Search
  • Follow NativePlanet
Share
» »ಇಂದ್ರನ ಶರೀರದ ಮೇಲೆ ಇರುವ 'ಯೋನಿ'ಯನ್ನು ತೊಲಗಿಸಿ ಶುಚಿಗೊಳಿಸಿದ ಕ್ಷೇತ್ರವಿದು....

ಇಂದ್ರನ ಶರೀರದ ಮೇಲೆ ಇರುವ 'ಯೋನಿ'ಯನ್ನು ತೊಲಗಿಸಿ ಶುಚಿಗೊಳಿಸಿದ ಕ್ಷೇತ್ರವಿದು....

ಭಾರತದೇಶದಲ್ಲಿ ಶುಚಿಂದ್ರದಲ್ಲಿರುವ ಧನುಮಲಯನ್ ಎಂಬ ದೇವಾಲಯದ ಮೂಲ ವಿಗ್ರಹದ ರೂಪವು ವಿಭಿನ್ನವಾಗಿದ್ದು, ಬೇರೆ ಎಲ್ಲೂ ಕೂಡ ನೋಡಲು ಸಾಧ್ಯವಿಲ್ಲ. ಒಂದೇ ವಿಗ್ರಹದಲ್ಲಿ ಶಿವ, ವಿಷ್ಣು ಹಾಗು ಬ್ರಹ್ಮ ದೇವರು ನೆಲೆಸಿರುವುದು ಅಪರೂಪವೇ ಸರಿ.

ಭಾರತದೇಶದಲ್ಲಿ ಶುಚಿಂದ್ರದಲ್ಲಿರುವ ಧನುಮಲಯನ್ ಎಂಬ ದೇವಾಲಯದ ಮೂಲ ವಿಗ್ರಹದ ರೂಪವು ವಿಭಿನ್ನವಾಗಿದ್ದು, ಬೇರೆ ಎಲ್ಲೂ ಕೂಡ ನೋಡಲು ಸಾಧ್ಯವಿಲ್ಲ. ಒಂದೇ ವಿಗ್ರಹದಲ್ಲಿ ಶಿವ, ವಿಷ್ಣು ಹಾಗು ಬ್ರಹ್ಮ ದೇವರು ನೆಲೆಸಿರುವುದು ಅಪರೂಪವೇ ಸರಿ.

ಶುಚಿಂದ್ರ ದತ್ತಾತ್ರೇಯ ಕ್ಷೇತ್ರವಾಗಿಯೂ ಕೂಡ ಪ್ರಸಿದ್ಧಿಯನ್ನು ಹೊಂದಿದೆ. ಆದಿ ಶಂಕರಾಚಾರ್ಯರು ಈ ಶುಚಿಂದ್ರ ಪುಣ್ಯಕ್ಷೇತ್ರವನ್ನು ದರ್ಶಿಸಿದಾಗ ಪರಮಶಿವನ ತಾಂಡವ ನೃತ್ಯವನ್ನು ಪ್ರತ್ಯಕ್ಷವಾಗಿ ನೋಡಿದನು ಎಂದು ಹೇಳುತ್ತಾರೆ.

ಆ ಪರಮೇಶ್ವರನು ಸ್ವಯಂವಾಗಿ ಪ್ರಣಯ ಮಂತ್ರವನ್ನು ಆದಿ ಶಂಕರಾಚಾರ್ಯರಿಗೆ ಈ ಶುಚಿಂದ್ರ ಪುಣ್ಯಕ್ಷೇತ್ರದಲ್ಲಿಯೇ ಉಪದೇಶಿಸಿದನು ಎಂದು ಪುರಾಣದಲ್ಲಿ ಉಲೇಖಿಸಲಾಗಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ರಥೋತ್ಸವವನ್ನು ನೋಡಲು ದೇಶದ ಮೂಲೆ-ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಲಕ್ಷಾಧಿ ಸಂಖ್ಯೆಯಲ್ಲಿ ಪ್ರವಾಸಿಗರು ಈ ಶುಚಿಂದ್ರ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.

