Search
  • Follow NativePlanet
Share
» »ನೀವು ನೋಡಲೇ ಬೇಕಾಗಿರುವ ದೇಶದ ಅದ್ಭುತ ಬ್ರಿಡ್ಜ್‌ಗಳಿವು

ನೀವು ನೋಡಲೇ ಬೇಕಾಗಿರುವ ದೇಶದ ಅದ್ಭುತ ಬ್ರಿಡ್ಜ್‌ಗಳಿವು

ಭಾರತದ ನದಿಗಳು ಹಾಗೂ ಸಮುದ್ರಗಳು ಅದ್ಭುತ ವಾಸ್ತುಶಿಲ್ಪ ಹಾಗೂ ಎಂಜಿನಿಯರಿಂಗ್ ಮಾದರಿಗಳಿಂದ ಕೂಡಿದ ಅನೇಕ ಬ್ರಿಡ್ಜ್‌ಗಳ ತವರೂರಾಗಿದೆ. ಈ ರೈಲು ಹಾಗೂ ರಸ್ತೆ ಸೇತುವೆಗಳು ಕೇವಲ ನಿಮ್ಮನ್ನು ದೂರದ ಸ್ಥಳಗಳಿಗೆ ಸಂಪರ್ಕಿಸುವುದು ಮಾತ್ರವಲ್ಲ ನಿಮ್ಮ ಪ್ರಯಾಣವನ್ನೂ ಸುಗಮವಾಗಿಸುತ್ತದೆ. ಅಷ್ಟೇ ಅಲ್ಲದೆ ಫೋಟೋ ತೆಗೆಯಲು ಉತ್ತಮ ಸ್ಥಳವಾಗಿದೆ. ನೀವು ಈ ಬ್ರಿಡ್ಜ್‌ಗಳ ಮೇಲೆ ಪ್ರಯಾಣಿಸುವುದಾದರೆ ಕೈಯಲ್ಲಿ ಕ್ಯಾಮಾರ ಹಿಡಿಯಲೇ ಬೇಕು.

ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ನಂ.1 ಯಾವುದು ಹೇಳಿ ನೋಡೋಣ?ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ನಂ.1 ಯಾವುದು ಹೇಳಿ ನೋಡೋಣ?

ಕೋಲಿಯಾ ಬ್ರಿಡ್ಜ್

ಕೋಲಿಯಾ ಬ್ರಿಡ್ಜ್

PC: Tezpur4u

ಬ್ರಹ್ಮಪುತ್ರ ನದಿಗೆ ಕಟ್ಟಲಾಗಿರುವ ಸೇತುವೆಯಲ್ಲಿ ಕೋಲಿಯಾ ಬೋಮರಾ ಸೇತು ಎನ್ನಲಾಗುತ್ತದೆ. ಇದು ಆಸ್ಸಾಂನ ತೇಜಪುರ್ ನಲ್ಲಿರುವ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಈ ರಸ್ತೆ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆಯು ಬ್ರಹ್ಮಪುತ್ರ ನದಿಯ ಉತ್ತರ ತಟದ ಸೋನಿತಪುರ್ ಅನ್ನು ದಕ್ಷಿಣ ತಟದ ನಗಾಂವ್ ಜಿಲ್ಲೆಗೆ ಸಂಪರ್ಕಿಸುತ್ತದೆ. ಸಂಜೆ ಹೊತ್ತಿಗೆ ಈ ಬ್ರಿಡ್ಜ್‌‌ನಲ್ಲಿ ಪ್ರಯಾಣಿಸಬೇಕು. ಇಡೀ ಬ್ರಿಡ್ಜ್ ಲೈಟ್‌ನಿಂದ ಕಂಗೊಳಿಸುತ್ತದೆ.

