Search
  • Follow NativePlanet
Share
» »ಶಂಕರರು ಸ್ಥಾಪಿಸಿದ 4 ಜಗತ್ಪೀಠಗಳು

ಶಂಕರರು ಸ್ಥಾಪಿಸಿದ 4 ಜಗತ್ಪೀಠಗಳು

By Vijay

ದೇವರು ಎನ್ನುವುದು ನಿರಾಕಾರ ಸ್ವರೂಪದ ಒಂದು ದಿವ್ಯ ಚೇತನವಾಗಿದ್ದು, ಅದರ ಒಂದು ಭಾಗವೆ ಜೀವಿಗಳಾಗಿವೆಯೆಂದು, ಅಹಂ ಬ್ರಹ್ಮಾಸ್ಮಿ ಎಂಬ ತತ್ವವನ್ನು ಪ್ರತಿಪಾದಿಸಿ ಅದ್ವೈತ ಪಂಥದ ಸಂಸ್ಥಾಪಕರೆಂದು ಪ್ರಸಿದ್ಧಿ ಪಡೆದಿರುವ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪವಿತ್ರ ಪೀಠಗಳು ಅಥವಾ ಮಠಗಳ ಕುರಿತು ನಿಮಗೆ ತಿಳಿದಿರಬಹುದು.

ಜಗತ್ಪೀಠಗಳು ಎಂದು ಕರೆಯಲಾಗುವ ಆ ನಾಲ್ಕು ಪವಿತ್ರ ಸನ್ನಿಧಿಗಳು ಪ್ರಮುಖವಾದ ನಾಲ್ಕು ದಿಕ್ಕುಗಳಲ್ಲಿದ್ದು, ಇರುವ ನಾಲ್ಕು ವೇದಗಳನ್ನು ಪ್ರತಿನಿಧಿಸುತ್ತವೆ. ಈ ಪೀಠಗಳನ್ನು ಧರ್ಮ ಪ್ರಸಾರಕ್ಕಾಗಿ, ಜನರ ಒಳಿತಿಗಾಗಿ ಸ್ಥಾಪಿಸಿದ್ದ ಶಂಕರಾಚಾರ್ಯರು ತಮ್ಮ ಶಿಷ್ಯ ವೃಂದದಲ್ಲಿದ್ದ ಮುಖ್ಯ ನಾಲ್ಕು ಶಿಷ್ಯರನ್ನು ಈ ನಾಲ್ಕು ಪೀಠಗಳಿಗೆ ಪೀಠಾಧಿಕಾರಿಗಳನ್ನಾಗಿ ನೇಮಿಸಿದ್ದರು.

ಶಂಕರರು ಜನಿಸಿದ ಕಾಲಡಿಗೊಮ್ಮೆ ಭೇಟಿ ನೀಡಿ

ಹಾಗಾದರೆ, ಆ ನಾಲ್ಕು ಜಗತ್ಪೀಠಗಳು ಯಾವುವು ಹಾಗೂ ಅವುಗಳು ನೆಲೆಸಿರುವುದು ಎಲ್ಲೆಲ್ಲಿ ಎಂಬುದರ ಕುರಿತು ಈ ಲೇಖನದ ಮೂಲಕ ತಿಳಿಯಿರಿ. ಈ ಮಠಗಳು ಸಾಕಾಷ್ಟು ಧಾರ್ಮಿಕ ಮಹತ್ವ ಪಡೆದಿದ್ದು ಧಾರ್ಮಿಕಾಸಕ್ತ ಪ್ರವಾಸಿಗರಿಂದ ಸದಾ ಭೇಟಿ ನೀಡಲ್ಪಡುತ್ತಿರುತ್ತವೆ.

