Search
  • Follow NativePlanet
Share
» »ತಲಕಾಡುವಿನಿಂದ ಶಿವನಸಮುದ್ರದವರೆಗೆ

ತಲಕಾಡುವಿನಿಂದ ಶಿವನಸಮುದ್ರದವರೆಗೆ

By Vijay

ಮಳೆಗಾಲ ತನ್ನ ಝೇಂಕಾರವನ್ನು ಈಗ ತಾನೆ ಕಡಿಮೆ ಮಾಡಿದೆ. ವಾತಾವರಣದಲ್ಲಿ ಪಾದರಸದ ಪ್ರಮಾಣ ಹಿತಕರವಾಗಿದೆ. ಭೂಮಿಯ ಮೇಲೆ ಅಲ್ಲಲ್ಲಿ ಬರಿದಾಗಿ ಬೇಸರ ಮೂಡಿಸುತ್ತಿದ್ದ ಚಿಕ್ಕ ಪುಟ್ಟ ಹಳ್ಳ ಕೊಳ್ಳಗಳು ನೀರಿನಿಂದ ತುಂಬಿದ್ದು ಕಂಗೊಳಿಸುತ್ತಿವೆ. ಪಶು ಪಕ್ಷಿಗಳು ಯಾವುದೆ ಕಷ್ಟಗಳಿಲ್ಲದೆ ಸಮೃದ್ಧವಾಗಿ ದೊರಕುತ್ತಿರುವ ಆಹಾರವನ್ನು ಆನಂದವಾಗಿ ಭಕ್ಷಿಸುತ್ತಿವೆ.

ಅಷ್ಟೆ ಅಲ್ಲ, ಮೈನೆರೆದಿರುವ ಹಸಿರು ಸಂಪತ್ತು ಶುಭ್ರ, ಶುಚಿಗೊಂಡು ಫಲವತ್ತಾಗಿ ಚಿಗುರತೊಡಗಿವೆ. ನದಿ, ಕೆರೆ, ತೊರೆಗಳು, ಜಲಪಾತಗಳು ಇನ್ನಿಲ್ಲದ ಉತ್ಸಾಹದಿಂದ ಭೋರ್ಗೆರೆಯುತ್ತ ಹರಿಯುತ್ತಿವೆ. ಒಟ್ಟರೆಯಾಗಿ ಇವೆಲ್ಲ ಸಾಂಕೇತಿಕವಾಗಿ ಸೂಚಿಸುತ್ತಿರುವುದು, "ಇದೆ ಪ್ರವಾಸ ಯೋಗ್ಯ ಸಮಯವೆಂದು".

ಸರಿ, ಮತ್ತಿನೇಕೆ ತಡ....ಒಂದು ದಿನದಷ್ಟು ಸಮಯವಿದೆಯಾ? ಅಂದರೆ ಹೊರಟುಬಿಡಿ ತಲಕಾಡುವಿನಿಂದ ಶಿವನಸಮುದ್ರದೆಡೆ ಒಂದು ಸುಂದರ, ಆಕರ್ಷಕ ಪಯಣ. ಬೆಂಗಳೂರಿನಿಂದ ತಲಕಾಡು ಸುಮಾರು 130 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ಎರಡು ಪ್ರಮುಖ ಆಯ್ಕೆಗಳಿವೆ. ಒಂದು ಮೈಸೂರು ರಸ್ತೆಯಿಂದ ಸಾಗುತ್ತ ವೃಷಭಾವತಿ ನಾಲೆಯ ಹತ್ತಿರ ಎಡ ತಿರುವು ಪಡೆದು ಕನಕಪುರ ರಸ್ತೆಯ ಮೂಲಕ ಹೋಗಬಹುದಾದರೆ, ಇನ್ನೊಂದು ಮೈಸೂರು ರಸ್ತೆಯ ಮೂಲಕ ಮದ್ದೂರಿನವರೆಗೂ ತೆರಳಿ ಅಲ್ಲಿಂದ ಮಳವಳ್ಳಿಯೆಡೆಗೆ ಸಾಗುತ್ತ ತಲಕಾಡನ್ನು ಪ್ರವೇಶಿಸಬಹುದು.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಮೂಲತಃ ತಲಕಾಡಿಗೆ "ತಲಕಾಡು" ಎಂಬ ಹೆಸರು ಬರಲು ಅದರ ಹಿಂದೆ ಒಂದು ಸ್ವಾರಸ್ಯಕರವಾದ ಘಟನೆಯಿದೆ. ಹಿಂದೆ ಒಮ್ಮೆ ಈ ಪ್ರದೇಶದಲ್ಲಿ ಬೇಟೆಯಾಡಲು ಇಬ್ಬರು ಬೇಟೆಗಾರರು ಬಂದಿದ್ದರು. ಅವರ ಹೆಸರುಗಳು "ತಲ" ಮತ್ತು "ಕಾಡ" ಎಂದಿತ್ತು.

