Search
  • Follow NativePlanet
Share
» »ಸಾಗರ ಮತ್ತು ಶಿರಸಿಯಲ್ಲಿ ಯಾವ್ಯಾವ ಪ್ರಾಚೀನ ದೇವಾಲಯಗಳಿವೆ ಗೊತ್ತಾ ?

ಸಾಗರ ಮತ್ತು ಶಿರಸಿಯಲ್ಲಿ ಯಾವ್ಯಾವ ಪ್ರಾಚೀನ ದೇವಾಲಯಗಳಿವೆ ಗೊತ್ತಾ ?

By Manjula Balaraj Tantry
ancient temples of Sagar and Sirsi

ಕರ್ನಾಟಕದ ರಾಜ್ಯದ ನೈಋತ್ಯ ಭಾಗಗಳಲ್ಲಿ ಪ್ರವಾಸಿಗರನ್ನು ಅನೇಕ ರೀತಿಯಿಂದ ಆಕರ್ಷಿಸುವಂತಹ ತಾಣಗಳಿವೆ.ರಾಜ್ಯದಲ್ಲಿರುವ ಪ್ರಾಚೀನ ಶಿಲ್ಪಗಳು, ದೇವಾಲಯಗಳು, ಐತಿಹಾಸಿಕ ತಾಣಗಳು ಮನಮೋಹಕ ಬೆಟ್ಟಗಳು ಮೂಲಕ ಐತಿಹಾಸಿಕ ಸ್ಥಳಗಳನ್ನು ಹೊಂದಿರುವ ರಾಜ್ಯಗಳ ಪೈಕಿ ರಾಜ್ಯವು ಏಳನೇ ಸ್ಥಾನದಲ್ಲಿದೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ರಾಷ್ಟ್ರ ಮಟ್ಟದಿಂದ ಸಂರಕ್ಷಿಸಲ್ಪಟ್ಟ ಸ್ಮಾರಕಗಳ ಪೈಕಿ ರಾಜ್ಯವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ಅತ್ಯಂತ ಹೆಚ್ಚಿನ ಪ್ರವಾಸಿ ತಾಣಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕವು ಭಾರತದಲ್ಲಿ ನಾಲ್ಕನೆ ಯ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿನ ದೇವಾಲಯಗಳು ಅತ್ಯಂತ ಆಕರ್ಷಣೀಯವಾದುದಾಗಿದೆ ಮತ್ತು ಅವುಗಳು ವಿವಿಧ ಕಾಲಗಳು ಮತ್ತು ಅನೇಕ ರಾಜ ವಂಶಗಳಿಗೆ ಸಂಬಂಧಿಸಿದ ವಾಸ್ತುಶಿಲ್ಪ ಶೈಲಿಗಳನ್ನು ಪ್ರತಿಬಿಂಬಿಸುತ್ತದೆ. ಅನೇಕ ದೇವಾಲಯಗಳಲ್ಲಿ ನಂದಿ ದೇವಾಲಯಗಳ ಪ್ರವೇಶ ದ್ವಾರಗಳಲ್ಲಿ, 'ಪುಷ್ಕರಣಿ' ಅಥವಾ ಪವಿತ್ರ ತೊಟ್ಟಿ, 'ಗೋಪುರ' ಅಥವಾ ದೇವಾಲಯದ ಪ್ರವೇಶದ್ವಾರದಲ್ಲಿರುವ ಅಲಂಕೃತವಾದ ಒಂದು ಗೋಪುರ ಹಾಗೆಯೇ 'ಗರ್ಭಗುಡಿ' ಇದು ದೇವಾಲಯದ ಒಳಭಾಗದ ಗರ್ಭಗುಡಿಯ ಭಾಗ ಇವೆಲ್ಲವನ್ನು ಹೆಚ್ಚಾಗಿ ಎಲ್ಲಾ ದೇವಾಲಯಗಳಲ್ಲಿ ಕಾಣಬಹುದಾಗಿದೆ.