ಇನ್ನೊಂದು ವಿಚಾರ, ಪ್ರೀಯ ಓದುಗರೆ, ಶಂಕರರು ಯಾವ ಕೆಲಸ ಮಾಡಿದರೂ ಅದರ ಹಿಂದೆ ಜನರ ಒಳಿತಿಗಾಗಿ ಸದುದ್ದೇಶವಿರುತ್ತಿತ್ತು. ಹಾಗಾದರೆ ಶಂಕರರು, ದಿಕ್ಕುಗಳು ಎಂಟು ಇದ್ದಾಗ ಕೇವಲ ನಾಲ್ಕು ಪೀಠಗಳನ್ನು ಸ್ಥಾಪಿಸಿದರೇಕೆ? ಮಿಕ್ಕ ಮೂರು ಪೀಠಗಳನ್ನು ಹೆಸರುವಾಸಿಯಾದ ಪವಿತ್ರ ಧಾಮಗಳಲ್ಲೆ ಸ್ಥಾಪಿಸಿ ಒಂದನ್ನು ಶೃಂಗೇರಿಯಲ್ಲೇಕೆ ಸ್ಥಾಪಿಸಿದರು? ಪೀಠಗಳ ಸ್ಥಾಪನೆಯ ಹಿಂದೆ ಅವರಿಗಿದ್ದ ಉದ್ದೇಶವೇನು?

ಈ ರೀತಿಯ ಕೆಲ ಪ್ರಶ್ನೆಗಳು ಮೂಡುವುದು ಸಹಜ. ನಿಮಗೇನಾದರೂ ಈ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಮಂಜಸ ಉತ್ತರ ತಿಳಿದಿದ್ದರೆ ಅಥವಾ ಪೂರಕವಾದ ಅಭಿಪ್ರಾಯ ಮಂಡಿಸಬಹುದಾಗಿದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ಪ್ರತಿಕ್ರಯಿಸಿ ನಮ್ಮೊಂದಿಗೆ ಹಂಚಿಕೊಳ್ಳಿ.

ನಾಲ್ಕು ಮಹಾ ಜಗತ್ಪೀಠಗಳು:

ನಾಲ್ಕು ಮಹಾ ಜಗತ್ಪೀಠಗಳು:

ಗೋವರ್ಧನ ಪೀಠ : ಮೊದಲನೇಯದಾಗಿ ಪೂರ್ವ ದಿಕ್ಕನ್ನು ತೆಗೆದುಕೊಂಡಾಗ, ಗೋವರ್ಧನ ಪೀಠವು ಆದಿ ಶಂಕರರು ಪೂರ್ವ ದಿಕ್ಕಿನಲ್ಲಿ ಸ್ಥಾಪಿಸಿದ ಪೀಠವಾಗಿದೆ. ಎಂಟನೇಯ ಶತಮಾನದಲ್ಲಿ ಹಿಂದು ಧರ್ಮದ ಪ್ರಸಾರಕ್ಕಾಗಿ, ವೇದಗಳ ಹೆಚ್ಚಿನ ಅಧ್ಯಯನಕ್ಕಾಗಿ ಹಾಗೂ ಅದರಿಂದಾಗುವ ಅಥವಾ ದೊರಕುವ ಉನ್ನತ ಜ್ಞಾನ ಹಾಗೂ ಶಿಕ್ಷಣ ಸಾಮಾನ್ಯ ಜನರಿಗೆಲ್ಲ ದೊರಕುವಂತಾಗಲಿ ಎಂಬ ಸದುದ್ದೇಶದಿಂದ ಸ್ಥಾಪಿಸಲಾದ ನಾಲ್ಕು ಪೀಠಗಳಲ್ಲಿ ಗೋವರ್ಧನ ಪೀಠವು ಪೂರ್ವದಲ್ಲಿದೆ.

