Search
  • Follow NativePlanet
Share
» »ಗಣರಾಜ್ಯೋತ್ಸವದ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಮಾಡಬಹುದಾದ ಆಫ್‌ಬೀಟ್ ಚಟುವಟಿಕೆಗಳು

ಗಣರಾಜ್ಯೋತ್ಸವದ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಮಾಡಬಹುದಾದ ಆಫ್‌ಬೀಟ್ ಚಟುವಟಿಕೆಗಳು

By Manjula Balaraj Tantry

ಗಣರಾಜ್ಯದ ಸಂಧರ್ಭದಲ್ಲಿ ಬೆಂಗಳೂರಿನಲ್ಲಿ ಕಡಿಮೆ ಖರ್ಚಿನಲ್ಲಿ ಮಾತ್ರವಲ್ಲದೆ ಸಂತೋಷವಾಗಿ ಸಮಯ ಕಳೆಯಬಹುದಾದಂತಹ 10 ಆಫ್ಭೀಟ್ ಚಟುವಟಿಕೆಗಳ ಬಗ್ಗೆ ಓದಿ. ಸಾಹಸಮಯ ಚಟುವಟಿಕೆಗಳಾದ ರಾತ್ರಿ ಚಾರಣ, ಪ್ಯಾರಾಸೈಲಿಂಗ್, ಮೈಕ್ರೋಲೈಟ್ ಫ್ಲೈಯಿಂಗ್ ನಿಂದ ಹಿಡಿದು ಬಿಡುವಿನ ವೇಳೆಯನ್ನು ಕೆಫೆಗಳಲ್ಲಿ ಸಿನೆಮಾ ಥಿಯೇಟರ್ ಗಳು ಮುಂತಾದುವುಗಳಲ್ಲಿ ಕಳೆಯಬಹುದು

ಇದು ಈ ವರ್ಷದ ಮೊದಲ ಉದ್ದನೆಯ ವಾರಾಂತ್ಯದ ರಜೆಗಳಾಗಿದ್ದು ನೀವು ಇನ್ನೂ ಎಲ್ಲಿ ಹೋಗಬೇಕೆಂದು ಯೋಚನೆ ಮಾಡಿಲ್ಲವೆ? ಇದು ಈ ತಿಂಗಳಿನ ಕೊನೆಯಲ್ಲಿ ಬರುವ ರಜಾದಿನಗಳಾಗಿದ್ದು ನಿಮ್ಮ ಹಣಕಾಸಿನ ಅನುಕೂಲತೆಯು ನಿಮ್ಮನ್ನು ದೊಡ್ಡ ದೊಡ್ಡ ಖರ್ಚುಗಳಿಗೆ ಅನುಮತಿ ನೀಡುತ್ತಿಲ್ಲವಾಗಿದ್ದು ಹಾಗೂ ನೀವು ಈ ರಜಾದಿನಗಳನ್ನು ಹೇಗೆ ಕಳೆಯುವುದೆಂದು ಯೋಚನೆ ಮಾಡುತ್ತಿರುವಿರಾ?

ಹಾಗಾದರೆ ಇಲ್ಲಿ ಕೇಳಿ, ನಾವು ನಿಮಗೆ ಕೆಲವು ಉಪಾಯಗಳನ್ನು ಕೊಡುತ್ತಿದ್ದೇವೆ ಇದರಿಂದ ನಿಮ್ಮ ವಾರಾಂತ್ಯದ ರಜಾದಿನಗಳನ್ನು ಸಂತೋಷದಿಂದ ಕಳೆಯಬಹುದು. ಒಂದು ಒಳ್ಳೆಯ ಸಮಾಚಾರವೇನೆಂದರೆ ಈ ಉಪಾಯಗಳು ನಿಮಗೆ ಹೆಚ್ಚು ಮೋಜು ಮತ್ತು ಕಡಿಮೆ ವೆಚ್ಚದ್ದಾಗಿರುತ್ತದೆ. ಆದುದರಿಂದ ಗಣರಾಜ್ಯದ ಉದ್ದನೆಯ ರಜಾದಿನಗಳನ್ನು ಬೆಂಗಳೂರಿನಲ್ಲಿ ಕಳೆಯಲು ಮತ್ತು ನಿಮ್ಮ ಜೇಬು ಜಾಸ್ತಿ ಖಾಲಿಯಾಗದಂತೆ ಮಾಡಲು ಈ ಕೆಳಗಿನ ಹತ್ತು ಆಫ್ಬೀಟ್ ಚಟುವಟಿಕೆಗಳಲ್ಲಿ ನಿಮಗಿಷ್ಟವಾದುದನ್ನು ಆಯ್ಕೆ ಮಾಡಿಕೊಳ್ಳಿ.