ಗೋದಾವರಿ ಬ್ರಿಡ್ಜ್

ಗೋದಾವರಿ ಬ್ರಿಡ್ಜ್

PC: Vinay kumar malyam upadyaya

ದಕ್ಷಿಣ ಭಾರತದ ಅತೀ ದೊಡ್ಡ ನದಿಯಾಗಿರುವ ಗೋದಾವರಿ ನದಿಗೆ ಬ್ರಿಡ್ಜ್ ನಿರ್ಮಿಸಲಾಗಿದ್ದು ಇಲ್ಲಿ ರೈಲು ಹಾಗೂ ರಸ್ತೆ ಸೇತುವೆಯಾಗಿದೆ. ವರ್ಷಗಟ್ಟಲೇ ಪ್ಲ್ಯಾನ್ ಮಾಡಿದ ನಂತರ 4.2 ಕಿ.ಮೀ ಉದ್ದದ ಇಂತಹ ಒಂದು ಅದ್ಭುತ ಸೇತುವೆಯ ನಿರ್ಮಾಣ ಮಾಡಲಾಗಿದೆ.ಪರಶುರಾಮ ತನ್ನ ತಾಯಿಯ ತಲೆ ಕಡಿದ ಸ್ಥಳ ಇದು

ಕೊವ್ವುರ್ - ರಾಜಮಂಡ್ರಿ ಸೇತುವೆ

ಕೊವ್ವುರ್ - ರಾಜಮಂಡ್ರಿ ಸೇತುವೆ

PC: Palagiri

ಆಂಧ್ರ ಪ್ರದೇಶದಲ್ಲಿರುವ ಈ ಸೇತುವೆಯನ್ನು ಕೊವ್ವುರ್ - ರಾಜಮಂಡ್ರಿ ಸೇತುವೆ ಎಂದೂ ಕರೆಯಲಾಗುತ್ತದೆ. ರಾಜಮಂಡ್ರಿಯ ಗೋದಾವರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಸೇತುವೆಯು ಏಷಿಯಾದಲ್ಲೆ ಎರಡನೇಯ ಅತಿ ಉದ್ದದ ವಾಹನ ಹಾಗು ರೈಲು ಚಲಿಸುವ ವ್ಯವಸ್ಥೆಯಿರುವ ಸೇತುವೆ ಎಂಬ ಬಿರುದನ್ನು ಪಡೆದಿದೆ.

ಹೊಸ ಯಮುನಾ ಸೇತುವೆ

ಹೊಸ ಯಮುನಾ ಸೇತುವೆ

PC: Abhijeet Vardhan

ಇದು ಭಾರತದ ಅತಿ ಉದ್ದನೆಯ ತೂಗು ತಂತಿಗಳ ಸೇತುವೆಯಾಗಿದೆ. ಭಾರತದ ಅಲಹಾಬಾದ್ ನಗರದಲ್ಲಿರುವ ಈ ಸೇತುವೆಯನ್ನು 2004 ರಲ್ಲಿ ನಿರ್ಮಿಸಲಾಯಿತು. ಹಳೆಯ ನೈನಿ ಸೇತುವೆ ಮೇಲೆ ಆಗುತ್ತಿದ್ದ ಅಪಾರವಾದ ಟ್ರಾಫಿಕ್ ದಟ್ಟನೆಯನ್ನು ಮಿತವ್ಯಯಗೊಳಿಸುವ ಉದ್ದೇಶದಿಂದ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆಯು ಅಲಹಾಬಾದ್ ನಗರವನ್ನು ನೈನಿಯೊಂದಿಗೆ ಸಂಪರ್ಕಿಸುತ್ತದೆ.

ಬಾಂದ್ರಾ-ವರ್ಲಿ ಸೀ ಲಿಂಕ್

ಬಾಂದ್ರಾ-ವರ್ಲಿ ಸೀ ಲಿಂಕ್

PC:Rahulransubhe

ಮಹಾರಾಷ್ಟ್ರದ ಮುಂಬೈನಲ್ಲಿರುವ ಈ ಸೇತುವೆಯನ್ನು ಅಧಿಕೃತವಾಗಿ ರಾಜೀವ್ ಗಾಂಧಿ ಸೀ ಲಿಂಕ್ ಎಂದು ಕರೆಯುತ್ತಾರೆ. ಮುಂಬೈನ ಪಶ್ಚಿಮ ಭಾಗದ ಬಾಂದ್ರಾ ಪ್ರದೇಶವನ್ನು ದಕ್ಷಿಣ ಮುಂಬೈನ ವರ್ಲಿ ಪ್ರದೇಶಕ್ಕೆ ಸಂಪರ್ಕಿಸುವ ಕೊಂಡಿಯಾಗಿದೆ ಸಮುದ್ರ ಸೇತುವೆ. 1600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸೇತುವೆಯು ಒಟ್ಟಾರೆ 5.6 ಕಿ.ಮೀ ಉದ್ದವನ್ನು ಹೊಂದಿದೆ.

