Search
  • Follow NativePlanet
Share
» »ತಾಜ್ ಮಹಲಿನಲ್ಲಿ ಎಷ್ಟು ರಹಸ್ಯ ಕೋಣೆಗಳು ಇವೆ ಗೊತ್ತ?

ತಾಜ್ ಮಹಲಿನಲ್ಲಿ ಎಷ್ಟು ರಹಸ್ಯ ಕೋಣೆಗಳು ಇವೆ ಗೊತ್ತ?

ತಾಜ್ ಮಹಲ್ ಪ್ರಪಂಚದಲ್ಲಿನ 7 ಅದ್ಭುತಗಳಲ್ಲಿ ಇದು ಕೂಡ ಒಂದು. ಮುಂತಾಜ್‍ಗಾಗಿ ಷಹಜಹಾನ್ ನಿರ್ಮಾಣ ಮಾಡಿರುವ ಪ್ರೇಮ ಮಂದಿರ ಇದಾಗಿದೆ. ಇದು ದೊಡ್ಡ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಆನೇಕ ಮಂದಿ ಪ್ರವಾಸಿಗರು ವಿದೇಶಗಳಿಂದ ಕೂಡ ತಾಜ್ ಮಹಲ್‍ನ

ತಾಜ್ ಮಹಲ್ ಪ್ರಪಂಚದಲ್ಲಿನ 7 ಅದ್ಭುತಗಳಲ್ಲಿ ಇದು ಕೂಡ ಒಂದು. ಮುಂತಾಜ್‍ಗಾಗಿ ಷಹಜಹಾನ್ ನಿರ್ಮಾಣ ಮಾಡಿರುವ ಪ್ರೇಮ ಮಂದಿರ ಇದಾಗಿದೆ. ಇದು ದೊಡ್ಡ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಆನೇಕ ಮಂದಿ ಪ್ರವಾಸಿಗರು ವಿದೇಶಗಳಿಂದ ಕೂಡ ತಾಜ್ ಮಹಲ್‍ನ ಸೌಂದರ್ಯವನ್ನು ಕಾಣಲು ಭೇಟಿ ನೀಡುತ್ತಿರುತ್ತಾರೆ.

ಆದರೆ ವಿದೇಶಗಳಿಂದ ಭೇಟಿ ನೀಡಿರುವ ಪ್ರವಾಸಿಗರು ಹಾಗು ದೇಶಿಯ ಪ್ರವಾಸಿಗರು ಕೇವಲ ಬಾಹ್ಯವಾಗಿ ಕಾಣುವ ತಾಜ್ ಮಹಲ್ ಅನ್ನು ಮಾತ್ರ ಕಾಣುತ್ತಾರೆ. ಆದರೆ ನಿಮಗೆ ಗೊತ್ತ? ತಾಜ್ ಮಹಲ್‍ನಲ್ಲಿ ನಿಮಗೆ ತಿಳಿಯದ ಆನೇಕ ರಹಸ್ಯಗಳನ್ನು ಅಡಗಿಸಿಕೊಂಡಿದೆ ಎಂದು? ತಾಜ್ ಮಹಲ್‍ನಲ್ಲಿನ ಭೂಗರ್ಭದಲ್ಲಿ ಹಲವಾರು ಕೊಠಡಿಗಳು ರಹಸ್ಯವಾಗಿವೆ. ಅಲ್ಲಿಗೆ ತೆರಳಲು ನಮಗೆ ಪ್ರವೇಶ ನೀಡುವುದಿಲ್ಲ. ಆದರೆ ಆ ರಹಸ್ಯವಾದ ಕೊಠಡಿಗಳ ಬಗ್ಗೆ ಪ್ರಚಾರದಲ್ಲಿ ಕೆಲವು ವಿಷಯಗಳು ಇವೆ. ಅವುಗಳ ಬಗ್ಗೆ ವಿವರವಾಗಿ ತಿಳಿಯೋಣ.

