Search
  • Follow NativePlanet
Share
» »ಇಲ್ಲಿ ನದಿಯಲ್ಲಿ ಹರಿದು ಬಂದ ಚಿನ್ನ ಮಾರಿ ಕೋಟ್ಯಾಧಿಪತಿಗಳಾಗ್ತಾರೆ ಜನರು

ಇಲ್ಲಿ ನದಿಯಲ್ಲಿ ಹರಿದು ಬಂದ ಚಿನ್ನ ಮಾರಿ ಕೋಟ್ಯಾಧಿಪತಿಗಳಾಗ್ತಾರೆ ಜನರು

ನದಿ ಅನೇಕ ಜನರ ಹೊಟ್ಟೆಪಾಡಿನ ಮೂಲವಾಗಿದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಬೆಸ್ತರು ನದಿಯಿಂದಲೇ ತಮ್ಮ ಕುಟುಂಬವನ್ನು ಸಾಕುತ್ತಿದ್ದಾರೆ. ಆದರೆ ನಾವಿಂದು ಬೆಸ್ತರ ವಿಷ್ಯವಾಗಲೀ ಅಥವಾ ಇನ್ಯಾವುದೋ ಕೆಲಸ ವಿಷ್ಯ ಹೇಳುತ್ತಿಲ್ಲ. ಇಂದು ನಾವು ಒಂದು ನಿರ್ಧಿಷ್ಟ ನದಿಯ ಬಗ್ಗೆ ಹೇಳುತ್ತಿದ್ದೇವೆ. ಆ ನದಿಯೇ ಸ್ವರ್ಣ ರೇಖಾ ನದಿ.

ನದಿಯಲ್ಲಿ ಚಿನ್ನ

ನದಿಯಲ್ಲಿ ಚಿನ್ನ

PC: Antorjal

ಭಾರತದಲ್ಲಿ ಚಿನ್ನದ ಬೆಲೆ ಆಕಾಶವನ್ನು ಮುಟ್ಟಿರುವಾಗ ಇನ್ನೊಂದೆಡೆ ಚಿನ್ನವು ಅಕ್ಕಿಯ ಬೆಲೆಗೆ ಸಿಗುತ್ತಿದೆ. ಅದು ಹೇಗೆಂದರೆ ಇಲ್ಲಿನ ಸ್ವರ್ಣ ರೇಖಾ ನದಿಯಲ್ಲಿ ಚಿನ್ನ ಹರಿಯುತ್ತದೆ. ಇಲ್ಲಿನ ಜನರು ಅನಕ್ಷರಸ್ಥರು ಹಾಗಾಗಿ ಬೇರೆ ಯಾವ ಕೆಲಸವೂ ಅವರಿಗೆ ತಿಳಿದಿಲ್ಲ. ಅಲ್ಲಿನ ಪ್ರತಿ ಮನೆಯ ಜನರು ಈ ನದಿಯಲ್ಲಿ ಹರಿಯಯವ ಚಿನ್ನದ ಕಣವನ್ನು ಸಂಗ್ರಹಿಸುವುದರಲ್ಲೇ ತೊಡಗಿರುತ್ತಾರೆ.

ಹಿಮಾಲಯದ ಈ ಆಶ್ರಮದೊಳಗೆ ಇರುವವರಿಗೆ ಯಾರಿಗೂ ಸಾವಿಲ್ಲವಂತೆ!

ಸ್ವರ್ಣ ರೇಖಾ ನದಿ

ಸ್ವರ್ಣ ರೇಖಾ ನದಿ

PC:Sumita Roy Dutta

ಜಾರ್ಖಂಡ್‌ನ ಸ್ವರ್ಣ ರೇಖಾ ನದಿಯು ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಓಡಿಸ್ಸಾದಿಂದ ಹರಿಯುವ ಈ ನದಿಯು ಹಲವಾರು ವರ್ಷಗಳಿಂದ ಇಲ್ಲಿನ ಜನರನ್ನು ಸಾಕುತ್ತಿದೆ. ಇಲ್ಲಿನ ಜನರು ದಿನನಿತ್ಯ ಚಿನ್ನಡ ಕಣವನ್ನು ಹುಡುಕುವುದರಲ್ಲೇ ತೊಡಗಿರುತ್ತಾರೆ.

