Search
  • Follow NativePlanet
Share
» »ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು ಯಾವುವು ಗೊತ್ತ?

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು ಯಾವುವು ಗೊತ್ತ?

ಸೆಲ್ಪಿ ಹುಚ್ಚು ಎಂದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂದೇ ಹೇಳಬಹುದು. ಹಾಗಾದರೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಉತ್ತಮ ಪ್ರದೇಶದ ಅಗತ್ಯವಿದೆ ಅಲ್ಲವೇ. ಹಾಗಾದರೆ ಒಮ್ಮೆ ಲೇಖನದಲ್ಲಿ ಹೇಳುವ ವಿಶೇಷವಾದ ಶಿಲಾ ರಚನೆಗಳ ಮಧ್ಯೆ ಇಂದಿನ ಯುವ ಜನತ

ಸೆಲ್ಪಿ ಹುಚ್ಚು ಎಂದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂದೇ ಹೇಳಬಹುದು. ಹಾಗಾದರೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಉತ್ತಮ ಪ್ರದೇಶದ ಅಗತ್ಯವಿದೆ ಅಲ್ಲವೇ. ಹಾಗಾದರೆ ಒಮ್ಮೆ ಲೇಖನದಲ್ಲಿ ಹೇಳುವ ವಿಶೇಷವಾದ ಶಿಲಾ ರಚನೆಗಳ ಮಧ್ಯೆ ಇಂದಿನ ಯುವ ಜನತೆ ಭೇಟಿ ಮಾಡಲು ಇಷ್ಟಪಡುತ್ತಾರೆ. ಆ ಸಾಲಿನಲ್ಲಿ ನಮ್ಮ ಕರ್ನಾಟಕದ ಹಲವಾರು ತಾಣಗಳಿವೆ. ಆ ತಾಣಗಳೆಲ್ಲಾ ವಿಸ್ಮಯಕರವಾದ ಶಿಲಾ ರಚನೆಗಳನ್ನು ಇಲ್ಲಿ ಕಾಣಬಹುದು.

ನಮ್ಮ ದೇಶದ ಹಲವು ಭಾಗಗಳಲ್ಲಿ ವಿಸ್ಮಯಗೊಳಿಸುವ ಕೆಲವು ಅಮೋಘವಾದ ಪ್ರಾಕೃತಿಕ ರಚನೆಗಳನ್ನು ಕಾಣಬಹುದು. ಇದೊಂದು ಪ್ರವಾಸಿ ಆಕರ್ಷಣೆಯಾಗಿದ್ದು, ಇಲ್ಲಿ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಪ್ರಕೃತಿಯನ್ನು ಪ್ರೀತಿಸುವ, ಗೌರವಿಸುವ ಪ್ರತಿಯೊಬ್ಬರಿಗೂ ಸಹ ಈ ಬೆಟ್ಟ ಅಥವಾ ಬಂಡೆಗಳನ್ನು ನೋಡಿದಾಗ ಒಂದು ರೀತಿಯ ಕುತೂಹಲ, ಆನಂದ ಉಂಟಾಗದೇ ಇರದು. ಹಾಗಾದರೆ ಒಮ್ಮೆ ಈ ತಾಣಕ್ಕೆಲ್ಲಾ ಭೇಟಿ ನೀಡಿ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡು ಬನ್ನಿ.

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಇದನ್ನು ಅಕ್ಕ-ತಂಗಿ ಅಥವಾ ಗುಡ್ಡ ಎಂದೇ ಕರೆಯಲಾಗುತ್ತದೆ. ಇದರ ಬಗ್ಗೆ ಸಂಕ್ಷೀಪ್ತವಾಗಿ ಹೇಳಬೇಕೆಂದರೆ ತಂಗಿಯು ಗುಡ್ಡದಿಂದ ಕೆಳಗೆ ಬೀಳುತ್ತಿರುವಾಗ ಅಕ್ಕ ಅವಳ ಕೈಯನ್ನು ಹಿಡಿದು ತಡೆಯುತ್ತಾಳೆ. ಆ ಕ್ಷಣದಲ್ಲಿಯೇ ಇಬ್ಬರೂ ಬಂಡೆಯಾಗಿ ಪರಿವರ್ತಿತರಾಗುತ್ತಾರೆ ಎಂದು ಸ್ಥಳ ಪುರಾಣವಿದೆ. ಇದು ವಿಶ್ವವಿಖ್ಯಾತ ಹಂಪಿಯಲ್ಲಿದೆ. ಹಂಪಿಗೆ ಹೋದರೆ ಇದನ್ನು ನೋಡಲು ಮರೆಯದಿರಿ.

