Search
  • Follow NativePlanet
Share
» »ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿ ದೇವಾಲಯವು ಅತ್ಯಂತ ಮಹಿಮೆಯುಳ್ಳದ್ದು ಎಂಬುದು ನಿಮಗೆ ಸಾಮಾನ್ಯವಾಗಿ ತಿಳಿದಿರುವ ವಿಷಯವೇ ಆಗಿದೆ. ಶ್ರೀಕಾಳಹಸ್ತಿ ದೇವಾಲಯವು ಆಂಧ್ರ ಪ್ರದೇಶದಲ್ಲಿದೆ. ದಕ್ಷಿಣ ಭಾರತದಲ್ಲಿನ ಅತ್ಯಂತ ಪ್ರಸಿದ್ಧವಾದ ಶಿವನ ದೇವಾಲಯದಲ್ಲಿ ಒಂದಾಗಿದೆ.

ಶ್ರೀ ಕಾಳಹಸ್ತಿ ದೇವಾಲಯವು ಅತ್ಯಂತ ಮಹಿಮೆಯುಳ್ಳದ್ದು ಎಂಬುದು ನಿಮಗೆ ಸಾಮಾನ್ಯವಾಗಿ ತಿಳಿದಿರುವ ವಿಷಯವೇ ಆಗಿದೆ. ಶ್ರೀಕಾಳಹಸ್ತಿ ದೇವಾಲಯವು ಆಂಧ್ರ ಪ್ರದೇಶದಲ್ಲಿದೆ. ದಕ್ಷಿಣ ಭಾರತದಲ್ಲಿನ ಅತ್ಯಂತ ಪ್ರಸಿದ್ಧವಾದ ಶಿವನ ದೇವಾಲಯದಲ್ಲಿ ಒಂದಾಗಿದೆ. ಈ ದೇವಾಲಯಕ್ಕೆ ಕಣ್ಣಪ್ಪನ ಸ್ಥಳ ಪುರಾಣವು ಕೂಡ ಇದೆ. ತಿರುಪತಿಯಿಂದ ಕೇವಲ 36 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರಕ್ಕೆ ಪಂಚಭೂತ ಸ್ಥಳಗಳಲ್ಲಿ ವಾಯು ಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವನ್ನು ರಾಹು-ಕೇತು ಕ್ಷೇತ್ರವಾಗಿ ಹಾಗು ದಕ್ಷಿಣ ಕಾಶಿಯಾಗಿ ಪ್ರಸಿದ್ಧಿಯನ್ನು ಹೊಂದಿದೆ.

ಶ್ರೀಕಾಳಹಸ್ತಿಯ ಒಳ ದೇವಾಲಯವನ್ನು 5 ನೇ ಶತಮಾನದಲ್ಲಿ ನಿರ್ಮಿಸಲಾಯಿತು ಮತ್ತು 12 ನೇ ಶತಮಾನದಲ್ಲಿ ಚೋಳ ರಾಜರು ಹಾಗು ವಿಜಯನಗರ ರಾಜರಿಂದ ಹೊರಗಿನ ದೇವಾಲಯವನ್ನು ನಿರ್ಮಾಣ ಮಾಡಲಾಯಿತು ಎಂದು ನಂಬಲಾಗಿದೆ. ಈ ಮಹಿಮಾನ್ವಿತವಾದ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ತಮ್ಮ ಕುಜ ಹಾಗು ರಾಹು ದೋಷಗಳನ್ನು ಪರಿಹಾರ ಮಾಡಿಕೊಳ್ಳುತ್ತಿರುತ್ತಾರೆ. ಈ ದೇವಾಲಯದ ಜೊತೆ-ಜೊತೆಗೆ ಅನೇಕ ದೇವಾಲಯಗಳು ಕೂಡ ಇಲ್ಲಿವೆ. ಆ ದೇವಾಲಯಗಳು ಎಲ್ಲಿವೆ? ಆ ದೇವಾಲಯಗಳ ಮಹಿಮೆ ಏನು? ಆ ದೇವಾಲಯಕ್ಕೆ ತೆರಳುವ ಬಗೆ ಹೇಗೆ? ಎಂಬುದರ ಬಗ್ಗೆ ಲೇಖನದ ಮೂಲಕ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯೋಣ.

