Search
  • Follow NativePlanet
Share
» »ದೇವರು ಇದ್ದಾನೆ ಎಂಬುದಕ್ಕೆ ಇದೊಂದು ಉತ್ತಮವಾದ ನಿದರ್ಶನ.....

ದೇವರು ಇದ್ದಾನೆ ಎಂಬುದಕ್ಕೆ ಇದೊಂದು ಉತ್ತಮವಾದ ನಿದರ್ಶನ.....

ವಿಶ್ವವೆಲ್ಲಾ ಓಂಕಾರದಿಂದ ತುಂಬಿದ್ದು, ನಿರಾಕಾರನಾದ ಶಿವನನ್ನು ದೇಶದ ಮೂಲೆ ಮೂಲೆಯಲ್ಲಿ ಪೂಜಿಸುತ್ತೇವೆ. ಶಿವನು ಒಂದೇ ರೀತಿಯಾದ ಆಕಾರದಲ್ಲಿ ಅಲ್ಲದೇ ವಿವಿಧ ಆಕಾರಗಳಲ್ಲಿ ಸ್ವಾಮಿಯು ಆನೇಕ ಪವಿತ್ರವಾದ ಸ್ಥಳದಲ್ಲಿ ನೆಲೆಸಿದ್ದಾನೆ. ಶಿವನ ವಿಗ್ರಹವ

ವಿಶ್ವವೆಲ್ಲಾ ಓಂಕಾರದಿಂದ ತುಂಬಿದ್ದು, ನಿರಾಕಾರನಾದ ಶಿವನನ್ನು ದೇಶದ ಮೂಲೆ ಮೂಲೆಯಲ್ಲಿ ಪೂಜಿಸುತ್ತೇವೆ. ಶಿವನು ಒಂದೇ ರೀತಿಯಾದ ಆಕಾರದಲ್ಲಿ ಅಲ್ಲದೇ ವಿವಿಧ ಆಕಾರಗಳಲ್ಲಿ ಸ್ವಾಮಿಯು ಆನೇಕ ಪವಿತ್ರವಾದ ಸ್ಥಳದಲ್ಲಿ ನೆಲೆಸಿದ್ದಾನೆ. ಶಿವನ ವಿಗ್ರಹವು ಹಲವಾರು ಪವಾಡಗಳನ್ನು ಮಾಡುತ್ತಿರುವುದು ನಾವು ದಿನನಿತ್ಯ ಕೇಳುತ್ತಾ, ಕಾಣುತ್ತಲೇ ಬಂದಿದ್ದೇವೆ.

ಶಿವನು ತನ್ನ ಗಾತ್ರವನ್ನು ಹೆಚ್ಚಾಗಿ ಮಾಡಿಕೊಳ್ಳುವುದು, ತನ್ನ ಬಣ್ಣವನ್ನು ಬದಲಾವಣೆ ಮಾಡಿಕೊಳ್ಳುವುದು. ಕೆಲವು ಮಾಸಗಳಲ್ಲಿ ಮಾತ್ರ ದರ್ಶನ ಭಾಗ್ಯ ನೀಡುವುದು, ವಿವಿಧ ವಿಭಿನ್ನವಾದ ರೂಪಗಳಲ್ಲಿ ದರ್ಶನವನ್ನು ನೀಡುವುದು ಹೀಗೆ ಇನ್ನು ಹಲವಾರು ಪವಾಡಗಳನ್ನು ಮಹಾದೇವನು ಮಾಡುತ್ತಲೇ ಬಂದಿದ್ದಾನೆ.

ಪ್ರಸ್ತುತ ಲೇಖನದಲ್ಲಿ ತಿಳಿಸುವುದೆನೆಂದರೆ ಈ ಮಾಹಿಮಾನ್ವಿತವಾದ ದೇವಾಲಯದಲ್ಲಿ ಶಿವಲಿಂಗದ ಬಣ್ಣ ಬದಲಾವಣೆಯಾವುದು. ದೇವರು ಇದ್ದಾನೆ ಎಂಬುದಕ್ಕೆ ಇದು ಉತ್ತಮವಾದ ನಿದರ್ಶನವಾಗಿದೆ. ಹೀಗಾಗಿ ವಿವಿಧ ರೂಪಗಳಲ್ಲಿ ಇರುವ ಶಿವ ಲಿಂಗಗಳ ಬಗ್ಗೆ ತಿಳಿಯೋಣ.