ಚಿತ್ರಕೃಪೆ: Ashwin Kumar

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಹೀಗೆ ಬೇಟೆಗಾಗಿ ಅಲೆಯುವಾಗ ಒಂದು ಸ್ಥಳದಲ್ಲಿ ಹುದುಗಿಕೊಂಡಿದ್ದ ಒಂದು ವಸ್ತುವಿನ ಅನುಭವ ಅವರಿಗುಂಟಾಯಿತು. ಕುತೂಹಲ ತಡೆಯಲಾಗದೆ ತಮ್ಮಲ್ಲಿದ್ದ ಕೊಡಲಿಯಿಂದ ಆ ವಸ್ತುವಿಗೆ ಒಂದು ಹೊಡೆತ ಕೊಟ್ಟರು. ನಂತರ ತಿಳಿದುಬಂದ ವಿಷಯವೆಂದರೆ ಆ ವಸ್ತು ಉದ್ಭವ ಶಿವಲಿಂಗವಾಗಿತ್ತೆಂದು.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಈ ರೀತಿಯಾಗಿ ತಲ ಮತ್ತು ಕಾಡ ಬೇಟೆಗಾರರಿಂದ ಈ ಪದೇಶಕ್ಕೆ ತಲಕಾಡು ಎಂಬ ಹೆಸರು ಬಂದಿತು ಹಾಗೂ ಇಂದಿಗೂ ಸಹ ಇಲ್ಲಿರುವ ವೈದ್ಯನಾಥೇಶ್ವರ ದೇವಾಲಯದಲ್ಲಿ ಕೊಡಲಿ ಪೆಟ್ಟಿನಿಂದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುವ ಆ ಶಿವಲಿಂಗವನ್ನು ಕಾಣಬಹುದಾಗಿದೆ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಮತ್ತೊಂದು ಸ್ವಾರಸ್ಯಕರ ಸಂಗತಿಯೆಂದರೆ ಈ ಸ್ಥಳವು ಮರಳಿನಿಂದ ಆವೃತವಾಗಿರುವುದು. ಹಿಂದೆ ಈ ಸ್ಥಳದ ಆಡಳಿತಗಾರ ಅನಾರೋಗ್ಯದಿಂದ ಬಳಲುತ್ತಿದ್ದನಂತೆ. ಅವನ ಮಡದಿಯು ಅವನ ಆರೋಗ್ಯ ವೃದ್ಧಿಯ ದೃಷ್ಟಿಯಿಂದ ಪ್ರತಿ ವಾರ ಶ್ರೀರಂಗಪಟ್ಟಣದ ಶ್ರೀರಂಗ ದೇವರ ಅಲಂಕಾರಕ್ಕೆ (ಕೆಲವರ ಪ್ರಕಾರ ನಿಮಿಷಾಂಬ ದೇವಿಯ ಅಲಂಕಾರ ಎಂದೂ ಹೇಳಲಾಗುತ್ತದೆ.) ತನ್ನ ಆಭರಣಗಳನ್ನು ಕೊಡುತ್ತಿದ್ದಳು.

ಚಿತ್ರಕೃಪೆ: Ashwin Kumar

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಮೈಸೂರಿನ ಮಹಾರಾಜರಿಗೆ ಇತ್ತ ರಾಣಿಯ ಆ ಆಭರಣಗಳ ಮೋಹ ಉಂಟಾಗಿ ಅದನ್ನು ಪಡೆಯಲು ಅವಳ ಮೇಲೆ ಆಕ್ರಮಣ ಮಾಡಲು ಸಿದ್ಧತೆ ಮಾಡಿದರು. ಇದರಿಂದ ಮನನೊಂದ ಆ ರಾಣಿಯು "ತಲಕಾಡು ಮರಳಾಗಿ, ಮಾಲಿಂಗಿ ಮಡುವಾಗಿ, ಮೈಸೂರು ದೊರೆಗೆ ಮಕ್ಕಳಾಗದೆ ಹೋಗಲಿ" ಎಂದು ಶಾಪವಿತ್ತು ಕಾವೇರಿ ನದಿಯಲ್ಲಿ ಹಾರಿ ತನ್ನ ಪ್ರಾಣ ತೊರೆದಳು.