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ಈ ಅದ್ಭುತವಾದ ತಾಜ್‍ಮಹಲ್‍ನ ನಿರ್ಮಾಣ ಸಾವಿರಾರು ಕಾರ್ಮಿಕರ, ನಿಪುಣರ ಮತ್ತು ಸುಂದರವಾದ ಕಲ್ಲಿನಿಂದ 1632 ರಲ್ಲಿ ಪ್ರಾರಂಭ ಮಾಡಿದರು. 21 ವರ್ಷಗಳಲ್ಲಿ, 1653 ರಲ್ಲಿ ನಿರ್ಮಾಣವನ್ನು ಪೂರ್ತಿಗೊಳಿಸಿದರು. ಈ ರಮಣೀಯವಾದ ಭವನದಲ್ಲಿ ಮುಖ್ಯವಾದ ಆಕರ್ಷಣೆ ಎಂದರೆ ಷಹಜಹಾನ್‍ನ ಹೆಂಡತಿಯ ಸಮಾಧಿ. ಬಿಳಿ ಕಲ್ಲಿನಿಂದ ನಿರ್ಮಾಣ ಮಾಡಲಾಗಿರುವ ಈ ಸಮಾಧಿಯು ಮುಖ್ಯವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ತಾಜ್ ಮಹಲ್ ಕೂಡ ಸಾಧಾರಣ ಮಸೀದಿಯ ರೂಪಕಲ್ಪನೆಗಳ ಮಾದರಿಯಲ್ಲಿಯೇ 40 ಮೀಟರ್ ಎತ್ತರವಿದ್ದು, ಸಿಮ್ಮೆಟ್ರಿಕಲ್ ಮಿನಾರ್ಲ್‍ನಲ್ಲಿ ಅಲಂಕರಿಸಲ್ಪಟ್ಟಿದೆ. ಈ ಸ್ಥಳಕ್ಕೆ ಯಾವುದೇ ಭೇದ-ಭಾವವಿಲ್ಲದೇ ಎಲ್ಲಾರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ 2 ಬಾಲ್ಕಾನಿಗಳನ್ನು ಕಾಣಬಹುದು.

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ಒಂದು ಕಲಾತ್ಮಕವಾದ, ರಮಣೀಯ ದೃಶ್ಯಗಳಿಂದ ಕೂಡಿರುವ 300 ಮೀಟರ್ ವಿಸ್ತಾರವಾಗಿ ತೋಟ ಕೂಡ ಇದೆ. ಇದು ತಾಜ್ ಮಹಲ್‍ಗೆ ಮತ್ತಷ್ಟು ಮೆರುಗು ಹೆಚ್ಚಿಸುತ್ತಿದೆ. 16 ಹೂವಿನ ದಾರಿಯಲ್ಲಿ ತಾಜ್ ಮಹಲಿನಲ್ಲಿನ ಚರ್ತು ಆಕಾರದಲ್ಲಿನ ಕಮಾನುವಿನ ಕೆಳ ಭಾಗದ ಹಿಂದೆ ಸುರಂಗ ಮಾರ್ಗವಿದೆಯಂತೆ. ಅದರ ಮಾರ್ಗವಾಗಿ ತೆರಳಿದರೆ ರಹಸ್ಯವಾದ ಕೋಣೆಗಳು ದೊರೆಯುತ್ತವೆ.

pc: Asitjain


ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ಹಾಗೆ ತೆರಳಿದರೆ 1080 ಕೋಣೆಗಳು ಕಾಣಿಸುತ್ತವೆ ಎಂತೆ. ಆದರೆ ಒಳ ಭಾಗದಲ್ಲಿ ಪ್ರವೇಶ ಮಾಡಿದರೆ ಹಿಂದಿರುಗುವುದು ತುಂಬ ಕಷ್ಟವಾಗುತ್ತದೆ. ಏಕೆಂದರೆ ಅದರ ಒಳಗೆ ಪದ್ಮವ್ಯೂಹಗಳು ಇರುತ್ತವೆಯಂತೆ. ಅದ್ದರಿಂದಲೇ ಯಾರು ಕೂಡ ಈ ಸ್ಥಳಕ್ಕೆ ತೆರಳಬಾರದು ಎಂದು ಇಟ್ಟಿಗೆಗಳಿಂದ ಹಾಗು ಕಲ್ಲಿನಿಂದ ಮಾರ್ಗವನ್ನು ಮುಚ್ಚಿದ್ದಾರೆ. ಅದರ ಒಳಗೆ ಪ್ರವೇಶ ಮಾಡಲು ಯಾರು ಕೂಡ ಸಾಹಸ ಮಾಡುವುದಿಲ್ಲ.


