Search
  • Follow NativePlanet
Share
» »ಸುಪ್ರೀಂ ಕೋರ್ಟ್ ಒಳಗೆ ಹೋಗಬೇಕಾ? ರಿಜಿಸ್ಟ್ರೇಶನ್ ಮಾಡೋದು ಹೇಗೆ? ಶುಲ್ಕ ಎಷ್ಟು?

ಸುಪ್ರೀಂ ಕೋರ್ಟ್ ಒಳಗೆ ಹೋಗಬೇಕಾ? ರಿಜಿಸ್ಟ್ರೇಶನ್ ಮಾಡೋದು ಹೇಗೆ? ಶುಲ್ಕ ಎಷ್ಟು?

ಈವರೆಗೆ ಬರೀ ವಕೀಲರು ಅಥವಾ ಸುಪ್ರೀಂ ಕೋರ್ಟ್ ಅಸೋಸಿಯೇಶನ್‌ನಲ್ಲಿ ರಿಜಿಸ್ಟ್ರಡ್ ಆಗಿದ್ದ ವ್ಯಕ್ತಿಗಳು, ಪತ್ರಕರ್ತರಿಗಷ್ಟೇ ಸುಪ್ರೀಂ ಕೋರ್ಟ್‌ ಒಳಗೆ ಹೋಗಲು ಅವಕಾಶವಿತ್ತು. ಆದರೆ ಇದೀಗ ಸಾಮಾನ್ಯ ಜನರೂ ಕೂಡಾ ಇದರೊಳಗೆ ಹೋಗಬಹುದು. ಈವರೆಗೆ ಹೊರಗಿನಿಂದಲೇ ಅಥವಾ ಟಿವಿ, ಪತ್ರಿಕೆಗಳಲ್ಲಿ ನೋಡುತ್ತಿದ್ದ ಸುಪ್ರೀಂ ಕೋರ್ಟ್‌ ಒಳಗೆ ಏನೇನಿದೆ, ಒಳಗಿನ ನೋಟ ಹೋಗಿದೆ ಎನ್ನುವುದನ್ನು ಕಣ್ಣಾರೇ ನೋಡಬಹುದು.

ಸುಪ್ರೀಂ ಕೋರ್ಟ್ ಟೂರ್

ಸುಪ್ರೀಂ ಕೋರ್ಟ್ ಟೂರ್

ಸ್ಥಳೀಯರ ಜೊತೆಗೆ ವಿದೇಶಿ ಪ್ರವಾಸಿಗರಿಗೂ ಇದರೊಳಗೆ ಸುತ್ತಾಡಲು ಅವಕಾಶ ಕಲ್ಪಿಸಲಾಗುವುದು. ಹೀಗಾಗಿ ಜನರು ಪ್ರತಿ ಶನಿವಾರ ಸುಪ್ರೀಂ ಕೋರ್ಟ್ ಒಳಗೆ ಪ್ರವೇಶಿಸಬಹುದು. ಕೋರ್ಟ್‌ ಒಳಗೆ ಜಜ್‌ ಲೈಬ್ರೆರಿ ನೋಡಬಹುದು. ಅಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಸಿನಿಮಾಗಳನ್ನು ತೋರಿಸಲಾಗುವುದು.

ಈ ದೇವಸ್ಥಾನಕ್ಕೆ ಬಂದ 48 ದಿನಗಳಲ್ಲಿ ಮಾನಸಿಕ ರೋಗ ಗುಣವಾಗುತ್ತಂತೆ !ಈ ದೇವಸ್ಥಾನಕ್ಕೆ ಬಂದ 48 ದಿನಗಳಲ್ಲಿ ಮಾನಸಿಕ ರೋಗ ಗುಣವಾಗುತ್ತಂತೆ !

ಸರ್ಕಾರಿ ರಜಾ ದಿನಗಳಂದಿಲ್ಲ

ಸರ್ಕಾರಿ ರಜಾ ದಿನಗಳಂದಿಲ್ಲ

ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ಶನಿವಾರ ಮಾತ್ರ ಜನರಿಗೆ ಸುಪ್ರೀಂಕೋರ್ಟ್‌ ಒಳಗೆ ಪ್ರವೇಶ ಕಲ್ಪಿಸಲಾಗುವುದು

ಶನಿವಾರದಿಂದ ಆರಂಭ

ಶನಿವಾರದಿಂದ ಆರಂಭ

ಇದೇ ಶನಿವಾರದಿಂದ ಈ ಯೋಜನೆ ಪ್ರಾರಂಭವಾಗಲಿದ್ದು, ಮುಂಗಡ ಬುಕ್ಕಿಂಗ್ ಪ್ರಕ್ರಿಯೇಯೂ ಇದೆ. ಇದು ಬೆಳಗ್ಗೆ ೧೦ ಗಂಟೆಯಿಂದ ೧೧.೩೦ ರವರೆಗೆ ಇರುತ್ತದೆ. ಒಮ್ಮೆಗೆ ೨೦ ಮಂದಿಯ ಗುಂಪನ್ನು ಮಾಡಲಾಗುತ್ತದೆ. ಆ ಗುಂಪಿನ ಜೊತೆ ಅವರು ಸುಪ್ರೀಂ ಕೋರ್ಟ್ ಸುತ್ತಾಡಬಹುದು.