1.ಎಷ್ಟೊ ಕಥೆಗಳು

1.ಎಷ್ಟೊ ಕಥೆಗಳು

PC:YOUTUBE

ಶುಚಿಂದ್ರಕ್ಕೆ ಸಂಬಂಧಿಸಿದಂತೆ ಎಷ್ಟೊ ಪುರಾಣ, ಇತಿಹಾಸ ಕಥೆಗಳಿವೆ. ಅವುಗಳಲ್ಲಿ ಒಂದು, ಇಂದ್ರನು ತನ್ನ ಶಾಪವನ್ನು ಕಳೆದುಕೊಳ್ಳುವ ಸಲುವಾಗಿ ಶುಚಿಯಾಗಿ ಮಾರ್ಪಾಟಾದ ಪ್ರದೇಶವೇ ಶುಚಿಂದ್ರವಾಯಿತು ಎಂದು ಹೇಳುತ್ತಾರೆ. ನಿಮಗೆಲ್ಲಾ ತಿಳಿದೇ ಇರುವಂತೆ, ಇಂದ್ರನು ಗೌತಮಿಯ ಪತ್ನಿಯಾದ ಅಹಲ್ಯಯ ಮೇಲೆ ಕಣ್ಣುಹಾಕುತ್ತಾನೆ.

2.ಸೂರ್ಯೋದಯಕ್ಕಿಂತ ಮುಂಚೆ

2.ಸೂರ್ಯೋದಯಕ್ಕಿಂತ ಮುಂಚೆ

PC:YOUTUBE

ಒಂದು ದಿನ ರಾತ್ರಿ ಸೂರ್ಯೋದಯಕ್ಕಿಂತ ಮುಂಚೆ ಗೌತಮ ನಿವಾಸಿಸುತ್ತಿದ್ದ ಪರ್ಣಶಾಲೆಯ ಬಳಿ ತೆರಳಿ ಕೋಳಿಯ ರೂಪದಲ್ಲಿ ಕೂಗುತ್ತಾನೆ. ಗೌತಮನು ಬೆಳ್ಳಿಗ್ಗೆಯಾಯಿತು ಎಂದು ತಿಳಿದುಕೊಂಡು ಸಮೀಪದಲ್ಲಿಯೇ ಇರುವ ನದಿಗೆ ಸ್ನಾನ ಮಾಡಲು ತೆರಳುತ್ತಾನೆ. ಇದೇ ಸಮಯದಲ್ಲಿ ಇಂದ್ರ ದೇವನು ಅಹಲ್ಯ ಇರುವ ಕಡೆ ಹೋಗುತ್ತಾನೆ.

3.ಅಹಲ್ಯ

3.ಅಹಲ್ಯ

PC:YOUTUBE

ಇಂದ್ರನು ಗೌತಮಿ ಮಹರ್ಷಿಯ ವೇಷವನ್ನು ಧರಿಸಿ ಅಹಲ್ಯಯ ಬಳಿ ತೆರಳುತ್ತಾನೆ. ಬಂದಿರುವವನು ತನ್ನ ಪತಿಯೇ ಎಂದು ಅಹಲ್ಯ ಭಾವಿಸುತ್ತಾಳೆ. ಆದರೆ ನದಿಗೆ ಹೋಗಿದ್ದ ಗೌತಮಿಗೆ ಸೂರ್ಯ ಭಗವಾನನು ಕಾಣಿಸುವುದಿಲ್ಲ, ಇದರಿಂದಾಗಿ ಹಿಂದಿರುಗಿ ತನ್ನ ಪರ್ಣಶಾಲೆಗೆ ಮರಳುತ್ತಾನೆ. ಆದರೆ ಅಲ್ಲಿ ಇಂದ್ರನು ತನ್ನ ಪತ್ನಿಯ ಜೊತೆ ಇರುವುದನ್ನು ಕಂಡು ಕೋಪಗೊಳ್ಳುತ್ತಾನೆ.