wikipedia.org

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ಈ ಕೊಠಡಿಗೆ ಇರುವ ಎಲ್ಲಾ ಕಲೆಗಳಿಗೆ ಒಂದೊಂದು ಕಥೆ ಕೂಡ ಇದೆ. ಮುಂತಾಜ್ ಸಮಾಧಿ ಇರುವ ಸ್ಥಳದ ಕೆಳಗಿನ ಭಾಗದಲ್ಲಿ ಪುರಾತನವಾದ ಶಿವಲಿಂಗವಿತ್ತು ಎಂದು, ಆದರೆ ಅದನ್ನು ನಾಶ ಪಡಿಸಿ ಷಹಜಹಾನ್ ತಾಜ್ ಮಹಾಲ್ ನಿರ್ಮಾಣ ಮಾಡಿದನು ಎಂದು ಕೆಲವು ಹೇಳುತ್ತಾರೆ. ಆ ಸಮಾಧಿಯ ಕೆಳಗಿನ ಭಾಗದಲ್ಲಿ ಒಂದು ದೊಡ್ಡದಾದ ಸುರಂಗ ಮಾರ್ಗವಿದೆ ಎಂದು ಅದರಲ್ಲಿ ಪುರಾತನವಾದ ವಿಗ್ರಹಗಳು ಇವೆ ಎಂದು ಇನ್ನು ಕೆಲವರು ಹೇಳುತ್ತಾರೆ.

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ಅದೇ ರೀತಿಯಾಗಿ ಒಬ್ಬ ಲೇಖಕ ಏನು ಹೇಳಿದ್ದಾನೆ ಎಂದರೆ ಅಸಲು ತಾಜ್ ಮಹಾಲ್ ಅನ್ನು ಷಹಜಹಾನ್ ಕಟ್ಟಿಲ್ಲ ಎಂದೂ ಅದನ್ನು ನಿರ್ಮಾಣ ಮಾಡಿದವರು ರಾಜಾಮಾನ್ ಸಿಂಗ್ ಎಂದು ಹೇಳುತ್ತಾರೆ. ಇನ್ನು ಕೆಲವು ಮಂದಿ ತಾಜ್ ಮಹಾಲ್‍ನಲ್ಲಿನ ರಹಸ್ಯವಾದ ಕೊಠಡಿಗಳು ಖಾಲಿಯಾಗಿ ಇರುವುದರಿಂದ ಮುಚ್ಚಿದ್ದಾರೆ ಎಂದು ಹೇಳುತ್ತಾರೆ. ತಾಜ್ ಮಹಲ್‍ನಲ್ಲಿರುವ ಪ್ರಧಾನ ರಹಸ್ಯವಾದ ಕೋಣೆಗಳಲ್ಲಿ ಇದೇ ಎಂದು ಹೇಳುತ್ತಾರೆ.

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ಅದನ್ನು ಇಟ್ಟಿಗೆಗಳಿಂದ ಮುಚ್ಚಿ ಹಾಕಿದ್ದಾರೆ. ಆದರೆ ಇಂದಿನವರೆವಿಗೂ ತಾಜ್ ಮಹಲ್‍ನಲ್ಲಿನ ರಹಸ್ಯ ಕೋಣೆಗಳು ಇವೆ ಎಂದು ಯಾರು ಕೂಡ ದೃಡ ಪಡಿಸಿಲ್ಲ. ಆದರೆ ಅನಂತಪದ್ಮನಾಭ ಸ್ವಾಮಿ ನೆಲಮಾಳಿಗೆಯಲ್ಲಿ ಬೆಳಕಿಗೆ ಬಂದ ಸಂಪತ್ತಿನ ಹಾಗೆ ತಾಜ್ ಮಹಲ್‍ನಲ್ಲಿಯೂ ರಹಸ್ಯವಾದ ಕೋಣೆಗಳು ಬೆಳಕಿಗೆ ಬರುತ್ತದೆಯೇ ಎಂದು ನೋಡಬೇಕು.


wikipedia.org

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ಅದ್ಭುತವಾದ ತಾಜ್ ಮಹಲ್ ಆಗ್ರಾದಲ್ಲಿ ಇದೆ. ಇದು ಉತ್ತರ ಭಾರತ ದೇಶದ ಉತ್ತರ ಪ್ರದೇಶದಲ್ಲಿದೆ. ದೆಹಲಿಯಿಂದ 200 ಕಿ.ಮೀ ದೂರದಲ್ಲಿದೆ. ಆಗ್ರಾದಲ್ಲಿನ ಅದ್ಭುತವಾದ ತಾಜ್ ಮಹಲ್ ಅಲ್ಲದೇ ಆಗ್ರಾ ಕೋಟೆ ಮತ್ತು ಫತೆಪೂರ್ ಸಿಕ್ರಿ ಎಂಬ 2 ಯೊನೆಸ್ಕು ವಿಶ್ವ ಪಾರಂಪರಿಕ ಪ್ರದೇಶಗಳು ಇವೆ.


