Search
  • Follow NativePlanet
Share
» » ಹಿರಿಯೂರಿನ ತೇರು ಮಲ್ಲೇಶ್ವರ ದೇವಾಲಯ!

ಹಿರಿಯೂರಿನ ತೇರು ಮಲ್ಲೇಶ್ವರ ದೇವಾಲಯ!

By Vijay

ರಾಜ್ಯ - ಕರ್ನಾಟಕ
ಜಿಲ್ಲೆ - ಚಿತ್ರದುರ್ಗ
ಪಟ್ಟಣ - ಹಿರಿಯೂರು

ವಿಶೇಷತೆ : ಶಿವನಿಗೆ ಮುಡಿಪಾದ ಹಾಗೂ ತಲೂಕು ಕೇಂದ್ರದ ಅತಿ ಪ್ರಮುಖ ಧಾರ್ಮಿಕ ಕೇಂದ್ರವಾದ ತೇರು ಮಲ್ಲೇಶ್ವರನ ದೇವಸ್ಥಾನ

ಹಿರಿಯೂರು ಪರಿಚಯ

ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿರುವ ಹಿರಿಯೂರು ಪಟ್ಟಣವು ಒಂದು ತಾಲೂಕು ಕೇಂದ್ರವೂ ಹೌದು. ಹಿರಿಯೂರಿನ ಒಂದು ಹೆಗ್ಗಳಿಕೆ ಎಂದರೆ ಕರ್ನಾಟಕದ ಅತಿ ಹಳೆಯದಾದ ಆಣೆಕಟ್ಟನ್ನು ಹೊಂದಿರುವುದು. ಅದನ್ನೆ ಇಂದು ಮಾರಿ ಕಣಿವೆ ಎಂದು ಜನಪ್ರೀಯವಾಗಿ ಕರೆಯಲಾಗುತ್ತದೆ.

 ಹಿರಿಯೂರಿನ ತೇರು ಮಲ್ಲೇಶ್ವರ ದೇವಾಲಯ!

ಮಾರಿ ಕಣಿವೆ, ಚಿತ್ರಕೃಪೆ: HPN

ಇದಲ್ಲದೆ ಹಿರಿಯೂರು ಮತ್ತೊಂದಕ್ಕೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅದೆ ತೇರು ಮಲ್ಲೇಶ್ವರನ ದೇವಸ್ಥಾನ. ಇದೊಂದು ಐನೂರು ವರ್ಷಗಳ ಇತಿಹಾಸವಿರುವ ಅದ್ಭುತ ದೇವಾಲಯ. ಇಂದು ಇದರ ಗೋಡೆಗಳಿಗೆ ಸುಣ್ಣ ಬಣ್ಣಗಳನ್ನು ಹಚ್ಚಿ ಸಾಕಷ್ಟು ಸಿಂಗರಿಸಲಾಗಿದೆ. ನಿತ್ಯವೂ ನೂರಾರು ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ತೇರು ಮಲ್ಲೇಶ್ವರ ದೇವಾಲಯದ ರಾಜ ಗೋಪುರವು 45 ಅಡಿಗಳಷ್ಟು ಎತ್ತರವಿದ್ದು ದೀಪವನ್ನು ಒಳಗೊಂಡಿದೆ. ವರ್ಷಕ್ಕೊಂದು ಬಾರಿ ಅಂದರೆ ತೇರು ಮಲ್ಲೇಶ್ವರನ ಜಾತ್ರೆಯ ಸಂದರ್ಭದಲ್ಲಿ ಗೋಪುರದಲ್ಲಿ ದಿಪವನ್ನು ಬೆಳಗಿಸಲಾಗುತ್ತದೆ. ಕಣ್ತುಂಬಿಕೊಳ್ಳಲು ಇದೊಂದು ಸುಂದರ ದೃಶ್ಯವೆಂದರೂ ತಪ್ಪಾಗಲಾರದು.

ತೇರು ಮಲ್ಲೇಶ್ವರ ದೇವಾಲಯದ ಹಿನ್ನೆಲೆ

ಹಿಂದೆ ಪರಮ ಶಿವ ಭಕ್ತೆಯಾದ ಬೆಳವಡಿ ಮಲ್ಲಮ್ಮಳು ಈ ಊರಿನಲ್ಲಿ ವಾಸಿಸುತ್ತಿದ್ದಳು. ಶಿವನ ಪರಮ ಭಕ್ತೆಯಾದ ಕಾರಣ ಅವಳು ಪ್ರತಿ ವರ್ಷವೂ ಚಾಚೂ ತಪ್ಪದ ಶಿವನ ಪರಮ ನಿಲಯವಾದ ವರಾಣಸಿ ಅಥವಾ ಕಾಶಿಗೆ ಭೇಟಿ ನೀಡಿ ಬರುತ್ತಿದ್ದಳು.