ವಿದ್ಯಾಸಾಗರ ಸೇತುವೆ

ವಿದ್ಯಾಸಾಗರ ಸೇತುವೆ

PC:Dibyendu

ಎರಡನೆಯ ಹೂಗ್ಲಿ ಸೇತುವೆ ಅಥವಾ ವಿದ್ಯಾಸಾಗರ ಸೇತುವೆಯನ್ನು 10 ಅಕ್ಟೋಬರ್ 1992 ರಂದು ಕಾರ್ಯಾರಂಭ ಮಾಡಲಾಯಿತು. ಹೂಗ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಇದು ಒಂದು ಟಾಲ್(ಸೇವಾ ಶುಲ್ಕ) ಸೇತುವೆಯಾಗಿದ್ದು ಕೊಲ್ಕತ್ತಾ ನಗರವನ್ನು ಹೌರಾದೊಂದಿಗೆ ಬೆಸೆಯುತ್ತದೆ. ಪ್ರತಿನಿತ್ಯ 30,000 ವಾಹನಗಳ ಸಂಚಾರ ಈ ಸೇತುವೆಯ ಮೇಲಿರುತ್ತದೆ.

ನಿವೇದಿತಾ ಸೇತುವೆ

ನಿವೇದಿತಾ ಸೇತುವೆ

PC:Arpanhmr

ಪಶ್ಚಿಮ ಬಂಗಾಳದ ಹೂಗ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಮತ್ತೊಂದು ಸೇತುವೆ ಇದಾಗಿದೆ. ವಿವೇಕಾನಂದ ಸೇತುವೆಗೆ ಸಮಾನಾಂತರವಾಗಿ ಸ್ವಲ್ಪ ದೂರದಲ್ಲಿ ಇದನ್ನು ನಿರ್ಮಿಸಲಾಗಿದೆ. 1932 ರಲ್ಲಿ ಉದ್ಘಾಟನೆಗೊಂಡ ಈ ಸೇತುವೆಯು ಸಿಸ್ಟರ್ ನಿವೇದಿತಾರ ಗೌರವಾರ್ಥವಾಗಿ ತನ್ನ ಹೆಸರನ್ನು ಪಡೆದುಕೊಂಡಿದೆ. ಬೆಲ್ಘೋರಿಯಾ ಎಕ್ಸ್ ಪ್ರೆಸ್ ವೇ ಈ ಸೇತುವೆಯ ಮೂಲಕ ಹಾದು ಹೋಗುತ್ತದೆ. ಪ್ರತಿನಿತ್ಯ 48,000 ವಾಹನಗಳ ಸಾಮರ್ಥ್ಯಕ್ಕನುಗುಣವಾಗಿ ಈ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದೆ.

ಶರಾವತಿ ರೈಲು ಸೇತುವೆ

ಶರಾವತಿ ರೈಲು ಸೇತುವೆ

PC:Ginjeet

ಕರ್ನಾಟಕದ ಹೊನ್ನಾವರದ ದಕ್ಷಿಣಕ್ಕೆ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ರೈಲು ಸೇತುವೆಯು ಕೊಂಕಣ ರೈಲಿಗಾಗಿ ಮೀಸಲಾಗಿದೆ. 2,060 ಮೀ. ಉದ್ದವಿರುವ ಈ ಸೇತುವೆ ಕರ್ನಾಟಕದ ಅತಿ ಉದ್ದನೆಯ ರೈಲು ಸೇತುವೆಯಾಗಿದೆ