ಚಿತ್ರಕೃಪೆ: Sankara Subramanian

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಶಾಪದ ಪರಿಣಾಮವೊ ಅಥವಾ ಕಾಕತಾಳಿಯೊ ಗೊತ್ತಿಲ್ಲ ಇಂದಿಗೂ ಸಹ ತಲಕಾಡು ಮರಳಿನಿಂದ ಆವರಿಸಿದೆ ಹಾಗೂ 17 ನೇಯ ಶತಮಾನದ ನಂತರದಿಂದ ಮೈಸೂರು ಸಂಸ್ಥಾನ ನ್ಯಾಯಸಮ್ಮತವಾದ ವಂಶಸ್ಥನನ್ನು ಕಂಡುಕೊಳ್ಳುವಲ್ಲಿ ಅಸಫಲವಾಗಿದೆ.

ಚಿತ್ರಕೃಪೆ: Abhijeet Rane

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಇಲ್ಲಿನ ಮರಳನ್ನು ನೋಡಿದಾಗ ಒಮ್ಮೊಮ್ಮೆ ಇದು ಕಾವೇರಿ ನದಿಯ ದಂಡೆಯ ಮೇಲಿದ್ದುದರಿಂದ ನದಿ ಮರಳಾಗಿರಬೇಕೆಂದು ಅನ್ನಿಸುತ್ತದೆ. ಆದರೆ ಅಚ್ಚರಿಯ ಸಂಗತಿ ಎಂದರೆ ಈ ಮರಳಿನಿಂದ ಯಾವುದೆ ಪ್ರಯೋಜನವಿಲ್ಲವಂತೆ! ಸ್ಥಳೀಯರ ಪ್ರಕಾರ, ಇದು ಕಟ್ಟಡ ನಿರ್ಮಾಣಕ್ಕೂ ಯೋಗ್ಯವಾಗಿಲ್ಲವಂತೆ. ಏಕೆಂದರೆ ಇದು ಶಾಪದ ಮರಳಾಗಿದೆ. ಅಷ್ಟಕ್ಕೂ ಈ ಸ್ಥಳದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಸ್ವಲ್ಪವೂ ಮರಳಿಲ್ಲದಿರುವುದು, ಕೇವಲ ಈ ಸ್ಥಳದಲ್ಲಿ ಮಾತ್ರ ಇರುವುದು ಒಂದು ಸೋಜಿಗವೇ ಹೌದು.

ಚಿತ್ರಕೃಪೆ: Ashwin Kumar

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ತಲಕಾಡು ಮುಖ್ಯವಾಗಿ ಪ್ರಸಿದ್ಧವಾಗಿರುವುದು ತನ್ನಲ್ಲಿರುವ ಪಂಚಲಿಂಗೇಶ್ವರ ದೇವಾಲಯಗಳಿಗಾಗಿ. ಇಲ್ಲಿರುವ ಆ ಪಂಚಲಿಂಗೇಶ್ವರಗಳೆಂದರೆ ವೈದ್ಯನಾಥೇಶ್ವರ, ಪಾತಾಳೇಶ್ವರ, ಮರಳೇಶ್ವರ, ಅರ್ಕೇಶ್ವರ ಹಾಗೂ ಮಲ್ಲಿಕಾರ್ಜುನೇಶ್ವರ. ಇವುಗಳಲ್ಲಿ ತಾರಕೇಶ್ವರ ಹಾಗೂ ಮಲ್ಲಿಕಾರ್ಜುನೇಶ್ವರ ದೇವಸ್ಥಾನಗಳು ಸ್ವಲ್ಪ ದೂರದಲ್ಲಿದ್ದು, ಮಿಕ್ಕ ಮೂರು ಸ್ಥಳಗಳು ಒಂದೆ ಸ್ಥಳದಲ್ಲಿ ಕೆಲ ಸಿಮಿತ ದೂರಗಳಲ್ಲಿ ನಿರ್ಮಿಸಲ್ಪಟ್ಟಿವೆ.

