Search
  • Follow NativePlanet
Share
» »ಮನೆಯಲ್ಲಿ ಶುಭಕಾರ್ಯ ನಡೆದ್ರೆ ತಾರಕೇಶ್ವರನ ಸನ್ನಿಧಾನಕ್ಕೆ ಬಂದು ಗಂಟೆ ಕಟ್ಟಬೇಕಂತೆ

ಮನೆಯಲ್ಲಿ ಶುಭಕಾರ್ಯ ನಡೆದ್ರೆ ತಾರಕೇಶ್ವರನ ಸನ್ನಿಧಾನಕ್ಕೆ ಬಂದು ಗಂಟೆ ಕಟ್ಟಬೇಕಂತೆ

ಉತ್ತರಖಂಡದಲ್ಲಿ ಸಾಕಷ್ಟು ಧಾರ್ಮಿಕ ತಾಣಗಳಿವೆ. ಅವುಗಳಲ್ಲಿ ತಾರಕೇಶ್ವರ ಮಹಾದೇವ ದೇವಸ್ಥಾನವೂ ಒಂದು. ಈ ದೇವಸ್ಥಾನದ ವಿಶೇಷತೆ ಎಂದರೆ ಇಲ್ಲಿ ಭಕ್ತರು ತಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆದರು ದೇವರಿಗೆ ಒಂದು ಗಂಟೆಯನ್ನು ಅರ್ಪಿಸುತ್ತಾರಂತೆ. ನಾವಿಂದುಈ ತಾರಕೇಶ್ವರ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Tarkeshwar Mahadev Temple Facebook

ಲಾನ್ಸ್ ಡೌನ್ ನಿಂದ 37 ಕಿ.ಮೀ ದೂರದಲ್ಲಿ ಮತ್ತು ಕೋಟ್ವಾರ್ ನಿಂದ 69 ಕಿ.ಮೀ ದೂರದಲ್ಲಿ, ಉತ್ತರಾಖಂಡದ ಪೌರಿ ಗಡ್ವಾಲ್ ಜಿಲ್ಲೆಯಲ್ಲಿ ಪುರಾತನ ದೇವಸ್ಥಾನ ತಾರಕೇಶ್ವರ್ ಮಹಾದೇವ್ ದೇವಸ್ಥಾನ ಇದೆ. 2092 ಮೀಟರ್ ಎತ್ತರದಲ್ಲಿ ಬೆಟ್ಟದ ಮೇಲಿರುವ ತಾರಕೇಶ್ವರ ಮಹಾದೇವ್ ದೇವಸ್ಥಾನವು ಶಿವನಿಗೆ ಸಮರ್ಪಿತವಾದ ಸಿದ್ಧ ಪೀಠ ಎಂದು ಕರೆಯಲ್ಪಡುವ ಪುರಾತನ ಪವಿತ್ರ ಸ್ಥಳಗಳವಾಗಿದ್ದು, ಇದು ಉತ್ತರಾಖಂಡ್ ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.

ಐದು ತಲೆಯ ಕಾಳಿಂಗನನ್ನು ಹೋಲುವ ಜಲಪಾತವನ್ನು ನೋಡಿದ್ದೀರಾ?ಐದು ತಲೆಯ ಕಾಳಿಂಗನನ್ನು ಹೋಲುವ ಜಲಪಾತವನ್ನು ನೋಡಿದ್ದೀರಾ?

ದಂತಕಥೆಯ ಪ್ರಕಾರ

ದಂತಕಥೆಯ ಪ್ರಕಾರ

PC: Tarkeshwar Mahadev Temple Facebook

ದಂತಕಥೆಯ ಪ್ರಕಾರ, ತಾರಾಸುರ ರಾಕ್ಷಸನು ಶಿವನನ್ನು ಕುರಿತಾಗಿ ಧ್ಯಾನ ಮಾಡಿ ವರ ಪಡೆದಿದ್ದು ಇದೇ ಸ್ಥಳದಲ್ಲಿ ಎನ್ನಲಾಗುತ್ತದೆ. ಶಿವನ ಮಗನನ್ನು ಹೊರತುಪಡಿಸಿ ಇನ್ನಾರಿಂದಲೂ ತಾರಕಾಸುರನನ್ನು ಕೊಲ್ಲಲು ಸಾಧ್ಯವಿಲ್ಲದಂತಹ ವರವನ್ನು ಪಡೆಯುತ್ತಾನೆ. ತಾರಕಾಸುರನು ಸಂತರು, ಋಷಿಮುನಿಗಳಿಗೆ ಸಂಕಷ್ಟ ನೀಡಲು ಆರಂಭಿಸುತ್ತಾನೆ.

