Search
  • Follow NativePlanet
Share
» »ಥಾರ್ ಮರುಭೂಮಿಯಲ್ಲಿ ಕಂಡುಬರುವ ಜೀವಿಗಳು

ಥಾರ್ ಮರುಭೂಮಿಯಲ್ಲಿ ಕಂಡುಬರುವ ಜೀವಿಗಳು

By Vijay

ಭಾರತದ ಮಹಾ ಮರಭೂಮಿಯಾಗಿರುವ ಥಾರ್ ಮರಭೂಮಿಯು ದೇಶದ ವಾಯವ್ಯ ಭಾಗದಲ್ಲಿ ಸ್ಥಿತವಿದ್ದು, ಭಾರತ ಹಾಗೂ ಪಾಕಿಸ್ತಾನದ ಗಡಿಗಳ ಗುಂಟ ಹಬ್ಬಿದೆ. ಸುಮಾರು 200000 ಚ.ಕಿ.ಮೀ ಗೂ ಅಧಿಕ ವಿಸ್ತಾರವಾದ ಪ್ರದೇಶವನ್ನು ಹೊಂದಿರುವ ಈ ಮರಭೂಮಿಯು ರಾಜಸ್ಥಾನ, ಹರಿಯಾಣ, ಪಂಜಾಬ್ ಹಾಗೂ ಗುಜರಾತ್ ರಾಜ್ಯಗಳಲ್ಲಿ ವಿಸ್ತರಿಸಿರುವುದನ್ನು ಕಾಣಬಹುದು. ಥಾರ್ ಮರಭೂಮಿಯು ಜಗತ್ತಿನ 18 ನೇಯ ದೊಡ್ಡ ಉಪ ಉಷ್ಣವಲಯದ ಮರಭೂಮಿಯಾಗಿದೆ.

ಥಾರ್ ಮರಭೂಮಿಯು ಪೂರ್ವದ ಅರಾವಳಿ ಪರ್ವತಗಳಲ್ಲಿರುವ ಸಟ್ಲೇಜ್ ನದಿಯಿಂದ ಹಿಡಿದು ದಕ್ಷಿಣದ ಉಪ್ಪು ಪ್ರದೇಶವಾದ ಗುಜರಾತಿನ ಕಚ್ ನ ಮಹಾರಣ್ ವರೆಗೂ ಚಾಚಿದೆ. ರಾಮಾಯಣದಲ್ಲೂ ಥಾರ್ ಮರಭೂಮಿಯ ಕುರಿತು ಉಲ್ಲೇಖವಿದ್ದು ಇದನ್ನು ಲವಣಸಾಗರ ಎಂದು ಕರೆಯಲಾಗಿದೆ. ಈ ಮರಭೂಮಿಯು ಸಾಕಷ್ಟು ಏರಿಳಿತದ ಪ್ರದೇಶಗಳನ್ನು ಹೊಂದಿದ್ದು ಅಲ್ಲಲ್ಲಿ ಬೆಟ್ಟ ಗುಡ್ಡಗಳಿಂದ ಆವೃತವಾಗಿರುವುದನ್ನು ಕಾಣಬಹುದು. ಅಲ್ಲದೆ ಈ ಮರಭೂಮಿಯು ಜೈವಿಕವಾಗಿ ವೈವಿಧ್ಯಮಯವಾಗಿದ್ದು ಸಾಕಷ್ಟು ವಿವಿಧ ಜೀವರಾಶಿಗಳಿಂದ ಸಂಪದ್ಭರಿತವಾಗಿದೆ. ಇದೊಂದು ಪ್ರವಾಸಿ ಆಕರ್ಷಣೆಯೂ ಸಹ ಆಗಿದೆ.

ಪ್ರಸ್ತುತ ಲೇಖನವು ಥಾರ್ ಮರಭೂಮಿಯಲ್ಲಿ ಕಂಡುಬರುವ ಕೆಲವು ವಿಶಿಷ್ಟ ಪ್ರಾಣಿ ಪಕ್ಷಿಗಳ ಪರಿಚಯ ಮಾಡಿಸುತ್ತದೆ.