ಹೀಗೆ ಕಾಲವು ಮುಂದೆ ಸಾಗುತ್ತ ಸಾಗುತ್ತ ಮಲ್ಲಮ್ಮಳಿಗೆ ವಯಸ್ಸಾಯಿತು. ವಯಸ್ಸಾದಂತೆ ದೇಹದ ಶಕ್ತಿಯು ಕುಗ್ಗಿತು. ಒಂದೊಮ್ಮೆ ಅವಳಿಗೆ ಕಾಶಿ ಹೋಗಲೂ ಸಹ ಆಗಲಿಲ್ಲ. ಇದರಿಂದ ತೀವ್ರ ದುಖ ಹೊಂದಿದೆ ಆಕೆ ಮನಸಿನಲ್ಲಿ ಶಿವನನ್ನು ಕುರಿತು ತಾನು ಭೇಟಿ ನೀಡಲಾರದ ಕುರಿತು ಪ್ರಾರ್ಥಿಸಿದಳು.

 ಹಿರಿಯೂರಿನ ತೇರು ಮಲ್ಲೇಶ್ವರ ದೇವಾಲಯ!

ಚಿತ್ರಕೃಪೆ: Dineshkannambadi

ಇದರಿಂದ ಪ್ರಸನ್ನಗೊಂಡ ಶಿವನು ಆಕೆಯ ಕನಸಿನಲ್ಲಿ ಬಂದು, ನೀನು ಇನ್ನೆಂದೂ ಕಾಶಿಗೆ ಬರುವ ಅಗತ್ಯವಿಲ್ಲ, ಬದಲಾಗಿ ಸ್ವತಃ ನಾನೆ ನೀನಿದ್ದೆಡೆ ಬಂದು ನೆಲೆಸುತ್ತೇನೆ ಎಂದು ಹೇಳುತ್ತ ಅವಳ ಮನೆಯಲ್ಲಿದ್ದ ಒರಳು ಕಲ್ಲಿನಲ್ಲಿ ಪ್ರತಿಷ್ಠಾಪನೆಗೊಂಡನು.

 ಹಿರಿಯೂರಿನ ತೇರು ಮಲ್ಲೇಶ್ವರ ದೇವಾಲಯ!

ಚಿತ್ರಕೃಪೆ: Dineshkannambadi

ಹೀಗೆ ಶಿವನು ನೆಲೆಸಿದ ಆ ಒಳಕಲ್ಲೆ ಇಂದು ಶಿವಲಿಂಗ ರೂಪವಾಗಿದ್ದು ತೇರು ಮಲ್ಲೇಶ್ವರನ ದೇವಾಲಯವಾಗಿ ಪ್ರಸಿದ್ಧಿಗಳಿಸಿದೆ. ಅಲ್ಲದೆ ಈ ಕ್ಷೇತ್ರವನ್ನು ದಕ್ಷಿಣ ಕಾಶಿ ಎಂತಲೂ ಸಹ ಕರೆಯಲಾಗುತ್ತದೆ. ಫೆಬ್ರುವರಿ ತಿಂಗಳಿನಲ್ಲಿ ಹದಿನೈದು ದಿನಗಳ ಕಾಲ ತೇರು ಮಲ್ಲೇಶ್ವರ ಜಾತ್ರೆಯು ಅದ್ದೂರಿಯಾಗಿ ಜರುಗುತ್ತದೆ.

ತಲುಪುವ ಬಗೆ

ಬೆಂಗಳೂರಿನಿಂದ 161 ಕಿ.ಮೀ ಹಾಗೂ ಚಿತ್ರದುರ್ಗದಿಂದ 42 ಕಿ.ಮೀ ಗಳಷ್ಟು ದೂರದಲ್ಲಿರುವ ಹಿರಿಯೂರು ಉತ್ತಮವಾದ ರಸ್ತೆ ಸಮ್ಪರ್ಕ ಹೊಂದಿದ್ದು ಬಸ್ಸುಗಳ ಮುಲಕ ಸುಲಭವಾಗಿ ತಲುಪಬಹುದಾಗಿದೆ. ಬೆಂಗಳೂರಿನಿಂದ ಬೆಳಗಾವಿ, ಹುಬ್ಬಳ್ಳಿ, ಧಾರವಾಡದೆಡೆ ತೆರಳುವ ಬಸ್ಸುಗಳು ಹಿರಿಯೂರು ಮುಖಾಂತರವೆ ಸಾಗುತ್ತವೆ.

36 ಶಿವಲಿಂಗ ದರ್ಶನ. ಇದು ಇಂಟರ್ನೆಟ್ ದೇವಸ್ಥಾನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X