Search
  • Follow NativePlanet
Share
» »ಸ್ತ್ರೀ ರೂಪದ ಹನುಮನನ್ನು ಎಲ್ಲಾದರೂ ಕಂಡಿದ್ದೀರಾ?

ಸ್ತ್ರೀ ರೂಪದ ಹನುಮನನ್ನು ಎಲ್ಲಾದರೂ ಕಂಡಿದ್ದೀರಾ?

ಚತ್ತೀಸ್‌ಗಡದ ರತನ್‌ಪುರ್‌ನಲ್ಲಿರುವ ಹನುಮಾನ್ ಮಂದಿರದಲ್ಲಿ ಹನುಮಾನ್‌ನ್ನು ಸ್ತ್ರೀ ರೂಪದಲ್ಲಿ ಪೂಜಿಸಲಾಗುತ್ತಿದೆ. ವಿಶ್ವದಲ್ಲೇ ಹನುಮಾನ್‌ನನ್ನು ಸ್ತ್ರೀ ರೂಪದಲ್ಲಿ ಪೂಜಿಸಲಾಗುವ ಏಕೈಕ ಮಂದಿರ ಇದಾಗಿದೆ.

ಕೈಯಲ್ಲಿ ಕಾಸಿಲ್ವಾ? ಕಡಿಮೆ ಬಜೆಟ್‌ನಲ್ಲಿ ಎಲ್ಲೆಲ್ಲಾ ತಿರುಗಾಡಬಹುದು ಗೊತ್ತಾ?

ಮೂರ್ತಿಯ ಸ್ಥಾಪನೆಗೆ ಸಂಬಂಧಿಸಿದ ಕಥೆ

ಮೂರ್ತಿಯ ಸ್ಥಾಪನೆಗೆ ಸಂಬಂಧಿಸಿದ ಕಥೆ

PC:Singhonkarnath
ಈ ಮಂದಿರದಲ್ಲಿ ಹನುಮಾನ್ ಸ್ರ್ತೀಯ ರೂಪದಲ್ಲಿ ಪೂಜಿಸಲ್ಪಡುವುದರ ಹಿಂದೆ . ಪ್ರಾಚೀನ ಕಾಲದಲ್ಲಿ ರತನ್‌ಪುರದಲ್ಲಿ ಒಬ್ಬ ಪ್ರಥ್ವಿ ದೇವಜ್ ಎನ್ನುವ ರಾಜನಿದ್ದ. ಆತ ಹನುಮಾನ್ ಭಕ್ತನಾಗಿದ್ದ. ರಾಜನಿಗೆ ಕುಷ್ಠರೋಗ ಕಾಣಿಸಿಕೊಳ್ಳುತ್ತದೆ. ಜೀವನದಲ್ಲಿ ನಿರಾಶನಾಗಿದ್ದ. ಆತನ ಕನಸಿನಲ್ಲಿ ಹನುಮಾನ್ ಬಂದು ತನಗೆ ಒಂದು ಮಂದಿರ ಕಟ್ಟಿಸುವ ಂತೆ ಹೇಳುತ್ತಾನೆ. ರಾಜ ಅದರಂತೆ ಮಂದಿರ ನಿರ್ಮಿಸುತ್ತಾನೆ.

ನಾರಿ ರೂಪದ ಪ್ರತಿಮೆ

ನಾರಿ ರೂಪದ ಪ್ರತಿಮೆ

PC: youtube

ನಂತರ ಮತ್ತೆ ರಾಜನ ಕನಸಿನಲ್ಲಿ ಬಂದ ತನ್ನ ಪ್ರತಿಮೆಯನ್ನು ಮಹಾಮಾಯ ಕುಂಡದಿಂದ ತೆಗೆದು ಮಂದಿರದಲ್ಲಿ ಪ್ರತಿಷ್ಠಾಪಿಸುವಂತೆ ಹೇಳುತ್ತದೆ. ರಾಜ ಮಹಾಮಾಯ ಕುಂಡದಲ್ಲಿ ಹನುಮಾನ್‌ನ ಪ್ರತಿಮೆ ನೋಡಿದಾಗ ಆಶ್ಚರ್ಯ ಕಾದಿತ್ತು. ಆ ಪ್ರತಿಮೆ ನಾರಿ ರೂಪದಲ್ಲಿತ್ತು. ರಾಜ ಹನುಮಾನ್‌ನ ಆದೇಶದಂತೆ ಆ ನಾರಿ ರೂಪದ ಪ್ರತಿಮೆಯನ್ನು ಮಂದಿರದಲ್ಲಿ ಪ್ರತಿಷ್ಠಾಪಿಸುತ್ತಾನೆ.