1. ರಾತ್ರಿ ಚಾರಣಕ್ಕೆ ಹೋಗಿ

1. ರಾತ್ರಿ ಚಾರಣಕ್ಕೆ ಹೋಗಿ

ರಾತ್ರಿ ಸಮಯದ ಚಾರಣ ನಿಮಗೆ ಸಾಹಸಮಯ ಅನುಭವವನ್ನು ಕೊಡುವುದು ಮಾತ್ರವಲ್ಲದೆ ನಿಮ್ಮನ್ನು ರಾತ್ರಿಯ ಆಕಾಶದಡಿಯಲ್ಲಿ ಕಾಣುವ ಸುಂದರ ಭೂಪ್ರದೇಶದ ದೃಶ್ಯಗಳ ನೋಟವನ್ನು ಒದಗಿಸುತ್ತದೆ. ಬೆಟ್ಟಗಳ ಮೇಲಿನಿಂದ ಕಾಣುವ ಸೂರ್ಯೋದಯವನ್ನು ನೋಡುವ ಅನುಭವವನ್ನು ನೀವು ಪಡೆಯಬಹುದು. ಬೆಂಗಳೂರಿನ ಸುತ್ತ ಮುತ್ತ ರಾತ್ರಿ ಟ್ರಕ್ಕಿಂಗ್ ಮಾಡಬಹುದಾದ ಅನೇಕ ಆಯ್ಕೆಗಳಿವೆ. ಅವುಗಳಲ್ಲಿ ಕುಂತಿಬೆಟ್ಟ, ಅಂತರಗಂಗೆ, ರಾಮನಗರ, ಮಾಕಳಿದುರ್ಗಾ ಮುಂತಾದವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು ನಿಮಗೆ ಬೇಕಾದುದನ್ನು ಆರಿಸಿ!

2 ಒಂದು ಹೊರಗೆ ಪೆಡಲ್ ಮಾಡಿ

2 ಒಂದು ಹೊರಗೆ ಪೆಡಲ್ ಮಾಡಿ

ನೀವು ಪೆಡಲ್ ಮಾಡಿಕೊಂಡು ಹೋಗಬಹುದಾದ ಕೆಲವು ದೊಡ್ಡ ರಸ್ತೆಗಳು ಇಲ್ಲಿವೆ. ಸೈಕಲ್ ಸವಾರಿ ಒಂದು ಮೋಜಿನ ಚಟುವಟಿಕೆಗಳಲ್ಲೊಂದಾಗಿದ್ದು ನಿಮ್ಮ ಸ್ನೇಹಿತರ ಗುಂಪಿನೊಂದಿಗೆ ಹೋಗಬಹುದು. ಸೈಕಲ್ ಸವಾರಿಯ ಉಪಯೋಗಗಳೊಂದಿಗೆ ಈ ಚಟುವಟಿಕೆ ನಿಮ್ಮ ಇಡೀ ದಿನವನ್ನು ಪ್ರಾರಂಭಿಸಲು ತಾಜಾ ಅನುಭವನನ್ನು ನೀಡುತ್ತದೆ.

ಬೆಂಗಳೂರಿನ ಆಹ್ಲಾದಕರ ಬೆಳಗಿನ ವಾತಾವರಣವನ್ನು ಅನುಭವಿಸಲು ನಸು ಮುಸುಕಿನಲ್ಲಿ ನಿಮ್ಮ ಪ್ರಯಾಣ ಪ್ರಾರಂಭಿಸಿ. ಈ ಒಂದು ಬಂಗಾರದಂತ ಸಮಯದಲ್ಲಿ ಹೊರಟರೆ ಬೆಳಗಿನ ಉತ್ತಮ ಕ್ಷಣಗಳನ್ನು ನೀವು ಸೆರೆಹಿಡಿಯಬಹುದು. ನಂದಿ ಬೆಟ್ಟಗಳು, ರಾಮನಗರ, ಮತ್ತು ಶಿವಗಂಗೆಗಳು ಕೆಲವು ಜನಪ್ರಿಯ ತಾಣಗಳು ಸೈಕಲ್ ಸವಾರರ ಅಚ್ಚುಮೆಚ್ಚಿನ ತಾಣಗಳಾಗಿವೆ.