ಚಿತ್ರಕೃಪೆ: wikipedia

ನಾಲ್ಕು ಮಹಾ ಜಗತ್ಪೀಠಗಳು:

ನಾಲ್ಕು ಮಹಾ ಜಗತ್ಪೀಠಗಳು:

ಪವಿತ್ರಧಾಮವಾದ ಹಾಗೂ ವಿಷ್ಣುವಿನ ಸ್ಥಾನವಾಗಿ ಹೆಸರುವಾಸಿಯಾದ ಒಡಿಶಾ ರಾಜ್ಯದ ಪುರಿ (ಜಗನ್ನಾಥ ಪುರಿ) ಯಲ್ಲಿ ಗೋವರ್ಧನ ಮಠವಿದೆ. ಪುರಿ ಪೀಠ ಎಂತಲೂ ಕರೆಯಲಾಗುವ ಇಲ್ಲಿ ವೇದಗಳನುಸಾರವಾಗಿ ಪೂರ್ವ ಭಾರತದ ಎಲ್ಲ ಭಾಗಗಳು ಗೋವರ್ಧನ ಪೀಠದ ಅಧೀನದಲ್ಲಿ ಬರುತ್ತವೆ. ಋಗ್ವೇದವನ್ನು ಪ್ರತಿನಿಧಿಸುವ ಗೋವರ್ಧನ ಪೀಠಕ್ಕೆ ಪೀಠಾಧಿಪತಿಯಾಗಿ ಶಂಕರರು ಪದ್ಮಪಾದರನ್ನು ನೇಮಿಸಿರುವರು.

ಚಿತ್ರಕೃಪೆ: Nayansatya

ನಾಲ್ಕು ಮಹಾ ಜಗತ್ಪೀಠಗಳು:

ನಾಲ್ಕು ಮಹಾ ಜಗತ್ಪೀಠಗಳು:

ನಂತರ ಅವರವರ ಉತ್ತರಾಧಿಕಾರಿಗಳು ಮಠದ ಮಠಾಧೀಶರಾಗಿ ಆ ಮಠ ಪ್ರತಿನಿಧಿಸುವ ವೇದಾಧ್ಯನದಲ್ಲಿ ತೊಡಗಿಕೊಂಡು ಬಂದಿದ್ದಾರೆ. ಶಂಕರರಿಂದ ಮಠಗಳು ಸ್ಥಾಪಿಸಲ್ಪಟ್ಟಿರುವುದರಿಂದ ಅವರ ಗೌರವಾರ್ಥವಾಗಿ ಈ ಪೀಠಾಧಿಕಾರಿಗಳನ್ನು ಶಂಕರಾಚಾರ್ಯರೆಂದೆ ಸಂಬೋಧಿಸಲಾಗುತ್ತದೆ. ಪ್ರಸ್ತುತ ಗೋವರ್ಧನ ಮಠದ ಪೀಠಾಧಿಕಾರಿ ಶ್ರೀ ನಿಶ್ಚಲಾನಂದ ಸರಸ್ವತಿಯವರಾಗಿದ್ದಾರೆ.

ಚಿತ್ರಕೃಪೆ: wikipedia

ನಾಲ್ಕು ಮಹಾ ಜಗತ್ಪೀಠಗಳು:

ನಾಲ್ಕು ಮಹಾ ಜಗತ್ಪೀಠಗಳು:

ಪುರಿ ಜಗನ್ನಾಥನ ದೇವಾಲಯದೊಂದಿಗೂ ನಂಟು ಹೊಂದಿರುವ ಗೋವರ್ಧನ ಪೀಠದ ಮಠಾಧೀಶರಿಂದ ಹೊಸದೊಂದು ಆಚರಣೆಯನ್ನು ತರಲಾಗಿದ್ದು ಅದನ್ನು ಸಮುದ್ರ ಆರತಿ ಎಂದು ಆಚರಿಸಲಾಗುತ್ತದೆ. ಪ್ರತಿ ದಿನ ಪುರಿಯ ಸ್ವರಗದ್ವಾರ್ ಎಂಬಲ್ಲಿ ಸಮುದ್ರಕ್ಕೆ ಶಂಕರಾಚಾರ್ಯರ ಶಿಷ್ಯ ವೃಂದವದವರಿಂದ ಆರತಿ ಹಾಗೂ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ವರ್ಷದ ಪೌಷ ಪೂರ್ಣಿಮೆಯಂದು ಸ್ವತಃ ಮಠದ ಶಂಕರಾಚಾರ್ಯರೆ ಸಮುದ್ರಕ್ಕೆ ಆರತಿ ಸಲ್ಲಿಸುತ್ತಾರೆ. ಈ ಮಠದ ಮಹಾವಾಕ್ಯ : ಪ್ರಜ್ಞಾನಂ ಬ್ರಹ್ಮ.

