Search
  • Follow NativePlanet
Share
» »ಭಾರತದಲ್ಲಿ ಭೇಟಿ ನೀಡಬಹುದಾದ ಆಕರ್ಷಣೀಯ ಬೇಸಿಗೆಯ ರಜಾ ತಾಣಗಳು

ಭಾರತದಲ್ಲಿ ಭೇಟಿ ನೀಡಬಹುದಾದ ಆಕರ್ಷಣೀಯ ಬೇಸಿಗೆಯ ರಜಾ ತಾಣಗಳು

ಬೇಸಿಗೆ ಬಂತೆಂದರೆ ಸಾಕು ಸೂರ್ಯನ ಬಿಸಿಲಿನ ತಾಪದ ಜೊತೆಗೆ ಐಸ್ ಕ್ರೀಂನಿಂದ ಹಿಡಿದು ಉಡುಗೆ ತೊಡುಗೆಗಳವರೆಗೆ, ಮತ್ತು, ಶಾಲೆಗಳಿಗೆ ರಜೆ ಇರುವುದರಿಂದ ಪ್ರವಾಸ ಮಾಡುವವರು, ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣ ಮಾಡುವ ಹಂಬಲ ಇರುವವರಿಗೆ ಬೇಸಿಗೆಯ ಸಮಯವು ಅತ್ಯಂತ ಸೂಕ್ತವಾಗಿರುತ್ತದೆ. ಭಾರತದಲ್ಲಿಯ ಹೆಚ್ಚಿನ ಸಂಖ್ಯೆಯ ಸ್ಥಳಗಳು ಬೆಚ್ಚಗಿನ ಹವಾಮಾನವನ್ನು ಹೊಂದಿರುವುದರಿಂದ ಸರಿಯಾದ ರಜಾ ತಾಣವನ್ನು ಆರಿಸುವುದು ಕಷ್ಟ.

ಬೇಸಿಗೆ ರಜಾ ತಾಣಗಳ ಪಟ್ಟಿಯನ್ನು ನಿಮಗೆ ಈ ಮೂಲಕ ನೀಡುತಿದ್ದೇವೆ. ಈ ಸ್ಥಳಗಳು, ನಿಮಗೆ ಸಾಹಸ ಚಟುವಟಿಕೆಗಳು, ಮನೋರಂಜನೆ, ವಸತಿ, ಪಾಕಪದ್ದತಿಗಳು ಮತ್ತು ಹವಾಮಾನದಂತಹ ವಿಷಯಗಳಲ್ಲಿ ಯೋಗ್ಯವೇ ಎನ್ನುವ ಹಲವು ಮಾಹಿತಿಗಳನ್ನು ನೀಡುತ್ತದೆ.

ಇದರಿಂದ, ನಿಮ್ಮ ಬೇಸಿಗೆಯ ರಜೆಯನ್ನು ಕಳೆಯಲು ಸೂಕ್ತ ತಾಣಗಳನ್ನು ಆಯ್ಕೆ ಮಾಡುವಲ್ಲಿ ಸಹಾಯವಾಗಬಹುದು. ಭಾರತದಲ್ಲಿ ಬೇಸಿಗೆಯ ರಜಾದಿನಗಳನ್ನು ಕಳೆಯಲು ನಿಮ್ಮ ನೆಚ್ಚಿನ ತಾಣಗಳ ಪಟ್ಟಿಗಳ ವಿವರಣೆಯ ನಂತರ ನಮ್ಮ ಕಾಮೆಂಟ್ ವಿಭಾಗದಲ್ಲಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಲು ಕೋರುತ್ತಿದ್ದೇವೆ.

1. ಔಲಿ

1. ಔಲಿ

ಭಾರತದಲ್ಲಿಯ ಅತ್ಯುತ್ತಮ ಬೇಸಿಗೆಯ ತಾಪಮಾನವನ್ನು ಹೊಂದಿರುವ ಪ್ರದೇಶಗಳಲ್ಲಿ ಯೂ ಕೂಡಾ ಒಂದು. ನಾನಾ ಕಡೆಗಳಿಂದ ಬರುವ ಪ್ರವಾಸಿಗರು ಈ ಸುಂದರವಾದ ತಾಣಕ್ಕೆ ಭೇಟಿ ಕೊಡಬಯಸುತ್ತಾರೆ. ಹಗಲಿನಲ್ಲಿ ಈ ಪ್ರದೇಶದ ತಾಪಮಾನವು 15° ಸೆಲ್ಸಿಯಸ್ ಇದ್ದು ಆಹ್ಲಾದಕರವಾಗಿರುತ್ತದೆ.