3. ಪ್ಯಾರಾಸೈಲಿಂಗ್ ಗೆ ಹೋಗಿ

3. ಪ್ಯಾರಾಸೈಲಿಂಗ್ ಗೆ ಹೋಗಿ

ಇದನ್ನು ಪ್ಯಾರಾ ಕೈಟಿಂಗ್ ಎಂದೂ ಕರೆಯುತ್ತಾರೆ ಪ್ಯಾರಾಸೈಲಿಗ್ ಒಂದು ಸಂತೋಷಕರ ಹಾಗೂ ಮನೋರಂಜನಾ ಚಟುವಟಿಕೆಯಾಗಿದ್ದು ಇದನ್ನು ಹೆಚ್ಚು ಅಪಾಯಗಳನ್ನು ಇಷ್ಟ ಪಡದ ಸಾಹಸಿ ವ್ಯಕ್ತಿಗಳು ಮಾಡಬಹುದಾಗಿದೆ. ಇದರಲ್ಲಿ ನಿಮ್ಮಗೆ ಒಂದು ಪ್ಯಾರಾಚೂಟ್ ಅನ್ನು ಕಟ್ಟಲಾಗುತ್ತದೆ ಮತ್ತು ಇದನ್ನು ಒಂದು ವಾಹನಕ್ಕೆ ಕಟ್ಟಲಾಗಿರುತ್ತದೆ.

ವಾಹನವು ವೇಗವಾಗಿ ಚಲಿಸಿದಂತೆ ಗಾಳಿಯು ನಿಮಗೆ ಕಟ್ಟಲ್ಪಟ್ಟ ಪ್ಯಾರಾಚೂಟನ್ನು ಮೇಲಕ್ಕೆತ್ತುತ್ತದೆ ಮತ್ತು ನೀವು ಎತ್ತರದಲ್ಲಿ ಗಾಳಿಯಲ್ಲಿ ಹಾರಾಡುವಂತೆ ಮಾಡುತ್ತದೆ. ಬೆಂಗಳೂರಿನ ಕೆಲವು ಸಾಹಸ ಕ್ಲಬ್ ಗಳಲ್ಲಿ ಪ್ಯಾರಸೈಲಿಂಗ್ ಚಟುವಟಿಕೆಗಳನ್ನು ಆಯೋಜಿಸುತ್ತಾರೆ ಮತ್ತು ಇದನ್ನು ಜಕ್ಕೂರು ವಿಮಾನ ನಿಲ್ದಾಣದಲ್ಲಿ ಮಾಡಲಾಗುತ್ತದೆ.

4. ವಿಮಾನ ಹಾರಾಟ

4. ವಿಮಾನ ಹಾರಾಟ

ಸಾಹಸಿಗಳಿಗೆ ಎತ್ತರಕ್ಕೆ ಹಾರುವುದು ಒಂದು ಕನಸಾಗಿರುತ್ತದೆ ಇದಕ್ಕಾಗಿ ಮೈಕ್ರೋಲೈಟ್ ಫ್ಲೈಯಿಂಗ್ ಒಂದು ಉತ್ತಮ ಆಯ್ಕೆ. ನೀವು ಇದರಲ್ಲಿ ಕಡಿಮೆ ಭಾರದ ಮತ್ತು ಎರಡು ಆಸನಗಳಿರುವ ವಿಮಾನದಲ್ಲಿ ಹಾರಾಡುವ ಅವಕಾಶವನ್ನು ಸಹ ಪೈಲೆಟ್ ಜೊತೆಗೆ ಪಡೆಯುವಿರಿ. ವಿಮಾನದ ನಿಯಂತ್ರಣಗಳನ್ನು ಸಹ ನೀವು ಇಲ್ಲಿ ನಿರ್ವಹಿಸಬಹುದು. ಮೈಕ್ರೋಲೈಟ್ ಫ್ಲೈಯಿಂಗ್ ಅನ್ನು ಜಕ್ಕೂರು ವಿಮಾನ ನಿಲ್ದಾಣದಲ್ಲಿ ನಡೆಸಲಾಗುತ್ತದೆ.