ಇಲ್ಲಿಯ ಮೂರ್ತಿ ಹೇಗಿದೆ?

ಇಲ್ಲಿಯ ಮೂರ್ತಿ ಹೇಗಿದೆ?

PC: youtube

ಹನುಮಾನ್‌ನ ಪ್ರತಿಮೆ ದಕ್ಷಿಣಮುಖಿಯಾಗಿದೆ. ಅವರ ಬಲ ಬದಿಯಲ್ಲಿ ಶ್ರೀ ರಾಮ ಹಾಗೂ ಎಡ ಬದಿಯಲ್ಲಿ ಲಕ್ಷ್ಮಣನ ಮೂರ್ತಿ ಇದೆ. ಹನುಮಾನ್‌ನ ಕಾಲ ಬಳಿ ಎರಡು ರಾಕ್ಷಸರಿದ್ದಾರೆ. ಈ ಪ್ರತಿಮೆಯನ್ನು ಸ್ಥಾಪನೆ ಮಾಡಿದ ನಂತರ ರಾಜ ತನ್ನ ರೋಗ ವಾಸಿಯಾಗುವಂತೆ ಹಾಗೂ ಪ್ರಜೆಗಳ ಮನೋಕಾಮನೆ ಈಡೇರಿಸುವಂತೆ ಕೋರುತ್ತಾನೆ. ಅದರಂತೆ ರಾಜನ ರೋಗ ವಾಸಿಯಾಯಿತು. ರಾಜನ ಇನ್ನೊಂದು ಬೇಡಿಕೆಯ ಈಡೇರಿಕೆಗಾಗಿ ಇಂದಿಗೂ ಈ ಹನುಮ ಭಕ್ತರ ಮನೋಕಾಮನೆಯನ್ನು ಈಡೇರಿಸುತ್ತಿದ್ದಾನೆ ಎನ್ನಲಾಗುತ್ತದೆ.

ರತನ್‌ಪುರ ತಲುಪುವುದು ಹೇಗೆ?

ರತನ್‌ಪುರ ತಲುಪುವುದು ಹೇಗೆ?

PC: youtube
ಚತ್ತೀಸ್‌ಗಡ್ ಬಂದು ಅಲ್ಲಿಂದ ರತನ್‌ಪುರದಿಂದ ಸುಮಾರು 25 ಕಿ.ಮೀ ದೂರದಲ್ಲಿ ಬಿಲಾಸ್‌ಪುರವಿದೆ. ಇಲ್ಲಿಗೆ ಎಲ್ಲಾ ಪ್ರದೇಶಗಳಿಂದ ಸಾಕಷ್ಟು ರೈಲು, ಬಸ್ ದೊರೆಯುತ್ತದೆ.

 ಸಮೀಪ ಇರುವ ಮಂದಿರಗಳು

ಸಮೀಪ ಇರುವ ಮಂದಿರಗಳು

PC: youtube

ಈ ಮಂದಿರದ ಸಮೀಪ ಕಾಲ ಬೈರವ ಮಂದಿರವಿದೆ. ಇಲ್ಲಿನದ್ದು ಸುಮಾರು 9 ಫೀಟ್ ಎತ್ತರದ ಪ್ರತಿಮೆ. ಬಾಬಾ ಜ್ಞಾನಗಿರಿ ಈ ಮಂದಿರದ ನಿರ್ಮಾಣ ಮಾಡಿದ್ದರು. ಶ್ರೀ ಲಕ್ಷ್ಮೀ ದೇವಿ ಮಂದಿರವಿದೆ. ಇದೊಂದು ಐತಿಹಾಸಿಕ ಮಂದಿರವಾಗಿದೆ.

Read more about: chhattisgarh temple hanuman
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X