ಅಲ್ಲದೇ, ಈ ಕುಗ್ರಾಮದ ಸುತ್ತಲೂ ದೃಷ್ಟಿ ಹರಿಸಿದರೆ ಎಲ್ಲಾ ಸಂಪ್ರದಾಯದ ಜನರೂ ಈ ತಾಣಕ್ಕೆ ರಜಾ ದಿನಗಳನ್ನು ಕಳೆಯಲು ಏಕೆ ಬರುತ್ತಾರೆ ಎನ್ನುವುದರ ಅರಿವಾಗುತ್ತದೆ. ಮನಮೋಹಕ ಹೆಮ್ಕುಂಟ್ ಸಾಹಿಬ್ (ಹೂಗಳ ಕಣಿವೆ), ಚೆನಾಬ್ ಸರೋವರ ಮತ್ತು ನಂದಾ ದೇವಿ ರಾಷ್ಟ್ರೀಯ ಉದ್ಯಾನವನ ಮುಂತಾದ ಸ್ಥಳಗಳು ಈ ತಾಣವನ್ನು ಇನ್ನಷ್ಟು ಆಕರ್ಷಣೀಯಗೊಳಿಸುತ್ತದೆ. ಇವೆಲ್ಲದರ ಜೊತೆಗೆ ಹಿಮದಿಂದ ಆವೃತವಾದ ಪರ್ವತಗಳ ವಿಹಂಗಮ ನೋಟವು ಒಂದು ರೋಚಕ ಅನುಭವವನ್ನು ನೀಡುವುದರಲ್ಲಿ ಸಂಶಯವೇ ಬೇಡ..

2. ಲಕ್ಷದ್ವೀಪ

2. ಲಕ್ಷದ್ವೀಪ

ಡೈವಿಂಗ್ ಮತ್ತು ಇನ್ನಿತರ ನೀರಿನಲ್ಲಿ ಆಡುವಂತಹ ವಿನೋದದ ಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ಲಕ್ಷದ್ವೀಪವು ಚಳಿಗಾಲದಲ್ಲಿ ಮಾತ್ರವಲ್ಲದೆ ಬೇಸಿಗೆಯಲ್ಲಿಯೂ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ವರ್ಷವಿಡೀ ಭೇಟಿಕೊಡಬಹುದಾದ ಸ್ಥಳವಾಗಿದ್ದರೂ ಕೂಡ ಬೇಸಿಗೆಯಲ್ಲಿನ ಅತ್ಯುತ್ತಮ ಹವಾಮಾನವಿರುವುದರಿಂದ ಇಲ್ಲಿ ನೀರಿನಲ್ಲಿ ಕ್ರೀಡಾ ಚಟುವಟಿಕೆಗಳನ್ನು ಮಾಡಬಹುದಾಗಿದೆ.

ಆದುದರಿಂದ ಈ ಸಮಯದಲ್ಲಿ ಇಲ್ಲಿಗೆ ಭೇಟಿಕೊಡುವುದು ಸೂಕ್ತ. ಸುಂದರವಾದ ಕಡಲು ತೀರಗಳು ಮಾತ್ರವಲ್ಲದೆ ಲಕ್ಷದ್ವೀಪವು ಸುಂದರವಾದ ಕಲ್ಪೇನಿ ಮತ್ತು ಮಿನಿಕಾಯ್ ದ್ವೀಪಗಳ ನೆಲೆಯಾಗಿದ್ದು, ಇಲ್ಲಿಗೆ ಸುಲಭವಾಗಿ ಪಾದಯಾತ್ರೆ ಮಾಡಬಹುದಾಗಿದೆ