ಗುಜರಾತ್‌ನಲ್ಲಿ ನಿರ್ಮಿಸಲಾಗಿರುವ ಏಕತೆಯ ಪ್ರತಿಮೆ ಬಗ್ಗೆ ನಿಮಗೆಷ್ಟು ಗೊತ್ತುಗುಜರಾತ್‌ನಲ್ಲಿ ನಿರ್ಮಿಸಲಾಗಿರುವ ಏಕತೆಯ ಪ್ರತಿಮೆ ಬಗ್ಗೆ ನಿಮಗೆಷ್ಟು ಗೊತ್ತು

ಶುಲ್ಕ ವಿಲ್ಲ

ಶುಲ್ಕ ವಿಲ್ಲ

ಸುಪ್ರೀಂಕೋರ್ಟ್ ಒಳಗೆ ಸುತ್ತಾಡಲು ಯಾವುದೇ ರೀತಿಯ ಶುಲ್ಕ ತೆರಬೇಕಾಗಿಲ್ಲ. ಇದು ಸಂಪೂರ್ಣ ಉಚಿತವಾಗಿದೆ. ಇದರೊಳಗೆಯೇ ತಿಂಡಿ ತಿನಿಸಿನ ವ್ಯವಸ್ಥೆಯೂ ಮಾಡಲಾಗುವುದು.

ಇವುಗಳನ್ನು ಕೊಂಡೊಯ್ಯುವಂತಿಲ್ಲ

ಇವುಗಳನ್ನು ಕೊಂಡೊಯ್ಯುವಂತಿಲ್ಲ

ಕೋರ್ಟ್‌ನ ಆವರಣವಾಗಿರುವುದರಿಂದ ಕ್ಯಾಮೆರಾ, ಮೊಬೈಲ್, ಬ್ಯಾಗ್, ಸಿಗರೇಟ್, ಗುಟ್ಕಾ, ತಿನ್ನುವ ಸಾಮಾಗ್ರಿಗಳನ್ನು ಕೊಂಡೊಯ್ಯುವಂತಿಲ್ಲ. ಕೋರ್ಟ್‌ನ ಒಳಗೆ ಫೋಟೋ ತೆಗೆಯುವಂತಿಲ್ಲ.

ತುಮಕೂರಿನ ದೇವರಾಯನ ಬೆಟ್ಟದಲ್ಲಿರುವ ನರಸಿಂಹನ ದರ್ಶನ ಪಡೆದಿದ್ದೀರಾ?ತುಮಕೂರಿನ ದೇವರಾಯನ ಬೆಟ್ಟದಲ್ಲಿರುವ ನರಸಿಂಹನ ದರ್ಶನ ಪಡೆದಿದ್ದೀರಾ?

ರಿಜಿಸ್ಟ್ರೇಶನ್ ಮಾಡುವುದು ಹೇಗೆ?

ರಿಜಿಸ್ಟ್ರೇಶನ್ ಮಾಡುವುದು ಹೇಗೆ?

ಸುಪ್ರೀಂ ಕೋರ್ಟ್‌ನ ಟೂರ್‌ಗೆ ಮುಂಗಡ ರಿಜಿಸ್ಟ್ರೇಶನ್ ಮಾಡಿಸಲು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ಗೆ ಹೋಗಿ Visit The Court-Guided Tour ಲಿಂಕ್ ಕ್ಲಿಕ್ ಮಾಡಿ. ಆ ನಂತರ ರಿಜಿಸ್ಟ್ರೇಶನ್‌ ಕ್ಲಿಕ್ ಮಾಡಿ. ಆ ನಂತರ ಡಿಸ್ಕಲೇಮರ್ ಟ್ಯಾಬ್ ಓಪನ್ ಆಗುತ್ತದೆ. ಅಲ್ಲಿರುವ Accept ಬಟನ್ ಕ್ಲಿಕ್ ಮಾಡಿ.

 ಫಾರ್ಮ್ ತುಂಬಿ

ಫಾರ್ಮ್ ತುಂಬಿ

ಈಗ ಆನ್‌ಲೈನ್ ಫಾರ್ಮ್ ಓಪನ್ ಆಗುತ್ತದೆ. ಅದರಲ್ಲಿ ನಿಮ್ಮ ಹೆಸರು, ವೃತ್ತಿ, ಫೋಟೋ, ಫೋನ್ ನಂಬರ್, ಐಡಿ ಪ್ರೂಫ್ ಮುಂತಾದ ಮಾಹಿತಿಗಳನ್ನು ಫಿಲ್ ಮಾಡಿ. ನಂತರ ಸಬ್‌ಮಿಟ್‌ ಕೊಡಿ. ನಿಮಗೊಂದು ಎಸ್‌ಎಮ್‌ಎಸ್ ಬರುತ್ತದೆ. ಆಗ ನಿಮ್ಮ ರಿಜಿಸ್ಟ್ರೇಶನ್ ಕನ್‌ಫರ್ಮ್ ಆಗುತ್ತದೆ.

ಇದನ್ನು ನೆನಪಿಟ್ಟುಕೊಳ್ಳಿ

ಇದನ್ನು ನೆನಪಿಟ್ಟುಕೊಳ್ಳಿ

ಸುಪ್ರೀಂಕೋರ್ಟ್‌ನ ಟೂರ್‌ಗೆ ಹೋಗುವವರು ನಿಗಧಿತ ಸಮಯಕ್ಕೂ ಅರ್ಧಗಂಟೆ ಮುಂಚಿತವಾಗಿ ಗೇಟ್‌ ಡಿ ಯಲ್ಲಿ ಹೋಗಿ ನಿಲ್ಲಬೇಕು. ಸೆಕ್ಯೂರಿಟಿ ಚೆಕ್ ನಂತರ ಟೂರ್ ಆರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ [email protected] ಮೇಲ್ ಮಾಡಬಹುದು ಇಲ್ಲವಾದಲ್ಲಿ ಹೆಲ್ಪ್‌ ಲೈನ್ ನಂಬರ್ 011 23385347 ಕ್ಲಿಕ್ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X