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ವಿಲುಪ್ಪು ದೇವಾಲಯ
ಶ್ರೀ ಕುಂಭ ದೇವಾಲಯವು ಕಾಳಹಸ್ತಿ ಪಟ್ಟಣದಲ್ಲಿರುವ ಒಂದು ಸಣ್ಣದಾದ ಗುಡ್ಡದ ಮೇಲೆ ನೆಲೆಗೊಂಡಿದೆ. ಈ ದೇವಾಲಯದ ಹಿಂದೆ ಒಂದು ಪ್ರಸಿದ್ಧವಾದ ಕಥೆ ಕೂಡ ಇದೆ. ಈ ದೇವಾಲಯವನ್ನು ಭಕ್ತರ ಕುಪ್ಪರ ಎಂದೇ ಕರೆಯುತ್ತಾರೆ. ಆತನನ್ನು ಮಹಾಭಾರತದಲ್ಲಿನ ಅರ್ಜುನನ ಪುನರ್ ಜನ್ಮವೆಂದೇ ಪರಿಗಣಿಸಲಾಗಿದೆ. ನಿಮಗೆ ಗೊತ್ತ? ಮಹಾಭಾರತದಲ್ಲಿ ಅರ್ಜುನನು ಭಗವಾನ್ ಶಿವನ ಅಪ್ರತಿಮ ಭಕ್ತನಾಗಿದ್ದನು.

PC:Polandfrighter

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ದುರ್ಗಾ ದೇವಾಲಯ
ಶ್ರೀ ದುರ್ಗಾ ದೇವಾಲಯವು ಪಾರ್ವತಿ ಅವತಾರವಾದ ದುರ್ಗಾ ಮಾತೆಗೆ ಅರ್ಪಿತವಾದ ದೇವಾಲಯವೇ ಆಗಿದೆ. ಈ ಪುರಾತನವಾದ ದೇವಾಲಯಕ್ಕೆ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದೊಂದು ಮಹಿಮಾನ್ವಿತವಾದ ದೇವಾಲಯವಾಗಿದ್ದು, ಶ್ರೀ ಕಾಳಹಸ್ತಿಶ್ವರದ ಉತ್ತರ ದಿಕ್ಕಿನಿಂದ ಸುಮಾರು 800 ಮೀಟರ್ ದೂರದಲ್ಲಿದೆ. ಈ ದೇವಾಲಯಕ್ಕೆ ವಿಶಾಲವಾದ ಮೆಟ್ಟಿಲುಗಳ ಮೂಲಕ ತಲುಪಬೇಕು.

PC:రవిచంద్ర

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ದುರ್ಗಾ ದೇವಾಲಯ

ಈ ದೇವಾಲಯವು ದುರ್ಗಾ ದೇವಿಗೆ ಸಮರ್ಪಿತವಾದ ದೇವಾಲಯವಾಗಿದ್ದರು ಕೂಡ ಇತರ ಕಾಳಹಸ್ತಿಯಲ್ಲಿನ ದೇವಾಲಯಗಳಿಗೆ ಹೋಲಿಸಿದರೆ ಬಹಳ ಚಿಕ್ಕದಾಗಿದೆ. ಸ್ಥಳೀಯ ಜನರು ಮತ್ತು ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ನೆಲೆಸಿರುವ ತಾಯಿಯು ಅತ್ಯಂತ ಮಹಿಮೆಯನ್ನು ಹೊಂದಿದ್ದು, ಕೋರಿದ ಕೋರಿಕೆಗಳನ್ನು ಈಡೇರಿಸುತ್ತಾಳೆ ಎಂದು ನಂಬಲಾಗಿದೆ.