ಚಿತ್ರಕೃಪೆ: Ashwin Kumar

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಶ್ರೀ ವೈದ್ಯನಾಥೇಶ್ವರ ದೇವಾಲಯದ ಸನ್ನಿಧಿ. ಚೋಳರಿಂದ ನಿರ್ಮಿಸಲ್ಪಟ್ಟ ಈ ದೇವಾಲಯವು ಆಕರ್ಷಕ ವಾಸ್ತುಶಿಲ್ಪಗಳಿಂದ ಕೂಡಿದೆ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ದೇವಾಲಯದ ಗೋಡೆಯ ಮೇಲೆ ಕೆತ್ತಲಾದ ವಿಜಯ ಗಣೇಶ. ಕುದುರೆಯ ಮೇಲೆ ವಿಹರಿಸುತ್ತಿರುವ ಈ ಗಣೇಶ ಅಪರೂಪ. ಮುಂಭಾಗವನ್ನು ಒಂದು ಕೈಯಿಂದ ಮುಚ್ಚಿ ನೋಡಿದಾಗ ಹಿಂಭಾಗದಿಂದ ಗಣೇಶನು ಮೂಷಕದ ಮೇಲೆ ಕುಳಿತಿರುವ ಹಾಗೆ ಗೋಚರಿಸುತ್ತದೆ.

ಚಿತ್ರಕೃಪೆ: Ashwin Kumar

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಸಾಮಾನ್ಯವಾಗಿ ವೈಕುಂಠಕ್ಕೆ/ನಾರಾಯಣನಿಗೆ ದ್ವಾರಪಾಲಕರಿರುವುದು ಗೊತ್ತಿದೆ. ಆದರೆ ಇಲ್ಲಿರುವ ವೈದ್ಯನಾಥೇಶ್ವರನಿಗೆ ಇಬ್ಬರು ದ್ವಾರಪಾಲಕರಿದ್ದಾರೆ. ಅವರೆ ನಂದಿ ಮತ್ತು ಮಹಾಕಾಳ. ನಂದಿ ದೇವಗಣಕ್ಕೆ ಸಂಬಂಧಿಸಿದ್ದರೆ ಮಹಾಕಾಳ ರಾಕ್ಷಸ ಗಣದವನಾಗಿರುತ್ತಾನೆ. ಚಿತ್ರದಲ್ಲಿರುವುದು ನಂದಿ. ಹೊಟ್ಟೆ/ಎದೆಯ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಂದಿಯ/ಎತ್ತಿನ ಮುಖವು ಗೋಚರಿಸುತ್ತದೆ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಇದು ಮಹಾಕಾಳನ ವಿಗ್ರಹ. ಪ್ರತಿ ಬೆರುಳುಗಳು, ಅದರಲ್ಲಿ ಹಾಕಿಕೊಂಡಿರುವ ಉಂಗುರಗಳನ್ನು ಬಲು ಸೂಕ್ಷ್ಮವಾಗಿ ಕೆತ್ತಲಾಗಿದೆ. ಇಲ್ಲಿಯೂ ಹೊಟ್ಟೆ/ಎದೆಯ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಂದಿಯ/ಎತ್ತಿನ ಮುಖವು ಗೋಚರಿಸುತ್ತದೆ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಮತ್ತೊಂದು ಸುಂದರ ಕೆತ್ತನೆ. ಮೂರು ಮುಖಗಳ ಹಸುಗಳು. ಪ್ರತಿ ಎರಡು ಮುಖಗಳನ್ನು ಮುಚ್ಚಿ ನೋಡಿದಾಗ ಒಂದು ಹಸು ಯಾವುದಾದರೊಂದು ಕಾರ್ಯದಲ್ಲಿ ತೊಡಗಿರುವುದು ಸುಲಭವಾಗಿ ಗೋಚರಿಸುತ್ತದೆ. ಸೂಕ್ಷಮವಾಗಿ ಗಮನಿಸಿ ನೋಡಿ. ಒಂದರಲ್ಲಿ ಲಿಂಗವನ್ನು ಶುಚಿಗೊಳಿಸುತ್ತಿದ್ದರೆ, ಮತ್ತೊಂದರಲ್ಲಿ ಕ್ಷೇರಾಭಿಷೇಕದ ಸಮಯದಲ್ಲಿ ಕಾವಲಕಾಯುತ್ತಿರುವ ಹಾಗೆ ಕಂಡುಬರುತ್ತದೆ.