Dr. Murali Mohan Gurram

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಚಿತ್ರದಲ್ಲಿರುವ ಸುಂದರವಾದ ಬಂಡೆ ಅಗ್ನಿ ಶಿಲೆಯಲ್ಲಿ ಬೆಳೆ ಹುಲ್ಲು. ವೈಜ್ಞಾನಿಕವಾಗಿ ಸಾಮಾನ್ಯ ಪ್ರಕ್ರಿಯೆ ಎನಿಸಿದರೂ ಕೂಡ ಸಾಮಾನ್ಯ ಜನರಿಗೆ ಒಂದು ರೀತಿಯಲ್ಲಿ ಕೂತೂಹಲವೇ ಸರಿ. ಅಣಶಿ ರಾಷ್ಟ್ರೀಯ ಉದ್ಯಾನ ದಾಂಡೇಲಿಯಲ್ಲಿದೆ. ಒಮ್ಮೆ ಈ ಪ್ರದೇಶಕ್ಕೆ ಭೇಟಿ ನೀಡಿ ಬನ್ನಿ.

L. Shyamal

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಇದೊಂದು ಸುಂದರವಾದ ಸ್ಥಳವಾಗಿದೆ. ಇದು ಎಲ್ಲಿದೆ ಗೊತ್ತ? ಪ್ರಖ್ಯಾತ ಜೋಗದ ಗುಂಡಿ ಜೋಗ ಜಲಪಾತದ ಕಂದಕ. ಇದು ಬೇಸಿಗೆ ಕಾಲದ ಸಮಯದಲ್ಲಿನ ದೃಶ್ಯ ಇದಾಗಿದ್ದು, ಒಮ್ಮೆ ಸೆಲ್ಫಿಗಾಗಿ ಭೇಟಿ ನೀಡಿ ಬನ್ನಿ ಈ ತಾಣಕ್ಕೆ.

J budissin

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟಗಳ ಗಡಿಯಲ್ಲಿರುವ ಬ್ರಹ್ಮಗಿರಿ ಬೆಟ್ಟದ ಮುನಿಕಲ್ ಗುಹೆಗಳು ಇವಾಗಿವೆ. ಇದು ಟ್ರೆಕ್ಕಿಂಗ್ ಮಾಡಲು ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಈ ಸ್ಥಳದಲ್ಲಿ ಟ್ರೆಕ್ಕಿಂಗ್ ಪ್ರೇಮಿಗಳು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳಬಹುದು.

Sharadaprasad

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಇದೊಂದು ಅದ್ಭುತವಾದ ತಾಣವಾಗಿದ್ದು, ಮಂಡ್ಯ ಜಿಲ್ಲೆಯ ಪಾಂಡವಪುರದ ಬಳಿಯಿರುವ ಕುಂತಿ ಬೆಟ್ಟಗಳಲ್ಲಿನ ಒಂದು ಭಾಗ. ಇದನ್ನು ದೂರದಿಂದ ಸೂಕ್ಷ್ಮವಾಗಿ ಗಮನಿಸಿದರೆ ಆದಿ ಕಾಲದಲ್ಲಿದ್ದ ಡೈನೋಸಾರ್ ಎಂಬ ಪ್ರಾಣಿಯ ಮುಖ ನೆನಪಿಗೆ ಬರುತ್ತದೆ ಅಲ್ಲವೇ?