3. ಮೈಸೂರು

3. ಮೈಸೂರು

ಉಚಿತವಾಗಿ ಭೇಟಿ ಕೊಡಬಹುದಾದಂತಹ, ಜೊತೆಗೆ, ತನ್ನಲ್ಲಿ ಅನೇಕ ಸಾಂಪ್ರದಾಯಿಕ ಹೆಗ್ಗುರುತುಗಳನ್ನು ಒಳಗೊಂಡಿಸಿಕೊಂಡಿರುವ ಮೈಸೂರು ಭಾರತದಲ್ಲಿ ಒಂದು ದೊಡ್ಡ ಬೇಸಿಗೆಯ ತಾಣವೆನಿಸಿದೆ! ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರು ಮೈಸೂರು ಅರಮನೆ, ಚಾಮುಂಡಿ ಬೆಟ್ಟಗಳು ಮತ್ತು ಬೃಂದಾವನ ಉದ್ಯಾನವನ ಮಾತ್ರವಲ್ಲದೆ ಇನ್ನಿತರ ಐತಿಹಾಸಿಕ ಸ್ಥಳಗಳು, ಕಾರಂಜಿ ಸರೋವರ, ಮೈಸೂರು ಮೃಗಾಲಯ ಮತ್ತು ಶಿವನಸಮುದ್ರ ಜಲಪಾತಗಳು ಇತ್ಯಾದಿಗಳನ್ನು ಸಹ ಆಹ್ಲಾದಕರ ಸೂರ್ಯನ ಬೆಳಕಿನಡಿಯಲ್ಲಿ ಕಾಣುವ ಸುವರ್ಣಾವಕಾಶ ಇರುತ್ತದೆ.

ಮೈಸೂರಿನ ಅತಿರಂಜಿತ ವಾಸ್ತುಶಿಲ್ಪ ಮತ್ತು ಆಕರ್ಷಣೀಯವಾದ ಸಂಸ್ಕೃತಿ ಇತ್ಯಾದಿಗಳು ಸ್ವರ್ಗೀಯ ಅನುಭವವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ. ಆದುದರಿಂದ ಬೇಸಿಗೆಯ ಸಮಯದಲ್ಲಿ ಈ ಸ್ಥಳವು ಅತ್ಯಂತ ಚಟುವಟಿಕೆಯಿಂದ ಕೂಡಿರುತ್ತದೆ. ಇಲ್ಲಿ ವಸತಿ ಸೌಕರ್ಯಗಳು ಮಿತವ್ಯಯವಾಗಿರುವುದರಿಂದ ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ.

4. ಶಿಮ್ಲಾ

4. ಶಿಮ್ಲಾ

ಶಿಮ್ಲಾವು ತನ್ನಲ್ಲಿ ಎಲ್ಲಾ ರೀತಿಯ ಪ್ರಯಾಣಿಕರನ್ನು ತೃಪ್ತಿಪಡಿಸಲು ಸಾಕಷ್ಟು ಪ್ರಾಕೃತಿಕ ಆಕರ್ಷಣೆಗಳನ್ನು ತನ್ನಲ್ಲಿ ಹೊಂದಿದೆ. ಇಲ್ಲಿಗೆ ಭೇಟಿ ನೀಡುವ ಎಲ್ಲರೂ ಹೆಸರುವಾಸಿಯಾದ ಆಟದ ರೈಲು ಸವಾರಿ ಮಾಡಬಹುದಾಗಿದೆ. ಅಲ್ಲದೇ, ಪ್ರಕೃತಿ ಪ್ರೇಮಿಗಳು ಸಮ್ಮರ್ ಹಿಲ್ ಮತ್ತು ಸ್ಕಾಂಡಲ್ ಪಾಯಿಂಟ್ ಅನ್ನು ರೂಪಿಸುವ ಆಕರ್ಷಕ ಭೂದೃಶ್ಯಗಳನ್ನು ಇಲ್ಲಿ ಕಾಣಬಹುದು