ಚಿತ್ರಕೃಪೆ: Sidsahu

ನಾಲ್ಕು ಮಹಾ ಜಗತ್ಪೀಠಗಳು:

ನಾಲ್ಕು ಮಹಾ ಜಗತ್ಪೀಠಗಳು:

ಪಶ್ಚಿಮಮ್ನಾಯ ಶಾರದಾ ಪೀಠ : ಇದು ಶಾರದಾ ದೇವಿಯ ಪೀಠವಾಗಿದ್ದು ಪಶ್ಚಿಮಮ್ನಾಯ ಶಾರದಾ ಪೀಠ ಅಥವಾ ಕಲಿಕಾ ಪೀಠ ಇಲ್ಲವೆ ಪಶ್ಚಿಮ ಪೀಠ ಎಂದು ಕರೆಯಲ್ಪಡುತ್ತದೆ. ಹಸ್ತಮಲಕಾಚಾರ್ಯರು ಇದರ ಮೊದಲ ಮಠಧೀಶರಾಗಿ ಶಂಕರರಿಂದ ನೇಮಿಸಲ್ಪಟ್ಟಿರುತ್ತಾರೆ ಹಾಗೂ ಇದು ಸಾಮ ವೇದವನ್ನು ಪ್ರತಿನಿಧಿಸುವ ಮಠವಾಗಿದೆ. ಇದರ ಮಹಾವಾಕ್ಯ ಇಂತಿದೆ : ತತ್ವಮಸಿ. ದ್ವಾರಕಾಧೀಶನ ದೇವಾಲಯ.

ಚಿತ್ರಕೃಪೆ: Scalebelow

ನಾಲ್ಕು ಮಹಾ ಜಗತ್ಪೀಠಗಳು:

ನಾಲ್ಕು ಮಹಾ ಜಗತ್ಪೀಠಗಳು:

ಜ್ಯೋತಿರ್ಮಠ/ ಜೋಶಿಮಠ : ಬದ್ರಿಕಾಶ್ರಮ/ ಜ್ಯೋತಿರ್ಮಠ/ಜೋಶಿಮಠ ಎಂದೆಲ್ಲ ಕರೆಯಲ್ಪಡುವ ಈ ಪೀಠವು ಆದಿ ಶಂಕರಾಚಾರ್ಯರಿಂದ ಉತ್ತರದಲ್ಲಿ ನಿರ್ಮಿಸಲಾದ ಜಗತ್ಪೀಠವಾಗಿದೆ. ಇದನ್ನು ಉತ್ತರಾಮ್ನಾಯ ಮಠ ಅಥವಾ ಪೀಠ ಎಂತಲೂ ಸಹ ಕರೆಯಲಾಗುತ್ತದೆ. ಇದು ಉತ್ತರಾಖಂಡದ ಚಮೋಲಿಯಲ್ಲಿರುವ ಜೋಶಿಮಠ ಎಂದೂ ಕರೆಯಲಾಗುವ ಜ್ಯೋತಿರ್ಮಠ ಎಂಬ ಹೆಸರಿನ ಪಟ್ಟಣದಲ್ಲಿದೆ. ಜೊಷಿಮಠ ಹಿಮಾಲಯದ ಬೆರುಗುಗೊಳಿಸುವ ಹಲವು ಟ್ರೆಕ್ಕಿಂಗ್ ಮಾರ್ಗಗಳಿಗೆ ಪ್ರಮುಖ ಕೆಂದ್ರವಾಗಿದೆ.

