Search
  • Follow NativePlanet
Share
» »ವರ್ಷದಲ್ಲಿ 27 ದಿನ ಮಾತ್ರ ತೆರೆಯುವ ದೇವಾಲಯದಲ್ಲಡಗಿದೆ ದೇವಿ ಸತಿಯ ರಹಸ್ಯ

ವರ್ಷದಲ್ಲಿ 27 ದಿನ ಮಾತ್ರ ತೆರೆಯುವ ದೇವಾಲಯದಲ್ಲಡಗಿದೆ ದೇವಿ ಸತಿಯ ರಹಸ್ಯ

ಕೇರಳದಲ್ಲಿ ಒಂದು ವಿಶೇಷವಾದ ದೇವಸ್ಥಾನವಿದೆ ಅದು ಇಡೀ ವರ್ಷದಲ್ಲಿ ಕೇವಲ 27 ದಿನಗಳು ಮಾತ್ರ ತೆರೆಯುತ್ತದೆ. ಸ್ವಯಂ ಭೂ ಲಿಂಗವಿರುವ ಈ ದೇವಾಲಯದಲ್ಲಿ ವೈಶಾಖ ಮಾಸದ 27 ದಿನಗಳು ಮಾತ್ರ ಪೂಜೆ ನಡೆಯುತ್ತದೆ.

ದಕ್ಷ ಯಾಗಕ್ಕೆ ಶಿವನನ್ನು ಆಮಂತ್ರಿಸದಕ್ಕೆ ಕ್ರೋದಿತಳಾದ ಸತಿಯು ಯಜ್ಞಕ್ಕೆ ಹಾರಿ ಪ್ರಾಣತ್ಯಾಗ ಮಾಡಿ ನಂತರ ಶಿವನು ಸತಿಯ ಮೃತ ದೇಹವನ್ನು ಹೊತ್ತು ರುದ್ರ ನರ್ತನ ಮಾಡಿದ್ದು, ವಿಷ್ಣುವು ತನ್ನ ಚಕ್ರದಿಂದ ಸತಿಯ ದೇಹವನ್ನು ತುಂಡರಿಸಿದ್ದು ಎಲ್ಲಾ ಕಥೆ ನೀವು ಕೇಳಿರಬಹುದು. ಸತಿಯ ದೇಹದ ಭಾಗಗಳು ಬಿದ್ದಲ್ಲೆಲ್ಲಾ ಶಕ್ತಿ ಪೀಠಗಳು ತಲೆಎತ್ತಿದ್ದವು. ಆದರೆ ಸತಿ ಬೆಂಕಿಗೆ ಆಹುತಿಯಾದ ಆ ಸ್ಥಳ ಯಾವುದು ಅನ್ನೋದು ನಿಮಗೇನಾದರೂ ಗೊತ್ತಾ?

ಕೊಟ್ಟಿಯೂರ್ ದೇವಾಲಯ

ಕೊಟ್ಟಿಯೂರ್ ದೇವಾಲಯ

PC:Satheesan.vn

ಕೊಟ್ಟಿಯೂರ್ ದೇವಾಲಯವು ಕೇರಳದ ಒಂದು ಪ್ರಮುಖ ಶಿವ ದೇವಾಲಯವಾಗಿದೆ. ವಡಕ್ಕೇಶ್ವರಂ ದೇವಾಲಯ ಎಂದು ಪ್ರಾಚೀನ ಕಾಲದಿಂದಲೂ ಈ ದೇವಾಲಯವನ್ನು ಕರೆಯಲಾಗುತ್ತದೆ. ಇನ್ನು ಸ್ಥಳೀಯರು ಈ ದೇವಾಲಯವನ್ನು ಇಕ್ಕರೆ ಕೊಟ್ಟಿಯಾರ್ ಎಂದೂ ಕರೆಯುತ್ತಾರೆ. ಕೊಟ್ಟೂರು ಗ್ರಾಮದ ಹತ್ತಿರ ನದಿಯ ದಂಡೆಯ ಮೇಲೆ ಈ ಇಕ್ಕರೆ ಕೊಟ್ಟಿಯಾರ್ ದೇವಾಲಯವಿದೆ. ಥ್ರೂಚ್ಚುರುಮನಾ ಕ್ಷೇತ್ರ ಎನ್ನುವುದು ಕೊಚ್ಚಿಯೂರ್ ದೇವಸ್ಥಾನದ ಸರಿಯಾದ ಹೆಸರು. ಇದು ಮಲಬಾರ್ ದೇವಸ್ವಮ್ ಮಂಡಳಿಯ ವಿಶೇಷ ವಿಭಾಗದ ಅಡಿಯಲ್ಲಿರುವ ದೇವಾಲಯವಾಗಿದೆ.