ತಾರಕಾಸುರನ ಸಂಹರಿಸಿದ ಕಾರ್ತೀಕೇಯ

ತಾರಕಾಸುರನ ಸಂಹರಿಸಿದ ಕಾರ್ತೀಕೇಯ

PC: Tarkeshwar Mahadev Temple Facebook

ಇದರಿಂದ ಬೇಸತ್ತ ಋಷಿಮುನಿಗಳು ಶಿವನ ಮೊರೆ ಹೋಗುತ್ತಾರೆ. ಶಿವನು ಪಾರ್ವತಿಯನ್ನು ವಿವಾಹವಾಗುತ್ತಾನೆ. ಕಾರ್ತೀಕೇಯ ಜನಿಸುತ್ತಾನೆ. ಕಾರ್ತೀಕೇಯ ತಾರಕಾಸುರನನ್ನು ಕೊಲ್ಲುತ್ತಾನೆ. ಸಾಯುವುದಕ್ಕೂ ಮೊದಲು ತಾರಕಾಸುರ ಶಿವನನ್ನು ಪ್ರಾರ್ಥಿಸುತ್ತಾನೆ. ಮಹದೇವ ಆ ಸ್ಥಳಕ್ಕೆ ತಾರಕಾಸುರನ ಹೆಸರನ್ನು ಜೋಡಿಸುತ್ತಾನೆ. ಹಾಗಾಗಿ ಆ ಸ್ಥಳವು ತಾರಕೇಶ್ವರ ಎಂದಾಯಿತು.

ಗಣಪತಿಪುಲೆಯಲ್ಲಿರುವ ಪಶ್ಚಿಮ ದ್ವಾರಪಾಲಕನ ದರ್ಶನ ಪಡೆದಿದ್ದೀರಾ?ಗಣಪತಿಪುಲೆಯಲ್ಲಿರುವ ಪಶ್ಚಿಮ ದ್ವಾರಪಾಲಕನ ದರ್ಶನ ಪಡೆದಿದ್ದೀರಾ?

ಮೊದಲು ದೇವಸ್ಥಾನದಲ್ಲಿ ಶಿವಲಿಂಗ ಇತ್ತು

ಮೊದಲು ದೇವಸ್ಥಾನದಲ್ಲಿ ಶಿವಲಿಂಗ ಇತ್ತು

PC: Facebook

ಈ ದೇವಾಲಯದ ದೇವತೆ ಶಿವ. ದೇವಾಲಯದ ದಿಯೋಡರ್, ಸೀಡರ್ ಮತ್ತು ಪೈನ್ ದಟ್ಟ ಕಾಡುಗಳ ನಡುವೆ ಇದೆ. ಇದಕ್ಕೂ ಮುನ್ನ ತಾರಕೇಶ್ವರ ಮಹಾದೇವ ದೇವಸ್ಥಾನದಲ್ಲಿ ಶಿವಲಿಂಗ ಇತ್ತು. ಆದರೆ ಈಗ ಶಿವ ತಾಂಡವದ ವಿಗ್ರಹವನ್ನು ಪೂಜಿಸಲಾಗುತ್ತದೆ.

ಪುರಾಣದ ಪ್ರಕಾರ

ಪುರಾಣದ ಪ್ರಕಾರ

PC: Facebook

ಮತ್ತೊಂದು ಪುರಾಣದ ಪ್ರಕಾರ, ದೇವತೆ ಪಾರ್ವತಿಯು ಶಿವಲಿಂಗಕ್ಕೆ ನೆರಳು ಬೀಳುವ ಸಲುವಾಗಿ ಸ್ವತಃ 7 ದೇವದಾರು ಮರಗಳನ್ನು ನೆಡುತ್ತಾಳೆ. ಈ ಮರಗಳನ್ನು ಕ್ರಮವಾಗಿ ನೆಟ್ಟಿರುತ್ತಾಳೆ. ಈ ಮರಗಳು ಓಂ ಆಕಾರದಲ್ಲಿ ಬೆಳೆದಿವೆ ಎಂದು ನಂಬಲಾಗಿದೆ.