ಹೌರಾ ಸೇತುವೆ

ಹೌರಾ ಸೇತುವೆ

PC: Srikumar74

ಪಶ್ಚಿಮ ಬಂಗಾಳದ ಹೆಗ್ಗುರುತಾದ ಹೌರಾ ಸೇತುವೆಯನ್ನು ಹೂಗ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಜಗತ್ತಿನಲ್ಲೆ ಅತಿ ಹೆಚ್ಚು ಜನದಟ್ಟನೆಯಿಂದ ಕೂಡಿದ ಕ್ಯಾಂಟಿಲೀವರ್ ಸೇತುವೆ ಇದಾಗಿದೆ. ಏನಿಲ್ಲವೆಂದರೂ ಪ್ರತಿದಿನ ಸುಮಾರು 100.000 ವಾಹನಗಳು ಹಾಗು 150,000 ಪಾದಚಾರಿಗಳ ಸಂಚಾರವಿರುತ್ತದೆ ಈ ಸೇತುವೆಯ ಮೇಲೆ. ಜಗತ್ತಿನ ಈ ರೀತಿಯ ಆರನೇಯ ಅತಿ ಉದ್ದದ ಸೇತುವೆಯೆಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

ವೆಂಬಾನಂದ್ ರೈಲ್ವೆ ಬ್ರಿಡ್ಜ್

ವೆಂಬಾನಂದ್ ರೈಲ್ವೆ ಬ್ರಿಡ್ಜ್

PC:Dr. Ajay Balachandran

ಭಾರತ ಉದ್ದನೆಯ ರೈಲ್ವೆ ಬ್ರಿಡ್ಜ್ ಇದಾಗಿದೆ. ಕೇರಳದಲ್ಲಿರುವ ಈ ಬ್ರಿಡ್ಜ್ ಇಡಪಲ್ಲಿ ಹಾಗೂ ವಲ್ಲಾರಪದಮ್‌ ಕೊಚ್ಚಿಯನ್ನು ಸಂಪರ್ಕಿಸುತ್ತದೆ.4.6 ಕಿ.ಮಿ ಉದ್ದವಿರುವ ಈ ಬ್ರಿಡ್ಜ್‌ನ್ನು11700 ಟನ್ ಸ್ಟೀಲ್ ಹಾಗೂ 58000 ಟನ್‌ ಸಿಮೆಂಟ್ ಬಳಸಿ ನಿರ್ಮಿಸಲಾಗಿದೆ. ಈ ಬ್ರಿಡ್ಜ್‌ನಲ್ಲಿ ದಿನಕ್ಕೆ 15ರೈಲುಗಳು ಸಾಗುತ್ತವೆ.

ರಾಮ್ ಜೂಲಾ ಹಾಗೂ ಲಕ್ಷ್ಮಣ ಜೂಲಾ

ರಾಮ್ ಜೂಲಾ ಹಾಗೂ ಲಕ್ಷ್ಮಣ ಜೂಲಾ

PC: Pranavspn

ರಿಷಿಕೇಶ್‌ನ ಗಂಗಾ ನದಿಗೆ ರಾಮ್ ಜೂಲಾ ಹಾಗೂ ಲಕ್ಷ್ಮಣ ಜೂಲಾ ಎನ್ನುವ ಸೇತುವೆ ನಿರ್ಮಿಸಲಾಗಿದೆ. ಇದು ಬೆಟ್ಟದ ಸುತ್ತಮುತ್ತಲಿನ ಕಣಿವೆಗಳು ಮತ್ತು ದಟ್ಟ ಕಾಡುಗಳ ಅದ್ಭುತ ದೃಶ್ಯಗಳನ್ನು ನೀಡುವ ಮೂಲಕ, ಪಾದಚಾರಿ ಬಳಕೆಗಾಗಿ ಮಾತ್ರ ಈ ಸೇತುವೆಯನ್ನು ಬಳಸಬಹುದಾಗಿದೆ. ನೀವು ರಿಷಿಕೇಶ್‌ಗೆ ಭೇಟಿ ನೀಡಿದ್ದಲ್ಲಿ ಈ ಸೇತುವೆಯನ್ನ ನೋಡಲೇ ಬೇಕು.

Read more about: india travel river
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X