ಕೋಟೇಶ್ವರ ಶಿವಲಿಂಗ

ಕೋಟೇಶ್ವರ ಶಿವಲಿಂಗ

ಕೆಲವು ಶಿವಲಿಂಗಗಳು ಸ್ಥಳ ಪುರಾಣಗಳ ಪ್ರಕಾರ ಪ್ರತ್ಯೇಕವಾಗಿರುತ್ತದೆ. ಚಿಕ್ಕದಾದ ಶಿವಲಿಂಗ, ದೊಡ್ಡದಾದ ಶಿವಲಿಂಗ. ಬಣ್ಣದ ಶಿವಲಿಂಗ, ವಿಭಿನ್ನ ಆಕಾರದ ಶಿವಲಿಂಗ ಹೀಗೆ ಹಲವಾರು ರೀತಿಯಲ್ಲಿ ಇರುತ್ತದೆ. ಪ್ರಸ್ತುತ ಅತಿ ಚಿಕ್ಕದಾದ ಶಿವಲಿಂಗ ಎಲ್ಲಿದೆ? ಇದರ ವಿಶೇಷತೆ ಏನು? ಎಂಬುದರ ಬಗ್ಗೆ ತಿಳಿಯೋಣ.

ಕೋಟೇಶ್ವರ ಶಿವಲಿಂಗ

ಕೋಟೇಶ್ವರ ಶಿವಲಿಂಗ

ಪೂರ್ವಗೋದಾವರಿಯಲ್ಲಿ ದ್ರಾಕ್ಷಾರಾಮಕ್ಕೆ 10 ಕಿ.ಮೀ ದೂರದಲ್ಲಿರುವ ಕೋಟಿಪಲ್ಲಿ ಎಂಬಲ್ಲಿ ಅತ್ಯಂತ ಚಿಕ್ಕದಾದ ಶಿವಲಿಂಗವಿದೆ. ಇಲ್ಲಿ ನೆಲೆಸಿರುವ ಸ್ವಾಮಿಯನ್ನು ಸೋಮೇಶ್ವರನಾಗಿ ಹಾಗು ಕೋಟೇಶ್ವರ ಎಂದು ಭಕ್ತರು ಕರೆಯುತ್ತಾರೆ. ಈ ದೇವಾಲಯದಲ್ಲಿನ ಶಿವಲಿಂಗದ ವಿಶೇಷತೆ ಏನೆಂದರೆ ಇಲ್ಲಿನ ಕೋಟೇಶ್ವರ ಶಿವಲಿಂಗವು ಎಂದಿಗೂ ನೀರಿನಲ್ಲಿಯೇ ಇರುತ್ತದೆ ಎಂತೆ.

ಭೀಮರಾಮಕ್ಷೇತ್ರ

ಭೀಮರಾಮಕ್ಷೇತ್ರ

ಪಂಚಾರಾಮ ಕ್ಷೇತ್ರಗಳಲ್ಲಿ ಒಂದಾಗಿರುವ ಭೀಮರಾಮಕ್ಷೇತ್ರದಲ್ಲಿ ಈ ಶಿವಲಿಂವು ತನ್ನ ಬಣ್ಣವನ್ನು ಬದಲಾವಣೆ ಮಾಡುಕೊಳ್ಳುತ್ತಿರುತ್ತದೆ ಎಂತೆ. ಅದರಲ್ಲೂ ಅಮಾವಸ್ಯೆಯ ದಿನದಂದು ಗೋದಿ ಬಣ್ಣದಲ್ಲಿ, ಹುಣ್ಣಿಮೆಯ ದಿನದಂದು ಶ್ವೇತ ವರ್ಣದಲ್ಲಿ ಬಣ್ಣ ಬದಲಾಗುತ್ತದೆ.