ಜೊತೆಗೆ, ಇತಿಹಾಸ ಪ್ರಿಯರು ಇಲ್ಲಿಯ ಮಿಲಿಟರಿ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಆನಂದಿಸಬಹುದಾಗಿದೆ. ಇಲ್ಲಿ ಅನ್ವೇಷಣೆ ಮಾಡುವವರಿಗಾಗಿ ಶಿಮ್ಲಾವು ಬಹಳಷ್ಟು ಅವಕಾಶವನ್ನು ನೀಡುತ್ತದೆ. ಇಲ್ಲಿಯ ಕಣ್ಣಿಗೆ ಕಟ್ಟುವಂತಿರುವ ವಾಸ್ತುಶಿಲ್ಪ, ಸುಂದರವಾದ ನಯನ ಮನೋಹರ ಭೂದೃಶ್ಯ ಗಳು, ವಿನೋದಕ್ಕೆ ಸಂಬಂಧಿಸಿದ ಚಟುವಟಿಕೆಗಳು, ವಿವಿಧ ಮನೋರಂಜನೆಗೆ ಸಂಬಂಧಿಸಿದ ತಾಣಗಳು ಇವೆಲ್ಲವನ್ನೂ ತನ್ನ ಮಡಿಲಲ್ಲಿ ಹೊಂದಿರುವ ಶಿಮ್ಲಾವು ಭೇಟಿಕೊಡುವವರನ್ನು ನಿರಾಸೆಗೊಳಿಸುವುದಿಲ್ಲ.

5. ಅಂಡಮಾನ್

5. ಅಂಡಮಾನ್

ದ್ವೀಪಗಳಲ್ಲಿ ಹವಮಾನದ ವೈಪರೀತ್ಯದಿಂದ ಉಂಟಾಗುವ ಕೋರಲ್ ಬ್ಲೀಚಿಂಗ್ ನಿಂದಾಗಿ, ಆದಷ್ಟು ಬೇಗ ಅಂಡಮಾನ್ ದ್ವೀಪಕ್ಕೆ ಭೇಟಿ ಕೊಡುವುದು ಅತ್ಯಂತ ಸೂಕ್ತ. ಇಲ್ಲಿಯ ಡೈವಿಂಗ್ ಮತ್ತು ಸ್ನಾರ್ಕೆಲಿಂಗ್ ಇನ್ನೂ ಸುಂದರವಾಗಿದ್ದು, ಇದು ನಾರ್ಕೊಂಡಮ್ ದ್ವೀಪ ಮತ್ತು ಉತ್ತರ ರೀಫ್ ದ್ವೀಪದ ನಡುವೆ ಇರುವ ಬಂಡೆಯ ಪ್ರದೇಶದಲ್ಲಿ ಹೇಗಿರುತ್ತದೇ ಅಷ್ಟೇ ಸುಂದರವಾಗಿರುತ್ತದೆ.

ಅಂಡಮಾನ್ ನ ಸಮುದ್ರ ಜೀವನವನ್ನು ಸಂಪೂರ್ಣವಾಗಿ ಆನಂದಿಸಲು ಹಾಗೂ ಈ ನೀಲಿ ಸಾಗರದಲ್ಲಿಯ ನೌಕಾಯಾನ ಹಾಗೂ ಹಾವ್ಲಾಕ್ ದ್ವೀಪಗಳ ಕಡಲತೀರಗಳನ್ನು ಅನುಭವಿಸಲು ಸಮುದ್ರದ ಬಗ್ಗೆ ಹೆಚ್ಚಿನ ಅನುಭವ ಇರಬೇಕು ಎಂದೇನಿಲ್ಲ. ಅದರಲ್ಲಿಯೂ ಹಾವ್ಲಾಕ್ ದ್ವೀಪಗಳಲ್ಲಿಯ ಕಡಲತೀರಗಳು ವಿಶ್ರಾಂತಿ ಬಯಸುವವರಿಗಾಗಿ ಹೇಳಿ ಮಾಡಿಸಿದಂತಿದೆ. ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನಗಳು ಮತ್ತು ಸ್ಯಾಡಲ್ ಪೀಕ್ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರತದ ಕೆಲವು ವಿಲಕ್ಷಣ ಪ್ರಾಣಿಗಳ ಬಗ್ಗೆ ಸಹ ತಿಳಿದುಕೊಳ್ಳಬಹುದು.

