Search
  • Follow NativePlanet
Share
» »ಆಶ್ಚರ್ಯಕರವಾದ ಭಾರತದ ಕೆಲವು ದೇವಾಲಯಗಳು...ವಿಭಿನ್ನವಾದ ಆಚಾರಗಳು

ಆಶ್ಚರ್ಯಕರವಾದ ಭಾರತದ ಕೆಲವು ದೇವಾಲಯಗಳು...ವಿಭಿನ್ನವಾದ ಆಚಾರಗಳು

ಭಾರತ ದೇಶವು ಕೆಲವು ದೇವಾಲಯಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಈ ಪುಣ್ಯಕ್ಷೇತ್ರವನ್ನು ದರ್ಶಿಸಿಕೊಳ್ಳುವ ಸಲುವಾಗಿ ದೇಶ-ವಿದೇಶಗಳಿಂದ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಆದರೆ ಕೆಲವು ದೇವಾಲಯಗಳು ಹೇಗೆ ನೆಲೆಸಿತು ಮತ್ತು ಅಲ್ಲಿನ ಶಿಲ್ಪಕಲಾ ನೈ

ಭಾರತ ದೇಶವು ಕೆಲವು ದೇವಾಲಯಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಈ ಪುಣ್ಯಕ್ಷೇತ್ರವನ್ನು ದರ್ಶಿಸಿಕೊಳ್ಳುವ ಸಲುವಾಗಿ ದೇಶ-ವಿದೇಶಗಳಿಂದ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಆದರೆ ಕೆಲವು ದೇವಾಲಯಗಳು ಹೇಗೆ ನೆಲೆಸಿತು ಮತ್ತು ಅಲ್ಲಿನ ಶಿಲ್ಪಕಲಾ ನೈಪುಣ್ಯತೆ ಇಂದಿಗೂ ಎಲ್ಲರನ್ನು ಆಶ್ಚರ್ಯ ಚಕಿತರನ್ನಾಗಿಸುತ್ತದೆ. ಇದು ಹೀಗೆ ಇದ್ದರೆ ದೇವರ ಮೇಲೆ ಇರುವ ನಂಬಿಕೆಯಿಂದಾಗಿ ಕೆಲವು ಆಚಾರಗಳು ಬೆಳಕಿಗೆ ಬಂದಿವೆ. ಆ ಎಲ್ಲಾ ದೇವಾಲಯಗಳು ಎಲ್ಲರನ್ನು ಆಚ್ಚರಿಗೊಳಿಸುತ್ತಿದೆ. ಆ ದೇವಾಲಯಕ್ಕೆ ಇರುವ ವಿಚಿತ್ರವಾದ ಆಚಾರಗಳೇ ಇದಕ್ಕೆ ಕಾರಣ ಎಂದೇ ಹೇಳಬಹುದು. ಇನ್ನು ಆ ವಿಭಿನ್ನವಾದ ಆಚಾರಗಳು ಇರುವ ಆ ಮಹಿಮಾನ್ವಿತವಾದ ದೇವಾಲಯಗಳ ಬಗ್ಗೆ ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

ಮೆಹೆಂದಿಪೂರ್ ಬಾಲಾಜಿ ದೇವಾಲಯ

ಮೆಹೆಂದಿಪೂರ್ ಬಾಲಾಜಿ ದೇವಾಲಯ

ರಾಜಸ್ಥಾನದಲ್ಲಿರುವ ಈ ಚಿಕ್ಕದಾದ ದೌಸಾ ಜಿಲ್ಲೆಯಲ್ಲಿ ಮೆಹೆಂದಿಪೂರ್ ಬಾಲಾಜಿ ದೇವಾಲಯವು ಒಂದು. ದೇಶದಲ್ಲಿಯೇ ವಿವಿಧ ಪ್ರದೇಶದಿಂದ ಸಾವಿರಾರು ಮಂದಿ ಭಕ್ತರು ಪ್ರತಿದಿನ ಕೆಲವರಿಗೆ ಹಿಡಿದಿರುವ ದೆವ್ವಗಳನ್ನು ಅಥವಾ ಆತ್ಮಗಳನ್ನು ಸ್ವತಃ ಸ್ವಾಮಿಯೇ ಬಿಡಿಸುತ್ತಾನೆ ಎಂದು ನಂಬಲಾಗಿದೆ. ಹೀಗಾಗಿಯೇ ಸಾವಿರಾರು ಭಕ್ತರು ಈ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