ವೈಶಾಖ ಉತ್ಸವದಂದು ಮಾತ್ರ ತೆರೆಯುತ್ತದೆ

ವೈಶಾಖ ಉತ್ಸವದಂದು ಮಾತ್ರ ತೆರೆಯುತ್ತದೆ

PC: Deepesh ayirathi

ಕೊಟ್ಟಿಯಾರ್‌ನಲ್ಲಿ ಎರಡು ದೇವಾಲಯಗಳಿವೆ - ಒಂದು ಬವಲಿ ನದಿಯ ಪಶ್ಚಿಮ ದಂಡೆಯಲ್ಲಿದೆ ಮತ್ತು ಇನ್ನೊಂದು ಬವಲಿ ನದಿಯ ಪೂರ್ವ ದಂಡೆಯಲ್ಲಿದೆ. ಪೂರ್ವ ದಂಡೆಯಲ್ಲಿರುವ(ಕಿಜಾಕೇಶ್ವರಂ ಅಥವಾ ಅಕ್ಕರೆ ಕೊಟ್ಟಿಯೂರ್) ದೇವಾಲಯವು ವೈಶಾಖ ಉತ್ಸವದ ಸಮಯದಲ್ಲಿ ಮಾತ್ರ ತಾತ್ಕಾಲಿಕವಾಗಿ ತೆರೆಯುತ್ತದೆ.

ಬೆಂಗಳೂರು ಸುತ್ತಮುತ್ತ ವಾರಾಂತ್ಯ ಕಳೆಯಲು ಬೆಸ್ಟ್ ಸಾಹಸಮಯ ತಾಣಗಳಿವುಬೆಂಗಳೂರು ಸುತ್ತಮುತ್ತ ವಾರಾಂತ್ಯ ಕಳೆಯಲು ಬೆಸ್ಟ್ ಸಾಹಸಮಯ ತಾಣಗಳಿವು

27 ದಿನಗಳು ಮಾತ್ರ ತೆರೆದಿರುತ್ತದೆ

27 ದಿನಗಳು ಮಾತ್ರ ತೆರೆದಿರುತ್ತದೆ

PC: Vinayaraj

ಇನ್ನೂ ಪಶ್ಚಿಮ ದಂಡೆಯಲ್ಲಿರುವ ದೇವಾಲಯವು ಇತರ ದೇವಾಲಯಗಳಂತೆ ಶಾಶ್ವತ ದೇವಾಲಯವಾಗಿದೆ. ಇನ್ನೊಂದು ವೈಶಾಖ ಉತ್ಸವದ 27 ದಿನಗಳನ್ನು ಹೊರತುಪಡಿಸಿ ವರ್ಷವಿಡೀ ಈ ದೇವಾಲಯ ಮುಚ್ಚಿರುತ್ತದೆ. ದಟ್ಟವಾದ ಕಾಡುಪ್ರದೇಶದಲ್ಲಿ ನೆಲೆಗೊಂಡಿರುವ ಈ ದೇವಸ್ಥಾನವು ಸುಮಾರು 80 ಎಕರೆಗಳಷ್ಟು ವ್ಯಾಪಿಸಿದೆ.