ಅಜಿಂಕ್ಯತಾರ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕುಅಜಿಂಕ್ಯತಾರ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕು

ಕೆರೆಯಲ್ಲಿ ಸ್ನಾನ ಮಾಡಬೇಕು

ಕೆರೆಯಲ್ಲಿ ಸ್ನಾನ ಮಾಡಬೇಕು

PC: Facebook

ಭಕ್ತರು ಈ ದೇವಾಲಯದ ಒಳಕ್ಕೆ ಪ್ರವೇಶಿಸುವ ಮೊದಲು ಅಲ್ಲಿರುವ ಕೆರೆಯಲ್ಲಿ ಸ್ನಾನ ಮಾಡಿ ದೇವಾಲಯದ ಒಳಕ್ಕೆ ಪ್ರವೇಶಿಸಬೇಕು. ಮಹಿಳೆಯರಿಗೆ ಪ್ರತ್ಯೇಕವಾಗಿ ಮುಚ್ಚಿದ ಕೊಳಗಳಿವೆ. ದೇವಸ್ಥಾನದ ಆವರಣದಲ್ಲಿ ಕುಂಡ ಇದೆ. ಈ ಕುಂಡದ ನೀರನ್ನು ದೇವಾಲಯದೊಳಗಿನ ಶಿವಲಿಂಗಕ್ಕೆ ಅರ್ಪಿಸಲು ಬಳಸಲಾಗುತ್ತದೆ.

ಗಂಟೆ ಅರ್ಪಿಸುತ್ತಾರೆ

ಗಂಟೆ ಅರ್ಪಿಸುತ್ತಾರೆ

PC: Facebook

ಮನೆಯಲ್ಲಿ ಮದುವೆ, ಶಿಶುವಿನ ಜನನದ ಸಂದರ್ಭದಲ್ಲಿ ಈ ದೇವಾಲಯಕ್ಕೆ ಗಂಟೆಗಳನ್ನು ಅರ್ಪಿಸುತ್ತಾರೆ. ಈ ದೇವಾಲಯದಲ್ಲಿ ಮಹಾಶಿವರಾತ್ರಿಯನ್ನುಅ ತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿ ಭಕ್ತರು ಅರ್ಪಿಸಿರುವ ಸಾಕಷ್ಟು ಗಂಟೆಗಳನ್ನು ಕಾಣಬಹುದು.

ಬೆಂಗಳೂರಿನಲ್ಲಿರುವ ಬಾಣಂತಿಮಾರಿ ಬೆಟ್ಟಕ್ಕೆ ಹೋಗಿದ್ದೀರಾ?ಬೆಂಗಳೂರಿನಲ್ಲಿರುವ ಬಾಣಂತಿಮಾರಿ ಬೆಟ್ಟಕ್ಕೆ ಹೋಗಿದ್ದೀರಾ?

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Facebook

ಈ ದೇವಾಲಯಕ್ಕೆ ಮಾರ್ಚ್ ಹಾಗೂ ನವಂಬರ್ ತಿಂಗಳಲ್ಲಿ ಭೇಟಿ ನೀಡುವುದು ಸೂಕ್ತ. ಶಿವರಾತ್ರಿ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆ, ಸಂಭ್ರಮ ನಡೆಯುತ್ತದೆ. ಹಾಗಾಗಿ ಶಿವರಾತ್ರಿ ಸಂದರ್ಭ ಕೂಡಾ ಇಲ್ಲಿಗೆ ಭೇಟಿ ನೀಡಲು ಸೂಕ್ತವಾದದ್ದಾಗಿದೆ.

ಧರ್ಮಶಾಲೆ

ಧರ್ಮಶಾಲೆ

ಇಲ್ಲಿ ಒಂದು ಆಶ್ರಮವಿದೆ. ಧರ್ಮಶಾಲೆ ಇದೆ. ಇಲ್ಲಿಗೆ ಭೇಟಿ ನೀಡುವ ಭಕ್ತರು ಧಣಿದಾಗ ವಿರಮಿಸಿಕೊಳ್ಳಲು ಈ ಧರ್ಮಶಾಲೆಯನ್ನು ನಿರ್ಮಿಸಲಾಗಿದೆ. ಇಲ್ಲಿನ ಪ್ರವಾಸಿಗರಿಗೆ ಒಂದು ರೀತಿಯ ಆಶ್ರಯ ತಾಣ ಇದಾಗಿದೆ. ಈ ದೇವಾಲಯದಲ್ಲಿ ಸಾಕಷ್ಟು ಋಷಿಮುನಿಗಳು ತಪಸ್ಸು ಮಾಡಿದ್ದಾರೆ.