ಚಿತ್ರಕೃಪೆ: christian0702

ನಾಲ್ಕು ಮಹಾ ಜಗತ್ಪೀಠಗಳು:

ನಾಲ್ಕು ಮಹಾ ಜಗತ್ಪೀಠಗಳು:

ಆದಿ ಗುರು ಶಂಕರರಿಂದ ನೇಮಿಸಲ್ಪಟ್ಟ ತೋಟಕಾಚಾರ್ಯರು ಇದರ ಪ್ರಥಮ ಪೀಠಾಧ್ಯಕ್ಷರಾಗಿದ್ದು ಈ ಪೀಠವು ಅಥರ್ವ ವೇದವನ್ನು ಪ್ರತಿನಿಧಿಸುವ ಕ್ಷೇತ್ರವಾಗಿದೆ. ಸಾಕಷ್ಟು ಸುಂದರವಾದ ಪ್ರಕೃತಿಯ ಮಧ್ಯದಲ್ಲಿ ನೆಲೆಸಿರುವ ಒಂದು ಸುಂದರ ಹಾಗೂ ಪವಿತ್ರವಾದ ಧಾರ್ಮಿಕ ತಾಣವಾದ ಈ ಪೀಠದ ತತ್ವವಾಕ್ಯ ಅಥವಾ ಮಹಾವಾಕ್ಯ : ಅಯಂ ಆತ್ಮ ಬ್ರಹ್ಮ

ಚಿತ್ರಕೃಪೆ: Raji.srinivas

ನಾಲ್ಕು ಮಹಾ ಜಗತ್ಪೀಠಗಳು:

ನಾಲ್ಕು ಮಹಾ ಜಗತ್ಪೀಠಗಳು:

ಶೃಂಗೇರಿ ಶಾರದಾಪೀಠ : ಇನ್ನೂ ದಕ್ಷಿಣದಲ್ಲಿ ಪ್ರಮುಖವಾಗಿ ಕಂಡುಬರುವ ಸಾವಿರ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಪ್ರವಾಸಿಗರನ್ನು ಆಕರ್ಷಿಸುವ ಕರ್ನಾಟಕದ ಶೃಂಗೇರಿಯಲ್ಲಿರುವ ಶಾರದಾ ದೇವಿಯ ಪೀಠವು ಶಂಕರರು ಸ್ಥಾಪಿಸಿದ ಜಗತ್ಪೀಠಗಳಲ್ಲಿ ದಕ್ಷಿಣದಲ್ಲಿರುವ ಪೀಠ ಅಥವಾ ಮಠವಾಗಿದೆ. ಇದನ್ನು ದಕ್ಷಿಣಾಮ್ನಾಯ ಪೀಠ ಎಂದು ಕರೆಯುತ್ತಾರೆ.

ಚಿತ್ರಕೃಪೆ: Naveenbm

ನಾಲ್ಕು ಮಹಾ ಜಗತ್ಪೀಠಗಳು:

ನಾಲ್ಕು ಮಹಾ ಜಗತ್ಪೀಠಗಳು:

ಶಂಕರ ಭಗವತ್ಪಾದರು ಸ್ಥಾಪಿಸಿದ ನಾಲ್ಕು ಅಮ್ನಾಯ (ಅಮ್ಮನವರ) ಪೀಠಗಳಲ್ಲಿ ಶೃಂಗೇರಿ ಶಾರದಾಂಬೆಯ ಪೀಠವು ಪ್ರಪ್ರಥಮವಾಗಿ ಸ್ಥಾಪಿಸಿದ ಪೀಠವೆಂಬ ಖ್ಯಾತಿಗೆ ಪಾತ್ರವಾಗಿದೆ. ಈ ಪೀಠದ ಸ್ಥಾಪನೆಗೂ ಒಂದು ರೋಚಕವಾದ ಹಿನ್ನಿಲೆಯಿದೆ.

