Search
  • Follow NativePlanet
Share
» »ತಿರುಪತಿಯ ತಿರುಮಲ ವೆಂಕಟೇಶ್ವರನ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು

ತಿರುಪತಿಯ ತಿರುಮಲ ವೆಂಕಟೇಶ್ವರನ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು

ತಿರುಪತಿಯ ತಿರುಮಲ ವೆಂಕಟೇಶ್ವರ ದೇವಾಲಯವು ಭಾರತದಲ್ಲಿನ ಪ್ರಖ್ಯಾತವಾದ ದೇವಾಲಯದಲ್ಲಿ ಒಂದಾಗಿದೆ. ಈ ಪ್ರಸಿದ್ಧವಾದ ದೇವಾಲಯವು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲ ಪಟ್ಟಣದ ತಿರುಪತಿಯ ಬೆಟ್ಟದ ಮೇಲೆ ನೆಲೆಸಿದ್ದಾನೆ. ಈ ದೇವಾಲಯವನ್ನು ಕಲಿಯುಗ ವೈಕುಂಠ ಎಂದು ಸಹ ಕರೆಯುತ್ತಾರೆ. ತಿರುಪತಿಯ ವೆಂಕಟೇಶ್ವರನಿಗೆ ಬಾಲಾಜಿ, ಗೋವಿಂದ, ಶ್ರೀನಿವಾಸ, ವೆಂಕಟರಮಣ ಎಂದೂ ಇನ್ನೂ ಹಲವಾರು ನಾಮಗಳಿಂದ ಕರೆಯುತ್ತಾರೆ.

ಈ ದೇವಾಲಯವನ್ನು ದ್ರಾವಿಡ ವಾಸ್ತು ಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ವೆಂಕಟೇಶ್ವರ ಸ್ವಾಮಿಯು ಪೂರ್ವ ದಿಕ್ಕಿಗೆ ನಿಂತ ಭಂಗಿಯಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಾನೆ. ದೇಣಿಗೆ ಮತ್ತು ಸಂಪತ್ತು ಪಡೆಯುವ ದೃಷ್ಟಿಯಿಂದ ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯವಾಗಿದೆ. ತಿರುಮಲ ಬೆಟ್ಟಗಳು ಶೇಷಾಚಲಂ ಬೆಟ್ಟಗಳ ಭಾಗವಾಗಿದೆ. ಏಳು ಶಿಖರಗಳು ಏಳು ಮುಖಂಡರನ್ನು ಪ್ರತಿನಿಧಿಸುತ್ತದೆ.

ಸ್ವಯಂ ಭೂ ವಿಷ್ಣುವಿನ ಕ್ಷೇತ್ರದಲ್ಲಿ ಸ್ವಾಮಿಯ ಹಲವಾರು ವಿಶೇಷಗಳಿವೆ. ಈ ದೇವಾಲಯದಲ್ಲಿನ ಹಲವಾರು ರಹಸ್ಯಗಳು ಇಂದಿಗೂ ಜಗತ್ತಿಗೆ ತಿಳಿದಿಲ್ಲ. ಈ ಸ್ವಾಮಿಯ ದೇವಾಲಯದ ಕೆಲವು ವಿಶೇಷವಾದ 10 ಮಾಹಿತಿಗಳನ್ನು ಪ್ರಸ್ತುತ ಲೇಖನದ ಮೂಲಕ ಪಡೆಯಿರಿ.

 ವೆಂಕಟೇಶ್ವರನ ಮೂರ್ತಿ

ವೆಂಕಟೇಶ್ವರನ ಮೂರ್ತಿ

ತಿರುಮಲದಲ್ಲಿರುವ ವೆಂಕಟರಮಣ ಸ್ವಾಮಿಯ ಮೂಲ ವಿಗ್ರಹವು ಎಂದಿಗೂ 43 ಡಿಗ್ರಿ ಉಷ್ಣತೆಯಿಂದ ಕೂಡಿರುತ್ತದೆ. ಸ್ವಾಮಿಯ ವಿಗ್ರಹವು ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿದೆ. ಸಾಮಾನ್ಯವಾಗಿ ಅಷ್ಟು ಎತ್ತರದಲ್ಲಿ ವಾತಾವರಣ ಅತ್ಯಂತ ತಂಪಾಗಿರುತ್ತದೆ. ಅಷ್ಟು ತಂಪಾಗಿದ್ದರು ಕೂಡ ಸ್ವಾಮಿಯ ವಿಗ್ರಹಕ್ಕೆ ಮಾತ್ರ ಸೆಕೆಯಾಗುತ್ತದೆ. ಪ್ರತಿ ದಿನ ಮುಂಜಾನೆ 4 ಗಂಟೆಗೆ ಸ್ವಾಮಿಗೆ ಅಭಿಷೇಕ ನಿರ್ವಹಿಸಿದ ಮೇಲೆಯೂ ಕೂಡ ವಿಗ್ರಹಕ್ಕೆ ಸೆಕೆಯಾಗುತ್ತದೆ ಎಂತೆ. ಆ ಸೆಕೆಯನ್ನು ಪೂಜಾರಿಗಳು ಕೋಮಲವಾದ ವಸ್ತ್ರದಿಂದ ಒರೆಸುತ್ತಾ ಇರುತ್ತಾರೆ.