1. ಸಾಗರ ಮತ್ತು ಶಿರಸಿಯ ದೇವಾಲಯಗಳು

1. ಸಾಗರ ಮತ್ತು ಶಿರಸಿಯ ದೇವಾಲಯಗಳು

ರಾಜ್ಯದ ಸಾಗರ ಮತ್ತು ಶಿರಸಿ ನಗರಗಳು ಅನೇಕ ಸಂಖ್ಯೆಯ ದೇವಾಲಯಗಳನ್ನು ಹೊಂದಿವೆ. ಮತ್ತು ಅವುಗಳು ಅತ್ಯುನ್ನತ ಮಟ್ಟದ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿವೆ. ಬೆಂಗಳೂರಿನಿಂದ ಕೇವಲ 350ಕಿಮೀ ದೂರದಲ್ಲಿರುವ ಸಾಗರವು ಸಹ ಉಪ ವಿಭಾಗೀಯ ಮತ್ತು ತಾಲೂಕು ಪ್ರಧಾನ ಕಚೇರಿಯಾಗಿದೆ ಮತ್ತು ರಸ್ತೆಯ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ ಇಲ್ಲಿಗೆ ಬಸ್ಸು ಅಥವಾ ರೈಲಿನ ಮೂಲಕವೂ ಪ್ರಯಾಣಿಸಬಹುದಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಶಿರಸಿ ಬೆಂಗಳೂರಿನಿಂದ ಸುಮಾರು 425 ಕಿ.ಮೀ ದೂರದಲ್ಲಿದೆ ಇಲ್ಲಿಗೆ ರಸ್ತೆ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಬಸ್ಸು ಮತ್ತು ರೈಲಿನ ಮೂಲಕವೂ ಪ್ರಯಾಣಿಸಬಹುದು. ಈ ಎರಡೂ ನಗರಗಳೂ ತಮ್ಮದೇ ಆದ ರೈಲ್ವೇ ನಿಲ್ದಾಣಗಳನ್ನು ಒಳಗೊಂಡಿವೆ. ಸುಂದರ ದೃಶ್ಯವಿರುವ ಸ್ಥಳಗಳು, ದಟ್ಟವಾದ ಕಾಡುಗಳು, ಮತ್ತು ಎಕರೆಗಟ್ಟಲೆ ಅಡಿಕೆ ತೋಟಗಳ ಜೊತೆಗೆ ಸುಂದರವಾದ ದೇವಾಲಯಗಳನ್ನೊಳಗೊಂಡ ಈ ಎರಡೂ ನಗರಗಳು ರಾಜ್ಯದ ಹೆಚ್ಚು ಭೇಟಿ ಕೊಡುವ ಸ್ಥಳಗಳೆನಿಸಿವೆ.

2. ಶಿರಸಿ ಮಾರಿಕಾಂಬಾ ದೇವಾಲಯ

2. ಶಿರಸಿ ಮಾರಿಕಾಂಬಾ ದೇವಾಲಯ

ಭಕ್ತರಲ್ಲಿ ವಿಶೇಷ ರೀತಿಯಲ್ಲಿ ಮಾನ್ಯತೆ ಪಡೆದಂತಹ ದೇವಾಲಯವಾಗಿರುವ ಶಿರ್ಸಿಯ ಮಾರಿಕಾಂಬಾ ದೇವಾಲಯವು ದೇವಿ ದುರ್ಗೆಯ ರೂಪವಾದ ಮಾರಿಕಾಂಬೆಗೆ ಅರ್ಪಿತವಾದುದಾಗಿದೆ.ಈ ದೇವಾಲಯವು 1689 ರಲ್ಲಿ ನಿರ್ಮಿತವಾದುದಾಗಿದ್ದು, ಇಲ್ಲಿಯ ಮುಖ್ಯ ದೇವತೆಯಾದ ದುರ್ಗೆಯ ಅತ್ಯಂತ ಶಕ್ತಿಯುತವಾದ ರೂಪವಿದೆ. ಎಂಟು ಕೈಗಳನ್ನು ಹೊಂದಿರುವ ಪ್ರತಿಮೆಯು ಸುಮಾರು 7 ಅಡಿಗಳಷ್ಟು ಉದ್ದವಿದ್ದು ಹುಲಿಯ ಮೇಲೆ ಆಸೀನವಾದ ರೂಪದಲ್ಲಿದೆ.