ಭೀಮರಾಮಕ್ಷೇತ್ರ

ಭೀಮರಾಮಕ್ಷೇತ್ರ

ಆದರೆ ಸ್ವಾಮಿಗೆ ಕವಚ, ಪುಷ್ಪ ಅಲಂಕಾರ ಮಾಡುವುದರಿಂದ ಶಿವಲಿಂಗದ ಬಣ್ಣ ಸಾಮಾನ್ಯವಾಗಿ ಕಣ್ಣಿಗೆ ಕಾಣುವುದಿಲ್ಲ. ಈ ವಿಸ್ಮಯವನ್ನು ಕಾಣಬೇಕಾದರೆ ಅಮಾವಸ್ಯೆಯ ದಿನದಂದು, ಹುಣ್ಣಿಮೆಯ ದಿನದಂದು ಸ್ವಾಮಿಯನ್ನು ದರ್ಶನ ಮಾಡಿದರೆ ನಾವು ಈ ಅದ್ಭುತವನ್ನು ಕಣ್ಣಾರೆ ಕಂಡು ಪುನೀತರಾಗಬಹುದು.

ಪರಮಶಿವನು ಪಾರ್ವತಿ ದೇವಿಯ ತೊಡೆಯ ಮೇಲೆ ಪವಳಿಸುತ್ತಿರುವ ಶಿವಲಿಂಗ

ಪರಮಶಿವನು ಪಾರ್ವತಿ ದೇವಿಯ ತೊಡೆಯ ಮೇಲೆ ಪವಳಿಸುತ್ತಿರುವ ಶಿವಲಿಂಗ

ಸಾಧಾರಣವಾಗಿ ಶಿವಾಲಯ ಎಂದರೆ ಪರಮಶಿವನನ್ನು ಲಿಂಗ ರೂಪದಲ್ಲಿ ಕಾಣುತ್ತೇವೆ. ಆದರೆ ತಿರುಪತಿಯಿಂದ ಚೆನ್ನೈಗೆ ತೆರಳುವ ಮಾರ್ಗದಲ್ಲಿ ಸುರುಟಿಪಲ್ಲಿ ಎಂಬ ಊರಿನಲ್ಲಿ ಪರಮಶಿವನು ಪಾರ್ವತಿ ದೇವಿಯ ತೊಡೆಯ ಮೇಲೆ ಪವಳಿಸುತ್ತಿರುವ ವಿಭಿನ್ನವಾದ ಶಿವನನ್ನು ದರ್ಶನ ಮಾಡಬಹುದು.

ತಂಜಾವೂರ್

ತಂಜಾವೂರ್

ತಂಜಾವೂರ್‍ನಲ್ಲಿನ ಶಿವಲಿಂಗವು ಅತ್ಯಂತ ದೊಡ್ಡದಾದ ಶಿವಲಿಂಗವಾಗಿದೆ. ಈ ದೇವಾಲಯ ವಿಷೇಶವೆನೆಂದರೆ ದೇವಾಲಯದ ಒಳಭಾಗದಲ್ಲಿ ಪ್ರತಿಧ್ವನಿ ಎಂಬುದು ಇರುವುದಿಲ್ಲ. ಪ್ರತಿಧ್ವನಿಯು ಬಾರದಂತೆ ಶಿವಲಿಂಗದ ಒಳಗೆ ಹೋಗುವ ವಿಧವಾಗಿ ನಿರ್ಮಾಣ ಮಾಡಿದ್ದಾರೆ.

ತಂಜಾವೂರ್

ತಂಜಾವೂರ್

ಈ ದೇವಾಲಯದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಏಕೆಂದರೆ ಇದೊಂದು ಪ್ರಸಿದ್ಧವಾದ ದೇವಾಲಯವಾಗಿದೆ. ಅತ್ಯಂತ ದೊಡ್ಡ ಶಿವಲಿಂಗ, ಶಿವಲಿಂಗದ ಎದುರು ದೊಡ್ಡದಾದ ನಂದಿ ಈ ಪುಣ್ಯಕ್ಷೇತ್ರದಲ್ಲಿ ಕಾಣಬಹುದು.

ತಲೆಕೆಳಗಾಗಿರುವ ಶಿವಲಿಂಗ

ತಲೆಕೆಳಗಾಗಿರುವ ಶಿವಲಿಂಗ

ದೇಶದಲ್ಲಿ ಎಲ್ಲೂ ಕಾಣಲಾಗದ ವಿಭಿನ್ನವಾದ ಶಿವಲಿಂಗವೆಂದರೆ ಅದು ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಪರಮೇಶ್ವರನು ತಲೆಕೆಳಗಾಗಿ ಮಾಡಿರುವ ಶಿವಲಿಂಗವಿದೆ. ಅಂದರೆ ಇಲ್ಲಿನ ಸ್ವಾಮಿಯು ತಪಸ್ಸು ಮಾಡುತ್ತಿರುವ ಭಂಗಿಯಲ್ಲಿಯೇ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ.