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ
ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಕಾಳಹಸ್ತಿಯ ಮುರುಗನ್ ಕಡವು ಎಂಬಲ್ಲಿದೆ. ಈ ದೇವಾಲಯವು ನಗರದ ಹೃದಯಭಾಗದಲ್ಲಿದೆ. ಈ ದೇವಾಲಯದಲ್ಲಿ ವಿಜೃಂಬಣೆಯಿಂದ ಉತ್ಸವವನ್ನು ಪ್ರತಿವರ್ಷ ಆಚರಿಸುತ್ತಾರೆ. ಇಲ್ಲಿ ವಿಶೇಷವಾಗಿ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಸತತ 8 ದಿನಗಳ ಕಾಲ ನಡೆಸುತ್ತಾರೆ. ಆ ಸಮಯದಲ್ಲಿ ವರ್ಣರಂಜಿತವಾದ ಹೂವುಗಳು ಅಲಂಕರಿಸಿರುತ್ತಾರೆ. ಆನೇಕ ಯಾತ್ರಿಕರು ಈ ಉತ್ಸವದ ಸಮಯದಲ್ಲಿ ಕಾಳಹಸ್ತಿಗೆ ಭೇಟಿ ನೀಡುತ್ತಾರೆ.

రవిచంద్ర

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಚಕ್ರರೇಶ್ವರ ಸ್ವಾಮಿ ದೇವಾಲಯ
ಶ್ರೀ ಚಕ್ರರೇಶ್ವರ ಸ್ವಾಮಿ ದೇವಾಲಯವು ಶ್ರೀ ಕಾಳಹಸ್ತಿಯಲ್ಲಿಯೇ ಇದೆ. ಇಲ್ಲಿ ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡದಾದ ಶಿವಲಿಂಗವನ್ನು ಈ ದೇವಾಲಯವು ಹೊಂದಿದೆ. ಶ್ರೀ ಚಕ್ರರೇಶ್ವರ ಸ್ವಾಮಿ ದೇವಾಲಯವು ನಗರದ ಹತ್ತಿರ ಒಂದು ಸಣ್ಣದಾದ ಬೆಟ್ಟದ ಮೇಲೆ ನೆಲೆಗೊಂಡಿದೆ. 1960 ರಲ್ಲಿ ವಲಸೆ ಬಂದವರು ಈ ಪ್ರಾಚೀನವಾದ ದೇವಾಲಯವನ್ನು ಕಂಡುಹಿಡಿದ್ದಿದ್ದಾರೆ.

రవిచంద్ర

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಚಕ್ರರೇಶ್ವರ ಸ್ವಾಮಿ ದೇವಾಲಯ
ಈ ದೇವಾಲಯವನ್ನು ಸುಮಾರು 1200 ವರ್ಷಗಳಷ್ಟು ಹಳೆಯದಾದುದು ಎಂದು ನಂಬಲಾಗಿದೆ. ಈ ದೇವಾಲಯವು ಶ್ರೀ ಕಾಳಹಸ್ತಿ ಪಟ್ಟಣದಿಂದ ಸುಮಾರು 8 ಕಿ.ಮೀ ದೂರದಲ್ಲಿದೆ. ಶ್ರೀ ಚಕ್ರರೇಶ್ವರ ಸ್ವಾಮಿಯು ಹೆಚ್ಚಿನ ಭಕ್ತರನ್ನು ಹೊಂದಿದೆ. ಆದರೆ ಇತರ ದೇವಾಲಯಕ್ಕೆ ಹೋಲಿಕೆ ಮಾಡಿದರೆ ಚಿಕ್ಕದಾಗಿದೆ.

