Search
  • Follow NativePlanet
Share
» »ದೇವಾಲಯಗಳು ಬಿಳಿ ಮರಳುಗಳನ್ನು ಹೊಂದಿರುವ ಗೋಕರ್ಣಕ್ಕೆ ಭೇಟಿ ನೀಡಿ

ದೇವಾಲಯಗಳು ಬಿಳಿ ಮರಳುಗಳನ್ನು ಹೊಂದಿರುವ ಗೋಕರ್ಣಕ್ಕೆ ಭೇಟಿ ನೀಡಿ

ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿರುವ ಗೋಕರ್ಣವು ಅದರ ಯಾತ್ರಾ ಸ್ಥಳ ಹಾಗೂ ಅಲ್ಲಿರುವ ಬೀಚ್ ಗಳಿಂದಾಗಿ ಪ್ರಮುಖ ಪ್ರವಾಸಿ ಕೇಂದ್ರವೆನಿಸಿದೆ. ಇದು ಅಗನಾಶಿನಿ ಮತ್ತು ಗಂಗಾವಳಿ ಎಂಬ ಎರಡು ನದಿಗಳ ಸಂಗಮದಲ್ಲಿದೆ ಮತ್ತು ನದಿಗಳು ಸಂಗಮಿಸುವ ಸ್ಥಳವು ಹಸುವಿನ ಕಿವಿಯನ್ನು ಹೋಲುವ ಆಕಾರವನ್ನು ರೂಪಿಸುತ್ತದೆ, ಆದ್ದರಿಂದ ಈ ಹೆಸರು (ಸ್ಥಳೀಯ ಭಾಷೆಯಲ್ಲಿ ಗೋಕರ್ಣ ಎಂದರೆ ಹಸುವಿನ ಕಿವಿ ಎಂದರ್ಥ) ಬಂದಿದೆ.
ಗೋಕರ್ಣದಲ್ಲಿ ಮಹಾಬಲೇಶ್ವರ ದೇವಾಲಯವಿರುವ ಕಾರಣದಿಂದಾಗಿ ಹಿಂದುಗಳಿಗೆ ಇದು ಪವಿತ್ರಸ್ಥಳವಾಗಿದ್ದು (ಪ್ರಮುಖವಾಗಿ ಶೈವ ಪಂಥದವರಿಗೆ) ದೇಶದ ಎಲ್ಲಾ ಭಾಗದ ಜನರಿಂದಲೂ ಭೇಟಿ ನೀಡಲ್ಪಡುತ್ತದೆ. ಈ ದೇವಾಲಯವು ತಮಿಳು ಕವಿಗಳಾದ ಅಪ್ಪರ್ ಮತ್ತು ಸಂಬಂದರ್ ಅವರ ರಚನೆಗಳಲ್ಲಿ ತುಳುನಾಡಿನ ಭಗವಂತನನ್ನು ತಮ್ಮ ಕೀರ್ತನೆಗಳಲ್ಲಿ ಸ್ತುತಿಸುವುದನ್ನು ಉಲ್ಲೇಖಿಸುತ್ತದೆ. ಈ ಸ್ಥಳವು ವಿಜಯನಗರದ ಅರಸರು ಹಾಗೂ ಕದಂಬರ ಆಳ್ವಿಕೆಗೆ ಒಳಪಟ್ಟಿತ್ತು ಮತ್ತು ನಂತರದ ದಿನಗಳಲ್ಲಿ ಇದನ್ನು ಪೋರ್ಚುಗೀಸರು ವಶಪಡಿಸಿಕೊಂಡರು.

gokharna beach

ಗೋಕರ್ಣದ ಇತಿಹಾಸದತ್ತ ಒಂದು ಸಣ್ಣ ಪಕ್ಷಿನೋಟ

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿರುವ ಶಿವವಲಿಂಗವನ್ನು ರಾವಣನು ತಂದನೆಂದು ಪರಿಗಣಿಸಲಾಗಿದೆ. ಅವನು ತನ್ನ ವಿಶೇಷ ಶಕ್ತಿಯನ್ನು ದಯಪಾಲಿಸುವುದಕ್ಕಾಗಿ ಮತ್ತು ಅಜೇಯರನ್ನಾಗಿ ಮಾಡುವುದಕ್ಕಾಗಿ ತಪಸ್ಸು ಮಾಡಿದ ನಂತರ ಈ ಅವರು ಆತ್ಮಲಿಂಗವನ್ನು ಪಡೆದಿದ್ದನು ಇದರಿಂದಾಗಿ ಈ. ದುಷ್ಟ ರಾಜನು ದೇವತೆಗಳಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಬೇಕೆಂದು ಬಯಸುತ್ತಾ ತಪಸ್ಸಿನ ಮೂಲಕ ಪಡೆದ ಈ ಲಿಂಗವನ್ನು ನಂತರ ಗಣೇಶ ದೇವರು ರಾವಣನನ್ನು ಮೋಸಗೊಳಿಸಿ ಲಿಂಗವನ್ನು ಇಲ್ಲಿ ಬಿಡುವಂತೆ ಮಾಡಿದರು.

