Search
  • Follow NativePlanet
Share
» »ಜಾತಕದಲ್ಲಿನ ದೋಷಗಳಿಗೆ ಯಾವ್ಯಾವ ದೇವಾಸ್ಥಾನಗಳಲ್ಲಿ ಪರಿಹಾರ ಪೂಜೆ ಮಾಡಿಸ್ತಾರೆ ಗೊತ್ತಾ?

ಜಾತಕದಲ್ಲಿನ ದೋಷಗಳಿಗೆ ಯಾವ್ಯಾವ ದೇವಾಸ್ಥಾನಗಳಲ್ಲಿ ಪರಿಹಾರ ಪೂಜೆ ಮಾಡಿಸ್ತಾರೆ ಗೊತ್ತಾ?

ಹುಟ್ಟಿದ ದಿನ,ಗಳಿಗೆ, ನಕ್ಷತ್ರಗಳನ್ನು ಅನುಸರಿಸಿ ನಮ್ಮ ಭವಿಷ್ಯ ಹೇಗೆ ಇರುತ್ತದೆ ಎನ್ನುವುದರಲ್ಲಿ ಸಾಕಷ್ಟು ಮಂದಿ ವಿಶ್ವಾಸವನ್ನಿಟ್ಟಿದ್ದಾರೆ. ಹಾಗಾಗಿ ಮಗು ಹುಟ್ಟಿದ ತಕ್ಷಣ ಮಗುವಿನ ಹುಟ್ಟಿದ ದಿನ, ಗಳಿಗೆಯನ್ನು ತಿಳಿಸಿ ಪಂಡಿತರರಿಂದ ಮಗುವಿನ ಜಾತಕವನ್ನು ಬರೆಸಿ ಇಟ್ಟುಕೊಳ್ಳುತ್ತಾರೆ. ಜಾತಕದಲ್ಲಿ ಏನಾದರೂ ದೋಷಗಳಿದ್ದರೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮದುವೆಯಾಗದೆ ಇರುವುದು, ಉದ್ಯೋಗ ದೊರಕದೆ ಇರುವುದು, ಮಕ್ಕಳಾಗದೇ ಇರುವುದು ಹೀಗೆ ಇನ್ನೂ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತವೆ.

ಇಲ್ಲಿ 27 ನಕ್ಷತ್ರಕ್ಕೂ ಶನಿ ಶಾಂತಿ ಹೋಮ ಮಾಡಿಸ್ತಾರಂತೆಇಲ್ಲಿ 27 ನಕ್ಷತ್ರಕ್ಕೂ ಶನಿ ಶಾಂತಿ ಹೋಮ ಮಾಡಿಸ್ತಾರಂತೆ

ಜಾತಕದಲ್ಲಿನ ದೋಷಗಳ ನಿವಾರಣೆಗೆ ಈ ದೇವಾಸ್ಥಾನಗಳು ಫೇಮಸ್

ಜಾತಕದಲ್ಲಿನ ದೋಷಗಳ ನಿವಾರಣೆಗೆ ಈ ದೇವಾಸ್ಥಾನಗಳು ಫೇಮಸ್

PC: Akshatha Inamdar
ಮುಖ್ಯವಾಗಿ ರಾಹು , ಕೇತು ಹಾಗೂ ಶನಿಯಿಂದಾಗಿ ಈ ದೋಷಗಳೆಲ್ಲಾ ಉಂಟಾಗುತ್ತದೆ ಎನ್ನುವ ನಂಬಿಕೆ ಜನರದ್ದು. ಈ ದೋಷಗಳಿಗೆ ಪರಿಹಾರ ಒದಗಿಸುವುದಾಗಿ ಪಂಡಿತರು ಅನೇಕ ಪೂಜೆಗಳನ್ನು ಮಾಡಿಸುತ್ತಾರೆ. ಹೀಗೆ ಜಾತಕದ ದೋಷಗಳಿಗೆ ಪರಿಹಾರ ಒದಗಿಸುವಂತಹ ಹಲವು ದೇವಸ್ಥಾನಗಳು ಭಾರತದಲ್ಲಿದೆ. ಅವುಗಳು ಯಾವುವು ಅನ್ನೋದು ನಿಮಗೆ ಗೊತ್ತಾ?

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ

PC: Lnvsagar

ಸಾಮಾನ್ಯವಾಗಿ ಸರ್ಪದೋಷಗಳು ನಾವು ನಡೆಸುವ ಶುಭಕಾರ್ಯಗಳಿಗೆ ಅಡ್ಡಿಯನ್ನುಂಟು ಮಾಡುತ್ತವೆ ಎಂದು ಜೋತೀಷ್ಯರು ಹೇಳುತ್ತಾರೆ. ಈ ಸರ್ಪದೋಷ ಪರಿಹಾರಕ್ಕೋಸ್ಕರ ಕರ್ನಾಟಕದಲ್ಲಿನ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಸ್ಥಾನಕ್ಕೆ ಹೆಚ್ಚು ಮಂದಿ ಹೋಗುತ್ತಾರೆ. ಪೂಜೆ ಮಾಡಿಸುತ್ತಾರೆ. ಇಲ್ಲಿ ಮುಖ್ಯವಾಗಿ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಸಲಾಗುತ್ತದೆ. ಸರ್ಪದೋಷ ನಿವಾರಣೆಗಾಗಿಯೇ ಈ ದೇವಾಸ್ಥಾನ ಬಹಳ ಪ್ರಸಿದ್ಧಿ ಹೊಂದಿದೆ.