Fowler&fowler

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ಆಗ್ರಾದ ಚರಿತ್ರೆ ಸುಮಾರು 11 ನೇ ಶತಮಾನದಲ್ಲಿ ಪ್ರಾರಂಭವಾಯಿತು. ಅದರ ಚರಿತ್ರೆ ಕಾಲದಲ್ಲಿ ಆಗ್ರಾ ಹಿಂದು ಮತ್ತು ಮುಸ್ಲಿಂ ಧರ್ಮದ ರಾಜರ ಮಧ್ಯೆ ವರ್ಗಾವಣೆಯಾಗುತ್ತಿತ್ತು. ಹಾಗಾಗಿಯೇ 2 ಸಂಸ್ಕøತ ಮುದ್ರೆಗಳನ್ನು ಇಲ್ಲಿ ಕಾಣಬಹುದಾಗಿದೆ. ಚರಿತ್ರೆ 1526 ರಿಂದ 1658 ರವರೆಗೆ ಮೊಘಲ್ ಸಾಮ್ರಾಜ್ಯ ರಾಜಧಾನಿಯಾಗಿದ್ದ ಆಗ್ರಾ ಮೊಗಲರ ಕಾಲದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯಿತು.

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ಮೊಗಲ್ ಚಕ್ರವರ್ತಿಯಾದ ಬಾಬರ್ 1523 ರಲ್ಲಿ ಆಗ್ರಾ ರಾಜಧಾನಿಯಾಗಿ ವರ್ಗಾಯಿಸಿದನು. ಮೊಗಲ್ ಆಳ್ವಿಕೆಗಾರರು ಪ್ರಖ್ಯಾತವಾದ ಭವನದ ನಿರ್ಮಾಣಗಳಿಗೆ ಮತ್ತು ನಗರಗಳಲ್ಲಿ ಅಸಂಖ್ಯಾತ ಕಲೆಗಳನ್ನು ನಿರ್ಮಾಣ ಮಾಡಿದರು. ಪ್ರತಿ ಚಕ್ರವರ್ತಿಯು ಅತ್ಯಂತ ಸುಂದರವಾದ ಆಡಂಬರದ ಸ್ಮಾರಕ ನಿರ್ಮಾಣವನ್ನು ಮಾಡಲು ಪ್ರಯತ್ನ ಮಾಡಿದರು.

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ಪ್ರಪಂಚ ವ್ಯಾಪಕವಾಗಿ ಗುರುತಿಸಿಕೊಂಡ ಮೊಟ್ಟಮೊದಲ ಪ್ರೇಮದ ಸ್ಮಾರಕವಾಗಿ ಗುರುತಿಸಿಕೊಂಡಿದ್ದೇ ತಾಜ್ ಮಹಲ್. ಇದನ್ನು ಷಹಜಾಹನ್ ತನ್ನ ಪ್ರೀತಿ ಪತ್ನಿಯಾದ ಮುಂತಾಜ್‍ಗಾಗಿ ನಿರ್ಮಾಣ ಮಾಡಿದ. ಚಕ್ರವರ್ತಿ ಅಕ್ಬರ್ ಕೂಡ ಆಗ್ರಾ ಕೋಟೆಯನ್ನು ಪುನರ್ ನಿರ್ಮಾಣ ಮಾಡಿದ.