4.ಗೌತಮಿ ಮಹರ್ಷಿ

4.ಗೌತಮಿ ಮಹರ್ಷಿ

PC:YOUTUBE

ಕಾಮದಿಂದ ಮಹರ್ಷಿಯ ಪತ್ನಿಯೆಂದು ಕೂಡ ನೋಡದೇ ಸೇರಿದ ಇಂದ್ರನ ಮೈ ಎಲ್ಲಾ "ಯೋನಿ" ಉದ್ಭವಿಸಬೇಕು ಎಂದು ಶಪಿಸುತ್ತಾನೆ. ಇದರಿಂದಾಗಿ ಇಂದ್ರನು ಅತ್ಯಂತ ವಿಕಾರವಾಗಿ ಮಾರ್ಪಾಟಾಗುತ್ತಾನೆ. ನಡೆದ ಘಟನೆಯಿಂದ ಚಿಂತಿಸಿದ ಇಂದ್ರನು ತನಗೆ ಶಾಪ ವಿಮುಕ್ತಿ ಉಂಟಾಗುವಂತೆ ಮಾಡಿ ಎಂದು ತ್ರಿಮೂರ್ತಿಗಳ ಬಳಿ ಪ್ರಾರ್ಥಿಸುತ್ತಾನೆ.

5.ಒಂದು ವಿಗ್ರಹದ ಮೇಲೆ

5.ಒಂದು ವಿಗ್ರಹದ ಮೇಲೆ

PC:YOUTUBE

ಅವರ ಸೂಚನೆಯ ಮೇಲೆ ಒಂದೇ ಕಲ್ಲಿನ ಮೇಲೆ ತ್ರಿಮೂರ್ತಿಗಳನ್ನು ಕೆತ್ತನೆ ಮಾಡಿ ಆ ವಿಗ್ರಹವನ್ನು ಶುಚಿಂದ್ರದಲ್ಲಿ ಪ್ರತಿಷ್ಟಾಪನೆ ಮಾಡುತ್ತಾನೆ. ಇನ್ನು ಆ ವಿಗ್ರಹದ ಎದುರಿನಲ್ಲಿರುವ ತೀರ್ಥದಲ್ಲಿ ಪ್ರತಿ ದಿನವು ಸ್ನಾನವನ್ನು ಆಚರಿಸಿ ಭಕ್ತಿಯಿಂದ ಆ ವಿಗ್ರಹಕ್ಕೆ ಪೂಜೆಗಳನ್ನು ಮಾಡುತ್ತಾನೆ. ಇದರಿಂದಾಗಿ ಆತನ ಶರೀರರ ಮೇಲೆ ಇದ್ದ ಯೋನಿಗಳು ತೊಲಗಿ ಶುಚಿಯಾಗಿ ಮಾರ್ಪಾಟಾದನು.

6.ಮತ್ತೊಂದು ಕಥೆಯ ಪ್ರಕಾರ

6.ಮತ್ತೊಂದು ಕಥೆಯ ಪ್ರಕಾರ

PC:YOUTUBE

ಅದ್ದರಿಂದಲೇ ಈ ಕ್ಷೇತ್ರಕ್ಕೆ ಶುಚಿಂದ್ರ ಎಂದು ಕರೆಯುತ್ತಾರೆ. ಮತ್ತೊಂದು ಕಥೆಯ ಪ್ರಕಾರ ತ್ರಿಮೂರ್ತಿಗಳು ಎಂದು ಅತ್ರಿ ಪತ್ನಿಯಾದ ಅನಸೂಯ ಪಾತಿವ್ರತ್ಯವನ್ನು ಪರೀಕ್ಷಿಸುವ ಸಲುವಾಗಿ ಬ್ರಾಹ್ಮಣರ ವೇಶವನ್ನು ಧರಿಸಿ ಭಿಕ್ಷುವಾಗಿ ತೆರಳುತ್ತಾರೆ. ತಮಗೆ ಪ್ರತ್ಯೇಕವಾದ ಆಚಾರವಿರುವುದಿಲಲ್ ಎಂದು ಹೇಳಿ ಅದರ ಪ್ರಕಾರ ನಡೆದುಕೊಂಡರೆ ಮಾತ್ರ ಭೀಕ್ಷೆಯನ್ನು ಸ್ವೀಕರಿಸುತ್ತೇವೆ ಎಂದು ಹೇಳುತ್ತಾರೆ.