5. ಬಲೂನ್ ನಲ್ಲಿ ಹಾರಾಡಿ

5. ಬಲೂನ್ ನಲ್ಲಿ ಹಾರಾಡಿ

ನಗರದ ಪಕ್ಷಿನೋಟದ ಒಂದು ಮೋಜಿನ ಅನುಭವನ್ನು ಪಡೆಯಬೇಕಿಂದಿದ್ದಲ್ಲಿ ಇದನ್ನು ಹಾಟ್ ಏರ್ ಬಲೂನ ನ ಮೂಲಕ ಪೂರೈಸಿಕೊಳ್ಳಬಹುದು. ಮಕ್ಕಳೊಂದಿಗೂ ಸಹ ಹೋಗಬಹುದಾದ ಒಂದು ಸುರಕ್ಷಿತವಾದ ಮನರಂಜನಾ ಚಟುವಟಿಕೆಯಾಗಿದೆ. ಅವಿಸ್ಮರಣೀಯ ಅನುಭವಕ್ಕಾಗಿ ಬೆಳಿಗ್ಗೆ ಮುಂಜಾನೆ ಮೊದಲ ಸವಾರಿಯನ್ನು ತೆಗೆದುಕೊಳ್ಳುವುದು ಉತ್ತಮ.

ಈ ಹಾಟ್ ಏರ್ ಬಲೂನ್ ನಿಮ್ಮನ್ನು ಮೇಲೆ ಎತ್ತಿಕೊಂಡು ಗಾಳಿಯಲ್ಲಿ ಹಾರುತ್ತಿದ್ದಂತೆಯೇ ನೀವು ಆಕಾಶದ ಬದಲಾಗುವ ಬಣ್ಣಗಳನ್ನು ನೋಡಬಹುದು ಅಲ್ಲದೆ ನಿಮ್ಮ ಪ್ರೀತಿ ಪಾತ್ರರಿಂದ ಬಹಳ ದೂರ ಹಾಗೂ ಎತ್ತರಕ್ಕೆ ಹೋದ ಅನುಭವವನ್ನು ಇದರಿಂದ ಹೊಂದಬಹುದಾಗಿದೆ.

6. ಹೊಸ ಕೌಶಲ್ಯತೆಗಳನ್ನು ಕಲಿಯಿರಿ.

6. ಹೊಸ ಕೌಶಲ್ಯತೆಗಳನ್ನು ಕಲಿಯಿರಿ.

ಹೊಸ ಸಾಧ್ಯತೆಗಳನ್ನು ಅನ್ವೇಷಿಸಿ ಮತ್ತು ನಗರದಾದ್ಯಂತದ ವಿವಿಧ ಕಾರ್ಯಾಗಾರಗಳಲ್ಲಿ ಹೊಸ ಕೌಶಲ್ಯಗಳನ್ನು ಕಲಿಯಿರಿ. ಬೇಕಿಂಗ್, ಛಾಯಾಗ್ರಹಣ, ಚಿತ್ರಕಲೆ, ಸ್ಕೆಚ್ಕಿಂಗ್, ಬರವಣಿಗೆ, ಕಲೆ ಮತ್ತು ಕರಕುಶಲ, ಸಾವಯವ ತೋಟಗಾರಿಕೆ, ನೃತ್ಯ, ರಂಗಮಂದಿರ ಮತ್ತು ನೀವು ಯಾವಾಗಲೂ ಕಲಿಯಬೇಕಾದ ಆಸಕ್ತಿದಾಯಕ ವಿಷಯಗಳನ್ನು ಕಲಿಯಲು ಕಾರ್ಯಾಗಾರಗಳನ್ನು ಹುಡುಕಿ.