6. ಕೂರ್ಗ್

6. ಕೂರ್ಗ್

ಅನುಕೂಲಕರ ಮತ್ತು ಆಹ್ಲಾದಕರ ಹವಾಮಾನವಿರುವ ಸ್ಥಳದಲ್ಲಿ ತಮ್ಮ ಬೇಸಿಗೆಯ ರಜಾ ಸಮಯವನ್ನು ಕಳೆಯಲು ಬಯಸುವವರಿಗೆ ಕೊಡಗು (ಕೂರ್ಗ್) ಒಂದು ಸೂಕ್ತವಾದ ಸ್ಥಳವಾಗಿದೆ. ವರ್ಷದ ಬೇಸಿಗೆ ಸಮಯದಲ್ಲಿ ಕೂರ್ಗ್ ನ ಹೊರಾಂಗಣ ಆಕರ್ಷಣೆಗಳಾದ ಅಬ್ಬೆ ಜಲಪಾತ, ರಾಜಾಸ್ ಸೀಟ್ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹೆಚ್ಚು ಬೆಳಕಿಗೆ ಬರುತ್ತದೆ.

ಅಲ್ಲದೆ ಇಲ್ಲಿಯ ಬೆಚ್ಚನೆಯ ಹವಾಮಾನವು ಇತರ ಸಾಂಪ್ರದಾಯಿಕ ನಗರ ಆಕರ್ಷಣೆಗಳಾದ ಟಾಡಿಯಾಂಡೋಮಲ್ ಶಿಖರ ಮತ್ತು ಹನಿ ಕಣಿವೆ ಯತ್ತ ಒಮ್ಮೆ ಅಡ್ಡಾಡುವಂತೆ ಮಾಡುತ್ತದೆ. ಇಲ್ಲಿ ರಾತ್ರಿ ಕಳೆಯುವುದು ಇನ್ನೂ ಹೆಚ್ಚು ಆನಂದದಾಯಕವಾಗಿರುತ್ತದೆ. ನಿಮ್ಮನ್ನು ಪುನಶ್ಚೇತನಗೊಳಿಸಲು ಮತ್ತು ವಿಶ್ರಾಂತಿ ಪಡೆಯಲು ಅನುಕೂಲಕರವಾಗುವಂತ ಅನೇಕ ಹೋಂ ಸ್ಟೇಗಳು ಇಲ್ಲಿದೆ, ಇದರ ಜೊತೆಗೆ ಇಲ್ಲಿಯ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಕುಳಿತು ವಿಶ್ರಾಂತಿ ಪಡೆದು ನಿಮ್ಮ ಸಮಯವನ್ನು ಉತ್ತಮವಾಗಿ ಕಳೆಯಬಹುದಾಗಿದೆ.

7. ಗೋಕರ್ಣ

7. ಗೋಕರ್ಣ

ಗೋಕರ್ಣದ ಸಮೀಪದಲ್ಲಿರುವ ಅನೇಕ ಕಡಲತೀರದ ತಾಣಗಳು, ಮುರುಡೇಶ್ವರ ಮತ್ತು ಇನ್ನಿತರ ಸ್ಥಳಗಳು ಬೇಸಿಗೆ ಕಾಲದಲ್ಲಿ ನಿಮ್ಮನ್ನೊಮ್ಮೆ ಇಲ್ಲಿಗೆ ಸೆಳೆಯುವುದರಲ್ಲಿ ಸಂಶಯವಿಲ್ಲ. ಪ್ರಶಾಂತತೆ ಮತ್ತು ಏಕಾಂತತೆಯನ್ನು ತನ್ನ ಮಡಿಲಲ್ಲಿ ಹೊಂದಿರುವ ಗೋಕರ್ಣ, ಬೇಸಿಗೆ ರಜೆಯಲ್ಲಿ ಭೇಟಿಗೆ ಯೋಗ್ಯವಾದ ಒಂದು ಆಕರ್ಷಕ ಕರಾವಳಿಯ ಕುಗ್ರಾಮವಾಗಿದೆ.