ದಂತಕಥೆಗಳ ಪ್ರಕಾರ ಈ ದೇವತೆಯು ಹುಬ್ಬಳ್ಳಿಯ ಹಾನಗಲ್ ಹತ್ತಿರದ ಕೆರೆಯ ಬಳಿ ಪತ್ತೆಯಾದುದಾಗಿದೆ ಎಂದು ಹೇಳಲಾಗುತ್ತದೆ. ಶಿರ್ಸಿಯ ಅತ್ಯಂತ ಜಾಗೃತವಾದ ದೇವತೆ ಎಂದು ಕರೆಯಲ್ಪಡುವ ಪ್ರಖ್ಯಾತ ಶ್ರೀ ಮಾರಿಕಾಂಬಾ ಉತ್ಸವವು ಪ್ರತೀ ಪರ್ಯಾಯ ವರ್ಷಗಳಲ್ಲಿ ಆಚರಿಸಲ್ಪಡುತ್ತದೆ ಮತ್ತು ಎಲ್ಲಾ ಕಡೆಯ ಅಸಂಖ್ಯಾತ ಭಕ್ತರನ್ನು ಈ ಉತ್ಸವವು ಆಕರ್ಷಿಸುತ್ತದೆ.ಇದನ್ನು ದೊಡ್ಡಮ್ಮ ದೇವಾಲಯವೆಂದೂ ಕರೆಯುತ್ತಾರೆ ' ದೊಡ್ಡಮ್ಮ ಅಂದರೆ ' ದೊಡ್ಡ ಅಕ್ಕ' ಅಂದರೆ ಕರ್ನಾಟಕದಲ್ಲಿರುವ ಎಲ್ಲಾ ಮಾರಿಯಮ್ಮ ದೇವತೆಗಳ ಅಕ್ಕ ಎಂದು ಈ ದೇವಿಗೆ ಹೆಸರಿದೆ. ಈ ದೇವಾಲಯದ ಮಧ್ಯ ಭಾಗದಲ್ಲಿ ದೊಡ್ಡದಾದ ಅಂಗಣವಿದೆ.

3. ಸೋಂದೇ ಮಠ

3. ಸೋಂದೇ ಮಠ

ಇದನ್ನು ಸೋದೆ ಅಥವಾ ಸೋಂದಾ ಎಂದು ಕೂಡಾ ಕರೆಯಲಾಗುತ್ತದೆ. ಈ ಮಠವು ಉತ್ತರಕನ್ನಡದ ಶಿರ್ಸಿಯಲ್ಲಿರುವ ಸಣ್ಣ ಹಳ್ಳಿಯಲ್ಲಿದೆ ಈ ಹಳ್ಳಿಯು ಇಲ್ಲಿರುವ ಸೋದೆ ಮಠ ಅಥವಾ ಮಠಕ್ಕೆ ಹೆಸರುವಾಸಿಯಾಗಿದೆ. ಈ ಸ್ಥಳವು ಮಲೆನಾಡು ಪ್ರದೇಶದ ಅತ್ಯಂತ ಒಳ ಭಾಗದಲ್ಲಿ ನೆಲೆಸಿದೆ ಮತ್ತು ಸುತ್ತಲೂ ಕಾಡುಗಳಿಂದ ಸುತ್ತುವರಿಯಲ್ಪಟ್ಟಿದೆ. ಈ ಮಠದಲ್ಲಿ ಬೃಂದಾವನವನ್ನು ಹೊಂದಿದೆ ಅಥವಾ ಸ್ವಾಮಿ ವಾದಿರಾಜ ತೀರ್ಥರ ಸಮಾಧಿಯನ್ನು ಹೊಂದಿದೆ. ಮತ್ತು ಇದು ಮಾಧ್ವ ಪಂಥದ ಬ್ರಾಹ್ಮಣರ ಒಂದು ಮಹತ್ವದ ಯಾತ್ರಾ ಸ್ಥಳವಾಗಿದ್ದು ಪೂಜೆ ಸಲ್ಲಿಸಲು ಅತ್ಯಂತ ಸೂಕ್ತವಾದ ಸ್ಥಳವೆನಿಸಿದೆ. ಸೋದೆ ಮಠದಲ್ಲಿ ಭೂವರಾಹ ದೇವರು, ಹಯಗ್ರೀವ ಮತ್ತು ಶ್ರೀ ಭೂತರಾಜ ದೇವರನ್ನು ಪೂಜಿಸಲಾಗುತ್ತದೆ.