 ಶ್ರೀ ಕಾಳಹಸ್ತಿ

ಶ್ರೀ ಕಾಳಹಸ್ತಿ

PC:Krishna Kumar Subramanian
ಕೆಲವರು ಜಾತಕದಲ್ಲಿ ರಾಹು ಕೇತು ದೋಷಗಳು ಇರುತ್ತವೆ, ಅವರು ಪರಿಹಾರಕ್ಕೋಸ್ಕರ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ಕಾಳಹಸ್ತಿಗೆ ಹೋಗುತ್ತಾರೆ. ದೇಶಾದ್ಯಂತ ವಿಐಪಿಗಳೂ ಕೂಡಾ ಈ ದೇವಸ್ಥಾನಕ್ಕೆ ಭೇಟಿ ಕೋಡುತ್ತಾ ಇರುತ್ತಾರೆ. ಇದು ವಿಶಷ್ಟವಾದ ಪುಣ್ಯಕ್ಷೇತ್ರವಾಗಿದ್ದು ಪಂಚಭೂತ ಲಿಂಗಗಳಲ್ಲಿ ವಾಯುಲಿಂಗ ಇಲ್ಲಿದೆ.

ವಿರೂಪಾಕ್ಷ ದೇವಾಲಯ

ವಿರೂಪಾಕ್ಷ ದೇವಾಲಯ

PC:Shivajidesai29
ಹಂಪಿಯಲ್ಲಿರುವ ವಿರೂಪಾಕ್ಷ ದೇವಾಲಯದಲ್ಲಿ ಕಾಳಸರ್ಪ ದೋಷ ನಿವಾರಣೆ ಪೂಜೆ ಮಾಡುತ್ತಾರೆ. ದೇಶಾದ್ಯಂತ ಭಕ್ತರು ಇಲ್ಲಿ ಬಂದು ದೋಷ ನಿವಾರಣಣೆ ಪೂಜೆ ಮಾಡಿಸುತ್ತಾರೆ.

ಮುನ್ನಾರ ನಾಗರಾಜ ದೇವಾಸ್ಥಾನ

ಮುನ್ನಾರ ನಾಗರಾಜ ದೇವಾಸ್ಥಾನ

PC:Vibitha vijay
ಕೇರಳದ ಆಲಪ್ಪಿನಿಂದ 30 ಕಿ.ಮೀ ದೂರದಲ್ಲಿ ಈ ಮುನ್ನಾರ ನಾಗರಾಜ ದೇವಾಲಯವಿದೆ. ಇಲ್ಲಿ ಸರ್ಪದೋರ್ಷ ನಿವಾರಣೆಗೆ ಪೂಜೆ ಮಾಡುತ್ತಾರೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ ಇಲ್ಲಿ ಪೂಜೆಯನ್ನು ಮಹಿಳೆಯರೇ ಮಾಡುತ್ತಾರೆ.

ಮಹಾ ಕಾಳೇಶ್ವರ ದೇವಾಲಯ

ಮಹಾ ಕಾಳೇಶ್ವರ ದೇವಾಲಯ

PC: Gyanendra_Singh_Chau...
ಮಧ್ಯಪ್ರದೇಶದಲ್ಲಿರುವ ಈ ಮಹಾಕಾಳೇಶ್ವರ ದೇವಾಲಯವು ಕೂಡಾ ಕಾಳಸರ್ಪ ದೋಷಗಳ ನಿವಾರಣೆ ಮಾಡುವ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ೧೨ ಪವಿತ್ರವಾದ ಜೋತೀರ್ಲಿಂಗವಿರುವ ಪ್ರದೇಶಗಳಲ್ಲೂ ಒಂದಾಗಿದೆ. ಈ ದೇವಾಲಯದಲ್ಲಿ ಕಾಳಸರ್ಪ ದೋಷ, ನಾಗದೋಷಗಳ ಪರಿಹಾರಕ್ಕೆ ಪೂಜೆ ಮಾಡುತ್ತಾರೆ.

 ಪಾವಗಡ ಶನಿ ದೇವಾಲಯ

ಪಾವಗಡ ಶನಿ ದೇವಾಲಯ

PC: youtube
ಆಂಧ್ರಪ್ರದೇಶ, ಕರ್ನಾಟಕ ಗಡಿಭಾಗದ ಪಾವಗಡದಲ್ಲಿ ಶನಿಶ್ವರನ ದಿವ್ಯವಾದ ದೇವಸ್ಥಾನವಿದೆ. ಇಲ್ಲಿ ಪ್ರತೀ ಶನಿವಾರ ವಿಶೇಷ ಪೂಜೆಗಳು ನಡೆಯುತ್ತವೆ. ತಮ್ಮ ದೋಷ ನಿವಾರಣೆಗಾಗಿ ಇಲ್ಲಿ ದೇಶದ ನಾನಾ ಭಾಘದಿಂದ ಭಕ್ತರು ಬಂದು ಪೂಜೆ ಮಾಡಿಸುತ್ತಾರೆ.

ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ

ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ

PC: Pramath
ಈ ದೇವಾಲಯವು ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ನಂತರ ನಾಗದೋಷ ನಿವಾರಣೆಗೆ ಇದು ಅತ್ಯಂತ ಪವಿತ್ರವಾದ ಸ್ಥಳ ಎನ್ನಲಾಗುತ್ತದೆ. ಆದಿತ್ಯವಾರ, ಮಂಗಳವಾರ, ಹೆಚ್ಚು ಮಂದಿ ಈ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಜಾತಕದಲ್ಲಿರುವ ದೋಷಗಳಿಗೆ ಪರಿಹಾರ ಪೂಜೆಯನ್ನು ಮಾಡಿಸುತ್ತಾರೆ.

Read more about: kukke subramanya karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X