ಮೆಹೆಂದಿಪೂರ್ ಬಾಲಾಜಿ ದೇವಾಲಯ

ಮೆಹೆಂದಿಪೂರ್ ಬಾಲಾಜಿ ದೇವಾಲಯ

ಆದರೆ ಈ ದೇವಾಲಯದಲ್ಲಿ ಹಿಡಿದಿರುವ ದೆವ್ವವನ್ನು ಬಿಡಿಸಲು ಅವರ ಮೈಮೇಲೆ ಕುದಿಯುತ್ತಿರುವ ನೀರನ್ನು ಹಾಕುತ್ತಾರಂತೆ. ಇದರಿಂದಾಗಿ ಅತ್ಯಂತ ಕುಗಾಟ, ಕಿರುಚಾಟ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲ ಗೋಡೆಗೆ ನೇತಾಡಿಸಿ ಹೊಡೆಯುತ್ತಿರುತ್ತಾರಂತೆ. ಈ ದೇವಾಲಯದಲ್ಲಿ ಪ್ರತ್ಯೇಕವಾದ ಪ್ರಸಾದ ಯಾವುದು ನೀಡುವುದಿಲ್ಲ.

ಮೆಹೆಂದಿಪೂರ್ ಬಾಲಾಜಿ ದೇವಾಲಯ

ಮೆಹೆಂದಿಪೂರ್ ಬಾಲಾಜಿ ದೇವಾಲಯ

ಇನ್ನು ಆತ್ಮವನ್ನು ಹೋಗಲಾಡಿಸಿಕೊಂಡು ಹೋಗುವ ಭಕ್ತರು ಮತ್ತೆ ಹಿಂದೆ ತಿರುಗಿ, ಈ ದೇವಾಲಯವನ್ನು ನೋಡದೇ ಹೋಗಬೇಕು ಎಂದು ಒಂದು ನಿಯಮವಿದೆ. ಭಾರತ ದೇಶದಲ್ಲಿಯೇ ದೆವ್ವಗಳನ್ನು ಬಿಡಿಸುವ ಅಥವಾ ಭೂತ ಉಚ್ಛಾಟನೆ ಮಾಡುವ ಏಕೈಕ ಪ್ರಸಿದ್ಧವಾದ ದೇವಾಲಯವಾಗಿ ಇಂದಿಗೂ ಪ್ರಚಾರದಲ್ಲಿದೆ.