ಚಿತ್ರಕೃಪೆ: Ashwin Kumar

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಮತ್ತೊಂದು ವಿಶಿಷ್ಟ ರಚನೆ. ಇವು ಕಲ್ಲಿನ ರಿಂಗುಗಳು. ಅದು ಕೂಡ ಐದು ಹೆಡೆಯ ಸರ್ಪದ ಕೊರಳಿಗಿರುವುದು. ಕೌತುಕಮ ಅಂಶವೆಂದರೆ ಈ ಕಲ್ಲಿನ ರಿಂಗುಗಳು ಯಾವುದೆ ರೀತಿಯ ಜೋಡಣೆ ಹೊಂದಿಲ್ಲ. ಅರ್ಥಾತ್ ಒಂದೆ ಕಲ್ಲಿನಲ್ಲಿ ಒಂದಕ್ಕೊಂದು ಸೇರಿರುವ ಹಾಗೇ ಅತಿ ನೈಪುಣ್ಯತೆಯಿಂದ ಕೆತ್ತಲಾದ ರಚನೆ.

ಚಿತ್ರಕೃಪೆ: Ashwin Kumar

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ವೈದ್ಯನಾಥೇಶ್ವರ ದೇವಾಲಯ ಪ್ರಾಂಗಣದಲ್ಲಿರುವ ಪಾರಿಜಾತ ಗಿಡ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ವೈದ್ಯನಾಥೇಶ್ವರ ದೇವಾಲಯದಿಂದ ಕೀರ್ತಿನಾರಾಯಣ ದೇವಸ್ಥಾನದೆಡೆ ಸಾಗುವಾಗ ಕಂಡುಬರುವ ಪುರಾತನ ಕಲ್ಯಾಣಿ. ಕಾರ್ತಿಕ ಮಾಸದ ಸಂದರ್ಭದಲ್ಲಿ ಲಕ್ಷ ದೀಪೋತ್ಸವವನ್ನು ಇಲ್ಲಿ ಆಚರಿಸಲಾಗುತ್ತದೆ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಕೀರ್ತಿ ನಾರಾಯಣ ದೇವಸ್ಥಾನ. ಈ ದೇವಸ್ಥಾನವು ಹಿಂದೆ ಸಂಪೂರ್ಣವಾಗಿ ಮುಚ್ಚಿಹೋಗಿತ್ತು. ಯಶಸ್ವಿಯಾಗಿ ಉತ್ಖನನ ನಡೆಸಿ ಹೊರ ತೆಗೆಯಾಲಾದ ದೇವಸ್ಥಾನವಿದು. ಪ್ರಸ್ತುತ ದೇವಸ್ಥಾನದ ಕಾಮಗಾರಿಯು ಇನ್ನೂ ಚಾಲ್ತಿಯಲ್ಲಿದೆ. ಇದು ಮಹಾದ್ವಾರವಾಗಿದ್ದು ಇದರ ಹಿಂದೆ ಮುಖ್ಯ ದೇವಾಲಯದ ನಿರ್ಮಾಣವಾಗುತ್ತಿದೆ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಕೀರ್ತಿನಾರಾಯಣ ದೇವಸ್ಥಾನದ ನಂತರ ಮತ್ತೆ ಸ್ವಲ್ಪ ಹಿಂದಕ್ಕೆ ಬಂದು ಎಡ ತಿರುಗಿ ಚೌಡೇಶ್ವರಿ ದೇಗುಲಕ್ಕೆ ಭೇಟಿ ನೀಡಬಹುದು. ಇಲ್ಲಿನ ವಿಗ್ರಹ ಪಾದಗಳಲ್ಲಿ ಶ್ರೀಚಕ್ರ ಹೊಂದಿರುವ ದೇವಿಯ ವಿಗ್ರಹವಾಗಿದೆ. ದರುಶನ ಪಡೆದು ಮರಳಿನಲ್ಲಿ ಮುದೆ ಸಾಗುತ್ತ ಮರಳೇಶ್ವರ ದೇವಾಲಯಕ್ಕೆ ಭೇಟಿ ನೀಡಬಹುದು. ಚಿತ್ರದಲ್ಲಿರುವುದು ಮರಳೇಶ್ವರ ದೇವಸ್ಥಾನ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಮರಳೇಶ್ವರನ ದರುಶನದ ನಂತರ ಮುಂದೆ ಸಾಗಿ ಪಾತಾಳೇಶ್ವರ ದೇಗುಲಕ್ಕೆ ಭೇಟಿ ನೀಡಬಹುದು. ಆದರೆ ಗಮನದಲ್ಲಿಡಬೇಕಾದ ಅಂಶವೆಂದರೆ ಸಾಗುತ್ತಿರುವಾಗ ಮಂಗಗಳ ಉಪಟಳ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಮುಂತಾದ ಬ್ಯಾಗುಗಳಿದ್ದರೆ ಜಾಗೃತೆವಹಿಸಿರಬೇಕು. ಚಿತ್ರದಲ್ಲಿರುವುದು ಪಾತಾಳೇಶ್ವರ ದೇಗುಲ.