ನೀವು ದೇವಸ್ಥಾನವನ್ನು ತಲುಪುತ್ತಿದ್ದಂತೆಯೆ ಅಲ್ಲಿ ಒಂದು ಕೊಳವನ್ನು ನೋಡಬಹುದು ಇದು ' ಹಯಗ್ರೀವ ಸಮುದ್ರ' ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಅಲ್ಲದೆ ಇಲ್ಲಿ ಎರಡು ಪವಿತ್ರ ತೊಟ್ಟಿಗಳಿವೆ ಅವುಗಳನ್ನು 'ಧವಳ ಗಂಗೆ' ಮತ್ತು' ಶೀತಲ ಗಂಗೆ 'ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ತೊಟ್ಟಿಯ ನೀರಿನಲ್ಲಿ ಭಾರತದ ಎಲ್ಲಾ ಪವಿತ್ರ ನದಿಗಳ ಸಂಗಮ ಸಂಗಮವಾಗಿದೆ. ಇಲ್ಲಿಯ ಮುಖ್ಯ ' ಬೃಂದಾವನ'ವು ಇನ್ನಿತರರ 4 ಸಮಾಧಿಗಳನ್ನು ಹೊಂದಿದ್ದು, ಪರಿಪೂರ್ಣ ಚೌಕದ ಮಾದರಿಯಲ್ಲಿ ರಚಿಸಲಾಗಿದೆ.

4. ಬನವಾಸಿ ಮಧುಕೇಶ್ವರ ದೇವಾಲಯ

4. ಬನವಾಸಿ ಮಧುಕೇಶ್ವರ ದೇವಾಲಯ

ಶಿರ್ಸಿಯಿಂದ 23 ಕಿ.ಮೀ ದೂರದಲ್ಲಿರುವ ಬನವಾಸಿಯು ಕರ್ನಾಟಕದ ಅತ್ಯಂತ ಹಳೆಯದಾದ ಪಟ್ಟಣವಾಗಿದೆ ಅಲ್ಲದೆ ಭಾರತದ ಅತ್ಯಂತ ಹಳೆಯ ಸ್ಥಳಗಳಲ್ಲಿ ಒಂದೆನಿಸಿದೆ. ಈ ಪಟ್ಟಣವು ಕಾಡುಗಳಿಂದ ಮತ್ತು ವರದಾ ನದಿಯಿಂದ ಸುತ್ತುವರಿಯಲ್ಪಟ್ಟಿದೆ. ಬನವಾಸಿಯು ಹಚ್ಚ ಹಸಿರಿನ ಭತ್ತದ ಗದ್ದೆಗಳು, ಕಬ್ಬಿನ ಮತ್ತು ಅನಾನಾಸಿನ ಗದ್ದೆಗಳನ್ನು ಹೊಂದಿದೆ.ಈ ಪಟ್ಟಣವು 9ನೇ ಶತಮಾನಕ್ಕೂ ಹಳೆಯದಾದ ಮಧುಕೇಶ್ವರ ದೇವಾಲಯಕ್ಕೆ ಪ್ರಸಿದ್ದಿಯಾಗಿದೆ. ಶಿವನಿಗೆ ಸಮರ್ಪಿತವಾದ ಈ ದೇವಾಲಯವು ಇತಿಹಾಸದ ಪ್ರಕಾರ ಕದಂಬ ಸಾಮ್ರಾಜ್ಯದ ಮಯೂರ ಶರ್ಮ ರಾಜನಿಂದ ನಿರ್ಮಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ. ಕದಂಬರು ಕರ್ನಾಟಕದ ಅತ್ಯಂತ ಹಳೇಯ ಆಡಳಿತಗಾರರಾಗಿದ್ದರು ಮತ್ತು ಚಾಲುಕ್ಯ ಸಾಮ್ರ್ಯಾಜ್ಯವು ಅಸ್ತಿತ್ವಕ್ಕೆ ಬರುವವರೆಗೆ ಕದಂಬರು ತಮ್ಮ ಆಡಳಿತವನ್ನು ಕರ್ನಾಟಕದಲ್ಲಿ ನಡೆಸುತ್ತಿದ್ದರು.

ಈಗಿರುವ ಮಧುಕೇಶ್ವರ ದೇವಾಲಯವು ಕದಂಬರ ನಂತರದ ಅಂದರೆ ಚಾಲುಕ್ಯರು ಮತ್ತು ಹೊಯ್ಸಳರ ಸಾಮ್ರ್ಯಾಜ್ಯದ ಆಡಳಿತದ ಅವಧಿಯಲ್ಲಿ ಮಾಡಲಾದ ಅನೇಕ ಬದಲಾವಣೆಗಳನ್ನು ಈ ದೇವಾಲಯದಲ್ಲಿ ಮಾಡಿರುವರೋ ಅದರ ಸಾಕ್ಷಿಯಾಗಿ ನಿಂತಿದೆ.

