Search
  • Follow NativePlanet
Share
» »ಜುಲೈನಲ್ಲಿ ಭೇಟಿ ನೀಡಲೇ ಬೇಕಾದ ಮಾನ್ಸೂನ್ ತಾಣಗಳಿವು

ಜುಲೈನಲ್ಲಿ ಭೇಟಿ ನೀಡಲೇ ಬೇಕಾದ ಮಾನ್ಸೂನ್ ತಾಣಗಳಿವು

ಕರಾವಳಿಯಲ್ಲಿ ಈಗಾಗ್ಲೇ ಮಾನ್ಸೂನ್‌ ಕಾಲಿಟ್ಟಿದೆ. ಹವಾಮಾನವು ಬದಲಾಗಿದೆ. ಜಲಪಾತಗಳು, ನದಿಗಳು ಮತ್ತು ಸರೋವರಗಳು ತುಂಬಿವೆ. ಈ ಮಾನ್ಸೂನ್‌ನಲ್ಲಿ ಪ್ರವಾಸ ಹೋಗೋದಂದ್ರೆ ಬಹುತೇಕರಿಗೆ ಇಷ್ಟ ಆಗೋದಿಲ್ಲವಾದರೂ ಕೆಲವರಿಗೆ ಇಷ್ಟವಾಗುತ್ತದೆ. ನಿಮಗೆ ಮಳೆಗಾಲದಲ್ಲಿ ಪ್ರವಾಸ ಕೈಗೊಳ್ಳಬೇಕೆಂಬ ಆಸೆ ಇದ್ದರೆ ಈ ಜುಲೈನಲ್ಲಿ ಪ್ರವಾಸ ಬೆಳೆಸಲು ಬೆಸ್ಟ್ ಸಮಯವಾಗಿದೆ.

ಹಾಗಾದರೆ ಈ ಜುಲೈನಲ್ಲಿ ಪ್ರಯಾಣ ಬೆಳೆಸಲು ಸರಿಯಾದ ತಾಣಗಳು ಯಾವುವು ಅನ್ನೋದನ್ನು ನೋಡೋಣ...

 ಲಡಾಖ್

ಲಡಾಖ್

ಜುಲೈನಲ್ಲಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಲ್ಲಿ ಲಡಾಖ್ ಕೂಡಾ ಒಂದು. ಕಾಶ್ಮೀರದ ಹಿಮಾಲಯ ಪರ್ವತದಲ್ಲಿರುವ ಲಡಾಖ್‌ಗೆ ಭೇಟಿ ನೀಡಲು ವರ್ಷದ ಈ ಸಮಯ ಸೂಕ್ತವಾಗಿದೆ. ಲಡಾಖ್‌ನಲ್ಲಿ ಅನ್ವೇಷಿಸಲು ಮತ್ತು ಅನುಭವಿಸಲು ಬಹಳಷ್ಟು ಇದೆ. ಸಾಹಸ ಚಟುವಟಿಕೆಗಳಿಂದ ಹಿಡಿದು ಬೈಕಿಂಗ್, ಟ್ರೆಕ್ಕಿಂಗ್ ಮತ್ತು ಬಿಳಿ-ನೀರಿನ ರಾಫ್ಟಿಂಗ್‌ , ವಿಹಾರ ಚಟುವಟಿಕೆಗಳಿಗೆ, ಒಂಟೆ ಸವಾರಿ ಮತ್ತು ಯಾಕ್ ರೈಡ್‌ , ಶಾಪಿಂಗ್ ನಂತಹ ಅನೇಕ ಚಟುವಟಿಕೆಗಳು ಇವೆ.