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ದುರ್ಗಾಂಬಿಕಾ ದೇವಾಲಯ
ದುಗಾಂಬಿಕಾ ದೇವಾಲಯವು ಶ್ರೀ ಕಾಳಹಸ್ತಿಯಲ್ಲಿರುವ ದುರ್ಗದಲ್ಲಿಯೇ ಅತ್ಯಂತ ಪ್ರಾಚೀನವಾದ ದೇವಾಲಯವೇ ಆಗಿದೆ, ಈ ದೇವಾಲಯವು ಬೆಟ್ಟದ ಮೇಲೆ ಹೆಚ್ಚಿನದಾಗಿ ಸ್ತ್ರೀ ದೇವತೆಗಳನ್ನು ಹೊಂದಿದೆ. ಈ ಶಕ್ತಿ ದೇವಾಲಯವು ಕಾಳಹಸ್ತಿಯಿಂದ ಉತ್ತರ ದಿಕ್ಕಿಗೆ ಇದ್ದು, ಸಮುದ್ರ ಮಟ್ಟದಿಂದ ಸುಮಾರು 800 ಮೀಟರ್ ಎತ್ತರದ ಬೆಟ್ಟದ ಮೇಲೆ ಇದೆ. ಈ ದೇವಾಲಯಕ್ಕೆ ಅನೇಕ ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಬೆಟ್ಟದಲ್ಲಿ ನೆಲೆಗೊಂಡಿರುವ ಈ ದೇವಾಲಯವು ಅದ್ಭುತವಾದ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ.

రవిచంద్ర

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಪ್ರಸನ್ನ ವರದರಾಜ ಸ್ವಾಮಿ ದೇವಾಲಯ
ಪ್ರಸನ್ನ ವವರದರಾಜ ಸ್ವಾಮಿ ದೇವಾಲಯವು ದಕ್ಷಿಣ ಭಾರತದ ಪ್ರಮುಖವಾದ ದೇವಾಲಯಗಳಲ್ಲಿ ಒಂದಾಗಿದೆ. ವಾಸ್ತವವಾಗಿ, ಇದು ಶ್ರೀ ಕಾಳಹಸ್ತೇಶ್ವರ ದೇವಾಲಯದ ಒಂದು ಭಾಗವಾಗಿದೆ. ವರದರಾಜ ಸ್ವಾಮಿಯನ್ನು ಆರಾಧನೆ ಮಾಡುವ ಸಲುವಾಗಿ ಸಾವಿರಾರು ಭಕ್ತರು ಪ್ರತಿ ವರ್ಷ ಈ ದೇವಾಲಯಕ್ಕೆ ಭಕ್ತಾಧಿüಗಳು ಭೇಟಿ ನೀಡುತ್ತಿರುತ್ತಾರೆ.

రవిచంద్ర

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ನಿಧಿ
ನವೀಕರಣ ಮಾಡುವ ಸಮಯದಲ್ಲಿ ಈ ದೇವಾಲಯವು ಅತ್ಯಂತ ಪ್ರಸಿದ್ಧಿಯನ್ನು ಪಡೆಯಿತು. ಅಂದರೆ ನವೀಕರಣ ಕಾರ್ಯ ಮಾಡುವ ಕೋಣೆಯಲ್ಲಿ ಒಂದು ದೊಡ್ಡದಾದ ಮರವು ಕಂಡು ಬಂದಿತು. ಬಾಗಿಲ ಹತ್ತಿರ ಅನೇಕ ವಸ್ತುಗಳು ಇದ್ದವು. ನಿಧಿಯು ಆ ಸ್ಥಳದಲ್ಲಿ ಇದೆ ಎಂದು ಗೊತ್ತಾದಾಗ ಭಕ್ತರ ದಂಡೇ ಆ ದೇವಾಲಯಕ್ಕೆ ಗುಂಪು ಗುಂಪಾಗಿ ಮುತ್ತಿಗೆ ಹಾಕಲು ಪ್ರಾರಂಭಿಸಿದರು. ಆದರೆ ನಿಧಿಯನ್ನು ಕಾಣಲು ಅವರಿಗೆ ಅನುಮತಿಯನ್ನು ನೀಡಲಿಲ್ಲ.