ಮಹಾಬಲೇಶ್ವರ ದೇವಸ್ಥಾನದ ಪಕ್ಕದಲ್ಲಿ, ಮಹಾ ಗಣಪತಿ ದೇವಸ್ಥಾನ, ಭದ್ರಕಾಳಿ ದೇವಸ್ಥಾನ, ವರದರಾಜ ದೇವಸ್ಥಾನ ಮತ್ತು ವೆಂಕಟರಮಣ ದೇವಸ್ಥಾನ ಸೇರಿದಂತೆ ಇತರ ಪ್ರಮುಖ ದೇವಾಲಯಗಳಿವೆ.

gokharna beach south side

ಪ್ರವಾಸಿ ತಾಣವಾದ ಗೋಕರ್ಣದ ಮರಳುಗಳು ಮತ್ತು ಬೀಚ್ ಗಳ ಬಗ್ಗೆ ತಿಳಿಯೋಣ

ಇಂದು ಗೋಕರ್ಣವು ತ್ವರಿತಗತಿಯಲ್ಲಿ ಮೆಚ್ಚಿನ ಪ್ರವಾಸಿ ತಾಣವಾಗುತ್ತಿದೆ ಮತ್ತು ಇದು ಗೋವಾದ ಕಡಲತೀರಗಳಿಗೆ ಪ್ರತಿಸ್ಪರ್ಧಿಯಾಗಬಲ್ಲ ಹಲವಾರು ಅದ್ಭುತ ಕಡಲತೀರಗಳನ್ನು ಹೊಂದಿದೆ. ಕುಡ್ಲೆ ಬೀಚ್, ಗೋಕರ್ಣ ಬೀಚ್, ಹಾಫ್ ಮೂನ್ ಬೀಚ್, ಪ್ಯಾರಡೈಸ್ ಬೀಚ್ ಮತ್ತು ಓಂ ಬೀಚ್ ಇಲ್ಲಿನ ಐದು ಪ್ರಮುಖ ಕಡಲತೀರದ ಆಕರ್ಷಣೆಗಳಾಗಿವೆ.
ಗೋಕರ್ಣ ಬೀಚ್ ಈ ಪಟ್ಟಣದಲ್ಲಿರುವ ಪ್ರಮುಖ ಬೀಚ್ ಆಗಿದ್ದು, ಯಾತ್ರಾರ್ಥಿಗಳು ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಇಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಕುಡ್ಲೆ ಬೀಚ್ ಇಲ್ಲಿಯ ಐದು ಕಡಲತೀರಗಳಲ್ಲಿ ಅತಿ ದೊಡ್ಡದಾಗಿದ್ದು, ಮತ್ತು ನವೆಂಬರ್ ನಿಂದ ಫೆಬ್ರವರಿ ಅವಧಿಯಲ್ಲಿ ಕೊನೆಯ ಋತುವಿನಲ್ಲಿ ಜನಸಂದಣಿಯಿಂದ ಕೂಡಿರುತ್ತದೆ. ಇದು ಈಜಲು ಅಪಾಯಕಾರಿ ಸ್ಥಳವಾಗಿದೆ ಎಂದು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.
ಓಂ ಬೀಚ್ ಹಿಂದೂ ಸಂಕೇತವಾದ ಓಂನ ಆಕಾರವನ್ನು ರೂಪಿಸುವ ಸುಂದರವಾದ ಕರಾವಳಿಯನ್ನು ಹೊಂದಿದೆ.ಈ ಚಿಹ್ನೆಯ ವಕ್ರರೇಖೆಯು ಕೊಳವನ್ನು ರೂಪಿಸುತ್ತದೆ, ಇದು ಈಜುಗಾರರಲ್ಲದವರಿಗೂ ಸುರಕ್ಷಿತ ಸ್ನಾನದ ಪ್ರದೇಶವಾಗಿದೆ.
ಹಾಫ್ ಮೂನ್ ಬೀಚ್ ಓಂ ಬೀಚ್‌ನಿಂದ ಇಪ್ಪತ್ತು ನಿಮಿಷಗಳ ನಡಿಗೆಯಲ್ಲಿದೆ ಮತ್ತು ಇಲ್ಲಿಗೆ ತಲುಪಲು ನೀವು ಬೆಟ್ಟದ ಸುತ್ತಲಿನ ಹಾದಿಯನ್ನು ತೆಗೆದುಕೊಳ್ಳಬೇಕು. ಈ ಬೀಚ್ ಅರ್ಧ ಚಂದ್ರನ ಆಕಾರವನ್ನು ಹೋಲುತ್ತದೆ, ಆದ್ದರಿಂದ ಈ ಹೆಸರು ಬಂದಿದೆ.

gokharna blue beach

ಪ್ಯಾರಡೈಸ್ ಬೀಚ್ ಕಲ್ಲಿನ ಕಡಲತೀರವಾಗಿದೆ, ಆದರೆ ಇದು ಏಕಾಂತ ಮತ್ತು ಸುಂದರವಾದ ಸ್ಥಳವಾಗಿದೆ, . ಈ ಕಲ್ಲಿನ ಕಡಲತೀರವು ಈಜಲು ಸೂಕ್ತವಲ್ಲ ಏಕೆಂದರೆ ಅಲೆಗಳು ನಿರಂತರವಾಗಿ ಕಲ್ಲಿನ ತೀರದಲ್ಲಿ ಹಿಂಸಾತ್ಮಕವಾಗಿ ಅಪ್ಪಳಿಸುತ್ತವೆ.
ಗೋಕರ್ಣವು ಪವಿತ್ರ ಯಾತ್ರಾ ಕೇಂದ್ರಗಳಾಗಿರುವ ಅಪರೂಪದ ಸ್ಥಳಗಳಲ್ಲಿ ಒಂದಾಗಿದೆ, ಇದು ಪ್ರವಾಸಿಗರನ್ನು ಅಷ್ಟೇ ಸುಲಭವಾಗಿ ಆಕರ್ಷಿಸುತ್ತದೆ. ಸುಂದರವಾದ ದೇವಾಲಯಗಳು ಮತ್ತು ಆಕರ್ಷಕ ಕಡಲತೀರಗಳು ಗೋಕರ್ಣವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X