 ಸತಿ ಪ್ರಾಣತ್ಯಾಗ ಮಾಡಿದ ಸ್ಥಳ

ಸತಿ ಪ್ರಾಣತ್ಯಾಗ ಮಾಡಿದ ಸ್ಥಳ

PC:User:Sivavkm

ನದಿಯ ಪೂರ್ವ ದಂಡೆಯಲ್ಲಿನ ಅಕ್ಕರೆ ಕೊಟ್ಟಿಯಾರ್ ದೇವಸ್ಥಾನದ ಸ್ಥಳವು ದಕ್ಷ ಯಾಗಾದ ಸ್ಥಳವಾಗಿದೆ ಎನ್ನುತ್ತದೆ ಪುರಾಣ. ದೇವಿ ಸತಿಯು ಯಜ್ಞಕ್ಕೆ ಹಾರಿ ಪ್ರಾಣತ್ಯಾಗ ಮಾಡಿದ್ದು ಇದೇ ಸ್ಥಳದಲ್ಲಿ. ಸ್ವಾಯಂಭೂ ಲಿಂಗವನ್ನು ಕಂಡುಬಂದ ನಂತರ ಥ್ರೂಚ್ಚುರುಮನಾ ದೇವಾಲಯವನ್ನು ನಿರ್ಮಿಸಲಾಯಿತು. ಆದರೆ ದೇವಸ್ಥಾನದ ನಿರ್ಮಾಣದ ನಿಖರವಾದ ದಿನಾಂಕವು ತಿಳಿದಿಲ್ಲ.

ತ್ರಿ ಮೂರ್ತಿಗಳು

ತ್ರಿ ಮೂರ್ತಿಗಳು

PC: Vinayaraj

ಕೊಟ್ಟಿಯಾರ್ ದೇವಾಲಯವನ್ನು ಕೇರಳ ಮತ್ತು ಪಕ್ಕದ ರಾಜ್ಯಗಳ ನೆರೆಯ ಪ್ರದೇಶಗಳಲ್ಲಿ ಪೂಜಿಸಲಾಗುತ್ತದೆ. ತ್ರಿ ಮೂರ್ತಿಗಳಾದ (ಬ್ರಹ್ಮ - ವಿಷ್ಣು - ಶಿವ) ಮತ್ತು ಆದಿಸ್ವರೂಪಳಾದ ಭಗವತಿಯ ದೈವಿಕ ಆಶೀರ್ವಾದವನ್ನು ಈ ದೇವಾಲಯವು ಪಡೆದಿದೆ.

ಶಕ್ತಿ ದೇವಾಲಯ

ಶಕ್ತಿ ದೇವಾಲಯ

PC:User:Sivavkm

ಸತಿ ದೇವಿಗೆ ಸಮರ್ಪಿತವಾಗಿರುವ ಕೆಲವೇ ಕೆಲವು ದೇವಾಲಯಗಳಲ್ಲಿ ಕೊಟ್ಟಿಯಾರು ಶಕ್ತಿ ದೇವಾಲಯವು ಒಂದಾಗಿದೆ. ಧಾರ್ಮಿಕ ತತ್ತ್ವಗಳಿಂದ ಅನುಸರಿಸಿರುವ ಈ ದೇವಾಲಯಕ್ಕೆ ಯಾವುದೇ ಶಾಶ್ವತ ರಚನೆಗಳನ್ನು ನಿರ್ಮಿಸುವುದನ್ನು ನಿಷೇಧಿಸಲಾಗಿದೆ. ತಾತ್ಕಾಲಿಕವಾಗಿರುವ ಮತ್ತು ಸರಳವಾಗಿರುವ ರಚನೆಗಳು ಮಾತ್ರ ಮಾಡಲಾಗುತ್ತದೆ.

ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಜೊತೆ ಸ್ವಿಮ್ಮಿಂಗ್ ಪೂಲ್ ಕೂಡಾ ಇದೆ ಇಲ್ಲಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಜೊತೆ ಸ್ವಿಮ್ಮಿಂಗ್ ಪೂಲ್ ಕೂಡಾ ಇದೆ ಇಲ್ಲಿ