Krishna Kumar

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಭಾರದ್ವಾಜ ತೀರ್ಥಂ
ಭಾರದ್ವಾಜ ತೀರ್ಥವು ಶ್ರೀ ಕಾಳಹಸ್ತಿ ದೇವಾಲಯಕ್ಕೆ ಪೂರ್ವ ದಿಕ್ಕಿನಲ್ಲಿರುವ ಮೂರು ಬೆಟ್ಟಗಳ ಮಧ್ಯದಲ್ಲಿದೆ. ಈ ತೀರ್ಥಕ್ಕೆ ಭಾರದ್ವಾಜ ಮುನಿಯ ಹೆಸರನ್ನು ಇಡಲಾಗಿದೆ. ದ್ರಾವ ಎಂಬ ಯುಗದಲ್ಲಿ ಈ ಬೆಟ್ಟದ ಮೇಲೆ ಈ ಮುನಿಯು ವಾಸವಾಗಿದ್ದನು ಎಂದು ನಂಬಲಾಗಿದೆ. ಈ ಕಣಿವೆಯು ಭಾರದ್ವಾಜ ತೀರ್ಥದ ಕಣಿವೆಯೇ ಆಗಿದೆ. ಇಲ್ಲಿ ಹರಿಯುವ ನೀರು ಅತ್ಯಂತ ಪವಿತ್ರವಾದುದು ಎಂದೇ ಭಾವಿಸಲಾಗುತ್ತದೆ.

రవిచంద్ర

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಚತುರ್ಮುಕೇಶ್ವರ ದೇವಾಲಯ
ಈ ಚತುರ್ಮುಕೇಶ್ವರ ದೇವಾಲಯದಲ್ಲಿ ಶಿವ ಮತ್ತು ಬ್ರಹ್ಮ ದೇವರು ನೆಲೆಸಿದ್ದಾರೆ. ಈ ದೇವಾಲಯವು 2 ದೇವತೆಗಳ ಭೇಟಿಯ ದಂತಕಥೆಯನ್ನು ಹೊಂದಿದೆ. ಪೌರಣಿಕ ಪುರಾಣಗಳ ಪ್ರಕಾರ ಬ್ರಹ್ಮನು ತಾನು ಮಾಡಿದ ಪಾಪಗಳಿಂದ ವಿಮುಕ್ತಿ ಹೊಂದಲು ಇಲ್ಲಿ ತಪಸ್ಸು ಮಾಡಿದನು. ಕೊನೆಗೆ ಬ್ರಹ್ಮನು ತನ್ನ ಪಾಪದಿಂದ ವಿಮುಕ್ತಿ ಹೊಂದಿದನು ಎಂದು ನಂಬಲಾಗಿದೆ.

రవిచంద్ర

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಈ ದೇವಾಲಯದ ಮುಖ್ಯವಾದ ಆಕರ್ಷಣೆ ಎಂದರೆ ಶಿವಲಿಂಗ. ಇಲ್ಲಿನ ಶಿವಲಿಂಗವು ನಾಲ್ಕು ಮುಖವನ್ನು ಹೊಂದಿದ್ದು, ನಾಲ್ಕು ದಿಕ್ಕುಗಳನ್ನು ನೋಡುತ್ತಿದೆ. ಚತುರ್ಮುಖ ಎಂದರೆ ಸಾಮಾನ್ಯವಾಗಿಯೇ ನಾಲ್ಕು ಮುಖವನ್ನು ಹೊಂದಿರುವುದು. ಸಸ್ಯಹಾರಿಗಳು ಒಂದು ಕಾಲದಲ್ಲಿ ಪ್ರತಿವರ್ಷವು ಸ್ವಾಮಿಯನ್ನು ಆರಾಧಿಸಲು ಭೇಟಿ ನೀಡುತ್ತಿದ್ದರು. ಶಿವನಿಗೆ ಸಂಬಂಧಿಸಿದ ಪುರಾಣವನ್ನು ಇಲ್ಲಿ ಕೆತ್ತಲಾಗಿದೆ.