ಕಾಮಾಖ್ಯಾ ದೇವಿ ದೇವಾಲಯ,ಅಸ್ಸಾಂ

ಕಾಮಾಖ್ಯಾ ದೇವಿ ದೇವಾಲಯ,ಅಸ್ಸಾಂ

ಅಸ್ಸಾಂನಲ್ಲಿ ಗೌಹಟಿ ಪ್ರದೇಶದಲ್ಲಿನ ನೀಲ್‍ಚಲ್ ಎಂಬ ಬೆಟ್ಟ ಪ್ರದೇಶದಲ್ಲಿ ಕಾಮಾಖ್ಯಾ ದೇವಿ ದೇವಾಲಯವಿದೆ. ಭಾರತ ದೇಶದಲ್ಲಿನ ಪ್ರಖ್ಯಾತಿ ಪಡೆದ ದೇವಾಲಯಗಳಲ್ಲಿ ಇದು ಕೂಡ ಒಂದು. ಈ ದೇವಾಲಯದಲ್ಲಿ ಯಾವುದೇ ಮೂಲ ವಿಗ್ರಹ ಇರುವುದಿಲ್ಲ. ಆದರೆ ಸತಿದೇವಿಯ ಶರೀರಭಾಗಗಳು ಬಿದ್ದು, ದೇಶದಲ್ಲಿನ ವಿವಿಧ ಪ್ರದೇಶಗಳಲ್ಲಿ ಶಕ್ತಿ ಪೀಠಗಳಾಗಿವೆ. ಸತಿ ದೇವಿ ಶರೀರಭಾಗವು ಬಿದ್ದ ಸ್ಥಳಗಳೆಲ್ಲಾ ಒಂದೊಂದು ಶಕ್ತಿಪೀಠಗಳಾಗಿವೆ.

ಕಾಮಾಖ್ಯಾ ದೇವಿ ದೇವಾಲಯ,ಅಸ್ಸಾಂ

ಕಾಮಾಖ್ಯಾ ದೇವಿ ದೇವಾಲಯ,ಅಸ್ಸಾಂ

ಹಾಗೆ ಈ ದೇವಾಲಯದಲ್ಲಿ ಸತಿ ದೇವಿಯ ಗುಪ್ತಾಂಗಗಳು ಬಿದ್ದದ್ದರಿಂದ, ಇಲ್ಲಿ ಅದನ್ನೇ ಪಾರ್ವತಿ ದೇವಿ ಎಂದು ಪೂಜೆ ಮಾಡಲಾಗುತ್ತದೆ. ಪ್ರತಿ ವರ್ಷ ಇಲ್ಲಿ ಉತ್ಸವವನ್ನು 3 ದಿನಗಳ ಕಾಲ ಆಚರಿಸಲಾಗುತ್ತದೆ. ಆ 3 ದಿಗಳು ಕೂಡ ಭಕ್ತರು ತಾಂತ್ರಿಕ ಸಂತಾನೋತ್ಪತ್ತಿ ಹಬ್ಬ ಇಲ್ಲಿ ನಡೆಸುತ್ತಾರೆ. ಅಷ್ಟೇ ಅಲ್ಲ ಇಲ್ಲಿ ದೇವಿಗೆ ಪ್ರಸಾದವಾಗಿ ಭಕ್ತರು ಕೆಂಪು ಬಟ್ಟೆಯ ವಸ್ತ್ರವನ್ನು ನೀಡುತ್ತಾರೆ.

ಕಾಳ ಭೈರವ ದೇವಾಲಯ, ವಾರಣಾಸಿ

ಕಾಳ ಭೈರವ ದೇವಾಲಯ, ವಾರಣಾಸಿ

ಶಿವಾಲಯಕ್ಕೆ ಕ್ಷೇತ್ರ ಪಾಲಕನಾದ ಕಾಳ ಭೈರವನ ದೇವಾಲಯವು ಒಂದು ವಿಭಿನ್ನವಾದ ಆಚಾರವನ್ನು ಹೊಂದಿದೆ. ಇಲ್ಲಿ ಕಾಳ ಭೈರವನ ವಿಗ್ರಹಕ್ಕೆ ಮದ್ಯವನ್ನು ಕುಡಿಸುತ್ತಾರೆ. ಅಷ್ಟೇ ಅಲ್ಲ ಭಕ್ತರಿಗೂ ಕೂಡ ಪ್ರಸಾದವಾಗಿ ಮದ್ಯವನ್ನು ನೀಡುತ್ತಾರೆ. ದೇವಾಲಯದ ಹೊರಗೆ ಕೂಡ ಪೂಜಾ ಸಾಮಾಗ್ರಿಗಳೆಂದು ಅನೇಕ ಅಂಗಡಿಗಳಲ್ಲಿ ಮದ್ಯವನ್ನು ನೀಡುತ್ತಾರೆ. ದೇವರಿಗೆ ನೈವೇದ್ಯವಾಗಿ ನೀಡುವ ಮದ್ಯದ ಅಂಗಡಿ ಕೂಡ ಇಲ್ಲಿರುತ್ತದೆ.