ಚಿತ್ರಕೃಪೆ: Ashok Prabhakaran

ನಾಲ್ಕು ಮಹಾ ಜಗತ್ಪೀಠಗಳು:

ನಾಲ್ಕು ಮಹಾ ಜಗತ್ಪೀಠಗಳು:

ಹಿಂದೆ ಸನಾತನ ಧರ್ಮಕ್ಕೆ ಕಂಟಕವಾಗಿದ್ದ ಅಂಶಗಳನ್ನು ಒಂದೊಂದಾಗಿ ನಿವಾರಿಸುತ್ತ ಬಂದಿದ್ದ ಆದಿ ಶಂಕರರು ಅದ್ವೈತ ತತ್ವವನ್ನು ಎಲ್ಲೆಡೆ ಸಾರುವ ಉದ್ದೇಶದಿಂದ ಹಾಗೂ ಸನಾತನ ಧರ್ಮದ ಪ್ರಸಾರಕ್ಕಾಗಿ, ವೇದಾದಿಗಳ ತಿರುಳನ್ನು ಜನರಿಗೆ ತಿಳಿ ಹೇಳಬೆಕೆಂಬ ಸದುದ್ದೇಶದಿಂದ ನಾಲ್ಕು ದಿಕ್ಕುಗಳಲ್ಲಿ ವೇದಾಧ್ಯಯನ ಪೀಠಗಳನ್ನು ಸ್ಥಾಪಿಸಲು ನಿರ್ಧರಿಸಿ ಅದಕ್ಕಾಗಿ ಪಾವಿತ್ರ್ಯತೆಯಿಂದ ಕುಡಿರುವ ಸ್ಥಳಗಳ ಹುಡುಕಾಟದಲ್ಲಿದ್ದರು.

ಚಿತ್ರಕೃಪೆ: Philanthropist 1

ನಾಲ್ಕು ಮಹಾ ಜಗತ್ಪೀಠಗಳು:

ನಾಲ್ಕು ಮಹಾ ಜಗತ್ಪೀಠಗಳು:

ತುಂಗಾ ನದಿ ತಟದಲ್ಲಿ ನೆಲೆಸಿರುವ ಹಾಗೂ ಋಷ್ಯಶೃಂಗ ಋಷಿಗಳು ನೆಲೆಸಿರುವ ಶೃಂಗೇರಿಯ ಕುರಿತು ಶಂಕರರಿಗೆ ಜ್ಞಾನ ದೃಷ್ಟಿಯಲ್ಲೆ ತಿಳಿದಿತ್ತು ಹಾಗೂ ಈ ಸ್ಥಳವನ್ನು ಹುಡುಕುತ್ತ ಆದಿ ಶಂಕರರು ಒಂದೊಮ್ಮೆ ಶೃಂಗೇರಿಗೆ ಆಗಮಿಸಿಯೆ ಬಿಟ್ಟರು. ಹೀಗೆ ಬಂದ ಶಂಕರರಿಗೆ ಇಲ್ಲೊಂದು ವಿನೂತನ ಅನುಭವವಾಯಿತು.

ಚಿತ್ರಕೃಪೆ: Sanjai 16061998

ನಾಲ್ಕು ಮಹಾ ಜಗತ್ಪೀಠಗಳು:

ನಾಲ್ಕು ಮಹಾ ಜಗತ್ಪೀಠಗಳು:

ಅದೆನೆಂದರೆ, ಕಡು ಬಿಸಿಲಿನಲ್ಲಿ ಪ್ರಸವ ವೇದನೆಯಲ್ಲಿದ್ದ ಕಪ್ಪೆಯೊಂದಕ್ಕೆ ನೆರಳಾಗಿ ದೊಡ್ಡ ಸರ್ಪವೊಂದು ತನ್ನ ಹೆಡೆ ಬಿಚ್ಚಿ ನಿಂತು ಆರೈಕೆ ಮಾಡುತ್ತಿತ್ತು. ನೈಸರ್ಗಿಕವಾಗಿಯೆ ಬದ್ಧ ಶತ್ರುಗಳಾದವರು ಇಂತಹ ಒಂದು ಸ್ಥಳದಲ್ಲಿ ಅನುಬಂಧದಿಂದಿರುವುದನ್ನು ಕಂಡ ಶಂಕರರು ಸ್ಥಳದ ಮಹಿಮೆ ಹಾಗೂ ಪಾವಿತ್ರ್ಯಕ್ಕೆ ಮಾರು ಹೋಗಿ ಇಲ್ಲಿಯೆ ಪೀಠ ಸ್ಥಾಪಿಸಬೇಕೆಂದು ನಿರ್ಧರಿಸಿದರು.