ಚಿತ್ರಕೃಪೆ: Abhijeet Rane

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಪಾತಾಳೇಶ್ವರ ದರುಶನದ ನಂತರ ತಲಕಾಡಿನ ಮನರಂಜನಾ ಆಕರ್ಷಣೆಯಾದ ನದಿ ತೀರಕ್ಕೆ ಭೇಟಿ ನೀಡಬಹುದು. ಪಾತಾಳೇಶ್ವರದಿಂದ ನದಿ ತೀರಕ್ಕೆ ಹೋಗುವ ದಾರಿ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ನದಿ ತೀರದ ಪ್ರದೇಶದಲ್ಲಿ ಸಾಕಷ್ಟು ಉಪಹಾರಗೃಹಗಳು, ಕುರುಕುಲು ತಿಂಡಿಗಳ ಮುಗ್ಗಟ್ಟುಗಳು, ನೀರಿನಲ್ಲಿಳೆಬೇಕೆಂದರೆ ಕಡಿಮೆ ಬೆಲೆಯಲ್ಲಿ ದೊರೆಯುವ ಬಟ್ಟೆ ಬರೆಗಳ ಅಂಗಡಿಗಳು ಲಭ್ಯವಿರುತ್ತವೆ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಅಲ್ಲದೆ ತೆಪ್ಪ ಸವಾರಿಯೂ ಕೂಡ ಒಂದು ವಿಶಿಷ್ಟ ಅನುಭೂತಿಯನ್ನು ಕರುಣಿಸುತ್ತದೆ. ಒಬ್ಬರಿಗೆ ಇಂತಿಷ್ಟು ಅಂತ ಬೆಲೆ ಮೊದಲೆ ನಿಗದಿಪಡಿಸಿ ತೆಪ್ಪ ಸವಾರಿಯ ಆನಂದವನ್ನು ಪಡೆಯಬಹುದು.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ತಲಕಾಡುವಿನಲ್ಲಿ ಹರಿದಿರುವ ಕಾವೇರಿ ನದಿಯ ಸುಂದರ ನೋಟ. ನದಿಯಲ್ಲಿ ಆಟ ಆಡುತ್ತ ಆನಂದಿಸುತ್ತಿರುವ ಪ್ರವಾಸಿಗರು. ಗಮನಿಸಬೇಕಾದ ಒಂದು ಸಂಗತಿಯೆಂದರೆ ನದಿಯಲ್ಲಿ ಮಿಂದಾದ ಮೇಲೆ ಬಟ್ಟೆ ಬದಲಿಸಲು ಸ್ತ್ರೀಯರಿಗೆ ಹಾಗೂ ಪುರುಷರಿಗೆಂದು ಪ್ರತ್ಯೇಕ ವ್ಯವಸ್ಥೆಗಳಿವೆ. ಮತ್ತೊಂದು ವಿಷಯವೆಂದರೆ ಹುಡುಗಿಯರಿಗೆ ಚುಡಾಯಿಸುವುದಾಗಲಿ, ಮದ್ಯ ಸೇವನೆಯಾಗಲಿ ನಿಷೇಧವಿರುವುದರಿಂದ ಎಲ್ಲರೂ ನಿರಾತಂಕವಾಗಿ ಆನಂದಿಸಬಹುದು.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ತಲಕಾಡುವಿನಲ್ಲಿ ಹರಿದಿರುವ ಕಾವೇರಿ ನದಿಯ ಸುಂದರ ನೋಟ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ತಲಕಾಡುವಿನಲ್ಲಿ ಹರಿದಿರುವ ಕಾವೇರಿ ನದಿಯ ಸುಂದರ ನೋಟ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ತಲಕಾಡುವಿನಲ್ಲಿ ಹರಿದಿರುವ ಕಾವೇರಿ ನದಿಯ ಸುಂದರ ನೋಟ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ತಲೆಕಾಡು ಪಂಚಲಿಂಗೇಶ್ವರ ದರ್ಶನ, ನದಿಯ ತಟದಲ್ಲಿ ವಿಶ್ರಾಂತಿ, ಮನರಂಜನೆ ಪಡೆದು ಮುಂದೆ ಸಾಗುತ್ತ ಬೆಳಕವಾಡಿ ಎಂಬ ಗ್ರಾಮದ ಮೂಲಕ ಶಿವನಸಮುದ್ರದೇಡೆ ಪಯಣಿಸಬಹುದು. ಹೆಚ್ಚು ಕಮ್ಮಿ ಇದು ತಲಕಾಡುವಿನಿಂದ ಸುಮಾರು 25 ರಿಂದ 30 ಕಿ.