ದೇವರಗುಟ್ಟ ದೇವಾಲಯ, ಆಂಧ್ರ ಪ್ರದೇಶ

ದೇವರಗುಟ್ಟ ದೇವಾಲಯ, ಆಂಧ್ರ ಪ್ರದೇಶ

ಆಂಧ್ರ ಪ್ರದೇಶದಲ್ಲಿನ ಕರ್ನೂಲು ಜಿಲ್ಲೆಯಲ್ಲಿ ದೇವರಗುಟ್ಟ ಎಂಬ ಒಂದು ದೇವಾಲಯವಿದೆ. ಇದು ಒಂದು ಪ್ರಾಚೀನವಾದ ದೇವಾಲಯವಾಗಿ ಹೇಳುತ್ತಾರೆ. ದಸರಾ ಹಬ್ಬದ ದಿನದಂದು ಕರ್ನಾಟಕ ಸರಿಹದ್ದುವಿನಲ್ಲಿ ಇಲ್ಲಿ ರಾತ್ರಿಯವರೆವಿಗೂ ಒಬ್ಬರ ತಲೆಯ ಮೇಲೆ ಒಬ್ಬರು ಹೊಡೆದುಕೊಳ್ಳುತ್ತಾ ಇರುತ್ತಾರೆ. ಹೀಗೆ ಹೊಡೆದಕೊಂಡ ಕಾರಣದಿಂದ ಗಾಯಗಳು, ರಕ್ತಗಳು ಆಗುತ್ತವೆ. ಇದರಿಂದ ಪುರುಷರು ರಾತ್ರಿಯ ಸಮಯದಲ್ಲಿ ಹಬ್ಬದಲ್ಲಿ ಪಾಲ್ಗೊಳ್ಳುವುದು ಇಲ್ಲಿನ ಆಚಾರ.

ಸ್ತಂಭೇಶ್ವರ ಮಹಾದೇವ ದೇವಾಲಯ

ಸ್ತಂಭೇಶ್ವರ ಮಹಾದೇವ ದೇವಾಲಯ

ಗುಜರಾತ್‍ನಲ್ಲಿನ ವಡೋದರಕ್ಕೆ ಸಮೀಪದಲ್ಲಿರುವ ಈ ಸ್ತಂಭೇಶ್ವರ ಮಹಾದೇವ ದೇವಾಲಯವು ಅರೆಬಿಯಾ ಸಮುದ್ರ ತೀರದ ಸಮೀಪದಲ್ಲಿದೆ. ಈ ದೇವಾಲಯವು ದಿನದಲ್ಲಿ ಕೆಲವು ಸಮಯದವರೆಗೆ ಮಾತ್ರ ಕಾಣಿಸುತ್ತದೆ. ನಂತರ ಇದು ಅದೃಶ್ಯವಾಗುತ್ತದೆ. ಇದೇ ಈ ದೇವಾಲಯದ ವಿಶೇಷತೆ. ಈ ದೇವಾಲಯವು ಯಾವಾಗಲೂ ಸಮುದ್ರದಲ್ಲಿಯೇ ಇರುತ್ತದೆ. ಅಲೆಗಳು ಕಡಿಮೆ ಇರುವ ಸಮಯದಲ್ಲಿ ಮಾತ್ರ ಈ ದೇವಾಲಯವು ಭಕ್ತರಿಗೆ ಕಾಣಿಸುತ್ತದೆ. ಆ ಸಮಯದಲ್ಲಿ ಸ್ವಾಮಿಯನ್ನು ಭಕ್ತರು ದರ್ಶನ ಮಾಡಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X