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ಆಗ್ರಾದಲ್ಲಿ ಮತ್ತು ಸುತ್ತಲೂ ಇರುವ ಪ್ರವಾಸಿ ಸ್ಥಳಗಳು ಆಗ್ರಾದಲ್ಲಿ ಇರುವ ಚಾರಿತ್ರಿಕ ಕಟ್ಟಡಗಳು ಮತ್ತು ಭವನಗಳು ಕೂಡ ಪ್ರಸಿದ್ಧವಾದ ಆಕರ್ಷಣೆಯಾಗಿದೆ. ತಾಜ್ ಮಹಲ್ ಅಲ್ಲದೇ ಯಮುನಾ ನದಿ ತೀರದಲ್ಲಿನ ಆಗ್ರಾ ಕೋಟೆಯನ್ನು ಕೂಡ ಅಕ್ಬರ್ ದಿ ಗ್ರೇಟ್ ಸಮಾಧಿಗೆ ಕೂಡ ಭೇಟಿ ನೀಡಬಹುದಾಗಿದೆ.


wikipedia.org

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ತಾಜ್ ಮಹಲಿನಲ್ಲಿ ರಹಸ್ಯವಾದ ಕೋಣೆಗಳೇ?

ಭಾರತ ದೇಶದಲ್ಲಿನ ಇತರ ನಗರಗಳ ಮಾದರಿಯ ಹಾಗೆ ಆಗ್ರಾ ಕೂಡ ಧರ್ಮದ ಸಮಾನತೆಯನ್ನು ಪ್ರತಿಬಿಂಬಿಸುತ್ತದೆ. ಇಲ್ಲಿನ ಜಾಮ ಮಸೀದಿ, ಪ್ರಸಿದ್ಧ ಹಿಂದೂ ದೇವಾಲಯವಾದ ಭಾಗೇಶ್ವರ ನಾಥ ದೇವಾಲಯಗಳು ಇವೆ. ದೇಶದ ಇತರ ಪ್ರವಾಸಿ ತಾಣಗಳಂತೆಯೇ ಆಗ್ರಾದಲ್ಲಿಯೂ ಕೂಡ ಆನೇಕ ಪ್ರವಾಸಿ ತಾಣಗಳನ್ನು ಕಣ್ಣಾರೆ ಕಂಡು ಆನಂದಿಸಬಹುದಾಗಿದೆ.


Asitjain

ರೈಲು ಮಾರ್ಗದ ಮೂಲಕ

ರೈಲು ಮಾರ್ಗದ ಮೂಲಕ

ಆಗ್ರಾ, ಭಾರತ ದೇಶದ ಒಂದು ಅತ್ಯಂತ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಹಲವಾರು ನಗರಗಳಿಂದ ರೈಲು ಮಾರ್ಗದ ಸೌಲಭ್ಯವನ್ನು ಇಲ್ಲಿದೆ. ಈ ನಗರದಲ್ಲಿ 7 ರೈಲ್ವೆ ನಿಲ್ದಾಣಗಳು ಇವೆ. ತುಂಡ್ಲ ಜಂಕ್ಷನ್ ಸಮೀಪದಾಗಿರುತ್ತದೆ. ಇಲ್ಲಿಂದ ತುಂಡ್ಲ ಜಂಕ್ಷನ್‍ಗೆ 1 ಗಂಟೆಯ ಪ್ರಯಾಣ ಮಾಡಬೇಕಾಗುತ್ತದೆ. ಇಲ್ಲಿ 3 ಪ್ರಧಾನ ರೈಲ್ವೆ ನಿಲ್ದಾಣಗಳು ಇವೆ. ಅವುಗಳೆಂದರೆ ಆಗ್ರಾ ಕೋಟೆ ರೈಲ್ವೆ ಸ್ಟೇಷನ್, ಆಗ್ರಾ ಸಿ.ಎ.ಎನ್.ಟಿ.ಟಿ ರೈಲ್ವೆ ಸ್ಟೇಷನ್ ಮತ್ತು ರಾಜಾ-ಕಿ-ಮಂಡಿ ರೈಲ್ವೆ ಸ್ಟೇಷನ್.

ವಾಯು ಮಾರ್ಗದ ಮೂಲಕ

ವಾಯು ಮಾರ್ಗದ ಮೂಲಕ

ಆಗ್ರಾದ ಸ್ವಂತ ವಿಮಾನ ನಿಲ್ದಾಣವೆಂದರೆ ಅದು ಖೇರಿಯಾ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಸುಮಾರು 5 ಕಿ.ಮೀ ದೂರದಲ್ಲಿ ನಗರಕ್ಕೆ ತಲುಪಬಹುದಾಗಿದೆ. ಇದು ದೇಶ ವ್ಯಾಪಕವಾಗಿ ದೊಡ್ಡ ದೇಶಿಯ ವಿಮಾನ ನಿಲ್ದಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X