ಶತಮಾನಗಳಿಂದ ನಡೆದು ಬಂದಿದೆ

ಶತಮಾನಗಳಿಂದ ನಡೆದು ಬಂದಿದೆ

PC: Satheesan.vn

ಇಲ್ಲಿನ ಹಿಂದೂ ಭಕ್ತರು 100 ಕಿ.ಮೀ ದೂರದಿಂದ ಪಾದಯಾತ್ರೆಯಲ್ಲೇ ಕಚ್ಚಾವಸ್ತುಗಳನ್ನು ಹೊತ್ತು ತರುತ್ತಾರೆ. ಪ್ರತಿಯೊಂದು ಸಮುದಾಯಕ್ಕೂ ಒಂದೊಂದು ಕೆಲಸವನ್ನು ವಹಿಸಲಾಗಿರುತ್ತದೆ. ಅವರು ತಮಗೆ ವಹಿಸಲಾಗಿರುವ ಕೆಲಸವನ್ನು ತಮ್ಮ ಹಕ್ಕು ಎಂದು ತಿಳಿದು ಅದನ್ನು ನಿರ್ವಹಿಸುತ್ತಾರೆ. ಈ ಸಂಪ್ರದಾಯವು ಹಲವಾರು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಈಗ ಕೇರಳ ಸರ್ಕಾರವು ವೈಲ್ಡ್ ಲೈಫ್ ಅಭಯಾರಣ್ಯವೆಂದು ಘೋಷಿಸಲಾಗಿರುವ ಪ್ರದೇಶದಲ್ಲಿ ಈ ದೇವಾಲಯವಿದೆ.

ಪರಶುರಾಮ ಸ್ಥಾಪಿಸಿದ ದೇವಾಲಯ

ಪರಶುರಾಮ ಸ್ಥಾಪಿಸಿದ ದೇವಾಲಯ

PC: Vinayaraj

ಥ್ರೂಚ್ಚುರುಮನಾ ದೇವಸ್ಥಾನದ ಲಿಂಗದ ಪ್ರತಿಷ್ಠಾನೆಯನ್ನು ಪರಶುರಾಮನಿಂದ ಮಾಡಲ್ಪಟ್ಟಿದೆ. ಇಲ್ಲಿ ವರ್ಷವಿಡೀ ಶಿವಲಿಂಗವನ್ನು ಆರಾಧಿಸಲಾಗುತ್ತದೆ. ಅದೇ ಇನ್ನೊಂದು ದಡದಲ್ಲಿರುವ ಸ್ವಯಂ ಭೂ ಲಿಂಗವು ವರ್ಷದ ೨೭ ದಿನಗಳು ಮಾತ್ರ ಪೂಜಿಸಲಾಗುತ್ತದೆ.

ಎಳನೀರು ಅರ್ಪಣೆ

ಎಳನೀರು ಅರ್ಪಣೆ

PC:Satheesan.vn

ವೈಶಾಖ ಮಹೋತ್ಸವವು ಪ್ರತೀ ವರ್ಷ ಮೇ-ಜೂನ್ ತಿಂಗಳಲ್ಲಿ ನಡೆಯುತ್ತದೆ. 27 ದಿನಗಳ ಕಾಲ ನಡೆಯುವ ಈ ಉತ್ಸವವು ವಿಜೃಂಭಣೆಯಿಂದ ನಡೆಯುತ್ತದೆ. ಈ ಸಂದರ್ಭ ವಯನಾಡ್‌ನಿಂದ ಕತ್ತಿಯನ್ನು ತರುವ ಸಂಪ್ರದಾಯವಿದೆ. ಎಲ್ಲಾ ವಿಧಿ ವಿಧಾನಗಳು ಚಿನ್ನ ಹಾಗೂ ಬೆಳ್ಳಿಯ ಪಾತ್ರೆಯಲ್ಲಿ ನಡೆಯುತ್ತದೆ. ಈ ಉತ್ಸವದಂದು ಸ್ವಯಂ ಭೂ ಲಿಂಗಕ್ಕೆ ಎಳನೀರಿನ ಅಭೀಷೇಕ ಮಾಡಲಾಗುತ್ತದೆ. ಸಹಸ್ರಾರು ಭಕ್ತರು ದೇವರಿಗೆ ಎಳನೀರನ್ನು ಅರ್ಪಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X