ಕರಾವಳಿಯ ಈ ಪ್ರದೇಶದಲ್ಲಿ ನಿಮಗೆ ಅನ್ವೇಷಣೆ ಮಾಡಲು ಬಹಳಷ್ಟಿದೆ. ಇಲ್ಲಿಯ ಕುಡ್ಲಬೀಚ್ ನಲ್ಲಿ ಅನೇಕ ಕಡಲತೀರದ ಆಹಾರಗಳು, ಉಪಹಾರಗಳು, ಕಡಲತೀರದ ಆಹಾರದ ರೆಸ್ಟೋರೆಂಟ್ ಗಳು, ಐಸ್ ಕ್ರೀಂ ಅಂಗಡಿಗಳು ಇತ್ಯಾದಿಗಳನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೆ ಇಲ್ಲಿ ದೋಣಿವಿಹಾರಕ್ಕಾಗಿ ಕಾಯ್ದಿರಿಸಿದಲ್ಲಿ, ಓಂ ಬೀಚ್ ನಲ್ಲಿ ಅರಬ್ಬೀ ಸಮುದ್ರದ ವಿಸ್ಮಯಕಾರಿ ನೋಟಗಳನ್ನು ನೋಡಬಹುದಾಗಿದೆ ಇಲ್ಲಿಗೆ ತಲುಪಲು ಸುಂದರವಾದ ಪರ್ವತದ ಹಾದಿಯಲ್ಲಿ ಕಾಲ್ನಡಿಗೆಯಿಂದ ಹೋಗಬೇಕಾಗುತ್ತದೆ.

 8. ಮುನ್ನಾರ್

8. ಮುನ್ನಾರ್

ಬೇಸಿಗೆ ಕಾಲದಲ್ಲಿ ಮುನ್ನಾರ್ ಗೆ ಪ್ರವಾಸಿಗರು ಇಲ್ಲಿಯ ಸುಂದರವಾದ ಬೆಟ್ಟಗಳ ದೃಶ್ಯಗಳನ್ನು ಮತ್ತು ಇಲ್ಲಿಯ ಸುಂದರವಾದ ಅನೇಕ ವಿಷಯಗಳ ಅನುಭವ ಪಡೆಯಲು ಹಾತೊರೆಯುತ್ತಾರೆ. ಹಗಲಿನ ಸಮಯದಲ್ಲಿ ಮುನ್ನಾರ್ ನ ತಾಪಮಾನವು ಆಹ್ಲಾದಕರವಾಗಿದ್ದು ಚಳಿಗಾಲದ ನಂತರದ ಒಂದು ಅನುಭವವನ್ನು ನೀಡುತ್ತದೆ.

ಇಲ್ಲಿಯ ಪರ್ವತಗಳ ಪಕ್ಕದಲ್ಲಿ ವಿಶ್ರಾಂತಿ ಪಡೆಯುವುದರ ಜೊತೆಗೆ ಪ್ರಯಾಣಿಕರು ಕುಟುಂಬದೊಂದಿಗೆ ಟ್ರೈಂಡ್ ಟ್ರಯಲ್ ಉದ್ದಕ್ಕೂ ಸುಂದರವಾದ ಸೈಕ್ಲಿಂಗ್ ಪ್ರವಾಸವನ್ನು ಯೋಜಿಸಬಹುದು ಹಾಗೂ ಇಲ್ಲಿಯ ಚೋಕ್ರಮೋಡಿಯ ಪ್ರಶಾಂತತೆಯಲ್ಲಿ ಅಲೆದಾಡಬಹುದಾಗಿದೆ. ಮುನ್ನಾರ್ ಭಾರತದಲ್ಲಿ ಹೆಚ್ಚು ಭೇಟಿ ನೀಡುವ ಬೇಸಿಗೆ ರಜಾ ತಾಣಗಳಲ್ಲಿ ಒಂದಾಗಿರುವುದರಿಂದ, ನೀವು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು (ವಿಶೇಷವಾಗಿ ವಾರಾಂತ್ಯದಲ್ಲಿ), ಹೋಟೆಲ್ ಕೊಠಡಿಗಳನ್ನು ಅಥವಾ ರಜೆಯ ಬಾಡಿಗೆಯನ್ನು ಸಾಧ್ಯವಾದಷ್ಟು ಬೇಗ ಕಾಯ್ದಿರಿಸಿ ಕೊಳ್ಳುವುದು ಸೂಕ್ತ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more