Vinayraghavendra

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಅರಸೀಕೆರೆಯಲ್ಲಿರುವ ಜೇನುಕಲ್ಲು ಸಿದ್ದೇಶ್ವರ ಬೆಟ್ಟವಿದು. ಬೆಟ್ಟದ ಮೇಲೆ ಒಂದು ದೇವಾಲಯವು ಇದೆ. ಇದೊಂದು ಧಾರ್ಮಿಕ ಮಹತ್ವವುಳ್ಳ ಪ್ರವಾಸಿ ತಾಣವಾಗಿದೆ. ಬೆಟ್ಟವೆಂದರೆ ಟ್ರೆಕ್ಕಿಂಗ್ ಪ್ರೇಮಿಗಳಿಗೆ ಬಲು ಇಷ್ಟ ಹಾಗಾದರೆ ಒಮ್ಮೆ ಭೇಟಿ ನೀಡಿ ಬನ್ನಿ.

Karsolene

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಇದು ಕನಕಪುರದ ಬಳಿಯಿರುವ ಬಿಳಿಕಲ್ ರಂಗನಾಥ ಸ್ವಾಮಿಯ ಬೆಟ್ಟವು ಒಂದು ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಒಂದು ಬೃಹತ್ ಗ್ರಾತ್ರದ ಬಂಡೆಯ ಕೆಳ ಭಾಗದಲ್ಲಿ ಈ ದೇವಾಲಯವಿರುವುದು ವಿಶೇಷವಾಗಿದೆ.

VikasHegde

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಬೃಹತ್ ಬೆಟ್ಟ ಬಂಡೆಗಳ ಮಧ್ಯೆ ರಚಿತವಾಗಿರುವ ಪ್ರಸಿದ್ಧ ಬಳ್ಳಾರಿ ಐತಿಹಾಸಿಕ ಕೋಟೆ. ಹಿಂದೆ ಕಲ್ಲು ಬಂಡೆಗಳುಳ್ಳ ಬೆಟ್ಟಗಳು ರಕ್ಷಣಾತ್ಮಕ ದೃಷ್ಟಿಯಿಂದ ಕೋಟೆ ನಿರ್ಮಾಣ ಮಾಡಲು ಆದರ್ಶಮಯ ಸ್ಥಳಗಳಾಗಿದ್ದವು.

VikasHegde

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಇದೊಂದು ಅದ್ಭುತವಾದ ಪ್ರಕೃತಿ ರಮಣೀಯತೆಯನ್ನು ಹೊಂದಿರುವ ಈ ಜಲಪಾತವು ಬೆಂಗಳೂರಿನಿಂದ ಕೇವಲ 150 ಕಿ.ಮೀ ದೂರದಲ್ಲಿರುವ ಹೊಗೆನಕ್ಕಲ್ ಜಲಪಾತ ತಾಣವು ತನ್ನ ಸುತ್ತಲೂ ಕಡಿದಾದ ಬಂಡೆಗಳಿಂದ ಸುತ್ತುವರೆದಿದೆ.

ezhuttukari

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು

ಇದು ಕನಕಪುರ ತಾಲೂಕಿನಲ್ಲಿರುವ ಮೇಕೆದಾಟು ಒಂದು ಅದ್ಭುತವಾದ ಪ್ರವಾಸಿ ತಾಣವಾಗಿದೆ. ಬೆಂಗಳೂರಿನಿಂದ ಒಂದೇ ದಿನದಲ್ಲಿ ಈ ತಾಣಕ್ಕೆ ಭೇಟಿ ನೀಡಿ ಬರಬಹುದು. ಸಾಕಷ್ಟು ಜನರು ಬೆಂಗಳೂರಿನಿಂದ ಮೇಕೆದಾಟುವಿಗೆ ವಾರಾಂತ್ಯದ ರಜೆಗಳ ಸಂದರ್ಭದಲ್ಲಿ ತೆರಳುತ್ತಿರುತ್ತಾರೆ. ಇದರ ವಿಶೇಷತೆ ಏನೆಂದರೆ ಅತ್ಯಂತ ಕಡಿದಾದ ಬಂಡೆಗಳ ಮಧ್ಯೆ ಕಾವೇರಿಯ ಕೇವಲ 10 ಮೀಗಳಷ್ಟು ಮಾತ್ರವೇ ಹರಿಯುತ್ತಾಳೆ. ಬಂಡೆಗಳು ಮಾತ್ರ ಅತ್ಯಂತ ವಿಶಿಷ್ಟವಾಗಿದೆ ಎಂದೇ ಹೇಳಬಹುದು.

Karthik Prabhu

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X