Search
  • Follow NativePlanet
Share
» »ಶ್ರಾವಣ ಸೋಮವಾರ ಯಾವೆಲ್ಲಾ ದೇವಸ್ಥಾನಕ್ಕೆ ಹೋದ್ರೆ ಒಳ್ಳೆದು ಗೊತ್ತಾ?

ಶ್ರಾವಣ ಸೋಮವಾರ ಯಾವೆಲ್ಲಾ ದೇವಸ್ಥಾನಕ್ಕೆ ಹೋದ್ರೆ ಒಳ್ಳೆದು ಗೊತ್ತಾ?

ಇಂದು ಶ್ರಾವಣದ ಮೊದಲ ಸೋಮವಾರ . ಶ್ರಾವಣ ಸೋಮವಾರದಂದು ಶಿವನ ದೇವಸ್ಥಾನದಲ್ಲಿ ಭಕ್ತರ ದಂಡೇ ಇರುತ್ತದೆ. ಇದೇ ಸಂದರ್ಭದಲ್ಲಿ ಕಾವಂಡ್ ಯಾತ್ರೆಯೂ ಪ್ರಾರಂಭವಾಗುತ್ತದೆ. ಆಗ ಶಿವನಿಗೆ ನೀರು ಹಾಗೂ ಹಾಲಿನ ಅಭಿಷೇಕ ಮಾಡಲಾಗುತ್ತದೆ. ಶ್ರಾವಣ ಸೋಮವಾರದಂದು ಭಕ್ತರು ಶಿವನ ಪ್ರಸಿದ್ಧ ಮಂದಿರಗಳಿಗೆ ಭೇಟಿ ನೀಡುತ್ತಾರೆ. ಭಾರತದಲ್ಲಿ ಅನೇಕ ಶಿವ ಮಂದಿರಗಳಿವೆ. ಪ್ರಾಚೀನ ಶಿವ ಮಂದಿರವು ಹಿಂದೂ ಮಾನ್ಯತೆಗಳ ಪ್ರಕಾರ ಬಹಳ ಮಹತ್ವಪೂರ್ಣ ಹೊಂದಿದೆ. ಇಂದು ನಾವು ನಿಮಗೆ ಕೆಲವು ಪ್ರಸಿದ್ಧ ಶಿವ ಮಂದಿರದ ಬಗ್ಗೆ ತಿಳಿಸಲಿದ್ದೇವೆ.

ಸೋಮನಾಥ ಮಂದಿರ , ಗುಜರಾತ್

ಸೋಮನಾಥ ಮಂದಿರ , ಗುಜರಾತ್

PC:Anhilwara

ಉತ್ತರ ಭಾರತಕ್ಕೆ ಹೋಲಿಸಿದರೆ ಗುಜರಾತ್‌ನಲ್ಲಿ ಶ್ರಾವಣ ಮಾಸವು ಮೊದಲೇ ಆರಂಭವಾಗುತ್ತದೆ. ಗುಜರಾತ್‌ನಲ್ಲಿರುವ ಸೋಮನಾಥ ಮಂದಿರವು ಪ್ರಾಚೀನ ಮಂದಿರವಾಗಿದ್ದು, ಐತಿಹಾಸಿಕ ಪುಸ್ತಕಗಳಲ್ಲೂ ಇದರ ಉಲ್ಲೇಖವಿದೆ. ಶ್ರಾವಣ ಮಾಸದಲ್ಲಿ ಬೆಳಗ್ಗೆ 4 ಗಂಟೆಗೆ ಈ ಮಂದಿರ ತೆರೆಯುತ್ತದೆ. ರಾತ್ರಿ10 ಗಂಟೆ ವರೆಗೆ ತೆರೆದಿರುತ್ತದೆ.

ರಾಜಕುಟುಂಬದವರು ನೆಲೆಸುವ ನಗರವಿದು: ಇಲ್ಲಿನ ಬಿಸಿನೀರಿನ ಕುಂಡದಲ್ಲಿ ಸ್ನಾನ ಮಾಡಿದ್ರೆ...ರಾಜಕುಟುಂಬದವರು ನೆಲೆಸುವ ನಗರವಿದು: ಇಲ್ಲಿನ ಬಿಸಿನೀರಿನ ಕುಂಡದಲ್ಲಿ ಸ್ನಾನ ಮಾಡಿದ್ರೆ...