ಚಿನ್ನ ಆರಿಸೋದರಲ್ಲಿ ತೊಡಗಿರುವ ಆದಿವಾಸಿಗಳು

ಚಿನ್ನ ಆರಿಸೋದರಲ್ಲಿ ತೊಡಗಿರುವ ಆದಿವಾಸಿಗಳು

PC:Pinakpani

ಈ ನದಿಯಲ್ಲಿ ಹರಿಯುವ ಚಿನ್ನವನ್ನು ಮಾರಾಟಮಾಡಿ ಕೋಟ್ಯಾಧಿಪತಿಗಳಾದವರೂ ಇದ್ದಾರೆ. ಅನೇಕ ವರ್ಷಗಳಿಂದ ಈ ನದಿಯಲ್ಲಿ ಚಿನ್ನದ ಕಣಗಳು ಹರಿಯುತ್ತಿದೆ. ಜಾರ್ಖಂಡ್‌ನ ತಮಾಡ್ ಹಾಗೂ ಸಾರಣಾದ ಆದಿವಾಸಿಗಳು ಈ ಕೆಲಸವನ್ನೇ ಮಾಡುತ್ತಾರೆ. ಮಹಿಳೆಯರು, ಪುರುಷರು, ಮಕ್ಕಳು ಎಲ್ಲರೂ ಇದೇ ಕೆಲಸ ಮಾಡುತ್ತಾರೆ.

ರಾಣಿ ಪದ್ಮಿಣಿ ಆತ್ಮ ಇಂದಿಗೂ ಜೋಹರ್ ಕುಂಡದಲ್ಲಿದೆಯಂತೆ !ರಾಣಿ ಪದ್ಮಿಣಿ ಆತ್ಮ ಇಂದಿಗೂ ಜೋಹರ್ ಕುಂಡದಲ್ಲಿದೆಯಂತೆ !

ಬಂಗಾರದ ಕಣಗಳು

ಬಂಗಾರದ ಕಣಗಳು

PC:Skmishraindia

ನದಿಯು ದೊಡ್ಡ ದೊಡ್ಡ ಪರ್ವತಗಳಿಂದ ಹರಿದು ಬರುತ್ತದೆ. ಆ ಸಂದರ್ಭದಲ್ಲಿ ಘರ್ಷಣೆ ಉಂಟಾಗಿ ಬಂಗಾರದ ಕಣಗಳು ಬರುತ್ತಿವೆ ಎನ್ನುತ್ತಾರೆ ಭೂ ವಿಜ್ಞಾನ ತಜ್ಞರು. ಇಂದು ದಿನದಲ್ಲಿ ಕೇವಲ ಒಂದು ಅಥವಾ ಎರಡು ಕಣಗಳು ಮಾತ್ರ ಸಿಗುತ್ತದೆ. ಒಂದು ತಿಂಗಳಲ್ಲಿ 50 , 60 ಚಿನ್ನದ ಕಣಗಳು ಸಿಗುತ್ತವೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಪ್ರತಿಯೊಂದು ಕಣಕ್ಕೆ 60 ರಿಂದ 100 ರೂ. ಒಳಗೆ ಇರುತ್ತದೆ.

ಕಾರಣ ಪತ್ತೆಯಾಗಿಲ್ಲ

ಕಾರಣ ಪತ್ತೆಯಾಗಿಲ್ಲ

PC: Anupmahato

ಯಾವುದೇ ಮೆಷಿನ್‌ನಿಂದಲೂ ಕಂಡುಬಂದಿಲ್ಲ. ಕಾಂಚಿ ಹಾಗೂ ಕರ್ಕರಿ ಇದರ ಉಪನದಿಗಳಾಗಿ. ಕರ್ಕರಿ ನದಿಯಿಂದ ಹರಿದು ಚಿನ್ನದ ಕಣಗಳು ಸ್ವರ್ಣ ರೇಖಾದ ಜೊತೆ ಸೇರುತ್ತದೆ ಎನ್ನಲಾಗುತ್ತದೆ. ಪ್ರವಾಹ ಬಂದಾಗ ಎರಡು ತಿಂಗಳುಗಳ ಕಾಲ ಈ ಕೆಲಸವನ್ನು ನಿಲ್ಲಿಸಲಾಗುತ್ತದೆ. ಅಕ್ಷರ ಜ್ಞಾನ ಇಲ್ಲದ ಈ ಆದಿವಾಸಿಗಳು ಈ ಚಿನ್ನದ ಕಣವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಅದನ್ನು ಕೊಂಡ ಸೇಟ್‌ಗಳು ಅದನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಿ ಕೋಟ್ಯಾಧಿಪತಿಗಳಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X