ಶ್ರೀ ಕಾಳ ಹಸ್ತಿ

ಶ್ರೀ ಕಾಳ ಹಸ್ತಿ

ಈ ದೇವಾಲಯದಲ್ಲಿ ಪರಮಶಿವನನ್ನು ವಾಯು ರೂಪದಲ್ಲಿ ಪೂಜಿಸಲಾಗುತ್ತದೆ. ದೇವಾಲಯದ ಗರ್ಭಗುಡಿಯಲ್ಲಿನ ಬಲ ಭಾಗದಲ್ಲಿನ ದೀಪವು ಗಾಳಿಯಲ್ಲಿ ಅಲ್ಲಾಡುತ್ತಿರುವ ಹಾಗೆ ಕಾಣಿಸುತ್ತದೆ. ಏಕೆಂದರೆ ಈ ದೇವಾಲಯದಲ್ಲಿ ಗಾಳಿ ಆಡುವುದಕ್ಕೆ ಯಾವುದೇ ಅವಕಾಶವಲ್ಲದೇಯೇ ದೀಪವು ಗಾಳಿಯಲ್ಲಿ ತೇಲಾಡುವುದು ವಿಸ್ಮಯವೇ ಸರಿ.

ಜಂಬುಕೇಶ್ವರ ಶಿವಲಿಂಗ

ಜಂಬುಕೇಶ್ವರ ಶಿವಲಿಂಗ

ಈ ಶಿವಲಿಂಗದಿಂದ ನೀರು ಸುರಿಯುತ್ತಿರುತ್ತದೆ. ಹಾಗಾಗಿಯೇ ಜಂಬುಕೇಶ್ವರ ಶಿವಲಿಂಗವನ್ನು ಪಂಚಭೂತದಲ್ಲಿ ಒಂದಾದ ನೀರಿನ ಶಿವಲಿಂಗವೆಂದು ಭಕ್ತರು ಪೂಜಿಸುತ್ತಾರೆ.

ಅಚಲೇಶ್ವರ ಮಹದೇವ್ ದೇವಾಲಯ

ಅಚಲೇಶ್ವರ ಮಹದೇವ್ ದೇವಾಲಯ

ರಾಜಸ್ಥಾನದ ಅಚಲೇಶ್ವರ ಮಹಾದೇವ್ ದೇವಾಲಯದಲ್ಲಿನ ಶಿವಲಿಂಗವು ದಿನಕ್ಕೆ ಮೂರು ಬಣ್ಣದಲ್ಲಿ ಬದಲಾವಣೆಯಾಗುತ್ತಾ ಇರುತ್ತದೆ ಎಂತೆ. ಬೆಳಗ್ಗೆಯ ಸಮಯದಲ್ಲಿ ಕೆಂಪು ಬಣ್ಣದಲ್ಲಿ, ಮಧ್ಯಾಹ್ನದ ಸಮಯದಲ್ಲಿ ಕೇಸರಿ ಬಣ್ಣದಲ್ಲಿ, ರಾತ್ರಿಯ ಸಮಯದಲ್ಲಿ ಕಪ್ಪು ಬಣ್ಣವಾಗಿ ಪರಿವರ್ತನೆಗೊಳ್ಳುತ್ತಾ ಇರುತ್ತದೆ.