ಚಿತ್ರಕೃಪೆ: Sarvagnya

ನಾಲ್ಕು ಮಹಾ ಜಗತ್ಪೀಠಗಳು:

ನಾಲ್ಕು ಮಹಾ ಜಗತ್ಪೀಠಗಳು:

ಆ ಪ್ರಕಾರವಾಗಿ ಜ್ಞಾನ, ಸತ್ಯಗಳ ಪ್ರತೀಕವಾದ ಶಾರದಾಂಬೆಗೆ ಮುಡಿಪಾದ ಪ್ರಥಮ ಮಠವನ್ನು ಇಲ್ಲಿ ಸ್ಥಾಪಿಸಿ ಶಾರದಾಂಬೆಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಅಂದಿನಿಂದ ಈ ಮಠವು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠ ಎಂದೆ ಪ್ರಸಿದ್ಧವಾಯಿತು.

ಚಿತ್ರಕೃಪೆ: wikimedia

ನಾಲ್ಕು ಮಹಾ ಜಗತ್ಪೀಠಗಳು:

ನಾಲ್ಕು ಮಹಾ ಜಗತ್ಪೀಠಗಳು:

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಶೃಂಗೇರಿ ಹಾಗೂ ಶ್ರೀ ಶಾರದಾಂಬೆಯ ಈ ಪೀಠವು ಸ್ಮಾರ್ತ ಸಂಪ್ರದಾಯದ ಕೇಂದ್ರವಾಗಿದ್ದು ಅನೇಕ ಭಕ್ತಾದಿಗಳನ್ನು ಸೆಳೆಯುತ್ತದೆ. ಶ್ರೀ ಶಾರದಾಪೀಠದ ಆವರಣದಲ್ಲಿರುವ ಪುರಾತನ ವಿದ್ಯಾಶಂಕರ ದೇವಾಲಯ.

ಚಿತ್ರಕೃಪೆ: Lsarun1312

ನಾಲ್ಕು ಮಹಾ ಜಗತ್ಪೀಠಗಳು:

ನಾಲ್ಕು ಮಹಾ ಜಗತ್ಪೀಠಗಳು:

ನಂತರ ಶಂಕರರು ಇಲ್ಲಿ ಮಠ ಸ್ಥಾಪಿಸಿ ಮಿಕ್ಕ ಮೂರು ಮಠಗಳನ್ನು ಮೂರು ದಿಕ್ಕುಗಳಲ್ಲಿ ಸ್ಥಾಪಿಸಲೆಂದು ಪ್ರವಾಸ ಕೈಗೊಂಡರು. ಹೊರಡುವುದಕ್ಕೆ ಮುಂಚೆ ತಮ್ಮ ಮುಖ್ಯ ಶಿಷ್ಯರಾದ ಸುರೇಶ್ವರಾಚಾರ್ಯರನ್ನು (ಪೂರ್ವಾಶ್ರಮದಲ್ಲಿ ಇವರೆ ಮಂಡನ ಮಿಶ್ರರಾಗಿದ್ದರು) ಅದರ ಮಠಾಧೀಶರನ್ನಾಗಿ ನೇಮಿಸಿದರು. ಯಜುರ್ವೇದವನ್ನು ಪ್ರತಿನಿಧಿಸುವ ಈ ಪೀಠದ ಮಹಾವಾಕ್ಯ : ಅಹಂ ಬ್ರಹ್ಮಾಸಿ.

ಚಿತ್ರಕೃಪೆ: Sharada Prasad CS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X