ಪ್ರತಿ ಗುರುವಾರ ಸ್ವಾಮಿಯ ವಸ್ತ್ರವನ್ನು ತೆಗೆಯಲಾಗುತ್ತದೆ ಎಂತೆ. ಆ ಸಮಯದಲ್ಲಿ ಸ್ವಾಮಿಯು ಧರಿಸಿದ ಆಭರಣ ಎಲ್ಲವೂ ಕೂಡ ಅತ್ಯಂತ ಉಷ್ಣತೆಯಿಂದ ಕೂಡಿರುತ್ತದೆ ಎಂತೆ.


PC:www.wikipedia.org

ದೀಪ

ದೀಪ

ವೆಂಕಟೇಶ್ವರ ಸ್ವಾಮಿ ಗರ್ಭ ಗುಡಿಯಲ್ಲಿ ದೀಪವು ಉರಿಯುತ್ತಿರುತ್ತದೆ. ಅದು ಅಖಂಡ ಜ್ಯೋತಿಯಾಗಿ ಗರ್ಭಗುಡಿಯಲ್ಲಿ ಬೆಳಕು ನೀಡುತ್ತದೆ. ಆ ದೀಪವನ್ನು ಯಾವಾಗಾ ಬೆಳಗಿಸಿದರೂ? ಯಾರು ಬೆಳಗಿಸಿದರು? ಎಂಬ ಪ್ರೆಶ್ನೆಗಳಿಗೆ ಇನ್ನೂ ಸರಿಯಾದ ಸಮಾಧಾನ ದೊರೆತ್ತಿಲ್ಲ. ಆ ದೀಪವು ಎಷ್ಟೋ ಸಾವಿರಾರು ವರ್ಷಗಳಿಂದ ಹಾಗೇಯೆ ಉರಿಯುತ್ತಿದೆ.


PC:Chandru GM

ಜಲಪಾತ

ಜಲಪಾತ

ವೆಂಕಟೇಶ್ವರ ಸ್ವಾಮಿ ಗರ್ಭಗುಡಿಯಲ್ಲಿ ಸ್ವಾಮಿಯ ಮೂರ್ತಿಯ ಹಿಂದೆ ಒಂದು ಜಲಪಾತವಿದೆಯಂತೆ. ಸ್ವಾಮಿಗೆ ಅಲಂಕಾರ ಮಾಡಿ ತೆಗೆದ ಹೂವುಗಳನ್ನು ಜಲಪಾತಕ್ಕೆ ಹಾಕುತ್ತಾರಂತೆ. ಆ ಹೂವುಗಳೆಲ್ಲಾ 20 ಕಿ,ಮೀ ದೂರದಲ್ಲಿರುವ ವೆರ್ಪೇಡು ಎಂಬ ಗ್ರಾಮದಲ್ಲಿ ತೆಲುತ್ತದೆ. ವೆಂಕಟೇಶ್ವರ ಸ್ವಾಮಿಯ ಬೆನ್ನ ಹಿಂದೆ ಕಿವಿ ಇಟ್ಟು ಕೇಳಿದರೆ ಸಮುದ್ರದ ಅಲೆಗಳ ಶಬ್ದ ಕೇಳಿಸುತ್ತದೆ ಎಂತೆ.

ಕೂದಲು

ಕೂದಲು

ವೆಂಕಟೇಶ್ವರ ಸ್ವಾಮಿಗೆ ಕೂದಲು ಇದೆ. ಅ ಕುದಲು ಸ್ವಾಮಿಯ ನಿಜವಾದ ಕೂದಲಾಗಿದೆ. ಸ್ವಾಮಿಗೆ ಎಷ್ಟೇ ಬಾರಿ ಅಭಿಷೇಕ ಮಾಡಿದರೂ ಕೂಡ ಆ ಕುದಲು ಉದರುವುದಾಗಲಿ, ಚಿಕ್ಕಾಗುವುದಾಗಲೀ ಆಗುವುದಿಲ್ಲವಂತೆ.