ಅಚಲೇಶ್ವರ ಮಹದೇವ್ ದೇವಾಲಯ

ಅಚಲೇಶ್ವರ ಮಹದೇವ್ ದೇವಾಲಯ

ಭಕ್ತರು ಈ ಮೂರು ಸಮಯದಲ್ಲಿ ಶಿವಲಿಂಗವನ್ನು ದರ್ಶನ ಮಾಡಿದರೆ ಅವರ ಕೋರಿಕೆಗಳನ್ನು ಶಿವನು ಪೂರ್ಣಗೊಳಿಸುತ್ತಾನೆ ಎಂದು ನಂಬಲಾಗಿದೆ. ಹಾಗಾಗಿಯೇ ಅಲ್ಲಿನ ಭಕ್ತರು ಬೆಳಗ್ಗೆಯಿಂದ ರಾತ್ರಿಯವರೆಗೆ ಶಿವಲಿಂಗದ ಬಣ್ಣವನ್ನು ಕಾಣಲು ಭಕ್ತರು ಅಲ್ಲಿಯೇ ಇರುತ್ತಾರಂತೆ. ವಿಜ್ಞಾನಿಗಳ ಪ್ರಕಾರ ಸೂರ್ಯ ಕಿರಣಗಳ ಕಾರಣವಾಗಿ ಶಿವಲಿಂಗದ ಬಣ್ಣ ಬದಲಾಗುತ್ತದೆ ಎಂದು ಹೇಳಾಗುತ್ತಿದೆ. ಆದರೆ ಬಣ್ಣ ಬದಲಾಗುವಿಕೆಗೆ ಇದೇ ಖಚಿತವಾದ ಕಾರಣ ಎಂದು ಹೇಳಲಾಗುತ್ತಿಲ್ಲ.

ಪಶುಪತಿ ನಾಥ ದೇವಾಲಯ

ಪಶುಪತಿ ನಾಥ ದೇವಾಲಯ

ಈ ಪಶುಪತಿನಾಥ ದೇವಾಲಯದಲ್ಲಿ ಶಿವನು ಲಿಂಗಾಕಾರವಾಗಿ ಅಲ್ಲದೇ ಮುಖವನ್ನು ಹೊಂದಿರುವ ಪ್ರತ್ಯೇಕವಾದ ದೇವಾಲಯವಾಗಿದೆ. ಈ ಅದ್ಭುತವಾದ ದೇವಾಲಯವು ಮಧ್ಯ ಪ್ರದೇಶದಲ್ಲಿನ ಮಂಡಾಸೂರ್ ಎಂಬ ಪ್ರದೇಶದಲ್ಲಿದೆ. ಶಿವರಾತ್ರಿಯ ದಿನದಂದು ಆನೇಕ ಮಂದಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಗುಡಿಮಲ್ಲಂ

ಗುಡಿಮಲ್ಲಂ

ಈ ದೇವಾಲಯವು ತಿರುಪತಿಗೆ ತೆರಳುವ ದಾರಿಯಲ್ಲಿ ಇದೆ. ಪ್ರಪಂಚದಲ್ಲಿ ಬೇರೆ ಎಲ್ಲೂ ಇಲ್ಲದ ವಿಧವಾಗಿ ಇಲ್ಲಿ ಶಿವಲಿಂಗವನ್ನು ಕಾಣಬಹುದಾಗಿದೆ. ಅದೆನೆಂದರೆ ಇಲ್ಲಿನ ಮಹಾಶಿವನು ಭೇಟೆಗಾರನ ವೇಷದಲ್ಲಿ ಇರುವುದು ವಿಶೇಷವಾಗಿದೆ. ಈ ದೇವಾಲಯವನ್ನು 1 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಯಿತು ಎಂದು ನಂಬಲಾಗಿದೆ.

ಅಮರನಾಥ ದೇವಾಲಯ

ಅಮರನಾಥ ದೇವಾಲಯ

ಮಂಜಿನಿಂದ ಕೂಡಿದ ಶಿವಲಿಂಗವನ್ನು ನಾವು ಇಲ್ಲಿ ದರ್ಶನ ಮಾಡಬಹುದಾಗಿದೆ. ವಿಶೇಷವೆನೆಂದರೆ ಇಂತಹ ಶಿವಲಿಂಗವು ಬೇರೆ ಯಾವ ದೇಶದಲ್ಲಿಯಲ್ಲಿ ಆಗಲಿ ಕಾಣಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಹೀಗೆ ಹಲವಾರು ವಿಭಿನ್ನವಾದ ಶಿವಲಿಂಗವನ್ನು ನಮ್ಮ ದೇಶದಲ್ಲಿರುವುದು ನಮ್ಮ ಭಾಗ್ಯವೇ ಸರಿ. ಒಮ್ಮೆ ಈ ಅದ್ಭುತವಾದ ದೇವಾಲಯಕ್ಕೆ ಭೇಟಿ ನೀಡೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X