ಮರಭೂಮಿ ಚೇಳು:

ಮರಭೂಮಿ ಚೇಳು:

ಅಂಥ್ರಾಪೋಡ್ ಕುಟುಂಬ ವರ್ಗಕ್ಕೆ ಸೇರಿದ ಮರಭೂಮಿ ಚೇಳು ಸಾಮಾನ್ಯವಾಗಿ ಕಂಡುಬರುವಂತೆ ಚೇಳಿಗಿಂತ ತುಸು ವಿಭಿನ್ನ ಬಣ್ಣದಿಂದ ಕೂಡಿದ್ದು, ಕಠಿಣ ಮರಭೂಮಿ ಪರಿಸರಕ್ಕೆ ಹೊಂದುವಂತೆ ದೇಹ ರಚನೆಯು ಮಾಡಲ್ಪಟ್ಟಿದೆ.

ಮರಭೂಮಿ ಹಾವು (ಸ್ಯಾಂಡ್ ಬೋವಾ):

ಮರಭೂಮಿ ಹಾವು (ಸ್ಯಾಂಡ್ ಬೋವಾ):

ಸ್ಯಾಂಡ್ ಬೋವಾ ಎಂದು ಕರೆಯಲ್ಪಡುವ ಈ ಹಾವು ಸಾಮಾನ್ಯವಾಗಿ ಮರಭೂಮಿಯಲ್ಲಿ ಕಂಡುಬರುತ್ತದೆ. ಇರಾನ್, ಪಾಕಿಸ್ತಾನ್ ಹಾಗೂ ರಾಜಸ್ಥಾನದ ಥಾರ್ ಮರಭೂಮಿಯಲ್ಲಿ ಕಂಡುಬರುವ ಈ ಹಾವು ಮೂಲತಃ ನಾಚಿಕೆಯ ಸ್ವಭಾವದಾಗಿದ್ದು ವಿಷ ರಹಿತವಾಗಿರುತ್ತವೆ. ವಿಶೇಷತೆಯೆಂದರೆ ಇದರ ಬಾಲವು ಇತರೆ ಹಾವುಗಳಂತೆ ಮೊನಚಾಗಿರದೆ ತಲೆಯ ಭಾಗದಷ್ಟೆ ದಪ್ಪಗಾಗಿರುತ್ತದೆ.

ಚಿತ್ರಕೃಪೆ: KLPrice

ಮುಳ್ಳಿನ ಬಾಲವುಳ್ಳ ಹಲ್ಲಿ:

ಮುಳ್ಳಿನ ಬಾಲವುಳ್ಳ ಹಲ್ಲಿ:

ವಾತಾವರಣಕ್ಕೆ ಅನುಗುಣವಾಗಿ ರೂಪ ಹೊಂದಿದ ಒಂದು ಹಲ್ಲಿ. ಥಾರ್ ಮರಭೂಮಿಯಲ್ಲಿ ಕಂಡುಬರುವ ಈ ಹಲ್ಲಿಯು ಇತರೆ ಚಿಕ್ಕ ಪುಟ್ಟ ಹುಳುಗಳನ್ನು ತಿಂದು ಬದುಕುತ್ತದೆ.

ಚಿತ್ರಕೃಪೆ: Centpacrr

ರ್‍ಯಾಟಲ್ ಹಾವು:

ರ್‍ಯಾಟಲ್ ಹಾವು:

ಮರಭೂಮಿಯಲ್ಲಿ ಕಂಡು ಬರುವ ಈ ಹಾವು ಮರಭೂಮಿಯ ನೆರಳಿನಲ್ಲಿ ವಿಶಿಷ್ಟವಾದ ವಿನ್ಯಾಸದಲ್ಲಿ ಚಲಿಸುತ್ತದೆ.