PC:YOUTUBE

ಗ್ರಾಮ

ಗ್ರಾಮ

ವೆಂಕಟೇಶ್ವರ ಸ್ವಾಮಿಯ ತಿರುಪತಿ ದೇವಾಲಯದಿಂದ ಸುಮಾರು 23 ಕಿ,ಮೀ ದೂರದಲ್ಲಿ ಒಂದು ಗ್ರಾಮವಿದೆ. ಆ ಗ್ರಾಮದಲ್ಲಿ ಹೊರ ವ್ಯಕ್ತಿಗಳಿಗೆ ಅನುಮತಿ ಇಲ್ಲ. ಯಾಕೆಂದರೆ ಆ ಗ್ರಾಮದಿಂದಲೇ ಪ್ರತಿ ದಿನ ಸ್ವಾಮಿಯ ಪೂಜೆಗೆ ಅಗತ್ಯವಿರುವ ಹೂವು, ಹಾಲು, ಮೊಸರು, ಬೆಣ್ಣೆ, ಎಣ್ಣೆ ಇನ್ನೂ ಹಲವಾರು ಪಾರ್ದಾಥಗಳು ತಯಾರಾಗುತ್ತದೆ ಎಂತೆ. ಸ್ವಾಮಿಗೆ ನೀಡುವ ಪ್ರತಿಯೊಂದು ವಸ್ತುವು ಪವಿತ್ರವಾಗಿರಬೇಕಾಗಿರುವುದರಿಂದ ಅದ್ದರಿಂದ ಆ ಗ್ರಾಮ ಪ್ರಜೆಗಳು ನಿಯಮ ನಿಷ್ಟೆಗಳನ್ನು ಅನುಸರಿಸುತ್ತಾರೆ.

PC:YOUTUBE

ಹೂವು

ಹೂವು

ವೆಂಕಟೇಶ್ವರ ಸ್ವಾಮಿಗೆ ಪ್ರತಿದಿನವೂ 7 ರೀತಿಯ ಹೂವಿನ ಮಾಲೆಗಳಿಂದ ಅಲಂಕಾರ ಮಾಡಲಾಗುತ್ತದೆ. ಆ ಹೂವಿನ ಮಾಲೆಗಳನ್ನು ತಯಾರು ಮಾಡಲು 27 ವಿಧವಾದ ಹೂವು 7 ರೀತಿಯ ಎಲೆಗಳನ್ನು ಬಳಸಲಾಗುತ್ತದೆ.

ಈ ಮಾಲೆಗಳು 500 ಕೆ,ಜಿ ಭಾರ ಹಾಗೂ 100 ಅಡಿ ಎತ್ತರದಲ್ಲಿರುತ್ತವೆ ಎಂತೆ. ಸ್ವಾಮಿಗೆ ಹಾಕಲಾಗುವ ಈ 7 ರೀತಿಯ ಮಾಲೆಗಳು ಅತ್ಯಂತ ಪವಿತ್ರವಾದುದು ಎಂದು ಭಾವಿಸಲಾಗುತ್ತದೆ. ಈ ಮಾಲೆಗಳಿಗೆ ಹೆಸರು ಕೂಡ ಇವೆ. 1.ಶಿಖಾಮಣಿ ಹಾರಂ, 2.ಸಾಲಿಗ್ರಾಮ ಮಾಲ, 3.ಕಂಠ ಸರಿ, 4.ವೃಕ್ಷಸ್ಥಳ ಲಕ್ಷ್ಮಿ, 5. ಶಂಖ ಚಕ್ರ, 6. ಕಟಿ ಸರಂ 7. ತಿರುವಡಿ ಮಾಲ.

PC:YOUTUBE

ಕರ್ಪೂರ

ಕರ್ಪೂರ

ವೆಂಕಟೇಶ್ವರ ಸ್ವಾಮಿ ವಿಗ್ರಹಕ್ಕೆ ಪ್ರತಿ ದಿನವೂ ಪಚ್ಚ ಕರ್ಪೂರವನ್ನು ಹಚ್ಚುತ್ತಾರೆ. ಈ ಪಚ್ಚ ಕರ್ಪೂರವು ಅತ್ಯಂತ ಹೆಚ್ಚಾಗಿ ಕೆಮಿಕಲ್‍ಗಳು ಹೊಂದಿರುತ್ತವೆ. ಈ ಪಚ್ಚ ಕರ್ಪೂರವನ್ನು ಕೆಲವು ಕಾಲ ಯಾವುದಾದರೂ ಕಲ್ಲಿಗೆ ಕ್ರಮ ತಪ್ಪದೇ ಬಳಸಿದರೆ ಆ ಕಲ್ಲು ಒಡೆದು ಹೋಗುತ್ತದೆ. ಆದರೆ ಈ ಸ್ವಾಮಿಯ ವಿಗ್ರಹಕ್ಕೆ ಮಾತ್ರ ಯಾವುದೇ ಹಾನಿಯಾಗುದಿಲ್ಲವಂತೆ.