 ಮುನ್ನಾರ್‌ಗೆ ಹೋಗಿದ್ರೂ ಈ ಅದ್ಭುತ ಗಿರಿಧಾಮವನ್ನು ನೀವು ನೋಡಿರಲಿಕ್ಕಿಲ್ಲ ಮುನ್ನಾರ್‌ಗೆ ಹೋಗಿದ್ರೂ ಈ ಅದ್ಭುತ ಗಿರಿಧಾಮವನ್ನು ನೀವು ನೋಡಿರಲಿಕ್ಕಿಲ್ಲ

ಲಾಹೌಲ್-ಸ್ಪಿತಿ

ಲಾಹೌಲ್-ಸ್ಪಿತಿ

ಹಿಮಾಚಲ ಪ್ರದೇಶದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಲಾಹೌಲ್ ಸ್ಪಿತಿ ಕೂಡಾ ಸೇರಿದೆ. ಲಾಹೌಲ್ ಮತ್ತು ಸ್ಪಿತಿ ಪ್ರವಾಸಿಗರು ಭೇಟಿ ನೀಡುವ ಅದ್ಭುತ ತಾಣವಾಗಿದೆ. ಸುಂದರವಾದ ಭೂದೃಶ್ಯ, ಆಕಾಶ ನೀಲಿ ನದಿಗಳು, ಎತ್ತರದ ಪರ್ವತಗಳು, ಆಲ್ಪೈನ್ ಸರೋವರಗಳು, ಸುಂದರವಾದ ಮರಗಳು ಮತ್ತು ಹಳ್ಳಿಗಳು ಮತ್ತು ಸ್ನೇಹಪರ ಜನರು ಎಲ್ಲವೂ ನಿಮ್ಮನ್ನು ಆಕರ್ಷಿಸುತ್ತದೆ. ಹಾಗಾಗಿ ಲಾಹೌಲ್ ಮತ್ತು ಸ್ಪಿತಿಗೆ ಈ ಋತುವಿನಲ್ಲಿ ಪ್ರಯಾಣಿಸುವುದು ಒಳ್ಳೆಯದು.

ಅಲೆಪ್ಪಿ

ಅಲೆಪ್ಪಿ

ಕೇರಳ ಮಾನ್ಸೂನ್‌ ಅತ್ಯಂತ ರೋಮ್ಯಾಂಟಿಕ್ ಆಗಿವೆ. ಕೇರಳದಲ್ಲಿ ಅನೇಕ ಆಕರ್ಷಣೀಯ ಪ್ರವಾಸಿ ತಾಣಗಳಿವೆ. ನೀವು ಈಗಾಗಲೇ ಕೇರಳಕ್ಕೆ ಹೋಗಿದ್ದರೆ ಅಲ್ಲಿನ ಪ್ರಕೃತಿ ಸೌಂದರ್ಯದ ನಡುವೆ ಮಳೆ ಹನಿ ಬೀಳುತ್ತಿದ್ದರೆ ಎಷ್ಟೊಂದು ಅದ್ಭಯತವಾಗಿರುತ್ತದೆ ಅಲ್ಲವೆ. ನೀವು ನಿಮ್ಮ ಪ್ರೀತಿ ಪಾತ್ರರ ಜೊತೆ ಇಲ್ಲಿ ಕಾಲ ಕಳೆಯಬಹುದು. ಬೋಟ್‌ ಮೂಲಕ ಹಿನ್ನೀರಿನ ಆನಂದವನನ್ನು ಪಡೆಯಬಹುದು. ಒಟ್ಟಾರೆ ಈ ಮುಂಗಾರಿನಲ್ಲಿ ಒಂದು ರೋಮ್ಯಾಂಟಿಕ್ ಪ್ರವಾಸವನ್ನು ಕೈಗೊಳ್ಳಬಹುದು.