7.ನಗ್ನವಾಗಿ

7.ನಗ್ನವಾಗಿ

PC:YOUTUBE

ತಮಗೆ ಭೀಕ್ಷೆಯನ್ನು ನೀಡುವವರು ನಗ್ನವಾಗಿ ಇರಬೇಕು ಎಂದು ಷರತ್ತನ್ನು ವಿಧಿಸುತ್ತಾರೆ. ಇದರಿಂದಾಗಿ ಅನಸೂಯ ತನ್ನ ಶಕ್ತಿಯಿಂದ ಆ ಮೂರು ಜನರನ್ನು ಚಿಕ್ಕ ಮಕ್ಕಳಾಗಿ ಮಾರ್ಪಾಟು ಮಾಡಿ ಉಯ್ಯಾಲೆಯಲ್ಲಿ ಹಾಕುತ್ತಾಳೆ. ಇನ್ನು ತ್ರಿಮೂರ್ತಿಗಳ ಪತ್ನಿಯರಾದ ಲಕ್ಷ್ಮಿ, ಪಾವರ್ತಿ, ಸರಸ್ವತಿ ಬಂದು ಆಕೆಯನ್ನು ಕೇಳಿಕೊಂಡಾಗ ಮರಳಿ ಅವರಿಗೆ ರೂಪವನನು ನೀಡುತ್ತಾಳೆ. ಈ ವಿಷಯ ನಡೆದದ್ದು ಈ ಸುಚಿಂದ್ರದಲ್ಲಿಯೇ ಎಂದು ಹೇಳುತ್ತಾರೆ.

8.ಅದ್ಭುತ ಶಿಲ್ಪಕಲೆ

8.ಅದ್ಭುತ ಶಿಲ್ಪಕಲೆ

PC:YOUTUBE

ಇನ್ನು ಈ ದೇವಾಲಯದಲ್ಲಿನ ಅದ್ಭುತವಾದ ಶಿಲ್ಪಕಲೆಯು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸದೇ ಇರದು. ದೇವಾಲಯದ ಅಲಂಕಾರ ಮಂಟಪವು ಅತ್ಯಂತ ಸುಂದರವಾಗಿರುತ್ತದೆ. ಇವುಗಳಲ್ಲಿ ನಾಲ್ಕು ದೊಡ್ಡದಾದ ಕಲ್ಲಿ ಸ್ತಂಭಗಳು ಇದ್ದು, ಅವುಗಳು ಅನುಬಂಧ ಸ್ತಂಭಗಳಿಂದ ಏಕ ಕಲ್ಲಿನ ನಿರ್ಮಾಣವಾದುದೇ ಈ ಅಲಂಕಾರ ಮಂಟಪ. ಇಲ್ಲಿ 2 ಸ್ತಂಭಗಳಿಗೆ 33 ಚಿಕ್ಕದಾದ ಸ್ತಂಭಗಳು ಇರುತ್ತವೆ.