7. ನಕ್ಷತ್ರ ವೀಕ್ಷಣೆಗೆ ಹೋಗಿ

7. ನಕ್ಷತ್ರ ವೀಕ್ಷಣೆಗೆ ಹೋಗಿ

ಚಳಿಗಾಲದ ಗರಿಗರಿಯಾದ, ಸ್ಪಷ್ಟವಾದ ಮತ್ತು ದೀರ್ಘವಾದ ರಾತ್ರಿಗಳು ನಕ್ಷತ್ರ ವೀಕ್ಷಣೆಗೆ ಅನುಕೂಲವಾದುದಾಗಿದೆ. ಬೆಂಗಳೂರಿನ ಹೊರವಲಯಕ್ಕೆ ಪ್ರಯಾಣ ಮಾಡಿ ಇದರಿಂದ ನೀವು ಬೆಳಕಿನ ಮಾಲಿನ್ಯಗಳಿಂದ ದೂರ ಹೋಗಿ ನಿಮಗೆ ನಕ್ಷತ್ರ ಭರಿತ ಆಕಾಶವನ್ನು ನೋಡಲು ಅನುಕೂಲವಾಗುತ್ತದೆ. ನೆನಪಿನಲ್ಲಿಡಿ, ಅಮವಾಸ್ಯೆಯ ಸುತ್ತಲಿನ ದಿನಗಳಲ್ಲಿ ಹೆಚ್ಚು ಕತ್ತಲಿರುವುದರಿಂದ ದೂರದರ್ಶಕ ಮಾತ್ರವಲ್ಲದೆ ನಗ್ನ ಕಣ್ಣಿನಿಂದ ನೋಡಲು ಸಿಗುವ ಅನೇಕ ನಕ್ಷತ್ರಗಳನ್ನು ನೋಡುವ ಉತ್ತಮ ಅವಕಾಶವನ್ನು ಪಡೆಯಬಹುದು. ಬೆಂಗಳೂರಿನಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಹೊಸಹಳ್ಳಿ, ಖಗೋಳಶಾಸ್ತ್ರದ ಉತ್ಸಾಹಿಗಳಿಗೆ ಹಾರಲು ಅನುಕೂಲಕರ ತಾಣವಾಗಿದೆ.

8. ಲೇಕ್ ಹಾಪಿಂಗ್ ಗೆ ಹೋಗಿ

8. ಲೇಕ್ ಹಾಪಿಂಗ್ ಗೆ ಹೋಗಿ

PC: Ramya Jagadish

ನಗರದ ಸುತ್ತಲೂ ಸುತ್ತುವರೆದ ಸುಂದರ ಸರೋವರಗಳಿಗೆ , ಸರೋವರದ-ಹಾಪ್ಪಿಂಗ್ ಮಾಡಲು ನಿಮ್ಮ ಸ್ನೇಹಿತರೊಂದಿಗೆ ಪಾಲ್ಗೊಳ್ಳುವ ಒಂದು ಮೋಜಿನ ಚಟುವಟಿಕೆಯಾಗಿದೆ. ಬೆಂಗಳೂರು ಮತ್ತು ಇದರ ಸುತ್ತಮುತ್ತಲು 10ಕ್ಕಿಂತಲೂ ಹೆಚ್ಚಿನ ಸರೋವರಗಳಿಗೆ ನೀವು ಭೇಟಿಕೊಡಬಹುದು.

ಸೂರ್ಯೋದಯ ಮತ್ತು ಸೂರ್ಯಾಸ್ತದ ಸುಂದರ ನೋಟವನ್ನು ಸೆರೆಹಿಡಿಯಬಹುದು ಮತ್ತು ನಿಮ್ಮನ್ನು ನೀವು ಬೋಟಿಂಗ್, ಛಾಯಗ್ರಹಣ, ಪಕ್ಷಿ ವೀಕ್ಷಣೆ ಮತ್ತು ಇನ್ನೂ ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ನಿಮ್ಮ ಸ್ನೇಹಿತರ ಜೊತೆ ಸೇರಿಕೊಂಡು ವಾಹನದಲ್ಲಿ ಜೊತೆಯಾಗಿ ಅಲ್ಸೂರು ಲೇಕ್, ನಾಗಾವರ, ಬೆಲ್ಲಂದೂರ್,ಹೆಬ್ಬಾಳ, ಕೊಮ್ಮಘಟ್ಟ, ಲಾಲ್ ಬಾಗ್, ಹೇಸರಘಟ್ಟ, ಮತ್ತು ಇನ್ನೂ ಅನೇಕ ಸ್ಥಳಗಳಲ್ಲಿ ಆನಂದವಾಗಿ ಕಳೆಯಬಹುದು.