ಮೀ ಗಳಷ್ಟು ದೂರದಲ್ಲಿದೆ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಶಿವನಸಮುದ್ರವು ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳಿಗೆ ಪ್ರಖ್ಯಾತಿ ಪಡೆದಿದೆ. ಮಳೆಗಾಲದ ಮಧ್ಯದ ಸಮಯದಿಂದ ಹಿಡಿದು ಹೆಚ್ಚು ಕಮ್ಮಿ ಚಳಿಗಾಲದವರೆಗೆ ಕಾವೇರಿ ನೀರು ಹಾಲ್ನೋರೆಯಂತೆ ಹೂಂಕಾರ ಹಾಕುತ್ತ ರಭಸದಿಂದ ಭುವಿಗೆ ಬಿಳುವುದನ್ನು ನೋಡಿದಾಗ ರೋಮ ರೋಮಗಳೂ ಸೆಟೆದು ನಿಲ್ಲುತ್ತವೆ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಈ ಜಲಪಾತಗಳನ್ನು ಸ್ಪಷ್ಟವಾಗಿ ವೀಕ್ಷಿಸಲು ವೀಕ್ಷಣಾ ಸ್ಥಳವೊಂದು ನಿರ್ಮಾಣ ಮಾಡಲಾಗಿದ್ದು, ಅಲ್ಲಿಂದ ಜಲಪಾತದ ಅತಿ ಮನಮೋಹಕ ದೃಶ್ಯಗಳನ್ನು ವೀಕ್ಷಿಸಬಹುದು ಹಾಗೂ ನಿಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಬಹುದು.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಗಗನಚುಕ್ಕಿ- ಭರಚುಕ್ಕಿ ಜಲಪಾತದ ಮನಮೋಹಕ ನೋಟ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಗಗನಚುಕ್ಕಿ- ಭರಚುಕ್ಕಿ ಜಲಪಾತದ ಮನಮೋಹಕ ನೋಟ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಗಗನಚುಕ್ಕಿ- ಭರಚುಕ್ಕಿ ಜಲಪಾತದ ಮನಮೋಹಕ ನೋಟ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಗಗನಚುಕ್ಕಿ- ಭರಚುಕ್ಕಿ ಜಲಪಾತದ ಮನಮೋಹಕ ನೋಟ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಗಗನಚುಕ್ಕಿ- ಭರಚುಕ್ಕಿ ಜಲಪಾತದ ಮನಮೋಹಕ ನೋಟ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಗಗನಚುಕ್ಕಿ- ಭರಚುಕ್ಕಿ ಜಲಪಾತದ ಮನಮೋಹಕ ನೋಟ.

ತಲಕಾಡು - ಶಿವನಸಮುದ್ರ:

ತಲಕಾಡು - ಶಿವನಸಮುದ್ರ:

ಗಗನಚುಕ್ಕಿ- ಭರಚುಕ್ಕಿ ಜಲಪಾತದ ಮನಮೋಹಕ ನೋಟ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X