5. ಇಕ್ಕೇರಿ ಅಘೋರೇಶ್ವರ ದೇ॑ವಾಲಯ

5. ಇಕ್ಕೇರಿ ಅಘೋರೇಶ್ವರ ದೇ॑ವಾಲಯ

ಇದೂ ಕೂಡಾ ಸಾಗರ ತಾಲೂಕಿನಲ್ಲಿದ್ದು, ಇಕ್ಕೇರಿಯು ಸಾಗರ ತಾಲೂಕಿನ ಪಟ್ಟಣದಿಂದ ದಕ್ಷಿಣಕ್ಕೆ 6 ಕಿ.ಮೀ ದೂರದಲ್ಲಿದೆ. ಈ ಸಣ್ಣ ಪಟ್ಟಣವು ಇಲ್ಲಿಯ ಅಘೋರೇಶ್ವರ ದೇವಾಲಯಕ್ಕೆ ಹೆಸರು ವಾಸಿಯಾಗಿದ್ದು, ಈ ದೇವಾಲಯವು ಶಿವ ದೇವರಿಗೆ ಸಮರ್ಪಿತವಾದುದಾಗಿದೆ. ಮತ್ತೆ ನಾಯಕರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ದೇವಾಲಯವು ಒಂದು ವಿಭಿನ್ನ ಶೈಲಿಯಲ್ಲಿ ನಿರ್ಮಿತವಾಗಿದ್ದು, ದ್ರಾವಿಡರು, ಕದಂಬರು, ಹೊಯ್ಸಳರು ಮತ್ತು ವಿಜಯ ನಗರ ವಾಸ್ತುಶಿಲ್ಪ ಕಲಾಗಾರಿಕೆಯ ಪ್ರಭಾವವನ್ನು ಹೊಂದಿದೆ.

ಇಲ್ಲಿ ಪ್ರಮುಖವಾಗಿ ಗ್ರಾನೈಟನ್ನು ನಿರ್ಮಾಣಕ್ಕೆ ಬಳಸಲಾಗಿದ್ದು, ದೇವಾಲಯವು ಆಯತಾಕಾರದ ಸಂಕೀರ್ಣದಲ್ಲಿ ನೆಲೆಸಿದೆ ಮತ್ತು ಸ್ವಲ್ಪ ಎತ್ತರದ ಮಟ್ಟದಲ್ಲಿದೆ. ದೇವಾಲಯದ ಮುಂಭಾಗದಲ್ಲಿರುವ ಪವಿತ್ರ ನಂದಿಯ ಅತಿದೊಡ್ಡ ಪ್ರತಿಮೆಯನ್ನು ನೋಡದೇ ಇರಲು ಸಾಧ್ಯವೇ ಇಲ್ಲ.ಕರಕುಶಲತೆಯ ಪರಿಪೂರ್ಣತೆಯನ್ನು ಇಲ್ಲಿ ಕಾಣಬಹುದಾಗಿದ್ದು, ಪ್ರತಿಮೆಯು ಒಂದು ಅತ್ಯಂತ ಪರಿಪೂರ್ಣ ರೀತಿಯಲ್ಲಿ ಕೆತ್ತನೆಯನ್ನು ಹೊಂದಿದೆ ಮತ್ತು ಇದರ ಕಲೆಯಲ್ಲಿ ಒಂದು ಅಚ್ಚಳಿಯದ ಹೊಳಪನ್ನು ಇಂದಿಗೂ ಕಾಣಬಹುದಾಗಿದೆ.