ಚಿತ್ರಕೃಪೆ: Victorrocha

ಮರಭೂಮಿ ರಣಹದ್ದು:

ಮರಭೂಮಿ ರಣಹದ್ದು:

ಮರಭೂಮಿಯ ರಣ ಹದ್ದು ಥಾರ್ ಮರಭೂಮಿ ಪ್ರದೇಶದಲ್ಲಿ ಕಂಡು ಬರುವ ಬೇಟೆ ಪಕ್ಷಿಯಾಗಿದೆ. ಕೊಳೆತ ಮಾಂಸ, ಹಾವು, ಹಲ್ಲಿ, ಹುಳ ಹುಪ್ಪಡಿಗಳನ್ನು ತಿನ್ನುತ್ತ ಬದುಕುತ್ತದೆ.

ಚಿತ್ರಕೃಪೆ: Nehrams2020

ಮರಭೂಮಿ ಇಲಿ:

ಮರಭೂಮಿ ಇಲಿ:

ಥಾರ್ ಮರಭೂಮಿಯಲ್ಲಿ ಕಂಡುಬರುವ ವಿಶಿಷ್ಟವಾದ ಮರಭೂಮಿ ಇಲಿ.

ಚಿತ್ರಕೃಪೆ: Chinmayisk

ಚಿಂಕಾರಾ:

ಚಿಂಕಾರಾ:

ಇದು ಒಂದು ಬಗೆಯ ಹಾರುವ ಜಿಂಕೆ. ನೀರಿಲ್ಲದೆ ಹೆಚ್ಚಿನ ಸಮಯ ಕಳೆಯಬಲ್ಲದು. ಆದ್ದರಿಂದಲೆ ಮರಭೂಮಿಯಂತಹ ಪ್ರದೇಶಗಳಲ್ಲಿ ವಾಸಿಸುತ್ತವೆ. ಥಾರ್ ಮರಭೂಮಿಯಲ್ಲಿ ಇದು ಕಂಡುಬರುತ್ತದೆ.

ಚಿತ್ರಕೃಪೆ: FisherQueen

ಕೃಷ್ಣಮೃಗ:

ಕೃಷ್ಣಮೃಗ:

ಥಾರ್ ಮರಭೂಮಿಯಲ್ಲಿ ಕಂಡುಬರುವ ಕೃಷ್ಣಮೃಗಗಳು ಅಪಾಯದ ಅಂಚಿನಲ್ಲಿರುವ ಪ್ರಾಣಿಗಳು. ಥಾರ್ ಮರಭೂಮಿಯಲ್ಲಿ ಈ ಕೃಷ್ಣಮೃಗಗಳನ್ನು ನೋಡಬಹುದಾಗಿದೆ.

ಚಿತ್ರಕೃಪೆ: Chinmayisk

ಜಿರುಂಡೆ:

ಜಿರುಂಡೆ:

ಥಾರ್ ಮರಭೂಮಿಯಲ್ಲಿ ಕಂಡು ಬರುವ ಜಿರುಂಡೆ ಅಥವಾ ಕಠಿಣ ಕವಚವುಳ್ಳ ರೆಕ್ಕೆಯ ಹುಳುವಿದು. ಇತರೆ ಪ್ರಾಣಿಗಳ ವಿಸರ್ಜಿಸಿದ ತ್ಯಾಜ್ಯವನ್ನು ಗೋಲಾಕಾರದಲ್ಲಿ ಪರಿವರ್ತಿಸಿ ತಿನ್ನುತ್ತ ಬದುಕುತ್ತವೆ.

ಚಿತ್ರಕೃಪೆ: AxelStrauss

ಕಪ್ಪು ಬಾಲವುಳ್ಳ ನರಿ:

ಕಪ್ಪು ಬಾಲವುಳ್ಳ ನರಿ:

ಥಾರ್ ಮರಭೂಮಿ ಪ್ರದೇಶದಲ್ಲಿ ಕಂಡುಬರುವ ನರಿ.

ಚಿತ್ರಕೃಪೆ: Chinmayisk

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X