9.ಸಂಗೀತ ಸ್ವರಗಳು

9.ಸಂಗೀತ ಸ್ವರಗಳು

PC:YOUTUBE

ಅದೇ ವಿಧವಾಗಿ ಮತ್ತೊಂದು 2 ಸ್ತಂಭಗಳಿಗೆ 25 ಚಿಕ್ಕ ಸ್ತಂಭಗಳು ಜೊತೆಗೂಡಿವೆ. ಇವೆಲ್ಲಾ ಸಂಗೀತ ಸ್ತಂಭಗಳೇ. ಯಾವ ಸ್ತಂಭವನ್ನು ಮುಟ್ಟಿದರೂ ಕೂಡ ಸಂಗೀತ ಸ್ವರಗಳು ಕೇಳಿಸುವುದೇ ಈ ಅಲಂಕಾರ ಮಂಟಪದ ವಿಶೇಷತೆ. ಒಂದೊಂದು ಸ್ತಂಭದಿಂದ ಒಂದೊಂದು ವಿಧವಾದ ಸಂಗೀತ ನಾದವು ಕೇಳಿಸುತ್ತವೆ.

10. 18 ಅಡಿಯ ಕಲ್ಲಿನ ವಿಗ್ರಹ

10. 18 ಅಡಿಯ ಕಲ್ಲಿನ ವಿಗ್ರಹ

PC:YOUTUBE

ದೇವಾಲಯದ ಪ್ರಾಂಗಣದಲ್ಲಿ ದೊಡ್ಡ 8 ಅಡಿ ಎತ್ತರದ ಕಲ್ಲಿನ ಹನುಮಂತನ ವಿಗ್ರಹವು ನಮಗೆ ಕಾಣಿಸುತ್ತದೆ. ತಮಿಳುನಾಡಿನಲ್ಲಿ ಇಷ್ಟು ಎತ್ತರದ ಹನುಮಂತನ ವಿಗ್ರಹವು ಬೇರೆ ಎಲ್ಲೂ ಕೂಡ ಇಲ್ಲ ಎಂದು ಹೇಳುತ್ತಾರೆ. ಇನ್ನು ದೇವಾಲಯದ ಪ್ರಧಾನವಾದ ಗೋಪುರದ ಎತ್ತರವು 134 ಅಡಿ ಎತ್ತರವಿದೆ.

11.ಕೋವಿಲ್

11.ಕೋವಿಲ್

PC:YOUTUBE

ಶುಚಿಂದ್ರ ಪಟ್ಟಣಕ್ಕೆ ಸಮೀಪದಲ್ಲಿ ಕನ್ಯಾಕುಮಾರಿ ನಗರಕ್ಕೆ 20 ಕಿ.ಮೀ ದೂರದಲ್ಲಿ ಕೋವಿಲ್ ಎಂಬ ಚಾರಿತ್ರಾತ್ಮಕ ಪ್ರದೇಶವಿದು. ಇಲ್ಲಿ ಡಚ್ಚರಿಗೆ ಹಾಗು ಭಾರತೀಯರ ಮಧ್ಯೆ ಭೀಕರವಾದ ಯುದ್ಧ ನಡೆಯಿತು. ಈ ಪ್ರದೇಶವನ್ನು ನಾವು ಇಂದಿಗೂ ಕಾಣಬಹುದು.

12.ಎಲ್ಲಿದೆ?

12.ಎಲ್ಲಿದೆ?

PC:YOUTUBE

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ಕೇಂದ್ರವಾದ ಕನ್ಯಾಕುಮಾರಿಗೆ ಕೇವಲ 11 ಕಿ.ಮೀ ದೂರದಲ್ಲಿ ಶುಚಿಂದ್ರ ಪುಣ್ಯಕ್ಷೇತ್ರವಿದೆ. ಅದೇ ವಿಧವಾಗಿ ನಾಗರ್ ಕೋಯಿಲ್‍ನಿಂದ 7 ಕಿ.ಮೀ ದೂರ, ತಿರುನಲ್ವೆಲಿಯಿಂದ 105 ಕಿ.ಮೀ, ತಿರುವನಂತಪುರದಿಂದ ಸುಮಾರು 81 ಕಿ. ಮೀ ದೂರ ಪ್ರಯಾಣ ಮಾಡಿದರೆ ಈ ಶುಚಿಂದ್ರಕ್ಕೆ ಸೇರಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X