Search
  • Follow NativePlanet
Share
» »ಕುತ್ತಿಗೆ ವಾಲಿರುವ ದೇವಿಯ ಮೂರ್ತಿ ಎಲ್ಲಿದೆ ಗೊತ್ತಾ?

ಕುತ್ತಿಗೆ ವಾಲಿರುವ ದೇವಿಯ ಮೂರ್ತಿ ಎಲ್ಲಿದೆ ಗೊತ್ತಾ?

ಪ್ರಾಚೀನ ಭಾರತದ ಪವಿತ್ರ ಭಾರತೀಯ ದೇವಾಲಯಗಳು ಸುಂದರವಾಗಿರುವುದಷ್ಟೇ ಅಲ್ಲ ನಿಗೂಢವಾದವುಗಳಾಗಿವೆ. ಭಾರತದಲ್ಲಿ ಹಲವಾರು ದೇವಾಲಯಗಳು ತಮ್ಮದೇ ಆದ ಇತಿಹಾಸ ಮತ್ತು ಗುಪ್ತ ರಹಸ್ಯಗಳನ್ನು ಹೊಂದಿವೆ.

ರಹಸ್ಯಮಯ ಗುಹೆ; ಒಳಗೆ ಹೋದವರು ವಾಪಾಸ್ ಬರೋದೇ ಇಲ್ಲರಹಸ್ಯಮಯ ಗುಹೆ; ಒಳಗೆ ಹೋದವರು ವಾಪಾಸ್ ಬರೋದೇ ಇಲ್ಲ

ಎಲ್ಲಿದೆ ಈ ದೇವಾಲಯ?

ಎಲ್ಲಿದೆ ಈ ದೇವಾಲಯ?

PC: Wiwigo

ಈ ಮಂದಿರವು ರಾಜಸ್ಥಾನದ ಔವಾ ಜಿಲ್ಲೆಯಲ್ಲಿದೆ. ಇಲ್ಲಿನ ದೇವಸ್ಥಾನದ ವಿಶೇಷತೆ ಎಂದರೆ ಇಲ್ಲಿನ ಮೂರ್ತಿಯ ಕುತ್ತಿಗೆ ತಿರುಗಿರುತ್ತದೆ.

ಮೂರ್ತಿಯ ಕುತ್ತಿಗೆ ತಿರುಗಿರುತ್ತದೆ

ಮೂರ್ತಿಯ ಕುತ್ತಿಗೆ ತಿರುಗಿರುತ್ತದೆ

PC: Mohan mukesh malaviya
ಇಲ್ಲಿನ ದೇವರ ಮೂರ್ತಿಯ ಕುತ್ತಿಗೆ ಯಾವಾಗಲೂ ಎಡಗಡೆಗೆ ವಾಲಿರುತ್ತದೆ. ಸಾಕಷ್ಟು ಬಾರಿ ಈ ಮೂರ್ತಿಯ ಕುತ್ತಿಗೆಯನ್ನು ಸರಿಪಡಿಸಲಾಯಿತು. ಆದರೂ ಕುತ್ತಿಗೆ ಮತ್ತೆ ಅದೇ ರೀತಿ ತಿರುಗುತ್ತಿತ್ತು. ಆ ಮೂರ್ತಿಯ ಬದಲಿಗೆ ಬೇರೆ ಹೊಸ ಮೂರ್ತಿಯನ್ನು ಇರಿಸಲಾಯಿತು. ಸ್ವಲ್ಪ ಹೊತ್ತಲ್ಲೇ ಹೊಸ ಮೂರ್ತಿಯೂ ತನ್ನ ಕುತ್ತಿಗೆಯನ್ನು ತಿರುಗಿಸುತ್ತಿತ್ತು.

ಸರಿಪಡಿಸಲು ಹೋದವರು ಅನಾರೋಗ್ಯಕ್ಕೀಡಾಗುತ್ತಿದ್ದರು

ಸರಿಪಡಿಸಲು ಹೋದವರು ಅನಾರೋಗ್ಯಕ್ಕೀಡಾಗುತ್ತಿದ್ದರು

PC: Mohan mukesh malaviya
ಈ ಮೂರ್ತಿಯನ್ನು ಸರಿಪಡಿಸಲು ಅನೇಕ ಶಿಲ್ಪಿಗಳು ಸಾಕಷ್ಟು ಬಾರಿ ಪ್ರಯತ್ನಪಟ್ಟರು. ಆದರೂ ಮೂರ್ತಿಯನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಅಲ್ಲದೆ ಅದನ್ನು ಸರಿಪಡಿಸಲು ಪ್ರಯತ್ನಿಸಿದ ವ್ಯಕ್ತಿ ಅನಾರೋಗ್ಯಕ್ಕೀಡಾಗಿದ್ದಾನೆ. ಇದಕ್ಕೆ ಕಾರಣ ಏನು ಎನ್ನುವುದು ಇನ್ನುವರೆಗೂ ಯಾರಿಂದಲೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇದು ಕಾಕತಾಳೀಯವೋ ಅಥವಾ ಅಲ್ಲಿ ಯಾವುದೋ ಶಕ್ತಿ ಇದೆಯೋ ಎನ್ನುವುದು ಅರ್ಥವಾಗುತಿಲ್ಲ.

ಸ್ವಾತಂತ್ರ್ಯ ಹೋರಾಟಗಾರರು ಭೇಟಿ ನೀಡುತ್ತಿದ್ದರು.

ಸ್ವಾತಂತ್ರ್ಯ ಹೋರಾಟಗಾರರು ಭೇಟಿ ನೀಡುತ್ತಿದ್ದರು.

PC: Mohan mukesh malaviya
ಇನ್ನೂ ಹಲವರ ಪ್ರಕಾರ ಈ ದೇವಸ್ಥಾನಕ್ಕೆ ಬಹಳಷ್ಟು ಸ್ವಾತಂತ್ರ್ಯ ಹೋರಾಟಗಾರರು ಭೇಟಿ ನೀಡುತ್ತಿದ್ದರು. ಆ ಸಂದರ್ಭ ಬ್ರಿಟಿಷರು ಗುಂಡು ಹಾರಿಸಿದ್ದಾರೆ. ಆ ಗುಂಡು ಮೂರ್ತಿಗೆ ತಾಗಿದ್ದು ಅಂದಿನಿಂದ ಈ ಮೂರ್ತಿಯ ಕುತ್ತಿಗೆ ಎಡಗಡೆಗೆ ತಿರುಗಿದೆ ಎನ್ನುತ್ತಾರೆ.

Read more about: rajasthan temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X