ಔರಂಗಜೇಬನನ್ನೇ ನಡುಗಿಸಿದ ಧ್ಯಾನಾಂಜನೇಯನ ದರ್ಶನ ಪಡೆದ್ರೆ ಎಲ್ಲವೂ ಶುಭವೇಔರಂಗಜೇಬನನ್ನೇ ನಡುಗಿಸಿದ ಧ್ಯಾನಾಂಜನೇಯನ ದರ್ಶನ ಪಡೆದ್ರೆ ಎಲ್ಲವೂ ಶುಭವೇ

ಇತರ ಆಕರ್ಷಣೀಯ ಸ್ಥಳಗಳು

ಇತರ ಆಕರ್ಷಣೀಯ ಸ್ಥಳಗಳು

PC:Erzeeshan

ಲಾನ್ಸ್ ಡೌನ್ನಲ್ಲಿರುವ ಅನೇಕ ಪ್ರೇಕ್ಷಣೀಯ ತಾಣಗಳಿವೆ. ಅವುಗಳಲ್ಲಿ ಮುಖ್ಯವಾದುದು ತಾರಕೇಶ್ವರ ಮಹದೇವ ದೇವಸ್ಥಾನ, ಭುಲ್ಲಾ ತಾಲ್ ಸರೋವರ, ಗರ್ವಾಲ್ ರೈಫಲ್ಸ್‌ ವಸ್ತುಸಂಗ್ರಹಾಲಯ, ಟಿಪ್ ಇನ್ ಟಾಪ್ ಮುಂತಾದವುಗಳು.

ಭುಲ್ಲಾ ತಾಲ್ ಸರೋವರ

ಭುಲ್ಲಾ ತಾಲ್ ಸರೋವರ

PC:Priyambada Nath

ಭುಲ್ಲಾ ತಾಲ್ ಸರೋವರ ಲಾನ್ಸ್ ಡೌನ್ ಮಾರುಕಟ್ಟೆಯಿಂದ 2 ಕಿ.ಮೀ ದೂರದಲ್ಲಿದೆ. ಭುಲ್ಲಾ ತಾಲ್ ಕೆರೆಯು ಲಾನ್ಸ್ ಡೌನ್ ಪಟ್ಟಣದಲ್ಲಿರುವ ಒಂದು ಸಣ್ಣ ಕೃತಕ ಕೆರೆಯಾಗಿದೆ. ಭಾರತೀಯ ಸೈನ್ಯದಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಟ್ಟಿರುವ ಭುಲ್ಲಾ ಸರೋವರವು ಭುಲ್ಲಾ ತಾಲ್ ಎಂದೂ ಕರೆಯಲ್ಪಡುತ್ತದೆ. ಇದು ಲಾನ್ಸ್ ಡೌನ್‌ನಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಭುಲ್ಲಾ ಸರೋವರವು ಪ್ರಸಿದ್ಧ ಸ್ಥಳವಾಗಿದೆ ಮತ್ತು ಲಾನ್ಸ್ ಡೌನ್‌ನಲ್ಲಿ ಒಂದು ಪರಿಪೂರ್ಣ ಪಿಕ್ನಿಕ್ ತಾಣವಾಗಿದೆ.