PC:YOUTUBE

ಆರಾಧನೆ

ಆರಾಧನೆ

ಆಗಮ ಶಾಸ್ತ್ರಗಳನ್ನು ಅನುಸರಿಸಿ ಸ್ವಾಮಿಯ ಕೈಂಕರ್ಯಗಳನ್ನು ನಿರ್ವಹಿಸುತ್ತಾರೆ. ನಮ್ಮ ಪುರಾತನ ಶಾಸ್ತ್ರಗಳ ಪ್ರಕಾರ ವೆಂಕಟೇಶ್ವರ ಸ್ವಾಮಿಗೆ ದಿನವೂ 4 ರೀತಿಯ ಪ್ರತ್ಯೇಕವಾದ ಪೂಜೆಗಳನ್ನು ಮಾಡಲಾಗುತ್ತದೆ. ಅವುಗಳೆಂದರೆ ಪ್ರಾತಃ ಕಾಲಾರಧನ, ಮಾಧ್ಯಾಹ್ನಿಕ ಆರಾಧನ, ಸಂಧ್ಯಾಕಾರಧಾನ, ಪವಳಿಂಪು ಸೇವ.

PC:YOUTUBE

ಗರ್ಭಗುಡಿ

ಗರ್ಭಗುಡಿ

ವೆಂಕಟೇಶ್ವರ ಸ್ವಾಮಿಯ ಮೂಲ ವಿಗ್ರಹವು ಸಾಧರಣಾವಾಗಿ ನೋಡಿದರೆ ಗರ್ಭಗುಡಿ ಮಧ್ಯೆದಲ್ಲಿ ಇದೆ ಎಂದು ಭಾಸವಾಗುತ್ತದೆ. ಆದರೆ ಗರ್ಭಗುಡಿಯ ಬಲಭಾಗದಲ್ಲಿ ಸ್ವಾಮಿ ಇರುತ್ತಾರಂತೆ. ಈ ವಿಷಯವು ಹೊರಗಡೆಯಿಂದ ತೀಷ್ಣವಾಗಿ ನೋಡಿದರೆ ತಿಳಿಯುತ್ತದೆಯಂತೆ.


PC:: mr.donb

ಸನ್ನಿಧಿ ಗೊಲ್ಲ

ಸನ್ನಿಧಿ ಗೊಲ್ಲ

ವೆಂಕಟರಮಣನ ದರ್ಶನವನ್ನು ಮೊದಲ ಬಾರಿಗೆ ದರ್ಶನ ಮಾಡಿಕೊಳ್ಳುವುದು ಒಬ್ಬ ಸನ್ನಿಧಿಗೊಲ್ಲ. ಇವರು ಯಾದವ ವಂಶಕ್ಕೆ ಸೇರಿದವರಾಗಿದ್ದು, ಸ್ವಾಮಿಯ ದೇವಾಲಯವನ್ನು ಪ್ರತಿ ದಿನ ಮುಂಜಾನೆಯೇ ತೆರೆದು ದೀಪವನ್ನು ಬೆಳೆಗಿಸುತ್ತಾರಂತೆ. ಇವರನ್ನು ಸನ್ನಿಧಿ ಗೊಲ್ಲ ಎಂದು ಕರೆಯುತ್ತಾರೆ. ಈ ಸಂಪ್ರದಾಯವು ಎಷ್ಟೋ ಸಾವಿರ ವರ್ಷಗಳ ಹಿಂದಿನಿಂದಲೂ ಕೂಡ ಅನುಸರಿಸಿಕೊಂಡು ಬರುತ್ತಿದೆಯಂತೆ.

PCmr.donb

ರೈಲು ಮಾರ್ಗದ ಮೂಲಕ

ರೈಲು ಮಾರ್ಗದ ಮೂಲಕ

ಬೆಂಗಳೂರಿನಿಂದ ತಿರುಪತಿ ಎಕ್ಸ್‍ಪ್ರೆಸ್ ನೇರವಾದ ಸಂಪರ್ಕ ವ್ಯವಸ್ಥೆ ಇದ್ದು, ಸುಮಾರು 250 ಕಿ,ಮೀ ದೂರ ಪ್ರಯಾಣಿಸಬೇಕಾಗುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more