9. ಒಂದು ಪ್ಲೇ (ನಾಟಕ) ವೀಕ್ಷಿಸಿ

9. ಒಂದು ಪ್ಲೇ (ನಾಟಕ) ವೀಕ್ಷಿಸಿ

ನೀವು ಕಲೆಯನ್ನು ಪ್ರೀತಿಸುವವರಾದಲ್ಲಿ, ಪ್ರತಿಭಾವಂತ ಕಲಾವಿದರನ್ನು ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ಒಂದು ನಾಟಕದಲ್ಲಿ ಕೆಲಸ ಮಾಡುವುದನ್ನು ನೋಡಬಹುದು. ನಿಮ್ಮ ಸಂಗಾತಿ, ನಿಮ್ಮ ಸ್ನೇಹಿತರನ್ನು ಎಳೆದುಕೊಂಡು ಈ ಅದ್ಬುತ ಲೈವ್ ಪ್ರದರ್ಶನಗಳನ್ನು ವೀಕ್ಷಿಸಿ.ರಂಗ ಶಂಕರ, ಚೌಡಿಯಾ ಮೆಮೋರಿಯಲ್ ಹಾಲ್, ಮತ್ತು ಶೂನ್ಯ್ಯಗಳು ವರ್ಷಾದ್ಯಂತ ನಾಟಕ ಪ್ರದರ್ಶನಗಳನ್ನು ಪ್ರದರ್ಶಿಸುವ ಕೆಲವು ಜನಪ್ರಿಯ ಕಲಾ ಸ್ಥಳಗಳಾಗಿವೆ.

10. ಕೆಫೆಗೆ ಭೇಟಿಕೊಡಿ

10. ಕೆಫೆಗೆ ಭೇಟಿಕೊಡಿ

ಆಹಾರ ಪ್ರಿಯರಿಗೆ ನಗರವು ಅಸಂಖ್ಯಾತ ಆಯ್ಕೆಗಳನ್ನು ಒದಗಿಸುತ್ತದೆ. ಆಕರ್ಷಕ ಮತ್ತು ಕಲಾತ್ಮಕ ಅಲಂಕಾರಗಳನ್ನು ಹೊಂದಿರುವ ಕೆಫೆಗಳು, ಉತ್ತಮ ವಾತಾವರಣದಲ್ಲಿ ಮತ್ತು ಉತ್ತಮ ಆಹಾರವನ್ನು ಆನಂದಿಸುವಂತೆ ಮಾಡುತ್ತವೆ.

ನೀವು ಅಡಿಗೆಮನೆಗಳ ಆಹಾರಗಳನ್ನು ಅನ್ವೇಷಿಸುವುದಾದರೆ, ಬೆಂಗಳೂರಿನಲ್ಲಿ ನೀವು ಖಂಡಿತವಾಗಿಯೂ ಕೆಫೆ-ಹೋಪಿಂಗ್ ಗೆ ಹೋಗಬೇಕು ನೀವು ಭೇಟಿ ನೀಡಬಹುದಾದ ವಿಶಿಷ್ಟವಾದ ಮತ್ತು ಆಕರ್ಷಕವಾದ ಥೀಮ್ ಗಳನ್ನು ಹೊಂದಿರುವ ಹಲವಾರು ಕೆಫೆಗಳು ಇಲ್ಲಿವೆ. ಕೋರಮಂಗಲದಲ್ಲಿನ ಇಕೋಸ್ ಅಸಮಾನ್ಯವಾದುದಾಗಿದೆ ಇದನ್ನು ಕಿವುಡರು ಮತ್ತು ಮೂಗರು ನಿರ್ವಹಿಸುತ್ತಾರೆ. ಬಹಳಷ್ಟು ಕಲೆ, ಆಟಗಳು ಮತ್ತು ಪುಸ್ತಕ ಕೆಫೆಗಳೊಂದಿಗೆ ಇಂದಿರಾನಗರ, ಕೋರಮಂಗಲ, ಚರ್ಚ್ ಸ್ಟ್ರೀಟ್, ಇತ್ಯಾದಿಗಳ ಸುತ್ತಲೂ ಪ್ರಯತ್ನಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X