ಗರ್ವಾಲ್ ರೈಫಲ್ಸ್‌ ಅಥವಾ ಡರ್ವಾನ್ ಸಿಂಗ್ ಮ್ಯೂಸಿಯಂ

ಗರ್ವಾಲ್ ರೈಫಲ್ಸ್‌ ಅಥವಾ ಡರ್ವಾನ್ ಸಿಂಗ್ ಮ್ಯೂಸಿಯಂ

PC: Thegarhwalis

ಪ್ಯಾರೇಡ್ ಗ್ರೌಂಡ್ ಬಳಿ ಲಾನ್ಸ್ ಡೌನ್ ಮಾರುಕಟ್ಟೆಯಿಂದ 500 ಮೀಟರ್ ದೂರದಲ್ಲಿರುವ ಡರ್ವಾನ್ ಸಿಂಗ್ ರೆಜಿಮೆಂಟಲ್ ವಸ್ತುಸಂಗ್ರಹಾಲಯವು ಲಾನ್ಸ್ ಡೌನ್ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಈ ವಸ್ತು ಸಂಗ್ರಹಾಲಯವು ಗರ್ವಾಲ್ ರೈಫಲ್ಸ್‌ ಸೇರಿದ ಹಲವಾರು ಪುರಾತನ ಕಲಾಕೃತಿಗಳನ್ನು ಹೊಂದಿದೆ. ರೆಜಿಮೆಂಟಲ್ ಮ್ಯೂಸಿಯಂ ಐತಿಹಾಸಿಕ ರಕ್ಷಣಾ ವಸ್ತುಸಂಗ್ರಹಾಲಯವಾಗಿದ್ದು, ಪ್ರಸಿದ್ಧ ವಿಕ್ಟೋರಿಯಾ ಕ್ರಾಸ್‌ನ ಡರ್ವಾನ್ ಸಿಂಗ್ ನೇಗಿಯವರ ಹೆಸರನ್ನು ಇಡಲಾಗಿದೆ. ಈ ಮ್ಯೂಸಿಯಂ ಒಳಗೆ ಪ್ರವೇಶಿಸಬೇಕಾದರೆ ಒಬ್ಬರಿಗೆ 50ರೂ. ಟಿಕೇಟ್ ನೀಡಬೇಕು.

ಸೇಂಟ್ ಮೇರಿಸ್ ಚರ್ಚ್

ಸೇಂಟ್ ಮೇರಿಸ್ ಚರ್ಚ್

ಸೇಂಟ್ ಮೇರಿಸ್ ಚರ್ಚ್ ಲಾನ್ಸ್ ಡೌನ್‌ನ ಒಂದು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದ್ದು ರಾಯಲ್ ಇಂಜಿನಿಯರ್ಸ್‌ನ ಕರ್ನಲ್ ಎ.ಎಚ್.ಬಿ ಹೂಮ್ ಅವರು ಇದನ್ನು ನಿರ್ಮಿಸಿದರು. ಈ ಚರ್ಚ್ ನಿರ್ಮಾಣವು 1895 ರಲ್ಲಿ ಪ್ರಾರಂಭವಾಯಿತು ಮತ್ತು 1896 ರಲ್ಲಿ ಪೂರ್ಣಗೊಂಡಿತು. 1947 ರ ನಂತರ ಈ ಚರ್ಚ್ ಮುಚ್ಚಲ್ಪಟ್ಟಿತು. ನಂತರ ಇದನ್ನು ಗರ್ವಾಲ್ ರೈಫಲ್ಸ್ ರೆಜಿಮೆಂಟಲ್ ಸೆಂಟರ್ ಮೂಲಕ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು.

ಟಿಪ್ ಇನ್ ಟಾಪ್

ಟಿಪ್ ಇನ್ ಟಾಪ್

ಲಾನ್ಸ್ಡೌನ್ ಮಾರ್ಕೆಟ್‌ನಿಂದ 2.5 ಕಿ.ಮೀ ದೂರದಲ್ಲಿ ಟಿಪ್ ಇನ್ ಟಾಪ್ ಎಂದು ಕರೆಯಲ್ಪಡುವ ಟಿಪ್-ಇನ್-ಟಾಪ್ ಲಾನ್ಸ್ ಡೌನ್ನ ಸೇಂಟ್ ಮೇರಿಸ್ ಚರ್ಚ್ ಸಮೀಪವಿರುವ ಪರ್ವತದಲ್ಲಿದೆ. ಲಾನ್ಸ್ ಡೌನ್ಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಇದು ಜನಪ್ರಿಯ ತಾಣವಾಗಿದೆ. ಸಮುದ್ರ ಮಟ್ಟದಿಂದ 2000 ಮೀ ಎತ್ತರದಲ್ಲಿರುವ ಟಿಫಿನ್ ಟಾಪ್ ಒಂದು ಸುಂದರವಾದ ಪಿಕ್ನಿಕ್ ತಾಣವಾಗಿದ್ದು, ಗರ್ವಾಲ್ ಹಿಮಾಲಯದ ಚೌಖಂಬಾ ಮತ್ತು ತ್ರಿಶೂಲ್ ಶಿಖರಗಳ ಅದ್ಭುತ ನೋಟವನ್ನು ಇದು ಒದಗಿಸುತ್ತದೆ.ಇಲ್ಲಿಂದ ಸೂರ್ಯಾಸ್ತವನ್ನು ನೋಡುವುದು ನಿಜಕ್ಕೂ ಒಂದು ಸುಂದರ ಅನುಭವವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X