6. ಕೆಳದಿ ರಾಮೇಶ್ವರ ದೇವಾಲಯ

6. ಕೆಳದಿ ರಾಮೇಶ್ವರ ದೇವಾಲಯ

ಈ ಪ್ರಶಾಂತವಾದ ದೇವಾಲಯವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರದಿಂದ 8 ಕಿ.ಮೀ ಅಂತರದಲ್ಲಿರುವ ಸಣ್ಣ ಪಟ್ಟಣವಾಗಿದೆ. ಈ ಸ್ಥಳವು ರಾಮೇಶ್ವರ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಕೆಳದಿಯು ವಿಜಯನಗರ ಸಾಮ್ರಾಜ್ಯದ ವೈರಿಗಳಾದ ಕೆಳದಿ ಆಡಳಿತಗಾರರ(ಅಥವಾ ನಾಯಕರ) ರಾಜಧಾನಿಯಾಗಿತ್ತು. ಈ ದೇವಾಲಯವನ್ನು ಹೊಯ್ಸಳ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ ಈ ದೇವಾಲಯವು ಅದ್ಭುತ ಅಂಶಗಳನ್ನೊಳಗೊಂಡು ಭವ್ಯವಾಗಿದೆ.

ಈ ದೇವಾಲಯವು ಚೌಡಪ್ಪ ನಾಯಕರಿಂದ ನಿರ್ಮಿಸಲಾಗಿದ್ದು, ರಾಮೇಶ್ವರ, ಪಾರ್ವತಿ ಮತ್ತು ವೀರಭದ್ರೇಶ್ವರ ಎಂಬ ಮುಖ್ಯವಾದ ಮೂರು ದೇವಾಲಯಗಳಿವೆ. ಪಾರ್ವತಿ ದೇವಾಲಯದ ಮುಖ್ಯ ವಿಶೇಷತೆಯೆಂದರೆ ಇದರ ಅಂದವಾದ ಛಾವಣಿಯ ಸಂಕೀರ್ಣವು ಮರದಿಂದ ಕೆತ್ತಲಾದ ಹೂವಿನ ಮಾದರಿಗಳಿಂದ ಮುಚ್ಚಲ್ಪಟ್ಟಿದೆ ಅದರಲ್ಲಿ ಯಾವುದೇ ಎರಡೂ ಒಂದೇ ರೀತಿಯದ್ದಾಗಿರುವುದಿಲ್ಲ.

ವೀರಭದ್ರೇಶ್ವರ ದೇವಾಲಯವು ನಿಜವಾಗಿಯೂ ಸುಂದರವಾಗಿದ್ದು 'ನವಗ್ರಹ' ಎಂಬ ಒಂಬತ್ತು ಗ್ರಹಗಳ ಮತ್ತು ಕೆಲವು ದೇವತೆಗಳ ಅಪರೂಪದ ಶಿಲ್ಪಗಳನ್ನು ಹೊಂದಿದೆ ಅಲ್ಲದೆ ಸರ್ಪದ ವಿಶಿಷ್ಟ ರೂಪ ಅಥವಾ 'ನಾಗಮಂಡಲ' ಮುಂತಾದವುಗಳನ್ನು ಒಳಗೊಂಡಿದೆ. ಆಡಿನ ತಲೆಯನ್ನು ಒಳಗೊಂಡ ದಕ್ಷ ಪ್ರಜಾಪತಿಯ ಪ್ರತಿಮೆ ಮತ್ತು ಉತ್ತೇಜಿಸುವ ಕೆತ್ತನೆಗಳಾದ 'ವಾಸ್ತು ಪುರುಷ್'(ರಚನೆಗಳ ದೇವರು) ಇವು ಕೆಲವು ಇಲ್ಲಿಯ ಕಲಾಗಾರಿಕೆಯನ್ನು ವಿವರಿಸುವಂತಹ ಕೆಲವು ಉತ್ತಮವಾದ ಉದಾಹರಣೆಗಳು.

ಇಲ್ಲಿ ಅತ್ಯಂತ ದೊಡ್ಡದಾದ 24 ಅಡಿ ಎತ್ತರದ ಕಂಬ ಅಥವಾ ಮಹಾಸ್ತಂಭವನ್ನು ಹಿಂಭಾಗದಲ್ಲಿ ಹೊಂದಿದ್ದು ಇದರ ಜೊತೆಗೆ ಗಣೇಶ ದೇವರಿಗೆ ರಾಣಿ ಚೆನ್ನಮ್ಮ ಅವಳ ಸಂಗಾತಿಗಳೊಂದಿಗೆ ಗೌರವ ಸಲ್ಲಿಸುವ ಒಂದು ದೃಶ್ಯದ ಕೆತ್ತನೆಯು ದೇವಾಲಯದ ಇನ್ನೊಂದು ಆಕರ್ಷಣೀಯ ಭಾಗವಾಗಿದೆ.