ಶಿವಮೊಗ್ಗ

ಶಿವಮೊಗ್ಗ

PC: Sarvagnya

ಪಶ್ಚಿಮ ಘಟ್ಟಗಳಿಂದ ಕೂಡಿದ ನೈಸರ್ಗಿಕವಾಗಿ ಶ್ರೀಮಂತವಾಗಿರುವ ಪ್ರದೇಶವೆಂದರೆ ಶಿವಮೊಗ್ಗ. ಮಲೆನಾಡಾಗಿರುವ ಈ ಪ್ರದೇಶವು ಜೋಗ್ ಫಾಲ್ಸ್‌ಗೆ ಹೆಸರುವಾಸಿಯಾಗಿದೆ. ಇದು ಭಾರತದ ಎರಡನೇ ಅತಿ ಎತ್ತರದ ಜಲಪಾತವಾಗಿದೆ. ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಎತ್ತರದಿಂದ ಧುಮ್ಮುಕ್ಕುವ ಈ ಜಲಪಾತದ ದೃಶ್ಯ ನಿಜಕ್ಕೂ ಮನಮೋಹಕವಾಗಿದೆ. ಮಳೆಗಾಲದಲ್ಲಂತೂ ಈ ಜಲಪಾತ ತುಂಬಿ ತುಳುಕುತ್ತಿರುತ್ತದೆ.

ಮಿಸ್ ಮಾಡಲೇಬಾರದ ದೇವಾಲಯಗಳಿವು; ಇಲ್ಲಿ ಪ್ರಾರ್ಥಿಸಿದ್ರೆ ಕಾಯಿಲೆ ಗುಣವಾಗುತ್ತಂತೆ!ಮಿಸ್ ಮಾಡಲೇಬಾರದ ದೇವಾಲಯಗಳಿವು; ಇಲ್ಲಿ ಪ್ರಾರ್ಥಿಸಿದ್ರೆ ಕಾಯಿಲೆ ಗುಣವಾಗುತ್ತಂತೆ!

ಕೊಡೈಕೆನಾಲ್

ಕೊಡೈಕೆನಾಲ್

ಪ್ರವಾಸಿಗರ ಸ್ವರ್ಗ ಎಂದೇ ಕರೆಯಲಾಗುವ ಕೊಡೈಕೆನಾಲ್ ತಂಪಾಗಿರುವ ವಾತಾವರಣದಿಂದ ಕೂಡಿದೆ. ಮಂಜಿನಿಂದ ಆವೃತವಾದ ಕಾಲುದಾರಿಗಳಲ್ಲಿ ಮತ್ತು ಪೈನ್ ಕಾಡುಗಳ ಮೂಲಕ ನಡೆದುಕೊಂಡು ಹೋಗುವುದರಲ್ಲಿ ಉಂಟಾಗುವ ಉಲ್ಲಾಸಭರಿತ ಅನುಭವ ಹಾಗೂ ಸಿಲ್ವರ್ ಕ್ಯಾಸ್ಕೇಡ್ ಜಲಪಾತದ ತಂಪಾದ ನೀರಿನಲ್ಲಿ ನಿಮ್ಮ ಪಾದಗಳನ್ನು ಒದ್ದೆ ಮಾಡುವುದರಲ್ಲಿನ ಅನುಭವವು ನಿಜಕ್ಕೂ ಅನುಭವವಾಗಿದೆ.

ಶಿಲ್ಲಾಂಗ್‌

ಶಿಲ್ಲಾಂಗ್‌

ಶಿಲ್ಲಾಂಗ್, ಈಶಾನ್ಯ ಭಾರತದ ಅತಿ ಪ್ರಸಿದ್ಧವಾದ ಪ್ರವಾಸಿ ತಾಣಗಳಲ್ಲೊಂದು . ಹಚ್ಚ ಹಸಿರಾದ ಸಾಗುವಳಿ ಭೂಮಿ, ನಯನ ಮನೋಹರವಾದ ಪ್ರಾಕೃತಿಕ ಪ್ರದೇಶಗಳು, ಅತ್ಯುನ್ನತ ಪರ್ವತಶ್ರೇಣಿಗಳು ಇಲ್ಲಿನ ವಿಶೇಷತೆಯಾಗಿದೆ. ಮೇಘಾಲಯವು ಮಳೆಗಾಲದಲ್ಲಿ ಭೇಟಿ ನೀಡಲು ಉತ್ತಮವಾದ ತಾಣವಾಗಿದೆ. ಬೇರಿನ ಸೇತುವೆಗಳು ಇಲ್ಲಿನ ವಿಶೇಷತೆಗಳಲ್ಲೊಂದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X