ಓಂಕಾರೇಶ್ವರ ಮಂದಿರ, ಮಧ್ಯಪ್ರದೇಶ

ಓಂಕಾರೇಶ್ವರ ಮಂದಿರ, ಮಧ್ಯಪ್ರದೇಶ

PC:Bernard Gagnon

12 ಜ್ಯೋತಿರ್ಲಿಂಗಗಳಲ್ಲಿ ಓಂಕಾರೇಶ್ವರ ಮಂದಿರವೂ ಒಂದು. ಶಿವಪುರಿ ಎನ್ನುವ ಒಂದು ದ್ವೀಪದಲ್ಲಿರುವ ಈ ಮಂದಿರವು ಓಂ ಆಕಾರದಲ್ಲಿದೆ ಎನ್ನಲಾಗುತ್ತದೆ. ಶ್ರಾವಣ ಮಾಸದಲ್ಲಿ ಇಲ್ಲಿ ವಿಶೇಷ ಪೂಜೆ, ಅರ್ಚನೆ ನಡೆಯುತ್ತದೆ. ದೇಶಾದ್ಯಂತ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ತೃಂಬಕೇಶ್ವರ, ಮಹರಾಷ್ಟ್ರ

ತೃಂಬಕೇಶ್ವರ, ಮಹರಾಷ್ಟ್ರ

PC: Niraj Suryawanshi

ಈ ಮಂದಿರದ ವಿಶೇಷತೆ ಏನೆಂದರೆ ಮೂರು ಮುಖದಲ್ಲಿ ಶಿವ ವಿಷ್ಣು ಹಾಗೂ ಬ್ರಹ್ಮನ ದರ್ಶನವಾಗುತ್ತದೆ. ಶ್ರಾವಣ ಮಾಸವನ್ನು ಇಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಶಿವನಿಗೆ ನೀರಿನ ಅಭಿಷೇಕ ಮಾಡುವುದನ್ನು ಬಹಳ ಶುಭ ಎನ್ನಲಾಗುತ್ತದೆ.

ದೇಶದ ಪ್ರಮುಖ ಆಯುರ್ವೇದ ಕೇಂದ್ರಗಳಿವುದೇಶದ ಪ್ರಮುಖ ಆಯುರ್ವೇದ ಕೇಂದ್ರಗಳಿವು

ಲಿಂಗರಾಜ ಮಂದಿರ, ಓಡಿಶಾ

ಲಿಂಗರಾಜ ಮಂದಿರ, ಓಡಿಶಾ

PC: Nitun007

ಇದು ಭುವನೇಶ್ವರದ ದೊಡ್ಡ ಮಂದಿರವಾಗಿದೆ. ಶಿವನಿಗೆ ಸಮರ್ಪಿತವಾದ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಭಕ್ತರು ಮಹಾನದಿಯಿಂದ ನೀರನ್ನು ತಂದು ಶಿವಲಿಂಗನಿಗೆ ಅಭಿಷೇಕ ಮಾಡುತ್ತಾರೆ. ಶ್ರಾವಣ ಸೋಮವಾರದಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಕಾಶಿ ವಿಶ್ವನಾಥ ಮಂದಿರ, ಉತ್ತರ ಪ್ರದೇಶ

ಕಾಶಿ ವಿಶ್ವನಾಥ ಮಂದಿರ, ಉತ್ತರ ಪ್ರದೇಶ

ಗಂಗಾ ನದಿಯ ತೀರದಲ್ಲಿರುವ ಕಾಶೀ ವಿಶ್ವನಾಥ ಮಂದಿರವು ವಾರಣಾಸಿಯಲ್ಲಿದೆ. ಇದು ವಿಶ್ವದ ಅತ್ಯಂತ ಹಳೆಯ ಶಿವಮಂದಿರಗಳಲ್ಲೊಂದಾಗಿದೆ.3500 ವರ್ಷ ಹಳೆಯ ಮಂದಿರ ಇದಾಗಿದೆ. ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ವಿಶೇಷವಾಗಿ ಬೇರೆ ಬೇರೆ ರೀತಿಯ ಅಲಂಕಾರಗಳನ್ನು ಕಾಣಸಿಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X