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಶ್ವೇರ ದೇವಾಲಯ
ಶ್ರೀ ಕಾಳಹಸ್ತಿ ದೇವಾಲಯವು ಅತ್ಯಂತ ಮಹಿಮೆಯುಳ್ಳದ್ದು ಎಂಬುದು ನಿಮಗೆ ಸಾಮಾನ್ಯವಾಗಿ ತಿಳಿದಿರುವ ವಿಷಯವೇ ಆಗಿದೆ. ಶ್ರೀಕಾಳ ಹಸ್ತಿ ದೇವಾಲಯವು ಆಂಧ್ರ ಪ್ರದೇಶದಲ್ಲಿದೆ. ದಕ್ಷಿಣ ಭಾರತದಲ್ಲಿನ ಅತ್ಯಂತ ಪ್ರಸಿದ್ಧವಾದ ಶಿವನ ದೇವಾಲಯದಲ್ಲಿ ಒಂದಾಗಿದೆ. ಈ ದೇವಾಲಯಕ್ಕೆ ಕಣ್ಣಪ್ಪನ ಸ್ಥಳ ಪುರಾಣವು ಕೂಡ ಇದೆ. ತಿರುಪತಿಯಿಂದ ಕೇವಲ 36 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರಕ್ಕೆ ಪಂಚಭೂತ ಸ್ಥಳಗಳಲ್ಲಿ ವಾಯು ಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವನ್ನು ರಾಹು-ಕೇತು ಕ್ಷೇತ್ರವಾಗಿ ಹಾಗು ದಕ್ಷಿಣ ಕಾಶಿಯಾಗಿ ಪ್ರಸಿದ್ಧಿಯನ್ನು ಹೊಂದಿದೆ.

Kalyan Kumar

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀಕಾಳಹಸ್ತಿಯ ಒಳ ದೇವಾಲಯವನ್ನು 5 ನೇ ಶತಮಾನದಲ್ಲಿ ನಿರ್ಮಿಸಲಾಯಿತು ಮತ್ತು 12 ನೇ ಶತಮಾನದಲ್ಲಿ ಚೋಳ ರಾಜರು ಹಾಗು ವಿಜಯನಗರ ರಾಜರಿಂದ ಹೊರಗಿನ ದೇವಾಲಯವನ್ನು ನಿರ್ಮಾಣ ಮಾಡಲಾಯಿತು ಎಂದು ನಂಬಲಾಗಿದೆ. ಈ ಮಹಿಮಾನ್ವಿತವಾದ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ತಮ್ಮ ಕುಜ ಹಾಗು ರಾಹು ದೋಷಗಳನ್ನು ಪರಿಹಾರ ಮಾಡಿಕೊಳ್ಳುತ್ತಿರುತ್ತಾರೆ. ಈ ದೇವಾಲಯದ ಜೊತೆ-ಜೊತೆಗೆ ಅನೇಕ ದೇವಾಲಯಗಳು ಕೂಡ ಇಲ್ಲಿವೆ. ಆ ದೇವಾಲಯಗಳು ಎಲ್ಲಿವೆ? ಆ ದೇವಾಲಯಗಳ ಮಹಿಮೆ ಏನು? ಆ ದೇವಾಲಯಕ್ಕೆ ತೆರಳುವ ಬಗೆ ಹೇಗೆ? ಎಂಬುದರ ಬಗ್ಗೆ ಲೇಖನದ ಮೂಲಕ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X