7. ಸಹಸ್ರಲಿಂಗ

7. ಸಹಸ್ರಲಿಂಗ

ಇದು ಇನ್ನೊಂದು ಮುಖ್ಯವಾದ ಯಾತ್ರೀ ಸ್ಥಳವಾಗಿದ್ದು, ಈ ಸ್ಥಳವು ಶಾಲ್ಮಾಲಾ ನದಿಯ ಮಧ್ಯ ಭಾಗದಲ್ಲಿದೆ.ಈ ಸ್ಥಳಕ್ಕೆ ಹತ್ತಿರದ ಪಟ್ಟಣ ಶಿರ್ಸಿ, 17 ಕಿ.ಮೀ ದೂರದಲ್ಲಿದೆ. ಸಹಸ್ರಲಿಂಗವೆಂದರೆ 1000 'ಲಿಂಗಗಳು' ಎಂದು ಅರ್ಥೈಸುತ್ತದೆ ಮತ್ತು ಈ ಹೆಸರು ಶಲ್ಮಾಲಾದ ನದಿಯ ದಂಡೆಯ ಮೇಲೆ ಬಂಡೆಗಳ ಮೇಲೆ ಕೆತ್ತಲಾದ ಹಲವಾರು ಲಿಂಗಗಳಿಂದಾಗಿ ಬಂದಿದೆ.'ಲಿಂಗ' ಶಿವನ ಪೂಜೆಯ ಸಂಕೇತವಾಗಿದೆ. 'ಲಿಂಗ' ಎಂದರೆ ಶಿವನನ್ನು ಪೂಜಿಸುವ ಒಂದು ಸಂಕೇತವಾಗಿದೆ.1678 ಮತ್ತು 1718 ರ ನಡುವೆ ಶಿರ್ಸಿಯನ್ನು ಆಳಿದ ಸದಾಶಿವರಾಯರಿಂದ ಈ ಲಿಂಗಗಳನ್ನು ಸ್ಥಾಪಿಸಲಾಗಿದೆ ಎಂದು ಇತಿಹಾಸ ಹೇಳುತ್ತದೆ.ಅವುಗಳಲ್ಲಿ ಪ್ರತಿಯೊಂದೂ 'ನಂದಿ' ಕೆತ್ತನೆ ಅಥವಾ ಮುಂಭಾಗದಲ್ಲಿ ನಂದಿಯ ಪ್ರತಿಮೆಯನ್ನು ಹೊಂದಿದೆ.

ಮಹಾ ಶಿವರಾತ್ರಿ ಉತ್ಸವದ ಸಮಯದಲ್ಲಿ ಹಲವಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ಪೂಜೆಗಳು ಮತ್ತು ಆಚರಣೆಗಳು ವ್ಯಾಪಕವಾಗಿ ನಡೆಯುತ್ತವೆ.ನೀರಿನ ಮಧ್ಯೆ ನೂರಾರು 'ಲಿಂಗಗಳ' ನೋಟವು ನಿಜವಾಗಿಯೂ ಆಕರ್ಷಕ ದೃಶ್ಯವಾಗಿದೆ.'ಲಿಂಗಗಳು ' ವಿವಿಧ ಆಕಾರ ಮತ್ತು ಗಾತ್ರಗಳನ್ನು ಹೊಂದಿದ್ದು ಅವು ನೀರಿನ ರಭಸದ ಕಾರಣದಿಂದಾಗಿ ಕೆಲವು ವಿರೂಪಗೊಂಡಿವೆ ಅಥವಾ ಕೆಡವಲ್ಪಟ್ಟಿದೆ. ಶಿರ್ಸಿ -ಯೆಲ್ಲಾಪುರ ರಸ್ತೆಯಿಂದ ಇಲ್ಲಿಗೆ ಸುಲಭವಾಗಿ ತಲುಪಬಹುದು. ಇಲ್ಲಿಗೆ ಹೋಗಲು ನೀರಿನ ಮಟ್ಟ ಕಡಿಮೆ ಇರುವ ಸಂಧರ್ಭದಲ್ಲಿ ಶಿಫಾರಸು ಮಾಡಲಾಗುತ್ತದೆ ಏಕೆಂದರೆ ಈ ಸಮಯದಲ್ಲಿ ಕೆತ್ತನೆಗಳು ಸ್ಪಷ್ಟವಾಗಿ ಗೋಚರಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X