲಾಶಯ ಇದಾಗಿದೆ. ಎರ್ನಾಕುಲಂ ಜಿಲ್ಲೆಯ ಭೂತಂತಂಕಟ್ಟು ಎಂಬ ಹಳ್ಳಿಯ ಬಳಿ ಇದು ಸ್ಥಿತವಿದೆ.

ಚಿತ್ರಕೃಪೆ: Baluperoth

ಆರ್ಚ್ ಡ್ಯಾಂ

ಆರ್ಚ್ ಡ್ಯಾಂ

ಕೇರಳದ ಇಡುಕ್ಕಿಯಲ್ಲಿರುವ ಇಡುಕ್ಕಿ ಆರ್ಚ್ ಡ್ಯಾಂ ಸಾಕಷ್ಟು ಪ್ರಖ್ಯಾತಿಗಳಿಸಿದ ಆಣೆಕಟ್ಟಾಗಿದೆ. ಇದರಿಂದ ನಿರ್ಮಿತವಾದ ಜಲಾಶಯ ಸಾಕಷ್ಟು ನಯನಮನೋಹರವಾಗಿದ್ದು ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ಓಣಂ ಹಬ್ಬ ಹಾಗೂ ಕ್ರಿಸ್ಮಸ್ ಸಂದರ್ಭದಲ್ಲಿ ಹತ್ತು ದಿನಗಳ ಕಾಲ ಮಾತ್ರ ಪ್ರವಾಸಿಗರಿಗೆ ಇದು ತೆರೆದಿರುತ್ತದೆ ಹಾಗೂ ದೋಣಿ ವಿಹಾರದ ಸೌಲಭ್ಯವೂ ಸಹ ದೊರಕುತ್ತದೆ.

ಚಿತ್ರಕೃಪೆ: Vipinmeppurathu10

ಮುನ್ನಾರ್

ಮುನ್ನಾರ್

ಮುನ್ನಾರ್ ನಿಂದ ಟಾಪ್ ಸ್ಟೇಷನ್ ಗೆ ತೆರಳುವ ಮಾರ್ಗದಲ್ಲಿ ಮುನ್ನಾರ್ ನಿಂದ 20 ಕಿ.ಮೀ ದೂರದಲ್ಲಿ ಸ್ಥಿತವಿರುವ ಸುಂದರ ಜಲಾಶಯ ಇದಾಗಿದೆ.

ಚಿತ್ರಕೃಪೆ: RanjithSiji

ಪಾಲಕ್ಕಾಡ್

ಪಾಲಕ್ಕಾಡ್

ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಂಗಳಂ ಹಳ್ಳಿಯಲ್ಲಿ ಈ ಸುಂದರ ಜಲಾಶಯ ಸ್ಥಿತವಿದೆ.

ಚಿತ್ರಕೃಪೆ: Jan J George

ಇಡುಕ್ಕಿ

ಇಡುಕ್ಕಿ

ಇಡುಕ್ಕಿ ಜಿಲ್ಲೆಯ ಮುನ್ನಾರ್ ಬಳಿಯಿರುವ ಮೆಟ್ಟುಪೆಟ್ಟಿ ಜಲಾಶಯ ಇದಾಗಿದೆ. ಜಲಾಶಯದ ನೀರು ಕಾಡು ಪ್ರಾಣಿಗಳಿಗೆ ಅದರಲ್ಲೂ ವಿಶೇಷವಾಗಿ ಆನೆಗಳ ಹಿಂಡಿಗೆ ಕುಡಿಯುವ ನೀರಿನ ಮೂಲವಾಗಿದ್ದು ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Bimal K C

ಪೊಲ್ಲಾಚಿ

ಪೊಲ್ಲಾಚಿ

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಬಳಿಯಿರುವ ಅಳಿಯಾರ್ ಹಳ್ಳಿಯಲ್ಲಿ ಈ ಜಲಾಶಯವು ಸ್ಥಿತವಿದೆ.

ಚಿತ್ರಕೃಪೆ: Thangaraj Kumaravel

ಪ್ರವಾಸಿ ಆಕರ್ಷಣೆ

ಪ್ರವಾಸಿ ಆಕರ್ಷಣೆ

ಅಳಿಯಾರ್ ಜಲಾಶಯ ಒಂದು ಜನಪ್ರೀಯ ಪ್ರವಾಸಿ ಕೇಂದ್ರವಾಗಿದೆ. ಈ ಜಲಾಶಯದ ವ್ಯಾಪ್ತಿಯಲ್ಲಿ ಸುಂದರವಾದ ಉದ್ಯಾನವಿದ್ದು ಸುತ್ತಲಿನ ಸೃಷ್ಟಿ ಸೌಂದರ್ಯವು ನೋಡುಗರ ಮನಸ್ಸನ್ನು ಸೆಳೆಯುತ್ತದೆ.

ಚಿತ್ರಕೃಪೆ: Siva301in

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X